Tag: taj film

  • ಸಿದ್ಧಾರ್ಥ್ ಜೊತೆಗಿನ ಡೇಟಿಂಗ್ ವಿಚಾರಕ್ಕೆ ನಟಿ ಅದಿತಿ ರಾವ್‌ ಹೈದರಿ ಪ್ರತಿಕ್ರಿಯೆ

    ಸಿದ್ಧಾರ್ಥ್ ಜೊತೆಗಿನ ಡೇಟಿಂಗ್ ವಿಚಾರಕ್ಕೆ ನಟಿ ಅದಿತಿ ರಾವ್‌ ಹೈದರಿ ಪ್ರತಿಕ್ರಿಯೆ

    ಚಿತ್ರರಂಗದಲ್ಲಿ ಗಟ್ಟಿಮೇಳದ ಸೌಂಡ್ ಜೋರಾಗಿದೆ. ಸ್ಟಾರ್ ಜೋಡಿಗಳು ಸಾಲಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚಿಗಷ್ಟೇ ತೆಲುಗು ನಟ ಶರ್ವಾನಂದ್ (Sharwanand) ಎಂಗೇಜ್‌ಮೆಂಟ್‌ಗೆ ಸಿದ್ಧಾರ್ಥ್- ಅದಿತಿ ಜೋಡಿಯಾಗಿ ಬಂದು ಶುಭಹಾರೈಸಿದ್ದರು. ಈ ಬೆನ್ನಲ್ಲೇ ಸಿದ್-ಅದಿತಿ ಡೇಟಿಂಗ್ ಸುದ್ದಿಗೆ ಸದ್ದು ಮಾಡಿತ್ತು. ಅಷ್ಟಕ್ಕೂ ಈ ಡೇಟಿಂಗ್ ಸುದ್ದಿ ನಿಜಾನಾ ಎಂಬುದಕ್ಕೆ ನಟಿ ಅದಿತಿ ರಾವ್ ಹೈದರಿ (Aditi Rao Hydari) ಪ್ರತಿಕ್ರಿಯೆ ನೀಡಿದ್ದಾರೆ.

    ನಟಿ ಅದಿತಿ- ಸಿದ್ಧಾರ್ಥ್ (Actor Siddarth) ಅವರು `ಮಹಾ ಸಮುದ್ರಂ’ ಎಂಬ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಚಿತ್ರದ ಸೆಟ್‌ನಲ್ಲಿ ಇಬ್ಬರಿಗೂ ಪ್ರೇಮಾಂಕುರವಾಗಿದೆ ಎನ್ನಲಾಗುತ್ತಿದೆ. 2021ರಿಂದ ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮುಂಬೈನಲ್ಲಿ ರೆಸ್ಟೋರೆಂಟ್‌ನಲ್ಲಿ ಸಾಕಷ್ಟು ಬಾರಿ ಈ ಜೋಡಿ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಇದೆ. ಸದ್ಯ ಟಿಟೌನ್ ಅಂಗಳದಲ್ಲಿ ಈ ವಿಚಾರ ಅನೇಕರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ನಟ ತಾರಕ ರತ್ನ ಅಂತಿಮ ದರ್ಶನಕ್ಕೆ ತೆಲುಗು ಫಿಲ್ಮ್ ಚೇಂಬರ್ ವ್ಯವಸ್ಥೆ

    ಅದಿತಿ ನಟನೆಯ `ತಾಜ್’ (Taj) ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಈ ಕಾರ್ಯಕ್ರಮದಲ್ಲಿ ಅದಿತಿಗೆ ಸಿದ್ಧಾರ್ಥ್ ಜೊತೆಗಿನ ಡೇಟಿಂಗ್ (Dating) ಬಗ್ಗೆ ಕೇಳಲಾಗಿದೆ. ಅದಕ್ಕೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ತುಂಬಾ ಹಸಿವಾಗುತ್ತಿದೆ. ಹಾಗಾಗಿ ನಾನು ಹೋಗಿ ತಿನ್ನುತ್ತೇನೆ ಎಂದು ನಟಿ ಹೊರಟಿದ್ದಾರೆ. ಈ ಪ್ರಶ್ನೆಗೆ ಊಟದ ನೆಪ ಹೇಳುವ ಮೂಲಕ ನಟಿ ಜಾರಿಕೊಂಡಿದ್ದಾರೆ.

    ಅಥಿಯಾ ಶೆಟ್ಟಿ-ರಾಹುಲ್, ಸಿದ್-ಕಿಯಾರಾ, ಸ್ವರಾ ಭಾಸ್ಕರ್ ಮದುವೆಯ ಗುಡ್ ನ್ಯೂಸ್ ನೀಡಿದರು. ಮುಂದಿನ ದಿನಗಳಲ್ಲಿ ಸಿದ್ಧಾರ್ಥ್- ಅದಿತಿ ಕೂಡ ಮದುವೆ (Wedding) ಬಗ್ಗೆ ಅಪ್‌ಡೇಟ್ ನೀಡಿದ್ದರು ಅಚ್ಚರಿಪಡಬೇಕಿಲ್ಲ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಕಾದುನೋಡಬೇಕಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k