Tag: Taj Hotel

  • ಮುಂಬೈ ತಾಜ್‌ ಹೋಟೆಲ್‌, ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ – ಉತ್ತರ ಪ್ರದೇಶದಲ್ಲಿ ಲೊಕೇಶನ್‌ ಪತ್ತೆ!

    ಮುಂಬೈ ತಾಜ್‌ ಹೋಟೆಲ್‌, ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ – ಉತ್ತರ ಪ್ರದೇಶದಲ್ಲಿ ಲೊಕೇಶನ್‌ ಪತ್ತೆ!

    ಮುಂಬೈ: ಇಲ್ಲಿನ ತಾಜ್‌ ಹೋಟೆಲ್‌ ಮತ್ತು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸಲಾಗಿದೆ (Bomb Threat) ಎಂದು ಮುಂಬೈ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಬೆದರಿಕೆ ಕರೆ ಬಂದಿದೆ.

    ಬೆದರಿಕೆ ಕರೆ ಬಂದ ಹಿನ್ನೆಲೆ ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ದಳ, ಶ್ವಾನ ದಳದೊಂದಿಗೆ ಪೊಲೀಸರು (Mumbai Police) ಸ್ಥಳಕ್ಕೆ ದೌಡಾಯಿಸಿ ತೀವ್ರ ತಪಾಸಣೆ ನಡೆಸಿದ್ದಾರೆ. ಈ ವೇಳೆ ಅನುಮಾನಾಸ್ಪದವಾದ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ. ದೂರವಾಣಿ ಕರೆಯ ಲೊಕೇಶನ್‌ ಉತ್ತರ ಪ್ರದೇಶದಲ್ಲಿ (Uttar Pradesh) ಪತ್ತೆಯಾಗಿದೆ ಎಂದಿರುವ ಪೊಲೀಸರು ಕಿಡಿಗೇಡಿಗಳಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ರಾಹುಲ್‌ ಪ್ರಚಾರದ ವೇಳೆ ಕುಸಿದ ವೇದಿಕೆ

    ಇತ್ತೀಚೆಗಷ್ಟೇ ದೆಹಲಿಯ ಸುಮಾರು 130 ಶಾಲೆಗಳಿಗೆ ಬಾಂಬ್‌ ಬೆದರಿಕೆ ಬಂದಿತ್ತು. ಇದಾದ ಎರಡು ದಿನಗಳ ನಂತರ ಜೈಪುರದ ಶಾಲೆಗಳಿಗೂ ಬಾಂಬ್‌ ಬೆದರಿಕೆಯ ಇಮೇಲ್‌ ಬಂದಿತ್ತು. ಸದ್ಯ ಮುಂಬೈ ತಾಜ್‌ ಹೋಟೆಲ್‌ನಲ್ಲಿ (Taj Hotel) ಬಾಂಬ್‌ ಇರಿಸಿರುವುದಾಗಿ ಬೆದರಿಕೆ ಕರೆ ಬಂದಿರುವುದು 2008ರಲ್ಲಿ ನಡೆದ ಮುಂಬೈ ದಾಳಿಯನ್ನೇ ನೆನಪಿಸಿದೆ. ಇದನ್ನೂ ಓದಿ: ಪ್ರಣಾಳಿಕೆ ಭರವಸೆಯಿಂದಾಗುವ ಆರ್ಥಿಕ ಲಾಭ ಅಭ್ಯರ್ಥಿಯ ಭ್ರಷ್ಟಾಚಾರವಲ್ಲ – ಜಮೀರ್‌ಗೆ ಸುಪ್ರೀಂ ರಿಲೀಫ್

    ನೆನಪಿದೆಯಾ ಆ ಕರಾಳ ದಿನ..?
    2008ರ ನವೆಂಬರ್ 26 ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ 10 ಲಷ್ಕರ್-ಎ-ತೈಬಾ ಭಯೋತ್ಪಾದಕರು ಪ್ರವೇಶಿಸಿದ್ದರು. 60 ಗಂಟೆಗಳಿಗೂ ಹೆಚ್ಚು ಕಾಲ ಮುತ್ತಿಗೆ ಹಾಕಿ, ಭಯೋತ್ಪಾದಕರು ಸರಣಿ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಗಳನ್ನ ನಡೆಸಿ 166 ಜನರನ್ನು ಹತ್ಯೆಗೈದಿದ್ದರು. 300ಕ್ಕೂ ಹೆಚ್ಚು ಜನರನ್ನ ಗಾಯಗೊಳಿಸಿದ್ದರು. ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ವ್ಯಾಪಾರ ಮತ್ತು ವಸತಿ ಸಂಕೀರ್ಣ, ಲಿಯೋಪೋಲ್ಡ್ ಕೆಫೆ, ತಾಜ್ ಹೋಟೆಲ್ ಮತ್ತು ಒಬೆರಾಯ್ ಟ್ರೈಡೆಂಟ್ ಹೋಟೆಲ್‌ಗಳಲ್ಲಿ ದಾಳಿ ನಡೆಸಲಾಗಿತ್ತು. ಇದನ್ನೂ ಓದಿ: ಕೇಜ್ರಿವಾಲ್‌ಗೆ ಕ್ಯಾನ್ಸರ್ ಗಂಭೀರ ಹಂತದಲ್ಲಿಯೇ?- ಜಾಮೀನು ವಿಸ್ತರಣೆ ಅರ್ಜಿಯ ಕುರಿತು ಅತಿಶಿ ಹೇಳಿದ್ದೇನು? 

  • ಇಬ್ಬರು ಪಾಕಿಸ್ತಾನಿಗಳು ತಾಜ್ ಹೋಟೆಲ್ ಸ್ಫೋಟಿಸಲಿದ್ದಾರೆ! – ಮುಂಬೈ ಪೊಲೀಸರಿಗೆ ಬೆದರಿಕೆ ಕರೆ

    ಇಬ್ಬರು ಪಾಕಿಸ್ತಾನಿಗಳು ತಾಜ್ ಹೋಟೆಲ್ ಸ್ಫೋಟಿಸಲಿದ್ದಾರೆ! – ಮುಂಬೈ ಪೊಲೀಸರಿಗೆ ಬೆದರಿಕೆ ಕರೆ

    ಮುಂಬೈ: ತಾಜ್ ಹೋಟೆಲ್ (Taj Hotel) ಅನ್ನು ಸ್ಫೋಟಿಸಲು ಇಬ್ಬರು ಪಾಕಿಸ್ತಾನಿಗಳು ನಗರಕ್ಕೆ ಬರಲಿದ್ದಾರೆ ಎಂದು ಮುಂಬೈ ಪೊಲೀಸರಿಗೆ (Mumnai Police) ಗುರುವಾರ ಬೆದರಿಕೆ ಕರೆ (Threatening Call) ಬಂದಿದೆ.

    ಮುಂಬೈ ಪೊಲೀಸ್‌ನ ಮುಖ್ಯ ನಿಯಂತ್ರಣ ಕೊಠಡಿಗೆ ಅನಾಮಧೇಯ ಕರೆ ಬಂದಿದೆ. ಪಾಕಿಸ್ತಾನದ ಇಬ್ಬರು ವ್ಯಕ್ತಿಗಳು ಸಮುದ್ರ ಮಾರ್ಗದ ಮೂಲಕ ಭಾರತ ಭೂಪ್ರದೇಶ ಪ್ರವೇಶಿಸಿ ನಗರದ ಸುಪ್ರಸಿದ್ಧ ಹೋಟೆಲ್ ಅನ್ನು ಸ್ಫೋಟಿಸಲಿದ್ದಾರೆ ಎಂದು ಬೆದರಿಕೆ ಕರೆ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಕರೆ ಮಾಡಿದ ವ್ಯಕ್ತಿ ತನ್ನನ್ನು ಮುಖೇಶ್ ಸಿಂಗ್ ಎಂದು ಪರಿಚಯಿಸಿಕೊಂಡಿದ್ದಾನೆ. ಆದರೆ ಆತನ ನಿಜ ಹೆಸರು ಜಗದಂಬ ಪ್ರಸಾಸ್ ಸಿಂಗ್ ಆಗಿದ್ದು, ಆತ ಉತ್ತರ ಪ್ರದೇಶದ ಗೊಂಡಾ ಮೂಲದ ವ್ಯಕ್ತಿಯಾಗಿದ್ದಾನೆ. ಪ್ರಸ್ತುತ ಆತ ಸಾಂತಾಕ್ರೂಜ್‌ನಲ್ಲಿ ವಾಸವಿದ್ದಾನೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್‍ನ್ಯೂಸ್- ಇಂದಿನಿಂದ ಹೆಚ್ಚುವರಿ ಸರ್ವಿಸ್

    ಬೆದರಿಕೆ ಕರೆ ಬಳಿಕ ನಗರ ಪೊಲೀಸರು ಎಚ್ಚರವಾಗಿದ್ದು, ತನಿಖೆ ಆರಂಭಿಸಿದ್ದಾರೆ. ಮುಂಬೈನ ಕೊಲಾಬಾ ಪ್ರದೇಶದಲ್ಲಿರುವ ತಾಜ್ ಹೋಟೆಲ್ 2008ರಲ್ಲಿ ನಗರದಲ್ಲಿ ನಡೆದ ಉಗ್ರರ ದಾಳಿಗೆ ಗುರಿಯಾಗಿತ್ತು. ಈ ಹಿಂದೆಯೂ ಹೋಟೆಲ್‌ಗೆ ಇದೇ ರೀತಿಯ ಬೆದರಿಕೆ ಕರೆಗಳು ಬಂದಿವೆ. ಇದನ್ನೂ ಓದಿ: ಇಂದಿನಿಂದ ಟೋಲ್ ದರ ಏರಿಕೆ ಬಿಸಿ- ವಾಹನ ಸವಾರರ ಆಕ್ರೋಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಂಬೈ ದಾಳಿ ವೇಳೆ ನಾನೂ ಹೋಟೆಲ್‌ನಲ್ಲಿದ್ದೆ: ಪಾರಾದ ಥ್ರಿಲ್ಲಿಂಗ್ ಘಟನೆ ವಿವರಿಸಿದ ಅದಾನಿ

    ಮುಂಬೈ ದಾಳಿ ವೇಳೆ ನಾನೂ ಹೋಟೆಲ್‌ನಲ್ಲಿದ್ದೆ: ಪಾರಾದ ಥ್ರಿಲ್ಲಿಂಗ್ ಘಟನೆ ವಿವರಿಸಿದ ಅದಾನಿ

    ಮುಂಬೈ: 2008ರ ನವೆಂಬರ್ 26ರಂದು ಮುಂಬೈನ ತಾಜ್ ಹೋಟೆಲ್‌ನಲ್ಲಿ (Taj Hotel) ನಡೆದ ಉಗ್ರರ ದಾಳಿ (Terrorist Attack) ವೇಳೆ ನಾನು ಕೂಡಾ ಅಲ್ಲೇ ಇದ್ದೆ. ನನ್ನನ್ನು ಹೋಟೆಲ್ ಸಿಬ್ಬಂದಿ ಸುರಕ್ಷಿತವಾಗಿ ಹಿಂದಿನ ಬಾಗಿಲಿನಿಂದ ಹೊರಗೆ ಕರೆದುಕೊಂಡು ಹೋಗದಿದ್ದರೆ ಉಗ್ರರ ಗುಂಡಿಗೆ ನಾನೂ ಬಲಿಯಾಗುತ್ತಿದ್ದೆ ಎಂದು ಏಷ್ಯಾದ ನಂಬರ್ 1, ವಿಶ್ವದ ಮೂರನೇ ಶ್ರೀಮಂತ, ಕೈಗಾರಿಕೋದ್ಯಮಿ ಗೌತಮ್ ಅದಾನಿ (Gautam Adani) ಅವರು ಸ್ಫೋಟಕ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

    ಖಾಸಗಿ ವಾಹಿನಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ 14 ವರ್ಷ ಹಿಂದಿನ ಕಹಿ ಘಟನೆಯನ್ನು (Mumbai Attack) ಮೆಲುಕು ಹಾಕಿದ ಅದಾನಿ ಅಲ್ಲಿಂದ ಹೇಗೆ ಪಾರಾದರು ಎಂಬ ವಿಚಾರವನ್ನು ಬಹಿರಂಗಡಿಸಿದ್ದಾರೆ. ತಾಜ್ ಹೋಟೆಲ್ ಮೇಲೆ 10 ಗಂಟೆಗಳ ಕಾಲ ಭೀಕರ ದಾಳಿ ನಡೆದರೂ ತಾವು ಸುರಕ್ಷಿತವಾಗಿ ಅಲ್ಲಿಂದ ಹೊರ ಬಂದಿರುವುದು ಮರು ಜನ್ಮವೇ ಸರಿ ಎಂದು ಬಣ್ಣಿಸಿದ್ದಾರೆ.

    ವಿಶೇಷ ಟಿವಿ ಸಂದರ್ಶನದಲ್ಲಿ ಮಾತನಾಡಿದ ಅದಾನಿ, ದುಬೈ ಮೂಲದ ನನ್ನ ಸ್ನೇಹಿತರೊಂದಿಗೆ ತಾಜ್ ಹೋಟೆಲ್‌ನಲ್ಲಿ ವ್ಯಾಪಾರದ ಬಗೆಗಿನ ಸಭೆ ನಡೆಸುತ್ತಿದ್ದೆ. ಈ ವೇಳೆಯೇ ಹೋಟೆಲ್ ದಾಳಿಗೊಳಗಾಗಿತ್ತು. ಹೋಟೆಲ್ ಮೇಲೆ ದಾಳಿಯಾಗಿದ್ದಾಗ ನಾನು ಕೂಡಾ ಭಯೋತ್ಪಾದಕರನ್ನು ನೋಡಿದ್ದಾಗಿ ತಿಳಿಸಿದ್ದಾರೆ.

    ಅಂದು ನಾನು ದುಬೈನಿಂದ ಮುಂಬೈಗೆ ಬಂದಿದ್ದು, ಸ್ನೇಹಿತರೊಂದಿಗೆ ಮೀಟಿಂಗ್ ಅನ್ನು ಮುಗಿಸಿದ್ದೆ. ಬಿಲ್ ಪಾವತಿಸಿದ ಬಳಿಕ ನಾನು ಹೋಟೆಲ್‌ನಿಂದ ನಿರ್ಗಮಿಸಲು ಹೊರಟಿದ್ದೆ. ಆದರೆ ನನ್ನ ಕೆಲವು ಸ್ನೇಹಿತರು ಮತ್ತೊಂದು ಸುತ್ತಿನ ಸಭೆ ನಡೆಸಲು ನನ್ನನ್ನು ಕೇಳಿದ್ದರು. ಹೀಗಾಗಿ ನಾನು ಹೋಟೆಲ್‌ನಲ್ಲಿ ಮತ್ತೆ ಉಳಿದುಕೊಳ್ಳಲು ನಿರ್ಧರಿಸಿದ್ದೆ.

    ಒಂದು ಲೋಟ ಕಾಫಿ ಕುಡಿದು 2ನೇ ಸುತ್ತಿನ ಸಭೆ ಪ್ರಾರಂಭಿಸಲಿದ್ದೆವು. ಅಷ್ಟರಲ್ಲಿ ಅನಿರೀಕ್ಷಿತವಾಗಿ ಹೋಟೆಲ್ ಭಯೋತ್ಪಾದಕರ ದಾಳಿಗೆ ಒಳಗಾಗಿರುವುದು ತಿಳಿದುಬಂತು. ಕೆಲವು ನಿಮಿಷಗಳ ಬಳಿಕ ಹೋಟೆಲ್ ಸಿಬ್ಬಂದಿಯೊಬ್ಬರು ನನ್ನ ಬಳಿ ಬಂದು ತಮ್ಮನ್ನು ಹಿಂಬಾಲಿಸುವಂತೆ ಹೇಳಿದರು. ನಾನು ಅದರಂತೆಯೇ ಮಾಡಿದೆ. ಅವರು ನನ್ನನ್ನು ಅಡುಗೆ ಮನೆಗೆ ಕರೆದುಕೊಂಡು ಹೋಗಿ, ಹಿಂಬದಿಯ ಬಾಗಿಲಿನಿಂದ ಹೊರ ಬರುವಂತೆ ಮಾಡಿದರು. ಇದನ್ನೂ ಓದಿ: 22 ರಾಜ್ಯಗಳಲ್ಲಿ ಬಿಸಿನೆಸ್‌ ಮಾಡ್ತಿದ್ದೇವೆ; ಎಲ್ಲವನ್ನೂ ಬಿಜೆಪಿ ಜೊತೆ ಮಾಡ್ತಿಲ್ಲ – ಗೌತಮ್‌ ಅದಾನಿ

    ಅಂದು ಹೋಟೆಲ್ ಸಿಬ್ಬಂದಿ ಸಹಾಯದಿಂದ ಬದುಕುಳಿದೆ. ನಾನು ಸಭೆಯಲ್ಲಿ ಕುಳಿತುಕೊಳ್ಳದೇ ಹೋಗಿದ್ದರೆ ಎಲ್ಲರಂತೆ ನಾನೂ ಬಾಲ್ಕನಿಯಲ್ಲಿ ಓಡಾಡಬೇಕಿತ್ತೇನೋ? ಈ ವೇಳೆ ಭಯೋತ್ಪಾದಕರು ನನಗೆ ಎದುರಾಗಿ ಅವರ ದಾಳಿಗೆ ನಾನೂ ಬಲಿಯಾಗುತ್ತಿದ್ದೆನೇನೋ! ಅಂದು ನಮ್ಮ ರಕ್ಷಣೆ ಮಾಡಿದ ಹೋಟೆಲ್ ಸಿಬ್ಬಂದಿಯಂತಹವರು ಸಿಗುವುದೇ ಬಹು ಅಪರೂಪ. ನಿಜವಾಗಿಯೂ ತಾಜ್ ಹೋಟೆಲ್‌ನ ಸಿಬ್ಬಂದಿ ಅತ್ಯಂತ ಒಳ್ಳೆಯವರು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    2008ರ ನವೆಂಬರ್ 26 ರಂದು 10 ಪಾಕಿಸ್ತಾನಿ ಭಯೋತ್ಪಾದಕರು ಸಮುದ್ರ ಮಾರ್ಗವಾಗಿ ಮುಂಬೈ ಆಗಮಿಸಿ ಪ್ರಸಿದ್ಧ ಪಂಚತಾರಾ ತಾಜ್ ಹೋಟೆಲ್ ಮೇಲೆ ದಾಳಿ ನಡೆಸಿದ್ದರು. ಘಟನೆಯಲ್ಲಿ 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನರು ಸಾವನ್ನಪ್ಪಿದ್ದರು. ಹಲವಾರು ಗಾಯಗೊಂಡಿದ್ದರು. ಕೋಟ್ಯಂತರ ಮೌಲ್ಯದ ಆಸ್ತಿಯನ್ನೂ ಉಗ್ರರು ಹಾನಿಗೊಳಿಸಿದ್ದರು. ಇದನ್ನೂ ಓದಿ: ಟಿ20 ಕ್ರಿಕೆಟ್‍ನಲ್ಲಿ ವಿಸ್ಫೋಟಕ ಆಟ – ವಿಶ್ವ ದಾಖಲೆ ಬರೆದ SKY

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪತ್ರಕರ್ತ ಕ್ಲಿಕ್ಕಿಸಿದ ಫೋಟೋದಿಂದ ಉಗ್ರ ಕಸಬ್‍ಗೆ ಗಲ್ಲು – ದಾಳಿ ಬಗ್ಗೆ ಫೋಟೋಗ್ರಾಫರ್ ಮಾತು

    ಪತ್ರಕರ್ತ ಕ್ಲಿಕ್ಕಿಸಿದ ಫೋಟೋದಿಂದ ಉಗ್ರ ಕಸಬ್‍ಗೆ ಗಲ್ಲು – ದಾಳಿ ಬಗ್ಗೆ ಫೋಟೋಗ್ರಾಫರ್ ಮಾತು

    ಮುಂಬೈ: ಇಂದಿಗೆ ಮುಂಬೈನಲ್ಲಿ ದಾಳಿ ಆಗಿ 11 ವರ್ಷ. ಈ ಘಟನೆಯಲ್ಲಿ 166 ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಸಿಕ್ಕಿಬಿದ್ದ ಉಗ್ರ ಅಜ್ಮಲ್ ಕಸಬ್‍ನನ್ನು 2012ರಲ್ಲಿ ಗಲ್ಲಿಗೇರಿಸಲಾಗಿತ್ತು. ಉಗ್ರ ಕಸಬ್‍ನನ್ನು ಗಲ್ಲಿಗೇರಿಸುವಲ್ಲಿ ಪತ್ರಕರ್ತರೊಬ್ಬರು ಕ್ಲಿಕ್ಕಿಸಿದ ಫೋಟೋವೊಂದು ಮುಖ್ಯ ಪಾತ್ರವಹಿಸಿತ್ತು.

    2008, ನವೆಂಬರ್ 28ರಂದು ಮುಂಬೈನ ತಾಜ್ ಹೋಟೆಲ್‍ಗೆ ಉಗ್ರರು ನುಗ್ಗಿ ದಾಳಿ ಮಾಡಿದ್ದರು. ಅಂದು ಮುಂಬೈನಲ್ಲಿ ಫೈರಿಂಗ್ ಶಬ್ದ ಕೇಳಿಸುತ್ತಿತ್ತು. ಜನರನ್ನು ಮನೆಗಳಲ್ಲಿಯೇ ಬಂಧಿಸಲಾಗುತ್ತಿತ್ತು. ಪೊಲೀಸರ ವಾಹನ, ಅಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನದ ಸೈರನ್ ಶಬ್ದ ಪ್ರತಿ ಬೀದಿಗಳಲ್ಲಿ ಕೇಳಿಸುತಿತ್ತು. ಉಗ್ರರು ಹೋಟೆಲ್‍ಗೆ ನುಗ್ಗಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಪತ್ರಕರ್ತರು ಘಟನೆಯ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದರು. ಅದರಲ್ಲಿ ಫೋಟೋ ಜರ್ನಲಿಸ್ಟ್ ಸೆಬಾಸ್ಟಿಯನ್ ಡಿಸೋಜಾ ಕೂಡ ಒಬ್ಬರು.

    ಸೆಬಾಸ್ಟಿಯನ್ ಡಿಸೋಜಾ ರೈಲ್ವೆ ನಿಲ್ದಾಣದ ಬಳಿಯಿರುವ ತಮ್ಮ ಕಚೇರಿಯಲ್ಲಿ ಇದ್ದರು. ಉಗ್ರರು ದಾಳಿ ನಡೆಸಿದ್ದಾರೆ ಎಂಬ ವಿಷಯ ತಿಳಿದ ತಕ್ಷಣ ಯಾವುದೇ ರಕ್ಷಣೆ ಇಲ್ಲದೆ ಫೋಟೋ ಕ್ಲಿಕ್ಕಿಸಲು ತಮ್ಮ ಕ್ಯಾಮೆರಾ ಹಾಗೂ ಲೆನ್ಸ್ ತೆಗೆದುಕೊಂಡು ಹೋಗಿದ್ದರು. ಸೆಬಾಸ್ಟಿಯನ್ ಅವರನ್ನು ‘ಸೇಬಿ’ ಎಂದು ಗುರುತಿಸುತ್ತಾರೆ. ಅವರು ಕ್ಲಿಕ್ಕಿಸಿದ ಫೋಟೋ ಹಾಗೂ ಸಾಕ್ಷ್ಯಗಳು 26/11 ಪ್ರಕರಣದ ವಿಚಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಈ ಸಾಕ್ಷಿಗಳಿಂದ 2012ರಲ್ಲಿ ಕಸಬ್‍ನನ್ನು ಗಲ್ಲಿಗೇರಿಸಲಾಯಿತು.

    ಸೇಬಿ 2012ರಲ್ಲಿ ನಿವೃತ್ತಿ ಪಡೆದಿದ್ದು, ಈಗ ಅವರು ಗೋವಾದಲ್ಲಿ ವಾಸಿಸುತ್ತಿದ್ದಾರೆ. ಈ ಘಟನೆಯನ್ನು ಮರೆಯಬೇಕು ಎಂದು ಸೇಬಿ ಹೇಳುತ್ತಾರೆ. ಅಲ್ಲದೆ ನಾನು ಪ್ಲಾಟ್‍ಫಾರಂನಲ್ಲಿ ನಿಂತಿದ್ದ ರೈಲಿನ ಬೋಗಿ ಬಳಿ ಓಡಿ ಹೋಗಿ ಫೋಟೋ ಕ್ಲಿಕ್ಕಿಸಲು ಯತ್ನಿಸಿದೆ. ಆದರೆ ನನಗೆ ಅಲ್ಲಿ ಸರಿಯಾಗಿ ಫೋಟೋ ಕ್ಲಿಕ್ಕಿಸಲು ಆಗಲಿಲ್ಲ. ಆಗ ನಾನು ಮತ್ತೊಂದು ಬೋಗಿಗೆ ಹೋಗಿ ಉಗ್ರರಿಗಾಗಿ ಕಾಯುತ್ತಿದ್ದೆ. ಫೋಟೋ ಕ್ಲಿಕ್ಕಿಸಲು ನನಗೆ ಕೇವಲ ಸ್ವಲ್ಪ ಸಮಯ ಮಾತ್ರವಿತ್ತು. ನನ್ನ ಪ್ರಕಾರ ಉಗ್ರರು ನಾನು ಫೋಟೋ ಕ್ಲಿಕ್ಕಿಸಿದನ್ನು ನೋಡಿದ್ದಾರೆ. ಆದರೆ ಅವರು ಅಷ್ಟು ಗಮನ ಹರಿಸಲಿಲ್ಲ ಎಂದರು.

    ಎಕೆ-47 ರೈಫಲ್ ಹಿಡಿದು ನಿಂತಿದ್ದ ಕಸಬ್‍ನ ಫೋಟೋವನ್ನು ಹತ್ತಿರದಿಂದ ಕ್ಲಿಕ್ಕಿಸಿದ ಸೇಬಿ ಅವರಿಗೆ ‘ವರ್ಲ್ಡ್ ಪ್ರೆಸ್ ಫೋಟೋ’ ಪ್ರಶಸ್ತಿ ನೀಡಿ ಗೌರವಿಸಿತ್ತು. ಸೇಬಿ ಈ ಫೋಟೋವನ್ನು ಛತ್ರಪತಿ ಶಿವಾಜಿ ಟರ್ಮಿನಲ್ ಬಳಿ ಕ್ಲಿಕ್ಕಿಸಿದ್ದಾರೆ. ಆ ಘಟನೆ ಬಗ್ಗೆ ನೆನಪಿಸಿಕೊಂಡು ಮಾತನಾಡಿದ ಸೇಬಿ, “ಆ ದಿನ ರೈಲ್ವೆ ನಿಲ್ದಾಣದಲ್ಲಿದ್ದ ಪೊಲೀಸ್ ಅಧಿಕಾರಿ ಕಸಬ್‍ನನ್ನು ಶೂಟ್ ಮಾಡಿದ್ದರೆ ಇಷ್ಟು ಜನ ಮೃತಪಡುತ್ತಿರಲಿಲ್ಲ” ಎಂದು ತಿಳಿಸಿದ್ದಾರೆ.

  • ಕಲಾಪ ಶುರುವಾಗಿ 5 ಗಂಟೆಯ ನಂತರ ಸಿಎಂ ಹಾಜರ್

    ಕಲಾಪ ಶುರುವಾಗಿ 5 ಗಂಟೆಯ ನಂತರ ಸಿಎಂ ಹಾಜರ್

    ಬೆಂಗಳೂರು: ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆಗೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದ್ದು 5 ಗಂಟೆಯ ನಂತರ ಸಿಎಂ ಕಲಾಪದಲ್ಲಿ ಭಾಗಿಯಾಗಿದ್ದಾರೆ.

    ಇಂದು ಸಂಜೆ 6 ಗಂಟೆಗೆ ವಿಶ್ವಾಸ ಮತಯಾಚನೆ ಪ್ರಕ್ರಿಯೆ ಮುಗಿಸಬೇಕೆಂದು ಸ್ಪೀಕರ್ ರಮೇಶ್ ಕುಮಾರ್ ಈಗಾಗಲೇ ಸಮಯ ನಿಗದಿ ಮಾಡಿದ್ದಾರೆ. ಆದರೆ ಸಿಎಂ ಮಧ್ಯಾಹ್ನದವರೆಗೆ ವಿಧಾನಸೌಧಕ್ಕೆ ಬಂದಿರಲಿಲ್ಲ.

    ಸ್ಪೀಕರ್ ರಮೇಶ್ ಕುಮಾರ್ ಅವರು ಭೋಜನ ವಿರಾಮ ನೀಡದೇ ಕಲಾಪ ನಡೆಸುತ್ತಿದ್ದರು. ಊಟಕ್ಕೆ ಹೋಗುಗುವರು ಹೋಗಿ. ಆದರೆ ಕಲಾಪ ಮಾತ್ರ ಯಾವುದೇ ಕಾರಣಕ್ಕೆ ಮುಂದೂಡುವುದಿಲ್ಲ ಎಂದು ಹೇಳಿದ್ದರು. ನಿರಂತರ ಚರ್ಚೆ ನಡೆಯುತ್ತಿದ್ದಾಗ ಮಧ್ಯಾಹ್ನ 3.15ರ ವೇಳೆಗೆ ಸಿಎಂ ವಿಧಾನಸೌಧಕ್ಕೆ ಆಗಮಿಸಿದರು.

    ಇಂದು ಬೆಳಗ್ಗೆ 10 ಗಂಟೆಗೆ ವಿಧಾನಸಭೆ ಕಲಾಪ ಶುರುವಾದಾಗ ಸಿಎಂ ತಾಜ್ ವೆಸ್ಟೆಂಡ್ ಹೋಟೆಲಿಗೆ ಹೋಗಿದ್ದರು. ಹೀಗಾಗಿ ವೆಸ್ಟೆಂಡ್ ಹೋಟೆಲಿಗೆ ಸದನದಿಂದ ಡಿ.ಕೆ.ಶಿವಕುಮಾರ್ ಆಗಮಿಸಿದ್ದರು. ಸ್ವಲ್ಪ ಸಮಯದವರೆಗೂ ಮಾತನಾಡಿ ಅವರು ಸದನಕ್ಕೆ ಮರಳಿದರು. ನಂತರ ಎಂ.ಬಿ ಪಾಟೀಲ್ ಕೂಡ ಸಿಎಂ ಭೇಟಿ ಮಾಡಿ 15 ನಿಮಿಷದಲ್ಲಿ ವಿಧಾನಸೌಧಕ್ಕೆ ಮರಳಿದ್ದರು.

    ಬೆಳಗ್ಗೆ 10 ಗಂಟೆಗೆ ಸದನ ಆರಂಭಗೊಂಡಾಗ ಬಿಜೆಪಿ ಶಾಸಕರು ಸದನಕ್ಕೆ ಆಗಮಿಸಿದ್ದರೆ, ದೋಸ್ತಿ ಪಕ್ಷದ ಕೇವಲ 4 ಮಂದಿ ಶಾಸಕರು ಮಾತ್ರ ಹಾಜರಾಗಿದ್ದರು. ಇದನ್ನು ನೋಡಿ ಬಿಜೆಪಿ ಶಾಸಕರು ದೋಸ್ತಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು.

    ಬಿಜೆಪಿಯ ಈಶ್ವರಪ್ಪ ಮಾತನಾಡಿ, ವಿಶ್ವಾಸಮತಯಾಚನೆಗೆ ಸಿಎಂ ಅವರೇ ಇನ್ನೂ ಬಂದಿಲ್ಲ ಎಂದ ಮೇಲೆ ಬೇರೆ ಶಾಸಕರು ಯಾಕೆ ಬರುತ್ತಾರೆ? ಯಥಾ ರಾಜ ತಥಾ ಪ್ರಜಾ ಎನ್ನುವ ಹಾಗಿದೆ ಪರಿಸ್ಥಿತಿ. ನಾನು ಉಳಿದ ವಿಚಾರದ ಬಗ್ಗೆ ಮಾತನಾಡಲ್ಲ. ಈ ಸದನದ ಪಾವಿತ್ರ್ಯತೆಯನ್ನು ಕಾಪಾಡುವುದು ಎಲ್ಲರ ಕರ್ತವ್ಯ. ತಾವು ಸೂಚನೆ ಕೊಟ್ಟ ಸಮಯಕ್ಕೆ ಶಾಸಕರು ಇಲ್ಲಿ ಬಂದು ಕೂರಬೇಕಿತ್ತು. ಅದನ್ನು ಬಿಟ್ಟು ಮಧ್ಯಾಹ್ನ 3, 4 ಗಂಟೆ ಹೊತ್ತಿಗೆ ನಾವೇನು ಮಾತನಾಡಿಲ್ಲ, ನಮಗೆ ಅವಕಾಶ ಕೊಡಿ ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದರು.