Tag: Taj Mahal

  • ಆಕರ್ಷಣೀಯ ಪ್ರವಾಸಿ ತಾಣ – ತಾಜ್‌ಮಹಲ್‌ ಹಿಂದಿಕ್ಕಿ ಅಯೋಧ್ಯೆ ರಾಮಮಂದಿರ ನಂ.1

    ಆಕರ್ಷಣೀಯ ಪ್ರವಾಸಿ ತಾಣ – ತಾಜ್‌ಮಹಲ್‌ ಹಿಂದಿಕ್ಕಿ ಅಯೋಧ್ಯೆ ರಾಮಮಂದಿರ ನಂ.1

    ಲಕ್ನೋ: ಪ್ರವಾಸಿಗರ ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಅಯೋಧ್ಯೆ (Ayodhya) ರಾಮಮಂದಿರ (Ram Mandir) ಹೊರಹೊಮ್ಮಿದೆ. ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ತಾಣಗಳಲ್ಲಿ ಅಗ್ರ ಸ್ಥಾನದಲ್ಲಿದ್ದ ತಾಜ್‌ ಮಹಲ್‌ನ್ನು (Taj Mahal) ಹಿಂದಿಕ್ಕಿ ರಾಮಮಂದಿರ ನಂ.1 ಪಟ್ಟಕ್ಕೇರಿದೆ.

    ಉತ್ತರ ಪ್ರದೇಶಕ್ಕೆ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು, ಹೊಸ ದಾಖಲೆಯನ್ನು ಬರೆದಿದೆ. 2024ರ ಜನವರಿ-ಸೆಪ್ಟೆಂಬರ್ ನಡುವೆ 47.61 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇವರ ಪೈಕಿ ಅಯೋಧ್ಯೆಗೆ 13.55 ಮಂದಿ ಪ್ರವಾಸ ಮಾಡಿದ್ದಾರೆ. ಅಲ್ಲದೇ, 3,153 ವಿದೇಶಿ ಪ್ರವಾಸಿಗರೂ ರಾಮಮಂದಿರ ಕಣ್ತುಂಬಿಕೊಂಡಿದ್ದಾರೆ. ಇದನ್ನೂ ಓದಿ: ಅಕಸ್ಮಾತ್ ಹುಂಡಿಗೆ ಬಿದ್ದ ಐಫೋನ್ ದೇವಸ್ಥಾನದ ಪಾಲು – ವಾಪಸ್ ಕೊಡಲ್ಲ ಎಂದ ಮಂಡಳಿ

    ಇದೇ ಅವಧಿಯಲ್ಲಿ ಆಗ್ರಾದಲ್ಲಿ ತಾಜ್‌ಮಹಲ್‌ಗೆ 12.51 ಕೋಟಿ ಜನರು ಭೇಟಿ ನೀಡಿದ್ದಾರೆ. 11.59 ಕೋಟಿ ಮಂದಿ ದೇಶೀಯ ಮತ್ತು 9,24,000 ಅಂತರರಾಷ್ಟ್ರೀಯ ಪ್ರವಾಸಿಗರು ವಿಸಿಟ್‌ ಮಾಡಿದ್ದಾರೆ.

    ಪ್ರವಾಸೋದ್ಯಮ ಸಚಿವ ಜೈವೀರ್ ಸಿಂಗ್ ಅವರು, ರಾಜ್ಯದ ಗಮನಾರ್ಹ ಸಾಧನೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶವು ಕಳೆದ ವರ್ಷ 48 ಮಿಲಿಯನ್ ಪ್ರವಾಸಿಗರನ್ನು ಸ್ವಾಗತಿಸಿದೆ. ಈ ವರ್ಷ ಕೇವಲ ಒಂಬತ್ತು ತಿಂಗಳಲ್ಲಿ ಈ ಮೈಲುಗಲ್ಲು ತಲುಪಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಪ್ ಕಾರ್ನ್‌ ಮೇಲೆ 3 ರೀತಿಯ ಜಿಎಸ್‌ಟಿ – ಕೌನ್ಸಿಲ್‌ ಸಭೆಯಲ್ಲಿ ಒಪ್ಪಿಗೆ; ಯಾವುದು ದುಬಾರಿ?

    ಲಕ್ನೋ ಮೂಲದ ಹಿರಿಯ ಟ್ರಾವೆಲ್ ಪ್ಲಾನರ್ ಮೋಹನ್ ಶರ್ಮಾ, ಅಯೋಧ್ಯೆಯನ್ನು ಭಾರತದಲ್ಲಿನ ಆಧ್ಯಾತ್ಮಿಕ ಪ್ರವಾಸೋದ್ಯಮದ ಕೇಂದ್ರಬಿಂದು ಎಂದು ಬಣ್ಣಿಸಿದ್ದಾರೆ. ಧಾರ್ಮಿಕ ಪ್ರವಾಸಗಳಿಗಾಗಿ ಬುಕಿಂಗ್‌ನಲ್ಲಿ ಶೇ.70 ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

  • ಭಾರೀ ಮಳೆಯಿಂದ ಬಿರುಕುಬಿಟ್ಟ ತಾಜ್‌ಮಹಲ್ – ಬಿರುಕಿನಲ್ಲಿ ಸಸಿ ಬೆಳೆದಿರುವ ಫೋಟೋ ವೈರಲ್

    ಭಾರೀ ಮಳೆಯಿಂದ ಬಿರುಕುಬಿಟ್ಟ ತಾಜ್‌ಮಹಲ್ – ಬಿರುಕಿನಲ್ಲಿ ಸಸಿ ಬೆಳೆದಿರುವ ಫೋಟೋ ವೈರಲ್

    – ಗುಮ್ಮಟದ ಉತ್ತರ ಭಾಗದಲ್ಲಿ ಅಮೃತಶಿಲೆಯ ಮಧ್ಯೆ ಬಿರುಕು

    ನವದೆಹಲಿ: ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್‌ಮಹಲ್‌ನ (TajMahal) ಕೇಂದ್ರ ಗುಮ್ಮಟದ ಅಮೃತಶಿಲೆಯ ಮಧ್ಯೆ ಬಿರುಕು ಕಾಣಿಸಿಕೊಂಡಿದೆ. ಈ ಕುರಿತು ಪ್ರವಾಸಿಗರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವನ್ನು ಹಂಚಿಕೊಂಡಿದ್ದು, ಕಳವಳ ವ್ಯಕ್ತಪಡಿಸಿದ್ದಾರೆ.

    ಕಳೆದ ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ತೀವ್ರ ಮಳೆಯಾದ ಕಾರಣ ತಾಜ್‌ಮಹಲ್‌ನ ಕೇಂದ್ರ ಗುಮ್ಮಟದ ಅಮೃತಶಿಲೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಜೊತೆಗೆ ಆ ಬಿರುಕಿನಲ್ಲಿ ಸಸಿ ಬೆಳೆದಿರುವ ಫೋಟೋ ಕೂಡ ವೈರಲ್ ಆಗಿದೆ.ಇದನ್ನೂ ಓದಿ: ನಿಮ್ಮ ಮಗಳಿಗೆ ಮದುವೆ ಆಗಲ್ಲ- ಸಂಬಂಧಿಕರ ಕೊಂಕು ಮಾತಿನ ಬಗ್ಗೆ ಮಾತನಾಡಿದ ತೃಪ್ತಿ

    ಗುಮ್ಮಟದ ಉತ್ತರ ಭಾಗದಲ್ಲಿರುವ ಅಮೃತಶಿಲೆಯ ಮಧ್ಯೆ ಬಿರುಕು ಕಾಣಿಸಿಕೊಂಡಿದೆ. ಆ ಬಿರುಕಿನ ಮೂಲಕ ಮಳೆ ನೀರು ಸೋರಿಕೆಯಾಗಿ ಕೆಳಗಿರುವ ಸಮಾಧಿಯನ್ನು ತಲುಪುತ್ತಿವೆ.

    ಡ್ರೋನ್ ಬಳಸಿ ಗುಮ್ಮಟ ಪರೀಕ್ಷೆ ಮಾಡಿದಾಗ ಅಮೃತಶಿಲೆಯ ತಳದಲ್ಲಿ ತುಕ್ಕು ಹಿಡಿದಿರುವುದು ಕಂಡುಬಂದಿದೆ. ತುಕ್ಕು ಹಿಡಿದಿರುವುದರಿಂದ ಬಿರುಕು ಉಂಟಾಗಿದ್ದು, ನೀರು ಸೋರಿಕೆಗೆ ಕಾರಣವಾಗಿದೆ.

    ಭವಿಷ್ಯದ ದೃಷ್ಟಿಯಿಂದ ನೀರಿನ ಸೋರಿಕೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು. ಗುಮ್ಮಟದ ಮೇಲ್ಮೈ ಒಣಗಿದಂತೆ, ದುರಸ್ತಿ ಕಾರ್ಯವನ್ನು ಪ್ರಾರಂಭಿಸಲಾಗುವುದು. ಸ್ವಲ್ಪ ಕಾಲವಕಾಶ ತೆಗೆದುಕೊಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ್ರು; ಒಡಿಶಾ ಠಾಣೆಯಲ್ಲಿ ಅನುಭವಿಸಿದ ಯಾತನೆಯ ಕತೆ ಹೇಳಿದ ಸೇನಾಧಿಕಾರಿಯ ಭಾವಿ ಪತ್ನಿ

    ಟೂರಿಸ್ಟ್ ಗೈಡ್ ಫೆಡರೇಶನ್ ಆಫ್ ಇಂಡಿಯಾದ (Tourist Guide Federation Of India) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಕೀಲ್ ಚೌಹಾಣ್ ಮಾತನಾಡಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ತಾಜ್‌ಮಹಲ್ ಸಂರಕ್ಷಣೆಗೆ ವಾರ್ಷಿಕವಾಗಿ 4 ಕೋಟಿ ರೂ. ವ್ಯಯಿಸುತ್ತದೆ. ಇಂತಹ ಚಿತ್ರಗಳು ಸ್ಮಾರಕದ ಖ್ಯಾತಿಗೆ ಮಸಿ ಬಳಿಯುತ್ತವೆ. ಮಳೆಗಾಲದ ನಂತರ ಸಂರಕ್ಷಣಾ ಕಾರ್ಯಕ್ಕೆ ಕರೆ ನೀಡಲಾಗುವುದು ಮತ್ತು ಈಗ ಕಾಣಿಸಿಕೊಂಡಿರುವ ಸಸ್ಯ ಕಳೆದ 15 ದಿನಗಳಲ್ಲಿ ಬೆಳೆದಿದ್ದು, ತಕ್ಷಣವೇ ತೆಗೆದುಹಾಕಲಾಗುವುದು ಎಂದು ತಿಳಿಸಿದ್ದಾರೆ.

  • ಭಾರೀ ಮಳೆ; ತಾಜ್‌ಮಹಲ್‌ನ ಮುಖ್ಯ ಗುಂಬಜ್‌ನಲ್ಲಿ ಸೋರಿಕೆ – ವೀಡಿಯೋ ವೈರಲ್‌

    ಭಾರೀ ಮಳೆ; ತಾಜ್‌ಮಹಲ್‌ನ ಮುಖ್ಯ ಗುಂಬಜ್‌ನಲ್ಲಿ ಸೋರಿಕೆ – ವೀಡಿಯೋ ವೈರಲ್‌

    ಲಕ್ನೋ: ಭಾರೀ ಮಳೆ ಹಿನ್ನೆಲೆಯಲ್ಲಿ ತಾಜ್‌ಮಹಲ್‌ನ (Taj Mahal) ಮುಖ್ಯ ಗುಂಬಜ್‌ನಲ್ಲಿ ಮಳೆ ನೀರು ಸೋರಿಕೆಯಾಗುತ್ತಿದೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಉತ್ತರ ಪ್ರದೇಶದ ಆಗ್ರಾದ (Agra) ತಾಜ್‌ಮಹಲ್‌ನ ಮುಖ್ಯ ಗುಮ್ಮಟವು ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನೀರಿನ ಸೋರಿಕೆಗೆ ಸಾಕ್ಷಿಯಾಗಿದೆ. ಇದು ಆವರಣದಲ್ಲಿರುವ ಉದ್ಯಾನವನ್ನು ಮುಳುಗಿಸಿದೆ. ಇದನ್ನೂ ಓದಿ: ಪ್ರಧಾನಿ ಮನೆಗೆ ಹೊಸ ಅತಿಥಿ ಆಗಮನ – ಕರುವನ್ನು ಎತ್ತಿ ಮುದ್ದಾಡಿದ ಮೋದಿ

    ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಅಧಿಕಾರಿಯೊಬ್ಬರು, ತಾಜ್ ಮಹಲ್‌ನ ಮುಖ್ಯ ಗುಮ್ಮಟದಲ್ಲಿ ಸೋರಿಕೆಯಾಗಿದೆ. ಆದರೆ ಯಾವುದೇ ಹಾನಿ ಇಲ್ಲ ಎಂದು ತಿಳಿಸಿದ್ದಾರೆ.

    ನಾವು ತಾಜ್ ಮಹಲ್‌ನ ಮುಖ್ಯ ಗುಮ್ಮಟದಲ್ಲಿ ಸೋರಿಕೆಯನ್ನು ಗಮನಿಸಿದ್ದೇವೆ. ಪರಿಶೀಲನೆ ನಡೆಸಿದಾಗ ಸೋರಿಕೆಯಿಂದ ಉಂಟಾಗಿರುವುದು ಕಂಡುಬಂದಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. ನಾವು ಡ್ರೋನ್ ಕ್ಯಾಮೆರಾವನ್ನು ಬಳಸಿಕೊಂಡು ಗುಮ್ಮಟದ ಸ್ಥಿತಿಯನ್ನು ಪರಿಶೀಲಿಸಿದ್ದೇವೆ ಎಂದು ಎಎಸ್‌ಐನ ರಾಜ್‌ಕುಮಾರ್‌ ಪಾಟೀಲ್‌ ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಗಣೇಶನನ್ನು ಕಾಂಗ್ರೆಸ್‌ ಸರ್ಕಾರ ಪೊಲೀಸ್‌ ವ್ಯಾನ್ ಕಂಬಿ ಹಿಂದೆ ಹಾಕಿದೆ:‌ ಮೋದಿ ವಾಗ್ದಾಳಿ

    ಆಗ್ರಾದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ನಗರದಾದ್ಯಂತ ಜಲಾವೃತವಾಗಿದೆ. ರಾಷ್ಟ್ರೀಯ ಹೆದ್ದಾರಿಯೊಂದು ಜಲಾವೃತಗೊಂಡಿದೆ. ಬೆಳೆಗಳು ಮುಳುಗಿವೆ.

  • ತಾಜ್ ಮಹಲ್‌ಗೆ ಈಗ ಮೆಟ್ರೋ ಸವಾರಿ; ಆಗ್ರಾ ಮೆಟ್ರೋ ಕಾರಿಡಾರ್ ಉದ್ಘಾಟಿಸಿದ ಮೋದಿ

    ತಾಜ್ ಮಹಲ್‌ಗೆ ಈಗ ಮೆಟ್ರೋ ಸವಾರಿ; ಆಗ್ರಾ ಮೆಟ್ರೋ ಕಾರಿಡಾರ್ ಉದ್ಘಾಟಿಸಿದ ಮೋದಿ

    ಲಕ್ನೋ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ಬುಧವಾರ) ಆಗ್ರಾ ಮೆಟ್ರೋ ಕಾರಿಡಾರ್‌ (Agra Metro Corridor) ಉದ್ಘಾಟನೆ ಮಾಡಿದ್ದಾರೆ. ತಾಜ್‌ ಮಹಲ್‌ಗೆ ಈಗ ಮೆಟ್ರೋ ಸವಾರಿ ಮಾಡಬಹುದಾಗಿದೆ.

    ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಮತ್ತು ಇತರ ನಾಯಕರು ತಾಜ್ ಮಹಲ್ ನಿಲ್ದಾಣದಿಂದ ಆಗ್ರಾದ ತಾಜ್ ಮಹಲ್ ಈಸ್ಟ್ ಸ್ಟೇಷನ್‌ಗೆ ಉದ್ಘಾಟನಾ ರೈಲು ಸವಾರಿ ಮಾಡಿದ್ದಾರೆ. ಇದನ್ನೂ ಓದಿ: ದೇಶದ ಮೊದಲ ನದಿಯೊಳಗಿನ ಮೆಟ್ರೋ ಸುರಂಗ ಮಾರ್ಗ ಲೋಕಾರ್ಪಣೆ

    6 ಕಿಮೀ ಕಾರಿಡಾರ್‌ನಲ್ಲಿ ಮೆಟ್ರೋ ಸೇವೆ ಗುರುವಾರದಿಂದ ಪ್ರಯಾಣಿಕರಿಗೆ ಲಭ್ಯವಿದೆ. ತಾಜ್ ಮಹಲ್ ಪೂರ್ವ ನಿಲ್ದಾಣ, ಕ್ಯಾಪ್ಟನ್ ಶುಭಂ ಗುಪ್ತಾ ನಿಲ್ದಾಣ, ಫತೇಹಾಬಾದ್ ರಸ್ತೆ ನಿಲ್ದಾಣ, ತಾಜ್ ಮಹಲ್ ನಿಲ್ದಾಣ ಮತ್ತು ಮಂಕಮೇಶ್ವರ ದೇವಸ್ಥಾನ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

    ತಾಜ್ ಮಹಲ್ ನಿಲ್ದಾಣದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಆಗ್ರಾ ಮೆಟ್ರೋವು ಸ್ಥಳೀಯರು ಮತ್ತು ನಗರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ವಿಶ್ವದರ್ಜೆಯ ಸಾರ್ವಜನಿಕ ಸಾರಿಗೆ ಸೌಲಭ್ಯ ಒದಗಿಸುತ್ತದೆ. ಆಗ್ರಾ ಮೆಟ್ರೋವನ್ನು ಆಧುನಿಕ ಸೌಲಭ್ಯಗಳ ಕೇಂದ್ರವನ್ನಾಗಿ ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೋದಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಸಂದೇಶ್‌ಖಾಲಿ ಮಹಿಳೆಯರಿದ್ದ ಬಸ್‌ಗಳಿಗೆ ತಡೆ

    ಉತ್ತರ ಪ್ರದೇಶದ ಅತ್ಯಂತ ಹಳೆಯ ನಗರಗಳಲ್ಲಿ ಆಗ್ರ ಒಂದಾಗಿದೆ. ಇದು ‘ಬ್ರಜ್ ಭೂಮಿ’ಯ ಭಾಗವಾಗಿದೆ. ಈ ನಗರವು ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯದ ಕಥೆಗಳೊಂದಿಗೆ ಸಂಬಂಧ ಹೊಂದಿದೆ ಎಂದು ಯೋಗಿ ಆದಿತ್ಯನಾಥ್‌ ಸ್ಮರಿಸಿದ್ದಾರೆ.

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2020, ಡಿಸೆಂಬರ್ 7 ರಂದು ಮೆಟ್ರೋದ ಶಂಕುಸ್ಥಾಪನೆ ನೆರವೇರಿಸಿದ್ದರು. ಇದು 23 ತಿಂಗಳಲ್ಲಿ ಪೂರ್ಣಗೊಂಡಿದೆ. ಇದನ್ನೂ ಓದಿ: ಅಮೇಥಿಯಿಂದ ರಾಹುಲ್‌ ಗಾಂಧಿ, ರಾಯ್‌ಬರೇಲಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ?

  • ‘ತಾಜ್ ಮಹಲ್’ ಚಿತ್ರಕ್ಕೆ 16ರ ಸಂಭ್ರಮ : ನಿರ್ದೇಶಕ ಆರ್.ಚಂದ್ರು ಸಿನಿಯಾನ

    ‘ತಾಜ್ ಮಹಲ್’ ಚಿತ್ರಕ್ಕೆ 16ರ ಸಂಭ್ರಮ : ನಿರ್ದೇಶಕ ಆರ್.ಚಂದ್ರು ಸಿನಿಯಾನ

    ಣ್ಣ ಹಳ್ಳಿಯಿಂದ ಬಂದು, ಇಂದು ‘ಕಬ್ಜ’ ಎಂಬ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಭಾರತದಾದ್ಯಂತ  ಹೆಸರು‌ ಮಾಡಿರುವ ನಿರ್ದೇಶಕ ಆರ್.ಚಂದ್ರು (R. Chandru) ಅವರ ಸಿನಿಯಾನಕ್ಕೆ ಈಗ ಹದಿನಾರನೇ ವಸಂತ. ಅವರ ನಿರ್ದೇಶನದ ಚೊಚ್ಚಲ ಸಿನಿಮಾ ‘ತಾಜ್ ಮಹಲ್’ (Taj Mahal) ತೆರೆಕಂಡು ಹದಿನೈದು ವರ್ಷ ಪೂರ್ಣಗೊಳಿಸಿದೆ.

    ಆರ್.ಚಂದ್ರು ನಿರ್ದೇಶನದ ಮೊದಲ ಚಿತ್ರ ‘ತಾಜ್ ಮಹಲ್’ ತೆರೆಕಂಡು ಜುಲೈ 25ಕ್ಕೆ ಹದಿನೈದು ವರ್ಷಗಳಾಗಿವೆ. (2008 ಜುಲೈ 25 ಈ ಚಿತ್ರ ಬಿಡುಗಡೆಯಾಗಿತ್ತು) ಶಿವಶಂಕರ್ ‌ರೆಡ್ಡಿ ನಿರ್ಮಿಸಿದ್ದ ಹಾಗೂ ಅಜೇಯ್ ರಾವ್ (Ajay Rao) ಹಾಗೂ ಪೂಜಾ ಗಾಂಧಿ (Pooja Gandhi) ನಾಯಕ, ನಾಯಕಿಯಾಗಿ ನಟಿಸಿದ್ದ ಈ ಚಿತ್ರ ಕರ್ನಾಟಕದಾದ್ಯಂತ ಭರ್ಜರಿ ಯಶಸ್ಸು ಕಂಡಿತ್ತು. ಇದನ್ನೂ ಓದಿ:ತಮಿಳು ‘ಜೈಲರ್’ ವಿರುದ್ದ ಮಲಯಾಳಂ ‘ಜೈಲರ್’ ರಿಲೀಸ್: ರಜನಿ ಸಿನಿಮಾಗೆ ಟಕ್ಕರ್

    ಅನೇಕ ಚಿತ್ರಮಂದಿರಗಳಲ್ಲಿ 200ಕ್ಕೂ ಅಧಿಕ ದಿನಗಳ ಕಾಲ ಈ ಸಿನಿಮಾ ಪ್ರದರ್ಶನವಾಗಿತ್ತು. ತಮ್ಮ ಮೊದಲ ನಿರ್ದೇಶನದ ಚಿತ್ರದಲ್ಲೇ ಆರ್.ಚಂದ್ರು ಡಬಲ್ ಸೆಂಚುರಿ ಬಾರಿಸಿದ್ದರು. ನಂತರದ ದಿನಗಳಲ್ಲಿ ಆರ್. ಚಂದ್ರು,  ತಾಜ್ ಮಹಲ್  ಚಂದ್ರು ಅಂತಲೇ ಪ್ರಸಿದ್ದರಾದರು. ಈ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಅಭಿಮಾನ್ ರಾಯ್ ಅವರಿಗೆ ರಾಜ್ಯಪ್ರಶಸ್ತಿ ಸಹ ಬಂದಿತ್ತು. ಈ ಚಿತ್ರ 2010 ರಲ್ಲಿ ತಾಜ್ ಮಹಲ್ ಶೀರ್ಷಿಕೆಯಲ್ಲೇ ತೆಲುಗಿನಲ್ಲೂ ಬಿಡುಗಡೆಯಾಗಿತ್ತು.

    ಆನಂತರದ ದಿನಗಳಲ್ಲಿ ಆರ್.ಚಂದ್ರು ಕನ್ನಡದ ಹೆಸರಾಂತ ನಾಯಕ ನಟರ ಸಿನಿಮಾಗಳನ್ನು ನಿರ್ದೇಶಿಸಿ ಕನ್ನಡ ಚಿತ್ರರಂಗಕ್ಕೆ ಸೂಪರ ಹಿಟ್ ಚಿತ್ರಗಳನ್ನು ನೀಡಿದರು. ನಿರ್ಮಾಪಕರಾಗಿಯೂ ಆರ್ ಚಂದ್ರು ಜನಪ್ರಿಯರಾದರು.

    ತಾಜ್ ಮಹಲ್ ನಿಂದ ಇತ್ತೀಚೆಗೆ ತೆರೆಕಂಡ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ತನಕ ಆರ್. ಚಂದ್ರು ಯಶಸ್ಸಿನ ಸಿನಿಮಾ ಯಾನ ಮುಂದುವರೆದುಕೊಂಡು ಬಂದಿದೆ.  ತಮ್ಮ ಸಿನಿ ಜರ್ನಿಗೆ 15 ವರ್ಷಗಳು ತುಂಬಿರುವ ಈ ಸುಸಂದರ್ಭದಲ್ಲಿ ಆರ್‌ ಚಂದ್ರು ತಮಗೆ ಸಹಕಾರ ನೀಡಿರುವ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರೇಮಿಗಳ ಸ್ವರ್ಗ ತಾಜ್‌ಮಹಲ್ ಭೇಟಿಗೂ ಕೋವಿಡ್ ಪರೀಕ್ಷೆ ಕಡ್ಡಾಯ

    ಪ್ರೇಮಿಗಳ ಸ್ವರ್ಗ ತಾಜ್‌ಮಹಲ್ ಭೇಟಿಗೂ ಕೋವಿಡ್ ಪರೀಕ್ಷೆ ಕಡ್ಡಾಯ

    ಲಕ್ನೋ: ವಿಶ್ವಪ್ರಸಿದ್ಧ ಪ್ರವಾಸಿ ತಾಣ, ಪ್ರೇಮಿಗಳ ಸ್ವರ್ಗ ತಾಜ್‌ಮಹಲ್‌ಗೆ (Taj Mahal) ಭೇಟಿ ನೀಡಬಯಸುವ ಪ್ರವಾಸಿಗರಿಗೂ (Tourists) ಕೋವಿಡ್ ಪರೀಕ್ಷೆ (Covid Test) ಕಡ್ಡಾಯಗೊಳಿಸಲಾಗಿದೆ ಎಂದು ಆಗ್ರಾದ (Agra) ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

    ದೇಶದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನೇತೃತ್ವದಲ್ಲಿ ಹೈವೋಲ್ಟೇಜ್ ಸಭೆ ನಡೆಸಲಾಯಿತು. ಸಭೆಯ ಬಳಿಕ ಆರೋಗ್ಯಾಧಿಕಾರಿಗಳು ನಿರ್ಣಯ ಪ್ರಕಟಿಸಿದ್ದಾರೆ. ಇದನ್ನೂ ಓದಿ: ಹೊಸ ವರ್ಷ.. ಹಳೇ ವೈರಸ್‌; ಚೀನಾದಲ್ಲಿ ಮತ್ತೆ ಕೊರೊನಾ ಆರ್ಭಟ – ಭಾರತದ ಕಥೆ ಏನು?

    ಆಗ್ರಾದ ತಾಜ್‌ಮಹಲ್ ವೀಕ್ಷಿಸಲು ದೇಶ, ವಿದೇಶ ಪ್ರವಾಸಿಗರು ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಹಾಗಾಗಿ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭೇಟಿಗೂ ಮುನ್ನ ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ಪರೀಕ್ಷೆ ಹೆಚ್ಚಿಸಿ.. ಎಲ್ಲರೂ ಮಾಸ್ಕ್ ಧರಿಸಿ – ಮೋದಿ ಸಲಹೆ

    ಅಲ್ಲದೇ ಸೋಂಕು ಹರಡುವುದನ್ನು ತಡೆಯಲು ಆರೋಗ್ಯ ಇಲಾಖೆ ಈಗಾಗಲೇ ಪರೀಕ್ಷೆಗಳನ್ನು ಪ್ರಾರಂಭಿಸಿದೆ. ಹೈ ಅಲರ್ಟ್ ಘೋಷಣೆ ಮಾಡಿರುವುದರಿಂದ ಎಲ್ಲ ಸಂದರ್ಶಕರಿಗೂ ಕೋವಿಡ್ ಟೆಸ್ಟಿಂಗ್ ಕಡ್ಡಾಯಗೊಳಿಸಲಾಗಿದೆ ಎಂದು ಆಗ್ರಾ ಜಿಲ್ಲಾ ಆರೋಗ್ಯಾಧಿಕಾರಿ ಅನಿಲ್ ಸತ್ಸಂಗಿ ತಿಳಿದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತೆರಿಗೆ, ನೀರಿನ ಬಿಲ್ ಪಾವತಿಸಿ – ತಾಜ್ ಮಹಲ್‍ಗೆ ನೋಟಿಸ್

    ತೆರಿಗೆ, ನೀರಿನ ಬಿಲ್ ಪಾವತಿಸಿ – ತಾಜ್ ಮಹಲ್‍ಗೆ ನೋಟಿಸ್

    ಲಕ್ನೋ: ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರನ್ನು ಭಾರತಕ್ಕೆ ಸೆಳೆಯುವ ಆಗ್ರಾದ ತಾಜ್ ಮಹಲ್ (Taj Mahal) ಕಟ್ಟಡಕ್ಕೆ ಆಸ್ತಿ ತೆರಿಗೆ (Property Tax) ಹಾಗೂ ನೀರಿನ ಬಿಲ್‍ಗಳನ್ನು (Water Bill) ಪಾವತಿಸುವಂತೆ ಮೊದಲ ಬಾರಿಗೆ ಯುಪಿ ಸರ್ಕಾರ (Uttar Pradesh Government) ನೋಟಿಸ್ ನೀಡಿದೆ.

    ಯೋಗಿ ಆದಿತ್ಯನಾಥ್ (Yogi Adityanath) ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ವಿವಿಧ ಘಟಕಗಳು 320 ವರ್ಷಗಳ ಇತಿಹಾಸ ಇರುವ ಆಗ್ರಾದ ತಾಜ್ ಮಹಲ್ ಹಾಗೂ ಆಗ್ರಾ ಕೋಟೆ ಎರಡಕ್ಕೂ ಬಾಕಿ ಬಿಲ್‍ಗಳನ್ನು ಪಾವತಿಸುವಂತೆ ನೋಟಿಸ್ ನೀಡಿದೆ. ಬಿಲ್‍ಗಳ ಮೊತ್ತ 1 ಕೋಟಿಗೂ ಹೆಚ್ಚು ಬಾಕಿ ಇದೆ ಎಂದು ಎಎಸ್‍ಐಗೆ ತಿಳಿಸಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‍ಐ) ಅಧಿಕಾರಿಗಳು ಇದು, ತಪ್ಪು, ಶೀಘ್ರದಲ್ಲೇ ಸರಿಪಡಿಸಲಾಗುವುದು ಎಂದು ತಿಳಿಸಿದರು.

    ಈ ಬಗ್ಗೆ ಆಗ್ರಾದ ಎಎಸ್‍ಐನ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ ರಾಜ್‍ಕುಮಾರ್ ಪಟೇಲ್ ಮಾತನಾಡಿ, ಇಲ್ಲಿಯವರೆಗೆ 3 ನೋಟಿಸ್‍ಗಳು ಬಂದಿದ್ದು, ತಾಜ್‍ಮಹಲ್‍ಗೆ ಎರಡು ಮತ್ತು ಆಗ್ರಾ ಕೋಟೆಗೆ ಒಂದು ಎಂದು ದೃಢಪಡಿಸಿದ್ದಾರೆ.

    ತಾಜ್ ಮಹಲ್‍ಗೆ ಸಂಬಂಧಿಸಿದಂತೆ, ನಮಗೆ ಎರಡು ನೋಟಿಸ್‍ಗಳು ಬಂದಿವೆ. ಒಂದು ಆಸ್ತಿ ತೆರಿಗೆ ಮತ್ತು ಇನ್ನೊಂದು ನೀರು ಸರಬರಾಜು ಇಲಾಖೆಯಿಂದಾಗಿದೆ. ಒಟ್ಟು 1 ಕೋಟಿಗೂ ಅಧಿಕ ರೂ.ಗಳನ್ನು ಎಎಸ್‍ಐನಿಂದ ಬೇಡಿಕೆಯಿಡಲಾಗಿದೆ. ಆದರೆ ಅಂತಹ ತೆರಿಗೆಗಳು ಸ್ಮಾರಕಗಳಿಗೆ ಅನ್ವಯಿಸುವುದಿಲ್ಲವಾದ್ದರಿಂದ ಇದು ತಪ್ಪಾಗಿರಬಹುದು ಎಂದು ಹೇಳಿದರು. ಇದನ್ನೂ ಓದಿ: ಡಿಕೆಶಿ ಮನೆಯಲ್ಲಿಯೇ ED, CBI ಕಚೇರಿ ಓಪನ್‌ ಮಾಡಿ: ರಣದೀಪ್ ಸಿಂಗ್ ಸುರ್ಜೇವಾಲಾ

    ಮೊದಲನೆಯದಾಗಿ, ಸ್ಮಾರಕದ ಆವರಣಗಳಿಗೆ ಆಸ್ತಿ ತೆರಿಗೆ ಅಥವಾ ಮನೆ ತೆರಿಗೆ ಅನ್ವಯಿಸುವುದಿಲ್ಲ. ಉತ್ತರ ಪ್ರದೇಶದಲ್ಲೂ ಈ ಕಾನೂನು ಇದೆ. ಜೊತೆಗೆ ನಾವು ಯಾವುದೇ ವಾಣಿಜ್ಯ ಉದ್ದೇಶಗಳಿಗಾಗಿ ನೀರನ್ನು ಬಳಸುತ್ತಿಲ್ಲ. ಬದಲಿಗೆ ತಾಜ್ ಸಂಕೀರ್ಣದ ಒಳಗೆ, ಹುಲ್ಲುಹಾಸುಗಳಿಗಾಗಿ, ಸಾರ್ವಜನಿಕ ಸೇವೆಗಾಗಿ ಬಳಸುತ್ತಿದ್ದೇವೆ. ಇದರಿಂದಾಗಿ ಬಾಕಿಯ ಪ್ರಶ್ನೆಯೇ ಇಲ್ಲ ಎಂದು ಉತ್ತರ ನೀಡಿದ್ದಾರೆ. ಇದನ್ನೂ ಓದಿ: ಗಡಿ ವಿವಾದ – ಮಹಾರಾಷ್ಟ್ರ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯಿಲ್ಲ: ದೇವೇಂದ್ರ ಫಡ್ನವಿಸ್

    Live Tv
    [brid partner=56869869 player=32851 video=960834 autoplay=true]

  • ತಾಜ್ ಮಹಲ್ ನೋಡಲು ಬಂದಿದ್ದವಳ ಮೇಲೆ ಕೋತಿ ದಾಳಿ- ಗಳಗಳನೆ ಅತ್ತ ಸ್ಪೇನ್ ಸುಂದರಿ

    ತಾಜ್ ಮಹಲ್ ನೋಡಲು ಬಂದಿದ್ದವಳ ಮೇಲೆ ಕೋತಿ ದಾಳಿ- ಗಳಗಳನೆ ಅತ್ತ ಸ್ಪೇನ್ ಸುಂದರಿ

    ಲಕ್ನೋ: ವಿಶ್ವ ಪ್ರಸಿದ್ಧ ತಾಜ್ ಮಹಲ್ (Taj Mahal) ವೀಕ್ಷಣೆಗೆ ಬರುವ ಪ್ರವಾಸಿಗರ (Tourist) ಸಂಖ್ಯೆ ಹೆಚ್ಚಾಗುತ್ತಿದ್ದು, ದೇಶ ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಿದ್ದಾರೆ. ಹಾಗೆಯೇ ಸ್ಪೇನ್‌ನಿಂದ (Spain) ಬಂದಿದ್ದ ಮಹಿಳೆಯೊಬ್ಬರ ಮೇಲೆ ಕೋತಿ ದಾಳಿ ನಡೆಸಿದೆ.

    ತಾಜ್‌ಮಹಲ್ (Taj Mahal) ಮುಂಭಾಗದ ರಾಯಲ್ ಗೇಟ್ ಬಳಿ ಫೋಟೋ ತೆಗೆಯಲೆಂದು ನಿಂತಿದ್ದ ಸ್ಪೇನ್ ಮಹಿಳೆ (Spanish woman) ಮೇಲೆ ಕೋತಿ ಎರಗಿ ದಾಳಿ ಮಾಡಿದೆ. ಈ ವೇಳೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಹಿಳೆ ಸ್ಥಳದಲ್ಲೇ ಗಳಗಳನ್ನೆ ಅತ್ತಿದ್ದಾಳೆ. ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಚಂಡೀಗಢ ವಿವಿ ಬಳಿಕ ಐಐಟಿ ಬಾಂಬೆ- ಹಾಸ್ಟೆಲ್ ಸ್ನಾನಗೃಹದಲ್ಲಿ ಇಣುಕಿದ ಕ್ಯಾಂಟೀನ್ ಸಿಬ್ಬಂದಿ ಬಂಧನ

    2019ರಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ತಾಜ್ ಮಹಲ್‌ನ ರಕ್ಷಣೆಯ ಜವಾಬ್ದಾರಿ ವಹಿಸಿತ್ತು. ಈ ವೇಳೆ ಕೋತಿಗಳನ್ನು (Monkey) ಓಡಿಸಲು ಸಿಂಗಲ್‌ಶಾಟ್ ಗನ್ ಬಳಕೆ ಮಾಡಲಾಗುತ್ತಿತ್ತು. ಇದಕ್ಕೆ ಪ್ರಾಣಿಪ್ರಿಯರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಇದನ್ನೂ ಓದಿ: ಸೂಪರ್ ಸ್ಟಾರ್ ಸ್ಮೃತಿ ಮಂಧಾನಗೆ ICC ರ‍್ಯಾಂಕಿಂಗ್ ಪಟ್ಟಿಯಲ್ಲಿ 2ನೇ ಸ್ಥಾನ

    ಪ್ರವಾಸಿಗರ ಮೇಲೆ ಕೋತಿಗಳು ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಸಮಸ್ಯೆ ಬಗೆಹರಿಸುವಂತೆ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಭಧ್ರತಾ ಸಿಬ್ಬಂದಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆಗ್ರಾ ನೋಡಲು ಬಂದ ವಿದೇಶಿ ಪ್ರವಾಸಿಗನಿಗೆ ಆಟೋ ಚಾಲಕ, ಸಹಚರರಿಂದ ಪಂಗನಾಮ

    ಆಗ್ರಾ ನೋಡಲು ಬಂದ ವಿದೇಶಿ ಪ್ರವಾಸಿಗನಿಗೆ ಆಟೋ ಚಾಲಕ, ಸಹಚರರಿಂದ ಪಂಗನಾಮ

    ಲಕ್ನೋ: ಆಗ್ರಾದ ತಾಜ್ ಮಹಲ್ (Taj Mahal ) ನೋಡಲೆಂದು ರಿಕ್ಷಾ ಹತ್ತಿದ 25 ವರ್ಷದ ಬೆಲ್ಜಿಯಂ ಪ್ರವಾಸಿಗ (Belgian tourist) ಬಳಿ ಆಟೋ ಚಾಲಕ(Auto Driver) ಮತ್ತು ಆತನ ಇಬ್ಬರು ಸಹಚರರು ದರೋಡೆ ಮಾಡಿದ್ದಾರೆ.

    ಪ್ರವಾಸಿಗನ ಬಳಿಯಿಂದ 8000 ಯುರೋ ನಗದು, ಒಂದು ಲ್ಯಾಪ್‍ಟಾಪ್ (Laptop), ಒಂದು ಕ್ಯಾಮೆರಾ (Camera), ಒಂದು ಮೊಬೈಲ್ ಫೋನ್ (Mobile Phone) ಮತ್ತು ಒಂದು ಜೊತೆ ಶೂಗಳನ್ನು (Shoes) ಲಪಟಾಯಿಸಿದ್ದಾರೆ. ಇದೀಗ ಮೂವರು ಆರೋಪಿಗಳ ವಿರುದ್ಧ ಆಗ್ರಾದ ಪ್ರವಾಸೋದ್ಯಮ ಪೊಲೀಸ್ ಠಾಣೆಯಲ್ಲಿ (Tourism Police Station) ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹರಿಯುವ ನೀರಿನಲ್ಲಿ ಸಿಲುಕಿದ ತಾಯಿ, ಮಗ – ಗುಜುರಿ ವ್ಯಾಪಾರಿಯಿಂದ ರಕ್ಷಣೆ

    ಪ್ರವಾಸಿಗನನ್ನು ಸೇವಿ ಎಂದು ಗುರುತಿಸಲಾಗಿದ್ದು, ಆಗ್ರಾ ಕ್ಯಾಂಟ್ ರೈಲ್ವೇ ನಿಲ್ದಾಣದ (Agra Cantt Railway Station) ಬಳಿಯ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ಆಟೋ ಚಾಲಕ ಮತ್ತು ಆತನ ಇಬ್ಬರು ಸಹಚರರು (Two Associates) ತನ್ನ ಬಳಿ ದರೋಡೆ ಮಾಡಿದ್ದಾರೆ ಎಂದು ದೂರಿನಲ್ಲಿ ಸೇವಿ ಉಲ್ಲೇಖಿಸಿರುವುದಾಗಿ ಪ್ರವಾಸೋದ್ಯಮ ಪೊಲೀಸ್ ಠಾಣೆಯ ಉಸ್ತುವಾರಿ ಜೈ ಸಿಂಗ್ ಪರಿಹಾರ್ (Jai Singh Parihar) ತಿಳಿಸಿದ್ದು, ಇದೀಗ ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ವಿಧಾನಸಭೆ ಉಪ ಸಭಾಪತಿ ಆನಂದ ಮಾಮನಿ ಆರೋಗ್ಯದಲ್ಲಿ ಏರುಪೇರು – ಆಸ್ಪತ್ರೆಗೆ ದಾಖಲು

    ಪ್ರವಾಸಿಗ ಗೋವಾ(Goa) ಮೂಲದವರಾಗಿದ್ದು, ಬೆಲ್ಜಿಯಂನಲ್ಲಿ (Belgium) ಕೆಲಸ ಮಾಡುತ್ತಿದ್ದಾರೆ. ನಾನು ಭಾರತದ ನಿವಾಸಿ ಮತ್ತು ಗೋವಾದಲ್ಲಿ ಹುಟ್ಟಿದ್ದೇನೆ. ಆಗ್ರಾ ಪೊಲೀಸರ ಬಗ್ಗೆ ನನಗೆ ಹೆಮ್ಮೆ ಇದೆ. ಏಕೆಂದರೆ ಅವರು ನನಗೆ ತುಂಬಾ ಸಹಾಯ ಮಾಡುತ್ತಿದ್ದಾರೆ. ಅವರು ಇಷ್ಟೊಂದು ಸಹಾಯ ಮಾಡುತ್ತಾರೆ ಎಂದು ನನಗೆ ತಿಳಿದಿರಲಿಲ್ಲ. ನಾನು ಬೆಳಗ್ಗೆಯಿಂದ ಹಸಿದಿದ್ದೇನೆ ಮತ್ತು ಅವರು ನನಗೆ ಊಟ ಮತ್ತು ಹೋಟೆಲ್ ವ್ಯವಸ್ಥೆ ಮಾಡಿಕೊಟ್ಟರು. ಅವರು ನನ್ನನ್ನು ಅತಿಥಿಯಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಸೇವಿ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತಾಜ್‌ಮಹಲ್ ನಿರ್ಮಿಸಲು ಶಹಜಾನ್ ಕೊಟೆಷನ್ ಕೇಳಿಲ್ಲ – ನಿಯಮ ಉಲ್ಲಂಘನೆ ಆರೋಪಕ್ಕೆ ಗೋವಾ ಸಚಿವ ಸಮರ್ಥನೆ

    ತಾಜ್‌ಮಹಲ್ ನಿರ್ಮಿಸಲು ಶಹಜಾನ್ ಕೊಟೆಷನ್ ಕೇಳಿಲ್ಲ – ನಿಯಮ ಉಲ್ಲಂಘನೆ ಆರೋಪಕ್ಕೆ ಗೋವಾ ಸಚಿವ ಸಮರ್ಥನೆ

    ಪಣಜಿ: ಗೋವಾದಲ್ಲಿನ ಆಕರ್ಷಕ ಕಲಾ ಅಕಾಡೆಮಿ ಕಟ್ಟಡದ ನವೀಕರಣ ಕಾಮಗಾರಿ ಹಂಚಿಕೆಗೆ ಇಲಾಖೆ ಕೈಗೊಂಡ ಕ್ರಮವನ್ನು ಸಮರ್ಥಿಸುವ ಭರದಲ್ಲಿ ಗೋವಾ ಕಲಾ ಮತ್ತು ಸಂಸ್ಕೃತಿ ಸಚಿವ ಗೋವಿಂದ್ ಗೌಡೆ ತಾಜ್‌ಮಹಲ್ ಅನ್ನು ಉದಾಹರಣೆಯಾಗಿ ತೆಗೆದುಕೊಂಡು ತಮ್ಮ ಇಲಾಖೆಯ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

    ಮೊಘಲ್ ಚಕ್ರವರ್ತಿ ಷಹಜಹಾನ್ ಆಗ್ರಾದಲ್ಲಿ ತಾಜ್ ಮಹಲ್ ನಿರ್ಮಿಸುವಾಗ ಯಾವುದೇ ಕೊಟೆಷನ್ ಆಹ್ವಾನಿಸಿರಲಿಲ್ಲ ಎಂದು ಸಚಿವ ಗೋವಿಂದ್ ಗೌಡೆ ಉದಾಹರಣೆ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿ MLAಗೆ ಮಣ್ಣಿನ ಸ್ನಾನ ಮಾಡಿಸಿದ ಮಹಿಳೆಯರ ಗುಂಪು – ಕಾರಣ ಕೇಳಿ ನೆಟ್ಟಿಗರು ಶಾಕ್

    ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನದ ಪ್ರಶ್ನೋತ್ತರ ಸಮಯದಲ್ಲಿ ಮಾತನಾಡಿದ ಗೋವಾ ಫಾರ್ವರ್ಡ್ ಪಾರ್ಟಿ (GFP) ಶಾಸಕ ವಿಜಯ್ ಸರ್ದೇಸಾಯಿ, ರಾಜ್ಯ ರಾಜಧಾನಿಯ ಕಲಾ ಅಕಾಡೆಮಿ ಕಟ್ಟಡವನ್ನು 49 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಿಸಲು ಕಾರ್ಯಾದೇಶ ನೀಡುವ ವೇಳೆ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ. ಜೊತೆಗೆ ಕೇಂದ್ರ ಲೋಕೋಪಯೋಗಿ ಇಲಾಖೆಯ ಕೈಪಿಡಿಯನ್ನು ಉಲ್ಲಂಘಿಸಿ ಇಲಾಖೆಯು ಟೆಕ್ಟನ್ ಬಿಲ್ಡ್ಕಾನ್ಸ್ ಪ್ರೈವೇಟ್ ಲಿಮಿಟೆಡ್‌ಗೆ ನವೀಕರಣದ ಕೆಲಸ ನೀಡಿದೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಸರ್ಕಾರಿ ನೌಕರರು ಕಚೇರಿಗಳಲ್ಲಿ ಜೀನ್ಸ್-ಟೀ ಶರ್ಟ್ ಧರಿಸುವಂತಿಲ್ಲ- ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ

    ಇದಕ್ಕೆ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡ ಗೋವಿಂದ್ ಗುಡೆ ಅವರು, `ತಾಜ್ ಮಹಲ್ ಎಂದೆಂದಿಗೂ ಶಾಶ್ವತ ಮತ್ತು ಸುಂದರವಾಗಿದೆ. ಏಕೆಂದರೆ ಶಹಜಹಾನ್ ಅದನ್ನು ಆಗ್ರಾದಲ್ಲಿ ನಿರ್ಮಿಸಲು ಉಲ್ಲೇಖವನ್ನೂ ಕೇಳಲಿಲ್ಲ. ತಾವು ಆಗ್ರಾದ ತಾಜ್‌ಮಹಲ್‌ಗೆ ಭೇಟಿ ನೀಡಿರಬಹುದು. ಇದರ ನಿರ್ಮಾಣವು 1632 ರಲ್ಲಿ ತಾಜ್‌ಮಹಲ್ ನಿರ್ಮಾಣ ಕಾರ್ಯ ಆರಂಭವಾಯಿತು ಮತ್ತು 1653ರಲ್ಲಿ ಪೂರ್ಣಗೊಂಡಿತು ಎಂದು ಹೇಳಿದ್ದಾರೆ.

    ನೀವೇಕೆ ಹೀಗೆ ಯೋಚಿಸುತ್ತೀರಿ? ಶಹಜಾನ್ ಅಂದು ಯಾವುದೇ ಕೊಟೆಷನ್ ಆಹ್ವಾನಿಸಿರಲಿಲ್ಲ. ಆದರೂ ತಾಜ್‌ಮಹಲ್ 390 ವರ್ಷ ಕಳೆದರೂ ಸುಂದರವಾಗಿ ಮತ್ತು ಸುರಕ್ಷಿತವಾಗಿಯೇ ಉಳಿದಿದೆ ಎಂದು ಹೇಳಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ

    Live Tv
    [brid partner=56869869 player=32851 video=960834 autoplay=true]