Tag: Taliban

  • ಅಲ್‌ಖೈದಾ ಮುಖ್ಯಸ್ಥನ ಹತ್ಯೆ – ಅಮೆರಿಕದ ಡ್ರೋನ್‌ ದಾಳಿ ಖಂಡಿಸಿದ ತಾಲಿಬಾನ್‌

    ಅಲ್‌ಖೈದಾ ಮುಖ್ಯಸ್ಥನ ಹತ್ಯೆ – ಅಮೆರಿಕದ ಡ್ರೋನ್‌ ದಾಳಿ ಖಂಡಿಸಿದ ತಾಲಿಬಾನ್‌

    ಕಾಬೂಲ್: ಅಲ್‌ಖೈದಾ ಮುಖ್ಯಸ್ಥ ಆಯ್ಮನ್ ಅಲ್ ಝವಾಹಿರಿಯ ಹತ್ಯೆಯನ್ನು ತಾಲಿಬಾನ್‌ ದೃಢಪಡಿಸಿದ್ದು, ಕಾಬೂಲ್‌ನಲ್ಲಿ ಅಮೆರಿಕ ನಡೆಸಿದ ಡ್ರೋನ್ ದಾಳಿಗೆ ಖಂಡನೆ ವ್ಯಕ್ತಪಡಿಸಿದೆ.

    ತಾಲಿಬಾನ್ ವಕ್ತಾರ ಜಬಿವುಲ್ಲಾ ಮುಜಾಹಿದ್ ಪ್ರತಿಕ್ರಿಯಿಸಿದ್ದು, ರಾಜಧಾನಿಯ ನಿವಾಸದ ಮೇಲೆ ದಾಳಿ ನಡೆದಿದೆ. ಇದು ಅಂತಾರಾಷ್ಟ್ರೀಯ ನಿಯಮಗಳ ಉಲ್ಲಂಘನೆ ಎಂದು ಖಂಡಿಸಿದ್ದಾರೆ. ಟೋಲೋ ನ್ಯೂಸ್ ಪ್ರಕಾರ, ಭಾನುವಾರ ಮುಂಜಾನೆ ಕಾಬೂಲ್‌ನಲ್ಲಿ ದೊಡ್ಡ ಸ್ಫೋಟವೊಂದು ಪ್ರತಿಧ್ವನಿಸಿತು. ಇದನ್ನೂ ಓದಿ: ಅಲ್‌ಖೈದಾ ಮುಖ್ಯಸ್ಥ ಝವಾಹಿರಿ ಹತ್ಯೆ- ಮೋಸ್ಟ್ ವಾಂಟೆಡ್ ಉಗ್ರನ ಮೇಲೆ ಡ್ರೋಣ್ ಸ್ಟ್ರೈಕ್‌

    ಶೆರ್ಪೂರ್‌ನಲ್ಲಿ ಮನೆಯೊಂದಕ್ಕೆ ರಾಕೆಟ್ ಅಪ್ಪಳಿಸಿತು. ಮನೆ ಖಾಲಿಯಾಗಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ನಫಿ ಟಾಕೋರ್ ಈ ಹಿಂದೆ ಹೇಳಿದ್ದರು.

    Joe Biden

    ಸೋಮವಾರ ದೂರದರ್ಶನದ ಭಾಷಣದಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರು‌, ಯುಎಸ್‌ ನಡೆಸಿದ ಡ್ರೋನ್‌ ದಾಳಿಯಲ್ಲಿ ಅಲ್‌ಖೈದಾ ಮುಖ್ಯಸ್ಥ ಆಯ್ಮಾನ್ ಅಲ್ ಝವಾಹಿರಿ ಹತ್ಯೆಯಾಗಿದ್ದಾನೆ. ನ್ಯಾಯ ಸಿಕ್ಕಿದೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಝವಾಹಿರಿಗೆ ಆಶ್ರಯ ನೀಡುವ ಮೂಲಕ ತಾಲಿಬಾನ್ ದೋಹಾ ಒಪ್ಪಂದ ಉಲ್ಲಂಘಿಸಿದೆ: ಆಂಟನಿ ಬ್ಲಿಂಕೆನ್

    ಝವಾಹಿರಿ ವಿಶ್ವದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದ. 2001ರ ಸೆಪ್ಟೆಂಬರ್ 11ರಂದು ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ನಡೆದ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ. ಅಫ್ಘಾನಿಸ್ತಾನದಿಂದ US ಮಿಲಿಟರಿ ವಾಪಸ್‌ ತೆಗೆದುಕೊಂಡ ನಂತರ ತಾಲಿಬಾನ್‌ ಆ ದೇಶವನ್ನು ವಶಕ್ಕೆ ಪಡೆಯಿತು. ಆಗಿನಿಂದಲೂ ಝವಾಹಿರಿ ಹತ್ಯೆ ಉದ್ದೇಶವನ್ನು ಅಮೆರಿಕ ಹೊಂದಿತ್ತು.

    Live Tv
    [brid partner=56869869 player=32851 video=960834 autoplay=true]

  • ಝವಾಹಿರಿಗೆ ಆಶ್ರಯ ನೀಡುವ ಮೂಲಕ ತಾಲಿಬಾನ್ ದೋಹಾ ಒಪ್ಪಂದ ಉಲ್ಲಂಘಿಸಿದೆ: ಆಂಟನಿ ಬ್ಲಿಂಕೆನ್

    ಝವಾಹಿರಿಗೆ ಆಶ್ರಯ ನೀಡುವ ಮೂಲಕ ತಾಲಿಬಾನ್ ದೋಹಾ ಒಪ್ಪಂದ ಉಲ್ಲಂಘಿಸಿದೆ: ಆಂಟನಿ ಬ್ಲಿಂಕೆನ್

    ವಾಷಿಂಗ್ಟನ್: ಅಲ್‍ಖೈದಾ ಉಗ್ರ ಸಂಘಟನೆ ಮುಖ್ಯಸ್ಥ ಆಯ್ಮಾನ್ ಅಲ್ ಝವಾಹಿರಿಗೆ ಆಶ್ರಯ ನೀಡುವ ಮೂಲಕ ತಾಲಿಬಾನ್ ದೋಹಾ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಕಿಡಿಕಾರಿದ್ದಾರೆ.

    ಅಫ್ಗಾನಿಸ್ತಾನದಲ್ಲಿ ನಡೆದ ಅಮೆರಿಕದ ಡ್ರೋನ್ ದಾಳಿಯಲ್ಲಿ ಆಯ್ಮಾನ್ ಅಲ್ ಝವಾಹಿರಿಯನ್ನು ಹತ್ಯೆ ಮಾಡಲಾಗಿದೆ. ಮೋಸ್ಟ್ ವಾಂಟೆಡ್ ಉಗ್ರನಾಗಿದ್ದ ಆಯ್ಮಾನ್ ಅಲ್ ಝವಾಹಿರಿ, ಒಸಾಮಾ ಬಿಲ್ ಲಾಡೆನ್ ನಂತರದಲ್ಲಿ ಅಲ್‍ಖೈದಾ ಮುಖ್ಯಸ್ಥನಾಗಿದ್ದ. 2001ರ ಸೆಪ್ಟೆಂಬರ್ 11ರಂದು ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ನಡೆದಿದ್ದ ದಾಳಿಯ ಪ್ರಮುಖ ಶಂಕಿತ ಸಂಚುಕೋರನೂ ಆಗಿದ್ದನು. ಜೊತೆಗೆ ಜಾಗತಿಕ ಭಯೋತ್ಪಾದನಾ ಜಾಲದ ಪ್ರಮುಖ ಆದರ್ಶವಾದಿಯಾಗಿದ್ದ ಎಂದು ಹೇಳಲಾಗಿದೆ. ಇದನ್ನೂ ಓದಿ: ಅಲ್‌ಖೈದಾ ಮುಖ್ಯಸ್ಥ ಝವಾಹಿರಿ ಹತ್ಯೆ- ಮೋಸ್ಟ್ ವಾಂಟೆಡ್ ಉಗ್ರನ ಮೇಲೆ ಡ್ರೋಣ್ ಸ್ಟ್ರೈಕ್‌

    ಈ ಹಿನ್ನೆಲೆ ಆಂಟೋನಿ ಬ್ಲಿಂಕೆನ್ ಅಸಮಾಧಾನ ವ್ಯಕ್ತಪಡಿಸಿದ್ದು, ಝವಾಹಿರಿಗೆ ಆಶ್ರಯ ನೀಡುವ ಮೂಲಕ ತಾಲಿಬಾನ್ ದೋಹಾ ಒಪ್ಪಂದವನ್ನು ‘ತೀವ್ರವಾಗಿ’ ಉಲ್ಲಂಘಿಸಿದೆ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.

    ತಾಲಿಬಾನ್ ಅವರು ತಮ್ಮ ಒಪ್ಪಂದಗಳಿಗೆ ಬದ್ಧವಾಗಿರಲು ಅಸಮರ್ಥವಾಗಿದೆ. ಈ ಹಿನ್ನೆಲೆ ನಾವು ಅಫ್ಘಾನ್ ಜನರನ್ನು ಮಾನವೀಯ ನೆರವಿನೊಂದಿಗೆ ಬೆಂಬಲಿಸುವುದನ್ನು ಮುಂದುವರಿಸುತ್ತೇವೆ. ಅವರ ಮಾನವ ಹಕ್ಕುಗಳ ರಕ್ಷಣೆಗಾಗಿ, ವಿಶೇಷವಾಗಿ ಮಹಿಳೆಯರು ಮತ್ತು ಹುಡುಗಿಯರ ರಕ್ಷಣೆಗಾಗಿ ಪ್ರತಿಪಾದಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಲಸಿನ ಹಣ್ಣಿಗಾಗಿ ಗಜರಾಜನ ಸರ್ಕಸ್ – ಕೊನೆಗೆ ಏನಾಯ್ತು ನೋಡಿ 

    Live Tv
    [brid partner=56869869 player=32851 video=960834 autoplay=true]

  • ಅಂತಾರಾಷ್ಟ್ರೀಯ ಒಪ್ಪಿಗೆ ಸಿಗಬೇಕಾದರೆ ಮಾನವ ಹಕ್ಕು ಗೌರವಿಸಿ: ತಾಲಿಬಾನ್‍ಗೆ UN ಖಡಕ್ ಎಚ್ಚರಿಕೆ

    ಅಂತಾರಾಷ್ಟ್ರೀಯ ಒಪ್ಪಿಗೆ ಸಿಗಬೇಕಾದರೆ ಮಾನವ ಹಕ್ಕು ಗೌರವಿಸಿ: ತಾಲಿಬಾನ್‍ಗೆ UN ಖಡಕ್ ಎಚ್ಚರಿಕೆ

    ಕಾಬೂಲ್: ಅಂತಾರಾಷ್ಟ್ರೀಯ ಒಪ್ಪಿಗೆ ಬಯಸುವ ತಾಲಿಬಾನ್ ಮೊದಲು ತಮ್ಮ ದೇಶದ ಜನರ ಮಾನವ ಹಕ್ಕುಗಳನ್ನು ಗೌರವಿಸಿಬೇಕು ಎಂದು ವಿಶ್ವಸಂಸ್ಥೆ ತಾಲಿಬಾನ್‍ಗೆ ಸಂದೇಶವನ್ನು ನೀಡಿದೆ.

    ತಾಲಿಬಾನ್ ಸರ್ಕಾರ ಅಂತರಾಷ್ಟ್ರೀಯ ಒಪ್ಪಿಗೆ ಪಡೆಯಬೇಕು ಎಂದು ವಿಶ್ವಸಂಸ್ಥೆಗೆ ಮನವಿ ಮಾಡಿತ್ತು. ಯುಎಸ್ ಮಿಷನ್ ಮುಖ್ಯಸ್ಥ ಇಯಾನ್ ಮೆಕ್ಕಾರಿ ಈ ಕುರಿತು ಟ್ವಿಟ್ಟರ್‍ನಲ್ಲಿ ಉತ್ತರ ಕೊಟ್ಟಿದ್ದು, ಕಳೆದ ವರ್ಷ ದೋಹಾದಲ್ಲಿ, ನಾವು ನಿರ್ಣಾಯಕ ಸಮಸ್ಯೆಗಳನ್ನು ಪರಿಹರಿಸಲು ತಾಲಿಬಾನ್‍ನೊಂದಿಗೆ ಸಂವಾದವನ್ನು ನಡೆಸಿದ್ದೇವೆ. ನಾವು ಯುಎನ್ ನಾಗರಿಕರು ಮತ್ತು ಅಫ್ಘಾನ್ ಜನರೊಂದಿಗೆ ವ್ಯಾಪಕವಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಹಲವು ಸವತ್ತುಗಳನ್ನು ಒದಗಿಸಿದ್ದೇವೆ. ನಾವು ಸಹಾಯ ಮಾಡಲು ಸಾಧ್ಯವಾಗಿದೆ ಎಂದು ನನಗೆ ಸಂತೋಷವಾಗಿದೆ. ಆದರೆ ಅಫ್ಘಾನಿಸ್ತಾನದಲ್ಲಿ ನಾವು ಇನ್ನೂ ಹಲವು ಸವಾಲುಗಳನ್ನು ಎದುರಿಸುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮಂಕಿಪಾಕ್ಸ್‌ಗೆ ಭಾರತದಲ್ಲಿ ಮೊದಲ ಬಲಿ

    ಅಂತಾರಾಷ್ಟ್ರೀಯ ಪಾಲುದಾರರು ಮತ್ತು ಸಮಾನಮನಸ್ಕ ಸಮುದಾಯದ ಅಸಾಧಾರಣ ಬೆಂಬಲವನ್ನು ನಾನು ಪ್ರಶಂಸಿಸುತ್ತೇನೆ. ನಾವು ಒಟ್ಟಾಗಿ ಒಂದು ಸ್ಪಷ್ಟ ಸಂದೇಶವನ್ನು ಕಳುಹಿಸಿದ್ದೇವೆ. ತಾಲಿಬಾನ್ ಅಂತರಾಷ್ಟ್ರೀಯ ಸಮುದಾಯದ ಅಂಗೀಕಾರವನ್ನು ಪಡೆಯಲು ಆಶಿಸಿದರೆ, ಅವರು ಎಲ್ಲ ಆಫ್ಘನ್ ಜನರ ಅಭಿಪ್ರಾಯಗಳನ್ನು ಕೇಳಬೇಕು ಮತ್ತು ಗೌರವಿಸಬೇಕು. ಅದರ ಜೊತೆಗೆ ಮಾನವ ಹಕ್ಕುಗಳನ್ನು ಗೌರವಿಸಬೇಕು ಎಂದು ಸಂದೇಶವನ್ನು ಕಳುಹಿಸಿದರು.

    ಬಾಲಕಿಯರಿಗೆ ಮಾಧ್ಯಮಿಕ ಶಾಲೆಗಳಿಗೆ ಪ್ರವೇಶ ನೀಡಲು ತಾಲಿಬಾನ್‍ನ ನಿರಂತರವಾಗಿ ನಿರಾಕರಣೆ ಮಾಡುತ್ತಿದೆ. ಅಲ್ಲದೇ ಮಾಧ್ಯಮ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದೆ. ಮಹಿಳೆಯರ ಹಕ್ಕುಗಳ ಮೇಲೆ ಸ್ವೀಕಾರಾರ್ಹವಲ್ಲದ ನಿರ್ಬಂಧಗಳು ಸೇರಿದಂತೆ ಮಾನವ ಹಕ್ಕುಗಳ ಉಲ್ಲಂಘನೆಯ ವರದಿಗಳ ಬಗ್ಗೆ ಅವರು ನಿರಾಶೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಸಿಕ್ಕ-ಸಿಕ್ಕವರ ಮೇಲೆ ಚಾಕು ಇರಿದು ಪರಾರಿಯಾಗಿದ್ದವ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

  • ಭಾರತೀಯರು, ಸಿಖ್ ದೇಶಬಾಂಧವರು ಆಫ್ಘಾನ್‍ಗೆ ಮರಳಿ: ತಾಲಿಬಾನ್

    ಭಾರತೀಯರು, ಸಿಖ್ ದೇಶಬಾಂಧವರು ಆಫ್ಘಾನ್‍ಗೆ ಮರಳಿ: ತಾಲಿಬಾನ್

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ಭದ್ರತಾ ಪರಿಸ್ಥಿತಿಯನ್ನು ಪರಿಗಣಿಸಿ ಅಲ್ಪಸಂಖ್ಯಾತರಾದ ಹಿಂದೂಗಳು ಮತ್ತು ಸಿಖ್ಖರು ದೇಶಕ್ಕೆ ಮರಳುವಂತೆ ಕೇಳಲಾಗುತ್ತಿದೆ ಎಂದು ತಾಲಿಬಾನ್ ಹೇಳಿಕೊಂಡಿದೆ.

    ತಾಲಿಬಾನ್ ರಾಜ್ಯ ಸಚಿವರ ಕಚೇರಿಯ ಮಹಾನಿರ್ದೇಶಕ ಮುಲ್ಲಾ ಅಬ್ದುಲ್ ವಾಸಿ ಅವರು ಜುಲೈ 24 ರಂದು ಅಫ್ಘಾನಿಸ್ತಾನದ ಹಿಂದೂ ಮತ್ತು ಸಿಖ್ ಕೌನ್ಸಿಲ್‍ನ ಹಲವಾರು ಸದಸ್ಯರನ್ನು ಭೇಟಿಯಾದ ನಂತರ, ಅಫ್ಘಾನಿಸ್ತಾನದ ಮುಖ್ಯಸ್ಥರ ಕಚೇರಿ ಟ್ವೀಟ್ ಮಾಡುವ ಮೂಲಕ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಾಯಿಗಳಿಗೂ ಏರ್ ಕಂಡೀಷನ್ ಫ್ಲ್ಯಾಟ್ ಒದಗಿಸಿದ್ದ ಪಾರ್ಥ 

    ವಾಸಿ ಅವರು ಕಾಬೂಲ್‍ನಲ್ಲಿ ಹಿಂದೂ ಮತ್ತು ಸಿಖ್ ನಾಯಕರ ನಿಯೋಗವನ್ನು ಭೇಟಿ ಮಾಡಿ, ಭದ್ರತಾ ಸಮಸ್ಯೆಗಳಿಂದಾಗಿ ದೇಶವನ್ನು ತೊರೆದ ಎಲ್ಲ ಭಾರತೀಯ ಮತ್ತು ಸಿಖ್ ದೇಶಬಾಂಧವರು ಈಗ ಅಫ್ಘಾನಿಸ್ತಾನಕ್ಕೆ ಮರಳಬಹುದು. ಏಕೆಂದರೆ ದೇಶದಲ್ಲಿ ಭದ್ರತೆಯನ್ನು ಸ್ಥಾಪಿಸಲಾಗಿದೆ ಎಂದು ಕೇಳಿಕೊಂಡಿದ್ದಾರೆ.

    ಅಫ್ಘಾನಿಸ್ತಾನದಲ್ಲಿ ಸಿಖ್ ಸಮುದಾಯ ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಅವರ ಮೇಲೆ ದಾಳಿ ಮಾಡಲಾಗಿತ್ತು. ಈ ಹಿನ್ನೆಲೆ ಹಲವು ಹಿಂದೂಗಳು ಮತ್ತು ಸಿಖ್‍ರು ಪ್ರಾಣ ಉಳಿಸಿಕೊಳ್ಳಲು ಬೇರೆ ಕಡೆ ಪಲಾಯನ ಮಾಡಿದ್ದರು. ಈ ಹಿನ್ನೆಲೆ ಅವರನ್ನು ತಾಲಿಬಾನ್‌ ಮರಳಿ ಬರುವಂತೆ ಕೇಳಿಕೊಂಡಿದೆ.

    ತಾಲಿಬಾನ್ ಬಿಡುಗಡೆ ಮಾಡಿದ ಪ್ರಕಟಣೆ ಪ್ರಕಾರ, ಕಾಬೂಲ್‍ನ ಗುರುದ್ವಾರದ ಮೇಲೆ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯದ(ಐಎಸ್‍ಕೆಪಿ) ದಾಳಿಯನ್ನು ತಡೆಗಟ್ಟಿದ್ದಕ್ಕಾಗಿ ಸಿಖ್ ನಾಯಕರು ತಾಲಿಬಾನ್‍ಗೆ ಧನ್ಯವಾದ ಅರ್ಪಿಸಿದರು.

    ನಡೆದಿದ್ದೇನು?
    ಜೂನ್ 18 ರಂದು, ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ(ISKP) ಕಾಬೂಲ್‍ನ ಕಾರ್ಟೆ ಪರ್ವಾನ್ ಗುರುದ್ವಾರದ ಮೇಲೆ ದಾಳಿ ಮಾಡಿತು. ಮಾರಣಾಂತಿಕ ದಾಳಿಯ ಸಮಯದಲ್ಲಿ ಸಿಖ್ ಸೇರಿದಂತೆ ಇಬ್ಬರು ಪ್ರಾಣ ಕಳೆದುಕೊಂಡರು. ಇದನ್ನೂ ಓದಿ:  ಒರಾಯನ್ ಮಾಲ್ ಮುಂಭಾಗ ನಡೆಯಿತು ಅಚಾತುರ್ಯ: ಅಮಲಿನ ಶೋಕಿಗೆ ಬಡಜೀವ ಬಲಿ 

    ಮೂಲಗಳ ಪ್ರಕಾರ, ದಾಳಿಕೋರರು ಆವರಣವನ್ನು ಪ್ರವೇಶಿಸಿದಾಗ ಸುಮಾರು 25 ರಿಂದ 30 ಜನರು ತಮ್ಮ ಬೆಳಗಿನ ಪ್ರಾರ್ಥನೆಗಾಗಿ ಗುರುದ್ವಾರಕ್ಕೆ ಬಂದಿದ್ದರು. ಈ ವೇಳೆ ಅವರ ಮೇಲೆ ಉಗ್ರರು ದಾಳಿ ಗುರುದ್ವಾರದ ಸಿಬ್ಬಂದಿಯಾಗಿದ್ದ ಅಹ್ಮದ್‍ನನ್ನು ಹತ್ಯೆ ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ತಾಲಿಬಾನ್ ಬ್ಯಾನ್ ಮಾಡಿ: ಅಫ್ಘನ್ ಜನರಿಂದ ಟ್ವಿಟ್ಟರ್ ಅಭಿಯಾನ

    ತಾಲಿಬಾನ್ ಬ್ಯಾನ್ ಮಾಡಿ: ಅಫ್ಘನ್ ಜನರಿಂದ ಟ್ವಿಟ್ಟರ್ ಅಭಿಯಾನ

    ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್ ಸಂಬಂಧಿತ ಫೇಸ್‌ಬುಕ್‌ನಂತಹ ಪುಟಗಳನ್ನು ಮೆಟಾ ಬ್ಯಾನ್ ಮಾಡಿದ ಬಳಿಕ ಇದೀಗ ಅಫ್ಘನ್ ಜನರು ಟ್ವಿಟ್ಟರ್‌ನಲ್ಲಿ ಹೊಸ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ತಾಲಿಬಾನ್ ಅನ್ನು ಬ್ಯಾನ್ ಮಾಡಿ ಎಂಬ ಕರೆಯೊಂದಿಗೆ ಅಫ್ಘನ್ನರು ಸಾವಿರಾರು ಟ್ವೀಟ್‌ಗಳನ್ನು ಮಾಡಿದ್ದಾರೆ.

    BanTaliban ಹ್ಯಾಶ್ ಟ್ಯಾಗ್ ಬಳಸಿ ಅಫ್ಘಾನಿಸ್ತಾನ ಮಾತ್ರವಲ್ಲದೇ ಪಾಕಿಸ್ತಾನ, ಯುನೈಟೆಡ್ ಅರಬ್ ಎಮಿರೇಟ್ಸ್, ಜರ್ಮನಿ, ಯುರೋಪ್, ಭಾರತ ಹಾಗೂ ಅಮೆರಿಕದಲ್ಲೂ ಜನರು ಟ್ವೀಟ್ ಮಾಡಿ, ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ಇದನ್ನೂ ಓದಿ: ಭಾರತದ ಗಡಿಯಲ್ಲಿ ಮತ್ತೆ ಪಾಕ್ ಡ್ರೋನ್ ಹಾರಾಟ

    ವರದಿಗಳ ಪ್ರಕಾರ ಅಫ್ಘಾನಿಸ್ತಾನದ ಪತ್ರಕರ್ತರು, ನಾಗರಿಕ ಕಾರ್ಯಕರ್ತರು, ವಕೀಲರು ಟ್ವಿಟ್ಟರ್ ಬಳಸುವ ಎಲ್ಲಾ ತಾಲಿಬಾನ್ ಸದಸ್ಯರಿಗೂ ಪ್ರವೇಶ ನಿಷೇಧಿಸುವಂತೆ ಟ್ವಿಟ್ಟರ್ ಅನ್ನು ಒತ್ತಾಯಿಸಿದ್ದಾರೆ. ತಾಲಿಬಾನ್ ತಪ್ಪು ಮಾಹಿತಿ ಹರಡುವಿಕೆ, ಹಿಂಸಾಚಾರ, ಶಿರಚ್ಛೇದದ ಕರೆಗಳು, ಭಯೋತ್ಪಾದಕರಿಗೆ ಬೆಂಬಲ ನೀಡುವುದು ಸೇರಿದಂತೆ ಹಲವು ಆಘಾತಕರ ವಿಷಯಗಳನ್ನು ಈ ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಳ್ಳುತ್ತದೆ ಎಂಬ ಕಾರಣಕ್ಕೆ ಜನರು ಈ ಅಭಿಯಾನಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ದೇಶದಲ್ಲಿ 4 ಕೋಟಿಗೂ ಅಧಿಕ ಜನ ಮೊದಲ ಡೋಸ್ ಲಸಿಕೆ ಪಡೆದಿಲ್ಲ!

    ಬುಧವಾರ ಫೇಸ್‌ಬುಕ್ ಆರ್‌ಟಿಎ ಟಿವಿ ಚಾನೆಲ್ ಹಾಗೂ ಬಕ್ತರ್ ನ್ಯೂಸ್ ಏಜೆನ್ಸಿ ಸೇರಿದಂತೆ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ತಾಲಿಬಾನ್ ಸಂಬಂಧಿತ ವಿಷಯಗಳನ್ನು ಹಾಗೂ ಪುಟಗಳನ್ನು ನಿಷೇಧಿಸಿತ್ತು. ಮೆಟಾದ ಈ ನಿರ್ಧಾರವನ್ನು ಅಫ್ಘನ್ ಜನರು ಸ್ವಾಗತಿಸಿದ್ದಾರೆ. ಮೆಟಾದ ಕ್ರಮದ ಬೆನ್ನಲ್ಲೇ ಟ್ವಿಟ್ಟರ್‌ನಲ್ಲೂ ತಾಲಿಬಾನ್‌ಗೆ ನಿಷೇಧ ಹೇರುವಂತೆ ಒತ್ತಾಯಿಸಿ ಜನರು ಅಭಿಯಾನ ಪ್ರಾರಂಭಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನೀವು ಬರಬೇಡಿ.. ನಿಮ್ಮ ಮನೆಯ ಪುರುಷರನ್ನು ಕೆಲಸಕ್ಕೆ ಕಳಿಸಿ: ಮಹಿಳಾ ಉದ್ಯೋಗಿಗಳಿಗೆ ತಾಲಿಬಾನ್‌ ಸೂಚನೆ

    ಕಾಬೂಲ್: ಅಫ್ಘಾನಿಸ್ತಾನದ ಮಹಿಳಾ ಉದ್ಯೋಗಿಗಳಿಗೆ ತಮ್ಮ ಕೆಲಸ ಮಾಡಲು ಪುರುಷ ಸಂಬಂಧಿಯನ್ನು ಕಳುಹಿಸುವಂತೆ ತಾಲಿಬಾನ್‌ ಸೂಚನೆ ನೀಡಿದೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.

    ಈ ಕುರಿತು ಮಾತನಾಡಿರುವ ಮಹಿಳಾ ಉದ್ಯೋಗಿಯೊಬ್ಬರು, ನಿಮ್ಮ ಬದಲಿಗೆ ಮನೆಯ ಪುರುಷನನ್ನು ಉದ್ಯೋಗಕ್ಕೆ ಕಳುಹಿಸಿ ಎಂದು ತಾಲಿಬಾನ್‌ ಅಧಿಕಾರಿಗಳು ಕರೆ ಮಾಡಿ ತಿಳಿಸಿದ್ದಾರೆ. ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚಿದೆ. ನಿಮ್ಮ ಬದಲು ಪುರುಷರನ್ನು ನೇಮಕ ಮಾಡಿಕೊಳ್ಳಬೇಕಾಗಿದೆ ಎಂದು ತಾಲಿಬಾನ್‌ ಅಧಿಕಾರಿಗಳು ಹೇಳಿರುವುದಾಗಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ದಿಢೀರ್ ಪ್ರವಾಹ – 12 ಸಾವು, ಹಲವರು ನಾಪತ್ತೆ, ಸಾವಿರಾರು ಜನ ಸ್ಥಳಾಂತರ

    ತಾಲಿಬಾನಿಗಳು ಅಧಿಕಾರಕ್ಕೆ ಬಂದಾಗಿನಿಂದ ನನ್ನನ್ನು ಉದ್ಯೋಗದಲ್ಲಿ ಪ್ರಮುಖ ಸ್ಥಾನದಿಂದ ಕೆಳಗಿಳಿಸಿದ್ದಾರೆ. ನನ್ನ ಸಂಬಳವನ್ನು 60,000 ಅಫ್ಘಾನಿಗಳಿಂದ 12,000 ಅಫ್ಘಾನಿಗೆ ಇಳಿಸಿದ್ದಾರೆ. ಇದರಿಂದ ನನ್ನ ಮಗನ ಶಾಲಾ ಶುಲ್ಕವನ್ನು ಭರಿಸುವುದಕ್ಕೂ ನನ್ನಿಂದ ಸಾಧ್ಯವಾಗುತ್ತಿಲ್ಲ. ಈ ಕುರಿತು ಪ್ರಶ್ನಿಸಿದರೆ, ಕಚೇರಿಯಿಂದ ಹೊರಹೋಗುವಂತೆ ಅಧಿಕಾರಿಗಳು ಉಗ್ರವಾಗಿ ವರ್ತಿಸುತ್ತಾರೆ ಎಂದು ಉದ್ಯೋಗಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.

    15 ವರ್ಷಗಳ ಕಾಲ ತಾನು ಕೆಲಸ ಮಾಡಿದ ಹುದ್ದೆಗೆ ಪುರುಷನನ್ನು ಬದಲಿ ಶಿಫಾರಸು ಮಾಡುವಂತೆ ಸಚಿವಾಲಯದ ಮಾನವ ಸಂಪನ್ಮೂಲ ಇಲಾಖೆಯಿಂದ ಕರೆ ಬಂದಿದೆ ಎಂದು ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರುವ ಮತ್ತು ಸಚಿವಾಲಯದಲ್ಲಿ ವಿಭಾಗದ ಮುಖ್ಯಸ್ಥರಾಗಿರುವ ಮಹಿಳಾ ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಇಂಡಿಯಾನಾದ ಮಾಲ್‍ನಲ್ಲಿ ಗುಂಡಿನ ದಾಳಿ- ಮೂವರು ಸಾವು

    ತಾಲಿಬಾನ್‌ ನೀತಿಗಳನ್ನು ಜಾಗತಿಕ ಸಂಸ್ಥೆಗಳು ತೀವ್ರವಾಗಿ ಟೀಕಿಸಿವೆ. ಇಂತಹ ನೀತಿಗಳಿಂದ ದೇಶದಲ್ಲಿ ಆರ್ಥಿಕ ನಷ್ಟದ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿವೆ. ಮಹಿಳೆಯರ ಉದ್ಯೋಗದ ಮೇಲಿನ ಪ್ರಸ್ತುತ ನಿರ್ಬಂಧಗಳು 1 ಬಿಲಿಯನ್‌ ಡಾಲರ್‌ ವರೆಗೆ ತಕ್ಷಣದ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು ಎಂದು UN ಮಹಿಳೆಯರ ಕಾರ್ಯನಿರ್ವಾಹಕ ನಿರ್ದೇಶಕಿ ಸಿಮಾ ಬಹೌಸ್ ತಿಳಿಸಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಅಂದಿನಿಂದ ಮಹಿಳೆಯರ ಹಕ್ಕುಗಳನ್ನು ಹಿಂತೆಗೆದುಕೊಳ್ಳುವ ಹಲವಾರು ತೀರ್ಪುಗಳನ್ನು ಹೊರಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • 20 ವರ್ಷ ಸಮಾಧಿಯಾಗಿದ್ದ ತಾಲಿಬಾನ್‌ ಸಂಸ್ಥಾಪಕನ ಕಾರು ಪತ್ತೆ – ಮ್ಯೂಸಿಯಂನಲ್ಲಿಡಲು ನಿರ್ಧಾರ

    20 ವರ್ಷ ಸಮಾಧಿಯಾಗಿದ್ದ ತಾಲಿಬಾನ್‌ ಸಂಸ್ಥಾಪಕನ ಕಾರು ಪತ್ತೆ – ಮ್ಯೂಸಿಯಂನಲ್ಲಿಡಲು ನಿರ್ಧಾರ

    ಕಾಬೂಲ್: ಯುಎಸ್‌ ಪಡೆಗಳ ಟಾರ್ಗೆಟ್‌ನಿಂದ ತಪ್ಪಿಸಿಕೊಳ್ಳಲು ತಾಲಿಬಾನ್‌ ಸಂಸ್ಥಾಪಕ ಮುಲ್ಲಾ ಓಮರ್‌ ಬಳಸಿದ ಕಾರನ್ನು ಪೂರ್ವ ಆಫ್ಘಾನಿಸ್ತಾನದಲ್ಲಿ ಪತ್ತೆ ಹಚ್ಚಲಾಗಿದೆ. ಸುಮಾರು 20 ವರ್ಷಗಳಿಗಿಂತಲೂ ಹೆಚ್ಚು ಕಾಲ ಈ ಕಾರನ್ನು ಸಮಾಧಿ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    9/11 ದಾಳಿಯ ನಂತರ ಯುಎಸ್‌ ಪಡೆಗಳು ಓಮರ್‌ನನ್ನು ಟಾರ್ಗೆಟ್‌ ಮಾಡಿದ್ದವು. ತಪ್ಪಿಸಿಕೊಳ್ಳಲು ಓಮರ್‌ ಬಳಸಿದ್ದ ಕಾರನ್ನು ಪೂರ್ವ ಅಫ್ಘಾನಿಸ್ತಾನದಲ್ಲಿ ಉತ್ಕನನ ಮಾಡಲಾಗಿದೆ. ಬಿಳಿ ಟೊಯೊಟಾ ಕೊರೊಲ್ಲಾ ಕಾರನ್ನು ಜಬುಲ್ ಪ್ರಾಂತ್ಯದ ಹಳ್ಳಿಯ ಉದ್ಯಾನದಲ್ಲಿ ಮಾಜಿ ತಾಲಿಬಾನ್ ಅಧಿಕಾರಿ ಅಬ್ದುಲ್ ಜಬ್ಬಾರ್ ಒಮಾರಿ ಹೂತುಹಾಕಿದ್ದರು. ಇದನ್ನೂ ಓದಿ: ಬ್ರಿಟನ್ ಪ್ರಧಾನಿ ಬೋರಿಸ್ ರಾಜೀನಾಮೆ ಘೋಷಣೆ

    ʼಇದು ಇನ್ನೂ ಉತ್ತಮ ಸ್ಥಿತಿಯಲ್ಲಿದೆ, ಅದರ ಮುಂಭಾಗ ಮಾತ್ರ ಸ್ವಲ್ಪ ಹಾನಿಯಾಗಿದೆʼ ಎಂದು ಜಬುಲ್ ಪ್ರಾಂತ್ಯದ ಮಾಹಿತಿ ಮತ್ತು ಸಂಸ್ಕೃತಿಯ ನಿರ್ದೇಶಕ ರಹಮತುಲ್ಲಾ ಹಮ್ಮದ್ AFP ಗೆ ತಿಳಿಸಿದ್ದಾರೆ. ಈ ವಾಹನವು ಯಾರ ಕೈಗೂ ಸಿಗಬಾರದೆಂದು ಅದನ್ನು ಸಮಾಧಿ ಮಾಡಲಾಗಿತ್ತು ಎಂದು ಅಹ್ಮದ್‌ ಹೇಳಿದ್ದಾರೆ

    ರಾಜಧಾನಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಕಾರನ್ನು ʼದೊಡ್ಡ ಐತಿಹಾಸಿಕ ಸ್ಮಾರಕʼ ಎಂದು ಹೆಸರಿಸಿ ಪ್ರದರ್ಶಿಸಲು ತಾಲಿಬಾನ್‌ ಬಯಸಿದೆ ಎಂದು ಅವರ ತಿಳಿಸಲಾಗಿದೆ. 1996 ರಲ್ಲಿ ಕಠಿಣ ಇಸ್ಲಾಮಿಸ್ಟ್ ಚಳುವಳಿಯನ್ನು ಅಧಿಕಾರಕ್ಕೆ ತಂದ ಮುಲ್ಲಾ ಒಮರ್ ಅವರು ಕಂದಹಾರ್‌ನಲ್ಲಿ ತಾಲಿಬಾನ್ ರೂಪಿಸಿದರು. ನಂತರ ದೇಶದ ಜನತೆ ಮೇಲೆ ತಾಲಿಬಾನ್‌ ನೀತಿ-ನಿಯಮಗಳ ಕಟ್ಟುನಿಟ್ಟನ್ನು ಹೇರಿದರು.

    ಸೆಪ್ಟೆಂಬರ್‌ 11ರ ದಾಳಿ ನಂತರ ಅಪ್ಘಾನಿಸ್ತಾನವು ಒಸಾಮಾ ಬಿನ್‌ ಲಾಡೆನ್‌, ಅಲ್‌ ಖೈದಾ ಸೇರಿದಂತೆ ಜಿಹಾದಿಸ್ಟ್‌ ಗುಂಪುಗಳಿಗೆ ಆಶ್ರಯತಾಣವಾಯಿತು. ಇದನ್ನೂ ಓದಿ: ಆರ್ಥಿಕ ಹಿಂಜರಿತ ಭೀತಿ – ಅಂತಾರಾಷ್ಟ್ರೀಯ ತೈಲಬೆಲೆ ಭಾರೀ ಇಳಿಕೆ

    ಬಿನ್ ಲಾಡೆನ್‌ನನ್ನು ಹಸ್ತಾಂತರಿಸಲು ತಾಲಿಬಾನ್ ನಿರಾಕರಿಸಿದಾಗ, ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳು ಅಫ್ಘಾನಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿದವು. ಆಕ್ರಮಣಕ್ಕೂ ಮೊದಲು ತಾಲಿಬಾನ್‌ ಕಿತ್ತೊಗೆದು ಅಪ್ಘಾನಿಸ್ತಾನದಲ್ಲಿ ಹೊಸ ಸರ್ಕಾರವನ್ನು ರಚಿಸಿದ್ದವು.

    ನಂತರ ಓಮರ್‌ ತಲೆಮರೆಸಿಕೊಂಡಿದ್ದ. ನಂತರ ಓಮರ್‌ ಸಾವಿಗೀಡಾದ. ಅಧಿಕಾರಿಗಳು ಹಲವಾರು ವರ್ಷಗಳವರೆಗೆ ಅವರ ಸಾವನ್ನು ರಹಸ್ಯವಾಗಿಟ್ಟಿದ್ದರು.

    ಅಮೆರಿಕ ಕಳೆದ ವರ್ಷ ತನ್ನ ಸೈನ್ಯವನ್ನು ಹಿಂತೆಗೆದುಕೊಂಡಿತು. ತಾಲಿಬಾನ್ ದೇಶಾದ್ಯಂತ ವ್ಯಾಪಿಸಿ, ಕಾಬೂಲ್ ಅನ್ನು ವಶಪಡಿಸಿಕೊಂಡು ಅಧಿಕಾರಕ್ಕೆ ಮರಳಿತು.

    Live Tv
    [brid partner=56869869 player=32851 video=960834 autoplay=true]

  • ಆಫ್ಘನ್‌ನಲ್ಲಿ ಭೂಕಂಪನ: ಸಾವಿನ ಸಂಖ್ಯೆ 1,150ಕ್ಕೆ ಏರಿಕೆ, 3 ಸಾವಿರ ಮನೆಗಳು ನಾಶ

    ಆಫ್ಘನ್‌ನಲ್ಲಿ ಭೂಕಂಪನ: ಸಾವಿನ ಸಂಖ್ಯೆ 1,150ಕ್ಕೆ ಏರಿಕೆ, 3 ಸಾವಿರ ಮನೆಗಳು ನಾಶ

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ಈಚೆಗಷ್ಟೇ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 1,150ಕ್ಕೆ ಏರಿಕೆಯಾಗಿದೆ. 6.1 ತೀವ್ರತೆಯ ಭೂಕಂಪದಿಂದಾಗಿ ಸಾವಿರಾರು ಮಂದಿ ಆಶ್ರಯ ಕಳೆದುಕೊಂಡಿದ್ದು ಸುಮಾರು 3,000 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. 1.18 ಲಕ್ಷ ಮಂದಿ ಮಕ್ಕಳು ಅಪಾಯಕ್ಕೆ ಸಿಲುಕಿದ್ದಾರೆ.

    ಮಾನವೀಯ ವ್ಯವಹಾರಗಳ ಸಮನ್ವಯಕ್ಕಾಗಿ ವಿಶ್ವಸಂಸ್ಥೆಯ ಕಚೇರಿಯು 770 ಸಾವುಗಳನ್ನು ಅಂದಾಜಿಸಿದೆ. ಆದರೆ ಯುನಿಸೆಫ್ ಅಫ್ಘಾನಿಸ್ತಾನ ಪ್ರತಿನಿಧಿಯು ಸಾವಿನ ಸಂಖ್ಯೆ 1,036 ಎಂದು ಅಂದಾಜಿಸಿದ್ದಾರೆ. ವಿಪತ್ತು ಸಚಿವಾಲಯದ ವಕ್ತಾರ ಮೊಹಮ್ಮದ್ ನಾಸಿಮ್ ಹಕ್ಕಾನಿ 2,000 ಮಂದಿ ಗಾಯಗೊಂಡಿದ್ದು ಸಾವಿರಾರು ಮನೆಗಳು ನಾಶವಾಗಿವೆ ಎಂದು ಆಫ್ಘನ್‌ನ ಸರ್ಕಾರಿ ಮಾಧ್ಯಮಗಳು ತಿಳಿಸಿವೆ.

    ಕಟ್ಟಡಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಗ್ರಾಮಸ್ಥರು ಕೈಯಿಂದಲೇ ಅವಶೇಷಗಳನ್ನು ಹೊರತೆಗೆಯುತ್ತಿದ್ದಾರೆ. ಪೂರ್ವ ಅಫ್ಘಾನಿಸ್ತಾನದ ಗಯಾನ್ ಜಿಲ್ಲೆಯಲ್ಲಿ ಕನಿಷ್ಠ 1,000 ಮನೆಗಳಿಗೆ ಹಾನಿಯಾಗಿದ್ದು, ಖೋಸ್ಟ್ ಪ್ರಾಂತ್ಯದ ಸ್ಪೆರೆ ಜಿಲ್ಲೆಯಲ್ಲಿ 800 ಮನೆಗಳು ನೆಲಸಮಗೊಂಡಿವೆ.

    ಜರ್ಮನಿ, ನಾರ್ವೆ ಸೇರಿದಂತೆ ಇತರ ದೇಶಗಳು ವಿಶ್ವಸಂಸ್ಥೆಯ ಮೂಲಕ ಅಫ್ಘಾನಿಸ್ತಾನಕ್ಕೆ ಸಹಾಯಹಸ್ತ ಚಾಚುವುದಾಗಿ ಘೋಷಿಸಿವೆ. ಈಗಾಗಲೇ ಆರ್ಥಿಕ ಬಿಕ್ಕಟ್ಟಿನಿಂದ ನಲುಗುತ್ತಿರುವ ಅಫ್ಫಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪವು ಲಕ್ಷಾಂತರ ಮಕ್ಕಳನ್ನು ಅಪೌಷ್ಟಿಕತೆಯ ಅಪಾಯಕ್ಕೆ ದೂಡಲಿದೆ ಎಂದು ಹೇಳಲಾಗುತ್ತಿದೆ.

    Live Tv

  • ಭೂಕಂಪದಿಂದ ತೊಂದರೆಗೆ ಸಿಲುಕಿರುವ ಆಫ್ಘನ್ನರಿಗೆ ನೆರವು – ಭಾರತಕ್ಕೆ ಧನ್ಯವಾದ ತಿಳಿಸಿದ ತಾಲಿಬಾನ್‌

    ಭೂಕಂಪದಿಂದ ತೊಂದರೆಗೆ ಸಿಲುಕಿರುವ ಆಫ್ಘನ್ನರಿಗೆ ನೆರವು – ಭಾರತಕ್ಕೆ ಧನ್ಯವಾದ ತಿಳಿಸಿದ ತಾಲಿಬಾನ್‌

    ಕಾಬೂಲ್‌: ಭೀಕರ ಭೂಕಂಪದಿಂದ ತತ್ತರಿಸಿರುವ ಅಫ್ಘಾನಿಸ್ತಾನದ ಜನತೆಗೆ ಭಾರತ ನೆರವಿನ ಹಸ್ತ ಚಾಚಿದೆ. ಭಾರತವು ಶುಕ್ರವಾರ ಎರಡನೇ ಬಾರಿಗೆ ಅಗತ್ಯ ವಸ್ತುಗಳನ್ನು ಅಫ್ಘಾನ್‌ ಸಂತ್ರಸ್ತರಿಗಾಗಿ ರವಾನಿಸಿದೆ.

    ಅಫ್ಘಾನಿಸ್ತಾನದ ಪೂರ್ವ ಭಾಗದಲ್ಲಿ ಭಾರಿ ಭೂಕಂಪ ಸಂಭವಿಸಿ 1,000ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದೆ. ಭೂಕಂಪದಿಂದಾಗಿ ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ನೆರವು ನೀಡಲು ಭಾರತ ಮುಂದಾಗಿದ್ದು, ಈಗಾಗಲೇ ತಂಡವೊಂದು ಕಾಬೂಲ್‌ ತಲುಪಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಈ ಕುರಿತು ಟ್ವೀಟ್‌ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಭೂಕಂಪ – 280 ಸಾವು, 250ಕ್ಕೂ ಹೆಚ್ಚು ಜನರಿಗೆ ಗಾಯ

    ರಿಡ್ಜ್ ಟೆಂಟ್‌ಗಳು, ಸ್ಲೀಪಿಂಗ್‌ ಬ್ಯಾಗ್ಸ್‌, ಹೊದಿಕೆಗಳು, ಸ್ಲೀಪಿಂಗ್‌ ಮ್ಯಾಟ್‌ ಸೇರಿದಂತೆ ಇತ್ಯಾದಿ ಅಗತ್ಯ ವಸ್ತುಗಳನ್ನು ಅಪ್ಘಾನ್‌ ಜನತೆಗೆ ನೆರವಿಗಾಗಿ ರವಾನಿಸಲಾಗಿದೆ. ಪರಿಹಾರ ಸರಕನ್ನು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (UNOCHA) ಮತ್ತು ಕಾಬೂಲ್‌ನಲ್ಲಿರುವ ಅಫ್ಘಾನ್ ರೆಡ್ ಕ್ರೆಸೆಂಟ್ ಸೊಸೈಟಿ (ARCS)ಗೆ ಹಸ್ತಾಂತರಿಸಲಾಗುವುದು.

    ಜೂನ್ 22, 2022 ರಂದು ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟರು, ಸಾವಿರಾರು ಮಂದಿ ತೊಂದರೆಗೆ ಸಿಲುಕಿದ್ದಾರೆ. ಸಂತ್ರಸ್ತರಿಗಾಗಿ ಭಾರತ ಸರ್ಕಾರವು ಎರಡು ವಿಮಾನಗಳಲ್ಲಿ 27 ಟನ್ ತುರ್ತು ಪರಿಹಾರ ರವಾನಿಸಿದೆ ಎಂದು ಎಂಇಎ ತಿಳಿಸಿದೆ. ಇದನ್ನೂ ಓದಿ: ಆಫ್ಘನ್‌ನಲ್ಲಿ ಭೂಕಂಪ – ಮೃತರ ಸಂಖ್ಯೆ 1,000ಕ್ಕೆ ಏರಿಕೆ; ಸಂತ್ರಸ್ತರಿಗೆ ನೆರವು ನೀಡ್ತೀವಿ ಎಂದ ತಾಲಿಬಾನ್‌

    ಅಫ್ಘಾನಿಸ್ತಾನಕ್ಕೆ ಮಾನವೀಯ ಸಹಾಯ ಒದಗಿಸಲು ತನ್ನ ತಾಂತ್ರಿಕ ತಂಡವನ್ನು ಕಳುಹಿಸಿದ ಭಾರತದ ನಿರ್ಧಾರವನ್ನು ತಾಲಿಬಾನ್ ಸ್ವಾಗತಿಸಿದೆ. ಸಂಕಷ್ಟಕ್ಕೆ ಸಿಲುಕಿರುವ ಆಫ್ಘನ್ನರ ರಕ್ಷಣೆಗೆ ರಾಜತಾಂತ್ರಿಕರು ಮತ್ತು ತಾಂತ್ರಿಕ ತಂಡವನ್ನು ಕಾಬೂಲ್‌ನಲ್ಲಿರುವ ರಾಯಭಾರಿ ಕಚೇರಿಗೆ ಕಳುಹಿಸಿರುವ ಭಾರತದ ನಿರ್ಧಾರ ಸ್ವಾಗತಾರ್ಹ ಎಂದು ತಾಲಿಬಾನ್‌ ವಕ್ತಾರ ಅಬ್ದುಲ್‌ ಕಹರ್‌ ಬಾಲ್ಚಿ ತಿಳಿಸಿದ್ದಾರೆ.

    Live Tv

  • ಆಫ್ಘನ್‌ನಲ್ಲಿ ಭೂಕಂಪ – ಮೃತರ ಸಂಖ್ಯೆ 1,000ಕ್ಕೆ ಏರಿಕೆ; ಸಂತ್ರಸ್ತರಿಗೆ ನೆರವು ನೀಡ್ತೀವಿ ಎಂದ ತಾಲಿಬಾನ್‌

    ಆಫ್ಘನ್‌ನಲ್ಲಿ ಭೂಕಂಪ – ಮೃತರ ಸಂಖ್ಯೆ 1,000ಕ್ಕೆ ಏರಿಕೆ; ಸಂತ್ರಸ್ತರಿಗೆ ನೆರವು ನೀಡ್ತೀವಿ ಎಂದ ತಾಲಿಬಾನ್‌

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ಬುಧವಾರ ತೀವ್ರ ಭೂಕಂಪ ಸಂಭವಿಸಿದ ನಂತರ ಮೃತರ ಸಂಖ್ಯೆ 1,000 ಕ್ಕೆ ಏರಿಕೆಯಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

    ದೇಶದ ಆಗ್ನೇಯ ಭಾಗದಲ್ಲಿರುವ ಖೋಸ್ಟ್ ನಗರದ ಬಳಿ ಇಂದು ಮುಂಜಾನೆ ತೀವ್ರ ಭೂಕಂಪ ಸಂಭವಿಸಿದೆ. ಖೋಸ್ಟ್ ಪ್ರಾಂತ್ಯದ ಸ್ಪೆರಾ ಜಿಲ್ಲೆ ಮತ್ತು ಪಕ್ಟಿಕಾ ಪ್ರಾಂತ್ಯದ ಬರ್ಮಲಾ, ಜಿರುಕ್, ನಾಕಾ ಮತ್ತು ಗಯಾನ್ ಜಿಲ್ಲೆಗಳು ಹೆಚ್ಚು ಹಾನಿಗೆ ಒಳಗಾಗಿವೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಭೂಕಂಪ – 280 ಸಾವು, 250ಕ್ಕೂ ಹೆಚ್ಚು ಜನರಿಗೆ ಗಾಯ

    ಭೂಕಂಪದಿಂದಾಗಿ 1,000 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 1,500 ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡಿದ್ದಾರೆ. ಅನೇಕ ಹಳ್ಳಿಗಳು ನಾಶವಾಗಿವೆ ಎಂದು ಪಕ್ಟಿಕಾ ಪ್ರಾಂತ್ಯದ ಸಂಸ್ಕೃತಿ ಮತ್ತು ಮಾಹಿತಿ ವಿಭಾಗದ ಮುಖ್ಯಸ್ಥ ಅಮೀನ್ ಹುಝೈಫಾ ಸ್ಪುಟ್ನಿಕ್ಗೆ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ಹೆಲಿಕಾಪ್ಟರ್‌ ಹಾಗೂ ರಕ್ಷಣಾ ತಂಡ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಮಾತನಾಡಿ, ಭೂಕಂಪದಿಂದ ಸಂತ್ರಸ್ತರಾಗಿರುವ ಜನರಿಗೆ ನೆರವು ನೀಡುವ ಕುರಿತು ಚರ್ಚಿಸಲು ಇಂದು ತುರ್ತು ಸಚಿವ ಸಂಪುಟ ಸಭೆ ನಡೆಸಲಾಯಿತು. ಭೂಕಂಪದಿಂದ ಹಾನಿಗೊಳಗಾದ ಜನರಿಗೆ ಸಹಾಯ ಮಾಡುವುದರ ಜೊತೆಗೆ, ಸಂಬಂಧಿತ ಸಂಸ್ಥೆಗಳು ರಕ್ಷಣಾ ತಂಡಗಳನ್ನು ಕಳುಹಿಸಲು ಕಾರ್ಯಪ್ರವೃತ್ತವಾಗಿವೆ ಎಂದು ತಿಳಿಸಿದ್ದಾರೆ.

    Live Tv