Tag: takeoff

  • ಟೇಕ್‌ ಆಫ್‌ ವೇಳೆ ವಿಮಾನದಿಂದ ಜಾರಿ ಬಿತ್ತು 3 ಟನ್ ಚಿನ್ನ!

    ಟೇಕ್‌ ಆಫ್‌ ವೇಳೆ ವಿಮಾನದಿಂದ ಜಾರಿ ಬಿತ್ತು 3 ಟನ್ ಚಿನ್ನ!

    ಮಾಸ್ಕೋ : ಬೆಳೆಬಾಳುವ ಲೋಹಗಳನ್ನು ಹೊತ್ತೊಯ್ಯುವ ಸರಕು ವಿಮಾನ ಟೇಕ್ ಆಫ್ ಆಗುವ ವೇಳೆ ಆಕಸ್ಮಿಕವಾಗಿ ಸುಮಾರು ಮೂರು ಟನ್ ಚಿನ್ನ ಜಾರಿ ಬಿದ್ದಿರುವ ಘಟನೆ ರಷ್ಯಾದ ಯುಕುಟ್ಸ್ಕ್ ನಗರದ ಪೂರ್ವ ವಿಮಾನ ನಿಲ್ದಾಣದಲ್ಲಿ ನಡೆದಿದೆ.

    ನಿಂಬಾಸ್ ಏರ್ ಲೈನ್ಸ್ ಸಂಸ್ಥೆಯ ಆನ್-12 ಹೆಸರಿನ ಸರಕು ವಿಮಾನವು ಗುರುವಾರ ಕ್ರಾಸ್ನೊಯಾರ್ಸ್ಕ್ ಗೆ ಪ್ರಯಾಣ ಬೆಳೆಸಿತ್ತು. ಈ ವಿಮಾನದಲ್ಲಿ ಸುಮಾರು 9.3 ಟನ್ ಚಿನ್ನ ಹಾಗೂ ಇತರೇ ಬೆಳೆ ಬಾಳುವ ಲೋಹದ ವಸ್ತುಗಳನ್ನು ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ವಿಮಾನದ ಬಾಗಿಲಿನ ಲಾಕ್ ನಲ್ಲಿ ಲೋಪ ಉಂಟಾಗಿ ತೆರೆದುಕೊಂಡಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

    ಘಟನೆ ಬಳಿಕ 3.4 ಟನ್ ತೂಕದ 172 ಚಿನ್ನದ ಗಟ್ಟಿಗಳನ್ನು ರನ್ ವೇ ಯಿಂದ ಮರಳಿ ಸಂಗ್ರಹಿಸಿರುವುದಾಗಿ ವಿಮಾನ ನಿಲ್ದಾಣದ ಆಂತರಿಕ ಸಮಿತಿ ಅಧಿಕಾರಿಗಳು ಮಾಹಿತಿ ನೀಡಿದ್ದು, ಅವಘಡದ ಕುರಿತು ತನಿಖೆ ಆರಂಭಿಸಿರುವುದಾಗಿ ಹೇಳಿದ್ದಾರೆ.

    ವಿಶೇಷವಾಗಿ ಘಟನೆಯಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ. ಸದ್ಯ ವಿಮಾನ ನಿಲ್ದಾಣದ ರನ್ ವೇ ನಲ್ಲಿ ಚಿನ್ನದ ಗಟ್ಟಿಗಳು ಚದುರಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.