Tag: take off

  • ಕಾಂಡ್ಲಾದಲ್ಲಿ ಟೇಕಾಫ್‌ ವೇಳೆ ಕಳಚಿದ ಸ್ಪೈಸ್‌ಜೆಟ್ ಚಕ್ರ – ಮುಂಬೈನಲ್ಲಿ ಸೇಫ್‌ ಲ್ಯಾಂಡಿಂಗ್‌

    ಕಾಂಡ್ಲಾದಲ್ಲಿ ಟೇಕಾಫ್‌ ವೇಳೆ ಕಳಚಿದ ಸ್ಪೈಸ್‌ಜೆಟ್ ಚಕ್ರ – ಮುಂಬೈನಲ್ಲಿ ಸೇಫ್‌ ಲ್ಯಾಂಡಿಂಗ್‌

    ಮುಂಬೈ: ಕಾಂಡ್ಲಾದಿಂದ (Kandla) ಮುಂಬೈಗೆ (Mumbai) ತೆರಳುತ್ತಿದ್ದ ಸ್ಪೈಸ್‌ಜೆಟ್ ವಿಮಾನದ (Spicejet Aircraft) ಚಕ್ರ ಟೇಕಾಫ್‌ (Take Off) ಆಗುವಾಗ ಕಳಚಿಕೊಂಡ ಆಘಾತಕಾರಿ ಘಟನೆ ನಡೆದಿದೆ. ಇಷ್ಟಾದರೂ ವಿಮಾನ ಮುಂಬೈಗೆ ಪ್ರಯಾಣಬೆಳೆಸಿ, ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ.

    ಸ್ಪೈಸ್‌ಜೆಟ್ Q400 ವಿಮಾನ 75 ಪ್ರಯಾಣಿಕರನ್ನು ಹೊತ್ತು ಇಂದು (ಸೆ.12) ಮಧ್ಯಾಹ್ನ 2:39ಕ್ಕೆ ಕಾಂಡ್ಲಾ ವಿಮಾನ ನಿಲ್ದಾಣದ ರನ್‌ವೇ 23 ರಿಂದ ಟೇಕಾಫ್‌ ಆಗಿತ್ತು. ಈ ವೇಳೆ ವಿಮಾನದಿಂದ ಕಪ್ಪು ಬಣ್ಣದ ದೊಡ್ಡ ವಸ್ತು ಬೀಳುತ್ತಿರುವುದು ಕಾಣಿಸಿತ್ತು. ಪರಿಶೀಲನೆ ನಡೆಸಿದಾಗ ಅದು ವಿಮಾನದ ಚಕ್ರ ಎಂದು ತಿಳಿದುಬಂದಿತ್ತು. ಸ್ಪೈಸ್ ಜೆಟ್ ಈ ಘಟನೆಯನ್ನು ದೃಢಪಡಿಸಿದೆ. ಇದನ್ನೂ ಓದಿ: ವಿಜಯವಾಡದಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಮೂತಿಗೆ ಹಕ್ಕಿ ಡಿಕ್ಕಿ

    ವಿಮಾನವು ಮುಂಬೈ ತಲುಪುತ್ತಿದ್ದಂತೆ ಪೈಲಟ್‌ ತುರ್ತು ಪರಿಸ್ಥಿತಿ ಘೋಷಿಸಿ, ಲ್ಯಾಂಡ್‌ ಮಾಡಿದರು. ವಿಮಾನ ಸುರಕ್ಷಿತವಾಗಿ ಲ್ಯಾಂಡ್‌ ಆಗಿದ್ದು, ಅದರಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಬೊಂಬಾರ್ಡಿಯರ್ DHC8-400 ವಿಮಾನವು ಟ್ರೈಸಿಕಲ್ ಲ್ಯಾಂಡಿಂಗ್ ಗೇರ್ ವ್ಯವಸ್ಥೆಯನ್ನು ಹೊಂದಿದೆ. ನೋಸ್ ಗೇರ್‌ನಲ್ಲಿ ಎರಡು ಚಕ್ರಗಳು ಮತ್ತು ಪ್ರತಿ ಮುಖ್ಯ ಲ್ಯಾಂಡಿಂಗ್ ಗೇರ್‌ನಲ್ಲಿ ಎರಡು ಚಕ್ರಗಳಿವೆ. ಇದರಲ್ಲಿ ವಿಮಾನದ ಬಲಭಾಗದ ಲ್ಯಾಂಡಿಂಗ್‌ ಗೇರ್‌ನ ಒಂದು ಚಕ್ರ ಕಳಚಿ ಬಿದ್ದಿದೆ. ವಿಮಾನ ಲ್ಯಾಂಡ್‌ ಆಗುವಾಗ ಒಂದು ಬದಿಯ ಚಕ್ರ ಇಲ್ಲದೇ ರನ್‌ವೇಯಲ್ಲಿ ಹೋಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದನ್ನೂ ಓದಿ: ವಿಮಾನಕ್ಕೆ ಬಿಳಿ ಬಣ್ಣ ಹಚ್ಚೋದ್ಯಾಕೆ?

  • ವಿಮಾನಕ್ಕೆ ಬಂದ ವಿಶೇಷ ಅತಿಥಿಯಿಂದ 12 ತಾಸು ಲೇಟಾಯ್ತು ಟೇಕಾಫ್

    ವಿಮಾನಕ್ಕೆ ಬಂದ ವಿಶೇಷ ಅತಿಥಿಯಿಂದ 12 ತಾಸು ಲೇಟಾಯ್ತು ಟೇಕಾಫ್

    ಹೈದರಾಬಾದ್: ಭಾನುವಾರ ಹೈದರಾಬಾದ್‍ನಿಂದ ವಿಶಾಖಪಟ್ಟಣಕ್ಕೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನವು ವಿಶೇಷ ಅತಿಥಿ ಫ್ಲೈಟ್‍ನಲ್ಲಿ ಕಾಣಿಸಿಕೊಂಡಿದ್ದಕ್ಕೆ ಬರೋಬ್ಬರಿ 12 ಗಂಟೆ ಲೇಟಾಗಿ ಟೇಕಾಫ್ ಆಗಿದೆ.

    ಆ ವಿಶೇಷ ಅತಿಥಿ ಯಾರು ಎಂದು ತಿಳಿದರೆ ತಮಾಷೆ ಅನಿಸುತ್ತೆ. ಯಾಕೆಂದರೆ ವಿಮಾನ 12 ಗಂಟೆ ವಿಳಂಬವಾಗುವಂತೆ ಮಾಡಿದ್ದು ಕೇವಲ ಒಂದು ಇಲಿ. ಹೌದು. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈದರಾಬಾದ್‍ನಿಂದ ವಿಶಾಖಪಟ್ಟಣಕ್ಕೆ ತೆರಳಬೇಕಿದ್ದ ವಿಮಾನ ಇನ್ನೇನು ಟೇಕಾಫ್ ಆಗಬೇಕಿತ್ತು. ಆದರೆ ಈ ವೇಳೆ ಮೂಷಿಕರಾಜನ ಎಂಟ್ರಿ ಕಂಡು ಪ್ರಯಾಣಿಕರು ಗಲಿಬಿಲಿಗೊಂಡ ಕಾರಣ ಸಿಬ್ಬಂದಿ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದರು. ವಿಮಾನದಲ್ಲಿ ಸೇರಿದ್ದ ಒಂದೇ ಒಂದು ಇಲಿ ಹಿಡಿಯಲು ಸಿಬ್ಬಂದಿ 12 ಗಂಟೆಗಳ ಕಾಲ ಹರಸಾಹಸವನ್ನೇ ಪಟ್ಟಿದ್ದಾರೆ.

    ಬೆಳಗ್ಗೆ 6.10ಕ್ಕೆ ಹೊರಡಬೇಕಿದ್ದ ಏರ್ ಇಂಡಿಯಾದ AI-952 ವಿಮಾನ ಸಂಜೆ 5.30ಕ್ಕೆ ಟೇಕಾಫ್ ಆಗಿದೆ. ಇಲಿಯ ಎಂಟ್ರಿಯಿಂದ ಬರೋಬ್ಬರಿ 12 ಗಂಟೆ ತಡವಾಗಿ ವಿಮಾನ ಟೇಕಾಫ್ ಆಗಿದೆ. ಹೀಗಾಗಿ ಬೆಳಗ್ಗೆಯಿಂದ ಸಂಜೆಯವರೆಗೂ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಕಾಲ ಕಳೆದಿದ್ದಾರೆ. ಸಂಜೆಯ ವೇಳೆಗೆ ಕೊನೆಗೂ ಏರ್‌ಲೈನ್ಸ್ ಸಿಬ್ಬಂದಿ ವಿಮಾನದಲ್ಲಿದ್ದ ಇಲಿಯನ್ನು ಹಿಡಿದಿದ್ದೇವೆ ಎಂದು ತಿಳಿಸಿ ಪ್ರಯಾಣಿಕರನ್ನು ವಿಮಾನದಲ್ಲಿ ಹತ್ತಿಸಿಕೊಂಡು ವಿಶಾಖಪಟ್ಟಣಕ್ಕೆ ತೆರಳಿದ್ದಾರೆ. ಅಲ್ಲಿಂದ ಇದೇ ವಿಮಾಣ ದೆಹಲಿಯತ್ತ ಪ್ರಯಾಣ ಬೆಳೆಸಿದೆ.

    ಬೆಳಗ್ಗೆಯಿಂದ ಸಂಜೆಯವರೆಗೆ ಕಾದ ಪ್ರಯಾಣಿಕರು ಘಟನೆಯಿಂದ ಆಕ್ರೋಶಗೊಂಡು, ಬೇಸತ್ತು ಸಾಮಾಜಿಕ ಜಾಲತಾಣದಲ್ಲಿ ಏರ್ ಇಂಡಿಯಾ ಸಂಸ್ಥೆಯ ವಿರುದ್ಧ ಕಮೆಂಟ್, ಟ್ರೋಲ್ ಮಾಡಿಕೊಂಡಿ ಸಿಟ್ಟನ್ನು ಹೊರಹಾಕಿದ್ದಾರೆ.

  • ಮೇಲಕ್ಕೆ ಹಾರದೆ ಆತಂಕ ಸೃಷ್ಟಿಸಿದ ಸಿಎಂ ಹೆಲಿಕಾಪ್ಟರ್!

    ಮೇಲಕ್ಕೆ ಹಾರದೆ ಆತಂಕ ಸೃಷ್ಟಿಸಿದ ಸಿಎಂ ಹೆಲಿಕಾಪ್ಟರ್!

    ಬಳ್ಳಾರಿ: ಸಿಎಂ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಮಂಗಳವಾರ ಮೇಲೆ ಹಾರದ ಪರಿಣಾಮ ಕೆಲ ಕಾಲ ಆತಂಕ ಸೃಷ್ಟಿಯಾದ ಘಟನೆ ತೋರಣಗಲ್ ನಲ್ಲಿ ನಡೆಯಿತು.

    ಸಿಎಂ ಸಿದ್ದರಾಮಯ್ಯ ತೋರಣಗಲ್ ನಿಂದ ಬಾಗಲಕೋಟೆಗೆ ಹೆಲಿಕಾಪ್ಟರ್ ಮೂಲಕ ತೆರಳುತ್ತಿದ್ದರು. ಈ ವೇಳೆ ಸಿಎಂ ಹೆಲಿಕಾಪ್ಟರ್ ಹತ್ತಿದ ನಂತರ ಟೇಕ್ ಆಫ್ ಆಗಲು ವಿಳಂಬವಾಯ್ತು. ಅಲ್ಲದೇ ಹೆಲಿಕಾಪ್ಟರ್ ಟೇಕ್ ಆಫ್ ಆದ ಜಾಗದಿಂದ ಮುಂದೆ ಹೋಗಿ ನಿಂತು ಕೆಲ ಕಾಲ ನಿಂತ ಜಾಗದಲ್ಲೆ ಇತ್ತು. ಅಲ್ಲದೇ ಲ್ಯಾಂಡ್ ಆಗುವ ಸ್ಥಿತಿಯಲ್ಲಿ ಕಂಡು ಬಂದಿತು.

    ಐದು ನಿಮಿಷಗಳ ನಂತರ ಟೇಕ್ ಆಫ್ ಆಗಿ ಹಾರಾಟ ಮುಂದುವರೆಯಿತು. ಸೋಮವಾರ ಸಹ ಯಾದಗಿರಿಯಲ್ಲಿ ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಗೆ ಇಂಧನ ಕೊರತೆಯಿಂದಾಗಿ ಗಂಟೆಗಟ್ಟಲೆ ತಡವಾಗಿ ಪ್ರಯಾಣ ಆರಂಭವಾಗಿತ್ತು.