Tag: Talikote

  • ಕಾರು, ಕಬ್ಬು ಕಟಾವು ಮಿಷಿನ್ ನಡುವೆ ಭೀಕರ ಅಪಘಾತ; ಐವರು ದುರ್ಮರಣ

    ಕಾರು, ಕಬ್ಬು ಕಟಾವು ಮಿಷಿನ್ ನಡುವೆ ಭೀಕರ ಅಪಘಾತ; ಐವರು ದುರ್ಮರಣ

    ವಿಜಯಪುರ: ಕಾರು ಮತ್ತು ಕಬ್ಬು ಕಟಾವು ಮಿಷಿನ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರ (Vijayapura) ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಿಳೇಭಾವಿ (Bilebhavi) ಕ್ರಾಸ್ ಬಳಿ ನಡೆದಿದೆ.

    ಮೃತರನ್ನು ವಿಜಯಪುರ ತಾಲೂಕಿನ ಅಲಿಯಾಬಾದ್ ನಿವಾಸಿಗಳೆಂದು ಗುರುತಿಸಲಾಗಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ.ಇದನ್ನೂ ಓದಿ: ಶಾಸಕರೊಂದಿಗೆ ಅನುಚಿತ ವರ್ತನೆ – ಆರ್‌ಟಿಓ ಇನ್ಸ್‌ಪೆಕ್ಟರ್ ಅಮಾನತು

    ಹುಣಸಗಿಯಿಂದ ತಾಳಿಕೋಟೆಗೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಕಾರು ಮತ್ತು ಕಬ್ಬು ಕಟಾವು ಮಷಿನ್ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಘಟನಾ ಸ್ಥಳಕ್ಕೆ ತಾಳಿಕೋಟೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ: ಡಿವೋರ್ಸ್ ವದಂತಿಗೆ ಫುಲ್ ಸ್ಟಾಪ್- ಜೊತೆಯಾಗಿ ಕಾಣಿಸಿಕೊಂಡ ಅಭಿಷೇಕ್, ಐಶ್ವರ್ಯಾ ರೈ

     

  • ‘ಲವ್ ಯೂ ಪಾಕ್ ಆರ್ಮಿ’- ಫೇಸ್‍ಬುಕ್ ಪೋಸ್ಟ್ ಹಾಕಿ ಪೊಲೀಸರ ಅತಿಥಿಯಾದ ಯುವಕ

    ‘ಲವ್ ಯೂ ಪಾಕ್ ಆರ್ಮಿ’- ಫೇಸ್‍ಬುಕ್ ಪೋಸ್ಟ್ ಹಾಕಿ ಪೊಲೀಸರ ಅತಿಥಿಯಾದ ಯುವಕ

    ವಿಜಯಪುರ: ಪಾಕಿಸ್ತಾನ ಪರ ಘೋಷಣೆ ಕೂಗಿ ಇಬ್ಬರು ಯುವತಿಯರು ಜೈಲು ಸೇರಿದ ಬೆನ್ನಲ್ಲೇ ಇಂತಹದ್ದೇ ಪ್ರಕರಣವೊಂದು ವಿಜಯಪುರದಲ್ಲಿ ನಡೆದಿದೆ. ‘ಲವ್ ಯೂ ಪಾಕ್ ಆರ್ಮಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿಬಿಟ್ಟಿ ಯುವಕನೊಬ್ಬ ಪೊಲೀಸರ ಅತಿಥಿಯಾಗಿದ್ದಾರೆ.

    ತಾಳಿಕೋಟೆಯ ಮೇರು ಬ್ಯಾಗವಾಟ್ ಎಂಬ ಯುವಕ ಪಾಕ್ ಪರ ಪೋಸ್ಟ್ ಅನ್ನು ತನ್ನ ಫೇಸ್‍ಬುಕ್ ಖಾತೆಯಲ್ಲಿ ಶೇರ್ ಮಾಡಿದ್ದಾನೆ. ಈ ಪೋಸ್ಟ್ ಈಗ ವೈರಲ್ ಆಗಿದ್ದು, ಯುವಕನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಎಟೂಝಡ್ ಖಾತೆಯಲ್ಲಿ ಜನವರಿ 12ರಂದು ‘ಲವ್ ಯೂ ಪಾಕ್ ಆರ್ಮಿ’ ಎಂದು ಬರೆಯಲಾಗಿತ್ತು. ಇದನ್ನು ಮೇರು ಬ್ಯಾಗವಾಟ್ ಫೆಬ್ರವರಿ 22ರಂದು ಶೇರ್ ಮಾಡಿಕೊಂಡಿದ್ದಾನೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಆರೋಪಿಯನ್ನು ಮುದ್ದೇಬಿಹಾಳ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಎಟೂಝಡ್ ಫೇಸಬುಕ್ ಖಾತೆಯ ದೇಶದ್ರೋಹಿಗಾಗಿ ಶೋಧಕಾರ್ಯ ನಡೆದಿದ್ದಾರೆ.

    ಆರೋಪಿ ಮೇರು ಬ್ಯಾಗವಾಟ್ ಪರ ವಕಾಲತ್ತು ವಹಿಸದಿರಲು ಮುದ್ದೇಬಿಹಾಳ ಬಾರ್ ಕೌನ್ಸಿಲ್‍ನಿಂದ ನಿರ್ಧಾರ ಕೈಗೊಳ್ಳಲಾಗಿದೆ. ತುರ್ತು ಸಭೆ ನಡೆಸಿದ ವಕೀಲರ ಸಂಘದ ಅಧ್ಯಕ್ಷರಾದ ಎಂ.ಎಚ್.ಕ್ವಾರಿ ಹಾಗೂ ಪದಾಧಿಕಾರಿಗಳು ಈ ನಿರ್ಧಾರ ಕೈಗೊಂಡಿರುವುದಾಗಿ ಪ್ರಕಟಣೆ ಹೊರಡಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ ಮೂವರು ಕಾಶ್ಮೀರಿ ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿ ವಿಡಿಯೋ ಹರಿಬಿಟ್ಟಿದ್ದರು. ಈ ಬೆನ್ನಲ್ಲೇ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದ ಸಿಎಎ ವಿರೋಧಿ ಸಮಾವೇಶದಲ್ಲಿ ಅಮೂಲ್ಯ ಲಿಯೋನ ಪಾಕಿಸ್ತಾನ್ ಜಿಂದಾಬಾದ್ ಎಂದಿದ್ದಳು. ಇದಾದ ನಂತರದ ದಿವನೇ ಕಾಶ್ಮೀರ ಮುಕ್ತಿ, ದಲಿತ ಮುಕ್ತಿ, ಆದಿವಾಸಿ ಮುಕ್ತಿ ಎನ್ನುವ ಭಿತ್ತಿಪತ್ರ ಹಿಡಿದ ಆರೋಪದ ಅಡಿ ಆದ್ರ್ರಾಳನ್ನು ಪೊಲೀಸರು ಬಂಧಿಸಿದ್ದರು.

  • ತುಂಬಿ ಹರಿಯುತಿದೆ ಡೋಣಿ ನದಿ: ಸೇತುವೆಗಳು ಜಲಾವೃತ- 5 ಗ್ರಾಮಗಳ ಸಂಪರ್ಕ ಕಡಿತ

    ತುಂಬಿ ಹರಿಯುತಿದೆ ಡೋಣಿ ನದಿ: ಸೇತುವೆಗಳು ಜಲಾವೃತ- 5 ಗ್ರಾಮಗಳ ಸಂಪರ್ಕ ಕಡಿತ

    ವಿಜಯಪುರ: ಬುಧವಾರ ರಾತ್ರಿ ಸುರಿದ ಮಳೆಗೆ ಡೋಣಿ ನದಿ ತುಂಬಿ ಹರಿಯುತ್ತಿದ್ದು, ರಸ್ತೆಗಳು ಹಾಗೂ ಸೇತುವೆಗಳು ಜಲಾವೃತಗೊಂಡಿವೆ.

    ಸೇತುವೆಗಳು ಜಲವೃತಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಾಳಿಕೋಟೆ ಪಟ್ಟಣದಿಂದ ಒಟ್ಟು ಐದು ಗ್ರಾಮಗಳು ಸಂಪರ್ಕವನ್ನು ಕಳೆದುಕೊಂಡಿವೆ. ಜಿಲ್ಲೆಯ ಹಡಗಿನಾಳ, ಶಿವಪೂರ, ಕಲ್ಕದೇವನಹಳ್ಳಿ ಸೇರಿದಂತೆ ಐದು ಗ್ರಾಮಗಳ ಸಂಪರ್ಕ ಕಳೆದುಕೊಂಡಿವೆ.

    ಡೋಣಿ ನದಿಯ ದಡದಲ್ಲಿರುವ ಗ್ರಾಮಗಳ ರಸ್ತೆಗಳ ಮೇಲೆ ನೀರು ಉಕ್ಕಿ ಹರಿಯುತ್ತಿದೆ. ಇನ್ನೂ ಮಳೆ ಹೆಚ್ಚಾದರೆ ನದಿ ತೀರದ ಗ್ರಾಮಗಳು ಜಲಾವೃತಗಳ್ಳಬಹುದು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=M6-cTiZr02w