Tag: T20I

  • ಸೂರ್ಯನಿಗೆ ಬೇಕಿದೆ 39 ರನ್‌ – ವಿಶ್ವದಾಖಲೆ ಬರೆಯುವ ಸನಿಹದಲ್ಲಿ ಮಿಸ್ಟರ್‌ 360

    ಸೂರ್ಯನಿಗೆ ಬೇಕಿದೆ 39 ರನ್‌ – ವಿಶ್ವದಾಖಲೆ ಬರೆಯುವ ಸನಿಹದಲ್ಲಿ ಮಿಸ್ಟರ್‌ 360

    ಮುಂಬೈ: ವಿಶ್ವದ ನಂ.2 ಟಿ20 ಬ್ಯಾಟರ್‌ ಎಂದೇ ಗುರುತಿಸಿಕೊಂಡಿರುವ ಟೀಂ ಇಂಡಿಯಾದ ಸ್ಟಾರ್‌ ಆಟಗಾರ ಸೂರ್ಯಕುಮಾರ್‌ ಯಾದವ್‌ (Suryakumar Yadav) ಮತ್ತೊಂದು ದಾಖಲೆ ಬರೆಯುವ ಸನಿಹದಲ್ಲಿದ್ದಾರೆ.

    ʻಮಿಸ್ಟರ್‌ 360ʼ ಖ್ಯಾತಿಯ ಸೂರ್ಯಕುಮಾರ್‌ ಯಾದವ್‌ ಈವರೆಗೆ ಆಡಿರುವ 72 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 2,461 ರನ್‌ ಸಿಡಿಸಿದ್ದಾರೆ. ಅ.9ರಂದು ಬಾಂಗ್ಲಾದೇಶ ಕ್ರಿಕೆಟ್‌ ತಂಡದ (Bangladesh Cricket) ವಿರುದ್ಧ ನಡೆಯಲಿರುವ 2ನೇ ಟಿ20 ಪಂದ್ಯದಲ್ಲಿ 39 ರನ್‌ ಸಿಡಿಸಿದ್ರೆ, 2,500 ಪೂರೈಸಲಿದ್ದಾರೆ. ಇದನ್ನೂ ಓದಿ: ಕುಸಿಯಲಿದೆಯೇ 24 ಕೋಟಿ ಸರದಾರನ ಮೌಲ್ಯ – 18 ಕೋಟಿ ಪಡೆಯಲು ಪಾಂಡ್ಯ ಅರ್ಹರೇ?

    ಇದರೊಂದಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 2,500 ರನ್‌ ಪೂರೈಸಿದ ವಿಶ್ವದ 2ನೇ ಆಟಗಾರ (Fastest Batter) ಎಂಬ ವಿಶೇಷ ಸಾಧನೆಗೆ ಪಾತ್ರರಾಗಲಿದ್ದಾರೆ. 67 ಪಂದ್ಯಗಳಲ್ಲಿ ಈ ಸಾಧನೆ ಮಾಡಿರುವ ಪಾಕ್‌ ತಂಡದ ನಾಯಕ ಬಾಬರ್‌ ಆಜಂ (Babar Azam) ಅಗ್ರಸ್ಥಾನದಲ್ಲಿದ್ದಾರೆ. ಅಲ್ಲದೇ ವಿರಾಟ್‌ ಕೊಹ್ಲಿ (Virat Kohli), ಮೊಹಮ್ಮದ್‌ ರಿಜ್ವಾನ್‌, ಆರನ್‌ ಫಿಂಚ್‌, ಮಾರ್ಟಿನ್‌ ಗಪ್ಟಿಲ್‌ ಈ ಸಾಧಕರ ಪಟ್ಟಿಯಲ್ಲಿದ್ದಾರೆ. ಇದನ್ನೂ ಓದಿ: ಬೌಲರ್‌ಗಳ ದಾಳಿಗೆ ಬಾಂಗ್ಲಾ ಧೂಳಿಪಟ – ಪಾಂಡ್ಯ ಸೂಪರ್‌ ಸಿಕ್ಸರ್; ಭಾರತಕ್ಕೆ 7 ವಿಕೆಟ್‌ಗಳ ಜಯ

    ಅತಿ ವೇಗವಾಗಿ 2,500 ರನ್‌ ಪೂರೈಸಿದ ಬ್ಯಾಟರ್‌
    * ಬಾಬರ್‌ ಆಜಂ (ಪಾಕಿಸ್ತಾನ) – 67 ಪಂದ್ಯ
    * ವಿರಾಟ್‌ ಕೊಹ್ಲಿ (ಭಾರತ) – 73 ಪಂದ್ಯ
    * ಮೊಹಮ್ಮದ್‌ ರಿಜ್ವಾನ್‌ (ಪಾಕಿಸ್ತಾನ) – 76 ಪಂದ್ಯ
    * ಆರನ್‌ ಫಿಂಚ್‌ (ಆಸ್ಟ್ರೇಲಿಯಾ) – 78 ಪಂದ್ಯ
    * ಮಾರ್ಟಿನ್‌ ಗಪ್ಟಿಲ್‌ (ನ್ಯೂಜಿಲೆಂಡ್)‌ – 86 ಪಂದ್ಯ

    ಇದೇ ಅಕ್ಟೋಬರ್‌ 6ರಂದು ಬಾಂಗ್ಲಾದೇಶದ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಟಿ20 ಸರಣಿಯನ್ನು 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈ ಪಂದ್ಯದಲ್ಲಿ ನಾಯಕನಾಗಿ ಸೂರ್ಯಕುಮಾರ್‌ ಯಾದವ್‌ 14 ಎಸೆತಗಳಲ್ಲಿ 29 ರನ್‌ ಬಾರಿಸಿದ್ದರು. ಇದನ್ನೂ ಓದಿ: ಮಿಸ್ಟರ್‌ 360 ಮೇಲೆ ಆರ್‌ಸಿಬಿ ಕಣ್ಣು – ಈ ಸಲ ಕಪ್‌ ನಮ್ಮದಾಗುತ್ತಾ ಅಂತಿದ್ದಾರೆ ಫ್ಯಾನ್ಸ್‌?

  • ಬಾರ್ಬಡೋಸ್‌ನಲ್ಲೇ ಸಿಲುಕಿದ ಟೀಂ ಇಂಡಿಯಾ – ಜಿಂಬಾಬ್ವೆ ಸರಣಿಗೆ ಸುದರ್ಶನ್‌, ರಾಣಾ, ಜಿತೇಶ್‌ ಆಯ್ಕೆ!

    ಬಾರ್ಬಡೋಸ್‌ನಲ್ಲೇ ಸಿಲುಕಿದ ಟೀಂ ಇಂಡಿಯಾ – ಜಿಂಬಾಬ್ವೆ ಸರಣಿಗೆ ಸುದರ್ಶನ್‌, ರಾಣಾ, ಜಿತೇಶ್‌ ಆಯ್ಕೆ!

    ಹರಾರೆ: ಚಂಡಮಾರುತ ಅಪ್ಪಳಿಸಿದ್ದರಿಂದಾಗಿ ಜಿಂಬಾಬ್ವೆ ವಿರುದ್ಧ ಟಿ20 ಸರಣಿಗೆ ಆಯ್ಕೆಯಾಗಿದ್ದ ಯಶಸ್ವಿ ಜೈಸ್ವಾಲ್‌ (Yashasvi Jaiswal), ಶಿವಂ ದುಬೆ ಹಾಗೂ ಸಂಜು ಸ್ಯಾಮ್ಸನ್‌ ಬಾರ್ಬಡೋಸ್‌ನಲ್ಲೇ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಟಿ20 ಆಯ್ಕೆ ಸಮಿತಿ ಮೊದಲ 2 ಪಂದ್ಯಗಳಿಗೆ ಸಾಯಿ ಸುದರ್ಶನ್‌, ಹರ್ಷಿತ್‌ ರಾಣಾ (Harshit Rana) ಹಾಗೂ ಜಿತೇಶ್‌ ಶರ್ಮಾ ಅವರನ್ನ ಆಯ್ಕೆ ಮಾಡಿದೆ.

    ಜೈಸ್ವಾಲ್‌, ಶಿವಂ ದುಬೆ, ಸಂಜು ಸ್ಯಾಮ್ಸನ್‌ (Sanju Samson) ಭಾರತ ಟಿ20 ವಿಶ್ವಕಪ್‌ ತಂಡದ ಭಾಗವಾಗಿದ್ದರು. ಆದ್ರೆ ಚಂಡಮಾರುತದಿಂದಾಗಿ ಇಡೀ ತಂಡ ಬಾರ್ಬಡೋಸ್‌ನಲ್ಲೇ ಬೀಡುಬಿಟ್ಟಿದೆ. ಅವರು ಭಾರತಕ್ಕೆ ಬಂದ ನಂತರ ಜಿಂಬಾಬ್ವೆ ಸರಣಿಗೆ ಕಳುಹಿಸಲಾಗುತ್ತದೆ. ಹಾಗಾಗಿ 5 ಪಂದ್ಯಗಳ ಸರಣಿಯ ಮೊದಲ 2 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಗೆ ಸ್ಯಾಮ್ಸನ್‌, ದುಬೆ ಹಾಗೂ ಜೈಸ್ವಾಲ್‌ ಬದಲಿಗೆ ಸುದರ್ಶನ್‌, ರಾಣಾ ಹಾಗೂ ಜಿತೇಶ್‌ ಶರ್ಮಾ ಅವರನ್ನ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಇದೇ ಜುಲೈ 6 ರಿಂದ ಜುಲೈ 14ರ ವರೆಗೆ ಜಿಂಬಾಬ್ವೆ ವಿರುದ್ಧ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ 4 ಪಂದ್ಯಗಳು ಸಂಜೆ 4:30ಕ್ಕೆ ಹಾಗೂ ಒಂದು ಪಂದ್ಯ ರಾತ್ರಿ 9:30ಕ್ಕೆ ಆರಂಭವಾಗಲಿದೆ. 5 ಪಂದ್ಯಗಳು ಜಿಂಬಾಬ್ವೆಯ ಹರಾರೆ ಸ್ಫೋರ್ಟ್‌ಕ್ಲಬ್‌ ಮೈದಾನದಲ್ಲಿ ನಡೆಯಲಿದೆ. ಇದನ್ನೂ ಓದಿ: ಭೀಕರ ಚಂಡಮಾರುತ – ಬಾರ್ಬಡೋಸ್‌ನಲ್ಲೇ ಬೀಡುಬಿಟ್ಟ ಟೀಂ ಇಂಡಿಯಾ!

    ಕೆರೀಬಿಯನ್ ದ್ವೀಪಗಳಲ್ಲಿ ಜುಲೈ 1ರ ಬೆಳಗ್ಗಿನ ಜಾವದಿಂದಲೇ ಚಂಡಮಾರುತ ಬೀಸುತ್ತಿರುವುದರಿಂದ ವಿಮಾನಯಾನವೂ ಸೇರಿದಂತೆ ಎಲ್ಲ ನಾಗರಿಕ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಮುಖ್ಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಸದ್ಯಕ್ಕೆ ಸೇವೆ ಸ್ಥಗಿತಗೊಳಿಸಲಾಗಿದೆ .ಬಾರ್ಬಡೋಸ್ ಮತ್ತು ಸುತ್ತಮುತ್ತಲಿನ ದ್ವೀಪಗಳಲ್ಲಿ ಬಿರುಗಾಳಿಯ ತೀವ್ರತೆಯೂ ಹೆಚ್ಚಾಗಿದ್ದು, ಅಪಾಯಮಟ್ಟದಲ್ಲಿದೆ. ಹಾಗಾಗಿ ಟೀಂ ಇಂಡಿಯಾ ತವರಿಗೆ ಮರಳುವುದು ಇನ್ನೂ ಮೂರು ದಿನ ತಡವಾಗಲಿದೆ ಎಂದು ಬಿಸಿಸಿಐ ತಿಳಿಸಿದೆ.

    ಭಾರತ ತಂಡ:
    ಶುಭಮನ್‌ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್‌), ಧ್ರುವ್ ಜುರೆಲ್ (ವಿಕೆಟ್‌ ಕೀಪರ್‌), ಶಿವಂ ದುಬೆ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಅವೇಶ್ ಖಾನ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ. ಬದಲಾದ ಆಟಗಾರರು ಸಾಯಿ ಸುದರ್ಶನ್‌, ಹರ್ಷಿತ್‌ ರಾಣಾ ಹಾಗೂ ಜಿತೇಶ್‌ ಶರ್ಮಾ. ಇದನ್ನೂ ಓದಿ: ಐಸಿಸಿ ಕನಸಿನ ತಂಡ ಪ್ರಕಟ – ಕೊಹ್ಲಿಗಿಲ್ಲ ಸ್ಥಾನ, ಪಟ್ಟಿಯಲ್ಲಿದ್ದಾರೆ 6 ಟೀಂ ಇಂಡಿಯಾ ಆಟಗಾರರು

    ಜಿಂಬಾಬ್ವೆ ತಂಡ:
    ಸಿಕಂದರ್‌ ರಾಝಾ (ಸಿ), ಅಕ್ರಮ್ ಫರಾಜ್, ಬೆನೆಟ್ ಬ್ರಿಯಾನ್, ಕ್ಯಾಂಪ್ಬೆಲ್ ಜೊನಾಥನ್, ಚತಾರಾ, ಜೊಂಗ್ವೆ, ಇನೋಸೆಂಟ್, ಮದಂಡೆ ಕ್ಲೈವ್, ಮಾಧೆವೆರೆ, ತಡಿವಾನಾಶೆ, ವೆಲ್ಲಿಂಗ್ಟನ್, ಮಾವುತಾ ಬ್ರಾಂಡನ್, ಮುಜರಾಬಾನಿ, ಮೈಯರ್ಸ್ ಡಿಯೋನ್, ನಖ್ವಿ ಅಂತುಮ್, ನ್ಗರವ ಮತ್ತು ಶುಂಬಾ ಮಿಲ್ಟನ್. ಇದನ್ನೂ ಓದಿ: ವಿಶ್ವಕಪ್‌ ಗೆಲ್ಲಲು ಕಾರಣವಾಗಿದ್ದು 3 ಮಹತ್ವದ ನಿರ್ಧಾರ – ಟೀಂ ಇಂಡಿಯಾ ಸಿದ್ಧಗೊಂಡಿದ್ದು ಹೇಗೆ?

  • ಟಿ20ಯಲ್ಲಿ ರವಿ ಬಿಷ್ಣೋಯ್‌ಗೆ ಅಗ್ರ ಸ್ಥಾನ – ಐಸಿಸಿ ರ‍್ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾ ಕಮಾಲ್‌

    ಟಿ20ಯಲ್ಲಿ ರವಿ ಬಿಷ್ಣೋಯ್‌ಗೆ ಅಗ್ರ ಸ್ಥಾನ – ಐಸಿಸಿ ರ‍್ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾ ಕಮಾಲ್‌

    ದುಬೈ: ಐಸಿಸಿ (ICC) ಟಿ20 ಬೌಲಿಂಗ್‌ನಲ್ಲಿ ಭಾರತ ತಂಡದ ಯುವ ಲೆಗ್‌ ಸ್ಪಿನ್ನರ್‌ ರವಿ ಬಿಷ್ಣೋಯ್‌ (Ravi Bishnoi) ನಂಬರ್‌ 1 ಸ್ಥಾನ ಅಲಂಕರಿಸಿದ್ದಾರೆ. ಆ ಮೂಲಕ ಐಸಿಸಿ ರ‍್ಯಾಂಕಿಂಗ್‌ಗಳಲ್ಲಿ ಭಾರತ ತನ್ನ ಪ್ರಾಬಲ್ಯ ಮುಂದುವರಿಸಿದೆ.

    ರವಿ ಬಿಷ್ಣೋಯ್, ಈಚೆಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ತಮ್ಮ ಅದ್ಭುತ ಪ್ರದರ್ಶನದೊಂದಿಗೆ ICC T20I ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಟಿ20 ಬೌಲರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ನಂಬರ್‌ 1 ಸ್ಥಾನದಲ್ಲಿದ್ದ ರಶೀದ್‌ ಖಾನ್‌ ಅವರನ್ನು ಹಿಂದಿಕ್ಕಿ ರವಿ ಬಿಷ್ಣೋಯ್‌ ಅಗ್ರಸ್ಥಾನ ಗಳಿಸಿದ್ದಾರೆ. 699 ರೇಟಿಂಗ್‌ ಪಾಯಿಂಟ್ಸ್‌ ಮೂಲಕ ಬಿಷ್ಣೋಯ್‌ ಮೊದಲನೇ ಸ್ಥಾನ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಬಾಂಗ್ಲಾ ಕ್ರಿಕೆಟಿಗನ ಮುಶ್ಫಿಕರ್ ಎಡವಟ್ಟು – ʻಹ್ಯಾಂಡ್ಲಿಂಗ್ ದಿ ಬಾಲ್‌ʼಗೆ ಬಲಿಯಾದ ದೇಶದ ಮೊದಲ ಬ್ಯಾಟರ್‌

    ಶುಭಮನ್ ಗಿಲ್, ರವಿಚಂದ್ರನ್ ಅಶ್ವಿನ್ ಮತ್ತು ಸೂರ್ಯಕುಮಾರ್ ಯಾದವ್ ಕ್ರಮವಾಗಿ ODI ಬ್ಯಾಟರ್, ಟೆಸ್ಟ್ ಬೌಲರ್ ಮತ್ತು T20I ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ಅಗ್ರ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

    ಆಲ್‌ರೌಂಡರ್‌ಗಳ ವಿಷಯಕ್ಕೆ ಬಂದರೆ ಟೆಸ್ಟ್‌ನಲ್ಲಿ ರವೀಂದ್ರ ಜಡೇಜಾ ಮೊದಲ ಸ್ಥಾನ ಪಡೆದಿದ್ದಾರೆ. ಬಿಷ್ಣೋಯ್ ಅವರೊಂದಿಗೆ ಭಾರತೀಯ ಆಟಗಾರರು ಈಗ ಐಸಿಸಿ ಶ್ರೇಯಾಂಕದ 8 ವಿವಿಧ ವಿಭಾಗಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಈಗ ಹೇಳಿ ಯಾರು ಪನೌತಿ – ರಾಹುಲ್‍ಗೆ ಟಾಂಗ್ ಕೊಟ್ಟ ಪಾಕ್ ಮಾಜಿ ಆಟಗಾರ

    ಟೆಸ್ಟ್‌, ಏಕದಿನ ಅಂತಾರಾಷ್ಟ್ರೀಯ, ಟಿ20 ಅಂತಾರಾಷ್ಟ್ರೀಯ, ಒಡಿಐ ಮತ್ತು ಟಿ20ಐ ಬ್ಯಾಟರ್‌, ಟೆಸ್ಟ್‌ ಮತ್ತು ಟಿ20ಐ ಬೌಲರ್‌, ಟೆಸ್ಟ್‌ ಆಲ್‌ರೌಂಡರ್‌ ರ‍್ಯಾಂಕಿಂಗ್‌ನಲ್ಲಿ ಭಾರತ ತಂಡ ನಂ.1 ಸ್ಥಾನದಲ್ಲಿದೆ.

    ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ 3,434 ಪಾಯಿಂಟ್ಸ್‌ ಮತ್ತು 118 ರೇಟಿಂಗ್‌ ಮೂಲಕ ಭಾರತ ತಂಡ ನಂಬರ್‌ 1 ಸ್ಥಾನ ಗಳಿಸಿದೆ. 16,137 ಪಾಯಿಂಟ್ಸ್‌ ಮತ್ತು 265 ರೇಟಿಂಗ್‌ನೊಂದಿಗೆ ಐಸಿಸಿ ಟಿ20ಐ ರ‍್ಯಾಂಕಿಂಗ್‌ನಲ್ಲೂ ಭಾರತ ಮುಂದಿದೆ.

    6,640 ಪಾಯಿಂಟ್ಸ್‌ ಮತ್ತು 121 ರೇಟಿಂಗ್‌ನೊಂದಿಗೆ ಅಂತಾರಾಷ್ಟ್ರೀಯ ಏಕದಿನ ರ‍್ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾ 1 ನೇ ಸ್ಥಾನ ಪಡೆದುಕೊಂಡಿದೆ. ಒಡಿಐ ಬ್ಯಾಟ್ಸ್‌ಮನ್‌ ರ‍್ಯಾಂಕಿಂಗ್‌ನಲ್ಲಿ 826 ಪಾಯಿಂಟ್ಸ್‌ನೊಂದಿಗೆ ಶುಭಮನ್‌ ಗಿಲ್‌ ಮೊದಲ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ವಿರುದ್ಧದ 3 ಸರಣಿಗಳಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ – ಏಡನ್‌ ಮಾರ್ಕ್ರಮ್‌ ನಾಯಕ

    ಟಿ20ಯಲ್ಲಿ 855 ರೇಟಿಂಗ್‌ ಪಾಯಿಂಟ್ಸ್‌ನೊಂದಿಗೆ ಸೂರ್ಯಕುಮಾರ್‌ ಯಾದವ್‌ ಮೊದಲ ಸ್ಥಾನದಲ್ಲಿದ್ದಾರೆ. ಟೆಸ್ಟ್‌ನಲ್ಲಿ 879 ರೇಟಿಂಗ್‌ ರವಿಚಂದ್ರನ್‌ ಅಶ್ವಿನ್‌ ನಂಬರ್‌ 1 ಸ್ಥಾನ ಪಡೆದಿದ್ದಾರೆ. ಆಲ್‌ರೌಂಡರ್‌ನಲ್ಲಿ 455 ರೇಟಿಂಗ್‌ ಪಾಯಿಂಟ್ಸ್‌ನಿಂದ ರವೀಂದ್ರ ಜಡೇಜಾ ಮೊದಲ ಸ್ಥಾನದಲ್ಲಿದ್ದಾರೆ.

  • 2009ರಿಂದ ಸ್ಟೇಡಿಯಂ ಕರೆಂಟ್‌ ಬಿಲ್‌ ಕಟ್ಟಿಲ್ಲ – ಭಾರತ-ಆಸೀಸ್‌ 4ನೇ T20 ಪಂದ್ಯಕ್ಕೆ ಹೊಸ ತಲೆನೋವು!

    2009ರಿಂದ ಸ್ಟೇಡಿಯಂ ಕರೆಂಟ್‌ ಬಿಲ್‌ ಕಟ್ಟಿಲ್ಲ – ಭಾರತ-ಆಸೀಸ್‌ 4ನೇ T20 ಪಂದ್ಯಕ್ಕೆ ಹೊಸ ತಲೆನೋವು!

    – 3.16 ಕೋಟಿ ಬಿಲ್‌ ಬಾಕಿ ಉಳಿಸಿಕೊಂಡಿರೋ ಶಹೀದ್ ವೀರ್ ನಾರಾಯಣ ಸಿಂಗ್ ಕ್ರೀಡಾಂಗಣ

    ರಾಯಪುರ: ಭಾರತ ಮತ್ತು ಆಸ್ಟ್ರೇಲಿಯಾ (Ind vs Aus) ನಡುವಿನ 4ನೇ ಟಿ20 ಪಂದ್ಯವು ಇಲ್ಲಿನ ರಾಯಪುರದ ಶಹೀದ್ ವೀರ್ ನಾರಾಯಣ ಸಿಂಗ್ ಕ್ರೀಡಾಂಗಣದಲ್ಲಿ (haheed Veer Narayan Singh Stadium) ಆಯೋಜನೆಗೊಂಡಿದೆ. ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಇತ್ತಂಡಗಳು ಕಣಕ್ಕಿಳಿಯಲು ಸಜ್ಜಾಗಿವೆ. ಆದ್ರೆ ಮ್ಯಾಚ್‌ಗೆ ಕೆಲವೇ ಗಂಟೆಗಳಿರುವ ಹೊತ್ತಿನಲ್ಲಿ ಹೊಸ ತಲೆನೋವು ಎದುರಾಗಿದೆ.

    ಕ್ರೀಡಾಂಗಣದ ಕೆಲವು ಭಾಗಗಳಲ್ಲಿ ವಿದ್ಯುತ್‌ ಇಲ್ಲದಿರುವುದು ಕಂಡುಬಂದಿದೆ. 2009ರಿಂದ ಸ್ಟೇಡಿಯಂನ ಬಿಲ್‌ ಬಾಕಿ ಉಳಿಸಿಕೊಂಡಿದ್ದು, ಮೈದಾನದ ಕೆಲ ಭಾಗಗಳಲ್ಲಿ ವಿದ್ಯುತ್‌ ಕಡಿತಗೊಳಿಸಲಾಗಿದೆ (No Electricity). 2009ರಿಂದ 3.16 ಕೋಟಿ ಬಿಲ್‌ ಬಾಕಿ ಉಳಿಸಿಕೊಂಡಿದ್ದ ಹಿನ್ನೆಯಲೆಯಲ್ಲಿ 5 ವರ್ಷಗಳ ಹಿಂದೆಯೇ ಕರೆಂಟ್‌ ಕಡಿತಗೊಳಿಸಲಾಗಿದೆ. ಛತ್ತೀಸ್‌ಗಢ ರಾಜ್ಯ ಕ್ರಿಕೆಟ್ ಸಂಸ್ಥೆಯ ಕೋರಿಕೆಯ ಮೇರೆಗೆ ತಾತ್ಕಾಲಿಕ ಸಂಪರ್ಕ ಸ್ಥಾಪಿಸಲಾಗಿದೆ. ಆದ್ರೆ ಅದು ಪ್ರೇಕ್ಷಕರ ಗ್ಯಾಲರಿ ಮತ್ತು ಬಾಕ್ಸ್‌ಗಳನ್ನು ಮಾತ್ರ ಒಳಗೊಂಡಿದೆ. ಸದ್ಯ ಪಂದ್ಯ ಆರಂಭವಾಗಬೇಕಾದ್ರೆ ಫ್ಲಡ್‌ಲೈಟ್‌ಗಳನ್ನು ಜನರೇಟರ್‌ ಬಳಿಸಿ ಚಾಲಿತಗೊಳಿಸಬೇಕಾಗುತ್ತದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

    ಈ ನಡುವೆ ಸ್ಟೇಡಿಯಂಗೆ ತಾತ್ಕಾಲಿಕವಾಗಿಯಾದರೂ ಹೆಚ್ಚುವರಿ ವಿದ್ಯುತ್‌ ಪೂರೈಕೆ ಮಾಡುವಂತೆ ಕ್ರಿಕೆಟ್‌ ಸಂಸ್ಥೆಯ ಕಾರ್ಯದರ್ಶಿ ಅರ್ಜಿ ಅಲ್ಲಿಸಿದ್ದಾರೆ. ಪ್ರಸ್ತುತ 200 KV ಸಾಮರ್ಥ್ಯವನ್ನು 1,000 KVಗೆ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ ಎಂಬುದಾಗಿ ರಾಯಪುರ ವೃತ್ತದ ಉಸ್ತುವಾರಿ ಅಶೋಕ್ ಖಂಡೇಲ್‌ವಾಲ್ ತಿಳಿಸಿದ್ದಾರೆ. ಆದ್ರೆ ಈವರೆಗೆ ಯಾವುದೇ ಬೆಳವಣಿಗೆ ಕಂಡುಬಂದಿಲ್ಲ.

    2018ರಲ್ಲಿ ಹಾಫ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಅಥ್ಲೀಟ್‌ಗಳು ಸ್ಟೇಡಿಯಂನಲ್ಲಿ ವಿದ್ಯುತ್ ಪೂರೈಕೆ ಇಲ್ಲ ಎಂದು ತಿಳಿದಾಗ ಕೋಲಾಹಲ ಎಬ್ಬಿಸಿದ್ದರು. ಇದನ್ನೂ ಓದಿ: ಮೂರು ಮಾದರಿಗೆ ಮೂವರು ನಾಯಕರು – ಆಫ್ರಿಕಾ ಪ್ರವಾಸಕ್ಕೆ ಟೀಂ ಇಂಡಿಯಾ ಆಟಗಾರರ ಪಟ್ಟಿ ರಿಲೀಸ್‌

    ಭಾರತಕ್ಕೆ ಸರಣಿ ಗೆಲುವಿನ ಗುರಿ: 5 ಪಂದ್ಯದ ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಸಾಧಿಸಿರುವ ಭಾರತ, ಕೊನೆಯ ಪಂದ್ಯದವರೆಗೂ ಕಾಯದೆ ಸರಣಿ ಗೆಲ್ಲಲು ಎದುರು ನೋಡುತ್ತಿದ್ದರೆ, ಆಸೀಸ್ ಸರಣಿ ಸಮಬಲದ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದೆ.

    ಮೊದಲೆರಡು ಪಂದ್ಯ ಗೆದ್ದಿದ್ದ ಭಾರತ 3ನೇ ಟಿ20 ಪಂದ್ಯವನ್ನು ಪಂದ್ಯವನ್ನು ಮ್ಯಾಕ್ಸ್ವೆಲ್ ಅವರ ಸಾಹಸದ ಮುಂದೆ ಕೈಚೆಲ್ಲಿತ್ತು. ಮೂರೂ ಪಂದ್ಯಗಳಲ್ಲಿ ಟೀಂ ಇಂಡಿಯಾ ಬೌಲರ್‌ಗಳ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು. ಆಸೀಸ್ ವಿರುದ್ಧ ಕ್ರಮವಾಗಿ 209, 191 ಹಾಗೂ 225 ರನ್ ಬಿಟ್ಟುಕೊಟ್ಟಿತು. ಆದ್ದರಿಂದ ಟೀಂ ಇಂಡಿಯಾಕ್ಕೆ ಬ್ಯಾಟಿಂಗ್‌ನಷ್ಟೇ ಬೌಲಿಂಗ್‌ನಲ್ಲೂ ಬಲ ಬೇಕಿದೆ.

    ಪ್ರಸಿದ್ ಕೃಷ್ಣ ಗಾಯದಿಂದ ಚೇತರಿಸಿ ತಂಡಕ್ಕೆ ಮರಳಿದ ಬಳಿಕ ದುಬಾರಿಯಾಗುತ್ತಿದ್ದು, ಇತರರಿಂದಲೂ ಆಸೀಸ್ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಶ್ರೇಯಸ್ ಅಯ್ಯರ್, ದೀಪಕ್ ಚಹಾರ್ 4ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಗಳಿವೆ. ತಿಲಕ್ ವರ್ಮಾ ಅವರ ಜಾಗಕ್ಕೆ ಶ್ರೇಯಸ್ ಹಾಗೂ ಪ್ರಸಿದ್ಧ್ ಕೃಷ್ಣ ಬದಲಿಗೆ ದೀಪಕ್ ಚಹಾರ್ ಅವರನ್ನ ಕಣಕ್ಕಿಳಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಇದನ್ನೂ ಓದಿ: ಇಂದು ಭಾರತ V/s ಆಸೀಸ್‌ 4ನೇ ಟಿ20 – ಸರಣಿ ಗೆಲುವಿನ ಮೇಲೆ ಭಾರತದ ಕಣ್ಣು

    ಅಲ್ಲದೇ ಆಸೀಸ್‌ನ ಡೇಂಜರಸ್ ಬ್ಯಾಟ್ಸ್ ಗ್ಲೇನ್ ಮ್ಯಾಕ್ಸ್ವೆಲ್, ಸ್ಟೀವ್ ಸ್ಮಿತ್, ಆಡಂ ಝಂಪಾ ಸೇರಿ ಪ್ರಮುಖ ಆಟಗಾರರು ತವರಿಗೆ ಮರಳಿದ್ದು, ಯುವ ಪಡೆ ಮೇಲೆ ಸರಣಿ ಉಳಿಸಿಕೊಳ್ಳುವ ಜವಾಬ್ದಾರಿಯಿದೆ. ಇದನ್ನೂ ಓದಿ: ಔಟ್‌ ಮಾಡುವ ಭರದಲ್ಲಿ ಇಶಾನ್‌ ಕಿಶನ್‌ ಯಡವಟ್ಟು – ಎಂಸಿಸಿ ಕಾನೂನು 27.3.1 & 27.3.2 ಹೇಳೋದೇನು?

    3 ಪಂದ್ಯಗಳ ಸಂಕ್ಷಿಪ್ತ ಸ್ಕೋರ್
    ಮೊದಲ ಟಿ20: ಭಾರತ – 209/8, ಆಸ್ಟ್ರೇಲಿಯಾ – 208/3
    2ನೇ ಟಿ20: ಭಾರತ – 235/4, ಆಸ್ಟ್ರೇಲಿಯಾ – 191/9
    3ನೇ ಟಿ20: ಭಾರತ – 222/3, ಆಸ್ಟ್ರೇಲಿಯಾ – 225/5

  • ಔಟ್‌ ಮಾಡುವ ಭರದಲ್ಲಿ ಇಶಾನ್‌ ಕಿಶನ್‌ ಯಡವಟ್ಟು – ಎಂಸಿಸಿ ಕಾನೂನು 27.3.1 & 27.3.2 ಹೇಳೋದೇನು?

    ಔಟ್‌ ಮಾಡುವ ಭರದಲ್ಲಿ ಇಶಾನ್‌ ಕಿಶನ್‌ ಯಡವಟ್ಟು – ಎಂಸಿಸಿ ಕಾನೂನು 27.3.1 & 27.3.2 ಹೇಳೋದೇನು?

    ಗುವಾಹಟಿ: ಕಳೆದೆರಡು ದಿನಗಳ ಹಿಂದೆ 3ನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ (Australia), ಟೀಂ ಇಂಡಿಯಾ ವಿರುದ್ಧ ರೋಚಕ ಗೆಲುವು ಸಾಧಿಸಿತು. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯನ್ನು 1-2 ಗೆದ್ದು ಸರಣಿ ಕನಸು ಜೀವಂತವಾಗಿಸಿಕೊಂಡಿತು.

    ಪಂದ್ಯದ ವೇಳೆ ಇಶಾನ್‌ ಕಿಶನ್‌ (Ishan Kishan) ಮಾಡಿದ ಅದೊಂದು ಯಡವಟ್ಟು ಟೀಂ ಇಂಡಿಯಾ (Team India) ಸೋಲಿಗೆ ಕಾರಣವಾಯಿತು ಎಂಬ ವಾದಗಳು ಕೇಳಿಬರುತ್ತಿವೆ. 19ನೇ ಓವರ್‌ನ 4ನೇ ಎಸೆತದಲ್ಲಿ ಮ್ಯಾಥ್ಯೂವೇಡ್‌ ಸ್ಟಂಪ್‌ ಔಟ್‌ಗೆ ತುತ್ತಾದರೂ ಆ ಎಸೆತವನ್ನು ನೋಬಾಲ್‌ ಎಂದು ಘೋಷಿಸಲಾಯಿತು. ಇದಕ್ಕೆ ಕಾರಣವೇನು ಅಂಬುದರ ಬಗ್ಗೆ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು. ಈ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

    ಎಂಸಿಸಿ ಕಾನೂನು 27.3.1 & 27.3.2 ಏನು ಹೇಳುತ್ತೆ?
    ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ (MCC) ಕಾನೂನು 27.3.1 ಪ್ರಕಾರ, ಕ್ರೀಸ್‌ನಲ್ಲಿರುವ ಸ್ಟ್ರೈಕರ್‌ ಚೆಂಡನ್ನು ಎದುರಿಸಲು ಬಂದಾಗ ಆತ ಬಾಲನ್ನು ತಾಗಿಸುವವರೆಗೆ ಅಥವಾ ಚೆಂಡು ಆತನನ್ನು ಹಾದುಹೋಗುವವರೆಗೆ ಸಂಪೂರ್ಣವಾಗಿ ಕೀಪರ್‌ ವಿಕೆಟ್‌ಗಳಿಂದ ಹಿಂಭಾಗ ಇರಬೇಕು. ಇಂದು ವೇಳೆ ಚೆಂಡು ಬ್ಯಾಟ್ಸ್‌ಮ್ಯಾನ್‌ನನ್ನ ಹಾದುಹೋಗುವ ಮುನ್ನವೇ ಕೀಪರ್‌ ವಿಕೆಟ್‌ ಮುಂದೆ ಬಂದು ಬಾಲ್‌ ಹಿಡಿದರೆ ಅದು ಉಲ್ಲಂಘನೆಯಾಗುತ್ತದೆ. ಆಗ 27.3.2 ಕಾನೂನಿನ ಪ್ರಕಾರ ಟಿವಿ ಅಂಪೈರ್‌ (3ನೇ ಅಂಪೈರ್‌) ಅದನ್ನು ನೋಬಾಲ್‌ ಎಂದು ತೀರ್ಮಾನಿಸಬಹುದು. ಇದನ್ನೂ ಓದಿ: ಕೊನೆಯ ಓವರ್‌ನಲ್ಲಿ 23 ರನ್‌, ಮ್ಯಾಕ್ಸಿ ಸ್ಫೋಟಕ ಶತಕ – ರನ್‌ ಮಳೆಯಲ್ಲಿ ಗೆದ್ದ ಆಸ್ಟ್ರೇಲಿಯಾ

    ಇಶಾಕ್‌ ಕಿಶನ್‌ ನಿಯಮ ಉಲ್ಲಂಘನೆ ಮಾಡಿದ್ದರಿಂದ ಆಸೀಸ್‌ಗೆ ಗೆಲುವಿನ ಹಾದಿಯೂ ಸುಲಭವಾಯಿತು. ಕೊನೆಯ 12 ಎಸೆತಗಳಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 43 ರನ್‌ ಬೇಕಿತ್ತು. 19ನೇ ಓವರ್‌ನಲ್ಲಿ ಅಕ್ಷರ್‌ ಪಟೇಲ್‌ ಎಸೆದ ಮೊದಲ ಮೂರು ಎಸೆತಗಳಲ್ಲಿ 4,2,4 ರನ್‌ ಬಂದಿತ್ತು. ಆದ್ರೆ 4ನೇ ಎಸೆತದಲ್ಲಿ ಮ್ಯಾಥ್ಯೂವೇಡ್‌ (Matthew Wade) ಸ್ಟಂಪ್‌ ಔಟ್‌ ಆದರು. ವಿಕೆಟ್‌ ಕೀಪರ್‌ ಇಶಾನ್‌ ಕಿಶನ್‌ ಸ್ಟಂಪ್‌ ಔಟ್‌ ಮಾಡಿದ್ದರು. ಆದ್ರೆ ಕಿಶನ್‌ ಅವರ ಕೈಗವಸುಗಳು ಸ್ಟಂಪ್ಸ್‌ (ವಿಕೆಟ್‌) ಮುಂದೆ ಬಂದಿದ್ದರಿಂದ 4ನೇ ಎಸೆತವನ್ನು ನೋಬಾಲ್‌ ಎಂದು ಘೋಷಿಸಲಾಯಿತು. ನಂತರ ಫ್ರಿ ಹಿಟ್‌ ಎಸೆತವನ್ನು ವೇಡ್‌ ಸಿಕ್ಸರ್‌ಗೆ ಅಟ್ಟಿದ್ದರು. ನಂತರ ವೇಡ್ ಸಿಂಗಲ್‌ ರನ್‌ ತೆಗೆದರೆ ಕೊನೆಯ ಎಸೆತವನ್ನು ಇಶನ್‌ ಕಿಶನ್‌ ಹಿಡಿಯದ ಕಾರಣ ಬೈ ಮೂಲಕ 4 ರನ್‌ ಆಸೀಸ್‌ ಖಾತೆಗೆ ಸೇರಿತು. ಕೊನೆಯ ಓವರ್‌ನಲ್ಲಿ ಪ್ರಸಿದ್ಧ್‌ ಕೃಷ್ಣ ಎಸೆದ ಕೊನೆಯ ಓವರ್‌ನಲ್ಲಿ 21 ರನ್‌ ಚಚ್ಚಿಸಿಕೊಂಡಿದ್ದರಿಂದ ಟೀಂ ಇಂಡಿಯಾ ಸೋಲನ್ನು ಎದುರಿಸಬೇಕಾಯಿತು.

    2019ರಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವೆ ರಾಜ್‌ಕೋಟ್‌ನಲ್ಲಿ ನಡೆದ ಟಿ20 ಪಂದ್ಯದಲ್ಲಿ ರಿಷಬ್‌ ಪಂತ್‌ ಸಹ ಇದೇ ಯಡವಟ್ಟು ಮಾಡಿದ್ದರು. ಲಿಟ್ಟನ್‌ ದಾಸ್‌ ಸಂಪೂರ್ಣ ಕ್ರೀಸ್‌ನಿಂದ ಹೊರಗಿದ್ದರು. ಆದ್ರೆ ರಿಷಬ್‌ ಪಂತ್‌ ಔಟ್‌ ಮಾಡುವ ಬರದಲ್ಲಿ ತಮ್ಮ ಕೈಯನ್ನು ವಿಕೆಟ್‌ ಮುಂದೆ ತಂದಿದ್ದರು. ಆದ್ದರಿಂದ ಅದನ್ನು ನೋಬಾಲ್‌ ಎಂದು ಘೋಷಿಸಲಾಗಿತ್ತು. ಇದನ್ನೂ ಓದಿ: ಆಸೀಸ್‌ ವಿರುದ್ಧ ಶತಕ ಸಿಡಿಸಿ ದಾಖಲೆ ಬರೆದ ಗಾಯಕ್‌ವಾಡ್‌

  • ಕೊನೆ ಓವರ್‌ನಲ್ಲಿ 21 ರನ್‌ ಚೇಸ್; ದಾಖಲೆ ಬರೆದ ಆಸೀಸ್‌

    ಕೊನೆ ಓವರ್‌ನಲ್ಲಿ 21 ರನ್‌ ಚೇಸ್; ದಾಖಲೆ ಬರೆದ ಆಸೀಸ್‌

    ಗುವಾಹಟಿ: ಪುರುಷರ ಅಂತಾರಾಷ್ಟ್ರೀಯ ಟಿ20 ಯಲ್ಲಿ ಗುರಿ ಬೆನ್ನತ್ತುವ ವೇಳೆ ಕೊನೆ ಓವರ್‌ನಲ್ಲಿ ಅತಿ ಹೆಚ್ಚು ರನ್‌ ಸಿಡಿಸಿ ಮ್ಯಾಚ್‌ ಗೆದ್ದು ಹೊಸ ದಾಖಲೆಯನ್ನು ಆಸ್ಟ್ರೇಲಿಯಾ ಬರೆದಿದೆ.

    ಗುವಾಹಟಿಯಲ್ಲಿ ನಡೆದ ಭಾರತದ ವಿರುದ್ಧದ ಮೂರನೇ 20 ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿತು. ಆ ಮೂಲಕ ಸರಣಿಯನ್ನು ಆಸೀಸ್‌ ಜೀವಂತವಾಗಿರಿಸಿದೆ. ಮೂರನೇ ಪಂದ್ಯದ ಗೆಲುವಿನ ಜೊತೆಗೆ ಆಸ್ಟ್ರೇಲಿಯಾ ದಾಖಲೆಯನ್ನೂ ಬರೆದಿದೆ.

    ಕೊನೆ ಓವರ್‌ನಲ್ಲಿ ಹೆಚ್ಚು ರನ್‌ ಸಿಡಿಸಿ ಪಂದ್ಯ ಗೆದ್ದ ದಾಖಲೆಯನ್ನು ಆಸೀಸ್‌ ಬರೆದಿದೆ. ಮಂಗಳವಾರದ ಮ್ಯಾಚ್‌ನಲ್ಲಿ ಆಸೀಸ್‌ 21 ರನ್‌ಗಳನ್ನು ಯಶಸ್ವಿಯಾಗಿ ಬೆನ್ನತ್ತಿತು.

    2016 ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ 19 ರನ್ ಗಳಿಸಿತ್ತು. ಕಳೆದ ವರ್ಷದ ಪಲ್ಲೆಕೆಲೆ ಟಿ20ಐ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ 19 ರನ್ ಗಳಿಸಿದ್ದು ಹಿಂದಿನ ಗರಿಷ್ಠವಾಗಿತ್ತು. ಕೊನೆ ಓವರ್‌ನಲ್ಲಿ ದಾಖಲಾಗಿದ್ದ ಅತಿ ಹೆಚ್ಚು ರನ್‌ ಇದಾಗಿತ್ತು. ಆ ದಾಖಲೆಯನ್ನು ಆಸ್ಟ್ರೇಲಿಯಾ ಪುಡಿಗಟ್ಟಿದೆ.

    ಮಂಗಳವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ ಆಸೀಸ್‌ಗೆ ಭಾರತ 223 ರನ್‌ಗಳ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ರೋಚಕ ಗೆಲುವು ಸಾಧಿಸಿತು.

    ಪ್ರಸಿದ್ಧ ಕೃಷ್ಣ ಎಸೆದ ಕೊನೆಯ ಓವರ್‌ನಲ್ಲಿ 21 ರನ್‌ ಬೇಕಿತ್ತು. ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದ ವೇಡ್‌ ಎರಡನೇ ಎಸೆತದಲ್ಲಿ ಒಂದು ರನ್‌ ತೆಗೆದರು. ಮೂರನೇ ಎಸೆತವನ್ನು ಮ್ಯಾಕ್ಸ್‌ವೆಲ್‌ ಸಿಕ್ಸರ್‌ಗೆ ಅಟ್ಟಿದರು. ಕೊನೆಯ ಮೂರು ಎಸೆತದಲ್ಲಿ ಹ್ಯಾಟ್ರಿಕ್‌ ಬೌಂಡರಿ ಹೊಡೆದರು. ಆ ಮೂಲಕ ಕೊನೆ ಓವರ್‌ನಲ್ಲಿ 23 ರನ್‌ಗಳು ಹರಿದುಬಂದವು.

  • ಲೆಕ್ಕಕ್ಕಿಲ್ಲ ರಿಂಕು ಸಿಕ್ಸರ್‌ – ಕೊನೇ ಎಸೆತದಲ್ಲಿ 7 ರನ್‌ ಗಳಿಸಿದ್ರೂ ಭಾರತಕ್ಕೆ ಸಿಕ್ಕಿದ್ದು 1 ರನ್‌, ಏಕೆ ಗೊತ್ತೇ?

    ಲೆಕ್ಕಕ್ಕಿಲ್ಲ ರಿಂಕು ಸಿಕ್ಸರ್‌ – ಕೊನೇ ಎಸೆತದಲ್ಲಿ 7 ರನ್‌ ಗಳಿಸಿದ್ರೂ ಭಾರತಕ್ಕೆ ಸಿಕ್ಕಿದ್ದು 1 ರನ್‌, ಏಕೆ ಗೊತ್ತೇ?

    ವಿಶಾಖಪಟ್ಟಣಂ: ಸದ್ಯ ಆಸ್ಟ್ರೇಲಿಯಾ (Australia) ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟಿ20 ಸರಣಿಯ ಪೈಕಿ ಭಾರತ ಮೊದಲ ಪಂದ್ಯದಲ್ಲೇ ರೋಚಕ ಜಯ ಸಾಧಿಸಿದೆ.

    ಸೂರ್ಯಕುಮಾರ್‌ ಯಾದವ್‌ (Suryakumar Yadav), ಇಶಾನ್‌ ಕಿಶನ್‌, ರಿಂಕು ಸಿಂಗ್‌ (Rinku Singh) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಟೀಂ ಇಂಡಿಯಾ ಆಸೀಸ್‌ ವಿರುದ್ಧ ಗೆದ್ದು ಬೀಗಿದೆ. ಆದ್ರೆ ಕೊನೇ ಎಸೆತದಲ್ಲಿ 1 ರನ್‌ ಬೇಕಿದ್ದಾಗ ಸಿಕ್ಸರ್‌ ಸಿಡಿಸಿ ಭಾರತ ಒಟ್ಟು 214 ರನ್‌ ಕಲೆಹಾಕಿದರೂ ತಂಡಕ್ಕೆ ಸೇರ್ಪಡೆಯಾಗಿದ್ದು 209ರನ್‌ ಮಾತ್ರ. ಆದ್ರೆ ಕೊನೆಯಲ್ಲಿ 7 ರನ್‌ ಬಾರಿಸಿದರೂ ಭಾರತಕ್ಕೆ ಒಂದೇ ಒಂದು ರನ್‌ ಸಿಕ್ಕಿತು. ಅದು ಟೀಂ ಇಂಡಿಯಾ (Team India) ಖಾತೆಗಾಗಲಿ ಅಥವಾ ರಿಂಕು ಸಿಂಗ್‌ ಅವರ ಖಾತೆಯಾಗಲಿ ಸೇರಲಿಲ್ಲ. ಯಾಕೆ ಎಂಬ ಕುತೂಹಲ ನಿಮ್ಮಲ್ಲಿದ್ದರೆ ಮುಂದೆ ಓದಿ…

    ರಿಂಕು ಭರ್ಜರಿ ಸಿಕ್ಸ್‌ ಲೆಕ್ಕಕ್ಕಿಲ್ಲದಂತಾಗಿದ್ದೇಕೆ?
    ಅಂತಿಮ ಓವರ್‌ನಲ್ಲಿ ಭಾರತಕ್ಕೆ 7 ರನ್‌ಗಳ ಅಗತ್ಯವಿತ್ತು. ಮೊದಲ ಎಸೆತದಲ್ಲೇ ರಿಂಕು ಬೌಂಡರಿ ಬಾರಿಸಿ, 2ನೇ ಎಸೆತದಲ್ಲಿ 1 ರನ್‌ ಬೈಸ್‌ ಕದ್ದರು. ಆದ್ರೆ 3 ಮತ್ತು 4ನೇ ಎಸೆತಗಳಲ್ಲಿ ಸತತ 2 ವಿಕೆಟ್‌ ಉರುಳಿತು. ಈ ವೇಳೆ ಮತ್ತೊಂದು ವೈಡ್‌ ತಂಡಕ್ಕೆ ಸೇರ್ಪಡೆಯಾಯಿತು. ಕೊನೆಯ ಒಂದು ಎಸೆತದಲ್ಲಿ ಇನ್ನೊಂದು ರನ್‌ ಗೆಲುವಿಗೆ ಅಗತ್ಯವಿತ್ತು. ಸೇನ್‌ ಅಬಾಟ್‌ ಫುಲ್‌ ಲೆಂತ್‌ ಬೌಲಿಂಗ್‌ಗೆ ರಿಂಕು ಸಿಂಗ್‌, ಲಾಂಗ್‌ ಆನ್‌ಗೆ ಸಿಕ್ಸರ್‌ ಬಾರಿಸುವ ಮೂಲಕ ಗೆಲುವು ತಂದುಕೊಟ್ಟರು. ಇದರಿಂದ ಟೀಂ ಇಂಡಿಯಾ ಕೊನೇ ಎಸೆತದಲ್ಲಿ 7 ರನ್‌ ಗಳಿಸಿದರೂ ಒಂದೇ ಒಂದು ರನ್‌ ಸೇರ್ಪಡೆಯಾಯಿತು. ಇದನ್ನೂ ಓದಿ: ಸೆಹ್ವಾಗ್ ಶತಕದ ವೇಳೆ ಲಂಕಾ ಕುತಂತ್ರ – ಇದೇನಾ ನಿಮ್ಮ ಕ್ರೀಡಾ ಸ್ಫೂರ್ತಿ?

    ಏಕೆಂದರೆ ಸೇನ್‌ ಅಬ್ಬಾಟ್‌ ಕೊನೇ ಎಸೆತವನ್ನು ಓವರ್‌ ಕ್ರೀಸ್‌ ನೋಬಾಲ್‌ ಎಸೆದಿದ್ದರು. ನೋಬಾಲ್‌ನಲ್ಲಿ ಗೇಮ್ ಕೊನೆಯಾದರೆ ಕೇವಲ ಒಂದು ರನ್ ಸಿಗುತ್ತದೆ ಹೊರತು ಬ್ಯಾಟರ್ ಖಾತೆಗೆ ಆ ರನ್ ಸೇರ್ಪಡೆಯಾಗುವುದಿಲ್ಲ. ಆ ಕ್ಷಣದಲ್ಲಿ ಬ್ಯಾಟ್, ಲೆಗ್-ಬೈ ಅಥವಾ ಬೈಗಳ ಮೂಲಕ ಗಳಿಸಿದ ರನ್‌ ಕೂಡ ತಂಡದ ಖಾತೆಗೆ ಸೇರ್ಪಡೆಯಾಗುವುದಿಲ್ಲ. ನೋಬಾಲ್‌ ಸಿಕ್ಸರ್‌ ಸಿಡಿಸುವುದಕ್ಕೂ ಮುಂಚಿತವಾಗಿ ಆಗಿತ್ತು. ಭಾರತದ ಗೆಲುವಿಗೆ 1 ರನ್‌ಗಳಷ್ಟೇ ಅಗತ್ಯವಿದ್ದ ಕಾರಣ ರಿಂಕು ಸಿಂಗ್‌ ಅವರ ಸಿಕ್ಸರ್‌ ಸ್ಕೋರ್‌ ಅವರ ಖಾತೆಗಾಗಲಿ ಅಥವಾ ತಂಡದ ಖಾತೆಗಾಗಲಿ ಸೇರ್ಪಡೆಯಾಗುವುದಿಲ್ಲ. ಒಂದು ವೇಳೆ ಒಂದು ರನ್‌ಗಿಂತಲೂ ಹೆಚ್ಚು ರನ್‌ಗಳ ಅಗತ್ಯವಿದ್ದಿದ್ದರೇ ಮಾತ್ರ ಆ ರನ್‌ ಸೇರ್ಪಡೆಯಾಗುತ್ತದೆ. ಇದನ್ನೂ ಓದಿ: T20 ಕದನಕ್ಕೆ ವಿಶ್ವಕಪ್‌ ದಾಖಲೆ ಉಡೀಸ್‌ – ಏಕಕಾಲಕ್ಕೆ ಕರ್ನಾಟಕದ ಜನಸಂಖ್ಯೆಗಿಂತಲೂ ಅಧಿಕ ಮಂದಿ ವೀಕ್ಷಣೆ

    ಸೆಹ್ವಾಗ್ ಅವರಿಗೂ ಇದೇ ರೀತಿ ಆಗಿತ್ತು?
    ಟೀಂ ಇಂಡಿಯಾಕ್ಕೆ ಈ ಘಟನೆ ಇದೇ ಮೊದಲೇನಲ್ಲ. 2010ರಲ್ಲಿ ಶ್ರೀಲಂಕಾ, ಭಾರತ, ನ್ಯೂಜಿಲೆಂಡ್ ಮಧ್ಯೆ ಶ್ರೀಲಂಕಾದಲ್ಲಿ ತ್ರಿಕೋನ ಏಕದಿನ ಸರಣಿ ಆಯೋಜನೆಗೊಂಡಿತ್ತು. ಸರಣಿಯ ಮೂರನೇ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ್ದ ಶ್ರೀಲಂಕಾ 170 ರನ್‌ಗಳಿಗೆ ಆಲೌಟ್ ಆಗಿತ್ತು. ಸುಲಭದ ಸವಾಲನ್ನು ಬೆನ್ನಟ್ಟಿದ ಭಾರತ 34 ಓವರ್‌ಗಳಲ್ಲಿ 166 ರನ್‌ಗಳಿಸಿತ್ತು. ಸೆಹ್ವಾಗ್ 99 ರನ್‌ಗಳಿಸಿದ್ದರೆ ಧೋನಿ 23 ರನ್‌ಗಳಿಸಿ ಕ್ರೀಸ್‌ನಲ್ಲಿದ್ದರು. ಭಾರತದ ಗೆಲುವಿಗೆ ಕೇವಲ 5 ರನ್ ಬೇಕಿತ್ತು. ರಂದೀವ್ 35ನೇ ಓವರ್ ಎಸೆಯಲು ಬಂದಾಗ ಸೆಹ್ವಾಗ್ ಸ್ಟ್ರೈಕ್‌ನಲ್ಲಿದ್ದರು. ಮೊದಲ ಎಸೆತವನ್ನು ಸೆಹ್ವಾಗ್ ಬ್ಯಾಟಿನಿಂದ ತಡೆಯಲು ಯತ್ನಿಸಿದರು. ಆದರೆ ಬಾಲ್ ಬ್ಯಾಟಿಗೆ ಸಿಗಲಿಲ್ಲ. ಈ ಚೆಂಡನ್ನು ನಾಯಕನಾಗಿದ್ದ ಕುಮಾರ ಸಂಗಕ್ಕಾರ ಸಹ ಹಿಡಿಯದ ಕಾರಣ ಬೌಂಡರಿಗೆ ಹೋಗಿತ್ತು. ಬೈ ಮೂಲಕ ಇತರೇ 4 ರನ್ ಸೇರ್ಪಡೆಯಾದ ಕಾರಣ ಸ್ಕೋರ್ ಸಮವಾಗಿತ್ತು. ಹೀಗಿದ್ದರೂ ಸೆಹ್ವಾಗ್ 1 ರನ್ ಗಳಿಸಿ ಶತಕ ಹೊಡೆಯಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ನಂತರ ಎರಡು ಎಸೆತದಲ್ಲಿ ಯಾವುದೇ ರನ್ ಬಂದಿರಲಿಲ್ಲ. 4ನೇ ಎಸೆತವನ್ನು ಸೆಹ್ವಾಗ್ ಲಾಂಗ್ ಅಫ್‌ನಲ್ಲಿ ಸಿಕ್ಸರ್‌ಗೆ ಅಟ್ಟಿದ್ದರು. ಸೆಹ್ವಾಗ್ ಸಿಕ್ಸ್ ಸಿಡಿಸಿದ್ದರೂ ಶತಕ ಪೂರ್ಣಗೊಂಡಿರಲಿಲ್ಲ. ಏಕೆಂದರೆ ರಂದೀವ್ ನೋಬಾಲ್ ಎಸೆದಿದ್ದರು.

  • ಇಸ್ಲಾಂ ಧರ್ಮ ಹೇಳಿದಂತೆ ಬದುಕುತ್ತೇನೆ – ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಪಾಕ್‌ ಆಟಗಾರ್ತಿ

    ಇಸ್ಲಾಂ ಧರ್ಮ ಹೇಳಿದಂತೆ ಬದುಕುತ್ತೇನೆ – ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಪಾಕ್‌ ಆಟಗಾರ್ತಿ

    ಇಸ್ಲಾಮಾಬಾದ್‌: ನಾನು ಇನ್ಮುಂದೆ ಇಸ್ಲಾಮಿಕ್‌ ಧರ್ಮದಂತೆಯೇ ಬದುಕುತ್ತೇನೆ, ಇಸ್ಲಾಮಿಕ್‌ ತತ್ವ ಬೋಧನೆಯನ್ನ ಅನುಸರಿಸುತ್ತೇನೆ ಎಂದು ಹೇಳಿರುವ ಪಾಕ್‌ ಮಹಿಳಾ ಕ್ರಿಕೆಟ್‌ ತಂಡದ ಸ್ಫೋಟಕ ಬ್ಯಾಟರ್‌ (Pakistani Cricketer) ಆಯೇಶಾ ನಸೀಮ್ (Ayesha Naseem) ತನ್ನ 18ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

    ಆರಂಭಿಕ ಹಂತದಿಂದಲೇ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿದ್ದ ಆಯೇಶಾ, ಮುಂದೆ ತಂಡ ನಾಯಕತ್ವ ವಹಿಸುವ ಭರವಸೆ ಮೂಡಿಸಿದ್ದರು. ಇದೀಗ ನಿವೃತ್ತಿ ಘೋಷಿಸಿ ನಿರಾಸೆ ಮೂಡಿಸಿದ್ದಾರೆ. ಇದನ್ನೂ ಓದಿ: ಪಾಕ್‌ ಆಟಗಾರರು ಹುಲಿಗಳಂತೆ ಆಡ್ತಾರೆ, ಭಾರತವನ್ನ ಎಲ್ಲಿ ಬೇಕಾದ್ರೂ ಸೋಲಿಸ್ತಾರೆ – ಪಾಕ್‌ ಮಾಜಿ ಕ್ರಿಕೆಟಿಗ

    ನಸೀಮ್ ಅವರು ಇಸ್ಲಾಂ ಧರ್ಮದ ಪ್ರಕಾರ ತಮ್ಮ ಜೀವನವನ್ನು ನಡೆಸುವ ಕಾರಣದಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಲು ನಿರ್ಧರಿಸಿದ್ದಾರೆ. ನಾನು ಕ್ರಿಕೆಟ್ ಆಟ ತ್ಯಜಿಸುತ್ತಿದ್ದೇನೆ ಮತ್ತು ಇಸ್ಲಾಂ ಧರ್ಮದ ಪ್ರಕಾರ ನನ್ನ ಜೀವನವನ್ನು ನಡೆಸಲು ಬಯಸುತ್ತೇನೆ ಎಂದು ನಸೀಮ್ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ಗೆ ತಿಳಿಸಿದ್ದಾರೆ.

    18 ವರ್ಷದ ಪಾಕ್‌ ಮಹಿಳಾ ಆಟಗಾರ್ತಿ ಆಯೇಶಾ ನಸೀಮ್ ಈವರೆಗೆ ನಾಲ್ಕು ಏಕದಿನ, 30 T20 ಪಂದ್ಯಗಳನ್ನಾಡಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟರ್‌ ಆಗಿ ಟಿ20 ಕ್ರಿಕೆಟ್‌ನಲ್ಲಿ 18:45 ಸರಾಸರಿಯಲ್ಲಿ 369 ರನ್‌ ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಕೇವಲ 33 ರನ್‌ ಗಳಿಸಿದ್ದಾರೆ. 2023ರ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ವಿರುದ್ಧ ಕಣಕ್ಕಿಳಿದಾಗ 25 ಎಸೆತಗಳಲ್ಲಿ ಸ್ಫೋಟಕ 43 ರನ್‌ ಚಚ್ಚಿದ್ದರು. ಇದನ್ನೂ ಓದಿ: AsiaCup 2023: ಅಂದುಕೊಂಡಂತೆ ನಡೆದ್ರೆ 15 ದಿನಗಳಲ್ಲಿ 3 ಬಾರಿ ಇಂಡೋ-ಪಾಕ್ ಕದನ ಫಿಕ್ಸ್

    2021ರಲ್ಲಿ ಆಯೇಶಾ ವೆಸ್ಟ್‌ ಇಂಡೀಸ್‌ ವಿರುದ್ಧ ಕಣಕ್ಕಿಳಿದಾಗ 33 ಎಸೆತಗಳಲ್ಲಿ 45 ರನ್‌ ಗಳಿಸಿದ್ದರು. ಈ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅದೇ ವರ್ಷದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟಿ20 ಕ್ರಿಕೆಟ್‌ನಲ್ಲಿ 31 ಎಸೆತಗಳಲ್ಲಿ 45 ರನ್‌ ಗಳಿಸಿ ಮಿಂಚಿದ್ದರು. ಈ ವರ್ಷದ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿ ತಂಡದಲ್ಲಿ ಗುರುತಿಸಿಕೊಂಡಿದ್ದರು. ಪಾಕ್‌ ಹಿರಿಯ ಕ್ರಿಕೆಟಿಗರಿಂದಲೂ ಭಾರೀ ಹೊಳಿಗಕೆ ಸಂದಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • T20I ನಾಯಕ ಆರನ್ ಫಿಂಚ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ

    T20I ನಾಯಕ ಆರನ್ ಫಿಂಚ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ

    ಕ್ಯಾನ್ಬೆರಾ: ಆಸ್ಟ್ರೇಲಿಯಾ (Australia) T20 ತಂಡದ ನಾಯಕನಾಗಿದ್ದ ಆರನ್ ಫಿಂಚ್ (Aaron Finch) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡುವ ಮೂಲಕ 12 ವರ್ಷಗಳ ತಮ್ಮ ಕ್ರಿಕೆಟ್ (Cricket) ಬದುಕಿಗೆ ವಿದಾಯ ಹೇಳಿದ್ದಾರೆ.

    ಇಂಗ್ಲೆಂಡ್ (England) ವಿರುದ್ಧ 2011ರಲ್ಲಿ ನಡೆದ ಟಿ20 ಕ್ರಿಕೆಟ್ ಮೂಲಕ ಅಂತಾರಾಷ್ಟ್ರೀಯ (T20I) ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಫಿಂಚ್ ಇಲ್ಲಿಯವರೆಗೆ 254 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಈವರೆಗೆ 8,804 ರನ್‌ಗಳನ್ನು ಸಿಡಿಸಿದ್ದಾರೆ. ಇದರಲ್ಲಿ 19 ಶತಕ ಹಾಗೂ 172 ಅರ್ಧ ಶತಕಗಳೂ ಸೇರಿವೆ. 103 ಟಿ20 ಪಂದ್ಯಗಳಾಡಿರುವ ಅವರು, 76 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದಾರೆ. ಅಲ್ಲದೇ ದೀರ್ಘಾವದಿಯ ವರೆಗೆ ವೈಟ್ ಬಾಲ್ ಪಂದ್ಯವನ್ನು ಮುನ್ನಡೆಸಿದ ಆಸ್ಟ್ರೇಲಿಯಾ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಫಿಂಚ್ ಟಿ20 ನಾಯಕತ್ವ ಮುಂದುವರಿಸಿದ್ದರು. 2022ರ ಟಿ20 ವಿಶ್ವಕಪ್ ಗೆಲುವಿನ ಕನಸು ಕಂಡಿದ್ದರು. ಕೊನೆಗೆ ನಿರಾಶಾದಾಯಕವಾಗಿ ಹಿಂದಿರುಗಬೇಕಾಯಿತು. ಟಿ20 ವಿಶ್ವಕಪ್‌ನ ಅಂತಿಮ ಪಂದ್ಯದಲ್ಲಿ 44 ಎಸೆತ ಎದುರಿಸಿದ್ದ ಫಿಂಚ್ 63 ರನ್ ಗಳಿಸಿದ್ದರು. ಪರಿಣಾಮ ಐರ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 42 ರನ್‌ಗಳ ಭರ್ಜರಿ ಜಯ ಸಾಧಿಸಿತು. ಇದನ್ನೂ ಓದಿ: ಬುಮ್ರಾ ಯಾರ್ಕರ್‌ಗೆ ಫಿಂಚ್ ಶಬ್ಬಾಸ್‍ಗಿರಿ – ಪಲ್ಟಿ ಹೊಡೆದು ಬೆರಗಾದ ಸ್ಮಿತ್

    ಫಿಂಚ್ 2018ರಲ್ಲಿ ಜಿಂಬಾಬ್ವೆ ವಿರುದ್ಧ ಮಿಂಚಿನ ಆಟವಾಡಿ ಕೇವಲ 76 ಎಸೆತಗಳಲ್ಲಿ 10 ಸಿಕ್ಸರ್, 16 ಬೌಂಡರಿಗಳೊಂದಿಗೆ 172 ರನ್ ಚಚ್ಚಿ ಎದುರಾಳಿ ಬೌಲರ್‌ಗಳ ಬೆವರಿಳಿಸಿದ್ದರು. 2013 ರಲ್ಲಿ ಇಂಗ್ಲೆಂಡ್ ವಿರುದ್ಧ 63 ಎಸೆತಗಳಲ್ಲಿ 156 ರನ್ ಬಾರಿಸಿ ದಾಖಲೆ ಬರೆದಿದ್ದರು. ಇದನ್ನೂ ಓದಿ: 

    ಈ ಕುರಿತು ಪ್ರತಿಕ್ರಿಯಿಸಿರುವ ಫಿಂಚ್, ನನ್ನ ಅಂತಾರಾಷ್ಟ್ರೀಯ ವೃತ್ತಿಜೀವನದುದ್ದಕ್ಕೂ ನನ್ನನ್ನು ಬೆಂಬಲಿಸಿದ ಎಲ್ಲಾ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. 2024ರ ಟಿ20 ವಿಶ್ವಕಪ್‌ವರೆಗೆ ನಾನು ಆಡುವುದಿಲ್ಲ ಎಂಬುದನ್ನು ಅರಿತುಕೊಂಡು ಕೆಳಗಿಳಿಯಲು ನಿರ್ಧರಿಸಿದ್ದೇನೆ. ತಂಡಕ್ಕೆ ಇನ್ನಷ್ಟು ಕಾಲಾವಕಾಶ ನೀಡಲು ಇದು ಸರಿಯಾದ ಸಮಯವೆಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಂಚಿ ರ್‍ಯಾಂಬೋ ಜೊತೆ ಪಾಂಡ್ಯ ವಿಂಟೇಜ್ ಬೈಕ್ ರೈಡಿಂಗ್

    ರಾಂಚಿ ರ್‍ಯಾಂಬೋ ಜೊತೆ ಪಾಂಡ್ಯ ವಿಂಟೇಜ್ ಬೈಕ್ ರೈಡಿಂಗ್

    ರಾಂಚಿ: ಟೀಂ ಇಂಡಿಯಾದ (Team India) ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಜೊತೆ ಟೀಂ ಇಂಡಿಯಾದ ಟಿ20 ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಬೈಕ್ (Bike) ರೈಡಿಂಗ್ ಮಾಡುತ್ತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ.

    ಧೋನಿ ತವರು ರಾಂಚಿಯಲ್ಲಿ (Ranchi) ಭಾರತ (India) ಹಾಗೂ ನ್ಯೂಜಿಲೆಂಡ್ (New Zealand) ನಡುವೆ ಮೊದಲ ಟಿ20 (T20I) ಪಂದ್ಯ ನಡೆಯಲಿದೆ. ಹಾಗಾಗಿ ಪಾಂಡ್ಯ ರಾಂಚಿಗೆ ಬಂದಿದ್ದಾರೆ. ಈ ವೇಳೆ ಧೋನಿಯನ್ನು ಭೇಟಿ ಮಾಡಿರುವ ಪಾಂಡ್ಯ ಹಳೆಯ ಬೈಕ್ ಒಂದರಲ್ಲಿ ಕೂತು ಫೋಸ್ ನೀಡಿದ್ದಾರೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪಾಂಡ್ಯ ಶೋಲೆ 2 ಕಮಿಂಗ್ ಸೋನ್ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: Womens IPL: ದಾಖಲೆಯ 4,669 ಕೋಟಿ ರೂ.ಗೆ ಮಹಿಳಾ ಐಪಿಎಲ್‍ನ 5 ತಂಡಗಳು ಹರಾಜು

    ಧೋನಿ ರಾಂಚಿಯಲ್ಲಿರುವ ತಮ್ಮ ನಿವಾಸದಲ್ಲಿ ಹಳೆಯ ಬೈಕ್ ಮತ್ತು ಕಾರ್‌ಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಧೋನಿ ಬೈಕ್ ಪ್ರಿಯರಾಗಿದ್ದು ತಮ್ಮಲ್ಲಿ ಹಲವು ಕಂಪನಿಯ ಪ್ರಸಿದ್ಧ ಬೈಕ್‍ಗಳನ್ನು ಇಟ್ಟುಕೊಂಡಿದ್ದಾರೆ. ಧೋನಿ ಜೊತೆ ಪಾಂಡ್ಯ ಉತ್ತಮ ಬಾಂಧವ್ಯ ಹೊಂದಿದ್ದು, ಧೋನಿ ನಾಯಕರಾಗಿದ್ದಾಗ 2016ರಲ್ಲಿ ಪಾಂಡ್ಯ ಟೀಂ ಇಂಡಿಯಾಗೆ ಎಂಟ್ರಿಕೊಟ್ಟಿದ್ದರು. ಇದನ್ನೂ ಓದಿ: ಪಂತ್ ಆದಷ್ಟು ಬೇಗ ಗುಣಮುಖರಾಗಲಿ – ಮಹಾಕಾಳೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿದ ಸೂರ್ಯ, ಕುಲ್‌ದೀಪ್

    ಭಾರತ ಹಾಗೂ ನ್ಯೂಜಿಲೆಂಡ್‌ ನಡುವಿನ 3 ಪಂದ್ಯಗಳ ಟಿ20 ಸರಣಿಯ ಮೊದಲ ಟಿ20 ಪಂದ್ಯ ಜ.27 ರಂದು ರಾಂಚಿಯಲ್ಲಿ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k