Tag: Taluk Panchayat

  • ಏಕಾಏಕಿ ಗ್ರಾಮದಲ್ಲಿದ್ದ ಮನೆಗಳು ನೆಲಸಮ- ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

    ಏಕಾಏಕಿ ಗ್ರಾಮದಲ್ಲಿದ್ದ ಮನೆಗಳು ನೆಲಸಮ- ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

    – ಶಾಸಕರು ಮಾತ್ರ ರೆಸಾರ್ಟ್ ವಾಸ

    ಧಾರವಾಡ: ಧಾರವಾಡದ ಹೊರವಲಯದ ದಡ್ಡಿ ಕಮಲಾಪೂರದಲ್ಲಿದ್ದ ಬಡವರ ಮನೆಗಳನ್ನು ಅಧಿಕಾರಿಗಳು ಜೆಸಿಬಿಯಿಂದ ನೆಲಸಮ ಮಾಡಿಸಿರುವ ಘಟನೆ ಕಳೆದ ಮೂರು ದಿನಗಳ ಹಿಂದೆ ನಡೆದಿದೆ.

    ಈ ದಡ್ಡಿಕಮಲಾಪೂರ ಗ್ರಾಮದಲ್ಲಿ ಗವಳಿ ಜನರು ಕಳೆದ 50 ವರ್ಷಗಳಿಂದ ವಾಸವಾಗಿದ್ದಾರೆ. ಇದೇ ಗ್ರಾಮದ ಪಕ್ಕ ಸರ್ಕಾರಿ ಜಮೀನು ಕೂಡ ಇತ್ತು. ಮಂಡಿಹಾಳ ಗ್ರಾಮ ಪಂಚಾಯತಿಗೆ ಬರುವ ಈ ಗ್ರಾಮಕ್ಕೆ ಆಶ್ರಯ ಯೋಜನೆ ಅಡಿಯಲ್ಲಿ ಸರ್ಕಾರಿ ಜಮೀನು ನೀಡಬೇಕೆಂದು ಠರಾವ್ ಮಾಡಿದ್ದರು. ಅದೇ ರೀತಿ ಜನರು 15 ಕ್ಕೂ ಹೆಚ್ಚು ಮನಗೆಳನ್ನು ಕಟ್ಟಿಕೊಂಡಿದ್ದರು.

    ಧಾರವಾಡ ತಾಲೂಕಿಗೆ ಸಂಬಂಧಿಸಿದ ಅಧಿಕಾರಿಗಳು ಏಕಾಎಕಿ ಬಂದು ಮನೆಗಳನ್ನು ಕೆಡವಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ನಮಗೆ ಮುಂಚಿತವಾಗಿ ನೋಟಿಸ್ ಕೂಡ ನೀಡದೇ ಮನೆಗಳನ್ನು ಕೆಡವಿರುವುದು ಯಾವ ರೀತಯ ನ್ಯಾಯ ಎಂದು ಪ್ರಶ್ನಿಸಿದ್ದಾರೆ. ಇದೇ ಮನೆಗಳ ಹಿಂದೆ ಮಹಿಷಿ ಟ್ರಸ್ಟ್ ಜಾಗ ಇದ್ದು, ಅವರ ಬೆಂಬಲಕ್ಕೆ ನಿಲ್ಲಲು ಈ ರೀತಿ ಮನೆಗಳನ್ನು ಕೆಡವಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಈ ವಿಚಾರವನ್ನು ಶಾಸಕರಿಗೆ ತಿಳಿಸಿ, ಅನ್ಯಾಯವನ್ನು ಹೇಳಿಕೊಳ್ಳಬೇಕೆಂದರೆ ಕ್ಷೇತ್ರದ ಶಾಸಕ ಸಿ.ಎಂ.ನಿಂಬಣ್ಣನವರ ರೆಸಾರ್ಟ್‍ನಲ್ಲಿ ಕುಳಿತಿದ್ದಾರೆ. ನಮ್ಮ ಕಷ್ಟವನ್ನು ಯಾರ ಬಳಿ ಹೇಳಿಕೊಳ್ಳುವುದು, ಮನೆಗಳಿಲ್ಲದೆ ಹೇಗೆ ಬದುಕುವುದು ಎಂದು ಗ್ರಾಮಸ್ಥರು ಅಸಹಾಯಕತೆ ತೋಡಿಕೊಂಡಿದ್ದಾರೆ.

  • ಮದ್ಯದ ಅಮಲಿನಲ್ಲಿ ತಾ.ಪಂ. ಸದಸ್ಯನಿಂದ ಸಹ ಸದಸ್ಯನ ಮೇಲೆ ಹಲ್ಲೆ

    ಮದ್ಯದ ಅಮಲಿನಲ್ಲಿ ತಾ.ಪಂ. ಸದಸ್ಯನಿಂದ ಸಹ ಸದಸ್ಯನ ಮೇಲೆ ಹಲ್ಲೆ

    ಮೈಸೂರು: ಮದ್ಯದ ನಶೆಯಲ್ಲಿದ್ದ ತಾಲೂಕು ಪಂಚಾಯ್ತಿ ಸದಸ್ಯ ಮತ್ತೊಬ್ಬ ಸದಸ್ಯನ ಮೇಲೆ ಹಲ್ಲೆ ಮಾಡಿರುವ ಘಟನೆ ಮೈಸೂರಿನ ಮಿನಿ ವಿಧಾನಸೌಧದಲ್ಲಿರುವ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆದಿದೆ.

    ವಾಜಮಂಗಲ ತಾಲೂಕು ಪಂಚಾಯ್ತಿ ಕ್ಷೇತ್ರದ ಸದಸ್ಯ ಮಂಜುನಾಥ್, ಶ್ರೀರಾಂಪುರ ತಾಲೂಕು ಪಂಚಾಯ್ತಿ ಕ್ಷೇತ್ರದ ಸದಸ್ಯ ಹನುಮಂತು ಮೇಲೆ ಹಲ್ಲೆ ನಡೆಸಿದ್ದಾರೆ. ಸದಸ್ಯ ಹನುಮಂತು ಮೇಲೆ ಮಂಜುನಾಥ್ ಹೆಲ್ಮೆಟ್ ನಿಂದ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ತಾಲೂಕು ಪಂಚಾಯ್ತಿ ಕಚೇರಿಯ ಒಳಗೆ ಕುಳಿತಿದ್ದ ವೇಳೆಯೇ ಏಕಾಏಕಿ ಕಚೇರಿ ಒಳಗೆ ಬಂದ ಮಂಜುನಾಥ್, ಸದಸ್ಯ ಹನುಮಂತು ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಹನುಮಂತು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ದಿಢೀರ್ ನಡೆದ ಘಟನೆಯಿಂದ ಇತರೆ ತಾಲೂಕು ಪಂಚಾಯ್ತಿ ಸದಸ್ಯರು ತಬ್ಬಿಬ್ಬಾಗಿದ್ದಾರೆ. ಈ ಬಗ್ಗೆ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಥಳೀಯ ಸಮಸ್ಯೆ ಕುರಿತು ಯುಟ್ಯೂಬ್ ನಲ್ಲಿ ವರದಿ ಬಿತ್ತರಿಸಿದ ಕೊಪ್ಪಳದ ವ್ಯಕ್ತಿಗೆ ತಾ.ಪಂ ಸದಸ್ಯನಿಂದ ಹಲ್ಲೆ

    ಸ್ಥಳೀಯ ಸಮಸ್ಯೆ ಕುರಿತು ಯುಟ್ಯೂಬ್ ನಲ್ಲಿ ವರದಿ ಬಿತ್ತರಿಸಿದ ಕೊಪ್ಪಳದ ವ್ಯಕ್ತಿಗೆ ತಾ.ಪಂ ಸದಸ್ಯನಿಂದ ಹಲ್ಲೆ

    ಕೊಪ್ಪಳ: ಸ್ಥಳೀಯ ಸಮಸ್ಯೆ ಕುರಿತು ಯುಟ್ಯೂಬ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ವರದಿ ಬಿತ್ತರಿಸಿದ ವ್ಯಕ್ತಿ ಮೇಲೆ ತಾಲೂಕು ಪಂಚಾಯತ್ ಸದಸ್ಯ ಹಲ್ಲೆ ಮಾಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಕೊಪ್ಪಳ ತಾಲೂಕಿನ ಬೂದಗೂಂಪ ಗ್ರಾಮದ ಗೋವಿಂದರಾಜ್ ಎಂಬವರು ತನ್ನ ಯುಟ್ಯೂಬ್ ಚಾನಲ್‍ನಲ್ಲಿ ಬೂದೂಗುಂಪ ಗ್ರಾಮದ 4 ನೇ ವಾರ್ಡ್ ನ ಸಿ.ಸಿ. ರಸ್ತೆ ನಿರ್ಮಾಣವಾಗಿಲ್ಲ ಎಂದು ವರದಿ ಮಾಡಿದ್ದರು. ಇದಕ್ಕೆ ಕೆಂಡಾಮಂಡಲವಾದ ಇಕ್ಬಾಲ್ ಅನ್ಸಾರಿ ಬೆಂಬಲಿಗ ತಾಲೂಕು ಪಂಚಾಯತಿ ಸದಸ್ಯ ಬಸವರಾಜ ಪೆದ್ಲ, ಗೋವಿಂದರಾಜ್ ಗೆ ಧಮ್ಕಿ ಹಾಕಿದ್ದಾನೆ.

    ತಾಲೂಕು ಪಂಚಾಯಿತಿ ಸದಸ್ಯ ಬಸವರಾಜ ಗುಂಪು ಕಟ್ಟಿಕೊಂಡು ಬಂದು ಕುಡಿದ ಅಮಲಿನಲ್ಲಿ ಧಮ್ಕಿ ಹಾಕಿದ್ದಾರೆ. ಅಲ್ಲದೇ ಅಚಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಅಲ್ಲದೇ ಒಂದು ಗಂಟೆಯಲ್ಲಿ ನಿನ್ನ ಹುಟ್ಟಿಲ್ಲ ಅನ್ನಿಸಿಬಿಡ್ತೀನಿ. ನಮ್ಮ ಸಾಬನಿಗೆ ಟಾರ್ಗೆಟ್ ಮಾಡೋಕೆ ಯಾರು ನೀನು ಎಂದು ಧಮ್ಕಿ ಹಾಕಿದ್ದಾರೆ ಎಂದು ಗೋವಿಂದ ರಾಜ್ ಆರೋಪಿಸಿದ್ದಾರೆ.

    ಕಳೆದ ಎರಡು ದಿನಗಳಿಂದ ನಾನು ಗ್ರಾಮಕ್ಕೆ ಹೋಗಿಲ್ಲ. ನನಗೆ ಗ್ರಾಮದಲ್ಲಿ ಜೀವ ಭಯ ಇದೆ ಎಂದು ಅಳಲು ತೋಡಿಕೊಂಡಿರುವ ಅವರು, ತಾಪಂ ಸದಸ್ಯ ಬಸವರಾಜ್ ವಿರುದ್ದ ದೂರು ಕೊಡಲು ಹೋದರೆ ಮುನಿರಾಬಾದ್ ಪೊಲೀಸರು ದೂರು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ.

    ಗ್ರಾಮದ ಸಮಸ್ಯೆಯನ್ನ ವರದಿ ಮಾಡಿದ್ದಕ್ಕೆ ಗೋವಿಂದರಾಜ್ ಜೀವಭಯದಲ್ಲಿ ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಅನ್ಸಾರಿ ಬೆಂಬಲಿಗನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗೋವಿಂದಾರಾಜ್ ಆಗ್ರಹಿಸುತ್ತಿದ್ದಾರೆ.