Tag: tajinder bagga

  • ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕೇಸ್ ದಾಖಲು

    ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕೇಸ್ ದಾಖಲು

    ಮುಂಬೈ: ಕೊರೊನಾ ಪಾಸಿಟಿವ್ ವರದಿಯಾಗಿದ್ದರೂ ಕೊರೊನಾ ನಿಯಮ ಉಲ್ಲಂಘಿಸಿ ಬೆಂಬಲಿಗರನ್ನು ಭೇಟಿಯಾದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಬಿಜೆಪಿ ಮುಖಂಡ ತಜೀಂದರ್ ಬಗ್ಗಾ ಪ್ರಕರಣ ದಾಖಲಿಸಿದ್ದಾರೆ.

    ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ ನಡೆಯುತ್ತಿದ್ದಂತೆ ಉದ್ಧವ್ ಠಾಕ್ರೆಗೆ ನಿನ್ನೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈ ಬಗ್ಗೆ ಸಿಎಂ ಉದ್ಧವ್ ಠಾಕ್ರೆ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಬಳಿಕ ಸಿಎಂ ಅಧಿಕೃತ ನಿವಾಸ ‘ಹರ್ಷ’ ತೊರೆದು ಸ್ವಂತ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಆಗಮಿಸಿದ್ದ ಬೆಂಬಲಿಗರನ್ನು ಉದ್ಧವ್ ಠಾಕ್ರೆ ಭೇಟಿಯಾಗಿದ್ದರು. ಇದನ್ನೂ ಓದಿ: ಯಾರು ಸ್ತ್ರೀಯರಿಗೆ ಅಪಮಾನ ಮಾಡುತ್ತಾರೋ ಅವರ ಪತನ ನಿಶ್ಚಿತ – ಕಂಗನಾ ಹಳೇ ವೀಡಿಯೋ ವೈರಲ್

    ಕೊರೊನಾ ನಿಯಮದ ಪ್ರಕಾರ ಸೋಂಕು ದೃಢಪಟ್ಟವರು ಐಸೋಲೇಷನ್‍ನಲ್ಲಿ ಇದ್ದು ಯಾರನ್ನು ಸಂಪರ್ಕ ಮಾಡಬಾರದು. ಆದರೆ ಉದ್ಧವ್ ಠಾಕ್ರೆ ಕೊರೊನಾ ನಿಯಮವನ್ನು ಮುರಿದು ಬೆಂಬಲಿಗರನ್ನು ಭೇಟಿಯಾಗಿ ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ತಜೀಂದರ್ ಬಗ್ಗಾ ಮಲಬಾರ್ ಹಿಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಜಾರಕಿಹೊಳಿ ಸಿಡಿ ಕೇಸ್‌ – ಚುನಾವಣೆ ಸಮಯದಲ್ಲೇ ಡಿಕೆಶಿಗೆ ಸಂಕಷ್ಟ ಸಾಧ್ಯತೆ

    ನಿನ್ನೆ ರಾಜಕೀಯ ಬಿಕ್ಕಟ್ಟಿನ ನಡುವೆ ಉದ್ಧವ್ ಠಾಕ್ರೆ ಫೇಸ್‍ಬುಕ್ ಲೈವ್ ಮೂಲಕ ತಮ್ಮ ನಿಲುವನ್ನು ಪ್ರಕಟಿಸಿದ್ದರು. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಾಗಿರುವುದಾಗಿ ತಿಳಿಸಿದ್ದರು. ನಮ್ಮ ಜನರಿಗೆ ನಾನು ಮುಖ್ಯಮಂತ್ರಿ ಸ್ಥಾನದಲ್ಲಿ ಇರುವುದು ಬೇಕಿಲ್ಲದಿದ್ದರೆ, ಯಾವುದೇ ಶಾಸಕರು ನಾನು ಮುಖ್ಯಮಂತ್ರಿಯಾಗಿರುವುದು ಬೇಡ ಎಂದು ಹೇಳಿದರೆ, ತಕ್ಷಣವೇ ನಾನು ರಾಜೀನಾಮೆ ಸಲ್ಲಿಸುತ್ತೇನೆ. ನಾನು ವರ್ಷ ನಿವಾಸದಿಂದ ಮಾತೋಶ್ರೀಗೆ ಮರಳುತ್ತೇನೆ ಎಂದಿದ್ದರು. ಜೊತೆಗೆ ಎರಡು ಷರತ್ತುಗಳನ್ನು ಹಾಕಿದ್ದು ತಮ್ಮ ಮುಂದೆ ಬಂದು ಶಾಸಕರು ಅಭಿಪ್ರಾಯ ತಿಳಿಸಬೇಕು. ಜೊತೆಗೆ ಶಿವಸೇನೆಯ ಮೂಲದವರೇ ಮುಂದಿನ ಮುಖ್ಯಮಂತ್ರಿ ಆಗಬೇಕೆಂಬ ಷರತ್ತಿನೊಂದಿಗೆ ತಮ್ಮ ನಿಲುವನ್ನು ಪ್ರಕಟಿಸಿದ್ದಾರೆ.

    Live Tv

  • ಬಿಜೆಪಿ ಮುಖಂಡ ತಜೀಂದರ್ ಪಾಲ್ ಸಿಂಗ್ ಬಗ್ಗಾಗೆ ಸದ್ಯಕ್ಕಿಲ್ಲ ಬಂಧನ

    ಬಿಜೆಪಿ ಮುಖಂಡ ತಜೀಂದರ್ ಪಾಲ್ ಸಿಂಗ್ ಬಗ್ಗಾಗೆ ಸದ್ಯಕ್ಕಿಲ್ಲ ಬಂಧನ

    ಚಂಡೀಗಢ: ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಬಿಜೆಪಿ ಮುಖಂಡ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರ ಬಗ್ಗೆ ಮಧ್ಯರಾತ್ರಿಯ ವಿಚಾರಣೆಯಲ್ಲಿ ಮೇ 10ರ ವರೆಗೆ ಅವರನ್ನು ಬಂಧಿಸದಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

    ಬಗ್ಗಾ ಮನವಿ ಮೇರೆಗೆ ಪ್ರಕರಣದ ಬಗೆಗಿನ ವಿಚಾರಣೆ ಮೇ 10ರಂದು ನಡೆಯಲಿದ್ದು, ಅಲ್ಲಿಯವರೆಗೆ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದೆಂದು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಆದೇಶ ನೀಡಿದೆ. ಇದನ್ನೂ ಓದಿ: ಮಸೀದಿಗಳ ಮೈಕ್ ತೆರವಿಗೆ ನಾಳೆಯೇ ಡೆಡ್‍ಲೈನ್ – ದೇಗುಲಗಳಲ್ಲಿ 3 ಬಾರಿ ಮಂತ್ರ ಘೋಷ

    ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಪಂಜಾಬ್‌ನ ಪೊಲೀಸರು ಬಿಜೆಪಿ ಮುಖಂಡ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ದೆಹಲಿಯಲ್ಲಿ ಬಂಧಿಸಿದ್ದರು. ದೆಹಲಿ ಮುಖ್ಯಮಂತ್ರಿ ಅವರಿಗೆ ಜೀವ ಬೆದರಿಕೆ ಹಾಕದ್ದ ಹಿನ್ನೆಲೆಯಲ್ಲಿ ಆಪ್ ನಾಯಕ ಸನ್ನಿಸಿಂಗ್ ಅವರು ತಜೀಂದರ್ ಪಾಲ್ ಸಿಂಗ್ ಅವರ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ವದಂತಿಗಳನ್ನು ಹರಡುತ್ತಿದ್ದಾರೆ. ಧಾರ್ಮಿಕ ಮತ್ತು ಕೋಮು ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಸೈಬರ್ ಸೆಲ್‌ನಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿಯನ್ನು ಬಂಧಿಸಿದ್ದರು. ಇದನ್ನೂ ಓದಿ: ದಡೂತಿ ದೇಹದ ಪೊಲೀಸರಿಗೆ ಬಾಡಿ ಕರಗಿಸೋ ಟಾಸ್ಕ್ – ಬೆಸ್ಟ್ ಆಫರ್ ಕೊಟ್ಟ ಎಸ್‌ಪಿ

    ಬಗ್ಗಾ ವಿರುದ್ಧ ಭಾರತೀಯ ದಂಡಸಂಹಿತೆ 153-ಎ(ಧರ್ಮ, ಜನಾಂಗ, ಸ್ಥಳ ಮುಂತಾದವುಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 505(ಯಾವುದೇ ಹೇಳಿಕೆ, ವದಂತಿ ಅಥವಾ ವರದಿ ಮಾಡುವುದು, ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು) ಹಾಗೂ 506(ಬೆದರಿಕೆ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ಇದು ಸೇಡಿನ ರಾಜಕಾರಣ: ಬಿಜೆಪಿ ಮುಖಂಡನ ಬಂಧನಕ್ಕೆ ನವಜೋತ್‌ ಸಿಧು ಕಿಡಿ

    ಇದು ಸೇಡಿನ ರಾಜಕಾರಣ: ಬಿಜೆಪಿ ಮುಖಂಡನ ಬಂಧನಕ್ಕೆ ನವಜೋತ್‌ ಸಿಧು ಕಿಡಿ

    ಚಂಡೀಗಢ: ಬಿಜೆಪಿ ಮುಖಂಡನನ್ನು ದೆಹಲಿಯಲ್ಲಿ ಪಂಜಾಬ್‌ ಪೊಲೀಸರು ಬಂಧಿಸಿರುವುದರ ವಿರುದ್ಧ ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು ಕಿಡಿಕಾರಿದ್ದಾರೆ. ಇದು ಸೇಡಿನ ರಾಜಕಾರಣ ಎಂದು ಎಎಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಪಂಜಾಬ್‌ ಪೊಲೀಸರು ಬಿಜೆಪಿ ಮುಖಂಡ ತಜೀಂದರ್‌ ಪಾಲ್‌ ಸಿಂಗ್‌ ಬಗ್ಗಾ ಅವರನ್ನು ದೆಹಲಿಯಲ್ಲಿ ಬಂಧಿಸಿದ್ದಾರೆ. ಇದಕ್ಕೆ ಕಾಂಗ್ರೆಸ್‌ ನಾಯಕ ಸಿಧು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ನಾಯಕನನ್ನು ದೆಹಲಿ ಪೊಲೀಸರಿಗೆ ಮಾತ್ರ ಹಸ್ತಾಂತರಿಸುತ್ತೇವೆ: ಹರಿಯಾಣ ಗೃಹ ಸಚಿವ

    ಈ ಕುರಿತು ಟ್ವೀಟ್‌ ಮಾಡಿರುವ ಸಿಧು, ತಜೀಂದರ್ ಬಗ್ಗಾ ಬೇರೆ ಪಕ್ಷದವರಾಗಿರಬಹುದು, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಅರವಿಂದ್ ಕೇಜ್ರಿವಾಲ್ ಮತ್ತು ಭಗವಂತ್‌ ಮಾನ್ ಅವರು ಸೇಡಿನ ರಾಜಕೀಯ ಮಾಡುತ್ತಿದ್ದಾರೆ. ವೈಯಕ್ತಿಕ ಕಾರಣಗಳಿಗಾಗಿ ಪಂಜಾಬ್‌ ಪೊಲೀಸರನ್ನು ಬಳಸಿಕೊಳ್ಳುವುದು ಮಹಾಪಾಪ. ಪಂಜಾಬ್ ಪೋಲೀಸರನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುವುದನ್ನು ನಿಲ್ಲಿಸಿ ಎಂದು ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕೆಲವರು ಮನೆಗೆ ಬಂದು ನನ್ನ ಮಗನನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಬಗ್ಗಾ ಅವರ ತಂದೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ದೂರನ್ನು ಆಧರಿಸಿ ದೆಹಲಿ ಪೊಲೀಸರು ಕಿಡ್ನಾಪ್‌ ಕೇಸ್‌ ದಾಖಲಿಸಿದ್ದರು. ಇದನ್ನೂ ಓದಿ: ಕೇಜ್ರಿವಾಲ್ ವಿರುದ್ಧ ಟೀಕೆ- ಪೊಲೀಸರಿಂದ ದೆಹಲಿ ಬಿಜೆಪಿ ಮುಖಂಡ ಅರೆಸ್ಟ್

    Bhagwant Mann

    ಬಗ್ಗಾ ಅವರನ್ನು ಪಂಜಾಬ್‌ಗೆ ಕರೆತರಲಾಗುತ್ತಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪಂಜಾಬ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದ ಬಗ್ಗಾರನ್ನು ದೆಹಲಿಯಿಂದ ಮೊಹಾಲಿಗೆ ಕರೆತರುತ್ತಿದ್ದ ವಾಹನಗಳನ್ನು ಹರಿಯಾಣದ ಕುರುಕ್ಷೇತ್ರದಲ್ಲಿ ತಡೆಹಿಡಿಯಲಾಗಿದೆ.