Tag: Taliban cleric

  • ಬಾಂಬ್‌ ಸ್ಫೋಟಿಸಿ ತಾಲಿಬಾನ್‌ ಧರ್ಮಗುರು ಹತ್ಯೆ

    ಬಾಂಬ್‌ ಸ್ಫೋಟಿಸಿ ತಾಲಿಬಾನ್‌ ಧರ್ಮಗುರು ಹತ್ಯೆ

    ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿಯಲ್ಲಿ ನಡೆದ ಬಾಂಬ್‌ ದಾಳಿಗೆ ತಾಲಿಬಾನ್‌ ಪ್ರಖ್ಯಾತ ಧರ್ಮಗುರು ಶೇಖ್‌ ರಹೀಮುಲ್ಲಾ ಹಕ್ಕಾನಿ ಹತ್ಯೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸ್ಫೋಟ ಸಂಭವಿಸಿದ ಕಾಬೂಲ್‌ನ ಗುಪ್ತಚರ ಮುಖ್ಯಸ್ಥ ಅಬ್ದುಲ್ ರಹಮಾನ್ ಸಾವನ್ನು ಖಚಿತಪಡಿಸಿದ್ದಾರೆ ಎಂದು ಅಫ್ಘಾನಿಸ್ತಾನದ ಟೋಲೋ ನ್ಯೂಸ್‌ ವರದಿ ಮಾಡಿದೆ. ಇದನ್ನೂ ಓದಿ: ಮಕ್ಕಳಿಗೆ ಊಟ ಹಾಕ್ಲೋ, ಸಾಯಿಸ್ಲೋ – ಬೆಲೆ ಏರಿಕೆ ಖಂಡಿಸಿ ಪಾಕ್ ಪ್ರಧಾನಿಗೆ ಮಹಿಳೆಯಿಂದ ಕ್ಲಾಸ್

    ಕಾಬೂಲ್‌ನಲ್ಲಿ ಧಾರ್ಮಿಕ ಸೆಮಿನಾರ್‌ನಲ್ಲಿ ಈ ಘಟನೆ ನಡೆದಿದೆ. ಈ ಹಿಂದೆ ಕಾಲು ಕಳೆದುಕೊಂಡಿದ್ದ ವ್ಯಕ್ತಿ ನಂತರ ಪ್ಲಾಸ್ಟಿಕ್‌ ಕಾಲು ಅಳವಡಿಸಿಕೊಂಡಿದ್ದು, ಅದರಲ್ಲಿ ಸ್ಫೋಟಕಗಳನ್ನು ಇಟ್ಟುಕೊಂಡಿದ್ದ. ಸೆಮಿನಾರ್‌ನಲ್ಲಿ ಈ ಸ್ಫೋಟಕಗಳನ್ನು ಸ್ಫೋಟಿಸಿದ್ದಾನೆ ಎಂದು ತಾಲಿಬಾನ್‌ ತಿಳಿಸಿದೆ.

    ಸ್ಫೋಟದ ಹಿಂದೆ ಯಾರ ಕೈವಾಡವಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ತಾಲಿಬಾನ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಜಗತ್ತಿನಲ್ಲಿ 5 ವರ್ಷ ಕದನ ವಿರಾಮಕ್ಕೆ ಮೋದಿ ಸಮಿತಿ ರಚಿಸಿ: ಮೆಕ್ಸಿಕೋ ಅಧ್ಯಕ್ಷ

    Live Tv
    [brid partner=56869869 player=32851 video=960834 autoplay=true]