Tag: taffic police

  • ಬೆಂಗಳೂರಿನಲ್ಲಿ ಹಾಫ್ ಹೆಲ್ಮೆಟ್ ಧರಿಸಿದ ಪೊಲೀಸ್‍ಗೇ ಬಿತ್ತು ದಂಡ!

    ಬೆಂಗಳೂರಿನಲ್ಲಿ ಹಾಫ್ ಹೆಲ್ಮೆಟ್ ಧರಿಸಿದ ಪೊಲೀಸ್‍ಗೇ ಬಿತ್ತು ದಂಡ!

    ಬೆಂಗಳೂರು: ಟ್ರಾಫಿಕ್ ಪೊಲೀಸ್ (Traffic Police) ಒಬ್ಬರು ಹಾಫ್ ಹೆಲ್ಮೆಟ್ ಧರಿಸಿದ ಇನ್ನೊಬ್ಬ ಪೊಲೀಸ್‍ಗೆ ದಂಡ ವಿಧಿಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಫೈನ್ ಹಾಕಿದ ಫೋಟೋವನ್ನು ಆರ್ ಟಿ ನಗರ ಟ್ರಾಫಿಕ್ ಬಿಟಿಪಿ ಟ್ವಿಟ್ಟರ್ ಅಕೌಂಟಿನಿಂದ ಟ್ವೀಟ್ ಮಾಡಲಾಗಿದೆ. ಫೋಟೋದಲ್ಲಿ ಹಾಫ್ ಹೆಲ್ಮೆಟ್‌ (Half Helmet) ಧರಿಸಿದ ಪೊಲೀಸ್‍ಗೆ ಟ್ರಾಫಿಕ್ ಪೊಲೀಸ್ ಫೈನ್ ಹಾಕುತ್ತಿರುವುದನ್ನು ಕಾಣಬಹುದಾಗಿದೆ.

    ನಗರದ ರಸ್ತೆಗಳಲ್ಲಿ ಗೇರ್ ಲೆಸ್ ಸ್ಕೂಟರ್ ಓಡಿಸುವಾಗ ಹಾಫ್ ಹೆಲ್ಮೆಟ್ ನಿಷೇಧಿಸಲಾಗಿದೆ. ಅದಾಗ್ಯೂ ಪೊಲೀಸ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ಈ ದಂಡ ವಿಧಿಸಲಾಗಿದೆ. ಇದನ್ನೂ ಓದಿ: ಯುವತಿಯರಿಬ್ಬರ ನಡುವೆ ಪ್ರೇಮಾಂಕುರ- ಬೇರೆಯವಳೊಂದಿಗೆ ಮಾತಾಡಿದ್ದಕ್ಕೆ ರೇಡಿಯಂ ಕಟರ್‌ನಿಂದ ಹಲ್ಲೆಗೈದ್ಳು!

    ಫೋಟೋ ಸಮೇತ ಟ್ವೀಟ್ ಮಾಡುತ್ತಿದ್ದಂತೆಯೇ ಅನೇಕರು ಇದಕ್ಕೆ ರೀ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಓರ್ವ ಟ್ವಿಟ್ಟರ್ ಬಳಕೆದಾರ, ಫೈನ್ (Fine) ಹಾಕಿದ್ರೂ ಅವರು ಅದನ್ನು ತುಂಬಾ ಸಂತೋಷದಿಂದ ಸ್ವೀಕರಿಸಿದಂತಿದೆ. ಒಂದು ಉತ್ತಮ ಫೋಟೋಗೆ ಅವಕಾಶ ಸಿಕ್ಕಿದೆ ಅನ್ನೋ ಖುಷಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.

    ಇನ್ನೊಬ್ಬರು, ಇಂತಹ ಕೆಲಸಗಳನ್ನು ಇನ್ನೂ ಹೆಚ್ಚು ಮಾಡಬೇಕಿದೆ. ಅನೇಕ ಪೊಲೀಸರು ಹೆಲ್ಮೆಟ್ ಧರಿಸದೆ ಹಿಂಬದಿ ಸವಾರರನ್ನು ಕೂರಿಸಿಕೊಂಡು ಹೋಗುವುದನ್ನು ನಾನು ನೋಡಿದ್ದೇನೆ. ಅಲ್ಲದೆ ಇಂಥವರನ್ನು ಕಂಡರೂ ಪೊಲೀಸರು ಅವರನ್ನು ಹೋಗಲು ಬಿಡುತ್ತಾರೆ. ಅವರಿಗಿಲ್ಲದ ಫೈನ್ ಸಾಮಾನ್ಯ ಜನರಿಗೇಕೆ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, ನಿಯಮಗಳು ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ದಯಮಾಡಿ ಸಂಚಾರ ನಿಯಮಗಳನ್ನು ಅನುಸರಿಸಿ ಅಂದ್ರೆ ಮಗದೊಬ್ಬರು ಪ್ರಚಾರದ ಸಾಹಸ ಎಂದು ಕಾಮೆಂಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸೀಟ್ ಬೆಲ್ಟ್ ಹಾಕದ್ದಕ್ಕೆ ಫೈನ್ ಕಟ್ಟಿದ ನಂತರವೂ ಟ್ರಾಫಿಕ್ ಪೊಲೀಸರಿಂದ ಥಳಿತ- ಬೆಂಕಿ ಹಚ್ಚಿಕೊಂಡ ಚಾಲಕ

    ಸೀಟ್ ಬೆಲ್ಟ್ ಹಾಕದ್ದಕ್ಕೆ ಫೈನ್ ಕಟ್ಟಿದ ನಂತರವೂ ಟ್ರಾಫಿಕ್ ಪೊಲೀಸರಿಂದ ಥಳಿತ- ಬೆಂಕಿ ಹಚ್ಚಿಕೊಂಡ ಚಾಲಕ

    ಚೆನ್ನೈ: ಸೀಟ್ ಬೆಲ್ಟ್ ಧರಿಸದ ವಿಚಾರಕ್ಕೆ ಸಂಬಂಧಿಸಿದಂತೆ ಸಂಚಾರಿ ಪೊಲೀಸರು ಥಳಿಸಿದ ಕಾರಣ 21 ವರ್ಷದ ಕ್ಯಾಬ್ ಚಾಲಕರೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚೆನ್ನೈನಲ್ಲಿ ನಡೆದಿದೆ.

    ತಮಿಳುನಾಡಿನ ಶಂಕರನ್‍ಕೋವಿಲ್ ಮೂಲದ ಮಣಿಕಂದನ್ ಆತ್ಮಹತ್ಯೆಗೆ ಯತ್ನಿಸಿದ ಕ್ಯಾಬ್ ಚಾಲಕ. ಬುಧವಾರದಂದು ಮಣಿಕಂದನ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಶೇ.59ರಷ್ಟು ಸುಟ್ಟ ಗಾಯಗಳಾಗಿವೆ. ಸದ್ಯ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

    ಮಣಿಕಂದನ್ ಸೀಟ್ ಬೆಲ್ಟ್ ಧರಿಸದೆ ಸಂಚಾರಿ ನಿಯಮ ಉಲ್ಲಂಘಿಸಿದ್ದು, ಅದಕ್ಕಾಗಿ ದಂಡ ಕಟ್ಟಿದ್ದಾರೆ. ಬಳಿಕ ಟ್ರಾಫಿಕ್ ಪೊಲೀಸರೊಂದಿಗೆ ವಾಗ್ವಾದ ನಡೆದಿದೆ. ಪೊಲೀಸರ ದೌರ್ಜನ್ಯದ ಬಗ್ಗೆ ಮಣಿಕಂದನ್ ತನ್ನ ಮೊಬೈಲ್‍ನಲ್ಲಿ ಫೋಟೋ ಕ್ಲಿಕ್ಕಿಸಲು ಯತ್ನಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಪೊಲೀಸರು ನನಗೆ ಕಬ್ಬಿಣದ ರಾಡ್‍ನಿಂದ ಹೊಡೆದರು. ನನ್ನ ಲೈಸೆನ್ಸ್ ಕಸಿದುಕೊಂಡು, ನನ್ನ ಜಾತಿಯನ್ನ ಸೂಚಿಸಿ ನಿಂದಿಸಿದ್ರು. ನಾನು ಇದನ್ನ ಮೊಬೈಲ್‍ನಲ್ಲಿ ಸೆರೆಹಿಡಿದೆ. ಇದನ್ನ ವಾಟ್ಸಪ್ ಮತ್ತು ಯೂಟ್ಯೂಬ್‍ನಲ್ಲಿ ಅದ್ಹೇಗೆ ಹಾಕ್ತೀಯ ನೋಡ್ತೀವಿ ಎಂದು ಬೆದರಿಸಿದ್ರು ಎಂದು ಮಣಿಕಂದನ್ ಹೇಳಿದ್ದು, ಇದನ್ನ ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಕಾರಿನಲ್ಲಿದ್ದ ಇಂಧನದ ಕ್ಯಾನ್ ತೆಗೆದುಕೊಂಡು ಮೈಮೇಲೆ ಸುರಿದು ಮಣಿಕಂದನ್ ಬೆಂಕಿ ಹಚ್ಚಿಕೊಂಡಿದ್ದಾರೆ.

    ಮಣಿಕಂದನ್ ಗೆ ಚಿಕಿತ್ಸೆ ನೀಡಲು ವೈದ್ಯರ ತಂಡವನ್ನ ನಿಯೋಜಿಸಲಾಗಿದೆ. ಅವರು ಬದುಕುಳಿಯುತ್ತಾರೆಂದು ನಂಬಿದ್ದೇವೆ. ಸದ್ಯಕ್ಕೆ ಅವರು ಐಸಿಯು ನಲ್ಲಿದ್ದಾರೆ ಎಂದು ಡಾ. ಪಿ ವಸಂತಮಣಿ ಹೇಳಿದ್ದಾರೆ.

    ಘಟನೆಯ ಬಳಿಕ ಸುಮಾರು 100 ಜನ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಚೆನ್ನೈ ಪೊಲೀಸ್ ಆಯುಕ್ತರಾದ ಎಕೆ ವಿಶ್ವನಾಥನ್ ಆಸ್ಪತ್ರೆಗೆ ಭೇಟಿ ನೀಡಿ ಚಾಲಕ ಮಣಿಕಂದನ್ ಆರೋಗ್ಯ ವಿಚಾರಿಸಿದ್ದಾರೆ. ಇದಕ್ಕೆ ಕಾರಣವಾದ ಪೊಲೀಸ್ ಸಿಬ್ಬಂದಿ ವಿರುದ್ಧ ಆರೋಪ ಸಾಬೀತಾದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.