Tag: Talak

  • ವಾಟ್ಸಪ್ ಮೂಲಕ 29ರ ಪತ್ನಿಗೆ ತಲಾಖ್ ಕೊಟ್ಟ 62ರ ಪತಿ!

    ವಾಟ್ಸಪ್ ಮೂಲಕ 29ರ ಪತ್ನಿಗೆ ತಲಾಖ್ ಕೊಟ್ಟ 62ರ ಪತಿ!

    ಹೈದರಾಬಾದ್: 62 ವರ್ಷದ ಪತಿಯೊಬ್ಬ 29 ವರ್ಷದ ಪತ್ನಿಗೆ ವಾಟ್ಸಪ್ ಮೂಲಕ ತಲಾಕ್ ನೀಡಿರುವ ಘಟನೆ ತೆಲಂಗಾಣದ ರಾಜಧಾನಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಹೈದರಾಬಾದ್ ನಿವಾಸಿ ಹುಮ ಸೈರಾ (29) ತನ್ನ 62 ವರ್ಷದ ಪತಿಯಿಂದ ವಾಟ್ಸಪ್ ಮೂಲಕ ತಲಾಕ್ ಪಡೆದ ಪತ್ನಿಯಾಗಿದ್ದಾರೆ. ಸೈರಾ ಎಂಬವರು 2017 ರ ಮೇ ತಿಂಗಳಲ್ಲಿ ಓಮನ್ ನಿವಾಸಿಯಾದ 62 ವರ್ಷದ ವ್ಯಕ್ತಿಯೊಬ್ಬರನ್ನು ಮದುವೆಯಾಗಿದ್ದರು. ವಿವಾಹದ ಬಳಿಕ ಆತನೊಂದಿಗೆ ಓಮನ್‍ಗೆ ತೆರಳಿ ಒಂದು ವರ್ಷಗಳ ಕಾಲ ಜೀವನ ಸಾಗಿಸಿದ್ದರು.

    ಈ ವೇಳೆ ಸೈರಾ ಓಮನ್ ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಅನಾರೋಗ್ಯದಿಂದಾಗಿ ಮಗು ತನ್ನ 8ನೇ ತಿಂಗಳಿನಲ್ಲಿ ಮೃತಪಟ್ಟಿತ್ತು. ಇದಾದ ಬಳಿಕ ಪತಿ ಸೈರಾರನ್ನು ಚಿಕಿತ್ಸೆಯ ನೆಪವೊಡ್ಡಿ ಜುಲೈ 30 ರಂದು ಹೈದರಾಬಾದ್‍ನ ಆಕೆಯ ತಾಯಿ ಮನೆಗೆ ಕಳುಹಿಸಿಕೊಟ್ಟಿದ್ದಾನೆ.

    ಪತ್ನಿ ಭಾರತಕ್ಕೆ ಮರಳಿದ ಮೇಲೆ ಆಕೆಯೊಂದಿಗೆ ಫೋನ್ ಸಂಭಾಷಣೆಯನ್ನು ನಿಲ್ಲಿಸಿದ್ದ. ಹೀಗಾಗಿ ಸೈರಾ ಎಷ್ಟೇ ಬಾರಿ ಸಂಪರ್ಕಕ್ಕೆ ಪ್ರಯತ್ನಿಸಿದ್ದರೂ ಸಫಲವಾಗಿರಲಿಲ್ಲ. ಈ ವೇಳೆ ಆಗಸ್ಟ್ 12 ರಂದು ಪತಿ ತನ್ನ ವಾಟ್ಸಪ್ ಮೂಲಕ ಪತ್ನಿಗೆ ತಲಾಖ್ ನೀಡಿದ್ದಾನೆ. ಪತಿಯ ತಲಾಖ್ ನಿಂದ ಆಘಾತಗೊಂಡ ಸೈರಾ ನ್ಯಾಯ ಕೊಡಿಸುವಂತೆ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಮೆರಿಕಾದಲ್ಲಿ ಇದ್ದುಕೊಂಡೇ ಪತ್ನಿಗೆ ತಲಾಖ್: ಪತಿಗೆ ಸಮನ್ಸ್ ಜಾರಿ ಮಾಡಿದ ಕೋರ್ಟ್

    ಅಮೆರಿಕಾದಲ್ಲಿ ಇದ್ದುಕೊಂಡೇ ಪತ್ನಿಗೆ ತಲಾಖ್: ಪತಿಗೆ ಸಮನ್ಸ್ ಜಾರಿ ಮಾಡಿದ ಕೋರ್ಟ್

    ಧಾರವಾಡ: ಅಮೆರಿಕಾದಲ್ಲಿ ಇದ್ದುಕೊಂಡೇ ಧಾರವಾಡದ ಪತ್ನಿಗೆ ಇಮೇಲ್ ಮೂಲಕ ತಲಾಖ್ ನೀಡಿದ್ದ ಪತಿಗೆ ಧಾರವಾಡದ ಜೆಎಂಎಫ್‍ಸಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

    ಮೆಹಬೂಬನಗರದ ಗುಲ್ಜಾರ್ ದಿಡಗುರ ಎಂಬುವನು 2010ರಲ್ಲಿ ಧಾರವಾಡದ ಮುಫ್ತಿನತಾಜ್ ಎಂಬ ಯುವತಿಯನ್ನು ಮದುವೆಯಾಗಿದ್ದನು. ಮದುವೆಯ ನಂತರ ಪತ್ನಿ ಮುಫ್ರಿನ್‍ತಾಜ್‍ಳನ್ನ ಹೇಳದೆ ಕೇಳದೇ ಬಿಟ್ಟು ಗುಲ್ಜಾರ್ ಅಮೇರಿಕಾಕ್ಕೆ ಹೋಗಿದ್ದನು.

    ಮುಫ್ರಿನ್‍ತಾಜ್‍ಗೆ ಅಮೆರಿಕಾದಿಂದಲೇ ಇಮೇಲ್ ಮೂಲಕ ತಲಾಖ್ ನಾಮಾ ಕಳುಹಿಸಿದ್ದನು. ಇದನ್ನು ಪ್ರಶ್ನಿಸಿ ಮುಫ್ರಿನ್ ಕುಟುಂಬ ನ್ಯಾಯಾಲಯದ ಮೊರೆ ಹೋಗಿದ್ದರು. ಇನ್ನು ಪತಿ ಹಾಗೂ ಪತಿಯ ಮನೆಯವರು ನನಗೆ ವರದಕ್ಷಿಣೆ ಕಿರುಕುಳ ನೀಡಿದ್ದರು ಎಂದು ಮುಫ್ರಿನ್‍ತಾಜ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆ ಇಂದು ಜೆಎಂಎಫ್‍ಸಿ ನ್ಯಾಯಾಲಯ ಪತಿ ಗುಲ್ಜಾರ್ ಹಾಗೂ ಅವರ ತಂದೆ ತಾಯಿಗೆ ಕೂಡಾ ನ್ಯಾಯಾಲಯಕ್ಕೆ ಹಾಜರಾಗಲು ಸಮನ್ಸ್ ಜಾರಿ ಮಾಡಿದೆ.

    ಪತಿ ಗುಲ್ಜಾರ್ ಮೇಲೆ ಕ್ರಿಮಿನಲ್ ಮೊಕದ್ದಮೆ ದೂರು ದಾಖಲು ಮಾಡಲು ನ್ಯಾಯಾಲಯ ಆದೇಶ ನೀಡಿದೆ. ಇನ್ನು ಈ ಸಮನ್ಸ್ ಮುಟ್ಟಿದ ಮೇಲೆ ಪತಿ ನ್ಯಾಯಾಲಯಕ್ಕೆ ಹಾಜರಾಗದೇ ಇದಲ್ಲಿ ಆತನ ಮೇಲೆ ರೆಡ್ ಕಾರ್ನರ್ ನೋಟಿಸ್ ಜಾರಿ ಆಗುವ ಸಾಧ್ಯತೆ ಇದೆ ಎಂದು ಮುಫ್ರಿನತಾಜ್ ಪರ ವಕೀಲರು ಹೇಳಿದರು.