Tag: Tagline

  • ಪಬ್ಲಿಕ್‌ ಟಿವಿ ಇಂಪ್ಯಾಕ್ಟ್- ವಸತಿ ಶಾಲೆಯ ಘೋಷವಾಕ್ಯ ಯಥಾಸ್ಥಿತಿ

    ಪಬ್ಲಿಕ್‌ ಟಿವಿ ಇಂಪ್ಯಾಕ್ಟ್- ವಸತಿ ಶಾಲೆಯ ಘೋಷವಾಕ್ಯ ಯಥಾಸ್ಥಿತಿ

    ವಿಜಯಪುರ: ವಸತಿ ಶಾಲೆಯ ಘೋಷವಾಕ್ಯ ಸಂಬಂಧ ಪಬ್ಲಿಕ್ ಟಿವಿಯಲ್ಲಿ ವರದಿಯಾದ ಬಳಿಕ ಬರಹವನ್ನು ಮೊದಲಿನಂತೆಯೇ ಬದಲಾವಣೆ ಮಾಡಲಾಗಿದೆ.

    ಈ ಕುರಿತು ಶಾಲೆಯ ಪ್ರಿನ್ಸಿಪಾಲ್ ದುಂಡಪ್ಪ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಮುಖ್ಯ ಕಾರ್ಯದರ್ಶಿಗಳ ಮೌಖಿಕ ಸೂಚನೆಯಂತೆ ಘೋಷವಾಕ್ಯ ಬದಲಾಯಿಸಿದ್ದೆವು. ಪಬ್ಲಿಕ್ ಟಿವಿಯಲ್ಲಿ ವರದಿಯಾದ ಬಳಿಕ ಘೋಷವಾಕ್ಯ ಮೊದಲಿನಂತೆಯೇ ಬದಲಾವಣೆ ಮಾಡಿದ್ದೇವೆ ಎಂದರು. ಇದನ್ನೂ ಓದಿ: ವಿಧಾನಸೌಧದಲ್ಲೇ ಶಾಸಕರಿಗೆ ಮಧ್ಯಾಹ್ನದ ಬಿಸಿಯೂಟ- ಖಾದರ್ ಘೋಷಣೆ

    ಆಗಿದ್ದೇನು..?: ವಿಜಯಪುರ (Vijayapur) ಜಿ. ಮುದ್ದೇಬಿಹಾಳ ತಾ. ಘಾಳಪೂಜೆ ಮೊರಾರ್ಜಿ ವಸತಿ ಶಾಲೆಯ ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ‘ಜ್ಞಾನ ದೇಗುಲವಿದು ಕೈಮುಗಿದು ಬಳಗೆ ಬಾ’ ಎಂಬ ಸಾಲುಗಳ ಬದಲಾಗಿ ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಾಯಿಸಿ ಶಾಲೆಯ ಪ್ರವೇಶ ದ್ವಾರದಲ್ಲಿ ಬರೆಯಲಾಗಿದೆ. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.

    ಕೇವಲ ವಿಜಯಪುರ ಮಾತ್ರವಲ್ಲ, ರಾಯಚೂರು ಜಿಲ್ಲೆಯ 36 ವಸತಿ ಶಾಲೆಗ ಪೈಕಿ ಬಹುತೇಕ ಕಡೆಗಳಲ್ಲಿ ಕುವೆಂಪು ವಾಕ್ಯವನ್ನ ಬದಲಾಯಿಸಿ ಬರೆಯಲಾಗಿದೆ. ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆ, ಮಸ್ಕಿ, ಲಿಂಗಸುಗೂರಿನ ಅಡವಿಬಾವಿ ಸೇರಿ ಜಿಲ್ಲೆಯ ಹಲವೆಡೆ ವಾಕ್ಯ ಬದಲಾವಣೆ ಮಾಡಲಾಗಿದೆ.

  • ‘ಜೀತೇಗ ಭಾರತ್’ INDIA ಒಕ್ಕೂಟಕ್ಕೆ ಹೊಸ ಟ್ಯಾಗ್‌ಲೈನ್

    ‘ಜೀತೇಗ ಭಾರತ್’ INDIA ಒಕ್ಕೂಟಕ್ಕೆ ಹೊಸ ಟ್ಯಾಗ್‌ಲೈನ್

    ನವದೆಹಲಿ: ವಿರೋಧ ಪಕ್ಷಗಳ ಒಕ್ಕೂಟಕ್ಕೆ INDIA ಎಂದು ನಾಮಕರಣ ಮಾಡಿದ ಒಂದು ದಿನದ ಬಳಿಕ ‘ಜೀತೇಗ ಭಾರತ್’ (ಭಾರತ ಗೆಲ್ಲುತ್ತದೆ) ಎನ್ನುವ ಟ್ಯಾಗ್‌ಲೈನ್ (Tag Line) ಅನ್ನು ಘೋಷಣೆ ಮಾಡಲಾಗಿದೆ.

    ಮಂಗಳವಾರ ತಡರಾತ್ರಿ ನಡೆದ ಚರ್ಚೆಯ ಬಳಿಕ ಜೀತೇಗ ಭಾರತ್ (Jeetega Bharat) ಎನ್ನುವ ಟ್ಯಾಗ್‌ಲೈನ್ ಅನ್ನು ಅಂತಿಮಗೊಳಿಸಲಾಗಿದೆ. ಹೊಸ ಹೆಸರಿನೊಂದಿಗೆ ಟ್ಯಾಗ್‌ಲೈನ್ ಅನ್ನು ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಭಾಷಾಂತರಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: INDIA ಹೆಸರಿಗೆ ಮೈತ್ರಿಯಲ್ಲೇ ವಿರೋಧ – ಆಕ್ಷೇಪ ವ್ಯಕ್ತಪಡಿಸಿದ ನಿತೀಶ್ ಕುಮಾರ್

    ಮಂಗಳವಾರ ಬೆಂಗಳೂರಿನಲ್ಲಿ (Bengaluru) ಸಭೆ ನಡೆಸಿದ್ದ ವಿರೋಧ ಪಕ್ಷದ ನಾಯಕರು ತಮ್ಮ ಒಕ್ಕೂಟಕ್ಕೆ INDIA ಎಂದು ನಾಮಕರಣ ಮಾಡಿದ್ದರು. ವಿರೋಧ ಪಕ್ಷದ ಹೆಸರನ್ನು ಘೋಷಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), 2024ರ ಚುನಾವಣೆಯು ಬಿಜೆಪಿಯ (BJP) ಸಿದ್ಧಾಂತ ಮತ್ತು ಅವರ ಚಿಂತನೆಯ ವಿರುದ್ಧ ಹೋರಾಟವಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ರಾಹುಲ್, ಸೋನಿಯಾ ಗಾಂಧಿ ವಿಮಾನ ಭೋಪಾಲ್‌ನಲ್ಲಿ ತುರ್ತು ಭೂಸ್ಪರ್ಶ

    ಇದಕ್ಕೆ ತಿರುಗೇಟು ನೀಡಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ ಎನ್‌ಡಿಎಯಲ್ಲಿ (NDA), ‘N’ ಎಂದರೆ ನವ ಭಾರತ, ‘D’ ಎಂದರೆ ಅಭಿವೃದ್ಧಿ ಹೊಂದಿದ ರಾಷ್ಟ್ರ, ‘A’ ಎಂದರೆ ಜನರು ಮತ್ತು ಪ್ರದೇಶಗಳ ಆಕಾಂಕ್ಷೆಗಳು ಎಂದು ವ್ಯಾಖ್ಯಾನಿಸಿದ್ದರು. ಇದನ್ನೂ ಓದಿ: ದೆಹಲಿಯಲ್ಲಿ ಎನ್‍ಡಿಎ ಮೆಗಾ ಮೀಟಿಂಗ್ – ಮೋದಿ ನಾಯಕತ್ವಕ್ಕೆ ನಮೋ ಎಂದ 38 ಪಕ್ಷಗಳು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಂಚಾಯ್ತಿ ಸದಸ್ಯರ ಹೋರಾಟಕ್ಕೆ ಮಣಿದು ಟ್ಯಾಗ್‍ಲೈನ್ ತೆಗೆದ `ಅಯೋಗ್ಯ’ ಚಿತ್ರತಂಡ

    ಪಂಚಾಯ್ತಿ ಸದಸ್ಯರ ಹೋರಾಟಕ್ಕೆ ಮಣಿದು ಟ್ಯಾಗ್‍ಲೈನ್ ತೆಗೆದ `ಅಯೋಗ್ಯ’ ಚಿತ್ರತಂಡ

    ಬೆಂಗಳೂರು: ಪಂಚಾಯ್ತಿ ಸದಸ್ಯರ ಹೋರಾಟಕ್ಕೆ ಮಣಿದು `ಅಯೋಗ್ಯ’ ಚಿತ್ರತಂಡ ಟ್ಯಾಗ್‍ಲೈನನ್ನು ತೆಗೆದುಹಾಕಿದೆ.

    ಚಿತ್ರದ ಹೆಸರು ಮತ್ತು ಟ್ಯಾಗ್ ಲೈನ್ ನಿಂದಲೇ ಸಾಕಷ್ಟು ಕುತೂಹಲ ಕೆರಳಿಸಿದ್ದ ಅಯೋಗ್ಯ ಚಿತ್ರ ಇನ್ನೇನು ಬಿಡುಗಡೆಗೆ ಸಿದ್ಧವಾಗಬೇಕು ಎನ್ನುವಷ್ಟರಲ್ಲಿ ಟ್ಯಾಗ್ ಲೈನ್ ವಿರುದ್ಧ ಗ್ರಾಮ ಪಂಚಾಯಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು.

    ಅಯೋಗ್ಯ ಚಿತ್ರಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಎನ್ನುವ ಟ್ಯಾಗ್ ಲೈನನ್ನು ಇಟ್ಟುಕೊಂಡಿದ್ದಕ್ಕೆ ಗ್ರಾಮ ಪಂಚಾಯಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ನಿರ್ಮಾಪಕರ ವಿರುದ್ಧ ಚಲನಚಿತ್ರ ಮಂಡಳಿಯ ಬಳಿ ಪ್ರತಿಭಟನೆ ನಡೆಸಿ ಟ್ಯಾಗ್ ಲೈನನ್ನು ತೆಗೆದು ಹಾಕುವಂತೆ ಆಗ್ರಹಿಸಿದ್ದರು.

    ಈ ಹಿಂದೆಯೇ ಟ್ಯಾಗ್ ಲೈನ್ ಬದಲಾವಣೆ ಮಾಡಬೇಕು ಎನ್ನುವ ಒತ್ತಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದಿತ್ತು. ಇದೆ ವಿಚಾರವಾಗಿ ಭಾನುವಾರ ಗ್ರಾಮಪಂಚಾಯಿತಿ ಸದಸ್ಯರಾದ ರೇವತಿ, ಲಕ್ಷ್ಮಿ ಗೌಡ ಎನ್ನುವವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು.

    ಈ ಕುರಿತು ಸೋಮವಾರ ವಾಣಿಜ್ಯ ಮಂಡಳಿಯಲ್ಲಿ ಅಧ್ಯಕ್ಷರಾದ ಚಿನ್ನೇಗೌಡ್ರು ಹಾಗೂ ಕರಿಸುಬ್ಬು ಚರ್ಚೆ ಮಾಡಿ ನಂತರ ಸಿನಿಮಾ ಕಲಾವಿದರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಜೊತೆಯಲ್ಲೂ ಮಾತನಾಡಿ ಟ್ಯಾಗ್ ಲೈನ್ ತೆಗೆಯುವಂತೆ ನಿರ್ಧಾರ ಮಾಡಿದ್ದಾರೆ.

    ಇಂದಿನಿಂದ ಕೇವಲ ‘ಅಯೋಗ್ಯ’ ಅನ್ನೋ ಟೈಟಲ್ ಮಾತ್ರ ಎಲ್ಲೆಡೆ ಬಳಸಿಕೊಳ್ಳಲು ಚಿತ್ರತಂಡ ಸಮ್ಮತಿ ನೀಡಿದೆ. ಶೀರ್ಷಿಕೆ ಅಡಿ ಇದ್ದ ಗ್ರಾಮ ಪಂಚಾಯಿತಿ ಸದಸ್ಯ ಅನ್ನೋ ಅಡಿ ಬರಹವನ್ನು ತೆಗೆದು ಹಾಕಿದ್ದಾರೆ. ರಾಜ್ಯದಲ್ಲಿರುವ 76,367 ಪಂಚಾಯಿತಿ ಸದಸ್ಯರಿಗೆ ಗೌರವ ಕೊಡುವ ಉದ್ದೇಶದಿಂದ ಟೈಟಲ್ ಟ್ಯಾಗ್ ಲೈನ್ ಕೈ ಬಿಡಲು ನಿರ್ಮಾಪಕ ಟಿ ಆರ್ ಚಂದ್ರಶೇಖರ್, ನಿರ್ದೇಶಕ ಮಹೇಶ್ ಕುಮಾರ್ ಹಾಗೂ ನಟ ಸತೀಶ್ ನಿರ್ಧಾರ ಮಾಡಿದ್ದಾರೆ.