Tag: Tahashildar

  • 60 ವರ್ಷದಿಂದ ಉಳುಮೆ ಮಾಡ್ತಿದ್ದ ರೈತನಿಗೆ ಶಾಕ್ – ತಹಶೀಲ್ದಾರ್ ಸಹಿ ನಕಲಿಸಿ, 8 ಎಕರೆ ಬೇರೆಯವ್ರ ಹೆಸರಿಗೆ ವರ್ಗ

    60 ವರ್ಷದಿಂದ ಉಳುಮೆ ಮಾಡ್ತಿದ್ದ ರೈತನಿಗೆ ಶಾಕ್ – ತಹಶೀಲ್ದಾರ್ ಸಹಿ ನಕಲಿಸಿ, 8 ಎಕರೆ ಬೇರೆಯವ್ರ ಹೆಸರಿಗೆ ವರ್ಗ

    ಬೀದರ್: ಲಕ್ಷಾಂತರ ರೂ. ಹಣ ತೆಗೆದುಕೊಂಡು ತಹಶೀಲ್ದಾರ್ ಡಿಜಿಟಲ್ ಸಹಿಯನ್ನು ನಕಲು ಮಾಡಿ, 8 ಎಕರೆ ಭೂಮಿಯನ್ನು ಬೇರೆಯವರ ಹೆಸರಿಗೆ ಬದಲಾಯಿಸಿ 60 ವರ್ಷದಿಂದ ಉಳುಮೆ ಮಾಡ್ತಿದ್ದ ರೈತನಿಗೆ ವಂಚಿಸಿದ್ದಾರೆ.

    ಹೌದು, ಗಡಿಜಿಲ್ಲೆ ಬೀದರ್‌ನಲ್ಲಿ (Bidar) ದಂಡಾಧಿಕಾರಿಗಳ ಡಿಜಿಟಿಲ್ ಸಹಿಯನ್ನೇ ನಕಲಿ ಮಾಡಿ 8 ಎಕರೆ ಜಮೀನನ್ನು ಬೇರೆಯವರ ಹೆಸರಿಗೆ ಮಾಡಿದ ತಹಶೀಲ್ದಾರ್ ಕಚೇರಿಯ ಕರ್ಮಕಾಂಡ ಬಯಲಾಗಿದೆ. ತಹಶೀಲ್ದಾರ್ ಡಿ.ಜಿ ಮಹತ್‌ರವರ ಡಿಜಿಟಲ್ ಸಹಿಯನ್ನು ನಕಲಿ ಮಾಡಿ, ಬರೋಬ್ಬರಿ 8.13 ಎಕರೆ ಜಮೀನನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ.ಇದನ್ನೂ ಓದಿ: ಹೃದಯಾಘಾತವಲ್ಲ ಟ್ರ್ಯಾಕ್ಟರ್ ಅಪಘಾತದಲ್ಲಿ ಹಾಸನದ ಯೋಧ ಸಾವು

    ಬೀದರ್ ತಾಲೂಕಿನ ನಂದಗಾವ್ ಗ್ರಾಮದ ಜಗನಾಥ್ ತಂದೆ ಹನುಮಂತರಾವ್ ಎಂಬುವವರ 24/16 ಸರ್ವೇ ನಂಬರ್‌ನ ಜಮೀನಿನ ಪಹಣಿಯನ್ನು ಏಕಾಏಕಿ ಬದಲಾವಣೆ ಮಾಡಲಾಗಿದೆ. 60 ವರ್ಷಗಳಿಂದ ಜಗನಾಥ್ ಹೆಸರಿನಲ್ಲಿ 8 ಎಕರೆಯ ಪಹಣಿ ಇದೆ. ಇದೇ ತಿಂಗಳ 12ರಂದು ತಹಶೀಲ್ದಾರ್‌ರವರ ಡಿಜಿಟಲ್ ಸಹಿ ನಕಲಿ ಮಾಡಿ ಮಹ್ಮದ್ ಇಸ್ಮಾಯಿಲ್ ಎಂಬುವವರಿಗೆ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ. ಭೂ ದಾಖಲೆಗಳ ವಿಭಾಗದಲ್ಲಿ ಕೆಲಸ ಮಾಡುವ ಅಂಬರೀಶ್ ಮತ್ತು ಸೃಜನ್ ಎಂಬ ಸರ್ಕಾರಿ ನೌಕರರು ಲಕ್ಷಾಂತರ ರೂ. ಹಣ ಪಡೆದು ನಕಲಿ ಸಹಿ ಮಾಡಿ, ಪಹಣಿಯನ್ನು ಬದಲಾವಣೆ ಮಾಡಿದ್ದಾರೆ. ವಿಷಯ ತಿಳಿದ ರೈತ, 60 ವರ್ಷಗಳಿಂದ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಬಂದಿದ್ದೇವೆ. ತಹಶೀಲ್ದಾರ್ ಸಹಿ ನಕಲು ಮಾಡಿ ವಂಚನೆ ಮಾಡಿದ್ದಾರೆ. ಮೊದಲಿನಂತೆ ನಮ್ಮ ಹೆಸರಿಗೆ ಪಹಣಿ ಮಾಡಿಕೊಡಿ ಎಂದು ಆಗ್ರಹಿಸಿದ್ದಾರೆ.

    ಈಗಾಗಲೇ ನಕಲಿ ಸಹಿ ಮಾಡಿದ ಇಬ್ಬರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ಜೊತೆಗೆ ಈ ಇಬ್ಬರು ಸೇರಿದಂತೆ ಇಸ್ಮಾಯಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆದರೆ ಪಹಣಿ ಮಾತ್ರ ಬದಲಾಗದೇ ಹಾಗೆಯೇ ಇದೆ. ಇದರಿಂದ ರೈತ ಜಗನಾಥ್ ಕಚೇರಿಗಳಿಗೆ ಅಲೆದಾಡುತ್ತಿದ್ದು, ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಮೇಲಾಧಿಕಾರಿಗಳನ್ನು ಕೇಳಿ ಮಾಡುತ್ತೇವೆ ಎಂದು ಜಾರಿಕೊಳ್ಳುತ್ತಿದ್ದಾರೆ.

    ನಾಮಕಾವಸ್ತೆಗೆ ಇಬ್ಬರು ಸಿಬ್ಬಂದಿಗಳನ್ನು ಅಮಾನತು ಮಾಡಿದ್ದು, ಇನ್ನಾದರೂ ನಕಲಿ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ರೈತನ ಪಹಣಿಯನ್ನು ಮೊದಲಿನಂತೆ ಬದಲಾಯಿಸ್ತಾರಾ ಕಾದು ನೋಡಬೇಕಿದೆ.ಇದನ್ನೂ ಓದಿ: ಲಲಿತ್ ಮೋದಿಗೆ ಶಾಕ್ – ಬಿಸಿಸಿಐನಿಂದ ಇಡಿ ದಂಡ ಪಾವತಿಸಲು ಕೋರಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ

  • ನೀನೇನ್ ಸಾಫ್ಟ್ ವೇರ್ ಎಂಜಿನಿಯರಾ?- ಯುವತಿಗೆ ತಹಶೀಲ್ದಾರ್ ಅವಾಜ್

    ನೀನೇನ್ ಸಾಫ್ಟ್ ವೇರ್ ಎಂಜಿನಿಯರಾ?- ಯುವತಿಗೆ ತಹಶೀಲ್ದಾರ್ ಅವಾಜ್

    ತುಮಕೂರು: ಜಾತಿ ಹಾಗೂ ಆದಾಯ ಪ್ರಮಾಣ ಪತ್ರಕ್ಕಾಗಿ ಕಚೇರಿಗೆ ಬಂದ ಸಾರ್ವಜನಿಕರಿಗೆ ಗ್ರೇಡ್-2 ತಹಶೀಲ್ದಾರ್ ಅವಾಜ್ ಹಾಕಿದ್ದಾರೆ.

    ಡಿ.ಸಿ.ಕಚೇರಿಯಲ್ಲಿರುವ ಪ್ರಮಾಣಪತ್ರ ವಿತರಣಾ ಕೇಂದ್ರದ ಬಳಿ ಜಾತಿ ಹಾಗೂ ಆದಾಯ ಪ್ರಮಾಣ ಪತ್ರಕ್ಕಾಗಿ ನೂರಾರು ಜನರು ಸಾಲಿನಲ್ಲಿ ನಿಂತಿದ್ರು. ಪ್ರಮಾಣ ಪತ್ರ ವಿತರಣೆ ವೇಳೆ ಕಂಪ್ಯೂಟರ್ ಆಪರೇಟರ್ ತಾಂತ್ರಿಕ ಕಾರಣ ಹೇಳಿ ಸರ್ಟಿಫಿಕೇಟ್ ನೀಡಲು ವಿಳಂಬ ಮಾಡುತ್ತಿದ್ದರು.

    ಹೀಗೆ ಕಂಪ್ಯೂಟರ್ ಆಪರೇಟರ್ ವಿನಾಕಾರಣ ವಿಳಂಬ ಮಾಡುತ್ತಿದ್ದುದನ್ನು ಅಲ್ಲಿ ನಿಂತಿದ್ದ ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಇದರಿಂದ ಸಿಡಿಮಿಡಿಗೊಂಡ ಗ್ರೇಡ್ -2 ತಹಶೀಲ್ದಾರ್ ಇಂದಿರಾ, ಯುವತಿಯೋರ್ವಳಿಗೆ ಕಚೇರಿಯಲ್ಲೇ ಅವಾಜ್ ಹಾಕಿದ್ದಾರೆ.

    ನೀನೇನ್ ಸಾಫ್ಟ್ ವೇರ್ ಇಂಜಿನಿಯರಾ? ಹಾಗಾದ್ರೆ ಬಂದು ರಿಪೇರಿ ಮಾಡು ಎಂದಿದ್ದಾರೆ. ಬ್ಯಾಂಕಲ್ಲಿ ಗಂಟೆಗಟ್ಟಲೆ ಕ್ಯೂ ನಿಲ್ಲುತ್ತೀರಾ? ಇಲ್ಲಿ ನಿಂತುಕೊಳ್ಳೋಕೆ ಏನಾಗತ್ತೆ ನಿಮಗೆ? ಎಂದು ದರ್ಪ ಮೆರೆದಿದ್ದಾರೆ. ಯಾರಿಗೆ ಬೇಕಾದ್ರೂ ಈ ಕುರಿತು ದೂರು ಕೊಡಿ ನಮಗೆ ಏನೂ ಮಾಡೋಕೆ ಆಗಲ್ಲ ಎಂದು ಅವಾಜ್ ಹಾಕಿದ್ದಾರೆ.