Tag: Taliparamba Rajarajeswara Temple

  • ಕೇರಳದಲ್ಲಿ ಶತ್ರು ಸಂಹಾರ ಯಾಗ ನಡೆದಿಲ್ಲ – ದೇವಸ್ಥಾನದ ಹೇಳಿಕೆ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಡಿಕೆಶಿ

    ಕೇರಳದಲ್ಲಿ ಶತ್ರು ಸಂಹಾರ ಯಾಗ ನಡೆದಿಲ್ಲ – ದೇವಸ್ಥಾನದ ಹೇಳಿಕೆ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಡಿಕೆಶಿ

    ಬೆಂಗಳೂರು: ನನ್ನ ಹೇಳಿಕೆಯನ್ನು ಕೆಲವರು ತಪ್ಪಾಗಿ ಗ್ರಹಿಸಿದ್ದು, ತಳಿಪರಂಬ ರಾಜರಾಜೇಶ್ವರ ದೇವಸ್ಥಾನದ (Taliparamba Rajarajeswara Temple) 15 ಕಿ.ಮೀ. ದೂರದಲ್ಲಿರುವ ಖಾಸಗಿ ಸ್ಥಳದಲ್ಲಿ ಯಾಗ ನಡೆದಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಸ್ಪಷ್ಟಪಡಿಸಿದ್ದಾರೆ.

    ನಾನು ರಾಜರಾಜೇಶ್ವರನ ಭಕ್ತನಾಗಿದ್ದು, ಈ ದೇವಸ್ಥಾನದಲ್ಲಿ ಶತ್ರು ಸಂಹಾರ ಪೂಜೆ ಮಾಡುವುದಿಲ್ಲ ಎನ್ನುವ ಅರಿವಿದೆ. ಯಾಗ ನಡೆದಿರುವ ಸ್ಥಳದ ಬಗ್ಗೆ ಮಾಹಿತಿ ನೀಡಲಷ್ಟೇ ನಾನು ದೇಗುಲದ ಹೆಸರನ್ನು ಉಲ್ಲೇಖಿಸಿದ್ದೆ. ಕೆಲವು ದಿನಗಳ ಹಿಂದೆ ದೇವಸ್ಥಾನಕ್ಕೆ ‌ಭೇಟಿ‌ ನೀಡಿ ಆಶೀರ್ವಾದ ಪಡೆದಿದ್ದೆ. ವಿಷಯಗಳನ್ನು ಸಂದರ್ಭದಿಂದ ಹೊರಗಿಟ್ಟು ಅವುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ ಎಂಬುದು ನನ್ನ ವಿನಂತಿ ಎಂದು ಡಿಕೆಶಿ ಹೇಳಿದ್ದಾರೆ.


    ಕಣ್ಣೂರು ತಳಿಪರಂಬ ರಾಜರಾಜೇಶ್ವರ ದೇವಸ್ಥಾನದ ಸಮೀಪದಲ್ಲಿ ಪ್ರಾಣಿಬಲಿ ನೀಡಿ ಶತ್ರು ಭೈರವಿ ಯಾಗ ಮಾಡಲಾಗಿದೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಯನ್ನು ಇಂದು ದೇವಸ್ಥಾನದ ಆಡಳಿತ ಮಂಡಳಿ ತಳ್ಳಿಹಾಕಿತ್ತು. ಇದನ್ನೂ ಓದಿ: ತಳಿಪರಂಬ ರಾಜರಾಜೇಶ್ವರ ದೇವಸ್ಥಾನದ ಬಳಿ ಶತ್ರು ಭೈರವಿ ಯಾಗ ನಡೆದಿಲ್ಲ – ಡಿಕೆಶಿ ಆರೋಪ ಸುಳ್ಳು ಎಂದ ಆಡಳಿತ ಮಂಡಳಿ

    ದೇವಸ್ವಂ ಟ್ರಸ್ಟಿ ಮಂಡಳಿ ಸದಸ್ಯ ಮಾಧವನ್ ಪ್ರತಿಕ್ರಿಯಿಸಿ, ಯಾವುದೇ ದೇವಾಲಯವನ್ನು ಕೊಲ್ಲುವ ಶತ್ರು-ಸಂಹಾರ ಪೂಜೆ ಅಥವಾ ಪ್ರಾಣಿ ಬಲಿ ದೇವಾಲಯದಲ್ಲಿ ಅಥವಾ ದೇವಾಲಯದ ಸುತ್ತಲೂ ನಡೆದಿರುವುದು ತಿಳಿದಿಲ್ಲ. ಅವರು ಹೇಳಿದಂತೆ ಮೇಕೆ, ಎಮ್ಮೆಗಳನ್ನು ಕಡಿಯಲಾಗಿದೆ ಎಂಬ ಹೇಳಿಕೆ 100% ರಷ್ಟು ಸುಳ್ಳು ಎಂದು ಹೇಳಿದ್ದರು.

    ತಳಿಪರಂಬ ಪ್ರದೇಶದಲ್ಲಿ ಇಂತಹ ಚಟುವಟಿಕೆಗಳು ಗೌಪ್ಯವಾಗಿ ನಡೆಯಲು ಸಾಧ್ಯವಿಲ್ಲ ಎಂದು ಟ್ರಸ್ಟಿ ಸದಸ್ಯರು ಹೇಳಿಕೆ ನೀಡಿದ್ದು, ದೇವಸ್ಥಾನದ ಆವರಣದಲ್ಲಿದೆ ಎಂದು ಹೇಳಿ ದೇವಸ್ಥಾನದ ಹೆಸರನ್ನು ಎಳೆದು ತಂದಿರುವುದು ಸರಿಯಲ್ಲ ಎಂದಿದ್ದಾರೆ.

     

  • ತಳಿಪರಂಬ ರಾಜರಾಜೇಶ್ವರ ದೇವಸ್ಥಾನದ ಬಳಿ ಶತ್ರು ಭೈರವಿ ಯಾಗ ನಡೆದಿಲ್ಲ – ಡಿಕೆಶಿ ಆರೋಪ ಸುಳ್ಳು ಎಂದ ಆಡಳಿತ ಮಂಡಳಿ

    ತಳಿಪರಂಬ ರಾಜರಾಜೇಶ್ವರ ದೇವಸ್ಥಾನದ ಬಳಿ ಶತ್ರು ಭೈರವಿ ಯಾಗ ನಡೆದಿಲ್ಲ – ಡಿಕೆಶಿ ಆರೋಪ ಸುಳ್ಳು ಎಂದ ಆಡಳಿತ ಮಂಡಳಿ

    ತಿರವನಂತಪುರಂ: ಕಣ್ಣೂರು ತಳಿಪರಂಬ ರಾಜರಾಜೇಶ್ವರ ದೇವಸ್ಥಾನದ (Taliparamba Rajarajeswara Temple) ಸಮೀಪದಲ್ಲಿ ಪ್ರಾಣಿಬಲಿ ನೀಡಿ ಶತ್ರು ಭೈರವಿ ಯಾಗ (Shatru Bhairavi Yaga) ಮಾಡಲಾಗಿದೆ ಎಂಬ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿಕೆಯನ್ನು ದೇವಸ್ಥಾನದ ಆಡಳಿತ ಮಂಡಳಿ ತಳ್ಳಿಹಾಕಿದೆ.

    ದೇವಸ್ವಂ ಟ್ರಸ್ಟಿ ಮಂಡಳಿ ಸದಸ್ಯ ಮಾಧವನ್ ಪ್ರತಿಕ್ರಿಯಿಸಿ, ಯಾವುದೇ ದೇವಾಲಯವನ್ನು ಕೊಲ್ಲುವ ಶತ್ರು-ಸಂಹಾರ ಪೂಜೆ ಅಥವಾ ಪ್ರಾಣಿ ಬಲಿ ದೇವಾಲಯದಲ್ಲಿ ಅಥವಾ ದೇವಾಲಯದ ಸುತ್ತಲೂ ನಡೆದಿರುವುದು ತಿಳಿದಿಲ್ಲ. ಅವರು ಹೇಳಿದಂತೆ ಮೇಕೆ, ಎಮ್ಮೆಗಳನ್ನು ಕಡಿಯಲಾಗಿದೆ ಎಂಬ ಹೇಳಿಕೆ ನೂರಕ್ಕೆ 100% ರಷ್ಟು ಸುಳ್ಳು ಎಂದಿದ್ದಾರೆ.  ಇದನ್ನೂ ಓದಿ: ಶತ್ರು ಮರ್ಧನಕ್ಕೆ ಶತ್ರು ಭೈರವಿ ಯಾಗ – ಏನಿದು ಯಾಗ? ಹೇಗೆ ಮಾಡಲಾಗುತ್ತದೆ? 

    ತಳಿಪರಂಬ ಪ್ರದೇಶದಲ್ಲಿ ಇಂತಹ ಚಟುವಟಿಕೆಗಳು ಗೌಪ್ಯವಾಗಿ ನಡೆಯಲು ಸಾಧ್ಯವಿಲ್ಲ ಎಂದು ಟ್ರಸ್ಟಿ ಸದಸ್ಯರು ಹೇಳಿಕೆ ನೀಡಿದ್ದು, ದೇವಸ್ಥಾನದ ಆವರಣದಲ್ಲಿ ನಡೆದಿದೆ ಎಂದು ಹೇಳಿ ದೇವಸ್ಥಾನದ ಹೆಸರನ್ನು ಎಳೆದು ತಂದಿರುವುದು ನಿರಾಸೆ ತಂದಿದೆ ಎಂದಿದ್ದಾರೆ.

    ರಾಜರಾಜೇಶ್ವರ ದೇವಸ್ಥಾನದಲ್ಲಿ ಶತ್ರು ಸಂಹಾರ ಪೂಜೆ ಇಲ್ಲ. ಕ್ಷೇತ್ರದ ಅಕ್ಕಪಕ್ಕದಲ್ಲಿ ಮೇಕೆ, ಕೋಣವನ್ನು ಬಲಿ ಕೊಟ್ಟಿದ್ದಾರೆ ಎನ್ನುವುದೂ ಸರಿಯಲ್ಲ. ನಾವು ಈ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ಯಾರಿಗೂ ಗೊತ್ತಾಗದಂತೆ ತಳಿಪರಂಬ ಪ್ರದೇಶದಲ್ಲಿ ಯಾಗ ನಡೆಸಲು ಸಾಧ್ಯವಿಲ್ಲ. ಇದು ನಿರಾಶಾದಾಯಕ ಹೇಳಿಕೆ. ದೇವಸ್ಥಾನದ ಸುತ್ತಮುತ್ತ ಮುತ್ತ ನಡೆಯಿತು ಎಂದು ಹೇಳಿದ್ದು ಸರಿಯಲ್ಲ. ಈ ದೇವಸ್ಥಾನದಲ್ಲಿ ಈ ರೀತಿಯ ಪೂಜೆ ನಡೆಯುವುದಿಲ್ಲ. ಇಲ್ಲಿ ಬ್ರಾಹ್ಮಣರು ಮಾತ್ರ ಪೂಜೆ ನಡೆಸುವ ಕ್ಷೇತ್ರವಾಗಿದೆ. ರಾಜರಾಜೇಶ್ವರ ದೇಗುಲದಲ್ಲಿ ಶತ್ರು ಭೈರವ ಯಾಗ ಸೇವೆಯೇ ಇಲ್ಲ. ಮಲಬಾರಂ ದೇವಸ್ವಂ ಬೋರ್ಡ್ ಅಡಿ ಬರುವ ಯಾವ ದೇಗುಲದಲ್ಲೂ ಬಲಿ ಕೊಡುವುದಿಲ್ಲ. ಡಿಕೆಶಿ ಹೇಳಿಕೆ ದೌರ್ಭಾಗ್ಯಕರ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ. ಇದನ್ನೂ ಓದಿ: ಆರ್‌ಬಿಐನಿಂದ ಸಾಧನೆ – ಯುಕೆಯಿಂದ ಮರಳಿ ಭಾರತಕ್ಕೆ ಬಂತು 100 ಟನ್‌ ಚಿನ್ನ!

     

    ಡಿಕೆಶಿ ಆರೋಪ ನಿರಾಕರಿಸಿದ ಕೇರಳ ಸರ್ಕಾರ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿ, ಡಿಕೆಶಿ ಆರೋಪ‌ ಮಾಡಿದಂತೆ ಕೇರಳದಲ್ಲಿ ನಡೆದಿರಲು ಸಾಧ್ಯವಿಲ್ಲ. ಕೇರಳದಲ್ಲಿ ನಡೆಯಲು ಸಾಧ್ಯತೆ ಇಲ್ಲದ ಘಟನೆ ಇದು. ಆದರೂ ಇದರ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಕೇರಳದ ದೇವಸ್ವಂ ಸಚಿವ ಕೆ.ರಾಧಾಕೃಷ್ಣನ್ ತಿಳಿಸಿದ್ದಾರೆ.