Tag: t20

  • T20ಯಲ್ಲಿ ವಿಶ್ವದಾಖಲೆ ನಿರ್ಮಿಸಿದ ಸೂರ್ಯ

    T20ಯಲ್ಲಿ ವಿಶ್ವದಾಖಲೆ ನಿರ್ಮಿಸಿದ ಸೂರ್ಯ

    ಗುವಾಹಟಿ: ದಕ್ಷಿಣ ಆಫ್ರಿಕಾ (South Africa) ವಿರುದ್ಧ ಸ್ಫೋಟಕ ಅರ್ಧ ಶತಕ ಗಳಿಸಿದ ಟೀಂ ಇಂಡಿಯಾದ (Team India) ಆಟಗಾರ ಸೂರ್ಯಕುಮಾರ್‌ ಯಾದವ್‌ (Suryakumar Yadav) ಅತೀ ಕಡಿಮೆ ಎಸೆತಗಳಲ್ಲಿ ಸಾವಿರ ರನ್‌ಗಳನ್ನು ಪೂರೈಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

    ಇತ್ತೀಚೆಗೆ ಆಸ್ಟ್ರೇಲಿಯಾ (Australia) ವಿರುದ್ಧದ ಟಿ20 ಸರಣಿಯಲ್ಲೂ ಅಬ್ಬರಿಸಿದ ಸೂರ್ಯಕುಮಾರ್‌ ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ 780 ರೇಟಿಂಗ್ಸ್ ಗಳಿಸುವ ಮೂಲಕ 3ನೇ ಸ್ಥಾನಕ್ಕೇರಿದರು. ಇದೀಗ ಕೇವಲ 18 ಎಸೆತಗಳಲ್ಲಿ 50 ರನ್‌ ಸಿಡಿಸುವ ಮೂಲಕ ಅತೀ ಕಡಿಮೆ ಎಸೆತಗಳಲ್ಲಿ 1,000 ರನ್‌ ಪೂರೈಸಿ ದಾಖಲೆ ನಿರ್ಮಿಸಿದ್ದಾರೆ. ಇದನ್ನೂ ಓದಿ: ರ‍್ಯಾಂಕಿಂಗ್‌ನಲ್ಲಿ ಫುಲ್‌ಶೈನ್ – ಪಾಕ್ ನಾಯಕನನ್ನು ಹಿಂದಿಕ್ಕಿದ SKY

    ಎದುರಾಳಿ ಬೌಲರ್‌ಗಳ ಬೆವರಿಳಿಸುತ್ತಿರುವ ಸೂರ್ಯ 573 ಎಸೆತಗಳಲ್ಲೇ 1,000 ರನ್‌ ಪೂರೈಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. 604 ಎಸೆತಗಳಲ್ಲಿ 1,000 ರನ್‌ ಪೂರೈಸಿದ ಗ್ಲೇನ್‌ ಮ್ಯಾಕ್ಸ್‌ವೆಲ್ (Glenn Maxwell) 2ನೇ ಸ್ಥಾನದಲ್ಲಿದ್ದಾರೆ. ಲಿನ್‌ ಮನ್ರೋ 635 ಎಸೆತಗಳಲ್ಲಿ, ಎವಿನ್‌ ಲೆವಿಸ್‌ (Evin Lewis) 640 ಎಸೆತಗಳಲ್ಲಿ ಹಾಗೂ ತಿಸಾರ ಪರೇರಾ 654 ಎಸೆತಗಳಲ್ಲಿ 1,000 ರನ್‌ ಪೂರೈಸಿ ಕ್ರಮವಾಗಿ ಮೂರು, ನಾಲ್ಕು ಹಾಗೂ 5ನೇ ಸ್ಥಾನದಲ್ಲಿದ್ದಾರೆ.

    ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ 2ನೇ ಪಂದ್ಯದಲ್ಲಿ ಸ್ಫೋಟಕ ಇನ್ನಿಂಗ್ಸ್‌ ಆರಂಭಿಸಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 237 ರನ್‌ ಬೃಹತ್‌ ಮೊತ್ತ ಪೇರಿಸಿತು. ಈ ಇನ್ನಿಂಗ್ಸ್‌ನಲ್ಲಿ ಸೂರ್ಯಕುಮಾರ್‌ ಯಾದವ್‌ 22 ಎಸೆತಗಳಲ್ಲಿ 61 ರನ್‌ (5 ಬೌಂಡರಿ, 5 ಸಿಕ್ಸರ್‌) ಚಚ್ಚಿ ಔಟಾದರು.

    ಟಾಪ್-10ನಲ್ಲಿ ಸೂರ್ಯನೊಬ್ಬನೆ:
    ಐಸಿಸಿ (ICC) ಟಿ20 ರ‍್ಯಾಂಕಿಂಗ್ (T20 Ranking) ಪಟ್ಟಿಯ ಟಾಪ್-10ನಲ್ಲಿ ಸೂರ್ಯಕುಮಾರ್ ಯಾದವ್ ಹೊರತುಪಡಿಸಿದ್ರೆ ಟೀಂ ಇಂಡಿಯಾದ (Team India) ಯಾರೊಬ್ಬರೂ ಸ್ಥಾನ ಪಡೆದುಕೊಂಡಿಲ್ಲ. ಆದರೆ 602 ರೇಟಿಂಗ್ಸ್ ಗಳಿಸಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) 14ನೇ ಸ್ಥಾನದಲ್ಲಿದ್ದು, 591 ರೇಟಿಂಗ್ಸ್ ಹೊಂದಿರುವ ವಿರಾಟ್ ಕೊಹ್ಲಿ (Virat Kohli) 15 ರಿಂದ 16ನೇ ಸ್ಥಾನಕ್ಕೆ ಕುಸಿದಿದ್ದಾರೆ. ಕೆಎಲ್ ರಾಹುಲ್ 587 ರೇಟಿಂಗ್ಸ್‌ನೊಂದಿಗೆ 23 ರಿಂದ 18ನೇ ಸ್ಥಾನಕ್ಕೇರಿದ್ದರೆ, 569 ರೇಟಿಂಗ್ಸ್ ಹೊಂದಿರುವ ಇಶಾನ್ ಕಿಶನ್ 22 ರಿಂದ 23ನೇ ಸ್ಥಾನಕ್ಕೆ ಕುಸಿದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭಾರತ-ದಕ್ಷಿಣ ಆಫ್ರಿಕಾ 2ನೇ ಪಂದ್ಯಕ್ಕೆ ಮಳೆ ಅಡ್ಡಿ?

    ಭಾರತ-ದಕ್ಷಿಣ ಆಫ್ರಿಕಾ 2ನೇ ಪಂದ್ಯಕ್ಕೆ ಮಳೆ ಅಡ್ಡಿ?

    ಮುಂಬೈ: ಭಾರತ ಹಾಗೂ ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಟಿ20 (T20) ಸರಣಿಯ 2ನೇ ಪಂದ್ಯಕ್ಕೆ ಇತ್ತಂಡಗಳು ಸಜ್ಜಾಗಿವೆ. ಈ ನಡುವೆಯೇ ಹವಾಮಾನ ಇಲಾಖೆ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.

    ಪಂದ್ಯದ ವೇಳೆ ಗುವಾಹಟಿಯಲ್ಲಿ 28 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶವಿರಲಿದೆ. ಆದರೆ ಶೇ.99 ರಷ್ಟು ಮೋಡ ಕವಿಯುವ ಸಾಧ್ಯತೆಯಿದ್ದು, ಸಣ್ಣ ಪ್ರಮಾಣದ ಮಳೆಯಾಗುವ (Rain) ಆತಂಕವೂ ಇದೆ. ಶೇ.6ರಷ್ಟು ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದನ್ನೂ ಓದಿ: T20 ಕ್ರಿಕೆಟ್‍ನಲ್ಲಿ ಸೂರ್ಯನದ್ದೇ ಪವರ್ – ಧೋನಿ, ಕೊಹ್ಲಿ ಸಾಲಿನಲ್ಲಿ ಮಿಂಚಲು ರೆಡಿ

    ಈ ಬಗ್ಗೆ ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ಪ್ರತಿಕ್ರಿಯಿಸಿದ್ದು, ಹವಾಮಾನ ವೈಪರಿತ್ಯ ಎದುರಿಸಲು ತಮ್ಮ ತಂಡ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಭರವಸೆ ನೀಡಿದೆ.

    ಗುವಾಹಟಿಯ ಡಾ. ಭೂಪೆನ್ ಹಜಾರಿಕಾ ಸ್ಟೇಡಿಯಂನಲ್ಲಿ 2ನೇ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಅಮೋಘ ಗೆಲುವು ಸಾಧಿಸಿದ್ದು, ಸರಣಿಯಲ್ಲಿ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇದೀಗ 2ನೇ ಪಂದ್ಯವನ್ನೂ ಗೆದ್ದು ಅಂತಿಮ ಪಂದ್ಯಕ್ಕೂ ಮುನ್ನವೇ ಸರಣಿ ಕೈವಶ ಮಾಡಿಕೊಳ್ಳುವ ಉತ್ಸಾಹದಲ್ಲಿದೆ. ಇದನ್ನೂ ಓದಿ: ಟೀಂ ಇಂಡಿಯಾದಿಂದ ಬುಮ್ರಾ ಔಟ್ ಸಿರಾಜ್ ಇನ್

    ತಿರುವನಂತಪುರಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಟೀಂ ಇಂಡಿಯಾ ಬೌಲಿಂಗ್‌ನಲ್ಲಿ ಅಬ್ಬರಿಸಿತ್ತು. ಟೀಂ ಇಂಡಿಯಾ ವೇಗಿಗಳಾದ ದೀಪಕ್ ಚಹಾರ್ ಹಾಗೂ ಅರ್ಷ್‌ದೀಪ್‌ ಸಿಂಗ್ ತಮ್ಮ ಮಾರಕ ಬೌಲಿಂಗ್ ದಾಳಿಯಿಂದ ಮೊದಲ ಮೂರು ಓವರ್‌ಗಳಲ್ಲೇ 5 ವಿಕೆಟ್‌ಗಳನ್ನ ಉರುಳಿಸಿದರು. ಬ್ಯಾಟಿಂಗ್ ಕ್ರೀಸ್‌ನಲ್ಲಿ ಅಬ್ಬರಿಸಿದ ಉಪನಾಯಕ ಕೆ.ಎಲ್‌ರಾಹುಲ್‌ (KL Rahul) ಹಾಗೂ ಸೂರ್ಯಕುಮಾರ್‌ ಯಾದವ್‌ (Suryakumar Yadav) ಭರ್ಜರಿ ಅರ್ಧ ಶತಕಗಳ ಆಟವಾಡಿದರು. ಇದರಿಂದಾಗಿ ಟೀಂ ಇಂಡಿಯಾ 8 ವಿಕೆಟ್‌ಗಳ ಸುಲಭ ಜಯ ಸಾಧಿಸಿತು.

    ಇದೀಗ 2ನೇ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದ್ದು, ಹರಿಣಗಳ ಪಡೆ ಈ ಕದನಕ್ಕೆ ಟೀಂ ಇಂಡಿಯಾ ಯಾವ ರಣತಂತ್ರದೊಂದಿಗೆ ಆಗಮಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಟೀಂ ಇಂಡಿಯಾದಿಂದ ಬುಮ್ರಾ ಔಟ್ ಸಿರಾಜ್ ಇನ್

    ಟೀಂ ಇಂಡಿಯಾದಿಂದ ಬುಮ್ರಾ ಔಟ್ ಸಿರಾಜ್ ಇನ್

    ಮುಂಬೈ: ಟೀಂ ಇಂಡಿಯಾದ (Team India) ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah)  ಗಾಯಾಳುವಾಗಿ ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಟಿ20 (T20) ಪಂದ್ಯದಿಂದ ಹೊರಗುಳಿಯುತ್ತಿದ್ದಂತೆ ಅವರ ಸ್ಥಾನಕ್ಕೆ ಮೊಹಮ್ಮದ್ ಸಿರಾಜ್‍ರನ್ನು (Mohammed Siraj) ಆಯ್ಕೆ ಮಾಡಲಾಗಿದೆ.

    ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಿಂದ ಬುಮ್ರಾ ಹೊರಗುಳಿದಿದ್ದರು. ಆ ಬಳಿಕ ಗಾಯಳುವಾಗಿರುವ ಕಾರಣ ಮುಂದಿನ 2 ಟಿ20 ಪಂದ್ಯ ಮತ್ತು ಟಿ20 ವಿಶ್ವಕಪ್‍ನಿಂದ ಬುಮ್ರಾ ಹೊರನಡೆದಿದ್ದಾರೆ. ಆಫ್ರಿಕಾ ಸರಣಿಗೆ ಮಾತ್ರ ಬುಮ್ರಾ ಬದಲು ಸಿರಾಜ್‍ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇದನ್ನೂ ಓದಿ: T20 ಕ್ರಿಕೆಟ್‍ನಲ್ಲಿ ಸೂರ್ಯನದ್ದೇ ಪವರ್ – ಧೋನಿ, ಕೊಹ್ಲಿ ಸಾಲಿನಲ್ಲಿ ಮಿಂಚಲು ರೆಡಿ

    ಟಿ20 ವಿಶ್ವಕಪ್‍ನಿಂದ (T20 World Cup)  ಬುಮ್ರಾ ಹೊರಗುಳಿದ ಬಳಿಕ ಅವರ ಬದಲಿ ಆಟಗಾರನ ನೇಮಕವನ್ನು ಬಿಸಿಸಿಐ (BCCI) ಇನ್ನೂ ಮಾಡಿಲ್ಲ. ಇದೀಗ ಮೊಹಮ್ಮದ್ ಶಮಿ, ದೀಪಕ್ ಚಹರ್ ಮತ್ತು ಮೊಹಮ್ಮದ್ ಸಿರಾಜ್ ನಡುವೆ ಪೈಪೋಟಿ ಇದೆ. ಈಗಾಗಲೇ ಶಮಿ ಮತ್ತು ಚಹರ್ ಟಿ20 ವಿಶ್ವಕಪ್ ತಂಡದಲ್ಲಿ ಮೀಸಲು ಆಟಗಾರರಾಗಿ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್‍ನಿಂದ ಬುಮ್ರಾ ಔಟ್‌

    ಬುಮ್ರಾ ಬೆನ್ನು ನೋವಿನಿಂದ ಬಳಲುತ್ತಿದ್ದು, ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಬಿಸಿಸಿಐ ವೈದ್ಯರ ತಂಡ ಬುಮ್ರಾ ವೈದ್ಯಕೀಯ ತಪಾಸಣೆ ಮಾಡಿದ್ದಾರೆ. ಬುಮ್ರಾ ಕೆಲ ದಿನಗಳ ಕಾಲ ವೈದ್ಯರ ನಿಗಾದಲ್ಲಿ ಇರಲಿದ್ದಾರೆ. 6 ತಿಂಗಳ ಕಾಲ ಬುಮ್ರಾ ವಿಶ್ರಾಂತಿ ಪಡೆಯಬೇಕಾದ ಅನಿವಾರ್ಯತೆ ಇದೆ. ಈಗಾಗಲೇ ಟಿ20 ತಂಡದಿಂದ ರವೀಂದ್ರ ಜಡೇಜಾ ಹೊರಗುಳಿದಿದ್ದು, ಇದೀಗ ಬುಮ್ರಾ ಕೂಡ ತಂಡದಿಂದ ದೊರವಾಗಿರುವುದು ತಂಡಕ್ಕೆ ಹೊಡೆತ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • T20 ಕ್ರಿಕೆಟ್‍ನಲ್ಲಿ ಸೂರ್ಯನದ್ದೇ ಪವರ್ – ಧೋನಿ, ಕೊಹ್ಲಿ ಸಾಲಿನಲ್ಲಿ ಮಿಂಚಲು ರೆಡಿ

    T20 ಕ್ರಿಕೆಟ್‍ನಲ್ಲಿ ಸೂರ್ಯನದ್ದೇ ಪವರ್ – ಧೋನಿ, ಕೊಹ್ಲಿ ಸಾಲಿನಲ್ಲಿ ಮಿಂಚಲು ರೆಡಿ

    ಮುಂಬೈ: ಟೀಂ ಇಂಡಿಯಾದ (Team India) ಪವರ್‌ಫುಲ್ ಹಿಟ್ಟರ್ ಸೂರ್ಯ ಕುಮಾರ್ ಯಾದವ್ (Suryakumar Yadav) ಟಿ20 (T20) ಕ್ರಿಕೆಟ್‍ನಲ್ಲಿ ಅಬ್ಬರದಾಟ ಮುಂದುವರಿಸಿ  ದಾಖಲೆಯೊಂದನ್ನು ಬರೆದಿದ್ದು, ನೂತನ ಮೈಲಿಗಲ್ಲಿನತ್ತ ಕಣ್ಣಿಟ್ಟಿದ್ದಾರೆ.

    ಸೂರ್ಯ ಕುಮಾರ್ ಯಾದವ್ ಕ್ಯಾಲೆಂಡರ್‌ ವರ್ಷವೊಂದರಲ್ಲಿ ಟಿ20 ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಟೀಂ ಇಂಡಿಯಾದ ಅಟಗಾರನಾಗಿ ದಾಖಲೆ ಬರೆದಿದ್ದಾರೆ. 2022ರಲ್ಲಿ ಒಟ್ಟು 21 ಟಿ20 ಪಂದ್ಯದಿಂದ ಸೂರ್ಯಕುಮಾರ್ ಯಾದವ್ 40.66ರ ಸರಾಸರಿಯಲ್ಲಿ ಈಗಾಗಲೇ 732 ರನ್ ಬಾರಿಸಿದ್ದಾರೆ. ಇದರಲ್ಲಿ 1 ಶತಕ, 5 ಅರ್ಧಶತಕ ಕೂಡ ಕೂಡಿದೆ. ಈ ಹಿಂದೆ 2018ರಲ್ಲಿ ಶಿಖರ್ ಧವನ್ ಕ್ಯಾಲೆಂಡರ್ ವರ್ಷದಲ್ಲಿ 689 ರನ್ ಸಿಡಿಸಿ ದಾಖಲೆ ಬರೆದಿದ್ದರು. ಇದೀಗ ದಾಖಲೆಯನ್ನು ಸೂರ್ಯಕುಮಾರ್ ಯಾದವ್ ಪುಡಿಗಟ್ಟಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್‍ನಿಂದ ಬುಮ್ರಾ ಔಟ್‌

    ಇದರೊಂದಿಗೆ ಸೂರ್ಯಕುಮಾರ್ ಯಾದವ್ ಇನ್ನೂ 24 ರನ್ ಬಾರಿಸಿದರೆ ಟಿ20 ಕ್ರಿಕೆಟ್‍ನಲ್ಲಿ ಸಾವಿರಕ್ಕೂ ಹೆಚ್ಚು ರನ್ ಬಾರಿಸಿದ ಭಾರತದ 9ನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗುವ ಅವಕಾಶವಿದೆ. ಈಗಾಗಲೇ ಸಾವಿರಕ್ಕೂ ಅಧಿಕ ರನ್ ಬಾರಿಸಿದ ಅಟಗಾರರ ಪಟ್ಟಿಯಲ್ಲಿ ಧೋನಿ (MS Dhoni), ಕೊಹ್ಲಿ (Virat Kohli), ರೋಹಿತ್ ಶರ್ಮಾ (Rohit Sharma) ಇದ್ದು ಅವರೊಂದಿಗೆ ಸೂರ್ಯಕುಮಾರ್ ಕಾಣಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಇದನ್ನೂ ಓದಿ: T20ಯಲ್ಲಿ 11 ದೇಶಗಳ ವಿರುದ್ಧ ಅರ್ಧಶತಕದಾಟ – ವಿಶೇಷ ದಾಖಲೆ ಬರೆದ ಕನ್ನಡಿಗ

    ಈಗಾಗಲೇ ಟಿ20 ಕ್ರಿಕೆಟ್‍ನಲ್ಲಿ ರನ್ ಮಳೆ ಸುರಿಸುತ್ತಿರುವ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್ ಐಸಿಸಿ (ICC) ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ 2 ನೇ ಸ್ಥಾನದಲ್ಲಿದ್ದಾರೆ. ನಂಬರ್‌ 1 ಆಗಲೂ ಇನ್ನೊಂದು ಮೆಟ್ಟಿಲು ಬಾಕಿ ಇದೆ.

    Live Tv
    [brid partner=56869869 player=32851 video=960834 autoplay=true]

  • ಟಿ20 ವಿಶ್ವಕಪ್‍ನಿಂದ ಬುಮ್ರಾ ಔಟ್‌

    ಟಿ20 ವಿಶ್ವಕಪ್‍ನಿಂದ ಬುಮ್ರಾ ಔಟ್‌

    ಮುಂಬೈ: ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾದ ಬೌಲರ್ ಜಸ್ಪ್ರೀತ್‌ ಬುಮ್ರಾ (Jasprit Bumrah) ಅವರು ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್‍ನಿಂದ (World Cup) ಹೊರಬಿದ್ದಿದ್ದಾರೆ.

    ಟಿ20 ವಿಶ್ವಕಪ್‌ ಪ್ರಾರಂಭಕ್ಕೂ ಮುನ್ನವೇ ಟೀಂ ಇಂಡಿಯಾಕ್ಕೆ (India) ಭಾರೀ ಆಘಾತವಾಗಿದೆ. ಈ ಬಗ್ಗೆ ಬಿಸಿಸಿಐ ಟ್ವೀಟ್ ಮಾಡಿದ್ದು, ಟೀಂ ಇಂಡಿಯಾದ ಬಲಗೈ ವೇಗದ ಬೌಲರ್ ಬುಮ್ರಾ ಬೆನ್ನುಮೂಳೆಯ ಮುರಿತದಿಂದಾಗಿ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಅವರ ಗಾಯದ ಸಮಸ್ಯೆ ಗಂಭೀರವಾಗಿದ್ದು, ಕನಿಷ್ಠ ಆರು ತಿಂಗಳುಗಳ ವಿಶ್ರಾಂತಿ ಬೇಕಾಗಿದೆ ಎಂದು ತಿಳಿಸಿದೆ.

    ಇತ್ತೀಚೆಗಷ್ಟೇ ಗಾಯದಿಂದ ಚೇತರಿಕೆ ಕಂಡು ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಮೂಲಕ ಕಂಬ್ಯಾಕ್‌ ಮಾಡಿದ್ದರು. ಆ ಬಳಿಕ ಇದೀಗ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೂ ಅಲಭ್ಯರಾಗಲಿದ್ದಾರೆ. ಇದನ್ನೂ ಓದಿ: T20ಯಲ್ಲಿ 11 ದೇಶಗಳ ವಿರುದ್ಧ ಅರ್ಧಶತಕದಾಟ – ವಿಶೇಷ ದಾಖಲೆ ಬರೆದ ಕನ್ನಡಿಗ

    ಇತ್ತೀಚೆಗಷ್ಟೇ ಗಾಯದ ಸಮಸ್ಯೆಯಿಂದಾಗಿ ಆಲ್‍ರೌಂಡರ್ ರವೀಂದ್ರ ಜಡೇಜಾ ಟಿ20 ಪಂದ್ಯದಿಂದ ಹಿಂದೆ ಸರಿದಿದ್ದರು. ಇದೀಗ ಬುಮ್ರಾ ಹೊರಗುಳಿದಿರುವುದರಿಂದ ಅವರ ಸ್ಥಾನಕ್ಕೆ ಯಾರು ಆಯ್ಕೆ ಆಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಆಫ್ರಿಕಾಗೆ ಆಘಾತ ನೀಡಿದ ಅರ್ಶ್‌ದೀಪ್, ಚಹಾರ್, ಶೈನ್‌ ಆದ ಸೂರ್ಯ, ರಾಹುಲ್- ಭಾರತಕ್ಕೆ 8 ವಿಕೆಟ್‌ಗಳ ಜಯ

    Live Tv
    [brid partner=56869869 player=32851 video=960834 autoplay=true]

  • T20ಯಲ್ಲಿ 11 ದೇಶಗಳ ವಿರುದ್ಧ ಅರ್ಧಶತಕದಾಟ – ವಿಶೇಷ ದಾಖಲೆ ಬರೆದ ಕನ್ನಡಿಗ

    T20ಯಲ್ಲಿ 11 ದೇಶಗಳ ವಿರುದ್ಧ ಅರ್ಧಶತಕದಾಟ – ವಿಶೇಷ ದಾಖಲೆ ಬರೆದ ಕನ್ನಡಿಗ

    ಮುಂಬೈ: ಟೀಂ ಇಂಡಿಯಾದ (Team India) ಆರಂಭಿಕ ಅಟಗಾರ ಕನ್ನಡಿಗ ಕೆ.ಎಲ್ ರಾಹುಲ್ (K.L Rahul)  ನಿನ್ನೆ ನಡೆದ ಆಫ್ರಿಕಾ (South Africa) ವಿರುದ್ಧದ ಮೊದಲ ಟಿ20 (T20) ಪಂದ್ಯದಲ್ಲಿ ಅರ್ಧಶತಕ (Fifty)  ಸಿಡಿಸಿ ನೂತನ ದಾಖಲೆ ಬರೆದಿದ್ದಾರೆ.

    ತಿರುವನಂತಪುರಂನಲ್ಲಿ ನಡೆದ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಫ್ರಿಕಾ ನೀಡಿದ ಸಣ್ಣಮೊತ್ತವನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಕೆ.ಎಲ್ ರಾಹುಲ್ ಅಜೇಯ ಅರ್ಧಶತಕ 51 ರನ್ (56 ಎಸೆತ, 2 ಬೌಂಡರಿ, 4 ಸಿಕ್ಸ್) ಸಿಡಿಸಿ ತಂಡದ ಜಯಕ್ಕೆ ನೆರವಾದರು. ಈ ಅರ್ಧಶತಕದೊಂದಿಗೆ ರಾಹುಲ್ ಟಿ20 ಕ್ರಿಕೆಟ್‍ನಲ್ಲಿ ನೂತನ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ಆಫ್ರಿಕಾಗೆ ಆಘಾತ ನೀಡಿದ ಅರ್ಶ್‌ದೀಪ್, ಚಹಾರ್, ಶೈನ್‌ ಆದ ಸೂರ್ಯ, ರಾಹುಲ್- ಭಾರತಕ್ಕೆ 8 ವಿಕೆಟ್‌ಗಳ ಜಯ

    ಟಿ20 ಕ್ರಿಕೆಟ್‍ನಲ್ಲಿ 11 ದೇಶಗಳ ವಿರುದ್ಧ ಅರ್ಧಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆಯನ್ನು ರಾಹುಲ್ ಬರೆದರು. ಆಸ್ಟ್ರೇಲಿಯಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಇಂಗ್ಲೆಂಡ್, ಅಫ್ಘಾನಿಸ್ತಾನ, ಬಾಂಗ್ಲದೇಶ, ಐರ್ಲೆಂಡ್, ದಕ್ಷಿಣ ಆಫ್ರಿಕಾ, ನಮೀಬಿಯಾ, ಸ್ಕಾಟ್‍ಲೆಂಡ್ ವಿರುದ್ಧ ರಾಹುಲ್ ಟಿ20 ಕ್ರಿಕೆಟ್‍ನಲ್ಲಿ ಅರ್ಧಶತಕ ಚಚ್ಚಿದ್ದಾರೆ. ಇದನ್ನೂ ಓದಿ: ತನ್ನದೇ ದೇಶದ ಧ್ವಜವನ್ನು ಕಾಲಿನಿಂದ ಎತ್ತಿದ ಪಾಕ್ ಕ್ರಿಕೆಟಿಗ – ಅಭಿಮಾನಿಗಳಿಂದಲೂ ಆಕ್ರೋಶ

    ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 8 ವಿಕೆಟ್‍ಗಳ ನಷ್ಟಕ್ಕೆ 108 ಅಲ್ಪಮೊತ್ತ ಗಳಿಸಿತು. ಈ ಗುರಿ ಬೆನ್ನತ್ತಿದ ಟೀಂ ಇಂಡಿಯಾ 16.4 ಓವರ್‌ಗಳಲ್ಲಿ 8 ವಿಕೆಟ್‍ಗಳ ನಷ್ಟಕ್ಕೆ 110 ರನ್ ಸಿಡಿಸುವ ಮೂಲಕ ಗೆದ್ದು ಬೀಗಿತು. ಬೌಲಿಂಗ್‌ನಲ್ಲಿ ಅಶ್‌ದೀಪ್‌ ಸಿಂಗ್‌ ಮತ್ತು ಚಹರ್‌ ಮಿಂಚಿದರೆ, ಬ್ಯಾಟಿಂಗ್‌ನಲ್ಲಿ ಕೆ.ಎಲ್‌ ರಾಹುಲ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಅಬ್ಬರಿಸಿದರು. ಪರಿಣಾಮ 3 ಟಿ20 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದುಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ತನ್ನದೇ ದೇಶದ ಧ್ವಜವನ್ನು ಕಾಲಿನಿಂದ ಎತ್ತಿದ ಪಾಕ್ ಕ್ರಿಕೆಟಿಗ – ಅಭಿಮಾನಿಗಳಿಂದಲೂ ಆಕ್ರೋಶ

    ತನ್ನದೇ ದೇಶದ ಧ್ವಜವನ್ನು ಕಾಲಿನಿಂದ ಎತ್ತಿದ ಪಾಕ್ ಕ್ರಿಕೆಟಿಗ – ಅಭಿಮಾನಿಗಳಿಂದಲೂ ಆಕ್ರೋಶ

    ಇಸ್ಲಾಮಾಬಾದ್: ತಮ್ಮ ಆಕರ್ಷಕ ಬ್ಯಾಟಿಂಗ್‌ನಿಂದ ಪಾಕಿಸ್ತಾನದಲ್ಲಿ (Pakistan) ಅಪಾರ ಅಭಿಮಾನಿಗಳ ಮನಗೆದ್ದಿದ್ದ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಮೊಹಮದ್ ರಿಜ್ವಾನ್ (Mohammad Rizwan) ಇದೀಗ ಭಾರೀ ಟೀಕೆಗಳಿಗೆ ಗುರಿಯಾಗಿದ್ದಾರೆ.

    ಮೊಹಮದ್ ರಿಜ್ವಾನ್ ತನ್ನದೇ ದೇಶದ ಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಪಂದ್ಯ ಮುಗಿದ ಬಳಿಕ ಪಾಕಿಸ್ತಾನದ ಅಭಿಮಾನಿಗಳಿಗೆ ರಿಜ್ವಾನ್ ಹಸ್ತಾಕ್ಷರ ನೀಡುತ್ತಿದ್ದರು. ಈ ವೇಳೆ ನೆಲಕ್ಕೆ ಬಿದ್ದ ಪಾಕಿಸ್ತಾನದ ಧ್ವಜವನ್ನು (Pakistan Flag) ಕಾಲಿನಿಂದ ಎತ್ತಿದ್ದಾರೆ. ಇದನ್ನೂ ಓದಿ: ಆಫ್ರಿಕಾಗೆ ಆಘಾತ ನೀಡಿದ ಅರ್ಶ್‌ದೀಪ್, ಚಹಾರ್, ಶೈನ್‌ ಆದ ಸೂರ್ಯ, ರಾಹುಲ್- ಭಾರತಕ್ಕೆ 8 ವಿಕೆಟ್‌ಗಳ ಜಯ

    ಈ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರಿಜ್ವಾನ್ ಅವರ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ರಿಜ್ವಾನ್ ಅವರ ವರ್ತನೆಗೆ ಪಾಕಿಸ್ತಾನದ ಜನ ಸೋಶಿಯಲ್ ಮೀಡಿಯಾ (Social Media)ದಲ್ಲಿ ಕಿಡಿಕಾರಿದ್ದು, ದೇಶದ ಧ್ವಜಕ್ಕೆ ಮರ್ಯಾದೆ ಕೊಡಿ. ಇಂಥ ಅಹಂಕಾರದ ವರ್ತನೆಯನ್ನು ಬಿಡಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್ ಟೆಸ್ಟ್ ಸರಣಿ ನಮ್ಮಲ್ಲಿ ಆಡಿಸಿ ಎಂದ ಇಂಗ್ಲೆಂಡ್ – ಅವಶ್ಯಕತೆ ಇಲ್ಲ ಎಂದ BCCI

    ಇತ್ತೀಚೆಗೆ ಏಷ್ಯಾಕಪ್ (AisaCup) ಟೂರ್ನಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಆಡಿದ್ದ ರಿಜ್ವಾನ್ ಟೀಂ ಇಂಡಿಯಾ ವಿರುದ್ಧ ನಡೆದಿದ್ದ 2ನೇ ಪಂದ್ಯದಲ್ಲಿ ಅರ್ಧ ಶತಕ ಗಳಿಸುವ ಮೂಲಕ ತಮ್ಮ ಪಾಕಿಸ್ತಾನ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಅಲ್ಲದೇ ಇಂದು ನಡೆದ ಇಂಗ್ಲೆಂಡ್ ವಿರುದ್ಧದ ಟಿ20 (T20) ಪಂದ್ಯದಲ್ಲೂ 46 ಎಸೆತಗಳಲ್ಲಿ 63 ರನ್ (3 ಸಿಕ್ಸರ್, 2 ಬೌಂಡರಿ) ಸಿಡಿಸಿದ್ದಾರೆ. ಇದೀಗ ತನ್ನದೇ ದೇಶದ ಧ್ವಜವನ್ನು ಕಾಲಿನಲ್ಲಿ ಎತ್ತುವ ಮೂಲಕ ಅಪಮಾನ ಮಾಡಿದ್ದು, ಟೀಕೆಗಳಿಗೆ ಗುರಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆಫ್ರಿಕಾಗೆ ಆಘಾತ ನೀಡಿದ ಅರ್ಶ್‌ದೀಪ್, ಚಹಾರ್, ಶೈನ್‌ ಆದ ಸೂರ್ಯ, ರಾಹುಲ್- ಭಾರತಕ್ಕೆ 8 ವಿಕೆಟ್‌ಗಳ ಜಯ

    ಆಫ್ರಿಕಾಗೆ ಆಘಾತ ನೀಡಿದ ಅರ್ಶ್‌ದೀಪ್, ಚಹಾರ್, ಶೈನ್‌ ಆದ ಸೂರ್ಯ, ರಾಹುಲ್- ಭಾರತಕ್ಕೆ 8 ವಿಕೆಟ್‌ಗಳ ಜಯ

    ತಿರುವನಂತಪುರಂ: ಅರ್ಶ್‌ದೀಪ್‌ ಸಿಂಗ್‌ (Arshdeep Singh), ದೀಪಕ್‌ ಚಹಾರ್‌ (Deepak Chahar) ಮಾರಕ ಬೌಲಿಂಗ್‌ ದಾಳಿ ಹಾಗೂ ಸೂರ್ಯಕುಮಾರ್‌ ಯಾದವ್‌ (Suryakumar Yadav), ಕೆ.ಎಲ್‌.ರಾಹುಲ್‌ (KL Rahul) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲೇ  ಭಾರತ ಭರ್ಜರಿ ಜಯ ಸಾಧಿಸಿದೆ.

    ತಿರುವನಂತಪುರಂನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ (Team India) ಬೌಲಿಂಗ್ ಪಡೆ ಅಮೋಘ ಪ್ರದರ್ಶನ ನೀಡುವ ಮೂಲಕ ಹರಿಣ ಪಡೆ ಆಘಾತ ಅನುಭವಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 108 ಅಲ್ಪಮೊತ್ತದ ರನ್‌ಗಳಿಸಿತು. ಈ ಗುರಿ ಬೆನ್ನತ್ತಿದ ಟೀಂ ಇಂಡಿಯಾ 16.4 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 110 ರನ್‌ ಸಿಡಿಸುವ ಮೂಲಕ ಗೆದ್ದು ಬೀಗಿತು.

    ನಿಧಾನಗತಿಯಲ್ಲೇ ಬ್ಯಾಟಿಂಗ್‌ ಆರಂಭಿಸಿದ ಟೀಂ ಇಂಡಿಯಾಕ್ಕೂ ಆರಂಭದಲ್ಲಿ ಆಘಾತ ಎದುರಾಗಿತ್ತು. ಪವರ್‌ಪ್ಲೇ ಮುಗಿಯುವಷ್ಟರಲ್ಲೇ ಪ್ರಮುಖ ಬ್ಯಾಟರ್‌ಗಳನ್ನು ಟೀಂ ಇಂಡಿಯಾ ಕಳೆದುಕೊಂಡಿತ್ತು. ಆಸ್ಟ್ರೇಲಿಯಾ ವಿರುದ್ಧ ಸ್ಫೋಟಕ ಬ್ಯಾಟಿಂಗ್‌ ನಡೆಸಿದ್ದ ನಾಯಕ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಔಟಾದರು. 2 ಎಸೆತ ಎದುರಿಸಿದ ರೋಹಿತ್‌ ಶರ್ಮಾ (Rohit Sharma) ಡಕೌಟ್‌ ಆದರೆ 9 ಎಸೆತ ಎದುರಿಸಿದ ರನ್‌ ಮಿಷಿನ್‌ ಕೊಹ್ಲಿ 3 ರನ್‌ಗಳಿಗೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿದರು.

    ಈ ನಡುವೆ ಮೂರನೇ ಕ್ರಮಾಂಕದಲ್ಲಿ ಬಂದ ಸೂರ್ಯಕುಮಾರ್‌ ಯಾದವ್‌ (Suryakumar Yadav) ಹಾಗೂ ಮತ್ತೊಬ್ಬ ಆರಂಭಿಕ ಕೆಎಲ್‌ ರಾಹುಲ್‌ (KL Rahul) ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಭರ್ಜರಿ ಸಿಕ್ಸ್‌ ಫೋರ್‌ಗಳ ಮೂಲಕ ರನ್‌ ಪೇರಿಸುತ್ತಾ ಟೀಂ ಇಂಡಿಯಾವನ್ನು ಗೆಲುವಿನ ಹಾದಿಗೆ ಕೊಂಡೊಯ್ದರು.

    ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಸೂರ್ಯಕುಮಾರ್‌ ಯಾದವ್‌ 33 ಎಸೆತಗಳಲ್ಲಿ 3 ಸಿಕ್ಸರ್‌, 5 ಬೌಂಡರಿಗಳ ಮೂಲಕ ಸ್ಫೋಟಕ 50 ರನ್‌ ಸಿಡಿಸಿ ಮಿಂಚಿದರೆ, ಉಪನಾಯಕ ಜವಾಬ್ದಾರಿಯುತ ಆಟವಾಡಿದ ಕೆಎಲ್‌ ರಾಹುಲ್‌ ಸಹ 56 ಎಸೆತಗಳಲ್ಲಿ 51 ರನ್‌ (4 ಸಿಕ್ಸರ್‌, 2 ಬೌಂಡರಿ) ಸಿಡಿಸುವ ಮೂಲಕ ಮಿಂಚಿದರು.

    ಹರ್ಷ ತಂದ ಅರ್ಶ್‌ದೀಪ್:
    ಏಷ್ಯಾಕಪ್‌ನ ಇಂಡೋ ಪಾಕ್‌ ಕದನದಲ್ಲಿ ಭಾರೀ ಟೀಕೆಗೆ ಗುರಿಯಾಗಿದ್ದ ಅರ್ಶ್‌ದೀಪ್ ಸಿಂಗ್‌ ದಕ್ಷಿಣ ಆಫ್ರಿಕಾದ ವಿರುದ್ಧದ ಮೊದಲ ಪಂದ್ಯದಲ್ಲೇ 3 ವಿಕೆಟ್‌ಗಳನ್ನು ಕಬಳಿಸಿ ಗಮನ ಸೆಳೆದರು. ಇನ್ನುಳಿದಂತೆ 4 ಓವರ್‌ಗಳಲ್ಲಿ 24 ರನ್‌ ನೀಡಿದ ದೀಪಕ್‌ ಚಹಾರ್‌ 2 ವಿಕೆಟ್‌, ಹರ್ಷಕ್‌ ಪಟೇಲ್‌ 2 ವಿಕೆಟ್‌ ಹಾಗೂ ಅಕ್ಷರ್‌ ಪಟೇಲ್‌ 1 ವಿಕೆಟ್‌ ಪಡೆದು ಟೀಂ ಇಂಡಿಯಾ ಗೆಲುವಿಗೆ ಕಾರಣರಾದರು.

    ದಕ್ಷಿಣ ಆಫ್ರಿಕಾಗೆ ಆರಂಭಿಕ ಆಘಾತ:
    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ ತಂಡ ಮೊದಲ 2.3 ಓವರ್‌ಗಳಲ್ಲಿಯೇ ಅರ್ಧದಷ್ಟು ಆಟಗಾರರನ್ನು ಕಳೆದುಕೊಳ್ಳುವ ಮೂಲಕ ದೊಡ್ಡ ಆಘಾತಕ್ಕೆ ಒಳಗಾಯಿತು. ಟೀಂ ಇಂಡಿಯಾ ಬೌಲರ್‌ಗಳಾದ ಅರ್ಶ್‌ದೀಪ್ ಸಿಂಗ್‌ ಹಾಗೂ ದೀಪಕ್ ಚಾಹರ್ ಆರಂಭದಲ್ಲಿಯೇ ಪ್ರಮುಖ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಅಟ್ಟುವಲ್ಲಿ ಯಶಸ್ವಿಯಾದರು. ಇದರಲ್ಲಿ ಎರಡು ವಿಕೆಟ್‌ಗಳನ್ನು ದೀಪಕ್ ಚಾಹರ್ ಪಡೆದುಕೊಂಡಿದ್ದರೆ ಮೂರು ವಿಕೆಟ್‌ಗಳು ಅರ್ಶ್‌ದೀಪ್ ಸಿಂಗ್ ಪಾಲಾದವು.

    ಕಳೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ಅರ್ಶ್‌ದೀಪ್ ಸಿಂಗ್ ಈ ಪಂದ್ಯದಲ್ಲಿ ತಂಡಕ್ಕೆ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ತಮ್ಮ ಮೊದಲ ಓವರ್‌ನಲ್ಲಿಯೇ ಅತ್ಯಂತ ಅಪಾಯಕಾರಿಯಾಗಿ ಕಾಣಿಸಿದ ಅರ್ಶ್‌ದೀಪ್ ಸಿಂಗ್ ವಿಕೆಟ್‌ಗಳ ಮೇಲೆ ವಿಕೆಟ್ ಪಡೆದುಕೊಂಡರು. ಈ ಒಂದು ಓವರ್‌ನಲ್ಲಿಯೇ ಅರ್ಶ್‌ದೀಪ್ ಸಿಂಗ್ ಮೂರು ವಿಕೆಟ್ ಪಡೆದು ಗಮನ ಸೆಳೆದರು.

    ಮೊದಲಿಗೆ 1 ರನ್‌ಗಳಿಸಿದ್ದ ಕ್ವಿಂಟನ್ ಡಿಕಾಕ್ (Quinton de Kock) ಅವರನ್ನು ಬೌಲ್ಡ್ ಮಾಡಿದ ಅರ್ಷ್‌ದೀಪ್‌ ಸಿಂಗ್ ನಂತರ ರಿಲೀ ರೊಸ್ಸೋ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ತಮ್ಮ ಮುಂದಿನ ಎಸೆತದಲ್ಲಿಯೇ ಡೇವಿಡ್ ಮಿಲ್ಲರ್‌ ಅನ್ನು ಡಕೌಟ್‌ ಮಾಡಿ ಪೆವಿಲಿಯನ್‌ಗೆ ದಾರಿ ತೋರಿಸಿದರು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಆಘಾತ ನೀಡಿದರು.

    ಆರಂಭಿಕ ಆಘಾತ ಅನುಭವಿಸಿ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗಬೇಕಿದ್ದ ದಕ್ಷಿಣ ಆಫ್ರಿಕಾ ಪರವಾಗಿ ಮಾರ್ಕ್ರಮ್, ಪಾರ್ನೆಲ್ ಹಾಗೂ ಅಂತಿಮ ಹಂತದಲ್ಲಿ ಕೇಶವ್ ಮಹಾರಾಜ್ ಜವಾಬ್ದಾರಿಯುತ ಪ್ರದರ್ಶನ ನೀಡಿದರು. ಹೀಗಾಗಿ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್‌ಗಳ ಆಟವನ್ನು ಪೂರ್ಣಗೊಳಿಸಿದ್ದು 106 ರನ್‌ಗಳನ್ನು ಗಳಿಸಲು ಶಕ್ತವಾಯಿತು. ಕೇಶವ್ ಮಹಾರಾಜ್ 35 ಎಸೆತಗಳಲ್ಲಿ 41 ರನ್‌ (2 ಸಿಕ್ಸರ್‌, 5 ಬೌಂಡರಿ) ಸಿಡಿಸಿದರೆ, ಜೊತೆಯಲ್ಲಿ ಸಾಥ್‌ ನೀಡಿದ ಪಾರ್ನೆಲ್‌ 37 ಎಸೆತಗಳಲ್ಲಿ 1 ಸಿಕ್ಸರ್‌, 1 ಬೌಂಡರಿಯೊಂದಿಗೆ 24 ರನ್‌ಗಳನ್ನಷ್ಟೇ ಗಳಿಸಿದರು. ಮಾಕ್ರಮ್‌ 25 ರನ್‌ಗಳಿಸಿದರು. ಉಳಿದ ಯಾವೊಬ್ಬ ಆಟಗಾರರು ಸ್ಥಿರವಾಗಿ ನಿಲ್ಲದ ಕಾರಣ ದಕ್ಷಿಣ ಆಫ್ರಿಕಾ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ಎದುರು ಸೋಲು ಒಪ್ಪಿಕೊಳ್ಳಬೇಕಾಯಿತು.

    ದಕ್ಷಿಣ ಆಫ್ರಿಕಾ ವಿರುದ್ಧ ಕಗಿಸೋ ರಬಾಡ ಹಾಗೂ ಅನ್ರಿಚ್ ನಾರ್ಟ್ಜೆ ತಲಾ ಒಂದೊಂದು ವಿಕೆಟ್‌ ಪಡೆದರು.

    Live Tv
    [brid partner=56869869 player=32851 video=960834 autoplay=true]

  • ಸರಣಿ ಗೆದ್ದರೂ ಮುಖದಲ್ಲಿ ನಗುವಿಲ್ಲ – ಕೊಹ್ಲಿಯನ್ನು ಗುರಾಯಿಸಿದ ಪಂತ್

    ಸರಣಿ ಗೆದ್ದರೂ ಮುಖದಲ್ಲಿ ನಗುವಿಲ್ಲ – ಕೊಹ್ಲಿಯನ್ನು ಗುರಾಯಿಸಿದ ಪಂತ್

    ಹೈದರಾಬಾದ್: ಇಲ್ಲಿನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ಭಾರತ (India) ಮತ್ತು ಆಸ್ಟ್ರೇಲಿಯಾ (Australia) ನಡುವಿನ ಟಿ20 (T20) ಸರಣಿಯ 3ನೇ ಪಂದ್ಯ ನಡೆಯಿತು. ಪಂದ್ಯ ಗೆದ್ದು ಪ್ರಶಸ್ತಿ ಸ್ವೀಕರಿಸಿದ ವೇಳೆ ರಿಷಭ್ ಪಂತ್ (Rishabh Pant) ಒಂದೇಸಮನೆ ವಿರಾಟ್ ಕೊಹ್ಲಿಯನ್ನೇ ಗುರಾಯಿಸುತ್ತಿರುವ ವೀಡಿಯೋ (Virat Kohli) ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿದೆ.

    ಪಂದ್ಯ ಗೆದ್ದಿದ್ದಕ್ಕಿಂತಲೂ ತಾನು ಕಣಕ್ಕಿಳಿದು ಅಬ್ಬರಿಸಲಿಲ್ಲ ಎನ್ನುವ ಕೋಪವೇ ರಿಷಭ್ ಪಂತ್ (Rishabh Pant) ಅಸಮಾಧಾನಕ್ಕೆ ಕಾರಣವಾಗಿದೆ ಎನ್ನುವಂತಿದೆ. ರಿಷಭ್ ಪಂತ್‌ನ ಈ ನಡೆಗೆ ಕೊಹ್ಲಿ ಅಭಿಮಾನಿಗಳು ಪಂತ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಭಾರತ-ದ.ಆಫ್ರಿಕಾ ಟಿ-20 ಸರಣಿಗೆ ಪರಿವೀಕ್ಷಕರಾಗಿ ಬೆಳಗಾವಿ ಮೂಲದ ಅವಿನಾಶ್ ನೇಮಕ

    ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಇತ್ತಂಡಗಳ ನಡುವೆ 1-1 ರಲ್ಲಿ ಸಮಬಲ ಕಂಡಿತ್ತು. ಭಾನುವಾರದ ಪಂದ್ಯ ಫೈನಲ್‌ನಲ್ಲಿ ಸರಣಿ ಗೆಲ್ಲುವ ತವಕದಲ್ಲಿ ಎರಡು ತಂಡಗಳು ಕಣಕ್ಕಿಳಿದಿದ್ದವು. ಹಾಗಾಗಿ ರೋಚಕ ಕದನಕ್ಕೆ ಹೈದರಾಬಾದ್ ಸಾಕ್ಷಿಯಾಗಿತ್ತು. ಕ್ರೀಸ್‌ನಲ್ಲಿ ನಿಂತು ಅಬ್ಬರಿಸಿದ ವಿರಾಟ್ ಕೊಹ್ಲಿ (Virat Kohli) ಹಾಗೂ ಸೂರ್ಯಕುಮಾರ್ ಯಾದವ್ (Suryakumar Yadav) ಸಿಕ್ಸ್-ಫೋರ್‌ಗಳ ಭರ್ಜರಿ ಬ್ಯಾಟಿಂಗ್ ಮಾಡಿದರು.

    ಕೊನೆಯ 6 ಎತೆಗಳಲ್ಲಿ 11 ರನ್‌ಗಳು ಬೇಕಿದ್ದಾಗಲೇ ಮೊದಲ ಎಸೆತವನ್ನು ಕೊಹ್ಲಿ ಸಿಕ್ಸ್‌ಗೆ ಅಟ್ಟಿದರು. 2ನೇ ಎಸೆತವನ್ನು ಬೌಂಡರಿ ಬಾರಿಸುವ ಪ್ರಯತ್ನದಲ್ಲಿ ಕ್ಯಾಚ್ ನೀಡಿ ಔಟಾದರು. ಇನ್ನೂ ಕೊನೆಯಲ್ಲಿ ಕಣಕ್ಕಿಳಿದ ದಿನೇಶ್ ಕಾರ್ತಿಕ್ (Dinesh Karthik) 3ನೇ ಎಸೆತದಲ್ಲಿ ಒಂದು ರನ್ ಕಲೆಹಾಕಿದರು. 5ನೇ ಎಸೆತವನ್ನು ಬೌಂಡರಿಗೆ ತಳ್ಳುವ ಮೂಲಕ ಹಾರ್ದಿಕ್ ಪಾಂಡ್ಯ (Hardik Pandya) ಗೆಲುವಿನ ನಗೆ ಬೀರಿದರು. ಇದನ್ನೂ ಓದಿ: ಭಾರತ Vs ಆಸ್ಟ್ರೇಲಿಯಾ ಹೈವೋಲ್ಟೆಜ್ ಪಂದ್ಯದ ನಡುವೆ ಮೊಳಗಿತು ಜೈಶ್ರೀರಾಮ್ ಉದ್ಘೋಷ

    ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್, ಕೊನೆಯ ಓವರ್‌ವರೆಗೂ ನಿಂತು ಅಬ್ಬರಿಸಿದ ಕೊಹ್ಲಿ ಪಾತ್ರ ಪ್ರಮುಖವಾಗಿತ್ತು. ಆದರೆ ಹಾಲಿ ವಿಶ್ವಚಾಂಪಿಯನ್‌ಗಳನ್ನ ಸೋಲಿಸಿದರೂ ಟೀಂ ಇಂಡಿಯಾ ಕ್ರಿಕೆಟರ್ ರಿಷಭ್ ಪಂತ್‌ಗೆ ಪಂದ್ಯ ಗೆದ್ದಿದ್ದಕ್ಕಿಂತಲೂ ತಾನು ಕಣಕ್ಕಿಳಿಯಲಿಲ್ಲ ಎನ್ನುವ ಅಸಮಾಧಾನವೇ ಇದ್ದಂತೆ ಕಾಣುತ್ತಿದೆ ಎಂದು ನೆಟ್ಟಿಗರು ಸೂಚಿಸಿದ್ದಾರೆ. ಹಾಗಾಗಿ ರಿಷಭ್ ಮುಖದಲ್ಲಿ ಮಂದಹಾಸ ಮೂಡಲೇ ಇಲ್ಲ. ಕೊಹ್ಲಿಯನ್ನು ಗುರಾಯಿಸುತ್ತಲೇ ಇದ್ದರು. ಕೊನೆಯಲ್ಲಿ ಸಾಂಕೇತಿಕವಾಗಿ ನಕ್ಕು ಸುಮ್ಮನಾದರು.

    ಭಾನುವಾರ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 186 ರನ್‌ಗಳನ್ನು ಗಳಿಸಿತು. ಈ ಗುರಿ ಬೆನ್ನತ್ತಿದ ಟೀಂ ಇಂಡಿಯಾ 19.5 ಓವರ್‌ಗಳಲ್ಲೇ 4 ವಿಕೆಟ್ ನಷ್ಟಕ್ಕೆ 187 ರನ್‌ಗಳನ್ನು ಪೇರಿಸುವ ಮೂಲಕ ಗೆಲುವು ಸಾಧಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಭಾರತ-ದ.ಆಫ್ರಿಕಾ ಟಿ-20 ಸರಣಿಗೆ ಪರಿವೀಕ್ಷಕರಾಗಿ ಬೆಳಗಾವಿ ಮೂಲದ ಅವಿನಾಶ್ ನೇಮಕ

    ಭಾರತ-ದ.ಆಫ್ರಿಕಾ ಟಿ-20 ಸರಣಿಗೆ ಪರಿವೀಕ್ಷಕರಾಗಿ ಬೆಳಗಾವಿ ಮೂಲದ ಅವಿನಾಶ್ ನೇಮಕ

    ಬೆಳಗಾವಿ: ನಗರದ ನಿವಾಸಿ ಅವಿನಾಶ್ ಪೋತದಾರಗೆ (Avinash Potdar) ಬಿಸಿಸಿಐ (BCCI) ಮಹತ್ವದ ಜವಾಬ್ದಾರಿ ನೀಡಿದೆ.‌ ನಾಳೆ ನಡೆಯುವ ದಕ್ಷಿಣ ಆಫ್ರಿಕಾ ಮತ್ತು ಭಾರತ (India vs South Africa) ನಡುವಿನ ಟಿ-20 (T20) ಪಂದ್ಯಕ್ಕೆ ಪರೀವೀಕ್ಷಕರಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

    ಇಲ್ಲಿನ ಜಾಧವ್ ನಗರದ ನಿವಾಸಿ ಆಗಿರುವ ಅವಿನಾಶ್ ‌ಪೋತದಾರ್ ಕಳೆದ ಎರಡು ದಶಕಗಳಿಂದ ಸತತವಾಗಿ ಕೆಎಸ್‌ಸಿಎ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಎಸ್‌ಸಿಎ ಧಾರವಾಡ ವಲಯದ ಕನ್ವೀನರ್ ಆಗಿರುವ ಅವಿನಾಶ್ ಪೋತದಾರ್ ಉದ್ಯಮಿಯು ಆಗಿದ್ದಾರೆ. ಇದನ್ನೂ ಓದಿ: ಭಾರತ Vs ಆಸ್ಟ್ರೇಲಿಯಾ ಹೈವೋಲ್ಟೆಜ್ ಪಂದ್ಯದ ನಡುವೆ ಮೊಳಗಿತು ಜೈಶ್ರೀರಾಮ್ ಉದ್ಘೋಷ

    ಕಬ್ಬು ನುರಿಸುವ ಕಾರ್ಖಾನೆ, ಸಿನಿಮಾ ಟಾಕೀಸ್ ಸೇರಿದಂತೆ ಹಲವು ಉದ್ಯಮಗಳು ಅವಿನಾಶ್ ಪೋತದಾರ್ ನಡೆಸುತ್ತಿದ್ದಾರೆ. ಇದೀಗ ನಾಳೆಯಿಂದ ನಡೆಯುವ ಭಾರತ-ದಕ್ಷಿಣ ಆಫ್ರಿಕಾ ಟಿ-20 ಸರಣಿಗೆ ಪರಿವೀಕ್ಷಕರಾಗಿ ಆಯ್ಕೆ ಆಗಿದ್ದಾರೆ. ನಾಳೆ ತಿರುವನಂತಪುರಂನಲ್ಲಿ ಚೊಚ್ಚಲ ಟಿ-20 ಪಂದ್ಯದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಪಂದ್ಯಗೆದ್ದ ಖುಷಿ – ರೋಹಿತ್‍ಗೆ ಹೊಡೆದು ಸಂಭ್ರಮಿಸಿದ ಕೊಹ್ಲಿ

    Live Tv
    [brid partner=56869869 player=32851 video=960834 autoplay=true]