Tag: Tallahassee

  • 10 ಬಾರಿ ಕರೆದ್ರೂ ಸೆಕ್ಸ್ ಗೆ ನಿರಾಕರಣೆ-ಕೊನೆಗೆ ಪ್ರೇಯಸಿಯನ್ನೇ ಅತ್ಯಾಚಾರ ಮಾಡ್ದ!

    10 ಬಾರಿ ಕರೆದ್ರೂ ಸೆಕ್ಸ್ ಗೆ ನಿರಾಕರಣೆ-ಕೊನೆಗೆ ಪ್ರೇಯಸಿಯನ್ನೇ ಅತ್ಯಾಚಾರ ಮಾಡ್ದ!

    ತಲ್ಲಾಹಸ್ಸಿ: ಪ್ರೇಯಸಿ 10 ಬಾರಿ ಸೆಕ್ಸ್ ಮಾಡಲು ನಿರಾಕರಿಸಿದ್ದಕ್ಕೆ ಪ್ರಿಯಕರ ಆಕೆಯ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಘಟನೆ ಫ್ಲೋರಿಡಾದ ಸೆಪ್ಟಂಬರ್ ತಿಂಗಳಿನಲ್ಲಿ ನಡೆದಿದ್ದು, ಆರೋಪಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅಷ್ಟೇ ಅಲ್ಲದೇ ನನ್ನ ಮೇಲೆ ಹಲ್ಲೆ ಕೂಡ ಮಾಡಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ನಾವು ಆರೋಪಿ ಜೊನಾಥನ್ ಆಡಮ್ ಸ್ಯಾಂಟಿಯಾಗೊ ಗೊಂಜಾಲೆಜ್ ನನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

    ಏನಿದು ಪ್ರಕರಣ?
    ಸೆಪ್ಟೆಂಬರ್ 23 ರಂದು ಆರೋಪಿ ಗೊಂಜಾಲೆಜ್ ಗೈನೆಸ್ವಿಲ್ಲೆನಲ್ಲಿರುವ ಸಂತ್ರಸ್ತೆಯ ಮನೆಗೆ ಹೋಗಿ ಭೇಟಿ ಆಗಿದ್ದಾನೆ. ಎರಡು ದಿನಗಳ ನಂತರ ಗೊಂಜಾಲೆಜ್ ಸುಮಾರು 4 ಗಂಟೆಯ ಸಮಯದಲ್ಲಿ ಸೆಕ್ಸ್ ಮಾಡುಲು ಪ್ರಯತ್ನಿಸಿದ್ದಾನೆ. ಆದರೆ ಸಂತ್ರಸ್ತೆ ಇದಕ್ಕೆ ನಿರಾಕರಿಸಿದ್ದಾರೆ. ಇದರಿಂದ ಇಬ್ಬರ ಮಧ್ಯೆ ವಾದ ಶುರುವಾಗಿದೆ.

    ಈ ಜಗಳದಲ್ಲಿ ಸಂತ್ರಸ್ತೆ ಆರೋಪಿಯನ್ನು ಸುಮಾರು 10 ಸಂದರ್ಭಗಳಲ್ಲಿ ಅವನನ್ನು ಕೆಳಕ್ಕೆ ತಳ್ಳಿದ್ದಾರೆ. ಈ ವೇಳೆ ಕೋಪಗೊಂಡ ಗೊಂಜಾಲೆಜ್ ಸಂತ್ರಸ್ತೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ವರದಿಯಾಗಿದೆ.

    ಅದೇ ದಿನ ಗೊಂಜಾಲೆಜ್ ಮತ್ತು ಸಂತ್ರಸ್ತೆ ಮತ್ತೆ ಬೇರೆ ವಿಚಾರಕ್ಕೆ ಜಗಳವಾಡಿದ್ದಾರೆ. ಆಗ ಆರೋಪಿ ಸಂತ್ರಸ್ತೆಯನ್ನು ನೆಲಕ್ಕೆ ತಳ್ಳಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಆಕೆ ಕತ್ತನ್ನು ಕೆಲವು ಸೆಕೆಂಡ್‍ಗಳು ಹಿಡಿದು ಉಸಿರು ಗಟ್ಟಿಸಿ ಕೊಲೆ ಯತ್ನವನ್ನು ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಕೊನೆಗೆ ಸಂತ್ರಸ್ತೆ ಆರೋಪಿ ಗೊಂಜಾಲೆಜ್ ನಿಂದ ತಪ್ಪಿಸಿಕೊಂಡು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಸದ್ಯಕ್ಕೆ ಸಂತ್ರಸ್ತೆಯ ದೂರಿನ ಆಧಾರದ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv