Tag: tabu dinesh gundurao

  • ಫೇಸ್‍ಬುಕ್ ನಲ್ಲಿ ನಯವಾಗಿ ಬಿಜೆಪಿಯ ಕಾಲೆಳೆದ ಟಬು ರಾವ್

    ಫೇಸ್‍ಬುಕ್ ನಲ್ಲಿ ನಯವಾಗಿ ಬಿಜೆಪಿಯ ಕಾಲೆಳೆದ ಟಬು ರಾವ್

    ಬೆಂಗಳೂರು: ಬಿಜೆಪಿ ಮುಖಂಡರೊಬ್ಬರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಪತ್ನಿ ಟಬು ದಿನೇಶ್ ಗುಂಡೂರಾವ್ ಫೇಸ್‍ಬುಕ್‍ನಲ್ಲಿ ನಯವಾಗಿ ಕಾಲೆಳೆದಿದ್ದಾರೆ.

    ಮಹಾಲಕ್ಷ್ಮಿ ಲೇಔಟ್ ಬಿಜೆಪಿ ಅಭ್ಯರ್ಥಿ ನೆಲ ನರೇಂದ್ರ ಬಾಬು ಕಾರ್ಯಕರ್ತರ ಜೊತೆ ಇಂದಿರಾ ಕ್ಯಾಂಟಿನ್ ನಲ್ಲಿ ತಿಂಡಿ ತಿಂದು ಫೋಟೋ ತೆಗೆದುಕೊಂಡಿದ್ದರು. ಈ ಪೋಟೋವನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಹಾಕಿದ ಟಬು ಅವರು, ಸಿಎಂ ಸಿದ್ದರಾಮಯ್ಯ ಕೊಡುಗೆಯ ಇಂದಿರಾ ಕ್ಯಾಂಟಿನ್ ನಲ್ಲಿ ಆಹಾರ ಸೇವಿಸಿ ಖುಷಿಯಾಗಿರುವ ಬಿಜೆಪಿಯವರು. ಕಾಂಗ್ರೆಸ್ ಇವರ ಹಸಿವನ್ನು ತಣಿಸಿರುವುದನ್ನ ನೋಡಲು ಖುಷಿಯಾಗುತ್ತೆ ಅಂತ ಲೇವಡಿ ಮಾಡಿದ್ದಾರೆ. ಫೋಟೋ ಇದೀಗ ವೈರಲ್ ಆಗಿದೆ. ಇದನ್ನೂ ಓದಿ: ಮುಲ್ಲಾ ಅಥವಾ ಮೌಲ್ವಿಗೆ ಹೊಡೀಬೇಕು ಅಂತ ಹೇಳಿದ್ರೆ, ನಿಮ್ಮ ಹೆಂಡ್ತಿಯೇ ನಿಮ್ಗೆ ಹೊಡೀತಿದ್ರು: ಗುಂಡೂರಾವ್ ವಿರುದ್ಧ ಸಿಂಹ ಕೆಂಡಾಮಂಡಲ

    ಇತ್ತೀಚೆಗಷ್ಟೇ ಉನ್ನಾವೋ ಅತ್ಯಾಚಾರ ಪ್ರಕರಣ ಸಂಬಂಧ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಟೀಕಿಸಿದ್ದ ದಿನೇಶ್ ಗುಂಡೂರಾವ್ ಅವರನ್ನು ಟೀಕಿಸುವ ಭರದಲ್ಲಿ ಸಂಸದ ಪ್ರತಾಪ್ ಸಿಂಹ ಅವರು ದಿನೇಶ್ ಪತ್ನಿ ಟಬು ಅವರ ಹೆಸರನ್ನು ಪ್ರಸ್ತಾಪ ಮಾಡಿದ್ದರು. ಸಂಸದರ ಹೇಳಿಕೆಗೆ ಟಬು ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರತಾಪ್ ಸಿಂಹ ಅವರು ತನ್ನನ್ನು ಮಧ್ಯೆ ಎಳೆದು ತಂದಿರುವುದು ತಪ್ಪು. ದಿನೇಶ್ ಅವರ ಹೇಳಿಕೆ ಸಂಬಂಧ ಅವರು ಏನು ಬೇಕಾದ್ರೂ ಹೇಳಿಕೊಳ್ಳಲಿ. ಆದ್ರೆ ಮಾತಿನ ಭರದಲ್ಲಿ ನನ್ನನ್ನು ಎಳೆದು ತರುವ ಅವಶ್ಯಕತೆ ಏನಿತ್ತು ಅಂತ ಫೇಸ್ ಬುಕ್ ನಲ್ಲಿ ಪ್ರಶ್ನಿಸಿದ್ದರು. ಇದನ್ನೂ ಓದಿ: ಸಂಸದ ಪ್ರತಾಪ್ ಸಿಂಹ ಹೇಳಿಕೆ ವಿರುದ್ಧ ದಿನೇಶ್ ಗುಂಡುರಾವ್ ಪತ್ನಿ ಆಕ್ರೋಶ