Tag: T20I Cricket

  • ಐಸಿಸಿ ವರ್ಷದ ಟಿ20 ತಂಡಕ್ಕೆ ರೋಹಿತ್ ನಾಯಕ – ಭಾರತದ ನಾಲ್ವರಿಗೆ ಸ್ಥಾನ

    ಐಸಿಸಿ ವರ್ಷದ ಟಿ20 ತಂಡಕ್ಕೆ ರೋಹಿತ್ ನಾಯಕ – ಭಾರತದ ನಾಲ್ವರಿಗೆ ಸ್ಥಾನ

    ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ (Cricket) ಮಂಡಳಿ (ICC) ಪ್ರಕಟಿಸಿರುವ 2024ರ ವರ್ಷದ ಪುರುಷರ ಟಿ20 ಕ್ರಿಕೆಟ್ ತಂಡಕ್ಕೆ ಭಾರತದ ರೋಹಿತ್ ಶರ್ಮಾ (Rohit Sharma) ನಾಯಕರಾಗಿ ಆಯ್ಕೆಯಾಗಿದ್ದಾರೆ.

    ನಾಯಕ ರೋಹಿತ್ ಸೇರಿದಂತೆ ನಾಲ್ವರು ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಬೌಲರ್‌ಗಳಾದ ಜಸ್‌ಪ್ರೀತ್ ಬೂಮ್ರಾ ಮತ್ತು ಅರ್ಷದೀಪ್ ಸಿಂಗ್ ತಂಡದಲ್ಲಿದ್ದಾರೆ. ಈ ಮೂಲಕ ಐಸಿಸಿ ವರ್ಷದ ಪುರುಷರ ಟಿ20 ತಂಡದಲ್ಲಿ ಭಾರತೀಯ ಆಟಗಾರರು ಅಧಿಪತ್ಯ ಸ್ಥಾಪಿಸಿದ್ದಾರೆ.

    ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್, ಇಂಗ್ಲೆಂಡ್‌ನ ಫಿಲ್ ಸಾಲ್ಫ್, ಪಾಕಿಸ್ತಾನದ ಬಾಬರ್ ಅಜಂ, ವೆಸ್ಟ್‌ ಇಂಡೀಸ್‌ನ ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಅಫ್ಘಾನಿಸ್ತಾನದ ರಶೀದ್ ಖಾನ್ ಮತ್ತು ಶ್ರೀಲಂಕಾದ ವನಿಂದು ಹಸರಂಗ ತಂಡದಲ್ಲಿದ್ದಾರೆ.

    ರೋಹಿತ್ ಶರ್ಮಾ ನಾಯಕತ್ವದಲ್ಲೇ ಭಾರತ ಐಸಿಸಿ ಟ್ವೆಂಟಿ-20 ವಿಶ್ವಕಪ್ ಜಯಿಸಿತ್ತು. ಈ ಅವಧಿಯಲ್ಲಿ ರೋಹಿತ್ 11 ಪಂದ್ಯಗಳಲ್ಲಿ 42ರ ಸರಾಸರಿಯಲ್ಲಿ (160.16) 378 ರನ್ ಗಳಿಸಿದ್ದರು. ಒಂದು ಶತಕವನ್ನು (121) ಸಿಡಿಸಿದ್ದರು.

    ಹಾರ್ದಿಕ್ ಪಾಂಡ್ಯ 17 ಪಂದ್ಯಗಳಲ್ಲಿ 352 ರನ್ ಮತ್ತು 16 ವಿಕೆಟ್‌ಗಳನ್ನು ಗಳಿಸಿದ್ದಾರೆ. ಬಲಗೈ ವೇಗದ ಬೌಲ‌ರ್ ಜಸ್‌ಪ್ರೀತ್ ಬೂಮ್ರಾ 8 ಪಂದ್ಯಗಳಲ್ಲಿ 15 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹಾಗೆಯೇ ಗಮನಾರ್ಹ ಪ್ರದರ್ಶನ ನೀಡಿರುವ ಅರ್ಷದೀಪ್ ಸಿಂಗ್ 18 ಪಂದ್ಯಗಳಲ್ಲಿ 36 ವಿಕೆಟ್‌ಗಳನ್ನು ಗಳಿಸಿದ್ದಾರೆ.

    ಐಸಿಸಿ ವರ್ಷದ ಪುರುಷರ ಟಿ20 ತಂಡ
    ರೋಹಿತ್ ಶರ್ಮಾ (ನಾಯಕ),
    ಟ್ರಾವಿಸ್ ಹೆಡ್,
    ಫಿಲ್ ಸಾಲ್ಟ್.
    ಬಾಬ‌ರ್ ಅಜಂ
    ನಿಕೋಲಸ್ ಪೂರನ್ (ವಿಕೆಟ್ ಕೀಪರ್),
    ಸಿಕಂದ‌ರ್ ರಾಜಾ,
    ಹಾರ್ದಿಕ್ ಪಾಂಡ್ಯ,
    ರಶೀದ್ ಖಾನ್,
    ವನಿಂದು ಹಸರಂಗ,
    ಜಸ್‌ಪ್ರೀತ್ ಬೂಮ್ರಾ,
    ಅರ್ಷದೀಪ್ ಸಿಂಗ್.

  • ಮೈದಾನಕ್ಕೆ ನುಗ್ಗಿ ವಿರಾಟ್‌ ಪಾದ ಮುಟ್ಟಿ‌, ಅಪ್ಪಿಕೊಂಡ – ಭದ್ರತೆ ಉಲ್ಲಂಘಿಸಿದ ಕೊಹ್ಲಿ ಅಪ್ಪಟ ಅಭಿಮಾನಿಗೆ ಸಂಕಷ್ಟ

    ಮೈದಾನಕ್ಕೆ ನುಗ್ಗಿ ವಿರಾಟ್‌ ಪಾದ ಮುಟ್ಟಿ‌, ಅಪ್ಪಿಕೊಂಡ – ಭದ್ರತೆ ಉಲ್ಲಂಘಿಸಿದ ಕೊಹ್ಲಿ ಅಪ್ಪಟ ಅಭಿಮಾನಿಗೆ ಸಂಕಷ್ಟ

    ಇಂದೋರ್‌: ಟೀಂ ಇಂಡಿಯಾ ಮತ್ತು ಅಫ್ಘಾನಿಸ್ತಾನ (Ind vs Afg) ನಡುವಿನ 2ನೇ ಟಿ20 ಪಂದ್ಯದ ವೇಳೆ ಇಂದೋರ್‌ನ ಹೋಳ್ಕರ್‌ ಮೈದಾನದಲ್ಲಿ ಭದ್ರತೆ ಉಲ್ಲಂಘಿಸಿದ ಕ್ರಿಕೆಟಿಗ ವಿರಾಟ್‌ ಕೊಹ್ಲಿ (Virat Kohli) ಅವರ ಅಪ್ಪಟ ಅಭಿಮಾನಿಗೆ ಸಂಕಷ್ಟ ಎದುರಾಗಿದೆ.

    ಪಂದ್ಯದಲ್ಲಿ ಅಫ್ಘಾನಿಸ್ತಾನದ ಇನ್ನಿಂಗ್ಸ್‌ ವೇಳೆ ಕೊಹ್ಲಿಯ ಅಪ್ಪಟ ಅಭಿಮಾನಿಯೊಬ್ಬ (Virat Kohli Fan) ಭದ್ರತೆ ಉಲ್ಲಂಘಿಸಿ ಮೈದಾನಕ್ಕೆ ಹಾರಿಬಂದು ಕೊಹ್ಲಿಯನ್ನು ಭೇಟಿಯಾಗಿದ್ದಾನೆ.‌ ಓಡಿಬಂದು ಬೌಂಡರಿ ಲೈನ್‌ ಬಳಿ ನಿಂತಿದ್ದ ಕೊಹ್ಲಿಯ ಪಾದಮುಟ್ಟಿದ್ದಾನೆ, ಬಳಿಕ ಅಪ್ಪಿಗೊಂಡು ಭಾವುಕನಾಗಿದ್ದಾನೆ. ಮೈದಾನಕ್ಕೆ ನುಗ್ಗಿದ ಅಭಿಮಾನಿಯನ್ನು ಮಧ್ಯಪ್ರದೇಶ ಪೊಲೀಸರು (MadhyaPradesh Police) ವಶಕ್ಕೆ ಪಡೆದಿದ್ದಾರೆ. ಯುವಕನನ್ನು ತುಕೋಗಂಜ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಇದನ್ನೂ ಓದಿ: ಆಫ್ಘನ್ ತಂಡದ ವಿರುದ್ಧ ಭಾರತ ಗೆಲುವು – ಜೈಸ್ವಾಲ್, ದುಬೆ ಅರ್ಧ ಶತಕ

    ಟಿಕೆಟ್‌ ಖರೀದಿಸಿ ಪಂದ್ಯ ವೀಕ್ಷಿಸಲು ಬಂದಿದ್ದ ಯುವಕ ನರೇಂದ್ರ ಹಿರ್ವಾನಿ ಗೇಟ್‌ ಮೂಲಕ ಮೈದಾನಕ್ಕೆ ನುಗ್ಗಿದ್ದಾನೆ. ಯುವಕನು ಕೊಹ್ಲಿಯ ಅಪ್ಪಟ ಅಭಿಮಾನಿಯಾಗಿದ್ದು, ಹಿರಿಯ ಆಟಗಾರನನ್ನು ಭೇಟಿಯಾಗಬೇಕೆಂಬ ಆಸೆಯಿಂದ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದು ಮೈದಾನ ಪ್ರವೇಶಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಯುವಕನ ವಿಚಾರಣೆ ನಡೆಸಲಾಗುತ್ತಿದ್ದು, ವಿಚಾರಣೆ ಮುಗಿದ ಬಳಿಕ ಬಳಿಕ ಮುಂದಿನ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ – ಯುಪಿ ಮೂಲದ ಹೊಸ ಆಟಗಾರನಿಗೆ ಚಾನ್ಸ್

    ಭಾರತಕ್ಕೆ ಸರಣಿ ಜಯ: ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ ಗೆದ್ದುಕೊಂಡಿದೆ. ಆರಂಭಿಕ ಎರಡು ಪಂದ್ಯಗಳನ್ನು ಗೆದ್ದು ಸರಣಿ ತನ್ನದಾಗಿಸಿಕೊಂಡಿರುವ ಭಾರತ, ತವರಿನಲ್ಲೇ ವೈಟ್‌ವಾಶ್‌ ಮಾಡುವ ಗುರಿ ಹೊಂದಿದೆ. ಭಾನುವಾರ ಇಂದೋರ್‌ನ ಹೋಳ್ಕರ್‌ ಮೈದಾನದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಮೊದಲು ಫೀಲ್ಡಿಂಗ್‌ ಆಯ್ದುಕೊಂಡಿತು.

    ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡವು ಗುಲ್ಬದೀನ್ ನಯೀಬ್ ಅವರ ಅರ್ಧಶತಕದ ನೆರವಿನಿಂದ 20 ಓವರ್​​​ಗಳಲ್ಲಿ 172 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನತ್ತಿದ್ದ ಭಾರತ ಯಶಸ್ವಿ ಜೈಸ್ವಾಲ್‌, ಶಿವಂ ದುಬೆ ಸ್ಫೋಟಕ ಅರ್ಧಶತಕಗಳ ನೆರವಿನಿಂದ 15.4 ಓವರ್‌ಗಳಲ್ಲೇ 173 ರನ್‌ ಗಳಿಸಿ ಗೆಲುವು ಸಾಧಿಸಿತು. ಇದನ್ನೂ ಓದಿ: ಆಫ್ಘನ್ ತಂಡದ ವಿರುದ್ಧ ಭಾರತ ಗೆಲುವು – ಜೈಸ್ವಾಲ್, ದುಬೆ ಅರ್ಧ ಶತಕ

  • ಕೊಹ್ಲಿಯ 13 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಸೂರ್ಯ – ಈಗಲೂ ವಿಶ್ವದ ನಂ.1 T20 ಬ್ಯಾಟರ್‌ ಇವರೇ

    ಕೊಹ್ಲಿಯ 13 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಸೂರ್ಯ – ಈಗಲೂ ವಿಶ್ವದ ನಂ.1 T20 ಬ್ಯಾಟರ್‌ ಇವರೇ

    ಗ್ಕೆಬರ್ಹಾ: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ವಿಶ್ವದ ನಂ.1 ಟಿ20 ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌‌ (Suryakumar Yadav), ವಿರಾಟ್‌ ಕೊಹ್ಲಿ (Virat Kohl) ಅವರ ಹೆಸರಲ್ಲಿದ್ದ 13 ವರ್ಷಗಳ ಹಳೆಯ ದಾಖಲೆಯೊಂದನ್ನ ಸರಿಗಟ್ಟಿದ್ದಾರೆ.

    ದಕ್ಷಿಣ ಆಫ್ರಿಕಾ ವಿರುದ್ಧ ಗ್ಕೆಬರ್ಹಾ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಪರ ಸೂರ್ಯಕುಮಾರ್‌ 36 ಎಸೆತಗಳಲ್ಲಿ 56 ರನ್‌ (3 ಸಿಕ್ಸರ್‌, 5 ಬೌಂಡರಿ) ಗಳಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 2 ಸಾವಿರ ರನ್‌ ಪೂರೈಸಿದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ವೇಗದ 2000 ರನ್‌ ಪೂರೈಸಿದ ಬ್ಯಾಟರ್‌ ಎನಿಸಿಕೊಂಡರು. ಇದನ್ನೂ ಓದಿ: ವೇಗಿ ಮೊಹಮ್ಮದ್ ಶಮಿ ಫಾರ್ಮ್‌ ಹೌಸ್‌ಗೆ ಬಿಗಿ ಭದ್ರತೆ

    2010ರಲ್ಲಿ ಇಂಗ್ಲೆಂಡ್‌ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ‌ 56ನೇ ಇನಿಂಗ್ಸ್ ನಲ್ಲಿ 2000 ಸಾವಿರ ರನ್‌ ಪೂರೈಸಿದ್ದರು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ ಸಹ ತಮ್ಮ 56ನೇ ಇನ್ನಿಂಗ್ಸ್‌ನಲ್ಲಿ 2,000 ರನ್‌ ಪೂರೈಸಿದ್ದಾರೆ. 2000 ರನ್‌ ಪೂರೈಸಲು 1,164 ಎಸೆತಗಳನ್ನು ಎದುರಿಸಿದ್ದಾರೆ. ಅಲ್ಲದೇ ಸೂರ್ಯಕುಮಾರ್‌ ಯಾದವ್‌ ದಕ್ಷಿಣ ಆಫ್ರಿಕಾ ವಿರುದ್ಧ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅರ್ಧಶತಕ ಸಿಡಿಸಿದ ಮೊದಲ ಕ್ಯಾಪ್ಟನ್‌ ಎಂಬ ಖ್ಯಾತಿಯನ್ನೂ ಗಳಿಸಿದ್ದಾರೆ. ಇದನ್ನೂ ಓದಿ: ರೋಹಿತ್ ಶರ್ಮಾ ಫಾರ್ಮ್‍ನಲ್ಲಿದ್ದರೆ 2024ರ ಟಿ20 ವಿಶ್ವಕಪ್‍ನಲ್ಲಿ ತಂಡವನ್ನು ಮುನ್ನಡೆಸಲಿ: ಗಂಭೀರ್

    ಸೂರ್ಯಕುಮಾರ್‌ ಯಾದವ್‌ 2022ರ ಅಕ್ಟೋಬರ್‌ನಲ್ಲಿ ಟಿ20 ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಬ್ಯಾಟ್ಸ್‌ಮ್ಯಾನ್‌ ಪಟ್ಟಕ್ಕೇರಿದರು. 31 ಪಂದ್ಯಗಳಲ್ಲಿ 1,164 ರನ್‌ಗಳನ್ನು ಪೂರೈಸಿ ವಿಶ್ವದ ನಂ.1 ಪಟ್ಟಕ್ಕೇರಿದರು. 2023ರ ವರ್ಷದಲ್ಲಿಯೂ ನಂ.1 ಪಟ್ಟದಲ್ಲಿ ಮುಂದುವರಿದಿದ್ದಾರೆ. ಈಗಾಗಲೇ 17 ಪಂದ್ಯಗಳಿಂದ 45.53 ಸರಾಸರಿಯಲ್ಲಿ, 153 ಸ್ಟ್ರೈಕ್‌ರೇಟ್‌ನಲ್ಲಿ 592 ರನ್‌ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 4 ಅರ್ಧಶತಕಗಳು ಸೇರಿವೆ.

  • T20Iː ಧೋನಿ ಹೋದ್ಮೇಲೆ ಜವಾಬ್ದಾರಿ ನನ್ನ ಮೇಲಿದೆ – ಪಾಂಡ್ಯ ಭಾವುಕ

    T20Iː ಧೋನಿ ಹೋದ್ಮೇಲೆ ಜವಾಬ್ದಾರಿ ನನ್ನ ಮೇಲಿದೆ – ಪಾಂಡ್ಯ ಭಾವುಕ

    ಅಹಮದಾಬಾದ್: ನ್ಯೂಜಿಲೆಂಡ್ (New Zealand) ವಿರುದ್ಧ ನಡೆದ T20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ (India) 168 ರನ್‌ಗಳ ಭರ್ಜರಿ ಜಯ ಸಾಧಿಸಿತು. ಸಿಕ್ಸರ್, ಬೌಂಡರಿಗಳ ಸುರಿಮಳೆಯ ಈ ಆಟದಲ್ಲಿ ಭಾರತದ ಪರ 21 ಬೌಂಡರಿ, 13 ಸಿಕ್ಸ್‌ಗಳು ದಾಖಲಾಯಿತು.

    ಇನ್ನೂ ಯಾರೂ ಸರಗಟ್ಟಿಲ್ಲ ಮಾಹಿಯ 5 ವಿಶ್ವ ದಾಖಲೆ

    ಈ ಪಂದ್ಯದಲ್ಲಿ ಉತ್ತಮ ಆಲ್‌ರೌಂಡರ್ ಪ್ರದರ್ಶನ ನೀಡಿದ ಟಿ20 ನಾಯಕ ಹಾರ್ದಿಕ್ ಪಾಂಡ್ಯ (Hardik Pandya) 176.47 ಸ್ಟ್ರೈಕ್‌ ರೇಟ್‌ ನಲ್ಲಿ ಬ್ಯಾಟ್ ಬೀಸಿ 17 ಎಸೆತಗಳಲ್ಲಿ 30 ರನ್ (4 ಬೌಂಡರಿ, 1 ಸಿಕ್ಸರ್) ಚಚ್ಚಿದರು. ಅಲ್ಲದೇ ಮಾರಕ ಬೌಲಿಂಗ್ ದಾಳಿಯಿಂದ 4 ವಿಕೆಟ್ ಪಡೆದು ಮಿಂಚಿದರು. ಇದನ್ನೂ ಓದಿ: 3rd T20I: ಶತಕ ಸಿಡಿಸಿ ಟೀಂ ಇಂಡಿಯಾ ಪರ ಟಿ20 ಕ್ರಿಕೆಟ್‍ನಲ್ಲಿ ನೂತನ ದಾಖಲೆ ಬರೆದ ಗಿಲ್

    ಬಳಿಕ ಮಾತನಾಡಿದ ಅವರು, ಟೀಂ ಇಂಡಿಯಾ (Team India) ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಹೋದ ಬಳಿಕ ಅವರ ಜವಾಬ್ದಾರಿ ಇದ್ದಕ್ಕಿದ್ದಂತೆ ನನ್ನ ಮೇಲೆ ಬಂದಿದೆ. ನಾನು ಹೊಸತನಕ್ಕೆ ಹೊಂದಿಕೊಳ್ಳಲು ಎದುರು ನೋಡುತ್ತೇನೆ. ಇದರಿಂದ ನನ್ನ ಸ್ಟ್ರೈಕ್‌ರೇಟ್‌ ಕಡಿಮೆಯಾಗಬಹುದು ಎಂದು ಪಾಂಡ್ಯ ಭಾವುಕರಾಗಿದ್ದಾರೆ. ಇದನ್ನೂ ಓದಿ: 3rd T20I: ಗಿಲ್ ಘರ್ಜನೆಗೆ ಕಿವೀಸ್ ಗಪ್‍ ಚುಪ್ – ಟಿ20 ಸರಣಿ ಗೆದ್ದ ಭಾರತ

    3rd T20I: ಗಿಲ್ ಘರ್ಜನೆಗೆ ಕಿವೀಸ್ ಗಪ್‍ ಚುಪ್ - ಟಿ20 ಸರಣಿ ಗೆದ್ದ ಭಾರತ

    ಮಹಿ ಆಡುತ್ತಿದ್ದಾಗ ನಾನು ಇನ್ನೂ ಚಿಕ್ಕವನಾಗಿದ್ದೆ, ಗ್ರೌಂಡ್ ಸುತ್ತಲೂ ಹೊಡೆಯುತ್ತಿದೆ. ಆದರೆ ಮಹಿ ಹೋದ ನಂತರ ಇದ್ದಕ್ಕಿದ್ದಂತೆ ಆ ಜವಾಬ್ದಾರಿ ನನ್ನ ಮೇಲೆ ಬಂದಿದೆ. ನಾವು ಉತ್ತಮ ಫಲಿತಾಂಶಗಳನ್ನೇ ಪಡೆಯುತ್ತಿದ್ದೇವೆ. ನಾನು ಸ್ವಲ್ಪ ನಿಧಾನವಾಗಿ ಆಡುತ್ತಿದ್ದೇನೆ. ಆದರೂ ಪರವಾಗಿಲ್ಲ ಎಂದು ಹೇಳಿದ್ದಾರೆ.

    ಮುಂದುವರಿದು, ನಾನು ಯಾವಾಗಲೂ ಸಿಕ್ಸರ್ ಹೊಡೆಯುವುದನ್ನ ಎಂಜಾಯ್ ಮಾಡುತ್ತೇನೆ. ಏಕೆಂದರೆ ಅದು ಜೀವನ. ನಾನು ಪಾಟ್ನರ್‌ಶಿಪ್‌ ನಂಬಿದ್ದೇನೆ. ನನ್ನ ಪಾಲುದಾರನಿಗೆ ಹಾಗೂ ತಂಡಕ್ಕೆ ನಾನು ಅಲ್ಲಿದ್ದೇನೆ ಎಂಬ ನಂಬಿಕೆ ಬರಬೇಕು. ನಾನು ಈಗಾಗಲೇ ಹೆಚ್ಚಿನ ಗೇಮ್ ಆಡಿದ್ದೇನೆ. ಆದ್ದರಿಂದ ಒತ್ತಡವನ್ನು ಹೇಗೆ ತೆಗೆದುಕೊಳ್ಳಬೇಕು, ಅದನ್ನು ಹೇಗೆ ನಿಭಾಯಿಸಬೇಕು ಎಂಬುದನ್ನ ಕಲಿತಿದ್ದೇನೆ. ಬಹುಶಃ ಮುಂದೆ ನಾನು ಸ್ಟ್ರೈಕ್‌ರೇಟ್‌ ಕಡಿಮೆ ಮಾಡಬೇಕಾಗಬಹುದು ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k