Tag: Tabu

  • ಕ್ರೂ ಪಾರ್ಟ್-2 ನಲ್ಲಿ ಕರೀನಾ ನಟಿಸೋದು ಪಕ್ಕಾ

    ಕ್ರೂ ಪಾರ್ಟ್-2 ನಲ್ಲಿ ಕರೀನಾ ನಟಿಸೋದು ಪಕ್ಕಾ

    2024ರಲ್ಲಿ ತೆರೆಕಂಡು ಥಿಯೇಟ್ರಿಕಲ್ ಹಿಟ್ ಕಂಡ ಕ್ರೂ ಸಿನಿಮಾದ ಪಾರ್ಟ್-2 (Crew 2 Movie) ತೆರೆಮರೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸದ್ಯ ಕ್ರೂ ಸಿನಿಮಾದ ಪಾರ್ಟ್-2ನಲ್ಲಿ ನಟಿ ಕರೀನಾ ಕಪೂರ್ (Kareena Kapoor) ನಟಿಸುವುದು ಪಕ್ಕಾ ಆಗಿದೆ.

    ಈ ಸಿನಿಮಾದಲ್ಲಿ ನಟಿಸೋದಕ್ಕೆ ಸದ್ಯ ಕರೀನಾ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗ್ತಿದೆ. ಆದ್ರೆ ಇನ್ನೆರಡು ಪಾತ್ರಗಳಲ್ಲಿ ಕಮಾಲ್ ಮಾಡಿದ್ದ ಟಬು ಹಾಗೂ ಕೃತಿ ಸನೋನ್ ನಟಿಸುವ ಬಗ್ಗೆ ಯಾವುದೇ ಮಾಹಿತಿ ಹೊರಹಾಕಿಲ್ಲ ಚಿತ್ರತಂಡ. ಇದನ್ನೂ ಓದಿ: ಮ್ಯಾಕ್ಸ್ ಡೈರೆಕ್ಟರ್‌ಗೆ ಕಾರ್ ಗಿಫ್ಟ್ ಕೊಟ್ಟ ಕಿಚ್ಚ ಸುದೀಪ್

    ಕಳೆದ ವರ್ಷ ಬಾಕ್ಸಾಫೀಸ್‌ನಲ್ಲಿ ಸೂಪರ್‌ಹಿಟ್ ಆದ ಕ್ರೂ ಸಿನಿಮಾ ಬಾಲಿವುಡ್‌ನಲ್ಲಿ ಭಾರಿ ಸೌಂಡ್ ಮಾಡಿದೆ. ಏಕ್ತಾ ಕಪೂರ್, ರೀಯಾ ಕಪೂರ್, ಅನಿಲ್ ಕಪೂರ್ ನಿರ್ಮಾಣದಲ್ಲಿ ಮೂಡಿಬಂದ ಈ ಸಿನಿಮಾ ಒಳ್ಳೆಯ ಲಾಭವನ್ನೇ ಮಾಡಿಕೊಟ್ಟಿದೆ. ಹೀಗಾಗಿ, ಈ ಸಿನಿಮಾದ ಪಾರ್ಟ್-2 ನಿರ್ಮಾಣ ಮಾಡಲು ಈ ತಂಡ ಮತ್ತೆ ಮನಸ್ಸು ಮಾಡಿದೆ. ಈ ಸಿನಿಮಾದ ಪಾರ್ಟ್-2ಗೆ ಸದ್ಯ ಕರೀನಾ ಒಬ್ಬರು ಒಪ್ಪಿಗೆ ಹಾಕಿದ್ದಾರೆ.

    ಕ್ರೂ ಸಿನಿಮಾದ ಪಾರ್ಟ್-1 ಚಿತ್ರದಲ್ಲಿ ಕರೀನಾ ಜೊತೆ ಕೃತಿ ಸನೋನ್ ಹಾಗೂ ಟಬು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಿನಿಮಾದಲ್ಲಿ ಮತ್ತಿನ್ಯಾರು ನಟಿಸಲಿದ್ದಾರೆ ಕಾದು ನೋಡಬೇಕು. ಕಳೆದ ವರ್ಷ ಕರೀನಾ ಕಪೂರ್ ಅಭಿನಯದ ಕ್ರೂ ಹಾಗೂ ಸಿಂಗಂ ಅಗೈನ್ ಸಿನಿಮಾ ತೆರೆಕಂಡಿದ್ದವು. ಈ ವರ್ಷ ಪಾಟ್-2 ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಬಿಹಾರ ಮೂಲದ ವ್ಯಕ್ತಿಗಳಿಂದ ಪ್ರಿಯಾಂಕಾ ಉಪೇಂದ್ರ ಮೊಬೈಲ್‌ ಹ್ಯಾಕ್‌!

  • ವಿಜಯ್ ಸೇತುಪತಿ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಟಬು

    ವಿಜಯ್ ಸೇತುಪತಿ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಟಬು

    ಬಾಲಿವುಡ್‌ನ ಖ್ಯಾತ ನಟಿ ಟಬು (Tabu) ಕಾಲಿವುಡ್‌ನತ್ತ (Kollywood) ಮುಖ ಮಾಡಿದ್ದಾರೆ. ವಿಜಯ್ ಸೇತುಪತಿ (Vijay Sethupathi) ನಟನೆಯ ಸಿನಿಮಾಗೆ ಟಬು ಎಂಟ್ರಿ ಕೊಟ್ಟಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸ್ವತಃ ಡೈರೆಕ್ಟರ್ ಪುರಿ ಜಗನ್ನಾಥ್ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಬೇಬಿ ಬಂಪ್ ಫೋಟೋ ಹಂಚಿಕೊಂಡ ಸಂಜನಾ ಗಲ್ರಾನಿ

    ಬಗೆ ಬಗೆಯ ಪಾತ್ರಗಳ ಮೂಲಕ ಹಿಂದಿ ಚಿತ್ರರಂಗದಲ್ಲಿ ಕಮಾಲ್ ಮಾಡಿರೋ ಟಬು ಈಗ ತಮಿಳಿನ ಸಿನಿಮಾಗೆ ಓಕೆ ಎಂದಿದ್ದಾರೆ. ನಟಿಯ ಜೊತೆಗಿನ ಫೋಟೋ ಶೇರ್ ಮಾಡಿ, ಭಾರತೀಯ ಸಿನಿಮಾರಂಗದ ಹೆಮ್ಮೆ ಟಬು ನಮ್ಮ ಚಿತ್ರತಂಡ ಸೇರುತ್ತಿರೋದಕ್ಕೆ ಸ್ವಾಗತ ಎಂದು ನಿರ್ದೇಶಕ ಪುರಿ ಜಗನ್ನಾಥ್ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ವಿದ್ಯಾಪತಿಗೆ ನಡುಕ ಹುಟ್ಟಿಸಿದ ‘ಕೆಜಿಎಫ್’ ಗರುಡ!

     

    View this post on Instagram

     

    A post shared by Puri Connects (@puriconnects)

    ವಿಜಯ್ ಸೇತುಪತಿಯವರಿಗಾಗಿಯೇ ನಿರ್ದೇಶಕ ಒಂದೊಳ್ಳೆಯ ಅದ್ಭುತ ಕಥೆಯನ್ನು ಸಿದ್ಧಪಡಿಸಿಕೊಂಡಿದ್ದು, ಹಿಂದೆಂದೂ ಕಾಣದ ಲುಕ್‌ನಲ್ಲಿ ಅವರನ್ನು ಪ್ರೇಕ್ಷಕರಿಗೆ ತೋರಿಸಲಿದ್ದಾರೆ. ಟಬು ಕೂಡ ಪವರ್‌ಫುಲ್ ರೋಲ್‌ನಲ್ಲಿ ನಟಿಸಲಿದ್ದಾರೆ.

    ಪುರಿ ಕನೆಕ್ಟ್ಸ್‌ ಬ್ಯಾನರ್ ನಡಿ ಪುರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇದು ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಆಗಿದ್ದು, ಜೂನ್ ತಿಂಗಳಿನಿಂದ ಚಿತ್ರೀಕರಣ ಶುರುವಾಗಲಿದೆ. ಇತ್ತೀಚೆಗೆ ವಿಜಯ್ ಸೇತುಪತಿ ಅಭಿನಯದ ‘ಮಹಾರಾಜ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿತ್ತು.

  • 12 ವರ್ಷಗಳ ನಂತರ ಹಾಲಿವುಡ್‌ನತ್ತ ಟಬು

    12 ವರ್ಷಗಳ ನಂತರ ಹಾಲಿವುಡ್‌ನತ್ತ ಟಬು

    ಬಾಲಿವುಡ್ ಬ್ಯೂಟಿ ಟಬುಗೆ (Tabu) 52 ವರ್ಷವಾದ್ರೂ ಫಿಟ್ & ಬ್ಯೂಟಿಫುಲ್ ಆಗಿದ್ದಾರೆ. ಇಂದಿಗೂ ಟಬು ಚಾರ್ಮ್ ಮಾಸಿಲ್ಲ. ಬಾಲಿವುಡ್‌ನ ಹಲವು ಬ್ಯುಸಿಯಿರುವಾಗಲೇ ಹಾಲಿವುಡ್‌ನಿಂದ ಮತ್ತೆ ಕರೆ ಬಂದಿದೆ. 12 ವರ್ಷಗಳ ನಂತರ ಮತ್ತೆ ಹಾಲಿವುಡ್‌ನತ್ತ ನಟಿ ಮುಖ ಮಾಡಿದ್ದಾರೆ.

    ‘ಡ್ಯೂನ್’ ಹೆಸರಿನ ದೀರ್ಘ ಕಾದಂಬರಿಯನ್ನು ಆಧರಿಸಿದ ವೆಬ್ ಸರಣಿ ಇದಾಗಿರಲಿದೆ. ವೆಬ್ ಸಡಣಿಯಲ್ಲಿ ಸಿಸ್ಟರ್ ಫ್ರಾಂಕೆಸ್ಕಾ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರ ಬಹಳ ಗಟ್ಟಿ ಪಾತ್ರವಾಗಿದ್ದು, ಕಥೆಯ ಅತ್ಯಂತ ಪ್ರಮುಖ ಪಾತ್ರಗಳಲ್ಲಿ ಒಂದು ಎನ್ನಲಾಗುತ್ತಿದೆ.

    ‘ಡ್ಯೂನ್’ (Dune) ವೆಬ್ ಸರಣಿಯಲ್ಲಿ ತಮ್ಮ ಪಾತ್ರ ಮತ್ತು ಕಥೆ ಇಷ್ಟವಾಗಿ ನಟಿ ಓಕೆ ಎಂದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸದ್ಯದಲ್ಲೇ ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ಭರ್ಜರಿ ಆ್ಯಕ್ಷನ್ ಅವತಾರದಲ್ಲಿ ರಾಮ್ ಪೋತಿನೇನಿ ಎಂಟ್ರಿ- ‌’ಡಬಲ್ ಇಸ್ಮಾರ್ಟ್’ ಟೀಸರ್ ಔಟ್

    ‘ದಿ ನೇಮ್ಸೇಕ್’, ‘ಲೈಫ್ ಆಫ್ ಪೈ’ ಎಂಬ ಹಾಲಿವುಡ್ ಸಿನಿಮಾಗಳಲ್ಲಿ ಟಬು ಹಲವು ವರ್ಷಗಳ ಹಿಂದೆ ನಟಿಸಿದ್ದರು. ಈಗ ಮತ್ತೆ ಹಾಲಿವುಡ್‌ಗೆ ನಟಿ ಹೊರಟಿದ್ದಾರೆ.

    ಈ ವರ್ಷ ‘ಕ್ರೀವ್’ (Crew) ಎಂಬ ಸಿನಿಮಾದಲ್ಲಿ ಕೃತಿ ಸನೋನ್, ಕರೀನಾ ಕಪೂರ್ ಜೊತೆ ಟಬು ನಟಿಸಿದ್ದರು. ಈ ಸಿನಿಮಾ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದರು.

  • ‘ಕ್ರೂ’ ಸಿನಿಮಾ ಸಕ್ಸಸ್ ಬೆನ್ನಲ್ಲೇ ಸೀಕ್ವೆಲ್ ಬಗ್ಗೆ ಮಾಹಿತಿ ನೀಡಿದ ನಿರ್ಮಾಪಕಿ

    ‘ಕ್ರೂ’ ಸಿನಿಮಾ ಸಕ್ಸಸ್ ಬೆನ್ನಲ್ಲೇ ಸೀಕ್ವೆಲ್ ಬಗ್ಗೆ ಮಾಹಿತಿ ನೀಡಿದ ನಿರ್ಮಾಪಕಿ

    ಬಾಲಿವುಡ್‌ನಲ್ಲಿ ಸದ್ಯ ‘ಕ್ರೂ’ (Crew Film) ಸಿನಿಮಾಗೆ ಪ್ರಶಂಸೆ ವ್ಯಕ್ತವಾಗಿದೆ. ಟಬು (Tabu), ಕರೀನಾ ಕಪೂರ್, ಕೃತಿ ಸನೋನ್ (Kriti Sanon) ನಟನೆಯ ‘ಕ್ರೂ’ ಚಿತ್ರ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇದೀಗ ಚಿತ್ರದ ‘ಕ್ರೂ’ ಸೀಕ್ವೆಲ್ ಬರೋದರ ಬಗ್ಗೆ ಸಹ-ನಿರ್ಮಾಪಕಿ ರಿಯಾ ಕಪೂರ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ಯುಗಾದಿ ಹಬ್ಬಕ್ಕೆ ‘ಫುಲ್ ಮಿಲ್ಸ್’ ಚಿತ್ರದ ಸ್ಪೆಷಲ್ ಪೋಸ್ಟರ್

    ಗಗನ ಸಖಿಯರ ಕಥೆಯನ್ನು ‘ಕ್ರೂ’ ಸಿನಿಮಾ ಹೊಂದಿದೆ. ಕರೀನಾ ಕಪೂರ್ ಖಾನ್ (Kareena Kapoor Khan), ಟಬು ಹಾಗೂ ಕೃತಿ ಸನೋನ್ ಅವರು ಗಗನ ಸಖಿಯರಾಗಿ ಕಾಣಿಸಿಕೊಂಡಿದ್ದಾರೆ. ಮಾ.29ರಂದು ತೆರೆಕಂಡ ಈ ಸಿನಿಮಾ ಚಿತ್ರಮಂದಿರ ಉತ್ತಮ ಗಳಿಕೆ ಕಾಣುತ್ತಿದೆ. ಈ ಖುಷಿ ಸಂದರ್ಭದಲ್ಲೇ ‘ಕ್ರೂ’ ಮುಂದುವರೆದ ಭಾಗ ಬರುವುದಾಗಿ ತಿಳಿಸಿದ್ದಾರೆ.

     

    View this post on Instagram

     

    A post shared by Kriti (@kritisanon)

    ಕ್ರೂ ಸಿನಿಮಾ 100 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿದೆ. ಹಾಗಾಗಿ ಸೀಕ್ವೇಲ್‌ಗಾಗಿ ಕಥೆ ಕೂಡ ಸಿದ್ಧವಾಗುತ್ತಿದೆ. ಉತ್ತಮ ಕಥೆಯೊಂದಿಗೆ ಮತ್ತೆ ‘ಕ್ರೂ’ ತಂಡ ಬರೋದಾಗಿ ಮಾಹಿತಿ ನೀಡಿದ್ದಾರೆ.


    ಈ ಚಿತ್ರಕ್ಕೆ ರಾಜೇಶ್ ಎ. ಕೃಷ್ಣನ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಏಕ್ತಾ ಕಪೂರ್, ರಿಯಾ ಕಪೂರ್, ಅನಿಲ್ ಕಪೂರ್, ದಿಗ್ವಿಜಯ್ ಪುರೋಹಿತ್ ಅವರು ನಿರ್ಮಾಣ ಮಾಡಿದ್ದಾರೆ. ದಿಲ್ಜಿತ್ ದೋಸಾಂಜ್, ಕಪಿಲ್ ಶರ್ಮಾ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

  • ಅಜಯ್ ಜೊತೆ ನಟಿಸಲು ಸ್ಕ್ರಿಪ್ಟ್ ಓದದೇ ಚಿತ್ರಕ್ಕೆ ಸಹಿ ಹಾಕಿದ ನಟಿ

    ಅಜಯ್ ಜೊತೆ ನಟಿಸಲು ಸ್ಕ್ರಿಪ್ಟ್ ಓದದೇ ಚಿತ್ರಕ್ಕೆ ಸಹಿ ಹಾಕಿದ ನಟಿ

    ಮುಂಬೈ: ರೋಹಿತ್ ಶೆಟ್ಟಿ ನಿರ್ದೇಶನದ ಗೋಲ್‍ಮಾಲ್ ಚಿತ್ರದಲ್ಲಿ ಅಜಯ್ ದೇವಗನ್ ಜೊತೆ ಮತ್ತೆ ನಟಿಸುವ ಅವಕಾಶ ಸಿಕ್ಕಿದ್ದರಿಂದ ಕಥೆ ಓದದೇ ಚಿತ್ರಕ್ಕೆ ಸಹಿ ಹಾಕಿದ್ದೇನೆ ಎಂದು ಬಾಲಿವುಡ್ ನಟಿ ತಬು ಹೇಳಿಕೊಂಡಿದ್ದಾರೆ.

    ಮುಂಬೈನಲ್ಲಿ ಗೋಲ್‍ಮಾಲ್-4 ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ಬಹುದಿನಗಳ ನಂತರ ರೋಹಿತ್ ಶೆಟ್ಟಿ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ಗೋಲ್‍ಮಾಲ್ ಸರಣಿಯ ಭಾಗ 4 ಸದ್ಯ ಬರುತ್ತಿದ್ದು, ಬಹುದಿನಗಳ ಮೇಲೆ ಬಾಲಿವುಡ್ ನಟಿ ತಬು ಬಣ್ಣ ಹಚ್ಚಿದ್ದಾರೆ.

    ನಾನು ತುಂಬಾ ದಿನಗಳಿಂದ ಬಣ್ಣ ಹಚ್ಚಿರಲಿಲ್ಲ. ಗೋಲ್‍ಮಾಲ್‍ನ ಒಂದನೇ ಸೀರಿಸ್ ನಲ್ಲಿ ನಾನು ನಟಿಸಿದ್ದೆ. ಚಿತ್ರ ಈಗ ನೋಡಿದರೂ ಅಷ್ಟೇ ನಗು ಬರುತ್ತದೆ. ಅಲ್ಲದೇ ಅಜಯ್ ದೇವಗನ್ ಮುಖ್ಯ ಪತ್ರದಲಿ ನಟಿಸಿದ್ದು, ಅವರ ಜೊತೆ ತುಂಬಾ ದಿನಗಳ ಕಾಲ ನಟಿಸಿರಲಿಲ್ಲ. ಆದರೆ ಈ ಚಿತ್ರದ ಮೂಲಕ ಮತ್ತೆ ಒಂದೇ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದೇವೆ ಎಂದು ತಬು ತಿಳಿಸಿದರು.

    ಈಗಾಗಲೇ ಮೂರು ಆವೃತ್ತಿಗಳಲ್ಲಿ ತೆರೆಕಂಡಿರೋ ಗೋಲ್ಮಾಲ್ ಈಗ ನಾಲ್ಕನೇಯ ಬಾರಿಗೆ ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಲು ಬರಲಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಕುತೂಹಲ ಹುಟ್ಟಿಸಿರುವ ಚಿತ್ರದ ಮೊದಲ ಟ್ರೇಲರ್ ಸೆಪ್ಟಂಬರ್ 29ರಂದು ಬಿಡುಗಡೆಯಾಗಲಿದೆ. 2006ರಲ್ಲಿ ಮೊದಲ ಬಾರಿಗೆ ಗೋಲ್ಮಾಲ್ ತೆರೆಕಂಡು ನೋಡುಗರನ್ನು ನಗಿಸುವ ಮೂಲಕ ಯಶಸ್ವಿಯಾಗಿತ್ತು. ಮುಂದೆ ಗೋಲ್ಮಾಲ್ ರಿಟರ್ನ್ (2008) ಮತ್ತು ಗೋಲ್ಮಾಲ್ (2010) ರಲ್ಲಿ ತೆರೆಕಂಡಿದ್ದವು. ಈಗ ಇದೇ ಸಿನಿಮಾದ ಮುಂದುವರೆದ ಭಾಗ ದೀಪಾವಳಿಯಂದು ದೇಶಾದ್ಯಂತ ಬಿಡುಗಡೆಯಾಗಲಿದೆ.

    ಗೋಲ್ಮಾಲ್ ಅಗೇನ್ ಸಿನಿಮಾದಲ್ಲಿ ಅಜಯ್ ದೇವಗನ್‍ಗೆ ಜೊತೆಯಾಗಿ ಪರಿಣೀತಿ ಚೋಪ್ರಾ ಜೋಡಿಯಾಗಿದ್ದಾರೆ. ಇನ್ನುಳಿದಂತೆ ಮೊದಲಿನ ಆವೃತ್ತಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಅರ್ಷದ್ ವಾರ್ಸಿ, ತುಶಾರ್ ಕಪೂರ್, ಕುನಾಳ್ ಕೇಮು ಸೇರಿದಂತೆ ದೊಡ್ಡ ತಾರಗಣವನ್ನು ಚಿತ್ರ ಹೊಂದಿದೆ. ಗೋಲ್ಮಾಲ್ ಅಗೇನ್‍ಗೆ ರೋಹಿತ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳುವ ಜೊತೆಗೆ ಅಜಯ್ ದೇವಗನ್ ಜೊತೆಗೆ ಬಂಡವಾಳನ್ನೂ ಹೂಡಿದ್ದಾರೆ.

    https://www.instagram.com/p/BY93WjHFs_9/?tagged=golmaalagain

    https://www.instagram.com/p/BXuocLljX-c/?tagged=golmaalagain

    https://www.instagram.com/p/BY5yGhPH5io/?tagged=golmaalagain

    https://www.instagram.com/p/BY52bHEDCLo/?tagged=golmaalagain

    https://www.instagram.com/p/BY1bgkYDLZm/?tagged=golmaalagain

    https://www.instagram.com/p/BYtZV6slBaO/?tagged=golmaalagain

    https://www.instagram.com/p/BYflPLODeFW/?tagged=golmaalagain

    https://www.instagram.com/p/BYOIx7_Fef6/?tagged=golmaalagain

    https://www.instagram.com/p/BY9_5HJgSEz/?tagged=golmaalagain

  • ತಾನು ಸಿಂಗಲ್ ಆಗಿರಲು ಈ ನಟನೇ ಕಾರಣ ಎಂದ ನಟಿ ತಬು

    ತಾನು ಸಿಂಗಲ್ ಆಗಿರಲು ಈ ನಟನೇ ಕಾರಣ ಎಂದ ನಟಿ ತಬು

    ಮುಂಬೈ: ಬಾಲಿವುಡ್ ಸಹಜ ಸುಂದರಿ ತಬು ತಾನೇಕೆ ಇನ್ನು ಸಿಂಗಲ್ ಆಗಿದ್ದೇನೆ ಎಂಬ ರಹಸ್ಯವನ್ನು 25 ವರ್ಷಗಳ ನಂತರ ಬಿಚ್ಚಿಟ್ಟಿದ್ದಾರೆ. ಬಾಲಿವುಡ್ ಸಿಂಗಂ ನಟ ಅಜಯ ದೇವಗನ್ ನಾನು ಸಿಂಗಲ್ ಆಗಿರಲು ಕಾರಣ ಎಂದು ಹೇಳಿ ತಬು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

    ಅಜಯ ದೇವಗನ್ ನನಗೆ ಹಲವು ವರ್ಷಗಳಿಂದ ಪರಿಚಯ. ಅಜಯ್ ಮತ್ತು ನನ್ನ ಸಂಬಂಧಿ ಸಮೀರ್ ಇಬ್ಬರೂ ನಮ್ಮ ಪಕ್ಕದ ಮನೆಯಲ್ಲಿ ವಾಸವಾಗಿದ್ದರು. ಇಬ್ಬರೂ ನನಗೆ ಒಳ್ಳೆಯ ಗೆಳೆಯರು ಹಾಗು ಅಂದು ಇಬ್ಬರೂ ನನ್ನ ಮೇಲೆ ಕಣ್ಣಿಟ್ಟಿದ್ರು. ಯಾರಾದ್ರೂ ನನ್ನ ಭೇಟಿಯಾಗಲು ಬಂದರೆ ಅವರಿಗೆ ಧಮಕಿ ಹಾಕಿ ಮತ್ತೊಮ್ಮೆ ಬರದಂತೆ ಹೇಳಿ ಕಳಿಸುತ್ತಿದ್ದರು. ಹಾಗಾಗಿ ನಾನಿನ್ನು ಸಿಂಗಲ್ ಆಗಿದ್ದೇನೆ ಎಂದು ಪತ್ರಿಕೆಯೊಂದಕ್ಕೆ ತಬು ತಿಳಿಸಿದ್ದಾರೆ.

    ಅಜಯ ದೇವಗನ್ ಮತ್ತು ತಬು 25 ವರ್ಷಗಳ ನಂತರ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ `ಗೋಲ್ಮಾಲ್ ಅಗೇನ್’ ಚಿತ್ರದಲ್ಲಿ ತಬು ಮತ್ತು ಅಜಯ ಮತ್ತೊಮ್ಮೆ ಜೋಡಿಯಾಗಿದ್ದಾರೆ. ಈ ಮೊದಲು 1994ರಲ್ಲಿ `ವಿಜಯಪಥ್’ ಸಿನಿಮಾದಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ತಮ್ಮ ಕೆಮಿಸ್ಟ್ರಿ ಮೂಲಕ ಮೋಡಿ ಮಾಡಿದ್ದರು. ಇನ್ನೂ ಗೋಲ್ಮಾಲ್ ಚಿತ್ರದಲ್ಲಿ ಇವರಿಬ್ಬರ ನಡುವೆ ರೋಮ್ಯಾನ್ಸ್ ಸೀನ್‍ಗಳಿವೆ ಎಂದು ಹೇಳಲಾಗುತ್ತಿದೆ.

    ಅಜಯ್ ಮತ್ತು ತಬು ಇವರೆಗೂ ತಕ್ಷಕ್, ಫಿತೂರ್, ದೃಶ್ಯಂ ಮತ್ತು ವಿಜಯಪಥ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಗೋಲ್ಮಾಲ್ ಅಗೇನ್ ಸಿನಿಮಾದಲ್ಲಿ ಅರ್ಷದ್ ವಾರ್ಸಿ, ಪರಿಣಿತಿ ಚೋಪಡಾ, ಕುಣಾಲ್ ಖೇಮು ಮತ್ತು ತುಷಾರ್ ಕಪೂರ್ ನಟಿಸುತ್ತಿದ್ದಾರೆ.

    https://www.youtube.com/watch?v=kkzv_AFUPfM