Tag: tablets

  • ಪರೀಕ್ಷೆಯ ವೇಳೆ ಉಗ್ರರು ನುಂಗುವ ಮಾತ್ರೆಯ ಮೊರೆ ಹೋಗುತ್ತಿದ್ದಾರೆ ಮಕ್ಕಳು

    ಪರೀಕ್ಷೆಯ ವೇಳೆ ಉಗ್ರರು ನುಂಗುವ ಮಾತ್ರೆಯ ಮೊರೆ ಹೋಗುತ್ತಿದ್ದಾರೆ ಮಕ್ಕಳು

    – 1 ಮಾತ್ರೆ ನುಂಗಿದರೆ 40 ತಾಸು ನಿದ್ರೆ ಬರಲ್ಲ
    – ಮಾತ್ರೆಯಿಂದ ಗಂಭೀರ ಆರೋಗ್ಯ ಸಮಸ್ಯೆ

    ಲಕ್ನೋ: ಇನ್ನೇನು ಕೆಲವೇ ದಿನಗಳಲ್ಲಿ 10ನೇ ತರಗತಿ ಪರೀಕ್ಷೆ (SSLC Exam) ನಡೆಯುತ್ತದೆ. ಈ ಸಮಯದಲ್ಲಿ ನಿದ್ದೆ ಬರಬಾರದೆಂದು ಶಾಲಾ ಮಕ್ಕಳು ಭಯೋತ್ಪಾದಕರು ತೆಗೆದುಕೊಳ್ಳುವಂತಹ ಮಾತ್ರೆಗಳನ್ನು ಸೇವಿಸುತ್ತಿರುವ ಆಘಾತಕಾರಿ ವಿಚಾರವೊಂದು ಬಯಲಾಗಿದೆ.

    ಈ ಸಂಬಂಧ ವೈದ್ಯ ಲೋಕ ಕೂಡ ಆತಂಕ ವ್ಯಕ್ತಪಡಿಸಿದ್ದು, ಇಂತಹ ಮಾತ್ರೆಗಳನ್ನು (Tablets) ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿದೆ.

    ಬೆಳಕಿಗೆ ಬಂದಿದ್ದು ಹೇಗೆ?: ಉತ್ತರ ಪ್ರದೇಶದ ಪ್ರಜಕ್ತಾ ಸ್ವರೂಪ್ ಎಂಬ ವಿದ್ಯಾರ್ಥಿನಿ 10ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಹೀಗಾಗಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಈಕೆ ಏಕಾಏಕಿ ಕುಸಿದುಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಈ ವೇಳೆ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

    ತಪಾಸಣೆ ವೇಳೆ ಆಕೆಯ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ, ನರಗಳು ಊದಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ವೈದ್ಯರು ಆಕೆಗೆ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಸದ್ಯ ವಿದ್ಯಾರ್ಥಿನಿ ಆರೋಗ್ಯ ಚೇತರಿಸಿಕೊಳ್ಳುತ್ತಿದೆ. ಇದನ್ನೂ ಓದಿ: ಹೆಬ್ಬಾಳ ಬಳಿಕ ಯಶವಂತಪುರ, ಗೊರಗುಂಟೆಪಾಳ್ಯದಲ್ಲಿ ಸುರಂಗ ನಿರ್ಮಾಣಕ್ಕೆ ಚಿಂತನೆ

    ಇತ್ತ ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲಾದ ಬಳಿಕ ಪೋಷಕರು ಆಕೆ ಓದುತ್ತಿದ್ದ ಕೋಣೆಯನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಲ್ಲಿ ಮಾತ್ರೆಗಳು ತುಂಬಿದ ಬಾಟ್ಲಿಯೊಂದು ಪತ್ತೆಯಾಗಿದೆ. ಇದರಿಂದ ಆತಂಕಗೊಂಡ ಪೋಷಕರು ಮಾತ್ರೆಗಳನ್ನು ವೈದ್ಯರ ಬಳಿ ತೋರಿಸಿದ್ದಾರೆ. ಆಗ ವೈದ್ಯರು, ಇದು ನಿದ್ದೆಯಿಂದ ತಪ್ಪಿಸಿಕೊಳ್ಳಲು ಬಳಸುವ ಮಾತ್ರೆ ಎಂದು ತಿಳಿಸಿದ್ದಾರೆ.

    ಈ ಕುರಿತು ಪೋಷಕರು ವಿದ್ಯಾರ್ಥಿನಿಯನ್ನು ವಿಚಾರಿಸಿದಾಗ ಆಕೆಯೂ ಒಪ್ಪಿಕೊಂಡಿದ್ದಾಳೆ. ಪರೀಕ್ಷೆಯ ಸಮಯದಲ್ಲಿ ರಾತ್ರಿಯಿಡೀ ಎಚ್ಚರದಿಂದ ಇರಲು ಈ ಮಾತ್ರೆ ಸೇವಿಸುತ್ತಿದ್ದೆ ಎಂದಿದ್ದಾಳೆ. ಇದು ವೈದ್ಯರು ಹಾಗೂ ಪೋಷಕರನ್ನು ದಿಗ್ಭ್ರಮೆಗೊಳಿಸಿದೆ.

    ಏನಿದು ಮಾತ್ರೆ?: ಒಂದು ಮಾತ್ರೆ ಸೇವಿಸಿದರೆ ಸುಮಾರು 40 ಗಂಟೆಗಳ ಕಾಲ ಎಚ್ಚರದಿಂದ ಇರುವಂತೆ ಮಾಡುತ್ತದೆ. ಸಾಮಾನ್ಯವಾಗಿ ಈ ಮಾತ್ರೆಗಳನ್ನು ಉಗ್ರರು ತೆಗೆದುಕೊಳ್ಳುತ್ತಾರೆ. ಭಯೋತ್ಪಾದಕ ದಾಳಿ ವೇಳೆ ನಿದ್ರೆ ತಪ್ಪಿಸಲು ಉಗ್ರರು ಇಂತಹ ಮಾತ್ರೆಗಳನ್ನು ನುಂಗಿ ಕಾರ್ಯಾಚರಣೆ ಮಾಡುತ್ತಾರೆ. ಇದು ಮಾರುಕಟ್ಟೆಗಳಲ್ಲಿ ಸಿಗಲ್ಲ. ಆದರೆ ಕಳ್ಳ ಮಾರ್ಗದಲ್ಲಿ ಬೇರೆ ಬೇರೆ ಮಾತ್ರೆಗಳ ಹೆಸರಿನಲ್ಲಿ ಭಾರತಕ್ಕೆ ಸಾಗಿಸಲಾಗುತ್ತದೆ.

    ಇದೀಗ ಈ ಮಾತ್ರೆಗಳನ್ನು ವಿದ್ಯಾರ್ಥಿಗಳು ಸೇವಿಸುತ್ತಿರುವುದು ಆತಂಕಕಾರಿಯಾಗಿದೆ. ಪರೀಕ್ಷೆಗಳ ಸಮಯಗಳಲ್ಲಿ ಇಂತಹ ಮಾತ್ರೆಗೆ ಬೇಡಿಕೆ ಕೂಡ ಹೆಚ್ಚಾಗುತ್ತದೆ ಎಂದು ಔಷಧ ವ್ಯಾಪಾರಿಗಳು ಹೇಳುತ್ತಾರೆ. ಒಟ್ಟಿನಲ್ಲಿ ಪರೀಕ್ಷೆ ಹತ್ತಿರ ಬರುತ್ತಿದ್ದಂತೆಯೇ ಪೋಷಕರು ಕೂಡ ತಮ್ಮ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.

  • ಕೋವಿಡ್ ಎಫೆಕ್ಟ್ ದಾಖಲೆ ಮಾರಾಟ – 358 ಕೋಟಿ ಡೋಲಾ ಟ್ಯಾಬ್ಲೆಟ್‍ಗಳು ಮಾರಾಟ

    ಕೋವಿಡ್ ಎಫೆಕ್ಟ್ ದಾಖಲೆ ಮಾರಾಟ – 358 ಕೋಟಿ ಡೋಲಾ ಟ್ಯಾಬ್ಲೆಟ್‍ಗಳು ಮಾರಾಟ

    ನವದೆಹಲಿ: ಕೊರೊನಾ ಸೋಂಕಿನಿಂದ ಭಯಗೊಂಡಿರುವ ಜನ ಯಾವುದೇ ಜ್ವರ ಬಂದ ಕೂಡಲೇ ಡೋಲಾ 650 ಮಾತ್ರೆಯನ್ನು ಪಡೆಯುತ್ತಿದ್ದಾರೆ. ಪರಿಣಾಮ ದೇಶದಲ್ಲಿ ಕೊರೊನಾ ಕಾಲದಲ್ಲಿ ಡೋಲಾ 650 ಮಾತ್ರೆಯು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿದೆ.

    ಎರಡೇ ವರ್ಷದಲ್ಲಿ ಭಾರತದಲ್ಲಿ 358 ಕೋಟಿ ಡೋಲಾ 650 ಮಾತ್ರೆ ಮಾರಾಟವಾಗಿದೆ. 2020ರ ಬಳಿಕ ಭಾರತದಲ್ಲಿ ಏಕಾಏಕಿ ಜ್ವರ ವಿರುದ್ಧ ಔಷಧವಾದ ಡೋಲಾ 650 ಮಾತ್ರೆಗಳು ಬರೋಬ್ಬರಿ 350 ಕೋಟಿಗೂ ಹೆಚ್ಚು ಮಾರಾಟ ಆಗಿವೆ ಎಂದು ಅಂಕಿಅಂಶಗಳು ಹೇಳುತ್ತಿವೆ. ಅಂಡಾಕಾರದ ಆಕಾರದ ಬಿಳಿ ಮಾತ್ರೆಯು ಮಾರಾಟವು ಕಳೆದ ಎರಡು ವರ್ಷಗಳಲ್ಲಿ ದ್ವಿಗುಣಗೊಂಡಿದೆ. ಇದನ್ನೂ ಓದಿ:   ಮಾನ್ಯ ಡಿಕೆಶಿ ಅವರೇ, ನಿಮ್ಮ ಆರೋಗ್ಯ ಹೇಗಿದೆ?: ಬಿಜೆಪಿ

    ಸೆಪ್ಟೆಂಬರ್ 2020ರ ಸುಮಾರಿಗೆ ಕೋವಿಡ್ ಮೊದಲ ಅಲೆಯು ಭಾರತಕ್ಕೆ ಬಂದಿತ್ತು. ಆದರೆ ಹೆಚ್ಚಿನ ಸಾವುಗಳನ್ನು ಕಂಡ ಎರಡನೇ ಅಲೆಯು ಮೇ 2021 ರಲ್ಲಿ ಭಾರತವನ್ನು ಅಪ್ಪಳಿಸಿತು. ಭಾರತವು 3.5 ಕೋಟಿಗೂ ಹೆಚ್ಚು ಪ್ರಕರಣಗಳನ್ನು ದಾಖಲಾಗಿವೆ. ಡೋಲೋ 2021ರಲ್ಲಿ 307 ಕೋಟಿ ರೂಪಾಯಿಗಳ ವಹಿವಾಟು ನಡೆಸುವ ಮೂಲಕ ಭಾರತದಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾದ ನೋವು ನಿವಾರಕ ಟ್ಯಾಬ್ಲೆಟ್ ಆಗಿದೆ.  ಇದನ್ನೂ ಓದಿ:  ಪಕ್ಷದಿಂದ ಸಚಿವನ ಉಚ್ಛಾಟಿಸಿದ ಬಿಜೆಪಿ – ಮತ್ತೆ ‘ಕೈ’ ಹಿಡೀತಾರಾ ಹರಕ್ ಸಿಂಗ್ ರಾವತ್?

    ಔಷಧದ ವಾರ್ಷಿಕ ಮಾರಾಟವು 9.4 ಕೋಟಿ ಸ್ಟ್ರಿಪ್‍ಗಳಿಗೆ ಏರಿಕೆಯಾಯಿತು. ಒಂದು ಸ್ಟ್ರಿಪ್‍ನಲ್ಲಿ 15 ಮಾತ್ರೆಗಳು ಇರುತ್ತವೆ. 141 ಕೋಟಿ ಮಾತ್ರೆಗಳು ಮಾರಾಟವಾಗಿವೆ. 2020ರಲ್ಲಿ 2019 ಕ್ಕಿಂತ ಎರಡು ಪಟ್ಟು ಹೆಚ್ಚಿನ ಡೋಲಾ 650 ಮಾತ್ರೆಗಳು ಮಾರಾಟವಾಗಿವೆ. ನವೆಂಬರ್ 2021ರ ವೇಳೆಗೆ 14.5 ಸ್ಟ್ರಿಪ್ಸ್‍ಗಳು ಮಾರಾಟವಾಗಿವೆ. 217 ಕೋಟಿ ಟ್ಯಾಬ್ಲೆಟ್‍ಗಳು ಮಾರಾಟವಾದವು. 2020 ಹಾಗೂ 2021ರಲ್ಲಿ ಡೋಲಾ 650ಮಾತ್ರೆಗಳು ಬರೋಬ್ಪರಿ 358 ಕೋಟಿ ಟ್ಯಾಬ್ಲೆಟ್‍ಗಳು ಮಾರಾಟವಾಗಿತ್ತು.

    ಜನವರಿ 2020 ರಲ್ಲಿ ಕೋವಿಡ್ -19 ಏಕಾಏಕಿ ಪ್ರಾರಂಭವಾದಾಗಿನಿಂದ, ಡೋಲೋ 650 ಸುಮಾರು 2 ಲಕ್ಷ ಹುಡುಕಾಟಗಳೊಂದಿಗೆ ಗೂಗಲ್‍ನಲ್ಲಿ ಹೆಚ್ಚು ಹುಡುಕಲಾದ ಕೀವರ್ಡ್ ಆಗಿದೆ ಮತ್ತು ಕ್ಯಾಲ್ಪೋಲ್ 650 ಅನ್ನು ಸುಮಾರು 40,000 ಬಾರಿ ಸರ್ಚ್ ಮಾಡಲಾಗಿದೆ. ಎರಡನೇ ಅಲೆಯ ಸಮಯದಲ್ಲಿ ಕೀವರ್ಡ್‍ಗಾಗಿ ಹುಡುಕಾಟದ ಪ್ರಮಾಣವು ಉತ್ತುಂಗಕ್ಕೇರಿತ್ತು.

  • 3 ಲಕ್ಷ ಮಾತ್ರೆ, 10 ಸಾವಿರ ಮಾಸ್ಕ್, 2 ಸಾವಿರ ಸ್ಯಾನಿಟೈಸರ್ ಬಳಸಿ ಸಾಯಿಬಾಬಾ ದೇವಸ್ಥಾನಕ್ಕೆ ವಿಶೇಷ ಅಲಂಕಾರ

    3 ಲಕ್ಷ ಮಾತ್ರೆ, 10 ಸಾವಿರ ಮಾಸ್ಕ್, 2 ಸಾವಿರ ಸ್ಯಾನಿಟೈಸರ್ ಬಳಸಿ ಸಾಯಿಬಾಬಾ ದೇವಸ್ಥಾನಕ್ಕೆ ವಿಶೇಷ ಅಲಂಕಾರ

    – ಗುರುಪೂರ್ಣಿಮೆ ಅಂಗವಾಗಿ ಜೆಪಿನಗರದ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ
    – ಭಕ್ತಾದಿಗಳಿಗೆ ವಿಶೇಷ ಸುರಕ್ಷೆ ನೀಡಲು ಕರೋನಾ ಕಿಲ್ಲರ್ ಯಂತ್ರ ಅಳವಡಿಕೆ
    – ಒಂದು ವಾರದ ಬಳಿಕ ಒಂದು ಲಕ್ಷ ಕುಟುಂಬಕ್ಕೆ ಹಂಚುವ ನಿರ್ಧಾರ
    – ಸಂಸದ ತೇಜಸ್ವೀ ಸೂರ್ಯ ಅವರಿಂದ ಶ್ಲಾಘನೆ

    ಬೆಂಗಳೂರು: ಗುರುಪೂರ್ಣಿಮೆ ಅಂಗವಾಗಿ ಇಂದು ಜೆಪಿ ನಗರದ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ 3 ಲಕ್ಷ ಮಾತ್ರೆ, 10 ಸಾವಿರ ಮಾಸ್ಕ್, 2 ಸಾವಿರ ಸ್ಯಾನಿಟೈಸರ್ ಬಳಸಿ ವಿಶೇಷ ಅಲಂಕಾರ ಮಾಡಿರುವುದನ್ನ ಕಂಡು ಭಕ್ತಾದಿಗಳು ಪುಳಕಿತರಾದರು.

    ಕೊರೊನಾ ಮೂರನೇ ಅಲೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವುದು ಹಾಗೂ ವಿಶೇಷ ವಾದ ಆಲಂಕಾರದಿಂದ ಜನರಿಗೆ ಉಪಯೋಗವಾಗಬೇಕು ಎನ್ನುವ ಉದ್ದೇಶದಿಂದ ಮಾತ್ರೆಗಳನ್ನು ಬಳಸಿಕ ಆಲಂಕಾರ ಮಾಡುವ ಯೋಜನೆಯನ್ನು ಕೈಗೆತ್ತುಕೊಳ್ಳಲಾಯಿತು. 3 ಲಕ್ಷ ಮಾತ್ರೆ, 10 ಸಾವಿರ ಮಾಸ್ಕ್, 2 ಸಾವಿರ ಸ್ಯಾನಿಟೈಸರ್ ಹಾಗೂ ರೇಷನ್ ಕಿಟ್ ನಲ್ಲಿ ಇರುವಂತಹ ಪದಾರ್ಥಗಳಿಂದ ಆಲಂಕಾರ ಮಾಡಿದ್ದೇವೆ. ಸುಮಾರು 4 ದಿನಗಳ ಕಾಲ ತಯಾರಿ ನಡೆಸಿದ್ದು, ಒಂದು ವಾರಗಳ ನಂತರ ಇಲ್ಲಿ ಬಳಸಲಾಗಿರುವ ಎಲ್ಲಾ ರೀತಿಯ ವಸ್ತುಗಳನ್ನು ಅಗತ್ಯವಿರುವ ಜನರಿಗೆ ನೀಡಲಿದ್ದೇವೆ ಎಂದು ಕಾರ್ಯಕ್ರಮದ ವ್ಯವಸ್ಥಾಪಕರು ಹಾಗೂ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದ ಟ್ರಸ್ಟಿ ರಾಮ ಮೋಹನ ರಾಜ್ ತಿಳಿಸಿದರು.

    ಈ ವಿಶೇಷ ಅಲಂಕಾರವನ್ನು ಕಂಡು ಸಂಸದ ತೇಜಸ್ವೀ ಸೂರ್ಯ ಶ್ಲಾಘಿಸಿದರು. ಲಕ್ಷಾಂತರ ರೂಪಾಯಿಗಳನ್ನು ಖರ್ಚುಗೊಳಿಸಿ ಹಾಳಾಗುವಂತಹ ವಸ್ತುಗಳನ್ನು ಬಳಸಿ ಆಲಂಕಾರ ಮಾಡಿದರೆ ಅದರಿಂದ ಉಪಯೋಗವಾಗುವುದಿಲ್ಲ. ಇಂತಹ ವಿಭಿನ್ನ ಆಲೋಚನೆಯಿಂದಾಗಿ ಆಲಂಕಾರವೂ ಆಗುತ್ತದೆ ಹಾಗೆಯೇ ನಂತರ ಅದರ ಸದುಯೋಗವೂ ಆಗುತ್ತದೆ. ಈ ನಿಟ್ಟಿನಲ್ಲಿ ವಿಭಿನ್ನ ಆಲೋಚನೆ ಮಾಡಿರುವ ಮಾಜಿ ಉಪಮಹಾಪೌರರಾದ ರಾಮ ಮೋಹನ ರಾಜ್ ಅವರ ಕಾರ್ಯ ಶ್ಲಾಘನೀಯ ಎಂದರು. ಇದನ್ನೂ ಓದಿ: ದೊಡ್ಮನೆಯಲ್ಲಿ ಮತ್ತೊಮ್ಮೆ ಅರವಿಂದ್‍ಗೆ ಸಿಕ್ತು ಬಿಗ್‍ಬಾಸ್ ಪಟ್ಟ

    ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತೆ ಕವಿತಾ ಮಾತನಾಡಿ, ಲಾಕ್‍ಡೌನ್ ನಲ್ಲಿ ಮನೆಯಿಂದ ಹೊರಗೆ ಹೋಗದೆ ಬಹಳಷ್ಟು ಬೇಸರಕ್ಕೀಡಾಗಿದ್ದೇವು. ಲಾಕ್‍ಡೌನ್ ಸಡಲಿಕೆಗೊಂಡ ನಂತರ ಇಂತಹ ವಿಭಿನ್ನ ಆಲೋಚನೆಯ ಆಲಂಕಾರ ಮಾಡಿರುವ ದೇವಸ್ಥಾನಕ್ಕೆ ಭೇಟಿ ನೀಡದ್ದು ಸಂತಸವಾಯಿತು ಎಂದು ಹೇಳಿದರು. ಇದನ್ನೂ ಓದಿ: RRR ಆಡಿಯೋ ರೈಟ್ಸ್ ಲಹರಿ ಪಾಲು

  • ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಉಚಿತ ‘ಟ್ಯಾಬ್’ – ಪಬ್ಲಿಕ್ ಟಿವಿ ಸಂಕಲ್ಪ

    ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಉಚಿತ ‘ಟ್ಯಾಬ್’ – ಪಬ್ಲಿಕ್ ಟಿವಿ ಸಂಕಲ್ಪ

    ಬೆಂಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲಿ ಎಸ್‍ಎಸ್‍ಎಲ್‍ಸಿ ಓದುತ್ತಿರುವ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಪಬ್ಲಿಕ್ ಟಿವಿ, ರೋಟರಿ ಇಂಟರ್ ನ್ಯಾಷನಲ್ ಸಹಯೋಗದೊಂದಿಗೆ ಉಚಿತ `ಟ್ಯಾಬ್’ ವಿತರಿಸಲು ಮುಂದಾಗಿದೆ.

    ಖಾಸಗಿ ಶಾಲೆಯ ಮಕ್ಕಳು ಈಗಾಗಲೇ ಆನ್‍ಲೈನ್ ಮೂಲಕ ಶಿಕ್ಷಣ ಪಡೆಯುತ್ತಿದ್ದಾರೆ. ಆರ್ಥಿಕ ಕಾರಣದಿಂದಾಗಿ ಸರ್ಕಾರಿ ಶಾಲೆಯ ಮಕ್ಕಳು ಯಾವುದೇ ಕಾರಣಕ್ಕೆ ಮುಂದೆ ಶಿಕ್ಷಣದಿಂದ ವಂಚಿತರಾಗಬಾರದು. ಈ ಕಾರಣಕ್ಕೆ ಆನ್‍ಲೈನ್ ಶಿಕ್ಷಣ ವಂಚಿತ ಸರ್ಕಾರಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ನೀಡಲು ಮುಂದಾಗುತ್ತಿದ್ದೇವೆ.

    ಗಣಿತ, ಇಂಗ್ಲಿಷ್, ವಿಜ್ಞಾನ, ಸಮಾಜ ಪಠ್ಯವನ್ನು ಟ್ಯಾಬ್ ಒಳಗೊಂಡಿದ್ದು 2 ಲಕ್ಷ ವಿದ್ಯಾರ್ಥಿಗಳಿಗೆ ವಿತರಣೆಯ ಗುರಿಯನ್ನು ಹಾಕಲಾಗಿದೆ. ಡಿಡಿಪಿಐಗಳ ಮೂಲಕ 34 ಜಿಲ್ಲೆಗಳಿಗೂ ವಿತರಣೆಗೆ ಸಂಕಲ್ಪ ಮಾಡಿದ್ದು, ಶಾಲೆಗಳ ಮುಖ್ಯೋಪಾಧ್ಯಾಯರ ಮೂಲಕ ನಿಗಾ ಇಡಲಾಗುವುದು. ಟ್ಯಾಬ್ ದುರ್ಬಳಕೆ ಆಗದಂತೆ ಆ್ಯಪ್ ಆಧಾರಿತ ಲಾಕ್ ಇರಲಿದೆ.

    ಒಂದು ಟ್ಯಾಬ್‍ಗೆ 3,495 ರೂ. ಆಗಲಿದ್ದು, ಈ ಸಹಾಯ ಹಸ್ತಕ್ಕೆ ನೀವು ನೆರವು ನೀಡಬಹುದು. ನೀವು ಕೈಜೋಡಿಸಿದರೆ ಯಾವುದೂ ಅಸಾಧ್ಯವಲ್ಲ. ಬನ್ನಿ ಸಹಾಯ ಮಾಡೋಣ. ಮಕ್ಕಳ ಭವಿಷ್ಯ ಬೆಳಗಿಸೋಣ.

    ದೇಣಿಗೆ ನೀಡಬಯಸುವ ಮಹಾದಾನಿಗಳಿಗಾಗಿ ಬ್ಯಾಂಕ್ ವಿವರ:
    ಪಬ್ಲಿಕ್ ಟಿವಿ ಎಜುಕೇಷನ್& ಚಾರಿಟೇಬಲ್ ಟ್ರಸ್ಟ್
    ಬ್ಯಾಂಕ್‌ – ಆಕ್ಸಿಸ್ ಬ್ಯಾಂಕ್
    ಖಾತೆ ಸಂಖ್ಯೆ – 916010043440024
    (ಆರ್.ಟಿ.ನಗರ ಬ್ರಾಂಚ್, ಬೆಂಗಳೂರು)
    ಐಎಫ್‍ಎಸ್‍ಸಿ ಕೋಡ್- UTIB0000363 UTIB

  • ಕುಟುಂಬಸ್ಥರ ಊಟದಲ್ಲಿ ನಶೆ ಮಾತ್ರೆ ಮಿಕ್ಸ್-ರಾತ್ರಿ 22ರ ಯುವಕನಿಂದ 13ರ ಬಾಲಕಿಯ ಮೇಲೆ ರೇಪ್

    ಕುಟುಂಬಸ್ಥರ ಊಟದಲ್ಲಿ ನಶೆ ಮಾತ್ರೆ ಮಿಕ್ಸ್-ರಾತ್ರಿ 22ರ ಯುವಕನಿಂದ 13ರ ಬಾಲಕಿಯ ಮೇಲೆ ರೇಪ್

    -ಕುಟುಂಬಸ್ಥರ ಊಟದಲ್ಲಿ ಬಾಲಕಿಯಿಂದಲೇ ಮಾತ್ರೆ ಮಿಕ್ಸ್
    -ಮನೆಗೆ ಹೊರಗೆ ಕಾಮುಕ ಗೆಳೆಯನಿಂದ ಕಾವಲು

    ಚಂಡೀಗಢ: 13 ವರ್ಷದ ಬಾಲಕಿಯ ಮೇಲೆ 22 ವರ್ಷದ ಅತ್ಯಾಚಾರಗೈದಿರುವ ಘಟನೆ ಹರಿಯಾಣದ ಲಾಖನಮಾಜರಾ ಕ್ಷೇತ್ರದಲ್ಲಿ ನಡೆದಿದೆ. ಯುವಕ ಬಾಲಕಿಯಿಂದಲೇ ಆಕೆಯ ಕುಟುಂಬಸ್ಥರಿಗೆ ಮತ್ತು ಬರುವ ಔಷಧಿ ನೀಡುವಂತೆ ಮಾಡಿದ್ದಾನೆ.

    ಕುಟುಂಬಸ್ಥರು ಮತ್ತು ಮಿಶ್ರಿತ ಆಹಾರ ಸೇವಿಸಿ ಗಾಢವಾದ ನಿದ್ದೆಯಲ್ಲಿದ್ದಾಗ ಮನೆಗೆ ನುಗ್ಗಿದ ಯುವಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇತ್ತ ಮನೆಯ ಹೊರಗೆ ಯುವಕನ ಮತ್ತೋರ್ವ ಗೆಳೆಯ ಕಾವಲು ಕಾದಿದ್ದಾನೆ. ಘಟನೆಯ ಬಳಿಕ 22 ವರ್ಷದ ಯುವಕರಿಬ್ಬರು ಗ್ರಾಮದಿಂದ ಕಾಲ್ಕಿತ್ತಿದ್ದಾರೆ.

    ಪ್ರಕರಣ ಬೆಳಕಿಗೆ ಬಂದಿದ್ದೇಗೆ?: ನಶೆ ಮಿಶ್ರಿತ ಆಹಾರ ಸೇವಿಸಿದ್ದ ಬಾಲಕಿಯ ಕುಟುಂಬಸ್ಥರಿಗೆ ಬೆಳಗ್ಗೆ ಎಚ್ಚರವಾಗಿದೆ. ಕುಟುಂದ ಎಲ್ಲರನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ ಹೊರಗಿನಿಂದ ಬಾಗಿಲು ಹಾಕಲಾಗಿತ್ತು. ಕೊನೆಗೆ ಕುಟುಂಬಸ್ಥರು ಬಾಗಿಲು ಒಡೆದು ಹೊರಗೆ ಬಂದಿದ್ದಾರೆ. ಎಲ್ಲರಿಗೂ ತಲೆ ಸುತ್ತು ಬಂದ ಹಿನ್ನೆಲೆ ಸ್ಥಳೀಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

    ವೈದ್ಯರು ನಶೆ ಪದಾರ್ಥ ಸೇವನನೆಯಿಂದಾಗಿ ಗಾಢವಾದ ನಿದ್ರೆ ಜೊತೆ ತಲೆ ಸುತ್ತು ಬಂದಿರುವ ವಿಷಯವನ್ನು ತಿಳಿಸಿದ್ದಾರೆ. ಇನ್ನು ಮನೆಯಲ್ಲಿ ಆರೋಗ್ಯವಾಗಿದ್ದ ಬಾಲಕಿಯ ಮೇಲೆ ಅನುಮಾನಗೊಂಡು ಪೋಷಕರು ಪ್ರಶ್ನಿಸಿದ್ದಾರೆ. ಭಯಗೊಂಡ ಬಾಲಕಿ ನಡೆದ ಘಟನೆಯನ್ನು ವಿವರಿಸಿದ್ದಾಳೆ.

    ಯುವಕರ ಮಾತು ನಂಬಿದ ಬಾಲಕಿ: ಶನಿವಾರ ಬೆಳಗ್ಗೆ ಗ್ರಾಮದ ಸಂದೀಪ್ ಮತ್ತು ಪಕ್ಕದೂರಿನ ಮತ್ತೋರ್ವ ಬಾಲಕಿಯನ್ನ ಭೇಟಿಯಾಗಿದ್ದಾರೆ. ಪರಿಚಯಸ್ಥರಾಗಿದ್ದರಿಂದ ಬಾಲಕಿ ಸಹ ಅವರ ಜೊತೆ ಮಾತನಾಡಿದ್ದಾನೆ. ಬಾಲಕಿಯನ್ನ ಪುಸಲಾಯಿಸಿದ ಇಬ್ಬರು ಆಕೆಗೆ ಐದು ನಶೆಯ ಮಾತ್ರೆಗಳನ್ನು ನೀಡಿ ಆಹಾರದಲ್ಲಿ ಬೆರೆಸುವಂತೆ ಹೇಳಿದ್ದಾರೆ. ಮಾತ್ರೆ ಪಡೆದ ಬಾಲಕಿ ಅದನ್ನ ಆಹಾರದಲ್ಲಿ ಬೆರೆಸಿದ್ದಾಳೆ.

    ಸದ್ಯ ಕುಟುಂಬಸ್ಥರು ನೀಡಿದ ದೂರಿನ ಆಧಾರದಲ್ಲಿ ಐಪಿಸಿ ಸೆಕ್ಷನ್ 376, 328, 452, 34 ಮತ್ತು ಪೋಕ್ಸೋ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಆರೋಪಿಗಳಿಬ್ಬರು ನಾಪತ್ತೆಯಾಗಿದ್ದು, ಶೀಘ್ರದಲ್ಲಿಯೇ ಬಂಧಿಸಲಿದ್ದೇವೆ ಎಂದು ಲಾಖನಮಾಜರಾ ಠಾಣೆಯ ಹಿರಿಯ ಪೊಲೀಸ್ ರಾಜೇಂದ್ರ ಬುರಾ ಹೇಳಿದ್ದಾರೆ.

  • ನಮ್ಮಲ್ಲಿ ಅಗತ್ಯಕ್ಕಿಂತಲೂ 2.28 ಕೋಟಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳಿವೆ

    ನಮ್ಮಲ್ಲಿ ಅಗತ್ಯಕ್ಕಿಂತಲೂ 2.28 ಕೋಟಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳಿವೆ

    – ಕೊರೊನಾ ಸಮುದಾಯ ಪ್ರಸಾರ ಹಂತಕ್ಕೆ ಕಾಲಿಟ್ಟಿಲ್ಲ
    – 24 ಗಂಟೆಗಳಲ್ಲಿ 678 ಮಂದಿಗೆ ಸೋಂಕು, 33 ಜನ ಸಾವು

    ನವದೆಹಲಿ: ನಮಗೆ 1 ಕೋಟಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳ ಅವಶ್ಯಕತೆಯಿದೆ. ಆದರೆ ನಮ್ಮಲ್ಲಿ ಈಗ 3.28 ಕೋಟಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳಿವೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ತಿಳಿಸಿದ್ದಾರೆ.

    ದೆಹಲಿಯಲ್ಲಿ ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುರುವಾರ ನಾವು 16,002 ಕೊರೊನಾ ಪರೀಕ್ಷೆಗಳನ್ನು ನಡೆಸಿದ್ದೇವೆ. ಕೇವಲ ಶೇ.0.2 ಪ್ರಕರಣಗಳು ಮಾತ್ರ ಪಾಸಿಟಿವ್ ಬಂದಿವೆ. ಸಂಗ್ರಹಿಸಿದ ಮಾದರಿಗಳ ಆಧಾರದ ಮೇಲೆ ಹೇಳುವುದಾದರೆ ಸೋಂಕಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿಲ್ಲ ಎನ್ನುವುದು ತಿಳಿಯುತ್ತಿದೆ ಎಂದು ತಿಳಿಸಿದ್ದಾರೆ.

    ಕಳೆದ 24 ಗಂಟೆಗಳಲ್ಲಿ 678 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 33 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 6,412ಕ್ಕೆ ಏರಿದರೆ, ಮೃತರ ಸಂಖ್ಯೆ 199 ಆಗಿದೆ. ಈವರೆಗೂ 503 ಜನರು ಚೇತರಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

    ಕೋವಿಡ್-19 ವಿರುದ್ಧದ ಹೋರಾಟಕ್ಕೆ ಆರೋಗ್ಯ ಕಾರ್ಯಕರ್ತರು ಮುಂಚೂಣಿಯಲ್ಲಿದ್ದಾರೆ. ಅವರೊಂದಿಗೆ ಯಾವುದೇ ರೀತಿಯ ಅಸಭ್ಯ ವರ್ತನೆ ತೋರುವುದು ಸರಿಯಲ್ಲ. ಇಂತಹ ಘಟನೆಗಳು ಅವರ ಸ್ಥೈರ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ ಎಂದು ಎಚ್ಚರಿಕೆ ನೀಡಿದರು.

    ದೇಶದಲ್ಲಿ ಇನ್ನೂ ಕೊರೊನಾ ವೈರಸ್ ಮೂರನೇ ಹಂತ (ಸಮುದಾಯ ಪ್ರಸಾರ)ಕ್ಕೆ ಕಾಲಿಟ್ಟಿಲ್ಲ. ಹೀಗಾಗಿ ಭಯಪಡುವ ಅಗತ್ಯವಿಲ್ಲ. ಆದರೆ ಜಾಗರೂಕರಾಗಿರಿ ಮತ್ತು ಎಚ್ಚರಕೆಯಿಂದ. ಆರೋಗ್ಯ ಇಲಾಖೆ ಕೂಡ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಗಳುತ್ತಿದೆ ಎಂದು ಹೇಳಿದರು.

    ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿ ದಮ್ಮು ರವಿ ಮಾತನಾಡಿ, ನಾವು ಗುರುವಾರ 20,473 ವಿದೇಶಿ ಪ್ರಜೆಗಳನ್ನು ಸ್ಥಳಾಂತರಿಸಿದ್ದೇವೆ. ನಾವು ಅತ್ಯುತ್ತಮ ಸಹಕಾರವನ್ನು ಪಡೆಯುತ್ತಿದ್ದೇವೆ. ಇದೆಲ್ಲ ಕೇಂದ್ರ ಸರ್ಕಾರದ ಪ್ರಯತ್ನ ಎಂದು ತಿಳಿಸಿದರು.

    ಹೈಡ್ರಾಕ್ಸಿಕ್ಲೋರೋಕ್ವಿನ್ ಬಗ್ಗೆ ಸಾಕಷ್ಟು ವಿನಂತಿಗಳು ಈಗಾಗಲೇ ಬಂದಿವೆ. ಹಲವಾರು ದೇಶಗಳು ಈ ಔಷಧಿಗೆ ವಿನಂತಿಗಳನ್ನು ಮಾಡಿಕೊಂಡಿವೆ. ಆದರೆ ದೇಶೀಯ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಔಷಧಿಯನ್ನು ಸಂಗ್ರಹಿಸಿದ್ದೇವೆ. ಕೆಲವು ಹೆಚ್ಚುವರಿ ಔಷಧಿಗಳನ್ನು ರಫ್ತು ಉದ್ದೇಶಗಳಿಗಾಗಿ ಬಿಡುಗಡೆ ಮಾಡಲು ಮಂತ್ರಿ ಮಂಡಳಿ ತೀರ್ಮಾನಿಸಿದೆ. ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

    ಗೃಹ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲೀಲಾ ಶ್ರೀವಾಸ್ತವ ಮಾತನಾಡಿ, ಕೋವಿಡ್-19 ವಿರುದ್ಧ ಹೋರಾಡಲು ಏಪ್ರಿಲ್ ತಿಂಗಳಲ್ಲಿ ನಡೆಯಬೇಕಿದ್ದ ಉತ್ಸವಗಳನ್ನು ಕೈಬಿಡಬೇಕು. ಜೊತೆಗೆ ಲಾಕ್‍ಡೌನ್ ಅನ್ನು ಕಟ್ಟುನಿಟ್ಟಾಗಿ ಅನುಸರಿಸುವ ಬಗ್ಗೆ ಖಚಿತಪಡಿಸಿಕೊಳ್ಳಲು ಎಂಎಚ್‍ಎ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ ಎಂದು ಹೇಳಿದರು.

    ಗಡಿ ಭದ್ರತಾ ಅಧಿಕಾರಿಗಳೊಂದಿಗೆ ಇಂಡೋ-ಪಾಕ್ ಮತ್ತು ಇಂಡೋ-ಬಾಂಗ್ಲಾದೇಶ ಗಡಿಯಲ್ಲಿ ಭದ್ರತೆ ಕುರಿತು ಗೃಹ ಸಚಿವರು ಪರಿಶೀಲನಾ ಸಭೆ ನಡೆಸಿದ್ದಾರೆ. ಫೆನ್ಸಿಂಗ್ ಇಲ್ಲದ ಪ್ರದೇಶಗಳಲ್ಲಿ ಸುರಕ್ಷತೆಯನ್ನು ಬಿಗಿಗೊಳಿಸಲು ಮತ್ತು ಗಡಿಯಾಚೆ ಯಾರು ಸುಳಿದಾಟದಂತೆ ನೋಡಿಕೊಳ್ಳಲು ಆದೇಶಿಸಿದ್ದಾರೆ ಎಂದು ಪುಣ್ಯ ಸಲೀಲಾ ಶ್ರೀವಾಸ್ತವ ಮಾಹಿತಿ ನೀಡಿದರು.

  • ಜೀವನದಲ್ಲಿ ಏನೂ ಸಾಧಿಸಕ್ಕಾಗಿಲ್ಲ, ನನ್ಯಾರೂ ಲೈಕ್ ಮಾಡಿಲ್ಲ- ವಿದ್ಯಾರ್ಥಿನಿ ಆತ್ಮಹತ್ಯೆ

    ಜೀವನದಲ್ಲಿ ಏನೂ ಸಾಧಿಸಕ್ಕಾಗಿಲ್ಲ, ನನ್ಯಾರೂ ಲೈಕ್ ಮಾಡಿಲ್ಲ- ವಿದ್ಯಾರ್ಥಿನಿ ಆತ್ಮಹತ್ಯೆ

    – ಸೆಲ್ಫಿ ವಿಡಿಯೋ ಮಾಡಿ ಸಾವಿಗೆ ಶರಣು

    ಮೈಸೂರು: ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿಧ್ಯಾರ್ಥಿನಿಯೊಬ್ಬಳು ಜೀವನದಲ್ಲಿ ಏನೂ ಸಾಧಿಸೋಕೆ ಆಗಿಲ್ಲ. ಅಲ್ಲದೆ ಬದುಕಿದ್ದಾಗ ನನ್ನ ಯಾರೂ ಲೈಕ್ ಮಾಡಿಲ್ಲ ಎಂದು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ.

    ಜಿಲ್ಲೆಯ ಬನ್ನಿಮಂಟಪದ ಕಾವೇರಿನಗರದ ನಿವಾಸಿ ಯಾಸ್ಮಿನ್ ತಾಜ್(18) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮೈಸೂರಿನ ಜೆ.ಎಸ್.ಎಸ್ ಕಾಲೇಜಿನ ಕಾಮರ್ಸ್ ವಿದ್ಯಾರ್ಥಿನಿಯಾಗಿದ್ದ ಈಕೆ ತನಗೆ ಓದು ತಲೆಗೆ ಹತ್ತುತ್ತಿಲ್ಲ ಎಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಈ ಖಿನ್ನತೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೂ ಮುನ್ನ ಮಾತ್ರೆ ಸೇವಿಸಿಸುವುದನ್ನು ವಿಡಿಯೋ ಮಾಡಿ, ಇದನ್ನು ಶೇರ್ ಮಾಡುವಂತೆ ಮನವಿ ಕೂಡ ಮಾಡಿದ್ದಾಳೆ.

    ಜೆ.ಎಸ್.ಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಯಾಸ್ಮಿನ್ ತಾಜ್ ಓದುವುದರಲ್ಲಿ ಹಿಂದಿದ್ದಳು. ಆದ್ದರಿಂದ ಜೀವನದಲ್ಲಿ ತುಂಬಾ ನೊಂದಿದ್ದಳು. ನನಗೆ ಓದುವುದಕ್ಕೆ ಆಸೆ. ಆದ್ರೆ ನನ್ನ ತಲೆಗೆ ಓದು ಹತ್ತಲಿಲ್ಲ, ನಾನೊಬ್ಬಳು ಡಲ್ ಸ್ಟೂಡೆಂಟ್. ಮುಂದೆ ಸಿಂಗರ್ ಅಥವಾ ಲಾಯರ್ ಆಗುವ ಆಸೆ ಇತ್ತು. ದೇವರು ನನ್ನ ಆಸೆಯನ್ನು ಪೂರೈಸಲಿಲ್ಲ. ಜೊತೆಗೆ ನನಗೆ ಆರೋಗ್ಯದ ಸಮಸ್ಯೆ ಕೂಡ ಇದೆ. ಆದ್ದರಿಂದ ಕಾಲೇಜಿಗೆ ಸರಿಯಾಗಿ ಹೋಗಿಲ್ಲ. ಅದಕ್ಕೆ ಪ್ರಿಪರೇಟರಿ ಪರೀಕ್ಷೆಗೆ ಹಾಲ್ ಟಿಕೆಟ್ ಸಿಗಲಿಲ್ಲ. ಜೀವನಲ್ಲಿ ನಾನು ಏನೂ ಸಾಧಿಸಲಿಲ್ಲ ಎಂದು ತನ್ನ ಮೊಬೈಲ್‍ನಲ್ಲಿ ವಿಡಿಯೋ ಮಾಡಿಟ್ಟು ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಅಷ್ಟೇ ಅಲ್ಲದೆ ವಿಡಿಯೋದಲ್ಲಿ, ಬದುಕಿದ್ದಾಗ ನನ್ನನ್ನ ಯಾರೂ ಲೈಕ್ ಮಾಡಿಲ್ಲ, ಸಾಯುವ ವಿಡಿಯೋನಾದ್ರೂ ಲೈಕ್ ಮಾಡಿ ಶೇರ್ ಮಾಡಿ. ಈ ಮೂಲಕ ಯಾಸ್ಮಿನ್ ಆತ್ಮಹತ್ಯೆ ಮಾಡಿಕೊಂಡಳು ಅಂತ ಪ್ರಪಂಚಕ್ಕೆ ತಿಳಿಸಿ ಎಂದು ತೆಲುಗು ಭಾಷೆಯಲ್ಲಿ ಮನವಿ ಮಾಡಿದ್ದಾಳೆ. ಸದ್ಯ ಈ ಘಟನೆ ಕುರಿತು ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv