Tag: t20

  • ಟೀಂ ಇಂಡಿಯಾದ ಬ್ಯಾಟಿಂಗ್, ಫೀಲ್ಡಿಂಗ್ ಕೋಚ್‍ಗೆ 15 ಲಕ್ಷ ರೂ. ಸಂಬಳ!

    ಟೀಂ ಇಂಡಿಯಾದ ಬ್ಯಾಟಿಂಗ್, ಫೀಲ್ಡಿಂಗ್ ಕೋಚ್‍ಗೆ 15 ಲಕ್ಷ ರೂ. ಸಂಬಳ!

    ಮುಂಬೈ: ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರು ಮತ್ತು ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಅವರಿಗೆ ಪ್ರತಿ ತಿಂಗಳು 15 ಲಕ್ಷ ರೂ. ಸಂಬಳವನ್ನು ಬಿಸಿಸಿಐ ನಿಗದಿ ಮಾಡಿದೆ.

    ಇಲ್ಲಿಯವರೆಗೆ ಬಂಗಾರು ಮತ್ತು ಶ್ರೀಧರ್ ಅವರಿಗೆ ಪ್ರತಿ ತಿಂಗಳು 10 ಲಕ್ಷ(ಇಂಡಿಯನ್ ಪ್ರೀಮಿಯರ್ ಲೀಗ್‍ನ 2 ತಿಂಗಳು ಹೊರತು ಪಡಿಸಿ 10 ತಿಂಗಳ ಕಾಲ, ಒಂದು ವರ್ಷಕ್ಕೆ 1 ಕೋಟಿ)ರೂ. ಸಂಬಳವನ್ನು ಪಡೆಯುತ್ತಿದ್ದರು.

    ಎರಡು ವರ್ಷಗಳ ಕಾಲ ಹಿರಿಯರ ತಂಡದ ಜೊತೆ ಇದ್ದ ಇವರು ಸಂಬಳವನ್ನು ಹೆಚ್ಚಳ ಮಾಡುವಂತೆ ಈ ಹಿಂದೆಯೇ ಮನವಿ ಸಲ್ಲಿಸಿದ್ದರು. ಆದರೆ ಈಗ ಈ ಮನವಿ ಪುರಸ್ಕೃತವಾಗಿದ್ದು ಶೇ.50 ರಷ್ಟು ಸಂಬಳ ಏರಿಕೆಯಾಗಿದೆ.

    ಈ ಹಿಂದೆ ಇದ್ದ ಬಿಸಿಸಿಐ ಆಡಳಿತ ಮಂಡಳಿ ಶೇ.100 ರಷ್ಟು ಸಂಬಳ ಏರಿಕೆಯ ಪ್ರಸ್ತಾಪನ್ನು ಒಪ್ಪಿತ್ತು. ಆದರೆ ಕಳೆದ ತಿಂಗಳು ಶೇ.25ರಷ್ಟು ಸಂಬಳ ಏರಿಸಲು ಬಿಸಿಸಿಐ ನಿರ್ಧರಿಸಿತ್ತು. ಬಿಸಿಸಿಐ ಈ ನಿರ್ಧಾರಕ್ಕೆ ಸಿಬ್ಬಂದಿಯಿಂದ ವಿರೋಧ ವ್ಯಕ್ತವಾಗಿತ್ತು. ಈಗ ಕೋಚ್ ಅನಿಲ್ ಕುಂಬ್ಳೆ ಸುಪ್ರೀಂ ನೇಮಿಸಿದ್ದ ಆಡಳಿತ ಸಮಿತಿಯ ಜೊತೆ ಸಭೆ ನಡೆಸಿ ಶೇ.50ರಷ್ಟು ಸಂಬಳವನ್ನು ಏರಿಸಿದ್ದಾರೆ.

    ಬುಧವಾರ ಆಟಗಾರರ ಸಂಭಾವನೆ ಮತ್ತು ಪಂದ್ಯದ ಶುಲ್ಕವನ್ನು ಆಡಳಿತ ಮಂಡಳಿ ದುಪ್ಟಟ್ಟು ಮಾಡಿತ್ತು. 2016ರ ಅಕ್ಟೋಬರ್ 1ರಿಂದ ಪರಿಷ್ಕೃತ ಸಂಭಾವನೆ ಮತ್ತು ಶುಲ್ಕ ಜಾರಿಗೆ ಬರಲಿದೆ.

    ಎಷ್ಟಿತ್ತು? ಈಗ ಎಷ್ಟು ಆಗಿದೆ?
    `ಎ’ ದರ್ಜೆಯಲ್ಲಿರುವ ಆಟಗಾರರು ಈ ಮೊದಲು ಕೋಟಿ ರೂ. ಪಡೆಯುತ್ತಿದ್ದರೆ ಈU ಆ ಮೊತ್ತವು 2 ಕೋಟಿ ರೂ.ಗೆ ಏರಿಕೆಯಾಗಿದೆ. ಬಿ ದರ್ಜೆ ಮತ್ತು ಸಿ ದರ್ಜೆಗಳ ಆಟಗಾರರು ಕ್ರಮವಾಗಿ 50 ಲಕ್ಷ ರೂ. ಮತ್ತು 25 ಲಕ್ಷ ರೂ. ಪಡೆಯುತ್ತಿದ್ದರು. ಅವರು ಇನ್ನು ಮುಂದೆ ಕ್ರಮವಾಗಿ 1 ಕೋಟಿ ರೂ. ಮತ್ತು 50 ಲಕ್ಷ ರೂ. ಹಣವನ್ನು ಪಡೆಯಲಿದ್ದಾರೆ.

    ಟೆಸ್ಟ್ ಪಂದ್ಯದಲ್ಲಿ ಆಡುವ ಆಟಗಾರರು ಶುಲ್ಕವನ್ನು 7.50 ಲಕ್ಷದಿಂದ 15 ಲಕ್ಷಕ್ಕೆ ಹೆಚ್ಚಿಸಲಾಗಿದ್ದರೆ, ಏಕದಿನ ಮತ್ತು ಟ್ವೆಂಟಿ 20 ಪಂದ್ಯಗಳಲ್ಲಿ ಆಡುವವರ ಶುಲ್ಕವನ್ನು ಕ್ರಮವಾಗಿ 6 ಲಕ್ಷ ರೂ. ಮತ್ತು 3 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.

    ಎ ದರ್ಜೆ:
    ವಿರಾಟ್ ಕೊಹ್ಲಿ, ಮಹೇಂದ್ರಸಿಂಗ್ ಧೋನಿ, ಆರ್. ಆಶ್ವಿನ್, ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ, ರವೀಂದ್ರ ಜಡೇಜ, ಮುರಳಿ ವಿಜಯ್.

    ಬಿ ದರ್ಜೆ:
    ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಉಮೇಶ್ ಯಾದವ್, ವೃದ್ಧಿಮಾನ್ ಸಹಾ, ಜಸ್‍ಪ್ರೀತ್ ಬೂಮ್ರಾ, ಯುವರಾಜ್ ಸಿಂಗ್.

    ಸಿ ದರ್ಜೆ :
    ಶಿಖರ್ ಧವನ್, ಅಂಬಟಿ ರಾಯುಡು, ಅಮಿತ್ ಮಿಶ್ರಾ, ಕೇದಾರ್ ಜಾಧವ್, ಯಜುವೇಂದ್ರ ಚಾಹಲ್, ಪಾರ್ಥಿವ್ ಪಟೇಲ್, ಜಯಂತ್ ಯಾದವ್, ಮನೀಷ್ ಪಾಂಡೆ, ಅಕ್ಷರ್ ಪಟೇಲ್, ಕರುಣ್ ನಾಯರ್, ಹಾರ್ದಿಕ್ ಪಾಂಡ್ಯ, ಆಶಿಶ್ ನೆಹ್ರಾ, ಮನದೀಪ್ ಸಿಂಗ್, ಧವಳ್ ಕುಲಕರ್ಣಿ, ಶಾರ್ದೂಲ್ ಠಾಕೂರ್, ರಿಷಭ್ ಪಂತ್.

  • ವಿಶ್ವದಲ್ಲೇ ಫಸ್ಟ್: ಟಿ20 ಕ್ರಿಕೆಟ್‍ನಲ್ಲಿ 300 ರನ್ ಬಾರಿಸಿ ಇತಿಹಾಸ ಸೃಷ್ಟಿಸಿದ ಮೋಹಿತ್

    ನವದೆಹಲಿ: ವಿಶ್ವದಲ್ಲೇ ಮೊದಲ ಬಾರಿಗೆ ಟಿ-20 ಕ್ರಿಕೆಟ್‍ನಲ್ಲಿ ತ್ರಿಶತಕ ಬಾರಿಸುವ ಮೂಲಕ ದೆಹಲಿಯ ಯುವ ಕ್ರಿಕಟರ್ ಅಸಾಮಾನ್ಯ ಸಾಧನೆ ಮಾಡಿದ್ದಾರೆ.

    ಮಂಗಳವಾರದಂದು ದೆಹಲಿಯ ಲಲಿತ್ ಪಾರ್ಕ್‍ನಲ್ಲಿ ನಡೆದ ಫ್ರೆಂಡ್ಸ್ ಪ್ರೀಮಿಯರ್ ಲೀಗ್ ಟ-20 ಮ್ಯಾಚ್‍ನಲ್ಲಿ ಮಾವಿ ಇಲೆವೆನ್ ತಂಡದ ಬ್ಯಾಟ್ಸ್ ಮನ್ ಮೋಹಿತ್ ಅಹ್ಲಾವತ್ 72 ಎಸೆತಗಳಲ್ಲಿ ಬರೋಬ್ಬರಿ 300 ರನ್ ಗಳಿಸಿ ಇತಿಹಾಸ ಬರೆದಿದ್ದಾರೆ. ಮೋಹಿತ್ 39 ಸಿಕ್ಸರ್ ಹಾಗೂ 14 ಬೌಂಡರಿ ಚಚ್ಚಿದ್ದಾರೆ.

    ಕೊನೆಯ ಓವರ್‍ನ ಕೊನೆಯ ಐದು ಎಸೆತದಲ್ಲಿ ಸತತ ಐದು ಸಿಕ್ಸರ್ ಹಾಗೂ ಕೊನೆಯ ಎರಡು ಓವರ್‍ನಲ್ಲಿ ಒಟ್ಟು 50 ರನ್ ಗಳಿಸಿದ ಮೋಹಿತ್ ತ್ರಿಬಲ್ ಸೆಂಚುರಿ ಪೂರ್ತಿ ಮಾಡಿದ್ರು. ಈ ಪಂದ್ಯದಲ್ಲಿ ಮಾವಿ ತಂಡ 20 ಓವರ್‍ಗಳಲ್ಲಿ 416 ರನ್ ಗಳಿಸ್ತು. ಮೋಹಿತ್ ತಂಡ 216 ರನ್‍ಗಳ ಅಂತರದಿಂದ ಗೆಲುವು ಸಾಧಿಸಿತು.

    ಫ್ರೆಂಡ್ಸ್ ಎಲೆವೆನ್ ತಂಡದ ವಿರುದ್ಧ ಆಡಿದ 21 ವರ್ಷದ ಮೋಹಿತ್, 2015ರಲ್ಲಿ ರಣಜಿ ಟ್ರೋಫಿಗಾಗಿ ಆಟವಾಡಿದ್ದರು. ದೆಹಲಿಗಾಗಿ ಮೂರು ಫಸ್ಟ್ ಕ್ಲಾಸ್ ಪಂದ್ಯಗಳನ್ನ ಆಡಿದ್ದು, ಅವುಗಲ್ಲಿ ಕೇವಲ 5 ರನ್ ಗಳಿಸಿದ್ದರು ಎಂದು ವರದಿಯಾಗಿದೆ.

    ಈ ಹಿಂದೆ ಇಂಗ್ಲೆಂಡ್‍ನ ಲಂಕಶೈರ್‍ನಲ್ಲಿ ನಡೆದ ಸ್ಥಳೀಯ ಟಿ20 ಲೀಗ್‍ನಲ್ಲಿ ಧನುಕಾ ಪತಿರಾನಾ ಎಂಬವರು 72 ಬಾಲ್‍ಗಳಿಗೆ 277 ರನ್ ಗಳಿಸಿದ್ದರು. ಶ್ರೀಲಂಕಾ ಮೂಲದ ಧನುಕಾ ಈ ಮ್ಯಾಚ್‍ನಲ್ಲಿ 29 ಸಿಕ್ಸರ್ ಹಾಗೂ 18 ಬೌಂಡರಿ ಬಾರಿಸಿದ್ದರು.

  • ಸುರೇಶ್ ರೈನಾ ಸಿಕ್ಸರ್ ಬಾಲ್ 6 ವರ್ಷದ ಬಾಲಕನ ಮೇಲೆ ಬಿತ್ತು!

    ಬೆಂಗಳೂರು: ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ಸುರೇಶ್ ರೈನಾ ಹೊಡೆದ ಸಿಕ್ಸರ್ ಬಾಲ್ ಮೈಮೇಲೆ ಬಿದ್ದು ಬಾಲಕನೊಬ್ಬ ಗಾಯಗೊಂಡಿದ್ದಾನೆ.

    6 ವರ್ಷದ ಬಾಲಕ ಸತೀಶ್ ನಿನ್ನೆ ಇಂಗ್ಲೆಂಡ್ ವಿರುದ್ಧದ ಪಂದ್ಯ ನೋಡಲು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ್ದ. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್‍ಗಳಲ್ಲಿ 202 ರನ್ ಗಳಿಸಿತ್ತು. ಈ ಇನ್ನಿಂಗ್ಸ್‍ ನಲ್ಲಿ ಸುರೇಶ್ ರೈನಾ ಬಾರಿಸಿದ ಸಿಕ್ಸರ್‍ಗೆ ಬಾಲ್ ಕ್ರೀಡಾಂಗಣದ ನಡುವೆ ನುಗ್ಗಿತು. ಬಾಲ್ ಬಾಲಕನ ತೊಡೆಯ ಭಾಗಕ್ಕೆ ತಾಗಿತ್ತು. ತಕ್ಷಣ ಕ್ರೀಡಾಂಗಣದಲ್ಲೇ ಹಾಸ್‍ಮ್ಯಾಟ್ ಆಸ್ಪತ್ರೆ ವೈದ್ಯರು ಬಾಲಕನಿಗೆ ಪ್ರಥಮ ಚಿಕಿತ್ಸೆ ನೀಡಿದರು.

    ಬಾಲಕನಿಗೆ ಕ್ರೀಡಾಂಗಣದಲ್ಲೇ ಇರುವ ಕೆಎಸ್‍ಸಿಎ ಮೆಡಿಕಲ್ ಸೆಂಟರ್‍ನಲ್ಲಿ ಹಾಸ್‍ಮ್ಯಾಟ್ ಆಸ್ಪತ್ರೆಯ ಡಾ.ಥಾಮಸ್ ಚಾಂಡಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಇದಾದ 10 ನಿಮಿಷಗಳಲ್ಲೇ ಬಾಲಕನನ್ನು ಡಿಸ್ಚಾರ್ಜ್ ಮಾಡಿದ್ದಾರೆ ಎಂದು ಹಾಸ್‍ಮ್ಯಾಟ್ ಆಸ್ಪತ್ರೆಯ ವೈದ್ಯರು ಸ್ಪಷ್ಟಪಡಿಸಿದ್ದಾರೆ.

    ಈ ಹಿಂದೆಯೂ ಆಗಿತ್ತು!: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಪ್ರೇಕ್ಷಕರಿಗೆ ಗಾಯವಾಗಿದ್ದು ಇದೇ ಮೊದಲೇನಲ್ಲ. ಈ ಹಿಂದೆ 2012ರ ಏಪ್ರಿಲ್ 17ರಂದು ನಡೆದಿದ್ದ ಐಪಿಎಲ್ ಟಿ20 ಪಂದ್ಯದಲ್ಲಿ ಕ್ರಿಸ್ ಗೇಲ್ ಬ್ಯಾಟಿಂಗ್ ಅಬ್ಬರಕ್ಕೆ 11 ವರ್ಷದ ಬಾಲಕಿ ಟಿಯಾ ಭಾಟಿಯಾ ಎಂಬಾಕೆಯ ಮೂಗಿಗೆ ಗಾಯವಾಗಿತ್ತು. ಅಂದು ಪುಣೆ ವಾರಿಯರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕ್ರಿಸ್ ಗೇಲ್ ರಾಯಲ್ ಚಾಲೆಂಜರ್ಸ್ ಪರ ಆಟವಾಡುತ್ತಿದ್ದರು.

    ಪಂದ್ಯದ ಬಳಿಕ ವಿಷಯ ತಿಳಿದ ಕ್ರಿಸ್ ಗೇಲ್ ತಕ್ಷಣ ಬಾಲಕಿ ದಾಖಲಾಗಿದ್ದ ಮಲ್ಯ ಆಸ್ಪತ್ರೆಗೆ ತೆರಳಿ ಬಾಲಕಿಯ ಯೋಗ ಕ್ಷೇಮ ವಿಚಾರಿಸಿದ್ದರು.

  • 8 ರನ್‍ಗಳಿಗೆ 8 ವಿಕೆಟ್ ಪತನ: ಇದು ಚಹಲ್ ಕಮಾಲ್- ಭಾರತಕ್ಕೆ ಸರಣಿ

    ಬೆಂಗಳೂರು: ಯಜುವೇಂದ್ರ ಚಹಲ್ ಅವರ ಮಾರಕ ಬೌಲಿಂಗ್‍ನಿಂದ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 75 ರನ್‍ಗಳ ಭರ್ಜರಿ ಜಯ ಸಾಧಿಸಿದೆ. ಟೆಸ್ಟ್, ಏಕದಿನ ಸರಣಿಯನ್ನು ಗೆದ್ದುಕೊಂಡಿದ್ದ ಭಾರತ ಈಗ ಟಿ20 ಸರಣಿಯನ್ನು ಗೆದ್ದುಕೊಂಡಿದೆ.

    ಗೆಲ್ಲಲು 203 ರನ್‍ಗಳ ಕಠಿಣ ಗುರಿಯನ್ನು ಪಡೆದ ಇಂಗ್ಲೆಂಡ್ 13.3 ಓವರ್ ಗಳಲ್ಲಿ 119 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಚಹಲ್ ಸ್ಪಿನ್ ದಾಳಿಗೆ ತತ್ತರಿಸಿದ ಆಂಗ್ಲರು 8 ರನ್ ಅಂತರದಲ್ಲಿ 8 ವಿಕೆಟ್ ಕಳೆದುಕೊಳ್ಳುವ ಮೂಲಕ 16.3 ಓವರ್‍ಗಳಲ್ಲಿ 127 ರನ್ ಗಳಿಗೆ ಆಲೌಟ್ ಆಯ್ತು.

    ಚಹಲ್ ಕಮಾಲ್: ಬಿಲ್ಲಿಂಗ್ಸ್, ಮಾರ್ಗನ್ ರನ್ನು ಔಟ್ ಮಾಡಿದ ಚಹಲ್ ರೂಟ್ ಅವರನ್ನು ಎಲ್‍ಬಿ ಬಲೆಗೆ ಕೆಡವಿದರು. ಇಲ್ಲಿಂದ ಆಂಗ್ಲರ ಪತನ ಆರಂಭವಾಯಿತು. ನಂತರ ಬಂದ ಬಟ್ಲರ್ ಕೊಹ್ಲಿ ಗೆ ಕ್ಯಾಚ್ ನೀಡಿ ಹೊರ ನಡೆದರು. ಚಹಲ್ ಎಸೆತವನ್ನು ಸಿಕ್ಸರ್‍ಗೆ ಬೆನ್ ಸ್ಟೋಕ್ ಅಟ್ಟಿದ್ದರೂ ಸುರೇಶ್ ರೈನಾ ಬೌಂಡರಿ ಗೆರೆಯ ಬಳಿ ಹಿಡಿದ ಅತ್ಯುತ್ತಮ ಕ್ಯಾಚ್‍ಗೆ ಔಟಾದರು. ಇದಾದ ಬಳಿಕ ಮೊಯಿನ್ ಅಲಿ ಕೊಹ್ಲಿ ಕ್ಯಾಚ್ ನೀಡಿದರೆ ಕ್ರಿಸ್ ಜೊರ್ಡನ್ ಅವರನ್ನು ಧೋನಿ ಸ್ಟಂಪ್ ಔಟ್ ಮಾಡಿದರು. ಅಂತಿಮವಾಗಿ 4 ಓವರ್ ಕೋಟಾ ಮುಗಿದಾಗ ಚಹಲ್ 25 ರನ್ ನೀಡಿ 6 ವಿಕೆಟ್ ಪಡೆದಿದ್ದರು.

    ಇಂಗ್ಲೆಂಡ್ ಪರ ಜೇಸನ್ ರೋ 32 ರನ್, ಜೋ ರೂಟ್ 42 ರನ್, ನಾಯಕ ಇಯಾನ್ ಮಾರ್ಗನ್ 40 ರನ್ ಹೊಡೆದರು. ಬುಮ್ರಾ ಮೂರು ವಿಕೆಟ್ ಪಡೆದರೆ ಅಮಿತ್ ಮಿಶ್ರಾ 1 ವಿಕೆಟ್ ಪಡೆದರು

    ವಿಕೆಟ್ ಪತನಗೊಂಡಿದ್ದು ಹೀಗೆ:
    1-8, 2-55, 3-119, 4-119, 5-119, 6-123, 7-127, 8-127, 9-127, 10-127

    ಸಿಕ್ಸರ್, ಬೌಂಡರಿ ಅಬ್ಬರ: ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಬ್ ಏರ್ ಸೌಲಭ್ಯ ಅಳವಡಿಕೆಯಾದ ನಡೆದ ಮೊದಲ ಅಂತರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಬ್ಯಾಟ್ಸ್ ಮನ್‍ಗಳು ರನ್ ಸುರಿಮಳೆಗೈದಿದ್ದರು. ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ ಆರಂಭದಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡರೂ ಸುರೇಶ್ ರೈನಾ, ಧೋನಿ ಅರ್ಧಶತಕ, ಕೊನೆಯಲ್ಲಿ ಯುವರಾಜ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತ್ತು.

    ಎರಡನೇ ಓವರ್‍ನ ಮೊದಲ ಎಸೆತದಲ್ಲಿ ನಾಯಕ ಕೊಹ್ಲಿ ಜೊರ್ಡನ್ ಬೌಲಿಂಗ್‍ನಲ್ಲಿ ರನೌಟ್ ಆದರು. ಆರಂಭದಲ್ಲಿ ಕುಸಿತ ಕಂಡರೂ ಎರಡನೇ ವಿಕೆಟ್‍ಗೆ ರಾಹುಲ್ ಮತ್ತು ರೈನಾ 6.1 ಓವರ್ನಲ್ಲಿ 61 ರನ್ ಕಲೆ ಹಾಕಿ ಭದ್ರವಾದ ಇನ್ನಿಂಗ್ಸ್ ಕಟ್ಟಿದರು.

    22 ರನ್(18 ಎಸೆತ, 2 ಬೌಂಡರಿ, 1ಸಿಕ್ಸರ್) ಗಳಿಸಿದ್ದ ರಾಹುಲ್ ಔಟಾದಾಗ ತಂಡದ ಮೊತ್ತ 65 ಆಗಿತ್ತು. ಧೋನಿ ಕ್ರೀಸ್‍ಗೆ ಬಂದ ಮೇಲೆ ಸಿಕ್ಸರ್, ಬೌಂಡರಿ ಸಿಡಿಯಲು ಆರಂಭವಾಯಿತು.

    ರೈನಾ ಮತ್ತು ಧೋನಿ 37 ಎಸೆತದಲ್ಲಿ 55 ರನ್ ಜೊತೆಯಾಟವಾಡಿದರು. 39 ಎಸೆತದಲ್ಲಿ ಅರ್ಧಶತಕ ಹೊಡೆದ ರೈನಾ ಅಂತಿಮವಾಗಿ 63 ರನ್(45 ಎಸೆತ, 2 ಬೌಂಡರಿ, 5 ಸಿಕ್ಸರ್) ಗಳಿಸಿದ್ದಾಗ ಮೊರ್ಗನ್‍ಗೆ ಕ್ಯಾಚ್ ನೀಡಿ ಹೊರ ನಡೆದರು.

    ಯುವರಾಜ್ ಬಂದ ಕೂಡಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಪರಿಣಾಮ ಜೊರ್ಡನ್ ಎಸೆದ 18ನೇ ಓವರ್ ನಲ್ಲಿ ಯುವರಾಜ್ ಮೂರು ಸಿಕ್ಸರ್ ಒಂದು ಬೌಂಡರಿ ಚಚ್ಚಿದರು. ಈ ಓವರ್ನಲ್ಲಿ ಧೋನಿ ಮತ್ತು ಯುವಿ 24 ರನ್ ಸೊರೆಗೈದರು. ಉತ್ತಮವಾಗಿ ಆಡುತ್ತಿದ್ದ ಯುವರಾಜ್ ಸಿಂಗ್ 27 ರನ್( 10 ಎಸೆತ, 1 ಬೌಂಡರಿ,1 ಸಿಕ್ಸರ್) ಗಳಿಸಿದ್ದಾಗ ಮಿಲ್ಸ್ ಎಸೆದ ಸ್ಲೋ ಬಾಲಿಗೆ ಕೀಪರ್ಗೆ ಕ್ಯಾಚ್ ನೀಡಿ ಹೊರ ನಡೆದರು. ಇವರಿಬ್ಬರು 28 ಎಸೆತದಲ್ಲಿ 57 ರನ್ ಚಚ್ಚುವ ಮೂಲಕ ತಂಡದ ಮೊತ್ತವನ್ನು 170 ರನ್‍ಗಳ ಗಡಿ ದಾಟಿಸಿದರು.

    ಧೋನಿ 56 ರನ್(36 ಎಸೆತ,5 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರೆ, 11 ರನ್(4 ಎಸೆತ, 1 ಸಿಕ್ಸರ್) ಗಳಿಸಿದ್ದ ಹಾರ್ದಿಕ್ ಪಾಂಡ್ಯಾ ಇನ್ನಿಂಗ್ಸ್ ಕೊನೆಯ ಬಾಲ್‍ನಲ್ಲಿ ರನ್ ಔಟಾದರು. ಕೊನೆಯಲ್ಲಿ ರಿಶಬ್ ಪಂತ್ 6 ರನ್ ಗಳಿಸಿ ಔಟಾಗದೇ ಉಳಿದರು. 12 ಸಿಕ್ಸರ್, 11 ಬೌಂಡರಿ ಸಿಡಿದರೆ, ಇತರೇ ರೂಪದಲ್ಲಿ 15 ರನ್ ಟೀಂ ಇಂಡಿಯಾಗೆ ಬಂತು.

    ಭಾರತದ ರನ್ ಏರಿದ್ದು ಹೀಗೆ:
    50 ರನ್ – 5.5 ಓವರ್
    100 ರನ್ – 12.1 ಓವರ್
    150 ರನ್ – 16.5 ಓವರ್
    200 ರನ್ – 19.5 ಓವರ್
    202 ರನ್ – 20 ಓವರ್

    ಕಾನ್ಪುರದಲ್ಲಿ ನಡೆದ ಮೊದಲ ಪಂದ್ಯವನ್ನು ಇಂಗ್ಲೆಂಡ್ 7 ವಿಕೆಟ್‍ನಿಂದ ಗೆದ್ದಿದ್ದರೆ, ನಾಗ್ಪುರದಲ್ಲಿ ನಡೆದ ಎರಡನೇ ಪಂದ್ಯವನ್ನು ಭಾರತ ಜಸ್‍ಪ್ರೀತ್ ಬುಮ್ರಾ ಅವರ ಅಮೋಘ ಬೌಲಿಂಗ್ ಪ್ರದರ್ಶನದಿಂದಾಗಿ 5ರನ್‍ಗಳ ರೋಚಕ ಜಯವನ್ನು ಸಾಧಿಸಿತ್ತು.

    ಯಜುವೇಂದ್ರ ಚಹಲ್ ಪಂದ್ಯಶ್ರೇಷ್ಠ ಮತ್ತು ಸರಣಿಯಲ್ಲಿ 8 ವಿಕೆಟ್ ಕಿತ್ತ ಹಿನ್ನೆಲೆಯಲ್ಲಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

  • ಚಿನ್ನಸ್ವಾಮಿಯಲ್ಲಿ ಸಿಕ್ಸರ್, ಬೌಂಡರಿ ಸುರಿಮಳೆ

    ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಬ್ ಏರ್ ಸೌಲಭ್ಯ ಅಳವಡಿಕೆಯಾದ ನಡೆದ ಮೊದಲ ಅಂತರಾಷ್ಟ್ರೀಯ ಪಂದ್ಯದಲ್ಲಿ ಭಾರತ ಬ್ಯಾಟ್ಸ್ ಮನ್‍ಗಳು ರನ್ ಸುರಿಮಳೆಗೈದಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಮೂರನೇಯ ಟಿ 20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ ಆರಂಭದಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡರೂ ಸುರೇಶ್ ರೈನಾ, ಧೋನಿ ಅರ್ಧಶತಕ, ಕೊನೆಯಲ್ಲಿ ಯುವರಾಜ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿದೆ.

    ಎರಡನೇ ಓವರ್‍ನ ಮೊದಲ ಎಸೆತದಲ್ಲಿ ನಾಯಕ ಕೊಹ್ಲಿ ಜೊರ್ಡನ್ ಬೌಲಿಂಗ್‍ನಲ್ಲಿ ರನೌಟ್ ಆದರು. ಆರಂಭದಲ್ಲಿ ಕುಸಿತ ಕಂಡರೂ ಎರಡನೇ ವಿಕೆಟ್‍ಗೆ ರಾಹುಲ್ ಮತ್ತು ರೈನಾ 6.1 ಓವರ್‍ನಲ್ಲಿ 61 ರನ್ ಕಲೆ ಹಾಕಿ ಭದ್ರವಾದ ಇನ್ನಿಂಗ್ಸ್ ಕಟ್ಟಿದರು.

    22 ರನ್(18 ಎಸೆತ, 2 ಬೌಂಡರಿ, 1ಸಿಕ್ಸರ್) ಗಳಿಸಿದ್ದ ರಾಹುಲ್ ಔಟಾದಾಗ ತಂಡದ ಮೊತ್ತ 65 ಆಗಿತ್ತು. ಧೋನಿ ಕ್ರೀಸ್‍ಗೆ ಬಂದ ಮೇಲೆ ಸಿಕ್ಸರ್, ಬೌಂಡರಿ ಸಿಡಿಯಲು ಆರಂಭವಾಯಿತು.

    ರೈನಾ ಮತ್ತು ಧೋನಿ 37 ಎಸೆತದಲ್ಲಿ 55 ರನ್ ಜೊತೆಯಾಟವಾಡಿದರು. 39 ಎಸೆತದಲ್ಲಿ ಅರ್ಧಶತಕ ಹೊಡೆದ ರೈನಾ ಅಂತಿಮವಾಗಿ 63 ರನ್(45 ಎಸೆತ, 2 ಬೌಂಡರಿ, 5 ಸಿಕ್ಸರ್) ಗಳಿಸಿದ್ದಾಗ ಮೊರ್ಗನ್‍ಗೆ ಕ್ಯಾಚ್ ನೀಡಿ ಹೊರ ನಡೆದರು.

    ಯುವರಾಜ್ ಬಂದ ಕೂಡಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಪರಿಣಾಮ ಜೊರ್ಡನ್ ಎಸೆದ 18ನೇ ಓವರ್ ನಲ್ಲಿ ಯುವರಾಜ್ ಮೂರು ಸಿಕ್ಸರ್ ಒಂದು ಬೌಂಡರಿ ಚಚ್ಚಿದರು. ಈ ಓವರ್‍ನಲ್ಲಿ ಧೋನಿ ಮತ್ತು ಯುವಿ 24 ರನ್ ಸೊರೆಗೈದರು. ಉತ್ತಮವಾಗಿ ಆಡುತ್ತಿದ್ದ ಯುವರಾಜ್ ಸಿಂಗ್ 27 ರನ್( 10 ಎಸೆತ, 1 ಬೌಂಡರಿ,1 ಸಿಕ್ಸರ್) ಗಳಿಸಿದ್ದಾಗ ಮಿಲ್ಸ್ ಎಸೆದ ಸ್ಲೋ ಬಾಲಿಗೆ ಕೀಪರ್‍ಗೆ ಕ್ಯಾಚ್ ನೀಡಿ ಹೊರ ನಡೆದರು. ಇವರಿಬ್ಬರು 28 ಎಸೆತದಲ್ಲಿ 57 ರನ್ ಚಚ್ಚುವ ಮೂಲಕ ತಂಡದ ಮೊತ್ತವನ್ನು 170 ರನ್‍ಗಳ ಗಡಿ ದಾಟಿಸಿದರು.

    ಧೋನಿ 56 ರನ್(36 ಎಸೆತ,5 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರೆ, 11 ರನ್(4 ಎಸೆತ, 1 ಸಿಕ್ಸರ್) ಗಳಿಸಿದ್ದ ಹಾರ್ದಿಕ್ ಪಾಂಡ್ಯಾ ಇನ್ನಿಂಗ್ಸ್ ಕೊನೆಯ ಬಾಲ್‍ನಲ್ಲಿ ರನ್ ಔಟಾದರು. ಕೊನೆಯಲ್ಲಿ ರಿಶಬ್ ಪಂತ್ 6 ರನ್ ಗಳಿಸಿ ಔಟಾಗದೇ ಉಳಿದರು.

     12 ಸಿಕ್ಸರ್, 11 ಬೌಂಡರಿ ಸಿಡಿದರೆ, ಇತರೇ ರೂಪದಲ್ಲಿ 15 ರನ್ ಟೀಂ ಇಂಡಿಯಾಗೆ ಬಂತು.

    ಭಾರತದ ರನ್ ಏರಿದ್ದು ಹೀಗೆ:
    50 ರನ್ – 5.5 ಓವರ್
    100 ರನ್ – 12.1 ಓವರ್
    150 ರನ್ – 16.5 ಓವರ್
    200 ರನ್ – 19.5 ಓವರ್
    202 ರನ್ – 20 ಓವರ್