Tag: Tajdar Babar

  • ಹಿರಿಯ ಕಾಂಗ್ರೆಸ್ ನಾಯಕಿ ತಜ್ದರ್ ಬಾಬರ್ ಇನ್ನಿಲ್ಲ

    ಹಿರಿಯ ಕಾಂಗ್ರೆಸ್ ನಾಯಕಿ ತಜ್ದರ್ ಬಾಬರ್ ಇನ್ನಿಲ್ಲ

    ದೆಹಲಿ: ಹಿರಿಯ ಕಾಂಗ್ರೆಸ್ ನಾಯಕಿ ಮತ್ತು ದೆಹಲಿ ಪ್ರದೇಶದ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷೆ ತಜ್ದರ್ ಬಾಬರ್(85) ಶನಿವಾರ ನಿಧನರಾಗಿದ್ದಾರೆ.

    ಕಳೆದ 15-20 ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಮಾಳವೀಯ ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಇಂದು ಮುಂಜಾನೆ 5.30ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ದೆಹಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅನಿಲ್ ಕುಮಾರ್ ತಿಳಿಸಿದ್ದಾರೆ.

    ತಜ್ದರ್ ಬಾಬರ್ ಅವರು ದೆಹಲಿ ಮಾಜಿ ಮೇಯರ್ ಫರ್ಹಾದ್ ಸೂರಿಯವರ ತಾಯಿಯಾಗಿದ್ದು, ಅವರ ಅಂತಿಮ ಸಂಸ್ಕಾರವನ್ನು ಸಂಜೆ ನಿಜ್ಜಾಮುದ್ದೀನ್ ಪೂರ್ವ ಪ್ರದೇಶದ ಸ್ಮಶಾನದಲ್ಲಿ ನಡೆಸಲಾಗುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: 80 ಕಡೆ ದುರ್ಗಾಮೂರ್ತಿ ಪ್ರತಿಷ್ಠಾಪನೆಗೆ ಮನವಿ – ದಸರಾ ಮಾರ್ಗಸೂಚಿಗಾಗಿ ಎದುರುನೋಡ್ತಿರುವ ಬಿಬಿಎಂಪಿ

    ತಜ್ದರ್ ಬಾಬರ್ ಅವರು ಮಿಂಟೋ ರಸ್ತೆ ಕ್ಷೇತ್ರದಿಂದ ದೆಹಲಿ ವಿಧಾನಸಭೆಯ ಶಾಸಕರಾಗಿದ್ದರು, ನಂತರ ಅದನ್ನು ಹೊಸದಿಲ್ಲಿ ವಿಧಾನಸಭಾ ವಿಭಾಗದೊಂದಿಗೆ ವಿಲೀನಗೊಳಿಸಲಾಯಿತು. ತಜ್ದರ್ ಬಾಬರ್ ದೆಹಲಿಯ ಕಾಂಗ್ರೆಸ್ ಸಮಿತಿಯ (ಡಿಪಿಸಿಸಿ) ಮಾಜಿ ಮುಖ್ಯಸ್ಥರಾಗಿದ್ದರು.

    ಸದ್ಯ ತಜ್ದರ್ ಬಾಬರ್ ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪ ಸೂಚಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೆಹಲಿ ಜನರ ಬಗ್ಗೆ ಅವರಿಗಿದ್ದ ಕಾಳಜಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಅವರು ಕೊಟ್ಟ ಬೆಲೆಯನ್ನು ನೆನಪಿಸಿಕೊಳ್ಳುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಸೀರೆ ಖರೀದಿ ಬಗ್ಗೆ ನನಗೆ ಗೊತ್ತಿಲ್ಲ, ದುಡ್ಡು ಕೊಟ್ಟು ಬೈಸಿಕೊಳ್ಳೋದು ಇದು: ಕಾರಜೋಳ