Tag: talakh

  • ಶಬರಿಮಲೆ ವಿಚಾರ ನಿರ್ಧರಿಸಲು ಜಾತ್ಯಾತೀತ ಸರ್ಕಾರಕ್ಕೆ ಹಕ್ಕಿಲ್ಲ: ಪೇಜಾವರ ಶ್ರೀ

    ಶಬರಿಮಲೆ ವಿಚಾರ ನಿರ್ಧರಿಸಲು ಜಾತ್ಯಾತೀತ ಸರ್ಕಾರಕ್ಕೆ ಹಕ್ಕಿಲ್ಲ: ಪೇಜಾವರ ಶ್ರೀ

    ಉಡುಪಿ: ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಪಟ್ಟಂತೆ ಧಾರ್ಮಿಕ ಮುಖಂಡರ ಸಭೆ ಕರೆಯಲಿ. ಅದನ್ನ ಬಿಟ್ಟು ಜಾತ್ಯಾತೀತ ಸರ್ಕಾರಕ್ಕೆ ಈ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳುವ ಹಕ್ಕಿಲ್ಲ ಎಂದು ಪೇಜಾವರ ಶ್ರೀಗಳು ಅಭಿಪ್ರಾಯ ಪಟ್ಟಿದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ಕೇರಳ ಸರ್ಕಾರ ಜನಮತಗಣತೆ ಮಾಡಬೇಕು. ಹಿಂದೂಗಳ ಅಭಿಪ್ರಾಯವನ್ನ ಪಡೆದುಕೊಳ್ಳಬೇಕು. ಅದಾಗದಿದ್ರೆ ಧಾರ್ಮಿಕ ಮುಖಂಡರ ಸಭೆ ಕರೆದು ಇತ್ಯರ್ಥ ಮಾಡಲಿ. ಅದನ್ನ ಬಿಟ್ಟು ಜಾತ್ಯಾತೀತ ಸರ್ಕಾರಕ್ಕೆ ದೇವರ ಮೇಲೆ ನಂಬಿಕೆ ಇಲ್ಲವೆಂದ ಮೇಲೆ ಅವರಿಗೆ ಈ ಕುರಿತು ನಿರ್ಧಾರ ತೆಗೆದುಕೊಳ್ಳಲು ಅದ್ಯಾವ ಹಕ್ಕಿದೆ ಎಂದು ಪ್ರಶ್ನಿಸಿದ್ದಾರೆ.

    ಧಾರ್ಮಿಕವಾಗಿ ನಾನು ಹಲವಾರು ಪರಿವರ್ತನೆ ಮಾಡಿದ್ದೇನೆ. ಜೊತೆಗೆ ಹಲವಾರು ಸಂಪ್ರದಾಯವನ್ನು ಕೂಡ ಅನುಸರಿಸಿದ್ದೇನೆ. ಇದು ಸಂಪ್ರದಾಯ ಮತ್ತು ಶಾಸ್ತ್ರದ ತಿಕ್ಕಾಟ ಆಗಿರೋದ್ರಿಂದ ಜಾತ್ಯಾತೀತ ಸರ್ಕಾರ ಇದನ್ನ ತೀರ್ಮಾನ ಮಾಡಬಾರದು. ಧಾರ್ಮಿಕ ಮುಖಂಡರು ಹಾಗೂ ಹಿಂದೂ ಜನತೆ ಇದನ್ನ ತೀರ್ಮಾನ ಮಾಡಬೇಕು. ಮಹಿಳೆಯರು ಇದನ್ನ ಅವಮಾನ ಅಂತ ಭಾವಿಸಬಾರದು ಎಂದು ಪೇಜಾವರ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಐವರು ಅಯ್ಯಪ್ಪ ಮಾಲಾಧಾರಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ..!

    ಜನಾಭಿಪ್ರಾಯಕ್ಕೆ ಮಣಿದು ಶ್ರೀ ರಾಮ ಸೀತೆಯನ್ನ ಕಾಡಿಗೆ ಕಳುಹಿಸಿದ ಅನ್ನೋದು ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖವಾಗಿದೆ. ಹಾಗೆಯೇ ಕೇರಳ ಸರ್ಕಾರ ತನ್ನ ಹಠವನ್ನ ಬಿಟ್ಟು ಇದನ್ನೂ ಕೂಡ ಜನಾಭಿಪ್ರಾಯಕ್ಕೆ ಬಿಡಬೇಕು ಎಂದರು. ಹಾಗೆಯೇ ತಲಾಖ್ ವಿಚಾರವನ್ನ ಪ್ರಸ್ತಾಪಿಸಿದ ಶ್ರೀಗಳು, ತಲಾಖ್ ವಿಚಾರವನ್ನು ಶಬರಿಮಲೆಗೆ ತಳಕು ಹಾಕುವ ಅಗತ್ಯ ಇಲ್ಲ. ತಲಾಖ್ ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆಗೆ ಸಮಾನ. ನಾನು ತಲಾಖ್ ವಿರುದ್ಧ ಕಾಯ್ದೆಗೆ ಬೆಂಬಲಿಸುತ್ತೇನೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಲಾಖ್ ತೀರ್ಪಿಗೆ ಸ್ವಾಗತ, ಶಬರಿಮಲೆ ತೀರ್ಪಿಗೆ ವಿರೋಧ ಯಾಕೆ: ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ

    ತಲಾಖ್ ತೀರ್ಪಿಗೆ ಸ್ವಾಗತ, ಶಬರಿಮಲೆ ತೀರ್ಪಿಗೆ ವಿರೋಧ ಯಾಕೆ: ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ

    ನವದೆಹಲಿ: ಸುಪ್ರಿಂ ಕೋರ್ಟ್ ನ ತ್ರಿವಳಿ ತಲಾಖ್ ತೀರ್ಪಿಗೆ ಸ್ವಾಗತ ಕೋರಿದ್ದವರು ಇಂದು ಶಬರಿಮಲೆಯ ತೀರ್ಪಿನ ವಿರುದ್ಧ ಯಾಕೆ ಬೀದಿಗಿಳಿದಿದ್ದಾರೆ ಎಂದು ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ.

    ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಪ್ರತಿಕ್ರಿಯಿಸಿದ ಅವರು, ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ನಾವು ಪಾಲಿಸಬೇಕು. ಈ ಹಿಂದೆ ಇದೇ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ಬಗ್ಗೆ ತೀರ್ಪು ನೀಡಿದ್ದಾಗ ಎಲ್ಲರೂ ಸಂತಸ ವ್ಯಕ್ತಪಡಿಸಿದ್ದರು. ಆದರೆ ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿಚಾರದಲ್ಲಿ, ಸುಪ್ರೀಂ ಕೋರ್ಟ್ ತೀರ್ಪು ನಮ್ಮ ಸಂಸ್ಕೃತಿಗೆ ವಿರುದ್ಧವಾದದ್ದು ಎಂದು ಹೇಳುತ್ತಿದ್ದೀರಿ. ಶಬರಿಮಲೆ ವಿವಾದ ನಿಮ್ಮ ಸಂಸ್ಕೃತಿಯಾದರೆ, ತ್ರಿವಳಿ ತಲಾಖ್ ಅವರ ಸಂಸ್ಕೃತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಈ ವಿವಾದ ಹಿಂದೂ ನವೋದಯ ಮತ್ತು ಗೊಡ್ಡು ಸಂಪ್ರದಾಯದ ನಡುವಿನ ಹೋರಾಟ. ಎಲ್ಲಾ ಹಿಂದುಗಳು ಒಂದೇ. ಎಲ್ಲಾ ಜಾತಿ ಮತ್ತು ಪಂಗಡಗಳೂ ಸಮಾನವಾದದ್ದು. ಜಾತಿ ವ್ಯವಸ್ಥೆ ತೊಲಗಬೇಕು. ಯಾಕೆಂದರೆ ಇಂದು ಬ್ರಾಹ್ಮಣರು ಬೌದ್ಧಿಕರಾಗಿ ಉಳಿದಿಲ್ಲ. ಅವರು ಸಿನಿಮಾ, ವಾಣಿಜ್ಯ ಸೇರಿದಂತೆ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಜಾತಿ ಎಂಬುದು ಹುಟ್ಟಿನಿಂದ ನಿರ್ಧಾರವಾಗುತ್ತದೆ ಎಂಬುದನ್ನು ಎಲ್ಲಿಯೂ ಬರೆದಿಲ್ಲ. ಶಾಸ್ತ್ರಗಳನ್ನೂ ನಾವು ತಿದ್ದುಪಡಿ ಮಾಡಬಹುದು ಎಂದು ಸುಬ್ರಮಣಿಯನ್ ಸ್ವಾಮಿ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅವಳ್ಬಿಟ್, ಇವಳ್ಬಿಟ್ ಅಂತ 3ನೇ ಮದುವೆಯಾಗಿದ್ದಾನೆ ಬೆಂಗ್ಳೂರಿನ ಈ ಖತರ್ನಾಕ್!

    ಅವಳ್ಬಿಟ್, ಇವಳ್ಬಿಟ್ ಅಂತ 3ನೇ ಮದುವೆಯಾಗಿದ್ದಾನೆ ಬೆಂಗ್ಳೂರಿನ ಈ ಖತರ್ನಾಕ್!

    ಬೆಂಗಳೂರು: ಮೊದಲನೆ ಹೆಂಡತಿಗೆ ತಲಾಖ್ ನೀಡಿದ್ದೀನಿ ಅಂತ ಎರಡನೇ ಮದುವೆಯಾದವನು ಈಗ ಎರಡನೇ ಹೆಂಡತಿಗೂ ಕೈ ಕೊಟ್ಟು ಮೂರನೇ ಮದುವೆಯಾಗಿದ್ದಾನೆ.

    ಬೆಂಗಳೂರಿನ ನಿವಾಸಿ ಇಮ್ರಾನ್ ಖಾನ್‍ಗೆ ಮದುವೆಯಾಗೋದೆ ಕಾಯಕ. ನಾನು ಮೊದಲನೇ ಹಂಡತಿಗೆ ತಲಾಖ್ ನೀಡಿದ್ದೀನಿ ಅಂತ ಶೇಖ್ ಹುಸೇನ್ ಎಂಬವರ ಮಗಳು ಅರ್ಶಿಯಾಳನ್ನು 5 ವರ್ಷದ ಹಿಂದೆ ವರಿಸಿದ್ದ.

    ಇದನ್ನೂ ಓದಿ: ತ್ರಿವಳಿ ತಲಾಖ್ ನಿಷೇಧ – ಸುಪ್ರೀಂನಿಂದ ಮಹತ್ವದ ತೀರ್ಪು

    ಬಡ ಕುಟುಂಬದವರಾಗಿದ್ರಿಂದ ಹುಸೇನ್ ಆತುರಾತುರದಲ್ಲಿ ಮದುವೆ ಮಾಡಿಕೊಟ್ಟಿದ್ರು. ಈ ಮದುವೆಗೆ ಸಾಕ್ಷಿಯಾಗಿ ಮುದ್ದಾದ ಒಂದು ಗಂಡು ಮಗುವಿದೆ. ಈಗ ಅರ್ಶಿಯಾ ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆ. ಈ ಹೊತ್ತಲ್ಲಿ ಈಕೆಯನ್ನು ಬಿಟ್ಟುಹೋಗಿದ್ದಾನೆ. ಎಲ್ಲಿಂದಲೋ ಫೋನ್ ಮಾಡಿ ನಾನು ಮೂರನೇ ಮದುವೆಯಾಗಿದ್ದೀನಿ. ಯಾರಿಗೂ ಹೇಳ್ಬೇಡ ಹೇಳಿದ್ರೆ ನಿನ್ನಕಡೆ ತಲೆಹಾಕಲ್ಲ ಅಂತ ಧಮ್ಕಿ ಹಾಕಿದ್ದಾನೆ.

    ಇದನ್ನೂ ಓದಿ: 4 ಮದುವೆಯಾಗಿ ಮತ್ತೊಂದು ಮದುವೆಗೆ ಸಿದ್ಧವಾಗಿರೋ ಶಾಸಕರ ಬಂಟ

    ಸದ್ಯ ತನ್ನ ಗಂಡನ ವರ್ತನೆಯಿಂದ ನೊಂದ ಆರ್ಶಿಯಾ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಇದನ್ನೂ ಓದಿ: ಅಮೆರಿಕಾದಲ್ಲಿ ಇದ್ದುಕೊಂಡೇ ಪತ್ನಿಗೆ ತಲಾಖ್: ಪತಿಗೆ ಸಮನ್ಸ್ ಜಾರಿ ಮಾಡಿದ ಕೋರ್ಟ್

    ಇದನ್ನೂ ಓದಿ: ಸ್ಪೀಡ್ ಪೋಸ್ಟ್ ನಲ್ಲಿ ತಲಾಖ್ ನೀಡಿದ್ದ ಪತಿ ವಿರುದ್ಧ ಗೆದ್ದು ಅನಿಷ್ಟ ಪದ್ದತಿಗೆ ಮುಕ್ತಿ ಹಾಡಿದ್ದು ಈ ಮಹಿಳೆ