ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾಲಿಬಾನ್ ಸಮಸ್ಯೆಯಿಂದಾಗಿ ಬೆಲೆ ಏರಿಕೆಯಾಗಿವೆ. ಅಲ್ಲದೇ ಕಚ್ಚಾ ತೈಲ ಬರುತ್ತಿಲ್ಲ. ಹೀಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಏರಿಕೆಯಾಗಿದೆ ಮತ್ತು ಗ್ಯಾಸ್ ದರ ಹೆಚ್ಚಳ ಯಾಕೆ ಆಗಿದೆ ಎಂದು ಮತದಾರರೇ ವಿಚಾರ ಮಾಡಿ ಮತ ಹಾಕುತ್ತಾರೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಒಳ್ಳೆಯ ಸಂಗತಿ: ಶೆಟ್ಟರ್
ಇದೇ ವೇಳೆ ಹುಬ್ಬಳ್ಳಿ ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಈ ಬಾರಿ ಮತ್ತೆ ನಾವೇ ಗೆಲ್ಲಲಿದ್ದೇವೆ. ಜನ ಅಭಿವೃದ್ಧಿ ನೋಡಿ ಮತ ಹಾಕುತ್ತಾರೆ. ಹೀಗಾಗಿ ನಾವು ಪಾಲಿಕೆ ಚುನಾವಣೆಯಲ್ಲಿ 55 ರಿಂದ 60 ಸೀಟು ಗೆಲ್ಲುತ್ತೇವೆ. ಈ ಬಾರಿ ಪಾಲಿಕೆಯಲ್ಲಿ ಮತ್ತೇ ಅಧಿಕಾರಕ್ಕೆ ಬರುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಕಾಬೂಲ್: ಅಫ್ಘಾನಿಸ್ತಾನವನ್ನು ತೊರೆದ ಅಮೆರಿಕ ಸೇನೆಯ ವಿರುದ್ಧ ತಾಲಿಬಾನ್ ಉಗ್ರರು ಈಗ ಸಿಟ್ಟಾಗಿದ್ದಾರೆ.
ಹೌದು. ಆಗಸ್ಟ್ 31 ರಂದು ಅಫ್ಘಾನಿಸ್ತಾನವನ್ನು ಅಮೆರಿಕದ ಯೋಧರು ತೊರೆದಾಗ ತಾಲಿಬಾನಿ ಉಗ್ರರು ಗಾಳಿಯಲ್ಲಿ ಗುಂಡು ಹೊಡೆದು, ರಸ್ತೆಯಲ್ಲಿ ಮೆರವಣಿಗೆ ನಡೆಸಿ ಸಂಭ್ರಮಿಸಿದ್ದರು. ಆದರೆ ಈಗ ಅಮೆರಿಕ ಸೇನೆ ವಿರುದ್ಧ ಸಿಟ್ಟಾಗಿದ್ದಾರೆ ಎಂದು ವರದಿಯಾಗಿದೆ.
ತಾಲಿಬಾನಿಗಳು ಅಮೆರಿಕದ ವಿರುದ್ಧ ಸಿಟ್ಟಾಗಲು ಕಾರಣವಿದೆ. ಅಮೆರಿಕದ ಸೈನಿಕರು ಕಾಬೂಲಿನಿಂದ ನಿರ್ಗಮಿಸುವ ಮೊದಲು ಅಫ್ಘಾನಿಸ್ತಾನದಲ್ಲಿದ್ದ ಮಿಲಿಟರಿ ವಿಮಾನಗಳು ಮತ್ತು ಹೆಲಿಕಾಪ್ಟರ್ ಗಳನ್ನು ನಿಷ್ಕ್ರಿಯಗೊಳಿಸಿದ್ದರು. ಈ ವಿಚಾರಕ್ಕೆ ತಾಲಿಬಾನಿ ಹೋರಾಟಗಾರರು ಸಿಟ್ಟಾಗಿದ್ದು,”ಅಮೆರಿಕ ವಿಶ್ವಾಸ ದ್ರೋಹ” ಮಾಡಿದೆ ಎಂದು ಹೇಳಿದ್ದಾರೆ.
ಅಲ್ ಜಜೀರಾ ಸುದ್ದಿ ಸಂಸ್ಥೆ ತಾಲಿಬಾನಿ ಹೋರಾಟಗಾರರ ಹೇಳಿಕೆಯನ್ನು ಆಧಾರಿಸಿ ವರದಿ ಮಾಡಿದೆ.”ವಿಮಾನಗಳು, ಹೆಲಿಕಾಪ್ಟರ್ ಗಳನ್ನು ಹಾಗೆಯೇ ಬಿಟ್ಟು ಹೋಗಿದ್ದರೆ ಮುಂದಿನ ದಿನಗಳಲ್ಲಿ ಅದು ನಮ್ಮ ಉಪಯೋಗಕ್ಕೆ ಬರುತ್ತಿತ್ತು. ಇದು ರಾಷ್ಟ್ರೀಯ ಆಸ್ತಿ ಆಗುತ್ತಿತ್ತು. ಆದರೆ ಕಾಬೂಲ್‍ನಿಂದ ನಿರ್ಗಮಿಸುವ ಮೊದಲು ಅಮೆರಿಕನ್ನರು ಮಿಲಿಟರಿ ಹೆಲಿಕಾಪ್ಟರ್ ಗಳು ಮತ್ತು ವಿಮಾನಗಳನ್ನು ನಿಷ್ಕ್ರಿಯಗೊಳಿಸಿ ದ್ರೋಹ ಮಾಡಿದ್ದಾರೆ. ಇದನ್ನು ರಿಪೇರಿ ಮಾಡಲು ಸಾಧ್ಯವಿಲ್ಲ” ಎಂದು ಸಿಟ್ಟು ಹೊರ ಹಾಕಿದ್ದಾರೆ.
ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಪ್ರತಿಕ್ರಿಯಿಸಿ, ತಮ್ಮ ತಾಂತ್ರಿಕ ತಂಡಗಳು ವಿಮಾನ ನಿಲ್ದಾಣವನ್ನು ದುರಸ್ತಿ ಮತ್ತು ಸ್ವಚ್ಛ ಮಾಡುತ್ತಿವೆ. ಸದ್ಯಕ್ಕೆ ಕೆಲ ದಿನಗಳ ಕಾಲ ಪ್ರದೇಶಕ್ಕೆ ಜನರು ತೆರಳಬಾರದು ಎಂದು ಹೇಳಿದ್ದಾನೆ. ಇದನ್ನೂ ಓದಿ: ಶುಕ್ರವಾರದ ನಮಾಜ್ ಬಳಿಕ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ
ನಿಷ್ಕ್ರಿಯಗೊಳಿಸಿದ್ದ ಅಮೆರಿಕ:
ಅಫ್ಘಾನಿಸ್ತಾನವನ್ನು ತೊರೆಯುವ ಮುನ್ನ ಮುನ್ನ ಅಮೆರಿಕ ಯೋಧರು ಹಲವು ಮಿಲಿಟರಿ ಉಪಕರಣಗಳನ್ನು ನಾಶ ಮಾಡಿ ತೆರಳಿದ್ದರು. ಈ ಮೂಲಕ ಅಫ್ಘಾನಿಸ್ತಾನದ ರಕ್ಷಣೆಗೆ ನೀಡಿದ್ದ ಉಪಕರಣಗಳು ಉಗ್ರರ ಕೈವಶವಾಗದಂತೆ ನೋಡಿಕೊಂಡಿತ್ತು.
ಕಾಬೂಲ್‍ನ ಹಮಿದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 73 ವಿಮಾನಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ವಿಮಾನದ ಕಾಕ್‍ಪಿಟ್ ಕಿಟಕಿಗಳನ್ನು ಧ್ವಂಸ ಮಾಡಲಾಗಿದೆ. ಟಯರ್ ಗಳಿಗೆ ಗುಂಡು ಹಾರಿಸಿ ಹಾಳು ಮಾಡಲಾಗಿದೆ. ಇದನ್ನೂ ಓದಿ:ಅಫ್ಘಾನ್‍ನಲ್ಲಿ ತಾಲಿಬಾನ್ ಸರ್ಕಾರ – ಹೇಗಿರಲಿದೆ ಆಡಳಿತ ವ್ಯವಸ್ಥೆ?
ಕಾಬೂಲ್ ವಿಮಾನ ನಿಲ್ದಾಣವನ್ನು ರಾಕೆಟ್, ಆರ್ಟಿಲರಿ ಹಾಗೂ ಮೊರ್ಟರ್ ದಾಳಿಯಿಂದ ರಕ್ಷಣೆ ಮಾಡಲು ಅಳವಡಿಸಲಾಗಿದ್ದ ಹೈಟೆಕ್ ರಾಕೆಟ್ ನಿರೋಧಕ ವ್ಯವಸ್ಥೆಯನ್ನೂ ನಿಷ್ಕ್ರಿಯಗೊಳಿಸಲಾಗಿದೆ. ಈ ವ್ಯವಸ್ಥೆಯೇ ಸೋಮವಾರ ಐಸಿಸ್ ನಡೆಸಿದ ಐದು ರಾಕೆಟ್‍ಗಳನ್ನು ಹಿಮ್ಮೆಟ್ಟಿಸಿತ್ತು.
ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದ ಅಮೆರಿಕದ ಕೇಂದ್ರ ಕಮಾಂಡ್ ಮುಖ್ಯಸ್ಥ ಜನರಲ್ ಕೆನ್ನೆಥ್ ಮೆಕ್‍ಕೆಂಜಿ, ಕಾಬೂಲ್ ವಿಮಾನ ನಿಲ್ದಾಣದಲ್ಲಿದ್ದ ವಿಮಾನಗಳು ಇನ್ನು ಮುಂದೆ ಹಾರುವುದಿಲ್ಲ. ಯಾರಿಂದಲೂ ಅವನ್ನು ಹಾರಿಸುವುದಕ್ಕೆ ಆಗುವುದಿಲ್ಲ ಎಂದು ಅವರು ತಿಳಿಸಿದ್ದರು.
ಅಮೆರಿಕ ಏನೆಲ್ಲ ಬಿಟ್ಟು ಹೋಗಿದೆ?
150 ಯುದ್ಧ ವಿಮಾನಗಳು, 45 ಯುಎಚ್60 ಬ್ಲಾಕ್‍ಹಾಕ್ ಕಾಪ್ಟರ್, 21 ಎ29 ಟರ್ಬೊಟ್ರೂಪ್ ಹೆಲಿಕಾಪ್ಟರ್, 4 ಸಿ130 ಸರಕು ಸಾಗಣೆ ವಿಮಾನಗಳು, 50 ಎಂಡಿ530 ಹೆಲಿಕಾಪ್ಟರ್‍ಗಳು, 30 ಇತರೆ ವಿಮಾನಗಳು, 22,174 ಮಿಲಿಟರಿ ವಾಹನಗಳು ಬಿಟ್ಟುಹೋಗಿದೆ. ಇದರ ಜೊತೆ 3,50,000 ರೈಫಲ್‍ಗಳು, 64,000 ಮಶೀನ್ ಗನ್‍ಗಳು, 25,000 ಗ್ರೆನೇಡ್‍ಗಳನ್ನು ಸೈನಿಕರು ಬಿಟ್ಟು ಹೋಗಿದ್ದಾರೆ.
ಮುಂಬೈ: ಬಾಲಿವುಡ್ ಹಿರಿಯ ನಟ ನಾಸಿರುದ್ದೀನ್ ಶಾ ತಾಲಿಬಾನ್ ವಿಚಾರದಲ್ಲಿ ಮುಸ್ಲಿಂರ ಅನಾಗರಿಕ ವರ್ತನೆಯಿಂದ ಬೇಸರಗೊಂಡಿದ್ದು, ದೇವರೆ ಬಂದರು ಜಗತ್ತನ್ನು ಗುರುತಿಸಲು ಸಾಧ್ಯವಾಗದಷ್ಟು ಬದಲಾಗಿದ್ದೀರಾ ಎಂದು ಬೇಸರಗೊಂಡು ಸೋಶಿಯಲ್ ಮೀಡಿಯಾದಲ್ಲಿ ವೀಡಿಯಾವನ್ನು ಟ್ವೀಟ್ ಮಾಡಿದ್ದಾರೆ.
ಅಫ್ಘಾನ್ ನಲ್ಲಿ ಮತ್ತೆ ತಾಲಿಬಾನ್ ಉಗ್ರರ ಸರ್ಕಾರ ಮರಳಿದೆ ಎಂಬ ಕಾರಣಕ್ಕೆ ಭಾರತದಲ್ಲಿರುವ ಕೆಲವು ಮುಸ್ಲಿಂ ಮಂದಿ ಖುಷಿಯಿಂದ ಅನಾಗರಿಕರಾಗಿ ವರ್ತಿಸುತ್ತಿದ್ದಾರೆ. ಇದರಿಂದ ಬೇಸರಕೊಂಡ ನಾಸಿರುದ್ದೀನ್ ಟ್ವಿಟ್ಟರ್ ನಲ್ಲಿ, ಅಫ್ಘಾನ್ ನಲ್ಲಿ ಮತ್ತೆ ತಾಲಿಬಾನ್‍ಗಳ ಉಗ್ರರಿಗೆ ಅಧಿಕಾರ ಸಿಕ್ಕಿರುವುದು ಇಡೀ ಜಗತ್ತು ದುಖಃ ಪಡುವಂತಹ ವಿಷಯವಾಗಿದೆ. ಆದರೆ ಇಲ್ಲಿ ಕೆಲವು ಭಾರತೀಯ ಮುಸ್ಲಿಮರು ಸಂತೋಷ ವ್ಯಕ್ತಪಡಿಸುತ್ತಿರುವುದು ಅವರ ಅನಾಗರೀಕತೆಯನ್ನು ತೋರಿಸುತ್ತೆ. ಒಂದು ವೇಳೆ ನಿಮ್ಮ ಈ ನಡವಳಿಕೆಯಿಂದ ದೇವರೇ ಬಂದರು ಜಗತ್ತನ್ನು ಗುರುತಿಸಲು ಸಾಧ್ಯವಾಗದಷ್ಟು ಬದಲಾಗಿದ್ದೀರಾ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇನ್ ಸ್ಟಾ ಫಾಲೋವರ್ಸ್ – ಯಾರಿಗೆ ಎಷ್ಟು ಮಂದಿ ಅಭಿಮಾನಿಗಳಿದ್ದಾರೆ?
ಕೆಲವು ಭಾರತೀಯ ಮುಸ್ಲಿಮರು ಈ ಕುರಿತು ಸಂಭ್ರಮವನ್ನು ಆಚರಿಸುತ್ತಿರುವಿರಲ್ಲ ನಿಮಗೆ ನಾಗರಿಕತೆ ಇದೆಯಾ ಎಂದು ಪ್ರಶ್ನೆಸಿದ್ದಾರೆ. ನಾವು ‘ಹಿಂದುಸ್ತಾನಿ ಇಸ್ಲಾಂ’ರು ಎಂದು ಕರೆದಿದ್ದು, ಈ ಆಚರಣೆ ನಮ್ಮ ಭಾರತದಲ್ಲಿ ಮಾತ್ರ ಸಾಧ್ಯ. ಇದನ್ನು ಪ್ರಪಂಚದ ಇತರ ಭಾಗಗಳಲ್ಲಿ ಆಚರಣೆ ಮಾಡುವುದಿಲ್ಲ. ಅವರ ಆಚರಣೆಗೂ ನಮಗು ತುಂಬಾ ವ್ಯತ್ಯಾಸವಿದೆ. ಭಾರತೀಯ ಇಸ್ಲಾಂ ಯಾವಾಗಲೂ ಪ್ರಪಂಚದಾದ್ಯಂತ ಇಸ್ಲಾಂ ಧರ್ಮಕ್ಕಿಂತ ಭಿನ್ನವಾಗಿದೆ ಎಂದು ಹೇಳಿ ಅದನ್ನು ಟ್ವೇಟ್ ಮಾಡಿದ್ದಾರೆ. ಇದನ್ನೂ ಓದಿ: ಮದುವೆ ಮನೆಗೆ ಹೋಗಿ ಪ್ರಾಣಕ್ಕೆ ಆಪತ್ತು ತಂದುಕೊಂಡ 100ಕ್ಕೂ ಹೆಚ್ಚು ಜನರು
ಕಾಬೂಲ್: ಶುಕ್ರವಾರದ ನಮಾಜ್ ಬಳಿಕ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆ ಮಾಡಲಿದ್ದಾರೆ ಎಂಬುದರ ಬಗ್ಗೆ ವರದಿಯಾಗಿದೆ. ಪ್ರಾರ್ಥನೆ ಬಳಿಕ ಸರ್ಕಾರ ರಚನೆಗೆ ಘೋಷಣೆ ಮಾಡುವ ಸಾಧ್ಯತೆಗಳಿವೆ.
ಆಗಸ್ಟ್ 15ರಂದು ರಾಜಧಾನಿ ಕಾಬೂಲ್ ಪ್ರವೇಶಿಸಿದ ತಾಲಿಬಾನಿಗಳು ಇಡೀ ದೇಶವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಇತ್ತ ಆಗಸ್ಟ್ 31ರಂದು ಅಮೆರಿಕ ಸೇನೆ ಹಿಂದಿರುಗುತ್ತಿದ್ದಂತೆ ಸ್ವಾತಂತ್ರ್ಯಯ ಆಚರಿಸಿದ್ದರು. ಇದೇ ವೇಳೆ ಜನರಿಗೆ ದೇಶ ತೊರೆಯದಂತೆ ಸಹ ಮನವಿ ಮಾಡಿಕೊಂಡಿದ್ದರು. ದೇಶದಲ್ಲಿ ಶಾಂತಿ ಕಾಪಾಡೋದರ ಜೊತೆ ಎಲ್ಲರಿಗೂ ಭದ್ರತೆ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಇದನ್ನೂ ಓದಿ: ಲೀಕ್ ಆಯ್ತು ಜೋ ಬೈಡನ್- ಅಶ್ರಫ್ ಘನಿ ಫೋನ್ ಸಂಭಾಷಣೆ
ಅಮೆರಿಕ ಸೇನೆ ಹಿಂದಿರುಗುತ್ತಿದ್ದಂತೆ ಕಾಬೂಲ್ ವಿಮಾನನಿಲ್ದಾಣದಿಂದ ನಡೆಯುತ್ತಿದ್ದ ಏರ್ ಲಿಫ್ಟ್ ಸ್ಥಗಿತಗೊಳಿಸಲಾಗಿದೆ. ಏರ್ ಲಿಫ್ಟ್ ನಿಂತಿದ್ರೂ ವಿಮಾನ ನಿಲ್ದಾಣದ ಇಕ್ಕೆಲ ರಸ್ತೆಗಳಲ್ಲಿ ಗಂಟುಮೂಟೆಗಳ ಜೊತೆ ದೇಶ ತೊರೆಯಲು ಕಾಯುತ್ತಿದ್ದಾರೆ. ಇತ್ತ ವಿದೇಶಿ ಪ್ರಜೆಗಳನ್ನು ಸುರಕ್ಷಿತವಾಗಿ ಅವರ ದೇಶಕ್ಕೆ ಕಳುಹಿಸಲಾಗುವುದು ಎಂದು ತಾಲಿಬಾನಿಗಳು ಹೇಳುತ್ತಿದ್ದಾರೆ. ಇದನ್ನೂ ಓದಿ:ಅಫ್ಘಾನ್‍ನಲ್ಲಿ ತಾಲಿಬಾನ್ ಸರ್ಕಾರ – ಹೇಗಿರಲಿದೆ ಆಡಳಿತ ವ್ಯವಸ್ಥೆ?
ಕಾಬೂಲ್: ಅಮೇರಿಕ ಸೇನೆ ಸಂಪೂರ್ಣ ಖಾಲಿ ಮಾಡಿದ್ದು ಇನ್ನೊಂದು ವಾರದಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಆಡಳಿತ ಆರಂಭವಾಗಲಿದೆ. ಸರ್ಕಾರ ರಚನೆಗೆ ತಾಲಿಬಾನ್ ಸಿದ್ದತೆ ಮಾಡಿಕೊಳ್ಳುತ್ತಿದ್ದು ಈ ಬಗ್ಗೆ ಹಿರಿಯ ನಾಯಕರು ರೂಪುರೇಷೆಗಳನ್ನು ಸಿದ್ದಪಡಿಸುತ್ತಿದ್ದಾರೆ.
ಅಫ್ಘಾನ್‍ನಲ್ಲಿ ಇರಾನ್ ಮಾದರಿ ಅಧ್ಯಕ್ಷೀಯ ಆಡಳಿತ ಜಾರಿ ಮಾಡುವ ಉದ್ದೇಶವನ್ನು ತಾಲಿಬಾನ್ ನಾಯಕರು ಹೊಂದಿದ್ದು, ದೇಶದ ರಾಜಕೀಯ ಮತ್ತು ಧಾರ್ಮಿಕ ನಿರ್ಧಾರಗಳಿಗೆ ಅಧ್ಯಕ್ಷರೇ ಸಾರ್ವಭೌಮರಾಗಲಿದ್ದಾರೆ ಎನ್ನಲಾಗಿದೆ. ಅಫ್ಘಾನ್ ಹೊಸ ಅಧ್ಯಕ್ಷರು ಕಂದಹಾರ್ ನಿಂದ ಕಾಬೂಲ್ ಆಡಳಿತವನ್ನು ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ತಾಲಿಬಾನ್ ಉಗ್ರರ ಹೊಸ ಸರ್ಕಾರದಲ್ಲಿ ನ್ಯಾಯಾಂಗ, ಆಂತರಿಕ ಭದ್ರತೆ, ರಕ್ಷಣಾ, ವಿದೇಶಾಂಗ ವ್ಯವಹಾರಗಳು, ಹಣಕಾಸು, ಮಾಹಿತಿ ಪ್ರಸಾರ ಸೇರಿ 26 ಇಲಾಖೆಯ ಕ್ಯಾಬಿನೆಟ್ ಇರಲಿದೆ. ಇದನ್ನು ನಿಭಾಯಿಸಲು ಪ್ರಧಾನಮಂತ್ರಿ ರೂಪದ ಹುದ್ದೆಯನ್ನು ಸೃಷ್ಟಿಸಲು ತಾಲಿಬಾನಿಗಳು ಚಿಂತಿಸಿದ್ದಾರಂತೆ.
ತಾಲಿಬಾನ್ ಸಂಘಟನೆಯ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂಡಜಾದ್ ಅಫ್ಘಾನಿಸ್ತಾನದ ನೂತನ ಅಧ್ಯಕ್ಷರಾಗುವ ಸಾಧ್ಯತೆ ಇದೆ. ಹಿಬತುಲ್ಲಾ ಅಖುಂಡಜಾದ್ ಆಪ್ತ ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಅಥವಾ ತಾಲಿಬಾನ್ ಮತ್ತೊರ್ವ ಮುಖಂಡ ಮುಲ್ಲಾ ಒಮರ್ ಪುತ್ರ ಮುಲ್ಲಾ ಯಾಕೂಬ್ ಪ್ರಧಾನಿಯಾಗುವ ಸಾಧ್ಯತೆ ಎನ್ನಲಾಗುತ್ತಿದೆ. ಕ್ಯಾಬಿನೆಟ್ ನಲ್ಲಿ ಶೇ.42 ರಷ್ಟಿರುವ ಪಶ್ತೂನ್‍ಗಳು ಸೇರಿ ಇತರೆ ಜಾತಿಗೂ ಅವಕಾಶ ಸಿಗಬಹುದು ಎಂದು ವರದಿಯಾಗಿದೆ.
ಇತರೆ ದೇಶಗಳೊಂದಿಗೆ ಸ್ನೇಹ ಸೌಹಾರ್ದತೆ ಕಾಪಾಡಿಕೊಳ್ಳಲು ದೃಷ್ಟಿಯಿಂದ ವಿದೇಶಾಂಗ ವ್ಯವಹಾರಗಳಿಗೆ ತಾಲಿಬಾನ್ ವಿಶೇಷ ಆದ್ಯತೆ ನೀಡಬಹುದು. ಈಗಾಗಲೇ ತಾಲಿಬಾನ್ ಮುಖಂಡರ ಜೊತೆಗೆ ಭಾರತ, ಇರಾನ್, ಕತಾರ್, ಪಾಕಿಸ್ತಾನ, ಚೀನಾ ಸೇರಿದಂತೆ ಹಲವು ದೇಶಗಳಿಂದ ಮಾತುಕತೆ ನಡೆಸುತ್ತಿವೆ. ಪಾಕಿಸ್ತಾನದಲ್ಲಿ ಮಾಜಿ ತಾಲಿಬಾನ್ ರಾಜತಾಂತ್ರಿಕ ಮುಹಮ್ಮದ್ ಜಹೀದ್ ಅಹ್ಮದ್ಜಾಯಿ ವಿದೇಶಾಂಗ ಸಚಿವರಾಗುವ ಸಾಧ್ಯತೆ ಇದ್ದು 72 ದೇಶಗಳಲ್ಲಿ ರಾಯಭಾರಿ ಕಚೇರಿ ತೆರೆಯಲು ತಾಲಿಬಾನ್ ಚಿಂತಿಸಿದೆ. ಇದನ್ನೂ ಓದಿ : ದೋಹಾದಲ್ಲಿ ಭಾರತ-ತಾಲಿಬಾನಿಗಳ ಮೊದಲ ಔಪಚಾರಿಕ ಮಾತುಕತೆ
ಅಬ್ದುಲ್ ಹಕೀಂ ಹಕ್ಕಾನಿ ಮುಖ್ಯ ನ್ಯಾಯಮೂರ್ತಿಯಾಗುವ ಸಾಧ್ಯತೆ ಇದೆ. ಭ್ರಷ್ಟಾಚಾರ, ಅಪರಾಧ ಕೃತ್ಯಗಳು ನಿಭಾಯಿಸಲು ಸ್ಥಳೀಯ ಮಟ್ಟದ ನ್ಯಾಯಲಯ ಸ್ಥಾಪನೆ ಮಾಡಲಿದ್ದು, ಸ್ಥಳೀಯ ಕೋರ್ಟ್‍ಗಳ ಮೂಲಕ ನ್ಯಾಯದಾನ ಮಾಡಲು ತಾಲಿಬಾನ್ ನಿರ್ಧಾರ ಮಾಡಿದೆಯಂತೆ.
ರಾಷ್ಟ್ರೀಯ ಧ್ವಜ ಮತ್ತು ಸಂವಿಧಾನದ ಬಗ್ಗೆ ಇನ್ನು ತಾಲಿಬಾನಿಗಳು ಒಮ್ಮತಕ್ಕೆ ಬಂದಿಲ್ಲ. ಹಳೆ ಸಂವಿಧಾನ ಅಥವಾ ರಾಷ್ಟ್ರ ಧ್ವಜ ಮುಂದುವರಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದ್ದು ಹೊಸ ಧ್ವಜ ಮತ್ತು ಸಂವಿಧಾನದ ಬಗ್ಗೆ ನೂತನ ಕ್ಯಾಬಿನೆಟ್‍ನಿಂದಲೇ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಾಲಿಬಾನ್ ವಕ್ತಾರರು ಹೇಳಿದ್ದಾರೆ. ಇದನ್ನೂ ಓದಿ : ಕಾಬೂಲ್ ತೊರೆಯುವ ಮುನ್ನ 73 ಏರ್ಕ್ರಾಫ್ಟ್ ನಿಷ್ಕ್ರಿಯಗೊಳಿಸಿದ ಅಮೆರಿಕ ಸೈನಿಕರು
ಅಫ್ಘಾನ್‍ನಲ್ಲಿ ಮಹಿಳೆಯರಿಗೂ ಸ್ಥಾನಮಾನ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಮಹಿಳೆಯರ ಹಕ್ಕುಗಳ ಬಗ್ಗೆ ತಾಲಿಬಾನ್ ಚಿಂತನೆ ಮಾಡಿದೆ. ಮಹಿಳೆಯರ ಹಕ್ಕುಗಳ ವಿಚಾರದಿಂದ ಜಾಗತಿಕ ಮಟ್ಟದಲ್ಲಿ ವಿರೋಧ ವ್ಯಕ್ತವಾಗುವ ಹಿನ್ನಲೆಯಲ್ಲಿ ಶಿಕ್ಷಣ ಉದ್ಯೋಗಗಳಲ್ಲಿ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಷರಿಯತ್ ಕಾನೂನು ಅಡಿಯಲ್ಲಿ ಮಹಿಳೆಯರಿಗೆ ಅವಕಾಶಕ್ಕೆ ಚಿಂತನೆ ನಡೆದಿದ್ದು ಈ ಮೂಲಕ ತಾಲಿಬಾನ್ ಬದಲಾಗಿದೆ ಎಂದು ಸಾಬೀತುಪಡಿಸುವ ಪ್ರಯತ್ನವೂ ನಡೆಯಲಿದೆ ಎನ್ನಲಾಗುತ್ತಿದೆ.
ಕಾಬೂಲ್: ತಾಲಿಬಾನ್ ಉಗ್ರರು ಹೆಲಿಕಾಪ್ಟರ್ ಗೆ ಮೃತ ದೇಹವನ್ನು ನೇತು ಹಾಕಿ ಹಾರಿಸುವ ಮೂಲಕ ವಿಕೃತ ಸುಖ ಪಡೆದಿದ್ದಾರೆ.
ಅಮೆರಿಕ ಸೇನೆ ವಾಪಸ್ ಹೋದ ನಂತರ ತಾಲಿಬಾನ್ ಉಗ್ರರು ಮತ್ತೆ ಚಿಗುರಿಕೊಂಡಿದ್ದಾರೆ. ಈ ಉಗ್ರರು ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಗೆ ಮೃತ ದೇಹವನ್ನು ನೇತು ಹಾಕಿ ಅದನ್ನು ಹಾರಾಟ ಮಾಡುತ್ತಿರುವ ದೃಶ್ಯ ಸೆರೆಯಾಗಿದ್ದು, ನೋಡುಗರಿಗೆ ಮೈ ನಡುಕ ಹುಟ್ಟಿಸುವಂತಿದೆ.ಇದನ್ನೂ ಓದಿ:ದೋಹಾದಲ್ಲಿ ಭಾರತ-ತಾಲಿಬಾನಿಗಳ ಮೊದಲ ಔಪಚಾರಿಕ ಮಾತುಕತೆ
If this is what it looks like… the Taliban hanging somebody from an American Blackhawk… I could vomit. Joe Biden is responsible.
ಈ ವೀಡಿಯೋವನ್ನು ಟ್ವೀಟ್ ಮಾಡಿದ ಅವರು, ಅಮೆರಿಕದ ಬ್ಲ್ಯಾಕ್ ಹಾಕ್ ನಿಂದ ತಾಲಿಬಾನ್‍ಗಳು ಯಾರನ್ನೋ ನೇಣು ಹಾಕಿದ್ದಾರೆ. ಇದನ್ನು ನೋಡಿದರೆ ನನಗೆ ವಾಂತಿ ಬರುತ್ತೆ. ಇದಕ್ಕೆಲ್ಲ ಜೋ ಬೈಡನ್ ಜವಾಬ್ದಾರರು ಎಂದು ಬರೆದಿದ್ದಾರೆ.ಇದನ್ನೂ ಓದಿ:ಕಾರು ಅಪಘಾತಕ್ಕೂ ಮುನ್ನ ಮದ್ಯ ಖರೀದಿಸಿದ್ದ ಇಷಿತಾ, ಬಿಂದು
ಇಸ್ಲಾಮಾಬಾದ್: ಉಗ್ರರ ಆಡಳಿತವನ್ನು ನೋಡಿ ಜನರು ಅಫ್ಘಾನಿಸ್ತಾನ ತೊರೆಯುತ್ತಿದ್ದರೆ ಇತ್ತ ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ತಾಲಿಬಾನ್ ಪರ ಹೇಳಿಕೆ ನೀಡಿ ಈಗ ಫುಲ್ ಟ್ರೋಲ್ ಆಗುತ್ತಿದ್ದಾರೆ.
ಶಾಹಿದ್ ಅಫ್ರಿದಿ ಅವರು, ತಾಲಿಬಾನಿಗಳು ಅತ್ಯಂತ ಧನಾತ್ಮಕ ಮನಸ್ಸಿನಿಂದ ಬಂದಿದ್ದಾರೆ ಎಂದು ಹೇಳಿ ಉಗ್ರರನ್ನು ಹೊಗಳಿದ್ದಾರೆ.
❝Taliban have come with a very positive mind. They're allowing ladies to work. And I believe Taliban like cricket a lot❞ Shahid Afridi. He should be Taliban's next PM. pic.twitter.com/OTV8zDw1yu
ಪಾಕಿಸ್ತಾನದ ಪತ್ರಕರ್ತೆ ನೈಲಾ ಇನಾಯತ್ ಅವರು ಶಾಹಿದ್ ಅಫ್ರಿದಿ ಅವರು ಮಾಧ್ಯಮಗಳ ಜೊತೆ ಮಾತನಾಡಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ತಾಲಿಬಾನಿಗಳು ಧನಾತ್ಮಕ ಮನಸ್ಸಿನಿಂದ ಬಂದಿದ್ದಾರೆ. ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಮಹಿಳೆಯರಿಗೆ ಅವಕಾಶ ನೀಡುತ್ತಿದ್ದಾರೆ ಎಂದು ಅಫ್ರಿದಿ ಹೇಳಿದ್ದಾರೆ. ಇದನ್ನೂ ಓದಿ : ಇನ್ಮೇಲಿಂದ ಅಫ್ರಿದಿಗೂ ನನಗೂ ಸಂಬಂಧವಿಲ್ಲ, ಅವನು ಮಿತಿ ಮೀರಿದ್ದಾನೆ: ಭಜ್ಜಿ ಗರಂ
Meet Taliban lover -Shahid Afridi who openly supports Taliban A dreaded terror org which is completely against humanity & freedom of women.He is no less than a radicalised Jihadi !
It’s a reflection of radicalisation level & affinity towards terrorism in Pakistani society ! pic.twitter.com/W3dfyW1wiy
ಅಫ್ರಿದಿ ತಾಲಿಬಾನಿಗಳ ಪರ ಬ್ಯಾಟಿಂಗ್ ಮಾಡಿದ್ದಕ್ಕೆ ಜನ ಈಗ ಟೀಕಿಸಿ ವ್ಯಂಗ್ಯವಾಡುತ್ತಿದ್ದಾರೆ. “ತಾಲಿಬಾನಿಗಳ ಮುಂದಿನ ಪ್ರಧಾನಿ ಅಫ್ರಿದಿ”, “ಪಾಕಿಸ್ತಾನ ಉಗ್ರರ ಸ್ವರ್ಗ ಎನ್ನುವುದಕ್ಕೆ ಇಲ್ಲಿದೆ ಉತ್ತಮ ಉದಾಹರಣೆ” ಎಂದು ಜನ ಸಾಮಾಜಿಕ ಜಾಲತಾಣದಲ್ಲಿ ಬರೆದು ಟ್ರೋಲ್ ಮಾಡುತ್ತಿದ್ದಾರೆ.
ಶಾಹಿದ್ ಅಫ್ರಿದಿ ಈ ಕುರಿತು ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದ ಹಳೆಯ ವಿಡಿಯೋ ಹಿಂದೆ ವೈರಲ್ ಆಗಿತ್ತು. ಟಿವಿ ವಾಹಿನಿಯ ನಿರೂಪಕಿ ಸಂದರ್ಶನವೊಂದರಲ್ಲಿ ನೀವು ಎಷ್ಟು ಬಾರಿ ಟಿವಿ ಒಡೆದಿದ್ದೀರಿ ಎಂದು ಪ್ರಶ್ನಿಸಿದ್ದರು. ಇದಕ್ಕೆ ಅಫ್ರಿದಿ, ನಾನು ಒಂದು ಬಾರಿ ಟಿವಿಯನ್ನು ಒಡೆದಿದ್ದೇನೆ ಎಂದು ಉತ್ತರಿಸಿದ್ದರು.
Shahid Afridi, a cricketer with a cult following in Pakistan bragging about how he broke his TV because his wife was watching an Indian TV serial and trying to do Arati. Watch the anchor cackle like a hyena and see the audience applaud. This is Pakistan! https://t.co/qBxmik3mJg
ನನ್ನ ಪತ್ನಿಯ ಕಾರಣದಿಂದಾಗಿ ಒಂದು ಬಾರಿ ಟಿವಿ ಒಡೆದಿದ್ದೇನೆ. ಭಾರತೀಯ ವಾಹಿನಿಯೊಂದರ ಡ್ರಾಮಾ ಶೋ ತುಂಬಾ ಜನಪ್ರಿಯವಾಗಿತ್ತು. ಈ ಶೋವನ್ನು ನನ್ನ ಪತ್ನಿ ನೋಡುತ್ತಿದ್ದಳು, ಆಗ ನೀನೊಬ್ಬಳೆ ನೋಡು ಮಕ್ಕಳು ಇದನ್ನು ನೋಡಲು ಬಿಡಬೇಡ ಎಂದು ಹೇಳಿದ್ದೆ. ಒಂದು ಬಾರಿ ನಾನು ರೂಮಿನಿಂದ ಹೊರಗಡೆ ಬಂದಾಗ ನನ್ನ ಮಕ್ಕಳಲ್ಲಿ ಒಬ್ಬಳು ಟಿವಿ ಶೋ ನೋಡಿಕೊಂಡು ಆರತಿ ಮಾಡುವುದನ್ನು ಅನುಕರಣೆ ಮಾಡುತ್ತಿದ್ದಳು. ಇದನ್ನು ಕಂಡ ತಕ್ಷಣ ಕೋಪ ಬಂತು ಹೀಗಾಗಿ ಟಿವಿಯನ್ನೇ ಒಡೆದು ಹಾಕಿದ್ದೆ ಎಂದು ಹೇಳಿದ್ದರು.
ಕಾಬೂಲ್: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡರೂ ಪಂಜ್‍ಶೀರ್ ಕಣಿವೆಯನ್ನು ತಾಲಿಬಾನ್ ಇನ್ನೂ ವಶಪಡಿಸಿಕೊಂಡಿಲ್ಲ. ಈಗ ಈ ಕಣಿವೆಯನ್ನು ಕುತಂತ್ರದ ಮೂಲಕ ವಶಪಡಿಸಿಕೊಳ್ಳಲು ತಾಲಿಬಾನ್ ಉಗ್ರರು ಮುಂದಾಗಿದ್ದಾರೆ.
ಹೌದು. ಪಂಜ್‍ಶೀರ್ ಪ್ರಾಂತ್ಯದಲ್ಲಿ ತಾಲಿಬಾನ್ ಈಗ ಇಂಟರ್ನೆಟ್, ದೂರವಾಣಿ ಸಂಪರ್ಕವನ್ನೇ ಕಡಿತಗೊಳಿಸಿದೆ. ಈ ಮೂಲಕ ಅಲ್ಲಿನ ಸಂವಹನ ವ್ಯವಸ್ಥೆಯನ್ನು ಸಂಪೂರ್ಣ ಬಂದ್ ಮಾಡಿದೆ.
ಪಂಜ್‍ಶೀರ್ ಅಫ್ಘಾನಿಸ್ತಾನ ಪ್ರಾಂತ್ಯವಾಗಿದ್ದರೂ ಹಲವಾರು ತಾಲಿಬಾನ್ ವಿರೋಧಿಗಳು ಪಂಜ್‌ಶೀರ್‌ನಲ್ಲಿ ಜಮಾಯಿಸಿದ್ದಾರೆ. ಅಫ್ಘಾನ್ ಬಂಡುಕೋರ ಕಮಾಂಡರ್ ಅಹ್ಮದ್ ಶಾ ಮಸೂದ್ ಅವರ ಪುತ್ರ ಅಹ್ಮದ್ ಮಸೂದ್, ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಇಲ್ಲಿ ನೆಲೆಸಿದ್ದಾರೆ.
ಅಹ್ಮದ್ ಮಸೂದ್ ಅವರ ವಕ್ತಾರ ಫಾಹೀಮ್ ದಷ್ಟಿ ಅವರು ಆಗಸ್ಟ್ 28ರ ಸಂಜೆಯಿಂದ ಪಂಜ್‍ಶೀರ್ ಪ್ರಾಂತ್ಯದಲ್ಲಿ ಟೆಲಿಕಾಂ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಮೊಬೈಲ್ ಇಂಟರ್ನೆಟ್ ಅಲ್ಲದೇ ಕರೆ, ಸಂದೇಶ ಸೇವೆಗಳನ್ನು ಸಹ ಕಡಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತಾಲಿಬಾನಿಗಳ ಹೊಸ ಆದೇಶ- ಹುಡುಗ, ಹುಡುಗಿ ಜೊತೆಯಾಗಿ ಓದುವಂತಿಲ್ಲ
ಸಂವಹನ ವ್ಯವಸ್ಥೆಯನ್ನು ಬಂದ್ ಮಾಡಿದರೆ ವಿದೇಶಗಳಿಗೆ ಸುದ್ದಿ ಹೋಗುವುದನ್ನು ತಡೆಯಬಹುದು ಮತ್ತು ಈ ಪ್ರಾಂತ್ಯದ ಮೇಲೆ ದಾಳಿ ಮಾಡುವುದು ಸುಲಭ ಎಂಬ ಲೆಕ್ಕಾಚಾರವನ್ನು ಹಾಕಿದ ತಾಲಿಬಾನ್ ಈಗ ಇಂಟರ್ನೆಟ್ ಸೇವೆಯನ್ನೇ ಬಂದ್ ಮಾಡಿದೆ. ಇದನ್ನೂ ಓದಿ: ತಾಲಿಬಾನಿಗಳ ಮೇಲೆ ಗುಂಡಿನ ಮಳೆ – ನಾರ್ಥರ್ನ್ ಅಲಯನ್ಸ್‌ಗೆ ತಜಕಿಸ್ತಾನ ಬೆಂಬಲ
ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಅವರು ಟ್ವಿಟ್ಟರ್ ನಲ್ಲಿ ತಾಲಿಬಾನಿ ಉಗ್ರರ ಆಡಳಿತದ ವಿರುದ್ಧ ಕಠಿಣ ಅಭಿಪ್ರಾಯವನ್ನು ವ್ಯಕ್ತಪಡಿಸಿ ಜಗತ್ತಿಗೆ ತಿಳಿಸುತ್ತಿದ್ದರು. ಇದರಿಂದಾಗಿ ತಾಲಿಬಾನ್ ಕುಕೃತ್ಯ ಜಗತ್ತಿಗೆ ತಿಳಿಯುತ್ತಿತ್ತು.
ಈ ಹಿಂದೆ ಆಗಸ್ಟ್ 23 ರಂದು ಈ ಕಣಿವೆಯನ್ನು ವಶಪಡಿಸಿಕೊಳ್ಳಲು 3 ಸಾವಿರ ತಾಲಿಬಾನ್ ಹೋರಾಟಗಾರರನ್ನು ಪಂಜಶೀರ್ ಗಡಿಗೆ ಕಳುಹಿಸಿತ್ತು. ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಒತ್ತಡದಿಂದಾಗಿ, ತಾಲಿಬಾನ್ ಹೋರಾಟಗಾರರು ಇನ್ನೂ ಪಂಜಶೀರ್ ಮೇಲೆ ದಾಳಿ ಮಾಡಿಲ್ಲ. ಶಾಂತಿ ಮತ್ತು ಮಾತುಕತೆಯ ಮೂಲಕ ಪಂಜಶೀರ್ ವಶ ಪಡೆಯಲು ಬಯಸುತ್ತೇವೆ ಎಂದು ತಾಲಿಬಾನ್ ಹೇಳಿಕೊಂಡಿತ್ತು. ಆದರೆ ಈಗ ಈ ನಡೆಯನ್ನು ಗಮನಿಸಿದಾಗ ಕಣಿವೆಯನ್ನು ಹಿಂಸಾತ್ಮಕವಾಗಿ ವಶಪಡಿಸಿಕೊಳ್ಳಲು ತಾಲಿಬಾನ್ ಮುಂದಾಗಿರುವುದು ದೃಢವಾಗಿದೆ.
ವಾಷಿಂಗ್ಟನ್: ಅಘ್ಘಾನಿಸ್ತಾನದಲ್ಲಿ ರಕ್ತದೋಕುಳಿ ಹರಿಸಿ 13 ಮಂದಿ ಅಮೆರಿಕ ಸೈನಿಕರು ಸಹಿತ 180 ಅಫ್ಘನ್ನರನ್ನು ಕೊಂದ ಐಎಸ್‍ಐಎಸ್-ಕೆ ಉಗ್ರ ಸಂಘಟನೆ ವಿರುದ್ಧ ವಿಶ್ವದ ದೊಡ್ಡಣ್ಣ ಏರ್‌ಸ್ಟ್ರೈಕ್ ನಡೆಸಿದೆ.
ನಿನ್ನೆ ದಾಳಿಯ ಬಳಿಕ ಉಗ್ರ ಸಂಘಟನೆಯ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪ್ರತಿಕಾರದ ಮಾತನ್ನಾಡಿದರು. ಇಂದು ಯುಎಸ್ ಸೆಂಟ್ರಲ್ ಕಮಾಂಡ್ ನೀಡಿರುವ ಮಾಹಿತಿ ಪ್ರಕಾರ ಇಸ್ಲಾಮೀಕ್ ಸ್ಟೇಟ್ ಸದಸ್ಯ ಕಾಬೂಲ್ ದಾಳಿಗೆ ಕಾರಣನಾಗಿದ್ದ ಓರ್ವನನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದ್ದು, ಅಘ್ಘಾನಿಸ್ತಾನದ ನಂಗಹಾರ್ ಪ್ರದೇಶದಲ್ಲಿ ಏರ್‌ಸ್ಟ್ರೈಕ್ ನಡೆದಿದೆ. ಡ್ರೋನ್ ಮೂಲಕ ಈ ದಾಳಿ ನಡೆಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಐಸಿಸ್-ಕೆ ಉಗ್ರರ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುಡುಗು
ಐಎಸ್‍ಕೆಪಿ ವಿರುದ್ಧ ಕಾರ್ಯಾಚರಣೆಗೆ ಪ್ಲಾನ್ ಮಾಡಿ. ಐಸಿಸ್-ಕೆ ಆಸ್ತಿ, ನಾಯಕರು, ಸೌಲಭ್ಯಗಳ ಮೇಲೆ ಏರ್‌ಸ್ಟ್ರೈಕ್ ಮಾಡಲು ಪ್ಲಾನ್ ಮಾಡಿ. ನಾವು ನಮ್ಮ ಸೇನೆ ಮೂಲಕ, ಸೂಕ್ತ ಸಂದರ್ಭದಲ್ಲಿ ಪ್ರತ್ಯುತ್ತರ ನೀಡುತ್ತೇವೆ. ಸ್ಥಳ, ಸಮಯ ನಿಗದಿ ಮಾಡುತ್ತೇವೆ. ಐಸಿಸ್ ಭಯೋತ್ಪಾದಕರು ಗೆಲ್ಲಲು ಸಾಧ್ಯವಿಲ್ಲ ಎಂದು ಅಮೆರಿಕ ಹೇಳಿತ್ತು. ಈ ದಾಳಿಯ ಮೂಲಕ ಅಮೆರಿಕ 48 ಗಂಟೆಗಳಲ್ಲೇ ಉಗ್ರರ ವಿರುದ್ಧ ಪ್ರತಿಕಾರ ತೀರಿಸಿಕೊಂಡಂತಿದೆ. ಇದನ್ನೂ ಓದಿ: ಕಾಬೂಲ್‍ನಲ್ಲಿ 3 ಸಾವಿರ ರೂ.ಗೆ ಒಂದು ಬಾಟೆಲ್ ನೀರು, ಪ್ಲೇಟ್ ರೈಸ್‍ಗೆ 7,500 ರೂ.
ಮುಂಬೈ: ಅಫ್ಘಾನಿಸ್ತಾನದಿಂದ ಬರುವ ಮುಸ್ಲಿಂ ಪ್ರಜೆಗಳಿಗೆ ಭಾರತದಲ್ಲಿ ಆಶ್ರಯ ಕಲ್ಪಿಸಬಾರದು ಎಂದು ಅಂತರರಾಷ್ಟ್ರೀಯ ಹಿಂದೂ ಪರಿಷತ್‍ನ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.
ನಾಗ್ಪುರ-ವಾರ್ಧಾ ಪ್ರದೇಶದ ಮೂರು ದಿನಗಳ ಭೇಟಿಗಾಗಿ ಇಲ್ಲಿಯ ವಿಮಾನ ನಿಲ್ದಾಣಕ್ಕೆ ಬಂದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಭಾರತವು ತಾಲಿಬಾನ್ ಉದ್ದೇಶದ ಕೇಂದ್ರಬಿಂದುವಾಗಿರುವುದರಿಂದ ದೇಶವು ಬಹಳ ದೊಡ್ಡ ಅಪಾಯ ಎದುರಿಸುತ್ತಿದೆ. ಆದ್ದರಿಂದ ದೇಶವು ತಾಲಿಬಾನೀಕರಣ ಆಗುವುದನ್ನು ತಡೆಯಬೇಕಿದೆ ಎಂದರು.
ಅಫ್ಘಾನಿಸ್ತಾನದ ಮುಸ್ಲಿಂರಿಗೆ ಆಶ್ರಯ ಕಲ್ಪಿಸ ಬಾರದು. ಆದರೆ ಅಲ್ಲಿಂದ ಬರುವ ಹಿಂದೂ ಮತ್ತು ಸಿಖ್ ನಿರಾಶ್ರಿತರಿಗೆ ಭಾರತವು ಗಡಿಯನ್ನು ತೆರೆದಿರಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕಾಬೂಲ್ ದಾಳಿಯ ಹೊಣೆ ಹೊತ್ತ ISKP ಸಂಘಟನೆ
ಅಘ್ಘಾನಿಸ್ತಾನದಲ್ಲಿ ನೆತ್ತರಕೋಡಿ ಹರಿಸಿದ್ದು ನಾವೇ ಎಂದು ಇಸ್ಲಾಮಿಕ್ ಸ್ಟೇಟ್ ಐಎಸ್‍ಕೆಪಿ(ISKP) ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ. ಅಮೆರಿಕ ನೇತೃತ್ವದಲ್ಲಿ ಸೇನಾ ಪಡೆಗಳ ಹಿಂತೆಗೆತ ಕಾರ್ಯಾಚರಣೆ ವೇಳೆ ಅಘ್ಘಾನಿಸ್ತಾನದಲ್ಲಿ ಏಳು ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಬಳಿಕ ರಾತ್ರಿಯಿಡಿ ನೆತ್ತರು ಹರಿಸಿದ ಪಾಪಿಗಳು ನಾವು ಎಲ್ಲಾ ಭದ್ರತಾ ತಡೆಗೋಡೆಗಳನ್ನೂ ದಾಟಿ ಅಮೆರಿಕ ಭದ್ರತಾ ಪಡೆಗಳಿರುವ ಪ್ರದೇಶಕ್ಕಿಂತ 16 ಅಡಿ ದೂರದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸುವುದಕ್ಕೆ ಒಬ್ಬ ಬಾಂಬರ್‍ನಿಂದ ಸಾಧ್ಯವಾಗಿದೆ ಎಂದು ದಾಳಿಯ ಹೊಣೆ ಹೊತ್ತ ಐಎಸ್‍ಕೆಪಿ ಸಂಘಟನೆ ಪ್ರಚಾರ ಪಡೆದುಕೊಂಡಿದೆ.