Tag: tahshildar

  • ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿದ ತಹಶೀಲ್ದಾರ್

    ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿದ ತಹಶೀಲ್ದಾರ್

    ಬೆಂಗಳೂರು: ಇಂದು ನೆಲಮಂಗಲ ತಹಶೀಲ್ದಾರ್ ಮಂಜುನಾಥ್ ಆರೋಗ್ಯಾಧಿಕಾರಿಗಳ ಜೊತೆಗೆ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿದರು.

    ಎರಡನೇ ಅಲೆಯ ಮಹಾಮಾರಿ ಕೊರೋನ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಈ ನಡುವೆ ಜನಸಾಮಾನ್ಯರ ಚಿಕಿತ್ಸೆಗೆ ಬೆಂಗಳೂರು ಹೊರವಲಯ ನೆಲಮಂಗಲ ನಗರದ ಟಿಬೆಟಿಯನ್ ವಸತಿ ಗೃಹದಲ್ಲಿ 120 ಹಾಸಿಗೆಯ ವ್ಯವಸ್ಥೆಯನ್ನ ನೆಲಮಂಗಲ ತಾಲೂಕು ಆಡಳಿತದಿಂದ ಕೊವೀಡ್ ಕೇರ್ ಸೆಂಟರ್ ತೆರೆಯಲಾಗಿತ್ತು. ಈಗಾಗಲೇ ಕೊವೀಡ್ ಕೇರ್ ಸೆಂಟರ್ ನಲ್ಲಿ ಪ್ರತ್ಯೇಕವಾಗಿ ಪುರುಷ ಹಾಗೂ ಮಹಿಳೆಯರಿಗೆ ಕೊಠಡಿ ವ್ಯವಸ್ಥೆಯನ್ನ ಮಾಡಲಾಗಿದೆ.

    ಹಳ್ಳಿಗಾಡಿನ ಕೊರೊನ ಸೋಂಕಿತರ ಆರೋಗ್ಯ ವಿಚಾರಿಸಿದ ತಹಶೀಲ್ದಾರ್ ಮಂಜುನಾಥ್, ಕೇರ್ ಸೆಂಟರ್ ನಲ್ಲಿನ ಚಿಕಿತ್ಸೆ, ಶೌಚಾಲಯ, ಸ್ವಚ್ಛತೆ ಹಾಗೂ ಉತ್ತಮ ಗುಣಮಟ್ಟದ ಊಟ ಉಪಚಾರದ ಬಗ್ಗೆ ಸೋಂಕಿತರಿಂದಲೇ ಮಾಹಿತಿ ಪಡೆದರು. ಜೊತೆಗೆ ಸೋಂಕಿತರಿಗೆ ಕೊರೋನ ಜಾಗೃತಿ ಮೂಡಿಸಿ ಆತಂಕ ಪಡದಂತೆ ಧೈರ್ಯ ತುಂಬಿದ್ದಾರೆ.

  • ರಕ್ತಚಂದನ ಕಳ್ಳರ ಮೇಲೆ ದಾಳಿ- ತಹಶೀಲ್ದಾರ್‌ಗೆ ಡಿವೈಎಸ್‍ಪಿಯಿಂದ ನಿಂದನೆ

    ರಕ್ತಚಂದನ ಕಳ್ಳರ ಮೇಲೆ ದಾಳಿ- ತಹಶೀಲ್ದಾರ್‌ಗೆ ಡಿವೈಎಸ್‍ಪಿಯಿಂದ ನಿಂದನೆ

    ಚಾಮರಾಜನಗರ: ರಕ್ತಚಂದನ ಮರವನ್ನು ಕಡಿಯುವ ವಿಷಯದಲ್ಲಿ ಎಸಿಬಿ ವಿಭಾಗದ ಡಿವೈಎಸ್‍ಪಿ, ತಹಶೀಲ್ದಾರ್‌ಗೆ ಬಾಯಿಗೆ ಬಂದಂತೆ ನಿಂದಿಸಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿರುವ ಸರ್ಕಾರಿ ಜಮೀನಿನಲ್ಲಿ ರಕ್ತ ಚಂದನ ಮರ ಕಡಿಯುತ್ತಿರುವ ಬಗ್ಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರೊಬೇಷನರಿ ತಹಶೀಲ್ದಾರ್ ಸುದರ್ಶನ್ ಅವರು ಗ್ರಾಮ ಸಹಾಯಕನನ್ನು ಸ್ಥಳಕ್ಕೆ ಪರಿಶೀಲನೆಗೆ ಕಳುಹಿಸಿದ್ದರು. ಈ ವೇಳೆ ಎಸಿಬಿ ಡಿವೈಎಸ್‍ಪಿ ಪಿ ಪ್ರಸಾದ್ ಅವರು ಸ್ಥಳಕ್ಕೆ ಬಂದ ಗ್ರಾಮ ಸಹಾಯಕರನ್ನು ಕರೆದು ಕ್ಲಾಸ್ ತಗೊಂಡಿದ್ರು. ಅಲ್ಲದೇ ತಹಶೀಲ್ದಾರ್ ಗೆ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಮರವಿದ್ದ ಜಾಗದ ಪಕ್ಕದಲ್ಲೇ ಚಿಕ್ಕಬಳ್ಳಾಪುರ ಎಸಿಬಿ ಡಿವೈಎಸ್‍ಪಿ ಪಿ ಪ್ರಸಾದ್‍ರ ಜಮೀನು ಇದ್ಯಂತೆ. ಹೀಗಾಗಿ ತಹಶೀಲ್ದಾರ್‌ಗೆ ಪೊಲೀಸ್ ಅಧಿಕಾರಿ ಪ್ರಸಾದ್ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ಠಾಣೆಯಲ್ಲಿ ಡಿವೈಎಸ್‍ಪಿ ಪ್ರಸಾದ್ ವಿರುದ್ಧ ತಹಶೀಲ್ದಾರ್ ದೂರು ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕುಂದಾಪುರದಲ್ಲಿ ಸರ್ಕಾರದಿಂದ ಬಡವರ ಮನೆ ತೆರವು – ಬೀದಿಗೆ ಬಿತ್ತು ನೂರಾರು ದಲಿತ ಕುಟುಂಬ

    ಕುಂದಾಪುರದಲ್ಲಿ ಸರ್ಕಾರದಿಂದ ಬಡವರ ಮನೆ ತೆರವು – ಬೀದಿಗೆ ಬಿತ್ತು ನೂರಾರು ದಲಿತ ಕುಟುಂಬ

    ಉಡುಪಿ: ಸರ್ಕಾರಿ ಜಮೀನಿನಲ್ಲಿದ್ದ 150 ಮನೆಯನ್ನು ಏಕಾಏಕಿ ಸರ್ಕಾರ ತೆರವು ಮಾಡಿದೆ.

    ಕುಂದಾಪುರದ ಕಂದಾವರದಲದ 25 ಎಕರೆ ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದ 150 ದಲಿತರ, ಕಾರ್ಮಿಕರ ಮನೆಗಳನ್ನು ತಹಶೀಲ್ದಾರ್ ತೆರವು ಮಾಡಿಸಿದ್ದಾರೆ. ಮನೆಗಳು ಬೀಳುತ್ತಿದ್ದಂತೆ ಸಂತ್ರಸ್ತರು ಪ್ರತಿಭಟನೆ ಮಾಡಿದರು. ಆದ್ರೆ ಪೊಲೀಸರ ಭದ್ರತೆಯಲ್ಲಿ ತಹಶೀಲ್ದಾರ್ ಕಾರ್ಯಾಚರಣೆಗೆ ಬುಲ್ಡೋಜರ್ ಗಳ ಬೆಂಬಲ ಸಿಕ್ಕಿತು.

    ಮನಬಂದಂತೆ ಸರ್ಕಾರಿ ಅಧಿಕಾರಿಗಳು ಮನೆಗಳನ್ನು ಉರುಳಿಸಿದರು. ಸ್ವಂತ ಜಮೀನಿಲ್ಲದ ಕುಂದಾಪುರದ ನಿವಾಸಿಗಳು ಕೆಲ ತಿಂಗಳ ಹಿಂದೆ ಸರ್ಕಾರಿ ಜಮೀನಲ್ಲಿ ಗುಡಿಸಲು ಕಟ್ಟಿಕೊಂಡಿದ್ದರು. 25 ಎಕರೆ ಜಮೀನಿನಲ್ಲಿ ಕೊರಗ, ದಲಿತರು, ಹಿಂದುಳಿದವರೇ ಹೆಚ್ಚು. ಕೂಲಿ ಕಾರ್ಮಿಕರು ಕೂಡಾ ಗುಡಿಸಲು ಹಾಕಿ ಜೀವನ ಶುರು ಮಾಡಿದ್ದರು. ಸರ್ಕಾರದ ಕಾರ್ಯಾಚರಣೆಗೆ ತಡೆಯೊಡ್ಡಿದ 8 ಮಂದಿ ಸಂತ್ರಸ್ತರ ಬಂಧನ ಕೂಡಾ ಆಗಿದೆ.

    ಇತ್ತ ಮನೆ ಕಳೆದುಕೊಂಡವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಸಂತ್ರಸ್ಥರಿಗೆ ಸಿಪಿಎಂ ನಾಯಕರು ಬೆಂಬಲಿಸಿದರು. ಪೊಲೀಸರು ಸಂತ್ರಸ್ತರನ್ನು ಬಂಧಿಸಿ ಮಾನವ ಹಕ್ಕನ್ನು ಉಲ್ಲಂಘನೆ ಮಾಡಿದ್ದಾರೆ. ಬದುಕುವ ಹಕ್ಕನ್ನು ಸರ್ಕಾರ ಕಿತ್ತುಕೊಂಡಿದೆ ಎಂದು ಕಾರ್ಮಿಕ ಮುಖಂಡ ವೆಂಕಟೇಶ ಕೋಣಿ ಘಟನೆಯನ್ನು ಖಂಡಿಸಿದ್ದಾರೆ.

    ಸಂತ್ರಸ್ತೆ ವಿಮಲ ಕಂದಾವರ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಾವು ವಿಷ ಕುಡಿಯಬೇಕು ಅಂತ ಅಂದ್ರೆ ಅಧಿಕಾರಿಗಳೇ ಹೇಳಲಿ, ಕುಡಿದು ಸಾಯ್ತೇವೆ. ನಾವು ಸಾಲ ಮಾಡಿ ಸಿಮೆಂಟ್ ಬ್ಲಾಕ್ ತಂದು ಗುಡಿಸಲು ಕಟ್ಟಿದ್ದೇವೆ. ಏಕಾಏಕಿ ಈ ತರ ದಾಳಿ ಮಾಡಿದ್ದಾರೆ. ನಮ್ಮ ಕಣ್ಣೆದುರೇ ಮನೆಗಳ ನೆಲಸಮ ಮಾಡಿದ್ದಾರೆ. ಚಿಕ್ಕ-ಚಿಕ್ಕ ಮಕ್ಕಳು, ಮಹಿಳೆಯರು ಬೀದಿಗೆ ಬಂದಿದ್ದೇವೆ. ಜಿಲ್ಲಾಧಿಕಾರಿಗಳೇ, ಎಸ್‍ಪಿಯವರೇ ಇದಕ್ಕೆ ಉತ್ತರ ಕೊಡಬೇಕಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.