Tag: Talent

  • ಬಾಲಿವುಡ್ ನಲ್ಲಿ ಟ್ಯಾಲೆಂಟ್ ಇರುವಂಥ ನಟರೇ ಇಲ್ಲವೆಂದು ಬಿಟೌನ್ ನಲ್ಲಿ ಬೆಂಕಿ ಹಚ್ಚಿದ ಕರಣ್ ಜೋಹಾರ್

    ಬಾಲಿವುಡ್ ನಲ್ಲಿ ಟ್ಯಾಲೆಂಟ್ ಇರುವಂಥ ನಟರೇ ಇಲ್ಲವೆಂದು ಬಿಟೌನ್ ನಲ್ಲಿ ಬೆಂಕಿ ಹಚ್ಚಿದ ಕರಣ್ ಜೋಹಾರ್

    ಬಾಲಿವುಡ್ ಅನೇಕ ಸ್ಟಾರ್ ನಟರಿಗೆ ಸಿನಿಮಾ ಮಾಡಿದ ಹೆಗ್ಗಳಿಕೆ ಕರಣ್ ಜೋಹಾರ್ (Karan Johar) ಅವರದ್ದು. ನಿರ್ದೇಶಕರಾಗಿ, ನಿರ್ಮಾಪಕರಾಗಿ ಬಹುತೇಕ ನಟರಿಗೆ ಕರಣ್ ಸಿನಿಮಾ ಮಾಡಿದ್ದಾರೆ. ಅದರಲ್ಲೂ ಕರಣ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಶೋಗೆ ಬಾರದೇ ಇರುವ  ನಟ ನಟಿಯರೇ ಇಲ್ಲ. ಬಾಲಿವುಡ್ ಬಗ್ಗೆ ಆಳ ಅಗಲ ಗೊತ್ತಿರುವ ಕರಣ್, ಇಡೀ ಬಾಲಿವುಡ್ ತಲೆತಗ್ಗಿಸುವಂತಹ ಹೇಳಿಕೆಯನ್ನು ನೀಡಿದ್ದಾರೆ. ಆ ಹೇಳಿಕೆ ಇದೀಗ ಬಾಲಿವುಡ್ ನಲ್ಲಿ ಬೆಂಕಿ ಹಚ್ಚಿದೆ.

    ಖಾಸಗಿ ವಾಹಿನಿಯೊಂದರ ಟಾಕ್ ಶೋನಲ್ಲಿ ಮಾತನಾಡಿರುವ ಕರಣ್ ಜೋಹಾರ್, ಬಾಲಿವುಡ್ (Bollywood,) ನಲ್ಲಿ ಹೇಳಿಕೊಳ್ಳುವಂತಹ ಮತ್ತು ಟ್ಯಾಲೆಂಟ್ (Talent) ಇರುವಂತಹ ನಟ ಯಾರೂ ಇಲ್ಲ ಎಂದು ಹೇಳುವ ಮೂಲಕ ಸ್ವತಃ ನಿರೂಪಕರನ್ನೇ ಬೆಚ್ಚಿ ಬೀಳಿಸಿದ್ದಾರೆ. ಈ ಮೂಲಕ ದಕ್ಷಿಣದ ತಾರೆಯರನ್ನು ಪರೋಕ್ಷವಾಗಿ ಹೊಗಳಿದ್ದಾರೆ. ಅಲ್ಲಿಗೆ ಮತ್ತೊಂದು ಸುತ್ತಿನ ದಕ್ಷಿಣ ಮತ್ತು ಬಾಲಿವುಡ್ ತಾರೆಯರ ವಾರ್ ಶುರುವಾಗುತ್ತಾ ಕಾದು ನೋಡಬೇಕು. ಇದನ್ನೂ ಓದಿ:ಬಿಕಿನಿಯಲ್ಲಿ `ಲೈಗರ್’ ಬ್ಯೂಟಿ ಅನನ್ಯಾ ಪಾಂಡೆ ಮಿಂಚಿಂಗ್

    ಆ ಶೋವನ್ನು ರಿತೇಶ್ ದೇಶಮುಖ (Riteish Deshmukh) ನಡೆಸಿಕೊಡುತ್ತಿದ್ದು, ಅತಿಥಿಯಾಗಿ ಕರಣ್ ಜೋಹಾರ್ ಬಂದಿದ್ದರು. ‘ನೀವು ನಟನನ್ನು ಆಯ್ಕೆ ಮಾಡಿಕೊಳ್ಳುವಾಗ ಲುಕ್‍ಗೆ ಆದ್ಯತೆ ಕೊಡುತ್ತೀರಾ? ಅಥವಾ ಮತ್ತೇನಾದರೂ ನೋಡುತ್ತೀರಾ?’ ಎಂದು ಪ್ರಶ್ನೆ ಮಾಡುತ್ತಾರೆ. ಲುಕ್ ಜೊತೆ ಟ್ಯಾಲೆಂಟ್ ಕೂಡ ನೋಡುತ್ತೇನೆ. ಆದರೆ, ಈವರೆಗೂ ನನಗೆ ಟ್ಯಾಲೆಂಟ್ ಸಿಕ್ಕಿಲ್ಲ ಎಂದು ಉತ್ತರಿಸಿದ್ದಾರೆ. ಕರಣ್ ಅವರ ಈ ಉತ್ತರ ಇದೀಗ ಹಲವರ ಕಂಗೆಣ್ಣಿಗೆ ಗುರಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಎಮ್ಮೆ ಮೇಲೆ ಕುಳಿತು ‘ಮುಜ್ಸೆ ಶಾದಿ ಕರೋಗಿ’ ಎಂದ ಹುಡುಗ – ಬಾಲಕನ ಕಂಠಕ್ಕೆ ನೆಟ್ಟಿಗರು ಫಿದಾ

    ಎಮ್ಮೆ ಮೇಲೆ ಕುಳಿತು ‘ಮುಜ್ಸೆ ಶಾದಿ ಕರೋಗಿ’ ಎಂದ ಹುಡುಗ – ಬಾಲಕನ ಕಂಠಕ್ಕೆ ನೆಟ್ಟಿಗರು ಫಿದಾ

    ಭಾರತದಲ್ಲಿ ಪ್ರತಿಭಾವಂತರಿಗೇನು ಕೊರತೆಯಿಲ್ಲ. ನಾವು ಭೇಟಿ ಮಾಡುವ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಒಂದು ವಿಶೇಷವಾದ ಪ್ರತಿಭೆ ಅಡಗಿರುತ್ತದೆ. ಸಾಮಾಜಿಕ ಮಾಧ್ಯಮ ಇಲ್ಲದಿದ್ದರೆ ಜನರಿಗೆ ತಮ್ಮ ಪ್ರತಿಭೆಯನ್ನು ಹೊರಹಾಕಲು ವೇದಿಕೆಗಳೇ ಸಿಗುತ್ತಿರಲಿಲ್ಲ.

    ಅಂದಹಾಗೇ ಚಿಕ್ಕ ಬಾಲಕನೊರ್ವ ಎಮ್ಮೆ ಮೇಲೆ ಕುಳಿತು ಬಾಲಿವುಡ್ ಹಾಡೊಂದನ್ನು ಹಾಡಿದ್ದಾನೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಪಟ್ಟೆ ವೈರಲ್ ಆಗುತ್ತಿದೆ. ಆಟ ಆಡುವ ವಯಸ್ಸಿನಲ್ಲಿ ಈ ಬಾಲಕ ಎಮ್ಮೆ ಮೇಲೆ ಆರಾಮವಾಗಿ ಕುಳಿತುಕೊಂಡು ಸಲ್ಮಾನ್‍ಖಾನ್ ಅಭಿನಯದ ‘ಮುಜ್ಸೆ ಶಾದಿ ಕರೋಗಿ’ ಎಂಬ ಹಾಡನ್ನು ಇಂಪಾಗಿ ಹಾಡಿದ್ದಾನೆ.

    ವೀಡಿಯೋ ಎಲ್ಲಿಯದು ಎಂಬುವುದರ ಬಗ್ಗೆ ಮಾಹಿತಿ ಇಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಬಾಲಕನ ಧ್ವನಿಯನ್ನು ಕೇಳಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಈ ಹಾಡು 2004ರಲ್ಲಿ ಹಿಟ್ ಪಡೆದುಕೊಂಡಿತ್ತು. ವೈರಲ್ ಆಗುತ್ತಿರುವ ಈ ವೀಡಿಯೋ ನೋಡಿದ ಎಲ್ಲರೂ ಬಾಲಕನ ಧ್ವನಿಗೆ ಮಾರುಹೋಗುತ್ತಿದ್ದಾರೆ.

    ಡೇವಿಡ್ ಧವನ್ ನಿರ್ದೇಶಿಸಿ, ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸಿರುವ 2004ರ ರೊಮ್ಯಾಂಟಿಕ್ ಸಿನಿಮಾ ‘ಮುಜ್ಸೆ ಶಾದಿ ಕರೋಗಿ’ ಆಗಿದ್ದು, ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಮತ್ತು ಪ್ರಿಯಾಂಕಾ ಚೋಪ್ರಾ ಅಭಿನಯಿಸಿದ್ದಾರೆ.

  • ವಾವ್ಹ್… ಅದ್ಭುತ – ಹಳ್ಳಿ ಹುಡುಗಿ ಡಾನ್ಸ್ ಮೆಚ್ಚಿದ ಮಾಧುರಿ ದೀಕ್ಷಿತ್

    ವಾವ್ಹ್… ಅದ್ಭುತ – ಹಳ್ಳಿ ಹುಡುಗಿ ಡಾನ್ಸ್ ಮೆಚ್ಚಿದ ಮಾಧುರಿ ದೀಕ್ಷಿತ್

    ಮುಂಬೈ: ಹಳ್ಳಿ ಹುಡುಗಿ ಪ್ರತಿಭೆಯನ್ನು ಕಂಡು ಬಾಲಿವುಡ್ ಬೆಡಗಿ ಮಾಧುರಿ ದೀಕ್ಷಿತ್ ಮೆಚ್ಚಿ ಟ್ವೀಟ್ ಮಾಡಿದ್ದಾರೆ.

    ಯುವತಿಯೊಬ್ಬಳು ಕೃಷಿ ಜಮೀನಿನಲ್ಲಿ ಕುಣಿದು ಕುಪ್ಪಳಿಸಿದ್ದಾಳೆ. ಅದ್ಭುತವಾದ ಸ್ಟೆಪ್ ಹಾಕಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವೀಡಿಯೋವನ್ನು ನೋಡಿದ ಮಾಧುರಿ ದೀಕ್ಷಿತ್ ಪ್ರತಿಕ್ರಿಯಿಸಿದ್ದಾರೆ.

    1975ರಲ್ಲಿ ಮಾಧುರಿ ನಟಿಸಿರುವ ಘೂಂಗಟ್ ನಹೀ ಖೋಲು ಸೈಯ್ಯಾ ತೆರೆ ಆಗೆ ಎನ್ನುವ ಹಾಡಿಗೆ ಯುವತಿ ಹಚ್ಚಹಸಿರಿನಿಂದ ಕೂಡಿರುವ ಕೃಷಿ ಭೂಮಿಯಲ್ಲಿ ನಿಂತು ನೃತ್ಯ ಮಾಡಿದ್ದಾಳೆ. ನರ್ತಕರಿಗೆ ಹಾರಲು ರೆಕ್ಕೆಗಳ ಅಗತ್ಯವಿಲ್ಲ. ನೀವು ಹಳ್ಳಿ ಹುಡುಗಿಯ ನೃತ್ಯದಲ್ಲಿ ಕಾಣಬಹುದು ಎಂದು ಬರೆದು ವೀಡಿಯೋವನ್ನು ಟ್ವೀಟ್ ಮಾಡಲಾಗಿತ್ತು. ಈ ವಿಡಿಯೋ ಎಲ್ಲೆಡೆ ಸುದ್ದಿಯಲ್ಲಿತ್ತು. ಈ ವಿಡಿಯೋವನ್ನು ಮಾಧುರಿ ಮೆಚ್ಚುಕೊಂಡಾಡಿದ್ದಾರೆ.

    ಟ್ವೀಟ್ ನಲ್ಲಿ ಏನಿದೆ?
    ವಾವ್ಹ್… ಅದ್ಭುತ! ಈಕೆ ತುಂಬಾ ಸುಂದರವಾಗಿ ನೃತ್ಯ ಮಾಡಿದ್ದಾಳೆ. ಇಂಥಹ ಮತ್ತಷ್ಟು ಪ್ರತಿಭೆಗಳು ಬೆಳಕಿಗೆ ಬರಲಿ, ನಾವು ಕಾಯುತ್ತಿದ್ದೇವೆ ಎಂದು ಬರೆದುಕೊಂಡು ವಿಡಿಯೋವನ್ನು ಮಾಧುರಿ ದೀಕ್ಷಿತ್ ಶೇರ್ ಮಾಡಿದ್ದಾರೆ.

  • ಚಿತ್ರದುರ್ಗ ಪೊಲೀಸರಿಂದ ನಾಟಕ ಪ್ರದರ್ಶನ – ಸಿಬ್ಬಂದಿ ಅಭಿನಯಕ್ಕೆ ಮನಸೋತ ಅಧಿಕಾರಿಗಳು

    ಚಿತ್ರದುರ್ಗ ಪೊಲೀಸರಿಂದ ನಾಟಕ ಪ್ರದರ್ಶನ – ಸಿಬ್ಬಂದಿ ಅಭಿನಯಕ್ಕೆ ಮನಸೋತ ಅಧಿಕಾರಿಗಳು

    ಚಿತ್ರದುರ್ಗ: ಪೊಲೀಸರು ಅಂದರೆ ಕೇವಲ ಕಾನೂನು ಪಾಲಕರು ಅಷ್ಟೇ ಅಂತ ಭಾವಿಸಿದ್ದೇವೆ. ಆದರೆ ಪೊಲೀಸರಲ್ಲೂ ಅದ್ಭುತ ಕಲಾವಿದರಿದ್ದಾರೆ ಎಂಬುದನ್ನ ಚಿತ್ರದುರ್ಗ ಪೊಲೀಸರು ಸಾಬೀತುಪಡಿಸಿದ್ದಾರೆ.

    ದಿನ ನಿತ್ಯ ಒತ್ತಡದಿಂದ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರು ಅವರ ದೈನಂದಿನ ಒತ್ತಡದ ಬದುಕನ್ನು ಬದಿಗಿಟ್ಟು, ಮುಖಕ್ಕೆ ಬಣ್ಣ ಹಚ್ಚಿ ವೇದಿಕೆ ಮೇಲೆ ತಮ್ಮೊಳಗಿದ್ದ ಕಲೆಯನ್ನ ಹೊರಹಾಕುವ ಪ್ರಯತ್ನ ಮಾಡಿದ್ದಾರೆ. ಚಿತ್ರದುರ್ಗದ ಪೊಲೀಸ್ ಪೇದೆಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಕೂಡ ಮುಖಕ್ಕೆ ಬಣ್ಣ ಹಚ್ಚಿ  ಪೊಲೀಸ್ ಕವಾಯತು ಮೈದಾನದಲ್ಲಿ ನಾಟಕ ಪ್ರದರ್ಶಿಸಿದ್ದಾರೆ.

    ಪೊಲೀಸ್ ಸಿಬ್ಬಂದಿ ಸಾಮಾಜಿಕ ಕಳಕಳಿಯ ನಾಟಕವಾಡುವ ಮೂಲಕ ನೆರದಿದ್ದ ಜನರಿಗೆ ಜಾಗೃತಿ ಮೂಡಿಸುವ ನೆಪದಲ್ಲಿ ತಮ್ಮಲ್ಲಿರುವ ಪ್ರತಿಭೆಯನ್ನ ಹೊರಹಾಕಿದ್ದಾರೆ. ಈ ಸದಾವಕಾಶವನ್ನ ಚಿತ್ರದುರ್ಗ ಜಿಲ್ಲೆಗೆ ಹೊಸದಾಗಿ ಬಂದಿರುವ ಖಡಕ್ ಎಸ್‍ಪಿ ಡಾ.ಅರುಣ್ ಕಲ್ಪಿಸಿದ್ದರು.

    ಪೊಲೀಸ್ ಪೇದೆಗಳಿಗೆ ಮನರಂಜನೆ ನೀಡುವ ಮೂಲಕ ಅವರ ಒತ್ತಡವನ್ನ ನಿವಾರಣೆ ಮಾಡುವುದಕ್ಕೆ ಮುಂದಾದ ಎಸ್‍ಪಿ ಸಾಹೇಬ್ರು, ಆಡಿಶನ್ ಮಾಡಿ ಅವರಲ್ಲಿ ಸೂಕ್ತ ಪ್ರತಿಭೆ ಇರುವವರನ್ನು ಆಯ್ಕೆ ಮಾಡಿದ್ದರು. ಬಳಿಕ ಅವರಿಂದ `ಅಣ್ಣನ ಒಡಲು ಬಂಗಾರದ ಕಡಲು’ ಎಂಬ ಸಾಮಾಜಿಕ, ಕೌಟುಂಬಿಕ ಹಾಸ್ಯಭರಿತ ನಾಟಕವನ್ನ ಪ್ರದರ್ಶಿಸಿದ್ದರು.

    ಈ ಕೌಟುಂಬಿಕ ಸಮಸ್ಯೆ ಕುರಿತ ನಾಟಕ ವೀಕ್ಷಿಸಲು ಪೂರ್ವ ವಲಯದ ಡಿಐಜಿ ಬಿ.ದಯಾನಂದ್, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ್, ಜಿಲ್ಲಾಧಿಕಾರಿ ವಿನೋದ ಪ್ರಿಯಾ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಆಗಮಿಸಿದ್ದರು. ಈ ವೇಳೆ ಚಿತ್ರದುರ್ಗ ಡಿವೈಎಸ್‍ಪಿ ಸಂತೋಷ್ ಅವರ ನೃತ್ಯದ ಝಲಕ್ ವೀಕ್ಷಿಸಿ ಫುಲ್ ಎಂಜಾಯ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುಂದೆ ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಓದಿದವರಿಗೆ ಬಂಪರ್!

    ಮುಂದೆ ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಓದಿದವರಿಗೆ ಬಂಪರ್!

    ನವದೆಹಲಿ: ಐಟಿ ಕಂಪೆನಿಗಳಿಂದಾಗಿ ಸಾಫ್ಟ್ ವೇರ್ ಎಂಜಿನಿಯರಿಂಗ್ ಓದಿದವರಿಗೆ ಬೇಡಿಕೆ ಈಗ ಹೆಚ್ಚಿದೆ. ಆದರೆ ಈ ಟ್ರೆಂಡ್ ಮುಂದಿನ ದಿನಗಳಲ್ಲಿ ಬದಲಾವಣೆಯಾಗಲಿದ್ದು ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಓದಿದವರಿಗೆ ಬಂಪರ್ ಹೊಡೆಯುವ ಸಾಧ್ಯತೆಯಿದೆ.

    ಹೌದು, ಭರತದಲ್ಲಿ ಮುಂದೆ ಆಟೋಮೊಬೈಲ್ ಕ್ಷೇತ್ರದಲ್ಲಿ ಕ್ರಾಂತಿ ಆಗಲಿದ್ದು, ಎಲೆಕ್ಟ್ರಿಕ್ ವಾಹನಗಳು ರಸ್ತೆಗೆ ಇಳಿಯಲಿದೆ. ಹೀಗಾಗಿ ಎಲ್ಲ ಆಟೋಮೊಬೈಲ್ ಕಂಪೆನಿಗಳು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲು ಮುಂದಾಗುತ್ತಿದ್ದು ಈ ಕ್ಷೇತ್ರಕ್ಕೆ ಈಗ ಪ್ರತಿಭಾನ್ವಿತರ ಕೊರತೆ ಉಂಟಾಗಿದೆ. ಇದನ್ನೂ ಓದಿ:ಎಲೆಕ್ಟ್ರಿಕ್ ವಾಹನಗಳಿಗೆ ಯಾವುದೇ ಪರ್ಮಿಟ್ ಇಲ್ಲ: ನಿತಿನ್ ಗಡ್ಕರಿ

     

    ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ವಿಭಾಗದಲ್ಲಿ ಈಗ 5 ಸಾವಿರಕ್ಕೂ ಹೆಚ್ಚು ಮಂದಿಯ ಬೇಡಿಕೆ ಇದ್ದು, ಮುಂದಿನ ಎರಡು ವರ್ಷದಲ್ಲಿ ಈ ಸಂಖ್ಯೆ 15 ಸಾವಿರ ತಲುಪುವ ಸಾಧ್ಯತೆಯಿದೆ ಎಂದು ದೇಶದ ದೊಡ್ಡ ಉದ್ಯೋಗ ಪೋರ್ಟಲ್ ಸಂಸ್ಥೆಯಾಗಿರುವ ಟೀಮ್‍ಲೀಸ್ ಅಂದಾಜಿಸಿದೆ.

    ಈಗಾಗಲೇ ಭಾರತದಲ್ಲಿ 1 ಸಾವಿರಕ್ಕೂ ಹೆಚ್ಚು ಎಂಜಿನಿಯರ್ ಗಳು ಎಲೆಕ್ಟ್ರಿಕ್ ವಾಹನವನ್ನು ಅಭಿವೃದ್ಧಿ ಪಡಿಸುವ ಸಂಬಂಧ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಟಾಟಾ ಮೋಟಾರ್ಸ್, ಮರ್ಸಿಡಿಸ್ ಬೆಂಜ್, ಮಹೀಂದ್ರಾ, ಮಾರುತಿ ಕಂಪೆನಿಗಳು ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ. ಇದನ್ನೂ ಓದಿ:  2030ರ ವೇಳೆಗೆ ಭಾರತದಲ್ಲಿ ಒಂದೇ ಒಂದು ಪೆಟ್ರೋಲ್, ಡೀಸೆಲ್ ಕಾರು ಮಾರಾಟವಾಗಲ್ಲ

    ಮಹೀಂದ್ರಾ ಮತ್ತು ಮಹೀಂದ್ರಾ ಕಂಪೆನಿಯ ಚೀಫ್ ಪೀಪಲ್ ಆಫೀಸರ್ ರಾಜೇಶ್ವರ್ ತ್ರಿಪಾಠಿ ಪ್ರತಿಕ್ರಿಯಿಸಿ, ಎಲೆಕ್ಟ್ರಿಕ್ ವಾಹನ ಕ್ಷೇತ್ರ ಉದಯೋನ್ಮುಕ ಉದ್ಯಮವಾಗಿದ್ದು, ಪ್ರತಿಭಾನ್ವಿತರನ್ನು ಹುಡುಕುವುದು ಬಹಳ ಸವಾಲಿನ ಕೆಲಸ. ಮುಂದಿನ ದಿನದಲ್ಲಿ ಈ ಕ್ಷೇತ್ರ ಭಾರೀ ಸಂಖ್ಯೆಯ ಉದ್ಯೋಗಿಗಳನ್ನು ಬೇಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಲೀಟರ್ ಪೆಟ್ರೋಲ್ ಬೆಲೆ 55 ರೂ., ಡೀಸೆಲ್ 50 ರೂ. ಆಗುತ್ತೆ: ಗಡ್ಕರಿ

    ಮುಂದಿನ 2 ವರ್ಷದಲ್ಲಿ 15 ಸಾವಿರ ಮಂದಿಯ ಬೇಡಿಕೆಯಿದೆ. ಆದರೆ 10 ಸಾವಿರ ಮಂದಿಯ ಪೂರೈಕೆ ಮಾತ್ರ ಆಗಲಿದೆ. ಸದ್ಯಕ್ಕೆ ಈಗ 1 ಸಾವಿರ ಎಂಜಿನಿಯರ್ ಗಳು ಮಾತ್ರ ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಆಟೋಮೊಬೈಲ್ ಕಂಪೆನಿಗಳು ಈಗಾಗಲೇ ಐಐಟಿ, ಎನ್‍ಐಟಿಕೆ ಮತ್ತು ಕೇಂದ್ರ ಸರ್ಕಾರದ ಅನುದಾನ ಪಡೆಯುವ ಕಾಲೇಜುಗಳಿಗೆ ಭೇಟಿ ನೀಡಿ ಕ್ಯಾಂಪಸ್ ಸೆಲೆಕ್ಷನ್ ಮಾಡುತ್ತಿದೆ ಎಂದು ಟೀಮ್ ಲೀಸ್ ಸಹ ಸಂಸ್ಥಾಪಕ ಋತುಪರ್ಣ ಚಕ್ರವರ್ತಿ ಹೇಳಿದ್ದಾರೆ. ಇದನ್ನೂ ಓದಿ: ಇನ್ನು ಐದು ವರ್ಷದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 30 ರೂ. ಆಗುತ್ತೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಗನ ಸಿನಿಮಾ ಹುಚ್ಚುತನಕ್ಕಾಗಿ ಮೂರೂವರೆ ಎಕರೆ ಜಮೀನನ್ನೇ ಮಾರಲು ಮುಂದಾದ ಹೆತ್ತವರು!

    ಮಗನ ಸಿನಿಮಾ ಹುಚ್ಚುತನಕ್ಕಾಗಿ ಮೂರೂವರೆ ಎಕರೆ ಜಮೀನನ್ನೇ ಮಾರಲು ಮುಂದಾದ ಹೆತ್ತವರು!

    ಕೊಪ್ಪಳ: ಕೋಟಿಗಟ್ಟಲೆ ಬಂಡವಾಳ ಹಾಕಿ ತಯಾರಾಗಿರುವ ಅದೆಷ್ಟೋ ಸಿನಿಮಾಗಳು ಫ್ಲಾಪ್ ಆಗಿರುವ ಉದಾಹರಣೆಗಳಿವೆ. ಆದರೆ ಇದು ಬಣ್ಣದ ಬದುಕಿನ ಸೆಳೆತ ಎನ್ನಬೇಕೋ ಅಥವಾ ಹುಚ್ಚುತನ ಎನ್ನಬೇಕೋ ಗೊತ್ತಿಲ್ಲ. ಮಗನ ಸಿನಿಮಾ ಹುಚ್ಚಿಗೆ ತಂದೆ-ತಾಯಿ ತಮಲ್ಲಿರು ಜಮೀನನ್ನೇ ಮಾರಾಟ ಮಾಡಲು ಮುಂದಾಗಿದ್ದಾರೆ.

    ಹೌದು. ಬಣ್ಣದ ಜಗತ್ತೆ ಹಾಗೆ. ಸಿನಿಮಾದಲ್ಲಿ ನಟಿಸೋ ಆಸೆ ಹೊತ್ತ ಅದೆಷ್ಟೋ ಯುವಕರು ಒಂದ್ ಚಾನ್ಸ್ ಗಾಗಿ ಅಲೆದಾಡೋದನ್ನು ನೋಡಿದ್ದೀವಿ. ಆದರೆ ಕೊಪ್ಪಳದ ಶಂಶುದ್ದೀನ್ ಅಲಿಯಾಸ್ ಸಚ್ಚಿ ಎಂಬ ಯುವಕನಿಗೆ ಸಿನಿಮಾದ ಸೆಳೆತ ಅನ್ನಬೇಕೋ ಹುಚ್ಚತನ ಅನಬೇಕೋ ಗೊತ್ತಿಲ್ಲ. ಸ್ವಂತ ಬ್ಯಾನರ್ ನಡಿ ಸಿನಿಮಾ ಮಾಡೋ ಹಠ ಹಿಡಿದಿದ್ದಾರೆ.

    ಕೊಪ್ಪಳದ ತಳಕಲ್ ಗ್ರಾಮದ ನಿವಾಸಿಯಾಗಿರೋ ಸಿನಿಮಾದಲ್ಲೇ ಮಿಂಚಬೇಕು, ಏನಾದರೂ ಸಾಧನೆ ಮಾಡಬೇಕು ಎಂದುಕೊಂಡಿದ್ದ ಇವರು ಸಾಮರಸ್ಯ ಸಾರುವ ಒಂದು ಕತೆ ಇಟ್ಕೊಂಡು ಸಿನಿಮಾ ಮಾಡೋಕೆ ಪಣ ತೊಟ್ಟಿದ್ದಾರೆ. ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದಿದ್ದರೂ ಮಗನ ಸಿನಿಮಾ ವ್ಯಾಮೋಹಕ್ಕೆ ತಂದೆ-ತಾಯಿ ಮೂರುವರೆ ಎಕರೆ ಜಮೀನು ಮಾರಾಟ ಮಾಡೋಕೆ ಮುಂದಾಗಿದ್ದಾರೆ.

    ಚಿಕ್ಕಂದಿನಿಂದಲೇ ಸಂಶೀರ್ ಗೆ ಸಿನಿಮಾ ಎಂದರೆ ಪಂಚಪ್ರಾಣ. ಲೂಸ್ ಮಾದ ಯೋಗಿಯ ಧೂಳಿಪಟ ಸಿನಿಮಾದಲ್ಲಿ ಅಭಿನಯಿಸಿದ್ದರು. ಅಲ್ಲದೆ ಸ್ಥಳೀಯ ಸಿನಿಮಾಗಳಾದ ಜವರಾಯ, ಬೆಳ್ಳಕ್ಕಿ ಜೋಡಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಭಾವೈಕ್ಯತೆ ಸಾರುವ ಸಿನಿಮಾ ಮಾಡೋ ಆಸೆ ಹೊಂದಿರೋ ಇವರು ಸಿನಿಮಾಕ್ಕಾಗಿ ಶಿಶುನಾಳಕ್ಕೆ ಹೋಗಿ ಶರೀಫರ ಬಗ್ಗೆ ತಿಳಿದುಕೊಂಡು ಬಂದು ಕಥೆ ಸಿದ್ಧ ಮಾಡಿಕೊಂಡಿದ್ದಾರೆ.

    ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಆದರೆ ಪ್ರೋತ್ಸಾಹದ ಕೊರತೆ ಇದೆ. ಆದರೆ ಇಲ್ಲಿ ಹೆತ್ತವರು ತಮ್ಮ ಮಗನ ಕನಸು ನನಸು ಮಾಡಲು ಜಮೀನು ಮಾರಾಟ ಮಾಡುತ್ತಿರುವುದು ಮೆಚ್ಚಲೇಬೇಕು.