Tag: Taliban

  • ಬುರ್ಖಾ ಹಾಕಿಲ್ಲ ಅಂತ ಅಫ್ಘನ್ ವಿವಿ ಹೊರಗಡೆ ವಿದ್ಯಾರ್ಥಿನಿಯರ ಮೇಲೆ ತಾಲಿಬಾನ್ ದಾಳಿ

    ಬುರ್ಖಾ ಹಾಕಿಲ್ಲ ಅಂತ ಅಫ್ಘನ್ ವಿವಿ ಹೊರಗಡೆ ವಿದ್ಯಾರ್ಥಿನಿಯರ ಮೇಲೆ ತಾಲಿಬಾನ್ ದಾಳಿ

    ಕಾಬೂಲ್: ವಿದ್ಯಾರ್ಥಿನಿಯರು (Students) ಬುರ್ಖಾ (Burkha) ಧರಿಸಿಲ್ಲ ಅಂತ ಅಫ್ಘಾನಿಸ್ತಾನದ (Afghanistan) ವಿಶ್ವವಿದ್ಯಾಲಯಕ್ಕೆ (University) ಪ್ರವೇಶ ನೀಡದ ತಾಲಿಬಾನ್ (Taliban) ವಿರುದ್ಧ ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಈ ವೇಳೆ ತಾಲಿಬಾನ್ ಅಧಿಕಾರಿಯೊಬ್ಬರು ವಿದ್ಯಾರ್ಥಿನಿಯರಿಗೆ ಥಳಿಸಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

    ವರದಿಗಳ ಪ್ರಕಾರ ಈ ಘಟನೆ ಈಶಾನ್ಯ ಅಫ್ಘಾನಿಸ್ತಾನದ ಬಡಾಕ್ಷನ್ ವಿಶ್ವವಿದ್ಯಾಲಯದ ಗೇಟ್ ಹೊರಗಡೆ ಭಾನುವಾರ ನಡೆದಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ಹಲವು ವಿದ್ಯಾರ್ಥಿನಿಯರು ವಿವಿ ಪ್ರವೇಶಕ್ಕಾಗಿ ಗೇಟ್ ಹೊರಗಡೆ ಕಾದು ನಿಂತಿದ್ದಾರೆ. ಈ ವೇಳೆ ತಾಲಿಬಾನ್‌ನ ಸರ್ಕಾರಿ ಅಧಿಕಾರಿಯೊಬ್ಬರು ವಿದ್ಯಾರ್ಥಿಗಳನ್ನು ಸ್ಥಳದಿಂದ ಚದುರಿಸಲು ಚಾಟಿ ಬೀಸಿರುವುದು ಕಂಡುಬಂದಿದೆ. ಇದನ್ನೂ ಓದಿ: ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿಗೆ ಹನಿಟ್ರ್ಯಾಪ್ ಯತ್ನ!

    ಕಳೆದ ವರ್ಷ ಆಗಸ್ಟ್‌ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಅಲ್ಲಿನ ಮಹಿಳೆಯರ ಚಲನೆ, ವಾಕ್, ಅಭಿವ್ಯಕ್ತಿ, ಕೆಲಸದ ಅವಕಾಶಗಳು ಹಾಗೂ ಉಡುಪಿನ ಸ್ವಾತಂತ್ರ‍್ಯದ ಮೇಲೆ ತೀವ್ರ ನಿರ್ಬಂಧಗಳನ್ನು ಹಾಕಿದೆ. 6ನೇ ತರಗತಿಯಿಂದ ಹುಡುಗಿಯರು ಶಾಲೆಗೆ ಹೋಗುವುದನ್ನು ತಡೆಹಿಡಿಯಲಾಗಿದೆ. ಇದನ್ನೂ ಓದಿ: ವೈಫೈ ಪಾಸ್‍ವರ್ಡ್ ಹಂಚಿಕೊಳ್ಳದ್ದಕ್ಕೆ ನಡೆಯಿತು ಯುವಕನ ಭೀಕರ ಕೊಲೆ

    ತಾಲಿಬಾನ್ ಮಹಿಳೆಯರಿಗೆ ಸಾರ್ವಜನಿಕವಾಗಿ ಸರಿಯಾದ ಉಡುಪುಗಳನ್ನು ಧರಿಸಲು ಸೂಚಿಸಿದೆ. ನಿಖಾಬ್ (ಕಣ್ಣು ಹೊರತುಪಡಿಸಿ, ತಲೆ ಮತ್ತು ಮುಖವನ್ನು ಮುಚ್ಚುವ ಮುಸುಕು) ಅಥವಾ ಬುರ್ಖಾವನ್ನು ಮಹಿಳೆಯರು ಸಾರ್ವಜನಿಕ ಪ್ರದೇಶಗಳಲ್ಲಿ ಕಡ್ಡಾಯವಾಗಿ ಧರಿಸಬೇಕಿದೆ. ಆದರೆ ಈ ಆದೇಶದ ವಿರುದ್ಧ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿರುವುದಾಗಿ ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ದಲಿತ ಯುವಕನ ಮುಖಕ್ಕೆ ಮಸಿ ಬಳಿದು, ಕಂಬಕ್ಕೆ ಕಟ್ಟಿ ಥಳಿತ – ಇಬ್ಬರು ಅರೆಸ್ಟ್

    ದಲಿತ ಯುವಕನ ಮುಖಕ್ಕೆ ಮಸಿ ಬಳಿದು, ಕಂಬಕ್ಕೆ ಕಟ್ಟಿ ಥಳಿತ – ಇಬ್ಬರು ಅರೆಸ್ಟ್

    ಲಕ್ನೋ: ಕಳ್ಳತನ ಆರೋಪದ ಮೇಲೆ ದಲಿತ ಯುವಕನೊಬ್ಬನನ್ನು (Dalit Boy) ಥಳಿಸಿರುವ ಅಮಾನವೀಯ ಘಟನೆ ಉತ್ತರಪ್ರದೇಶದ (Uttar Pradesh) ಬ್ರಹ್ರೈಚ್‌ನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

    ಕಳ್ಳತನದ ಆರೋಪದ ಮೇಲೆ ದಲಿತ ಯುವಕನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಲಾಗಿದೆ. ಅಷ್ಟೇ ಅಲ್ಲದೇ ಮುಖಕ್ಕೆ ಮಸಿ ಬಳಿದು ಗ್ರಾಮದಲ್ಲಿ ಸುತ್ತಾಡಿಸಿದ್ದಾರೆ. ಅರ್ಧ ಮೀಸೆ ಕತ್ತರಿಸಿ ವೀಡಿಯೋ ಮಾಡಿದ್ದಾರೆ. ಸದ್ಯ ಈ ದೃಶ್ಯ ಜಾಲತಾಣದಲ್ಲಿ (Social Media) ಹರಿದಾಡುತ್ತಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: Made In India `ಅಗ್ನಿ ಪ್ರೈಮ್‌ʼ ಕ್ಷಿಪಣಿ ಪರೀಕ್ಷೆ ಯಶಸ್ವಿ- ದಾಳಿ ಸಾಮರ್ಥ್ಯ ಎಷ್ಟು?

    ಬಹ್ರೈಚ್‌ನ ಹಾರ್ಡಿ ಪೊಲೀಸ್ ಠಾಣಾ (Police Station) ವ್ಯಾಪ್ತಿಯ ಹಿಂದೂ ಸಿಂಗ್ ಗ್ರಾಮದ ಮಜ್ರಾ ಬರ್ಕತಾನ್‌ನಲ್ಲಿ ಘಟನೆ ನಡೆದಿದೆ. ದಲಿತ ಯುವಕನೊಬ್ಬ ಶಾಲೆಯ ಶೌಚಾಲಯದ ಸೀಟನ್ನು ಕದ್ದಿದ್ದು, ಕೆಲವರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇದನ್ನು ಕಂಡ ಸ್ಥಳೀಯರು ಸ್ಥಳದಲ್ಲೇ ಶಿಕ್ಷೆ ವಿಧಿಸಲು ಮುಂದಾಗಿ, ಮಾರಣಾಂತಿಂಕ ಹಲ್ಲೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ (FIR) ದಾಖಲಿಸಿ ಬಂಧಿಸಲಾಗಿದೆ ಎಂದು ಹೆಚ್ಚುವರಿ ಎಸ್ಪಿ ಅಶೋಕ್ ಕುಮಾರ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿವಾಹಿತನೊಂದಿಗೆ ಓಡಿ ಹೋಗಿದ್ದಕ್ಕೆ ಕಲ್ಲೆಸೆದು ಕೊಲ್ಲುವ ಶಿಕ್ಷೆ – ತಾನೇ ನೇಣಿಗೆ ಶರಣಾದ ಅಫ್ಘಾನ್ ಮಹಿಳೆ

    ವಿವಾಹಿತನೊಂದಿಗೆ ಓಡಿ ಹೋಗಿದ್ದಕ್ಕೆ ಕಲ್ಲೆಸೆದು ಕೊಲ್ಲುವ ಶಿಕ್ಷೆ – ತಾನೇ ನೇಣಿಗೆ ಶರಣಾದ ಅಫ್ಘಾನ್ ಮಹಿಳೆ

    ಕಾಬೂಲ್: ವಿವಾಹಿತ ವ್ಯಕ್ತಿಯೊಂದಿಗೆ ಮಹಿಳೆಯೊಬ್ಬಳು (Woman) ಓಡಿ ಹೋಗಿದ್ದಕ್ಕೆ ಅಫ್ಘಾನಿಸ್ತಾನದ (Afghanistan) ತಾಲಿಬಾನ್ (Taliban) ಸರ್ಕಾರ ಮಹಿಳೆಗೆ ಸಾರ್ವಜನಿಕವಾಗಿ ಕಲ್ಲು ಹೊಡೆದು ಕೊಲ್ಲುವ ಶಿಕ್ಷೆ ವಿಧಿಸಿತ್ತು. ಆದರೆ ಮಹಿಳೆ ಆ ಶಿಕ್ಷೆಯಿಂದ ಅವಮಾನವನ್ನು ಎದುರಿಸುವ ಬದಲು ತಾನೇ ನೇಣಿಗೆ ಶರಣಾಗಿದ್ದಾಳೆ.

    ಘಟನೆ ಅಫ್ಘಾನಿಸ್ತಾನದ ಘೋರ್ ಪ್ರಾಂತ್ಯದಲ್ಲಿ ನಡೆದಿದ್ದು, ಸ್ಥಳೀಯವಾಗಿ ಯಾವುದೇ ಮಹಿಳಾ ಕಾರಾಗೃಹ (Women’s Prison) ಇಲ್ಲ ಎಂಬ ಕಾರಣಕ್ಕೆ ವಿವಾಹಿತ ಪುರುಷನೊಂದಿಗೆ ಓಡಿ ಹೋಗಿದ್ದ ಮಹಿಳೆಗೆ ಸಾರ್ವಜನಿಕವಾಗಿ ಕಲ್ಲು ಹೊಡೆದು ಕೊಲ್ಲುವ ಶಿಕ್ಷೆಯನ್ನು ತಾಲಿಬಾನ್ ಸರ್ಕಾರ ವಿಧಿಸಿತ್ತು.

    ಮಹಿಳೆಯೊಂದಿಗೆ ಮನೆಯಿಂದ ಓಡಿ ಹೋಗಿದ್ದ ವಿವಾಹಿತ ವ್ಯಕ್ತಿಯನ್ನು ಕಳೆದ ಗುರುವಾರವೇ ಗಲ್ಲಿಗೇರಿಸಲಾಗಿತ್ತು. ಬಳಿಕ ಮಹಿಳೆಗೆ ಕಲ್ಲು ಹೊಡೆದು ಸಾಯಿಸುವ ಶಿಕ್ಷೆ ವಿಧಿಸಿದ್ದರಿಂದ ಆಕೆ ಅವಮಾನವನ್ನು ಎದುರಿಸಲು ಹಿಂದೇಟು ಹಾಕಿ, ತಾನೇ ತನ್ನ ಸ್ಕಾರ್ಫ್‌ನಿಂದ ಕುಣಿಕೆ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ನಾಯಿ ಸಾಕುವಂತಿಲ್ಲ – ಗಾಜಿಯಾಬಾದ್‌ನಲ್ಲಿ ಮೂರು ತಳಿಯ ನಾಯಿಗಳು ಬ್ಯಾನ್

    ಕಳೆದ ವರ್ಷ ಆಗಸ್ಟ್‌ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಅಲ್ಲಿ ಮಹಿಳೆಯರ ಸ್ವಾತಂತ್ರ್ಯ ಮೊಟಕುಗೊಳ್ಳುತ್ತಲೇ ಬಂದಿದೆ. ಹೆಣ್ಣು ಮಕ್ಕಳು 6ನೇ ತರಗತಿಯ ಬಳಿಕ ವಿದ್ಯಾಭ್ಯಾಸ ಮಾಡುವುದನ್ನು ನಿಷೇಧಿಸಿದೆ. ಮಹಿಳೆಯರು ಹಾಗೂ ಹುಡುಗಿಯರು ಶಿಕ್ಷಣ, ಕೆಲಸ, ಸಾರ್ವಜನಿಕವಾಗಿ ಭಾಗವಹಿಸುವಿಕೆ, ಆರೋಗ್ಯದ ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಇದನ್ನೂ ಓದಿ: ಕೊಹ್ಲಿ ಮ್ಯಾಜಿಕ್‌ ಫೀಲ್ಡಿಂಗ್‌, ಶಮಿ ಮಾರಕ ಬೌಲಿಂಗ್‌ – ಭಾರತಕ್ಕೆ 6 ರನ್‌ಗಳ ರೋಚಕ ಜಯ

    Live Tv
    [brid partner=56869869 player=32851 video=960834 autoplay=true]

  • ಕಾಬೂಲ್‌ ಶಿಕ್ಷಣ ಕೇಂದ್ರದಲ್ಲಿ ಬಾಂಬ್‌ ಸ್ಫೋಟ – 19 ಮಂದಿ ದುರ್ಮರಣ

    ಕಾಬೂಲ್‌ ಶಿಕ್ಷಣ ಕೇಂದ್ರದಲ್ಲಿ ಬಾಂಬ್‌ ಸ್ಫೋಟ – 19 ಮಂದಿ ದುರ್ಮರಣ

    ಕಾಬೂಲ್‌: ಅಫ್ಘಾನಿಸ್ತಾನದ (Afghanistan) ಕಾಬೂಲ್‌ನಲ್ಲಿ (Kabul) ಶುಕ್ರವಾರ ಬೆಳಗ್ಗೆ ಶಿಕ್ಷಣ ಕೇಂದ್ರವೊಂದರಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 19 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

    ಭಾರತೀಯ ಕಾಲಮಾನ ಬೆಳಗ್ಗೆ 7:30ಕ್ಕೆ ಕಾಜ್ ಶಿಕ್ಷಣ ಕೇಂದ್ರದಲ್ಲಿ ಸ್ಫೋಟ ಸಂಭವಿಸಿದೆ ಎಂದು ಕಾಬೂಲ್ ಪೊಲೀಸ್ ವಕ್ತಾರ ಖಾಲಿದ್ ಜದ್ರಾನ್ ತಿಳಿಸಿದ್ದಾರೆ. ಇದನ್ನೂ ಓದಿ: ನಿದ್ದೆಗೆ ಜಾರಿದ್ದ ವೇಳೆ ಮುಖದ ಮೇಲೆ ಮಲ ವಿಸರ್ಜಿಸಿದ ಶ್ವಾನ- ಮಹಿಳೆ ಆಸ್ಪತ್ರೆಗೆ ದಾಖಲು

    ದುರದೃಷ್ಟವಶಾತ್ ಸ್ಫೋಟವು ಮಾನವ ಸಾವು-ನೋವುಗಳಿಗೆ ಕಾರಣವಾಗಿದೆ. ಘಟನಾ ಸ್ಥಳಕ್ಕೆ ಭದ್ರತಾ ಪಡೆಗಳು ತೆರಳಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ ಎಂದು ಜದ್ರಾನ್‌ ಹೇಳಿದ್ದಾರೆ.

    ಹಜಾರಾ ನೆರೆಹೊರೆಯಲ್ಲಿರುವ ಕಾಜ್ ಶೈಕ್ಷಣಿಕ ಕೇಂದ್ರವನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬರ್‌, ವಿದ್ಯಾರ್ಥಿಗಳ ನಡುವೆ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎಂದು ಟ್ವಿಟರ್ ಪೋಸ್ಟ್‌ನಲ್ಲಿ ಎನ್‌ಜಿಒ ಆಫ್ಘನ್ ಪೀಸ್ ವಾಚ್ ತಿಳಿಸಿದೆ. ಇದನ್ನೂ ಓದಿ: ಹಿಜಬ್‌ ವಿರುದ್ಧ ಪ್ರತಿಭಟನೆ – ವೇದಿಕೆಯಲ್ಲೇ ಕೂದಲು ಕತ್ತರಿಸಿದ ಟರ್ಕಿ ಗಾಯಕಿ

    ಕಾಬೂಲ್‌ನ ವಜೀರ್ ಅಕ್ಬರ್ ಖಾನ್ ಪ್ರದೇಶದ ಬಳಿ ಸ್ಫೋಟ ಸಂಭವಿಸಿದ ಕೆಲವು ದಿನಗಳ ನಂತರ ಮತ್ತೊಂದು ಬಾಂಬ್‌ ಸ್ಫೋಟ ನಡೆದಿದೆ. ಕಾಬೂಲ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ಹೊರಗೆ ಇತ್ತೀಚೆಗೆ ನಡೆದ ಸ್ಫೋಟವನ್ನು ಜಾಗತಿಕ ಮಟ್ಟದಲ್ಲಿ ತೀವ್ರವಾಗಿ ಖಂಡಿಸಲಾಯಿತು.

    ಅಮೆರಿಕ ತನ್ನ ಸೈನ್ಯವನ್ನು ವಾಪಸ್‌ ಕರೆಸಿಕೊಂಡ ನಂತರ ಅಫ್ಘಾನಿಸ್ತಾನವನ್ನು ತಾಲಿಬಾನ್‌ (Taliban) ವಶಪಡಿಸಿಕೊಂಡಿತು. ಅಫ್ಘಾನ್‌ನಲ್ಲಿ ತಾಲಿಬಾನ್‌ ಆಡಳಿತವು ಒಂದು ವರ್ಷ ಪೂರೈಸಿದೆ. ಈ ಅವಧಿಯಲ್ಲಿ ದೇಶದಲ್ಲಿ ಸರಣಿ ಸ್ಫೋಟಗಳು ಸಂಭವಿಸುತ್ತಿವೆ.

    Live Tv
    [brid partner=56869869 player=32851 video=960834 autoplay=true]

  • ಅಪ್ಘಾನಿಸ್ತಾನದಲ್ಲಿ ಆನ್‌ಲೈನ್ ಶಾಪಿಂಗ್ ಸ್ಥಗಿತ

    ಅಪ್ಘಾನಿಸ್ತಾನದಲ್ಲಿ ಆನ್‌ಲೈನ್ ಶಾಪಿಂಗ್ ಸ್ಥಗಿತ

    ಕಾಬೂಲ್: ತಾಲಿಬಾನ್ ವಶಪಡಿಸಿಕೊಂಡ ಬಳಿಕ ಹಾಗೂ ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ನಲುಗುತ್ತಿರುವ ಅಫ್ಘಾನಿಸ್ತಾನದ ಬಹುತೇಕ ಎಲ್ಲಾ ಪ್ರಮುಖ ಆನ್‌ಲೈನ್ ಶಾಪಿಂಗ್ ಸೇವೆಗಳು ಸ್ಥಗಿತಗೊಂಡಿರುವುದಾಗಿ ವರದಿಯಾಗಿದೆ.

    ಇತ್ತೀಚೆಗೆ ಅಫ್ಘಾನಿಸ್ತಾನದ 2 ಅತಿ ದೊಡ್ಡ ಆನ್‌ಲೈನ್ ಶಾಪಿಂಗ್ ಸೇವೆಗಳಾದ Click.af ಮತ್ತು Baqal ದೇಶದ ಆರ್ಥಿಕ ಪ್ರಕ್ಷುಬ್ಧತೆಯ ಕಾರಣದಿಂದಾಗಿ ಮುಚ್ಚುವುದಾಗಿ ಘೋಷಿಸಿತ್ತು. ಇದೀಗ ಬಹುತೇಕ ಎಲ್ಲಾ ಆನ್‌ಲೈನ್ ಶಾಪಿಂಗ್ ಸೇವೆಗಳು ಸ್ಥಗಿತಗೊಂಡಿವೆ. ಇದನ್ನೂ ಓದಿ: ಸಿಧು ಹತ್ಯಾ ಪ್ರಕರಣ – ಉತ್ತರ ಭಾರತದಾದ್ಯಂತ 50 ಕಡೆಗಳಲ್ಲಿ ಎನ್‌ಐಎ ದಾಳಿ

    ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡಾಗಿನಿಂದ ಅಫ್ಘಾನಿಸ್ತಾನ ಈಗ 1 ವರ್ಷದಿಂದ ಸಂಪೂರ್ಣ ಪ್ರಕ್ಷುಬ್ಧ ಸ್ಥಿತಿಯಲ್ಲಿದೆ. ತಾಲಿಬಾನ್ ಲಿಂಗ ಆಧಾರಿತ ಹಿಂಸಾಚಾರವನ್ನು ಪರಿಹರಿಸಲು ವ್ಯವಸ್ಥೆಯನ್ನು ಕಿತ್ತುಹಾಕಿದ್ದು ಮಾತ್ರವಲ್ಲದೇ ಮಹಿಳೆಯರ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೊಸ ಅಡೆತಡೆಗಳನ್ನು ನಿರ್ಮಿಸಿತು. ಮಹಿಳಾ ಹಕ್ಕುಗಳ ಪ್ರತಿಭಟನಾಕಾರರ ಮೇಲೆ ದಾಳಿಯನ್ನೂ ಮಾಡಿತು. ಇದನ್ನೂ ಓದಿ: ಟ್ರಾಫಿಕ್‍ನಲ್ಲಿ ಸಿಲುಕಿದ್ದ ಕಾರನ್ನು ಅಲ್ಲೇ ಬಿಟ್ಟರು – 3 ಕಿ.ಮೀ ಓಡಿ ಶಸ್ತ್ರಚಿಕಿತ್ಸೆ ಮಾಡಿ ರೋಗಿಯ ಪ್ರಾಣ ಉಳಿಸಿದ ಡಾಕ್ಟರ್

    ಆನ್‌ಲೈನ್ ಶಾಪಿಂಗ್ ಅಪ್ಲಿಕೇಶನ್ ಆಗಿರುವ Click.af ಶನಿವಾರ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಸಂಸ್ಥೆ ತನ್ನ ಫೇಸ್‌ಬುಕ್ ಪುಟದಲ್ಲಿ ಹಣಕಾಸಿನ ಸಮಸ್ಯೆಗಳಿಂದ ಮುಚ್ಚಲಾಗಿದೆ ಎಂದು ಸಂದೇಶವನ್ನು ಪೋಸ್ಟ್ ಮಾಡಿದೆ.

    3 ವರ್ಷಗಳ ಹಳೆಯ Baqal ಕಂಪನಿ ಭಾನುವಾರ ಆರ್ಥಿಕ ತೊಂದರೆಗಳಿಂದಾಗಿ ಸೇವೆಗಳನ್ನು ಮುಚ್ಚುತ್ತಿರುವುದಾಗಿ ಘೋಷಿಸಿತು.

    Live Tv
    [brid partner=56869869 player=32851 video=960834 autoplay=true]

  • ತಾಲಿಬಾನ್ ತರಬೇತಿ ವೇಳೆ ಹೆಲಿಕಾಪ್ಟರ್ ಪತನ – ಮೂವರು ಸಾವು

    ತಾಲಿಬಾನ್ ತರಬೇತಿ ವೇಳೆ ಹೆಲಿಕಾಪ್ಟರ್ ಪತನ – ಮೂವರು ಸಾವು

    ಕಾಬೂಲ್: ಅಫ್ಘಾನಿಸ್ತಾನದ(Afghanistan) ರಾಜಧಾನಿ ಕಾಬೂಲ್‌ನಲ್ಲಿ ತಾಲಿಬಾನ್‌ನ(Taliban) ತರಬೇತಿಯ ವೇಳೆ ಅಮೆರಿಕದ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಪತನಗೊಂಡಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ಶನಿವಾರ ತಿಳಿಸಿದೆ.

    ತರಬೇತಿಗಾಗಿ ಬಂದಿದ್ದ ಅಮೆರಿಕದ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಐವರಿಗೆ ಗಾಯಗಳಾಗಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಎನಾಯ್ತುಲ್ಲಾ ಖೌರಜ್ಮಿ ಹೇಳಿದ್ದಾರೆ. ಇದನ್ನೂ ಓದಿ: ಸೆ.20ರಿಂದ ಭಾರತ-ಆಸಿಸ್ ಟಿ20 ಸರಣಿ – ಬುಮ್ರಾ ಮೇಲೆ ಬೆಂಕಿ ಕಣ್ಣು

    ಒಂದು ವರ್ಷದ ಹಿಂದೆ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ತಾಲಿಬಾನ್, ಅಮೆರಿಕದಿಂದ ನಿರ್ಮಿಸಲಾಗಿದ್ದ ಕೆಲವು ವಿಮಾನಗಳ ನಿಯಂತ್ರಣವನ್ನೂ ತೆಗೆದುಕೊಂಡಿತ್ತು. ಆದರೆ ಇದೀಗ ಅಫ್ಘಾನಿಸ್ತಾನದಲ್ಲಿ ಎಷ್ಟು ವಿಮಾನಗಳು ಕಾರ್ಯನಿರ್ವಹಿಸುತ್ತಿವೆ ಎಂಬುದು ಅಸ್ಪಷ್ಟವಾಗಿದೆ. ಇದನ್ನೂ ಓದಿ: ಬ್ರಿಟನ್ ರಾಣಿ ಎಲಿಜಬೆತ್ ನಿಧನ – ನಾಳೆ ಕರ್ನಾಟಕದಲ್ಲೂ ಶೋಕಾಚರಣೆ

    ಅಮೆರಿಕದ ಸೈನಿಕರು ವಾಪಸ್ ಆಗುವಾಗ ಅಫ್ಘಾನಿಸ್ತಾನದಲ್ಲಿದ್ದ ತಮ್ಮ ಮಿಲಿಟರಿ ಯಂತ್ರಾಂಶಗಳನ್ನು ಹಾನಿಗೊಳಿಸಿವೆ. ಯುಎಸ್ ಸೇನಾಪಡೆ ಹಿಂತಿರುಗಿದ ತಕ್ಷಣ ತಾಲಿಬಾನ್ ಆಫ್ಘಾನಿಸ್ತಾನವನ್ನು ವಶಕ್ಕೆ ಪಡೆಯಿತು. ಈ ಹಿನ್ನೆಲೆ ಅಫ್ಘಾನ್ ಪಡೆ ಕೆಲವು ಹೆಲಿಕಾಪ್ಟರ್‌ಗಳನ್ನು ಮಧ್ಯ ಏಷ್ಯಾ ರಾಷ್ಟ್ರಗಳಿಗೆ ಸ್ಥಳಾಂತರಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಕಾಬೂಲ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯಲ್ಲಿ ಭಾರೀ ಸ್ಫೋಟ- 20 ಸಾವು

    ಕಾಬೂಲ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯಲ್ಲಿ ಭಾರೀ ಸ್ಫೋಟ- 20 ಸಾವು

    ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ಬಳಿ ಸೋಮವಾರ ಭಾರೀ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ರಷ್ಯಾದ ಇಬ್ಬರು ರಾಜತಾಂತ್ರಿಕರು ಸೇರಿದಂತೆ 20 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ವರದಿಗಳ ಪ್ರಕಾರ, ಜನರು ವೀಸಾಕ್ಕಾಗಿ ರಾಯಭಾರ ಕಚೇರಿಯ ಹೊರಗಡೆ ಗೇಟ್ ಬಳಿ ನಿಂತಿದ್ದಾಗ ಸ್ಫೋಟ ಸಂಭವಿಸಿದೆ. ಈಗಾಗಲೇ 20 ಜನರು ಸಾವನ್ನಪ್ಪಿದ್ದು, ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಭಾರತದ ರಿಷಿಗೆ ಸೋಲು – ಬ್ರಿಟನ್ ಪ್ರಧಾನಿ ಗದ್ದುಗೆ ಏರಿದ ಲಿಜ್ ಟ್ರಸ್

    ಆತ್ಮಹತ್ಯಾ ಬಾಂಬರ್‌ನಿಂದಾಗಿ ಸ್ಫೋಟ ಸಂಭವಿಸಿದೆ. ದಾಳಿಗೂ ಮೊದಲೇ ಆತ್ಮಹತ್ಯಾ ಬಾಂಬರ್‌ನನ್ನು ತಾಲಿಬಾನ್ ಗಾರ್ಡ್‌ಗಳು ಗುರುತಿಸಿದ್ದರು. ಅವರು ಗುಂಡು ಹಾರಿಸುತ್ತಿದ್ದಂತೆಯೇ ಆತ್ಮಹತ್ಯಾ ಬಾಂಬರ್ ತನ್ನ ಬಳಿಯಿದ್ದ ಸ್ಫೋಟಕ ಸಾಧನವನ್ನು ಸಕ್ರಿಯಗೊಳಿಸಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ತೇಲುವ ಫ್ರೀಜರ್ ಸಹಾಯದಿಂದ 11 ದಿನ ಸಮುದ್ರದಲ್ಲೇ ಜೀವ ಉಳಿಸಿಕೊಂಡ

    ಕೇವಲ 2 ದಿನಗಳ ಹಿಂದೆಯಷ್ಟೇ ವಾಯುವ್ಯ ಅಫ್ಘಾನಿಸ್ತಾನದ ಮಸೀದಿಯೊಂದರಲ್ಲಿ ಸ್ಫೋಟ ಸಂಭವಿಸಿ 20 ಜನರು ಸಾವನ್ನಪ್ಪಿದ್ದರು. ಹೆರಾತ್ ನಗರದ ಗುಜರ್ಗಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ವೇಳೆ ಬಾಂಬ್ ದಾಳಿ ನಡೆದಿದ್ದಾಗಿ ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • 1 ವರ್ಷದ ಬಳಿಕ ಆಫ್ಘನ್‌ನಲ್ಲಿ ಚಿತ್ರಮಂದಿರಗಳು ಓಪನ್ – ಸಿನಿಮಾದಲ್ಲಿ ಮಹಿಳಾ ಪಾತ್ರಗಳಿಗೆ ತಾಲಿಬಾನ್ ನಿರ್ಬಂಧ

    1 ವರ್ಷದ ಬಳಿಕ ಆಫ್ಘನ್‌ನಲ್ಲಿ ಚಿತ್ರಮಂದಿರಗಳು ಓಪನ್ – ಸಿನಿಮಾದಲ್ಲಿ ಮಹಿಳಾ ಪಾತ್ರಗಳಿಗೆ ತಾಲಿಬಾನ್ ನಿರ್ಬಂಧ

    ಕಾಬೂಲ್: ತಾಲಿಬಾನ್ ಅಫ್ಘಾನಿಸ್ತಾನದ ಆಡಳಿತವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಒಂದು ವರ್ಷದ ನಂತರ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನಕ್ಕೆ ಗ್ರೀನ್‌ಸಿಗ್ನಲ್ ಕೊಟ್ಟಿದೆ. ಆದರೆ ಚಲನಚಿತ್ರಗಳಲ್ಲಿ ಮಹಿಳಾ ಕಲಾವಿದರ ಪಾತ್ರಗಳಿಗೆ ನಿರ್ಬಂಧ ವಿಧಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಒಂದು ವರ್ಷದ ನಂತರ ಆಫ್ಘನ್‌ನಲ್ಲಿ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ಸಿಕ್ಕಿರುವುದು ಸಿನಿಪ್ರಿಯರು, ಚಲನಚಿತ್ರ ನಿರ್ಮಾಪಕರು ಹಾಗೂ ನಿರ್ದೇಶಕರಲ್ಲಿ ಮಂದಹಾಸ ಮೂಡಿಸಿದೆ. ಇದೇ ವೇಳೆ ಮಹಿಳಾ ಹಕ್ಕುಗಳ ಉಲ್ಲಂಘನೆಯ ಬಗ್ಗೆ ತೀವ್ರ ಕಳವಳವೂ ವ್ಯಕ್ತವಾಗಿದೆ. ಈಗಾಗಲೇ 37 ಚಲನಚಿತ್ರಗಳು ಹಾಗೂ ಸಾಕ್ಷ್ಯಾಚಿತ್ರಗಳು ಪ್ರದರ್ಶನಕ್ಕೆ ಸಜ್ಜಾಗಿವೆ. ಆದರೆ ಇತ್ತೀಚಿಗೆ ನಿರ್ಮಿಸಲಾದ ಚಿತ್ರಗಳಲ್ಲಿ ಮಹಿಳಾ ನಟಿ ಅತಿಫಾ ಮೊಹಮ್ಮದಿ ಮಾತ್ರವೇ ಏಕೈಕ ಮಹಿಳಾ ಪಾತ್ರ ನಿರ್ವಹಿಸಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಭಾರತ-ಪಾಕ್ ಕ್ರಿಕೆಟ್ ಪಂದ್ಯ ವೀಕ್ಷಿಸಿದವರಿಗೆ 5 ಸಾವಿರ ರೂ. ದಂಡ – ಶ್ರೀನಗರ ಕಾಲೇಜು ಆದೇಶ

    ಚಿತ್ರ ನಿರ್ಮಾಣಕ್ಕೆ ಹಣ ನೀಡುವಂತೆ ಮನವಿ: ಚಿತ್ರಮಂದಿರ ತೆರೆಯಲು ಅನುಮತಿ ಸಿಕ್ಕಿರುವುದು ಚಲನಚಿತ್ರ ನಿರ್ಮಾಪಕರಲ್ಲಿ ಉತ್ಸಾಹ ತರಿಸಿದ್ದು, ನಿರ್ಮಿಸುವ ಚಲನಚಿತ್ರಗಳಿಗೆ ಹಣ ನೀಡುವಂತೆ ಮನವಿ ಮಾಡಿದ್ದಾರೆ. ನಮ್ಮ ಕೆಲಸವನ್ನು ಸಂತೋಷದಿಂದ ಮಾಡುತ್ತಿದ್ದೇವೆ. ನಮ್ಮ ಪಾಕೆಟ್ ಮನಿಯಿಂದ ಸಿನಿಮಾಕ್ಕೆ ಖರ್ಚು ಮಾಡಿದ್ದೇವೆ. ಹಾಗಾಗಿ ಚಿತ್ರ ನಿರ್ಮಾಣಕ್ಕೆ ಹಣ ನೀಡುವಂತೆ ಮನವಿ ಮಾಡಿರುವುದಾಗಿ ಕಲಾವಿದ ಫಯಾಜ್ ಇಫ್ತಿಕರ್ ಹೇಳಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಮುಖಂಡ ಝಹ್ರಾ ಮುರ್ತಝಾವಿ, ಸಿನಿಮಾ ಕ್ಷೇತ್ರದಲ್ಲಿ ಮಹಿಳೆಯರನ್ನು ನಿಷೇಧಿಸಬಾರದು. ಏಕೆಂದರೆ ಇದು ಮಹಿಳೆಯರ ಹಕ್ಕು. ಮಹಿಳೆಯರ ಉಪಸ್ಥಿತಿಯಿಲ್ಲದೇ ಚಲನಚಿತ್ರವು ಉತ್ತಮವಾಗಿ ಮೂಡಿಬರುತ್ತದೆ ಎಂದು ನನಗೆ ಅನ್ನಿಸುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಮೆರಿಕಾದ ಸಿಯಾಟಲ್‍ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂಭ್ರಮ

    ತಾಲಿಬಾನ್ ಕಳೆದ ತಿಂಗಳು ಮಹಿಳೆಯರು ಹಾಗೂ ಹುಡುಗಿಯರು ಅಗತ್ಯವಿಲ್ಲದೇ ಮನೆಯಿಂದ ಹೊರಗೆ ಬಾರದಂತೆ ಹಾಗೂ ಮುಖ ತೋರಿಸದಂತೆ ಆದೇಶಿಸಿತ್ತು. ಇದಕ್ಕೂ ಮುನ್ನ ಹೆಣ್ಣುಮಕ್ಕಳಿಗೆ ಮಾಧ್ಯಮಿಕ ಶಿಕ್ಷಣವನ್ನು ನಿಷೇಧಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಆಫ್ಘಾನ್‌ನಲ್ಲಿ ಆರಂಭಿಸಿರುವ ಅಭಿವೃದ್ಧಿ ಕಾರ್ಯಗಳನ್ನ ಭಾರತ ಪೂರ್ಣಗೊಳಿಸಬೇಕು – ಅಬ್ದುಲ್ ಕಹರ್ ಬಾಲ್ಕಿ

    ಆಫ್ಘಾನ್‌ನಲ್ಲಿ ಆರಂಭಿಸಿರುವ ಅಭಿವೃದ್ಧಿ ಕಾರ್ಯಗಳನ್ನ ಭಾರತ ಪೂರ್ಣಗೊಳಿಸಬೇಕು – ಅಬ್ದುಲ್ ಕಹರ್ ಬಾಲ್ಕಿ

    ನವದೆಹಲಿ: ಅಫ್ಘಾನಿಸ್ತಾನದಲ್ಲಿ ಭಾರತ ಆರಂಭಿಸಿರುವ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಬೇಕು ಎಂದು ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಕಹರ್ ಬಾಲ್ಕಿ ಒತ್ತಾಯಿಸಿದ್ದಾರೆ‌. ತಾಲಿಬಾನ್ ಸರ್ಕಾರಕ್ಕೆ ಒಂದು ವರ್ಷ ಪೂರ್ಣವಾದ ಹಿನ್ನಲೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆಯನ್ನು ಅವರು ನೀಡಿದ್ದಾರೆ.

    ಎರಡು ದೇಶಗಳ ನಡುವಿನ ರಾಜತಾಂತ್ರಿಕ ಮಿಷನ್ ಅನ್ನು ನವೀಕರಿಸಬೇಕು, ನಾವು ಮಾನವೀಯ ಅಂಶಗಳೊಂದಿಗೆ ಅಭಿವೃದ್ಧಿ ಮುಂದುವರಿಸುತ್ತೇವೆ, ಮೊದಲ ಹಂತವಾಗಿ ಭಾರತ ಆರಂಭಿಸಿದ ಕೆಲವು ಅಪೂರ್ಣ ಯೋಜನೆಗಳನ್ನು ಪೂರ್ಣಗೊಳಿಸುವುದು ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: Bigg Boss: ಮೂಡ್ ಇಲ್ಲ ಅಂದ್ರೆ ಮೂರು ದಿನ ಸ್ನಾನ ಮಾಡಲ್ಲ: ಸೋನು ಶ್ರೀನಿವಾಸ್ ಗೌಡ

    ಕಾಬೂಲ್‌ನಲ್ಲಿರುವ ಶಾಹಟೂತ್ ಅಣೆಕಟ್ಟು ಯೋಜನೆಯನ್ನು ಉಲ್ಲೇಖಿಸಿದ ಅವರು, ಭಾರತವು ಹಲವಾರು ವಿಭಿನ್ನ ಯೋಜನೆಗಳನ್ನು ಅಘ್ಫಾನಿಸ್ತಾನದಲ್ಲಿ ಆರಂಭಿಸಿದೆ, ಅವು ಅಪೂರ್ಣವಾಗಿವೆ ಅವುಗಳನ್ನು ಪೂರ್ಣಗೊಳಿಸದಿದ್ದರೆ ವ್ಯರ್ಥವಾಗುತ್ತದೆ ಹೀಗಾಗಿ ಆ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಲು ನಾವು ಅವರನ್ನು ಒತ್ತಾಯಿಸಿದ್ದೇವೆ ಅಬ್ದುಲ್ ಕಹರ್ ಬಾಲ್ಕಿ ಹೇಳಿದರು.

    ಪ್ರಮುಖ ರಸ್ತೆಗಳು, ಅಣೆಕಟ್ಟುಗಳು, ವಿದ್ಯುತ್ ಪ್ರಸರಣ ಮಾರ್ಗಗಳು, ಸಬ್‌ಸ್ಟೇಷನ್‌ಗಳು, ಶಾಲೆಗಳು, ಆಸ್ಪತ್ರೆಗಳು ಸೇರಿದಂತೆ ಅಫ್ಘಾನಿಸ್ತಾನಕ್ಕೆ ಭಾರತದ ಅಭಿವೃದ್ಧಿ ನೆರವು 20 ವರ್ಷಗಳಲ್ಲಿ 3 ಶತಕೋಟಿಗೂ ಡಾಲರ್‌ಗೂ ಹೆಚ್ಚು ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ ಅಘ್ಫಾನ್ ಮನವಿಗೆ ಇನ್ನು ಭಾರತ ಸ್ಪಂದಿಸಿಲ್ಲ. ಇದನ್ನೂ ಓದಿ: ತನ್ನ ಪತಿಯನ್ನು ಖುಷಿಯಾಗಿರಿಸಲು ಮೂವರು ಸುಂದರಿಯರನ್ನ ಕೆಲಸಕ್ಕೆ ನೇಮಿಸಿದ ಪತ್ನಿ!

    ಭಾರತವು ಇತ್ತೀಚೆಗೆ ಕಾಬೂಲ್‌ನಲ್ಲಿ ತನ್ನ ರಾಯಭಾರ ಕಚೇರಿಯನ್ನು ಪುನಃ ತೆರೆದಿದೆ, ಆಗಸ್ಟ್ 15, 2021 ರಂದು ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ಹಿನ್ನೆಲೆಯಲ್ಲಿ ಎಲ್ಲಾ ಸಿಬ್ಬಂದಿಯನ್ನು ಸ್ಥಳಾಂತರಿಸಲಾಯಿತು.ಸದ್ಯ ರಾಯಭಾರಿ ಕಚೇರಿಯ ಕಾರ್ಯ ಆರಂಭಿಸಿದ್ದು, ಭದ್ರತೆಗಾಗಿ ITBP ಯ ತುಕಡಿಯನ್ನು ಕಳುಹಿಸಲಾಗಿದೆ.

    Live Tv

    [brid partner=56869869 player=32851 video=960834 autoplay=true]

  • ಕಾಬೂಲ್‌ನಲ್ಲಿ ಬಾಂಬ್‌ ಸ್ಫೋಟ – 8 ಮಂದಿ ದುರ್ಮರಣ

    ಕಾಬೂಲ್‌ನಲ್ಲಿ ಬಾಂಬ್‌ ಸ್ಫೋಟ – 8 ಮಂದಿ ದುರ್ಮರಣ

    ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿಯಲ್ಲಿ ಅಲ್ಪಸಂಖ್ಯಾತ ಶಿಯಾ ಸಮುದಾಯದವರು ಹೆಚ್ಚಿರುವ ಪ್ರದೇಶದ ಮಸೀದಿ ಬಳಿ ಅಡಗಿಸಿಟ್ಟಿದ್ದ ಬಾಂಬ್‌ ಸ್ಫೋಟಗೊಂಡಿದ್ದು, 8 ಮಂದಿ ಸಾವಿಗೀಡಾಗಿರುವ ಘಟನೆ ನಡೆದಿದೆ. ದುರ್ಘಟನೆಯಲ್ಲಿ 18 ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್‌ ಅಧಿಕಾರಿ ತಿಳಿಸಿದ್ದಾರೆ.

    ಕಾಬೂಲ್ ಪೊಲೀಸ್ ಮುಖ್ಯಸ್ಥರಾಗಿ ತಾಲಿಬಾನ್ ನೇಮಿಸಿರುವ ವಕ್ತಾರ ಖಾಲಿದ್ ಜದ್ರಾನ್ ಪ್ರಕಾರ, ಪಶ್ಚಿಮ ಕಾಬೂಲ್‌ನಲ್ಲಿ ಸರ್-ಇ ಕರೇಜ್ ಪ್ರದೇಶದಲ್ಲಿ ಬಾಂಬ್‌ ಸ್ಫೋಟ ಸಂಭವಿಸಿದೆ. ಸ್ಥಳದಲ್ಲಿ ಇಬ್ಬರು ಮೃತಪಟ್ಟಿದ್ದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ಸೇರಿಸುವಷ್ಟರಲ್ಲಿ ಸಾವಿನ ಸಂಖ್ಯೆ ಏರಿತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚೀನಾದೊಂದಿಗಿನ ಉದ್ವಿಗ್ನದ ಮಧ್ಯೆ ತೈವಾನ್ ರಕ್ಷಣಾ ಅಧಿಕಾರಿ ಶವವಾಗಿ ಪತ್ತೆ

    ಶತ್ರುಗಳು ಪವಿತ್ರ ದಿನದಂದೇ ದಾಳಿ ನಡೆಸಿ ಅಮಾಯಕರನ್ನು ಕೊಂದಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಜದ್ರಾನ್‌ ಮಾಹಿತಿ ನೀಡಿದ್ದಾರೆ.

    ದಾಳಿ ಹೊಣೆಗಾರಿಕೆಯನ್ನು ಈವರೆಗೂ ಯಾರೂ ಹೊತ್ತಿಲ್ಲ. ಆದರೆ ಈ ಹಿಂದಿನ ದೊಡ್ಡ ಪ್ರಮಾಣದ ದಾಳಿಗಳಲ್ಲಿ ಅಫ್ಘಾನಿಸ್ತಾನದ ಅಲ್ಪಸಂಖ್ಯಾತ ಶಿಯಾ ಸಮುದಾಯದವರನ್ನು ಗುರಿಯಾಗಿಸಿಕೊಂಡಿರುವ ಇಸ್ಲಾಮಿಕ್ ಸ್ಟೇಟ್ ಗುಂಪಿನ ವಿರುದ್ಧ ಆರೋಪ ಕೇಳಿಬರುತ್ತಿದೆ. ಇದನ್ನೂ ಓದಿ: ಕಷ್ಟದ ದಿನಗಳು ಹತ್ತಿರದಲ್ಲೇ ಇದೆ: ಪಾಕಿಸ್ತಾನ ಹಣಕಾಸು ಸಚಿವ ಎಚ್ಚರಿಕೆ

    ಅಮೆರಿಕ ತನ್ನ ಸೇನೆಯನ್ನು ವಾಪಸ್‌ ಕರೆಸಿಕೊಂಡ ಮೇಲೆ ಅಪ್ಘಾನಿಸ್ತಾನದಲ್ಲಿ ತಾಲಿಬಾನ್‌ ಮತ್ತೆ ಅಧಿಕಾರ ಸ್ಥಾಪಿಸಿತು. ಇದಾದ ಬಳಿಕ ದೇಶಾದ್ಯಂತ ಮಸೀದಿಗಳು, ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಇಸ್ಲಾಮಿಕ್‌ ಸ್ಟೇಟ್‌ (ಐಎಸ್) ದಾಳಿ ನಡೆಸುತ್ತಿದೆ.‌

    2014 ರಿಂದ ಅಫ್ಘಾನಿಸ್ತಾನದಲ್ಲಿ ಕಾರ್ಯಪ್ರವೃತ್ತವಾಗಿರುವ ಐಎಸ್, ದೇಶದ ತಾಲಿಬಾನ್ ಆಡಳಿತಗಾರರನ್ನು ಎದುರುಹಾಕಿಕೊಂಡಿದೆ. ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ನಂತರ ತಾಲಿಬಾನ್ ದೇಶದ ಪೂರ್ವದಲ್ಲಿರುವ IS ಪ್ರಧಾನ ಕಚೇರಿ ಮೇಲೆ ದಾಳಿ ಕೂಡ ನಡೆಸಿತ್ತು.

    Live Tv
    [brid partner=56869869 player=32851 video=960834 autoplay=true]