Tag: talvar

  • ದುನಿಯಾ ವಿಜಿ 46ನೇ ಬರ್ತ್ ಡೇಯಲ್ಲಿ ಅವಾಂತರ- ತಲ್ವಾರ್‌ನಲ್ಲಿ ಕೇಕ್ ಕಟ್ ಮಾಡಿದ ನಟ

    ದುನಿಯಾ ವಿಜಿ 46ನೇ ಬರ್ತ್ ಡೇಯಲ್ಲಿ ಅವಾಂತರ- ತಲ್ವಾರ್‌ನಲ್ಲಿ ಕೇಕ್ ಕಟ್ ಮಾಡಿದ ನಟ

    ಬೆಂಗಳೂರು: ನಟ ದುನಿಯಾ ವಿಜಯ್ ತಮ್ಮ 46ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಂಡರು.

    ಬೆಂಗಳೂರಿನ ತಮ್ಮ ನಿವಾಸದಲ್ಲಿ ಕುಟುಂಬಸ್ಥರು ಹಾಗೂ ಅಭಿಮಾನಿಗಳೊಂದಿಗೆ ಕತ್ತಿಯಲ್ಲಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬವನ್ನು ಸೆಲಬ್ರೇಟ್ ಮಾಡಿಕೊಂಡರು. ಈ ವೇಳೆ ತಮ್ಮ ‘ಸಲಗ’ ಚಿತ್ರದ ಟೀಸರ್ ಬಿಡುಗಡೆ ಮಾಡಿದರು. ತಮ್ಮ ನೆಚ್ಚಿನ ನಟನಿಗೆ ವಿಶ್ ಮಾಡಲು ರಾಜ್ಯದ ಹಲವಡೆಯಿಂದ ಅಭಿಮಾನಿಗಳು ಬಂದಿದ್ದರು.

    ನಟ ದುನಿಯಾ ವಿಜಯ್ ‘ಸಲಗ’ ಚಿತ್ರದ ಟೀಸರ್ ಬಿಡುಗಡೆ ಮಾಡುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಬರ್ತ್ ಡೇ ಸೆಲಬ್ರೇಷನ್ ವೇಳೆ ವಿಜಿಯ ತಂದೆ ತಾಯಿ ಹಾಗೂ ಎರಡನೇ ಪತ್ನಿ ಕೀರ್ತಿ ಭಾಗಿಯಾಗಿದ್ದರು.

    ಈ ಬಾರಿ ತಲ್ವಾರ್ ನಲ್ಲಿ ಕೇಕ್ ಕತ್ತರಿಸೋ ಮೂಲಕ ದುನಿಯಾ ವಿಜಿ ಬರ್ತ್ ಡೇಯನ್ನ ವಿಶೇಷವಾಗಿ ಆಚರಿಸಿಕೊಂಡಿದ್ದು, ಈ ಮೂಲಕ ತಮ್ಮ ಬರ್ತ್ ಡೇ ಸೆಲಬ್ರೇಷನ್ ವೇಳೆ ಎಡವಟ್ಟು ಮಾಡಿಕೊಂಡಿದ್ದಾರೆ. ಯಾವುದೇ ಆಯುಧಗಳನ್ನು ಸಾರ್ವಜನಿಕವಾಗಿ ಬಳಸುವಂತಿಲ್ಲ, ಪ್ರದರ್ಶಿಸುವಂತಿಲ್ಲ. ಇದು ಆರ್ಮ್ಸ್ ಆ್ಯಕ್ಟ್ ಅಡಿ ಅಪರಾಧವಾಗುತ್ತದೆ. ಆದರೆ ಹುಟ್ಟುಹಬ್ಬದ ಸಂಭ್ರಮದ ವೇಳೆ ಈ ಎಡವಟ್ಟು ನಡೆದಿದ್ದು, ಹೊಸ ವಿವಾದವನ್ನು ತನ್ನ ಮೈಮೇಲೆ ಎಳೆದುಕೊಂಡಿದ್ದಾರೆ.

  • ಹುಬ್ಬಳ್ಳಿ, ಬೆಳಗಾವಿ ನಂತರ ವಿಜಯಪುರದಲ್ಲೂ ಹುಟ್ಟುಹಬ್ಬಕ್ಕೆ ತಲ್ವಾರ್ ನಿಂದ ಕೇಕ್ ಕಟ್!

    ಹುಬ್ಬಳ್ಳಿ, ಬೆಳಗಾವಿ ನಂತರ ವಿಜಯಪುರದಲ್ಲೂ ಹುಟ್ಟುಹಬ್ಬಕ್ಕೆ ತಲ್ವಾರ್ ನಿಂದ ಕೇಕ್ ಕಟ್!

    ವಿಜಯಪುರ: ಇತ್ತೀಚೆಗಷ್ಟೆ ಹುಬ್ಬಳ್ಳಿಯಲ್ಲಿ ಹಾಗೂ ಬೆಳಗಾವಿಯಲ್ಲಿ ಕೆಲ ಜನರು ತಲ್ವಾರ್ ನಿಂದ ಕೇಟ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಲಕ ದೊಡ್ಡ ಸುದ್ದಿಯಾಗಿದ್ರು. ಆದ್ರೆ ಇದೀಗ ವಿಜಯಪುರದಲ್ಲೂ ಸಹ ಇದೇ ಮಾದರಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲಾಗಿದೆ.

    ವಿಜಯಪುರ ನಗರ ಬಿಜೆಪಿ ಅಧ್ಯಕ್ಷ ಶಿವರುದ್ರ ಬಾಗಲಕೋಟ ಈ ರೀತಿ ಬರ್ತ್ ಡೆ ಆಚರಿಸಿಕೊಂಡಿದ್ದಾರೆ. ಜೂನ್ 29ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಮಯದಲ್ಲಿ ತಲ್ವಾರ್ ನಿಂದ ಕೇಕ್ ಕಟ್ ಮಾಡಿದ್ದು, ಅಲ್ಲದೆ ಈ ಫೋಟೋವನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದಾರೆ.

    ಈ ಕುರಿತು ಪೊಲೀಸ್ ಇಲಾಖೆ ಇಂತಹವರಿಗೆ ಖಡಕ್ ಎಚ್ಚರಿಕೆ ನೀಡುವ ಮೂಲಕ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

  • ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರ ಭ್ರಷ್ಟಾಚಾರ- ಲೋಕಾಯುಕ್ತ, ಸದನ ಸಮಿತಿ ತನಿಖೆಯಲ್ಲಿ ಸಾಬೀತಾದ್ರೂ ಕ್ರಮ ಇಲ್ಲ

    ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರ ಭ್ರಷ್ಟಾಚಾರ- ಲೋಕಾಯುಕ್ತ, ಸದನ ಸಮಿತಿ ತನಿಖೆಯಲ್ಲಿ ಸಾಬೀತಾದ್ರೂ ಕ್ರಮ ಇಲ್ಲ

    ಬೆಂಗಳೂರು: ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ತಳವಾರ್ ಅಧಿಕಾರವಧಿಯಲ್ಲಿ ಉಪಕರಣಗಳ ಖರೀದಿಯಲ್ಲಿ ಅಕ್ರಮ ನಡೆದಿರುವುದು ಸಾಕ್ಷಿ ಸಮೇತ ಸಾಬೀತಾಗಿದ್ರು ಈವರೆಗೂ ಸರ್ಕಾರ ಕ್ರಮ ತೆಗೆದುಕೊಳ್ಳದೆ ರಕ್ಷಣೆಗೆ ನಿಂತಿದೆ ಎನ್ನುವ ಮಾತು ಕೇಳಿ ಬಂದಿದೆ.

    ತಳವಾರ್ ಮೇಲಿರುವ ಆರೋಪಗಳು:
    ಆರೋಪ 1– ಸೋಲಾರ್ ಲ್ಯಾಂಪ್ ಮತ್ತು ಸ್ಟ್ರೀಟ್ ಲೈಟ್ ಅವ್ಯವಹಾರ 2 ಕೋಟಿ: 40 ಪಾಲಿಟೆಕ್ನಿಕ್ ಕಾಲೇಜುಗಳಿಗೆ ಹಾಗೂ ಹಾಸ್ಟೆಲ್‍ಗಳಲ್ಲಿ ಅಳವಡಿಸಲು 35 ಲೈಟು ಹಾಗೂ 15 ರಂತೆ ಸ್ಟ್ರೀಟ್‍ಲೈಟ್ ಅಳವಡಿಸಲಾಗಿತ್ತು. ಆದ್ರೆ ಒಂದು ಯುನಿಟ್‍ನಲ್ಲಿ ಇರಬೇಕಾದ ಸೋಲಾರ್ ಪ್ಲೇಟ್, ಲೈಟ್‍ಗಳಲ್ಲಿ ಅಕ್ರಮ ನಡೆದಿದೆ ಅನ್ನೋದು ಆರೋಪ.

    ಆರೋಪ 2 – 7 ಆರ್ಮ್ ಲ್ಯಾಬ್ ಕಿಟ್ ಅವ್ಯವಹಾರ 3 ಕೋಟಿ: 81 ಪಾಲಿಟೆಕ್ನಿಕ್ ಕಾಲೇಜುಗಳಿಗೆ ಆರ್ಮ್ ಲ್ಯಾಬ್ ಕಿಟ್‍ಗಳನ್ನ ಖರೀದಿ ಮಾಡಲಾಗಿತ್ತು. ಮಾರುಕಟ್ಟೆ ಬೆಲೆ ಒಂದು ಯುನಿಟ್‍ಗೆ 9.500 ರೂಪಾಯಿ ಇದ್ರು ತಾಂತ್ರಿಕ ಶಿಕ್ಷಣ ಇಲಾಖೆ ಮಾತ್ರ ಒಂದು ಯುನಿಟ್‍ಗೆ 36 ಸಾವಿರ ರೂಪಾಯಿ ನೀಡಿ ಖರೀದಿ ಮಾಡಿದ್ದು, ಸುಮಾರು 2.5 ಕೋಟಿ ಅವ್ಯವಹಾರವಾಗಿದೆ ಅನ್ನೋದು ಎರಡನೇ ಆರೋಪ.

    ಆರೋಪ 3 – ಎಲೆಕ್ಟ್ರಾನಿಕ್ ಏರ್ ಪ್ಯೂರಿಫೈರ್ & ಸ್ಪೀಡ್ ಕಂಟ್ರೋಲ್ ಆಫ್ ಮೋಟಾರ್ಸ್ ಅವ್ಯವಹಾರ 1 ಕೋಟಿ: 81 ಪಾಲಿಟೆಕ್ನಿಕ್ ಕಾಲೇಜುಗಳಿಗೆ ಎಲೆಕ್ಟ್ರಾನಿಕ್ ಏರ್ ಪ್ಯೂರಿಫೈರ್ ಖರೀದಿ ಮಾಡಲಾಗಿದೆ. ಮಾರುಕಟ್ಟೆ ಬೆಲೆ 1 ರಿಂದ 2 ಸಾವಿರ ಇದ್ರು 9,900 ರೂಪಾಯಿಗಳಂತೆ ಖರೀದಿ ಮಾಡಿರೋದು ಅನುಮಾನಕ್ಕೆ ಕಾರಣ. ಇನ್ನು ಸ್ಪೀಡ್ ಕಂಟ್ರೋಲ್ ಆಫ್ ಮೋಟಾರ್ಸ್ ಖರೀದಿಯಲ್ಲೂ ಅವ್ಯವಹಾರ ನಡೆದಿದ್ದು, ಇದೆಲ್ಲದ್ರ ಮೊತ್ತ 1 ಕೋಟಿ ರೂಪಾಯಿಗೂ ಹೆಚ್ಚು.

    ತಳವಾರ್ ಮೇಲಿನ ಈ ಎಲ್ಲಾ ಆರೋಪಗಳ ಕುರಿತು ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸಿದೆ. ತನಿಖೆಯಲ್ಲಿ ತಳವಾರ್ ಮೇಲಿನ ಆರೋಪಗಳು ಸಾಬೀತಾಗಿದೆ. ನಿಯಮಗಳನ್ನ ಮೀರಿ ಖರೀದಿ ಮಾಡಿರುವ ಅಂಶವೂ ಬಹಿರಂಗವಾಗಿದೆ. ಲೋಕಾಯುಕ್ತ ಮಾತ್ರವಲ್ಲದೆ ವಿಧಾನ ಪರಿಷತ್ ಸದನ ಸಮಿತಿಯೂ ಕೂಡ ಈ ಬಗ್ಗೆ ತನಿಖೆ ನಡೆಸಿದ್ದು, ಅಲ್ಲೂ ಆರೋಪ ಸಾಬೀತಾಗಿದೆ. ತಳವಾರ್ ಮೇಲೆ ಕ್ರಮ ತೆಗೆದುಕೊಳ್ಳಿ ಅಂತ ಸಮಿತಿ ವರದಿ ನೀಡಿದೆ. ಆದ್ರೂ ಯಾವುದೇ ಕ್ರಮ ಆಗಿಲ್ಲ.

    ಇಷ್ಟೆಲ್ಲ ಆದ್ರೂ ನಿರ್ದೇಶಕ ತಳವಾರ್ ಮಾತ್ರ ನನ್ನದೇನು ತಪ್ಪಿಲ್ಲ. ನನ್ನ ವಿರೋಧಿಗಳು ಮಾಡುತ್ತಿರೋ ಷಡ್ಯಂತ್ರ ಅಂತಿದ್ದಾರೆ.