Tag: t20

  • ವಿಶ್ವ ವಿಜೇತ ಭಾರತ- ಟಿ20 ವಿಶ್ವಕಪ್‌ಗೆ ಈಗ ಟೀಂ ಇಂಡಿಯಾ ಬಾಸ್‌

    ವಿಶ್ವ ವಿಜೇತ ಭಾರತ- ಟಿ20 ವಿಶ್ವಕಪ್‌ಗೆ ಈಗ ಟೀಂ ಇಂಡಿಯಾ ಬಾಸ್‌

    – ಬುಮ್ರಾ ಮ್ಯಾಜಿಕ್‌, ಸೂರ್ಯ ಸ್ಟನಿಂಗ್‌ ಕ್ಯಾಚ್‌
    – ಭಾರತಕ್ಕೆ ರೋಚಕ 7 ರನ್‌ ಜಯ

    ಬ್ರಿಡ್ಜ್‌ಟೌನ್‌(ಬಾರ್ಬಡೋಸ್‌): ಶತಕೋಟಿ ಭಾರತೀಯರು ಕನಸು, ಪ್ರಾರ್ಥನೆಗೆ ಕೊನೆಗೂ ಈಡೇರಿತು. 17 ವರ್ಷದ ಬಳಿಕ ಟಿ 20 ವಿಶ್ವಕಪ್‌ ಗೆಲ್ಲುವ ಭಾರತದ (Team India) ಕನಸಾಗಿದೆ. ರೋಚಕ 7 ರನ್‌ಗಳ ಜಯ ಸಾಧಿಸುವುದರೊಂದಿಗೆ ಭಾರತ ಎರಡನೇ ಬಾರಿ ಟಿ20 ವಿಶ್ವಕಪ್‌ ಚಾಂಪಿಯನ್‌ ಆಗಿ ಹೊರ ಹೊಮ್ಮಿದೆ.

    ಗೆಲ್ಲಲು 177 ರನ್‌ಗಳ ಗುರಿಯನ್ನು ಪಡೆದ ದಕ್ಷಿಣ ಆಫ್ರಿಕಾ (South Africa) ಅಂತಿಮವಾಗಿ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 169 ರನ್‌ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

    ಕೊನೆಯ 6 ಎಸೆತಗಳಲ್ಲಿ 16 ರನ್‌ ಬೇಕಿತ್ತು. ಪಾಡ್ಯ ಎಸೆದ ಮೊದಲ ಎಸೆತವನ್ನು ಮಿಲ್ಲರ್‌ ಸಿಕ್ಸರ್‌ಗೆ ಅಟ್ಟಿದರು. ಆದರೆ ಬೌಂಡರಿ ಗೆರೆಯ ಬಳಿ ಸೂರ್ಯಕುಮಾರ್‌ ಯಾದವ್‌ ಅವರು ಹಿಡಿದ ಅತ್ಯುತ್ತಮ ಕ್ಯಾಚ್‌ಗೆ ಮಿಲ್ಲರ್‌ 21 ರನ್‌ ಗಳಿಸಿ ಔಟ್‌ ಆದರು. ನಂತರ ಬಂದ ರಬಡಾ ಮೊದಲ ಎಸೆತ ಬೌಂಡರಿಗೆ ಅಟ್ಟಿದರು. ನಂತರ ಎಸೆತದಲ್ಲಿ ಲೆಗ್‌ಬೈ ಮೂಲಕ 1 ರನ್‌ ಬಂತು. ನಂತರ 1 ರನ್‌ ಒಂದು ವೈಡ್‌ ಬಂತು. ಐದನೇ ಎಸೆತದಲ್ಲಿ ಸಿಕ್ಸ್‌ ಸಿಡಿಸಲು ಹೋದ ರಬಡಾ ಕ್ಯಾಚ್‌ ನೀಡಿ ಔಟಾದ ಬೆನ್ನಲ್ಲೇ ಸಂಭ್ರಮಾಚರಣೆ ಆರಂಭವಾಯಿತು. ಕೊನೆಯ ಎಸೆತದಲ್ಲಿ ಒಂದು ರನ್‌ ಬಂತು. ಈ ಮೂಲಕ ಭಾರತ ಎರಡನೇ ಬಾರಿ ವಿಶ್ವಕಪ್‌ ಚಾಂಪಿಯನ್‌ ಪಟ್ಟ ಅಲಂಕರಿಸಿತು.

    ಟೀಂ ಇಂಡಿಯಾದಂತೆ ಆರಂಭದಲ್ಲೇ ದಕ್ಷಿಣ ಆಫ್ರಿಕಾ 2 ವಿಕೆಟ್‌ ಕಳೆದುಕೊಂಡಿತ್ತು. ಆರಂಭಿಕ ಆಟಗಾರ ರೀಜಾ ಹೆಂಡ್ರಿಕ್ಸ್ 4 ರನ್‌, ನಾಯಕ ಆಡೆನ್ ಮಾರ್ಕ್ರಾಮ್ 4 ರನ್‌ ಗಳಿಸಿ ಔಟಾಗಿದ್ದರು. 12 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದದಾಗ ಕೀಪರ್‌ ಕ್ವಿಂಟಾನ್‌ ಡಿ ಕಾಕ್‌ ಮತ್ತು ಟ್ರಿಸ್ಟಾನ್ ಸ್ಟಬ್ಸ್ ನಿಧಾನವಾಗಿ ರನ್‌ ಪೇರಿಸಿ ಆಫ್ರಿಕಾ ಇನ್ನಿಂಗ್ಸ್‌ ಕಟ್ಟ ತೊಡಗಿದರು.  ಇದನ್ನೂ ಓದಿ: ಆರಂಭದಲ್ಲೇ ಆಘಾತ – ಕೊಹ್ಲಿ, ಅಕ್ಷರ್‌ ಸಮಯೋಚಿತ ಆಟ, ಆಫ್ರಿಕಾಗೆ 177 ರನ್‌ ಟಾರ್ಗೆಟ್‌ ನೀಡಿದ ಭಾರತ

    ಮೂರನೇ ವಿಕೆಟಿಗೆ ಕ್ವಿಂಟಾನ್‌ ಡಿ ಕಾಕ್‌ ಮತ್ತು ಟ್ರಿಸ್ಟಾನ್‌ ಸ್ಟಬ್ಸ್‌ 38 ಎಸೆತಗಳಲ್ಲಿ 58 ರನ್‌ ಜೊತೆಯಾಟವಾಡಿದರು. ಸ್ಟಬ್ಸ್‌ 31 ರನ್‌ (21 ಎಸೆತ, 3 ಬೌಂಡರಿ, 1 ಸಿಕ್ಸರ್‌) ಗಳಿಸಿದ್ದಾಗ ಅಕ್ಷರ್‌ ಪಟೇಲ್‌ ಎಸೆತದಲ್ಲಿ ಬೌಲ್ಡ್‌ ಆದರು. ಕ್ವಿಂಟಾನ್‌ ಡಿ ಕಾಕ್‌ ಅವರು 39 ರನ್‌ (31 ಎಸೆತ, 4 ಬೌಂಡರಿ, 1 ಸಿಕ್ಸರ್‌), ಕ್ಲಾಸೆನ್‌ ಸ್ಫೋಟಕ 52 ರನ್‌ (27 ಎಸೆತ, 2 ಬೌಂಡರಿ, 5 ಸಿಕ್ಸರ್‌), ಡೇವಿಡ್‌ ಮಿಲ್ಲರ್‌ 21 ರನ್‌ (17 ಎಸೆತ, 1 ಬೌಂಡರಿ, 1 ಸಿಕ್ಸರ್‌) ಸಿಡಿಸಿ ಔಟ್ ಆದರು.

     

    ಹಾರ್ದಿಕ್‌ ಪಾಂಡ್ಯ 3 ವಿಕೆಟ್‌ ಕಿತ್ತರೆ ಅರ್ಶ್‌ದೀಪ್‌ ಮತ್ತು ಬುಮ್ರಾ ತಲಾ 2 ವಿಕೆಟ್‌ ಪಡೆದರು, ಅಕ್ಷರ್‌ ಪಟೇಲ್‌ 1 ವಿಕೆಟ್‌ ಕಿತ್ತರು. 59 ಎಸೆತಗಳಲ್ಲಿ 76 ರನ್‌ ಹೊಡೆದ ವಿರಾಟ್‌ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ ಜಸ್‌ಪ್ರೀತ್‌ ಬುಮ್ರಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

  • ಟಿ20 ವಿಶ್ವಕಪ್‌ ಇತಿಹಾಸದಲ್ಲಿ ಎರಡು ಬಲಿಷ್ಠ ತಂಡಗಳ ಮಧ್ಯೆ ಫೈನಲ್‌ ಪಂದ್ಯ

    ಟಿ20 ವಿಶ್ವಕಪ್‌ ಇತಿಹಾಸದಲ್ಲಿ ಎರಡು ಬಲಿಷ್ಠ ತಂಡಗಳ ಮಧ್ಯೆ ಫೈನಲ್‌ ಪಂದ್ಯ

    ಬ್ರಿಡ್ಜ್‌ಟೌನ್‌(ಬಾರ್ಬಡೋಸ್‌): ಇದೇ ಮೊದಲ ಬಾರಿಗೆ ಟಿ20 ಕ್ರಿಕೆಟ್‌ ವಿಶ್ವಕಪ್‌ (T20 World Cup) ಇತಿಹಾಸದಲ್ಲಿ ಎರಡು ಬಲಿಷ್ಠ ತಂಡಗಳ ಮಧ್ಯೆ ಫೈನಲ್‌ ಪಂದ್ಯ ನಡೆಯುತ್ತಿದೆ.

    ಹೌದು. ಭಾರತ (Team India) ಮತ್ತು ದಕ್ಷಿಣ ಆಫ್ರಿಕಾ (South Africa) ತಂಡಗಳು ಅಜೇಯವಾಗಿ ಫೈನಲ್‌ ಪ್ರವೇಶಿಸಿವೆ. ಇದುವರೆಗಿನ ಟಿ20 ಇತಿಹಾಸದಲ್ಲಿ ಎರಡು ತಂಡಗಳು ಅಜೇಯವಾಗಿ ಫೈನಲ್‌ ತಲುಪಿರುವುದು ಇದೇ ಮೊದಲು. ಎರಡು ತಂಡಗಳು ಗುಂಪು, ಸೂಪರ್‌ 8 ವಿಭಾಗದಲ್ಲಿ ಅಗ್ರಸ್ಥಾನಿಯಾಗಿ ಫೈನಲ್‌  (Final) ಪ್ರವೇಶಿಸಿವೆ.

    ದಕ್ಷಿಣ ಆಫ್ರಿಕಾ 8 ಜಯದೊಂದಿಗೆ ಫೈನಲ್‌ ಪ್ರವೇಶಿಸಿದೆ. ಗುಂಪು ಹಂತದಲ್ಲಿ ಕೆನಡಾದೊಂದಿಗಿನ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ 7 ಜಯದೊಂದಿಗೆ ಭಾರತ ಫೈನಲ್‌ ಪ್ರವೇಶಿಸಿದೆ. ಹೀಗಾಗಿ ಈ ಬಾರಿ ಯಾರೇ ಗೆದ್ದರೂ ಅಜೇಯವಾಗಿ ಟಿ20 ವಿಶ್ವಕಪ್‌ ಟ್ರೋಫಿ ಗೆದ್ದ ತಂಡ ಎಂಬ ವಿಶಿಷ್ಟ ಸಾಧನೆ ಮಾಡಲಿದೆ. ಇದನ್ನೂ ಓದಿ: ಗೆದ್ದು ಬಾ ಟೀಂ ಇಂಡಿಯಾ – 2014 ರಿಂದ 2023ವರೆಗೆ ಐಸಿಸಿ ಟೂರ್ನಿಯಲ್ಲಿ ಭಾರತ ಸಾಧನೆ ಏನು?

    ಹಾಗೆ ನೋಡಿದರೆ ಭಾರತ ಕಠಿಣ ಎದುರಾಳಿ ತಂಡಗಳನ್ನು ಮಣಿಸಿ ಫೈನಲ್‌ ಪ್ರವೇಶಿಸಿದೆ. ಲೀಗ್‌ನಲ್ಲಿ ಪಾಕಿಸ್ತಾನ, ಮಾಜಿ ಚಾಂಪಿಯನ್‌ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಸೆಮಿಯಲ್ಲಿ ಇಂಗ್ಲೆಂಡ್‌ ತಂಡವನ್ನು ಭಾರತ ಸೋಲಿಸಿದೆ. ಲೀಗ್‌ನಲ್ಲಿ ದಕ್ಷಿಣ ಆಫ್ರಿಕಾ ಬಾಂಗ್ಲಾದೇಶ, ಶ್ರೀಲಂಕಾ, ಸೂಪರ್‌ 8 ರಲ್ಲಿ ಇಂಗ್ಲೆಂಡ್‌, ವಿಂಡೀಸ್‌ ತಂಡವನ್ನು ಮಣಿಸಿದೆ. ಸೆಮಿಯಲ್ಲಿ ಅಫ್ಘಾನಿಸ್ತಾನ ದಕ್ಷಿಣ ಅಫ್ರಿಕಾಗೆ ಪ್ರಬಲ ಸ್ಪರ್ಧೆ ನೀಡಿರಲಿಲ್ಲ.

     

    ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ಟಿ20 ಕ್ರಿಕೆಟ್‌ ವಿಶ್ವಕಪ್‌ ಫೈನಲ್‌ ಪ್ರವೇಶಿಸಿದರೆ ಭಾರತ ಮೂರನೇ ಬಾರಿ ಫೈನಲ್‌ ಪ್ರವೇಶಿಸಿದೆ. 2007ರಲ್ಲಿ ಚಾಂಪಿಯನ್‌ ಆಗಿದ್ದರೆ, 2014ರಲ್ಲಿ ಲಂಕಾ ವಿರುದ್ಧ ಫೈನಲ್‌ನಲ್ಲಿ ಭಾರತ ಸೋತಿತ್ತು.

  • ಬಾಂಗ್ಲಾ ವಿರುದ್ಧ ಟೀಂ ಇಂಡಿಯಾಗೆ 60 ರನ್‌ಗಳ ಭರ್ಜರಿ ಜಯ

    ಬಾಂಗ್ಲಾ ವಿರುದ್ಧ ಟೀಂ ಇಂಡಿಯಾಗೆ 60 ರನ್‌ಗಳ ಭರ್ಜರಿ ಜಯ

    – ಅಭ್ಯಾಸ ಪಂದ್ಯದಲ್ಲಿ ಮಿಂಚಿದ ಪಾಂಡ್ಯ

    ನ್ಯೂಯಾರ್ಕ್‌: ಟಿ20 ವಿಶ್ವಕಪ್‌ (T20 World Cup) ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶದ (Bangladesh) ವಿರುದ್ಧ ಭಾರತ ಭರ್ಜರಿ 60 ರನ್‌ಗಳಿಂದ ಜಯ ಸಾಧಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿ ಭಾರತ (Team India) 5 ವಿಕೆಟ್‌ ನಷ್ಟಕ್ಕೆ 182 ರನ್‌ ಗಳಿಸಿತು. ಕಠಿಣ ಸವಾಲನ್ನು ಬೆನ್ನಟ್ಟಿದ ಬಾಂಗ್ಲಾ 9 ವಿಕೆಟ್‌ ನಷ್ಟಕ್ಕೆ 120 ರನ್‌ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

    ಬಾಂಗ್ಲಾ ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳಲು ಆರಂಭಿಸಿತು. ಮಧ್ಯಮ ಕ್ರಮಾಂಕದಲ್ಲಿ ಶಕೀಬ್‌ ಉಲ್‌ ಹಸನ್‌ 28 ರನ್‌ (34 ಎಸೆತ, 2 ಬೌಂಡರಿ), ಮಹಮದುಲ್ಲಾ 40 ರನ್‌ (28 ಎಸೆತ, 4 ಬೌಂಡರಿ, 1 ಸಿಕ್ಸರ್‌) ಹೊಡೆದ ಪರಿಣಾಮ ತಂಡದ ಮೊತ್ತ 100 ರ ಗಡಿ ದಾಟಿತ್ತು.

    ಅರ್ಶ್‌ದೀಪ್‌ ಸಿಂಗ್‌, ಶಿವಂ ದುಬೆ ತಲಾ 2 ವಿಕೆಟ್‌, ಬುಮ್ರಾ, ಸಿರಾಜ್‌, ಪಾಂಡ್ಯ, ಅಕ್ಷರ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಟೀಂ ಇಂಡಿಯಾ ರಿಷಭ್‌ ಪಂತ್‌ ಅಮೋಘ ಅರ್ಧಶತಕ ಹಾಗೂ ಹಾರ್ದಿಕ್‌ ಪಾಂಡ್ಯ ಸ್ಫೋಟಕ ಬ್ಯಾಟಿಂಗ್‌ ನೆರವಿನೊಂದಿಗೆ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 182 ರನ್‌ ಗಳಿಸಿತ್ತು.

    ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್‌ ಶರ್ಮಾ ಹಾಗೂ ಸಂಜು ಸ್ಯಾಮ್ಸನ್‌ ಜೋಡಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. 1.5 ಓವರ್‌ಗಳಲ್ಲೇ 11 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡಿತ್ತು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ರಿಷಭ್‌ ಪಂತ್‌, ಸೂರ್ಯಕುಮಾರ್‌ ಯಾದವ್‌ ಹಾಗೂ ಉಪನಾಯಕ ಹಾರ್ದಿಕ್‌ ಪಾಂಡ್ಯ ಉತ್ತಮ ಇನ್ನಿಂಗ್ಸ್‌ ಕಟ್ಟುವಲ್ಲಿ ಯಶಸ್ವಿಯಾದರು.

    ಟೀಂ ಇಂಡಿಯಾ ಪರ ನಾಯಕ ರೋಹಿತ್‌ ಶರ್ಮಾ 19 ಎಸೆತಗಳಲ್ಲಿ 23 ರನ್‌, ರಿಷಭ್‌ ಪಂತ್‌ (Rishabh Pant) 53 ರನ್‌ (32 ಎಸೆತ, 4 ಸಿಕ್ಸರ್‌, 4 ಬೌಂಡರಿ) ಚಚ್ಚಿದರೆ, ಸೂರ್ಯಕುಮಾರ್‌ ಯಾದವ್‌ 31 ರನ್‌ (18 ಎಸೆತ, 4 ಬೌಂಡರಿ), ಹಾರ್ದಿಕ್‌ ಪಾಂಡ್ಯ (Hardik Pandya) 40 ರನ್‌ (23 ಎಸೆತ, 4 ಸಿಕ್ಸರ್‌, 2 ಬೌಂಡರಿ), ಶಿವಂ ದುಬೆ 14 ರನ್‌, ರವೀಂದ್ರ ಜಡೇಜಾ 4 ರನ್‌ ಹಾಗೂ ಸಂಜು ಸ್ಯಾಮ್ಸನ್‌ 1 ರನ್‌ ಗಳಿಸಿದರು.

    ಬಾಂಗ್ಲಾ ಪರ ತನ್ವೀರ್ ಇಸ್ಲಾಂ, ಮಹಮ್ಮದುಲ್ಲಾ, ಶೋರಿಫುಲ್ ಇಸ್ಲಾಂ, ಮಹೇದಿ ಹಸನ್ ತಲಾ ಒಂದೊಂದು ವಿಕೆಟ್‌ ಕಿತ್ತರು.

  • ಟಿ20ಯಲ್ಲಿ ವಿಶ್ವದಾಖಲೆ ಬರೆದ ಡೇವಿಡ್‌ ವಾರ್ನರ್‌

    ಟಿ20ಯಲ್ಲಿ ವಿಶ್ವದಾಖಲೆ ಬರೆದ ಡೇವಿಡ್‌ ವಾರ್ನರ್‌

    ಹೋಬರ್ಟ್‌: ಆಸ್ಟ್ರೇಲಿಯಾದ (Australia) ಸ್ಫೋಟಕ ಆರಂಭಿಕ ಆಟಗಾರ ಡೇವಿಡ್‌ ವಾರ್ನರ್ (David Warner) ಅರ್ಧಶತಕ ಸಿಡಿಸುವ ಮೂಲಕ ಟಿ20 (T20) ಕ್ರಿಕೆಟ್‌ನಲ್ಲಿ ವಿಶ್ವದಾಖಲೆ (World Record) ಬರೆದಿದ್ದಾರೆ.

    ವಿಂಡೀಸ್‌ (West Indies) ವಿರುದ್ಧ 22 ಎಸೆತದಲ್ಲಿ 50 ರನ್‌ ಹೊಡೆಯುವ ಮೂಲಕ 100ನೇ ಅರ್ಧಶತಕ ಸಿಡಿಸಿದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ 100 ಅರ್ಧಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ವಾರ್ನರ್‌ ಪಾತ್ರರಾದರು.  ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಪೂಜೆ- ಯೋಗಿ ಆದಿತ್ಯನಾಥ್‌ಗೆ ಟಿಎಂಸಿ ನಾಯಕ ಎಚ್ಚರಿಕೆ

    ಎಲ್ಲಾ ಮಾದರಿಯ ಟಿ20 ಕ್ರಿಕೆಟ್‌ನಲ್ಲಿ 367 ಪಂದ್ಯಗಳ 366 ಇನ್ನಿಂಗ್ಸ್‌ನಲ್ಲಿ ಡೇವಿಡ್‌ ವಾರ್ನರ್‌ ಈ ಸಾಧನೆ ಮಾಡಿದರು. ಈ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ (Virat Kohli) ಎರಡನೇ ಸ್ಥಾನದಲ್ಲಿದ್ದಾರೆ.

    ಕೊಹ್ಲಿ 376 ಪಂದ್ಯಗಳ 359 ಇನ್ನಿಂಗ್ಸ್‌ ಆಡಿ 91 ಅರ್ಧಶತಕ ಸಿಡಿಸಿದ್ದಾರೆ. ವಿಂಡೀಸ್‌ ಆಟಗಾರ ಕ್ರಿಸ್‌ ಗೇಲ್‌ 463 ಪಂದ್ಯಗಳಿಂದ 88 ಅರ್ಧಶತಕ ಸಿಡಿಸಿ ಮೂರನೇ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಲಂಡನ್‌ ಪ್ಲಾನ್‌ ವಿಫಲವಾಗಿದೆ- ಫಲಿತಾಂಶ ಘೋಷಣೆಗೂ ಮುನ್ನ ಇಮ್ರಾನ್‌ ವಿಜಯದ ಭಾಷಣ

    11 ರನ್‌ಗಳ ಜಯ:
    ಮೊದಲ ಟಿ20 ಪಂದ್ಯಗಳಲ್ಲಿ ವಿಂಡೀಸ್‌ ವಿರುದ್ಧ 11 ರನ್‌ಗಳ ಜಯವನ್ನು ಆಸ್ಟ್ರೇಲಿಯಾ ಸಾಧಿಸಿದೆ. ಡೇವಿಡ್‌ ವಾರ್ನರ್‌ 36 ಎಸೆತ ಎದುರಿಸಿ 70 ರನ್‌(12 ಬೌಂಡರಿ, 1 ಸಿಕ್ಸರ್‌) ಹೊಡೆದು ಔಟಾದರು. ಟಿಮ್‌ ಡೇವಿಡ್‌ 37 ರನ್‌, ಜೋಶ್‌ ಇಂಗ್ಲಿಸ್‌ 39 ರನ್‌ ಹೊಡೆದರು. ಅಂತಿಮವಾಗಿ ಆಸ್ಟ್ರೇಲಿಯಾ 7 ವಿಕೆಟ್‌ ನಷ್ಟಕ್ಕೆ 213 ರನ್‌ ಗಳಿಸಿತು. ಉತ್ತಮ ಹೋರಾಟ ನೀಡಿದ ವಿಂಡೀಸ್‌ 8 ವಿಕೆಟ್‌ ನಷ್ಟಕ್ಕೆ 202 ರನ್‌ಗಳಿಸಿತು.

  • ಅಂತಾರಾಷ್ಟ್ರೀಯ ಟಿ20ಯಲ್ಲಿ 5 ಶತಕ ಸಿಡಿಸಿ ರೋಹಿತ್ ಶರ್ಮಾ ದಾಖಲೆ

    ಅಂತಾರಾಷ್ಟ್ರೀಯ ಟಿ20ಯಲ್ಲಿ 5 ಶತಕ ಸಿಡಿಸಿ ರೋಹಿತ್ ಶರ್ಮಾ ದಾಖಲೆ

    ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ಬುಧವಾರ ನಡೆದ ಅಫ್ಘಾನಿಸ್ತಾನ (Afghanistan) ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) 121 ರನ್ ಗಳಿಸುವ ಮೂಲಕ 5 ಅಂತಾರಾಷ್ಟ್ರೀಯ ಟಿ20 (T20) ಶತಕ ಸಿಡಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

    ಟಾಪ್‌ 5 T20 ಶತಕ ಬಾರಿಸಿದವರು:
    1) ರೋಹಿತ್ ಶರ್ಮಾ (ಭಾರತ) – 5
    2) ಸೂರ್ಯಕುಮಾರ್ ಯಾದವ್ (ಭಾರತ) – 4
    3) ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ) – 4
    4) ಸಬಾವೂನ್ ಡೇವಿಜಿ (ಜೆಕ್ ರಿಪಬ್ಲಿಕ್)- 3
    5) ಕಾಲಿನ್ ಮುನ್ರೊ (ನ್ಯೂಜಿಲೆಂಡ್) – 3

    ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೊದಲಿಗೆ ಭಾರತ ಕೇವಲ 4.3 ಓವರ್‌ಗಳಲ್ಲಿ 22 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿತ್ತು. ಬಳಿಕ ರೋಹಿತ್ ಶರ್ಮಾ ಹಾಗೂ ರಿಂಕು ಉತ್ತಮ ಪ್ರದರ್ಶನ ನೀಡಿ 212 ರನ್ ಗಳಿಸಿ ಅಫ್ಘಾನಿಸ್ತಾನಕ್ಕೆ 213 ರನ್‌ಗಳ ಟಾರ್ಗೆಟ್ ನೀಡಿದರು. ಇದನ್ನೂ ಓದಿ: ರೋಹಿತ್ ಶತಕ, ರಿಂಕು ಹಾಫ್ ಸೆಂಚುರಿ, ವಿರಾಟ್ ಕೊಹ್ಲಿ 0- ಆಫ್ಘನ್‍ಗೆ 213 ರನ್ ಟಾರ್ಗೆಟ್

    64 ಎಸೆತಗಳಲ್ಲಿ ಸೆಂಚುರಿ ಬಾರಿಸಿದ ರೋಹಿತ್ ಶರ್ಮಾ ನಾಲ್ಕು ಅಂತರಾಷ್ಟ್ರೀಯ ಶತಕಗಳನ್ನು ಹೊಂದಿರುವ ಸೂರ್ಯಕುಮಾರ್ ಯಾದವ್ ಮತ್ತು ಗ್ಲೆನ್ ಮ್ಯಾಕ್ಸ್‌ ವೆಲ್ ಅವರನ್ನು ಹಿಂದಿಕ್ಕಿ ಹೊಸ ಮೈಲಿಗಲ್ಲನ್ನು ಸಾಧಿಸಿದ್ದಾರೆ. ನಿಗದಿತ 20 ಓವರ್‌ ಮುಗಿದಾಗ 69 ಎಸೆತಗಳಲ್ಲಿ 11 ಬೌಂಡರಿ ಹಾಗೂ 8 ಸಿಕ್ಸರ್‌ ನೆರವಿನಿಂದ 121 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದರು. ಇದನ್ನೂ ಓದಿ: IND Vs AFG: ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ರೋಹಿತ್

    ರೋಹಿತ್‌ ಶರ್ಮಾ ನಾಯಕತ್ವ ವಹಿಸಿದ 54 ಪಂದ್ಯಗಳಲ್ಲಿ 1,648 ರನ್ ಗಳಿಸಿದ್ದರೆ, ಕೊಹ್ಲಿ ನಾಯಕನಾಗಿ 50 ಪಂದ್ಯಗಳಿಂದ 1,570 ರನ್ ಗಳಿಸಿದ್ದಾರೆ. ಇದನ್ನೂ ಓದಿ: ಜ.18ರಂದು ಚಿಕ್ಕಬಳ್ಳಾಪುರದಲ್ಲಿ T20I ಲೀಗ್ – ಕಣದಲ್ಲಿ ಅಬ್ಬರಿಸಲಿದ್ದಾರೆ ಸಚಿನ್, ಯುವಿ, ಜಯಸೂರ್ಯ

    2019ರಿಂದ ಭಾರತದಲ್ಲಿ ಆಡಿದ ಟಿ20 ಸರಣಿಯಲ್ಲಿ ಒಂದರಲ್ಲೂ ಭಾರತ ಸರಣಿಯನ್ನು ಸೋತಿಲ್ಲ. ಆಡಿದ 15 ಸರಣಿಗಳಲ್ಲಿ 13 ಸರಣಿಯನ್ನು ಗೆದ್ದಿದ್ದರೆ, ಉಳಿದ ಎರಡು ಸರಣಿ ಡ್ರಾದಲ್ಲಿ ಅಂತ್ಯಗೊಂಡಿದೆ. ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ಕ್ರಿಕೆಟಿಗ ಕೆ.ಎಲ್‌.ರಾಹುಲ್‌

  • ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 – ಭಾರತಕ್ಕೆ ಗೆಲುವು!

    ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 – ಭಾರತಕ್ಕೆ ಗೆಲುವು!

    ಮೊಹಾಲಿ: ಅಫ್ಘಾನಿಸ್ತಾನ (Afghanistan) ವಿರುದ್ಧದ ಟಿ20 (T20) ಸರಣಿಯ ಮೊದಲ ಪಂದ್ಯದಲ್ಲಿ ಭಾರತ (India) 6 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ ಭಾರತ ಅಫ್ಘಾನಿಸ್ತಾನ ವಿರುದ್ಧದ ಅಜೇಯ ಗೆಲುವಿನ ಸಾಧನೆ ಮುಂದುವರಿದಿದೆ. ಅಫ್ಘಾನಿಸ್ತಾನ ವಿರುದ್ಧ ಇದು ಭಾರತದ ಐದನೇ ಗೆಲುವು.

    ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಸರಣಿಯ ಎರಡನೇ ಪಂದ್ಯ ಜನವರಿ 14ರಂದು ಇಂದೋರ್‌ನಲ್ಲಿ ನಡೆಯಲಿದೆ.

    ಮೊಹಾಲಿಯಲ್ಲಿ ಕೊರೆಯುವ ಚಳಿ ನಡುವೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿತು. ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಇದು ಭಾರತದ ವಿರುದ್ಧ ಅಫ್ಘಾನಿಸ್ತಾನ ಅತ್ಯಧಿಕ ಮೊತ್ತವಾಗಿದೆ. 159 ರನ್ ಟಾರ್ಗೆಟ್ ಬೆನ್ನತ್ತಿದ ಭಾರತ 17.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಗೆಲುವು ಸಾಧಿಸಿತು.

    ಮೊದಲು ಬ್ಯಾಟ್ ಮಾಡಿದ ಆಫ್ಘನ್ ತಂಡಕ್ಕೆ ಮೊಹಮ್ಮದ್ ನಬಿ 27 ಬಾಲ್‌ನಲ್ಲಿ 42 ರನ್ ಗಳಿಸಿ, ಟಾಪ್ ಸ್ಕೋರರ್ ಆದರು. ಅಜ್ಮತ್ ಉಲ್ಲ ಒಮರ್ ಝೈ 29 ರನ್ ಗಳಿಸಿದರು. ಭಾರತ ತಂಡದ ಪರವಾಗಿ ಅಕ್ಷರ್ ಪಟೇಲ್ ಹಾಗೂ ಮುಕೇಶ್ ಕುಮಾರ್ 2 ವಿಕೆಟ್ ಗಳಿಸಿದರು.

    ಟೀ ಇಂಡಿಯಾ ಪರವಾಗಿ ಶಿವಂ ದುಬೆ ಅಜೇಯ 60 ರನ್ ಗಳಿಸಿ ಗೆಲುವಿನ ರೂವಾರಿಯಾದರು. 40 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 5 ಬೌಂಡರಿ ಬಾರಿಸಿದರು. ಜಿತೇಶ್ ಶರ್ಮಾ 31, ತಿಲಕ್ ವರ್ಮಾ 26, ಶುಭ್‌ಮನ್ ಗಿಲ್ 23, ರಿಂಕು ಸಿಂಗ್ ಅಜೇಯ 16 ರನ್ ಗಳಿಸಿದರು.

    ಆಫ್ಘನ್ ತಂಡದ ಪರವಾಗಿ ಮುಜೀಬ್ ಉರ್ ರಹ್ಮಾನ್ 2 ವಿಕೆಟ್ ಗಳಿಸಿದರೆ, ಒಮರ್‌ಝೈ 1 ವಿಕೆಟ್ ಪಡೆದರು. ಶಿವಂ ದುಬೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

  • ಕೊನೆಯ ಓವರ್‌ನಲ್ಲಿ 23 ರನ್‌, ಮ್ಯಾಕ್ಸಿ ಸ್ಫೋಟಕ ಶತಕ – ರನ್‌ ಮಳೆಯಲ್ಲಿ ಗೆದ್ದ ಆಸ್ಟ್ರೇಲಿಯಾ

    ಕೊನೆಯ ಓವರ್‌ನಲ್ಲಿ 23 ರನ್‌, ಮ್ಯಾಕ್ಸಿ ಸ್ಫೋಟಕ ಶತಕ – ರನ್‌ ಮಳೆಯಲ್ಲಿ ಗೆದ್ದ ಆಸ್ಟ್ರೇಲಿಯಾ

    ಗುವಾಹಟಿ: ಗ್ಲೇನ್‌ ಮ್ಯಾಕ್ಸ್‌ವೆಲ್‌ (Glenn Maxwell) ಸ್ಫೋಟಕ ಶತಕದ ನೆರವಿನಿಂದ ಆಸ್ಟ್ರೇಲಿಯಾ (Australia) ಭಾರತದ (Team India) ವಿರುದ್ಧದ ಮೂರನೇ ಟಿ20 ಪಂದ್ಯವನ್ನು ಗೆದ್ದುಕೊಂಡಿದೆ. 5 ವಿಕೆಟ್‌ಗಳ ರೋಚಕ ಜಯ ಸಾಧಿಸುವ ಮೂಲಕ ಸರಣಿಯನ್ನು ಜೀವಂತವಾಗಿರಿಸಿದೆ.

    223 ರನ್‌ಗಳ ಕಠಿಣ ಗುರಿಯನ್ನು ಪಡೆದ ಆಸ್ಟ್ರೇಲಿಯಾ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿತು. ಮ್ಯಾಕ್ಸ್‌ವೆಲ್‌ ಬೌಂಡರಿ ಸಿಡಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಆಸ್ಟ್ರೇಲಿಯಾ 5 ವಿಕೆಟ್‌ ನಷ್ಟಕ್ಕೆ 225 ರನ್‌ ಹೊಡೆಯುವ ಮೂಲಕ ಸರಣಿಯಲ್ಲಿ ಮೊದಲ ಜಯ ಸಾಧಿಸಿತು.

    13.3 ಓವರ್‌ಗಳಲ್ಲಿ 134 ರನ್‌ ಗಳಿಸಿದ್ದಾಗ ಟಿಮ್‌ ಡೇವಿಡ್‌ ಶೂನ್ಯಕ್ಕೆ ಔಟಾದಾಗ ಪಂದ್ಯ ಸ್ವಲ್ಪ ಭಾರತದ ಕಡೆ ವಾಲಿತ್ತು. ಆದರೆ ಮುರಿಯದ 6ನೇ ವಿಕೆಟಿಗೆ ಮ್ಯಾಕ್ಸ್‌ವೆಲ್‌ ಮತ್ತು ನಾಯಕ ಮ್ಯಾಥ್ಯೂ ವೇಡ್ 40 ಎಸೆತಗಳಲ್ಲಿ 91 ರನ್‌ ಚಚ್ಚಿ ಪಂದ್ಯವನ್ನು ಭಾರತದಿಂದ ಕಸಿದುಕೊಂಡರು.

    ಕೊನೆಯ 12 ಎಸೆತಗಳಲ್ಲಿ ಆಸ್ಟ್ರೇಲಿಯಾಗೆ 43 ರನ್‌ ಬೇಕಿತ್ತು. ಅಕ್ಷರ್‌ ಪಟೇಲ್‌ ಎಸೆದ ಮೊದಲ ಮೂರು ಎಸೆತಗಳಲ್ಲಿ 4,2,4 ರನ್‌ ಬಂದರೆ 4ನೇ ಎಸೆತ ನೋಬಾಲ್‌ ಆಗಿತ್ತು. ನಂತರ ಫ್ರಿ ಹಿಟ್‌ ಎಸೆತವನ್ನು ವೇಡ್‌ ಸಿಕ್ಸರ್‌ಗೆ ಅಟ್ಟಿದ್ದರು. ನಂತರ ವೇಡ್ ಸಿಂಗಲ್‌ ರನ್‌ ತೆಗೆದರೆ ಕೊನೆಯ ಎಸೆತವನ್ನು ಇಶನ್‌ ಕಿಶನ್‌ ಹಿಡಿಯದ ಕಾರಣ ಬೈ ಮೂಲಕ 4 ರನ್‌ ಆಸೀಸ್‌ ಖಾತೆಗೆ ಸೇರಿತು.

    ಪ್ರಸಿದ್ಧ್‌ ಕೃಷ್ಣ ಎಸೆದ ಕೊನೆಯ ಓವರ್‌ನಲ್ಲಿ 21 ರನ್‌ ಬೇಕಿತ್ತು. ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದ ವೇಡ್‌ ಎರಡನೇ ಎಸೆತದಲ್ಲಿ ಒಂಟಿ ರನ್‌ ತೆಗೆದರು. ಮೂರನೇ ಎಸೆತವನ್ನು ಮ್ಯಾಕ್ಸ್‌ವೆಲ್‌ ಸಿಕ್ಸರ್‌ಗೆ ಅಟ್ಟಿದರು. ಕೊನೆಯ ಮೂರು ಎಸೆದತದಲ್ಲಿ ಹ್ಯಾಟ್ರಿಕ್‌ ಬೌಂಡರಿ ಹೊಡೆಯುವ ಮೂಲಕ ಮ್ಯಾಕ್ಸ್‌ವೆಲ್‌ ತಂಡಕ್ಕೆ ಗೆಲುವು ತಂದುಕೊಟ್ಟರು.  ಇದನ್ನೂ ಓದಿ: ಆಸೀಸ್‌ ವಿರುದ್ಧ ಶತಕ ಸಿಡಿಸಿ ದಾಖಲೆ ಬರೆದ ಗಾಯಕ್‌ವಾಡ್‌

    ಮ್ಯಾಕ್ಸ್‌ವೆಲ್‌ 28 ಎಸೆತಗಳಲ್ಲಿ ಅರ್ಧಶತಕ ಹೊಡೆದರೆ 47 ಎಸೆತದಲ್ಲಿ ಶತಕ ಸಿಡಿಸಿದರು. ಅಂತಿಮವಾಗಿ ಮ್ಯಾಕ್ಸ್‌ವೆಲ್‌ ಔಟಾಗದೇ 104 ರನ್‌(48 ಎಸೆತ, 8 ಬೌಂಡರಿ, 8 ಸಿಕ್ಸರ್‌) ಹೊಡೆದರೆ ವೇಡ್‌ ಔಟಾಗದೇ 28 ರನ್(16‌ ಎಸೆತ, 3 ಬೌಂಡರಿ, 1 ಸಿಕ್ಸರ್‌) ಚಚ್ಚಿದರು. ಭಾರತ ತಂಡ ಇತರ ರೂಪದಲ್ಲಿ 15 ರನ್‌ (ಬೈ 4, ಲೆಗ್‌ ಬೈ 3, ನೋಬಾಲ್‌ 2 , ವೈಡ್‌ 6) ನೀಡಿತ್ತು. ಪ್ರಸಿದ್ಧ್‌ ಕೃಷ್ಣ 68 ರನ್‌ ನೀಡಿದರೆ ಅರ್ಶ್‌ದೀಪ್‌ ಸಿಂಗ್‌ 44 ರನ್‌ ನೀಡಿದರು. ರವಿ ಬಿಶ್ನೋಯಿ 32 ರನ್‌ ನೀಡಿ 2 ವಿಕೆಟ್‌ ಪಡೆದರು.

    ಅಕ್ಷರ್‌ ಪಟೇಲ್‌ 19ನೇ ಓವರ್‌ಲ್ಲಿ 22 ರನ್‌, ಪ್ರಸಿದ್ಧ್‌ ಕೃಷ್ಣ 20ನೇ ಓವರ್‌ನಲ್ಲಿ 23 ರನ್‌ ಬಿಟ್ಟುಕೊಟ್ಟ ಕಾರಣ ಭಾರತ ತಂಡ ಸೋಲನ್ನು ಅನುಭವಿಸಿತು. ಇದನ್ನೂ ಓದಿ: ಆಸೀಸ್‌ ವಿರುದ್ಧ ಶತಕ ಸಿಡಿಸಿ ದಾಖಲೆ ಬರೆದ ಗಾಯಕ್‌ವಾಡ್‌

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ 24 ರನ್‌ಗಳಿಸುವಷ್ಟರಲ್ಲಿ ಪ್ರಮುಖ ಎರಡು ವಿಕೆಟ್‌ ಕಳೆದುಕೊಂಡಿದ್ದರೂ ಗಾಯಕ್‌ವಾಡ್‌ ಸಿಡಿಸಿದ ಸ್ಫೋಟಕ ಶತಕದ ನೆರವಿನಿಂದ 3 ವಿಕೆಟ್‌ ನಷ್ಟಕ್ಕೆ 222 ರನ್‌ ಗಳಿಸಿತ್ತು.

    32 ಎಸೆತಗಳಲ್ಲಿ ಅರ್ಧಶತಕ ಹೊಡೆದ ಗಾಯಕ್‌ವಾಡ್‌ ನಂತರ 20 ಎಸೆತಗಳಲ್ಲಿ 50 ರನ್‌ ಸಿಡಿಸಿ ಮೊದಲ ಶತಕ ಹೊಡೆದರು. 52 ಎಸೆತಗಳಲ್ಲಿ 100 ರನ್‌ ಹೊಡೆದ ಗಾಯಕ್ವಾಡ್‌ ಮಾಕ್ಸ್‌ವೆಲ್‌ ಎಸೆದ ಕೊನೆಯ ಓವರ್‌ನಲ್ಲಿ ಮೂರು ಸಿಕ್ಸ್‌ ಮತ್ತು 2 ಬೌಂಡರಿ ಸಿಡಿಸಿದರು. ಸೂರ್ಯಕುಮಾರ್‌ ಯಾದವ್‌ 39 ರನ್‌(29 ಎಸೆತ, 5 ಬೌಂಡರಿ, 1 ಸಿಕ್ಸರ್‌), ತಿಲಕ್‌ ವರ್ಮಾ ಔಟಾಗದೇ 31 ರನ್‌ ( 24 ಎಸೆತ, 4 ಬೌಂಡರಿ) ಹೊಡೆದರು. ಅಂತಿಮವಾಗಿ ಗಾಯಕ್‌ವಾಡ್‌ ಔಟಾಗದೇ 123 ರನ್‌ (57 ಎಸೆತ, 13 ಬೌಂಡರಿ, 7 ಸಿಕ್ಸ್‌) ಚಚ್ಚಿದರು.

     

  • ಸೂರ್ಯ ಬೆಂಕಿ ಆಟ- ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ರೋಚಕ ಗೆಲುವು

    ಸೂರ್ಯ ಬೆಂಕಿ ಆಟ- ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ರೋಚಕ ಗೆಲುವು

    ವಿಶಾಖಪಟ್ಟಣ: ವಿಶ್ವಚಾಂಪಿಯನ್ ಆಸ್ಟ್ರೇಲಿಯಾ (Australia) ವಿರುದ್ಧದ ಮೊದಲ ಟಿ20 (T20) ಪಂದ್ಯದಲ್ಲಿ ಟೀಂ ಇಂಡಿಯಾ (Team India) 2 ವಿಕೆಟ್ ಗಳ ಜಯ ಗಳಿಸಿದೆ.

    ಇಲ್ಲಿನ ವೈ.ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 209ರನ್ ಗಳ ಬೃಹತ್ ಗುರಿಯನ್ನು ಭಾರತ ತಂಡ ನಿಗಧಿತ ಓವರ್‌ಗಳಲ್ಲಿ 2 ವಿಕೆಟ್ ಗಳ ಅಂತರದ ರೋಚಕ ಜಯ ದಾಖಲಿಸಿದೆ. ಇದನ್ನೂ ಓದಿ: ಟೀಂ ಇಂಡಿಯಾ ಕೋಚ್ ಆಗ್ತಾರಾ ವಿವಿಎಸ್ ಲಕ್ಷ್ಮಣ್?

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಜೋಶ್ ಇಂಗ್ಲಿಸ್ (110 ರನ್, 50 ಎಸೆತ, 11 ಬೌಂಡರಿ, 8 ಸಿಕ್ಸರ್), ಸ್ಟೀವನ್ ಸ್ಮಿತ್ (52 ರನ್, 41 ಎಸೆತ, 8 ಬೌಂಡರಿ) ಬಿರುಸಿನ ಬ್ಯಾಟಿಂಗ್‍ನಿಂದ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 208ರನ್ ಗಳಿಸಿತ್ತು.

    ಟೀಂ ಇಂಡಿಯಾ ಪರ ಅರ್ಷ್‍ದೀಪ್ ಸಿಂಗ್ (4-0-41-0), ಪ್ರಸಿದ್ದ ಕೃಷ್ಣ (4-0-50-1), ರವಿ ಬಿಷ್ಣೋಯಿ (4-0-54-1), ಅಕ್ಷರ್ ಪಟೇಲ್ (4-0-32-0), ಮುಕೇಶ್ ಕುಮಾರ್ (4-0-29-0) ರನ್ ನೀಡಿ ವಿಕೆಟ್ ಪಡೆದಿದ್ದಾರೆ.

    209 ರನ್‍ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ, ನಾಯಕ ಸೂರ್ಯ ಕುಮಾರ್ ಯಾದವ್ (80 ರನ್, 42 ಎಸೆತ, 9 ಬೌಂಡರಿ, 4 ಸಿಕ್ಸರ್), ಇಶಾನ್ ಕಿಶನ್ (58 ರನ್, 39 ಎಸೆತ, 2 ಬೌಂಡರಿ, 5 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್‍ನಿಂದ ಗೆಲುವನ್ನು ಮುಡಿಗೇರಿಸಿಕೊಂಡಿತು. ಇದನ್ನೂ ಓದಿ: ಮೊದಲ ಟಿ20 ಪಂದ್ಯದಲ್ಲೇ ಭಾರತಕ್ಕೆ ಬೃಹತ್ ಗುರಿ ನೀಡಿದ ಆಸೀಸ್

  • ಆಸೀಸ್‌ ವಿರುದ್ಧ ಸರಣಿಗೆ ಸೂರ್ಯ ನಾಯಕ – ಹಿರಿಯರಿಗೆ ವಿಶ್ರಾಂತಿ, ಲಕ್ಷ್ಮಣ್‌ ಕೋಚ್‌

    ಆಸೀಸ್‌ ವಿರುದ್ಧ ಸರಣಿಗೆ ಸೂರ್ಯ ನಾಯಕ – ಹಿರಿಯರಿಗೆ ವಿಶ್ರಾಂತಿ, ಲಕ್ಷ್ಮಣ್‌ ಕೋಚ್‌

    ಮುಂಬೈ: ವಿಶ್ವಕಪ್ ಕ್ರಿಕೆಟ್‌ (World Cup Cricket) ಮುಗಿದ ಬೆನ್ನಲ್ಲೇ ಆಸ್ಟ್ರೇಲಿಯಾ (Australia) ವಿರುದ್ಧದ ಐದು ಟಿ20 (T20) ಪಂದ್ಯಗಳ ಸರಣಿಗೆ 15 ಮಂದಿ ಸದಸ್ಯರ ಟೀಂ ಇಂಡಿಯಾ (Team India) ತಂಡವನ್ನು ಬಿಸಿಸಿಐ (BCCI) ಪ್ರಕಟಿಸಿದೆ.

    ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್​ ಯಾದವ್​ (Suryakumar Yadav) ತಂಡದ ನಾಯಕರಾಗಿದ್ದು, ವಿಶ್ವಕಪ್ ಆಡಿರುವ ಭಾರತ ತಂಡದ ಎಲ್ಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಆದರೆ ಸೂರ್ಯಕುಮಾರ್‌ ಯಾದವ್‌ ಜೊತೆಗೆ ಇಶಾನ್‌ ಕಿಶನ್‌ ಮತ್ತು ಕನ್ನಡಿಗ ಪ್ರಸಿದ್ಧ್​ ಕೃಷ್ಣಗೆ ಸ್ಥಾನ ಸಿಕ್ಕಿದೆ.

    ಶ್ರೇಯಸ್‌ ಅಯ್ಯರ್‌ (Shreyas Iyer) ಕೊನೆಯ ಎರಡು ಪಂದ್ಯ ಆಡಲಿದ್ದು, ಈ ಅವಧಿಯಲ್ಲಿ ಉಪನಾಯಕನ ಸ್ಥಾನ ತುಂಬಲಿದ್ದಾರೆ. ಮೊದಲ ಮೂರು ಪಂದ್ಯಗಳಿಗೆ ಏಷ್ಯನ್ ಗೇಮ್ಸ್​ನ ಕ್ರಿಕೆಟ್​ ತಂಡದ ನಾಯಕತ್ವ ವಹಿಸಿದ್ದ ಋತುರಾಜ್ ಗಾಯಕ್ವಾಡ್​ಗೆ ಉಪನಾಯಕನ ಸ್ಥಾನ ನೀಡಲಾಗಿದೆ. ಇದನ್ನೂ ಓದಿ: ಬೌಲಿಂಗ್‌ನಲ್ಲೂ ಕಮಾಲ್‌ – ರೋಹಿತ್‌ ಫಸ್ಟ್‌, ಶಮಿ ಸೆಕೆಂಡ್‌

    ಈ ಸರಣಿಗೆ ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ (VVS Laxman) ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಐರ್ಲೆಂಡ್ ಸರಣಿ ಆಡಿದ ಬಹುಪಾಲು ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

    ರಾಹುಲ್‌ ದ್ರಾವಿಡ್ (Rahul Dravid) ಅವರ ಅಧಿಕಾರಾವಧಿ ಅಧಿಕೃತವಾಗಿ ವಿಶ್ವಕಪ್​ನೊಂದಿಗೆ ಕೊನೆಯಾಗಿದೆ. ಮುಂದೆಯೂ ದ್ರಾವಿಡ್‌ ಕೋಚ್‌ ಆಗಿ ಮುಂದುವರೆಯುತ್ತಾರಾ ಎಂಬ ಪ್ರಶ್ನೆಗೆ ಬಿಸಿಸಿಐ ಕಡೆಯಿಂದ ಯಾವುದೇ ಉತ್ತರ ಸಿಕ್ಕಿಲ್ಲ ದನ್ನೂ ಓದಿ: ಇದೇ ಕೊನೆಯಲ್ಲ, ನಾವು ಕಪ್‌ ಗೆಲ್ಲೋವರೆಗೂ ಇದು ಮುಗಿಯಲ್ಲ – ಗಿಲ್‌ ಭಾವುಕ

    ಟೀಂ ಇಂಡಿಯಾ ಸದಸ್ಯರು
    ಸೂರ್ಯಕುಮಾರ್ ಯಾದವ್ (ನಾಯಕ), ಋತುರಾಜ್ ಗಾಯಕ್ವಾಡ್ (ಉಪನಾಯಕ), ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಶ್​ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಮುಖೇಶ್ ಕುಮಾರ್  ಇದನ್ನೂ ಓದಿ: ಅಪ್ಪಿಕೊಂಡು ಸಮಾಧಾನ ಹೇಳಿದ ಮೋದಿ – ಮತ್ತೆ ನಾವು ಪುಟಿದೇಳುತ್ತೇವೆ ಎಂದ ಶಮಿ

    ಯಾವ ದಿನ ಎಲ್ಲಿ ಪಂದ್ಯ?
    ನ.23 – ವಿಶಾಖಪಟ್ಟಣ
    ನ.26 – ತಿರುವನಂತಪುರಂ
    ನ.28 – ಗುವಾಹಟಿ
    ಡಿ.1 – ರಾಯ್‌ಪುರ
    ಡಿ.3 – ಬೆಂಗಳೂರು

     
     

  • ಟಿ20 – 6000 ರನ್ ಗಡಿ ದಾಟಿದ ಸೂರ್ಯಕುಮಾರ್

    ಟಿ20 – 6000 ರನ್ ಗಡಿ ದಾಟಿದ ಸೂರ್ಯಕುಮಾರ್

    ಮುಂಬೈ: ಮುಂಬೈ ಇಂಡಿಯನ್ಸ್ (Mumbai Indians) ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ (Suryakumar Yadav) ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ನಡೆದ ಟಿ20 (T20) ಪಂದ್ಯದಲ್ಲಿ 6,000 ರನ್‍ಗಳ ಗಡಿಯನ್ನು ದಾಟಿದ್ದಾರೆ.

    ಮುಂಬೈನಲ್ಲಿ ನಡೆದ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧದ ಐಪಿಎಲ್‌ (IPL) ಪಂದ್ಯದಲ್ಲಿ, 215 ರನ್ ಚೇಸಿಂಗ್ ವೇಳೆ ಸೂರ್ಯಕುಮಾರ್ 26 ಎಸೆತಗಳಲ್ಲಿ 57 ರನ್ ಗಳಿಸಿದರು. ಅದರಲ್ಲಿ ಏಳು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಸಿಡಿಸಿದ್ದರು. ಇದನ್ನೂ ಓದಿ: `ನಮ್ಮ ಹಸಿರು ಭೂಮಿಗಾಗಿʼ – ಪರಿಸರ ಕಾಳಜಿ ಸಂದೇಶ ಕೊಟ್ಟ RCB

    ಈ ಇನ್ನಿಂಗ್ಸ್‌ನೊಂದಿಗೆ ಅವರು 248 ಪಂದ್ಯಗಳಲ್ಲಿ ಮತ್ತು 226 ಇನ್ನಿಂಗ್ಸ್‌ಗಳಲ್ಲಿ 34.01 ಸರಾಸರಿಯಲ್ಲಿ 6,021 ರನ್ ಗಳಿಸಿದ್ದಾರೆ. ಅವರ ರನ್ 149.55 ಸ್ಟ್ರೈಕ್ ರೇಟ್‍ನಲ್ಲಿದೆ. ಸೂರ್ಯಕುಮಾರ್ ಅವರ ಕ್ರಿಕೆಟ್ ಜೀವನದಲ್ಲಿ ಮೂರು ಶತಕಗಳು ಮತ್ತು 38 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‍ನಲ್ಲಿ ಸೂರ್ಯಕುಮಾರ್ ಅವರ ಅಂತಾರಾಷ್ಟ್ರೀಯ ಮಟ್ಟದ ಅಂಕಿ ಅಂಶಗಳು ಅಭಿಮಾನಿಗಳನ್ನು ಬೆರಗುಗೊಳಿಸಿದೆ.

    ಅವರು ಟೀಂ ಇಂಡಿಯಾ (Team India) ಆಟಗಾರರಾಗಿ ಮೂರು ಶತಕಗಳು ಮತ್ತು 13 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. 2022ರ ಐಸಿಸಿ ಟಿ20 ಕ್ರಿಕೆಟರ್ ಪ್ರಶಸ್ತಿ ವಿಜೇತರಾಗಿದ್ದರು.

    ಪಂದ್ಯದಲ್ಲಿ 215 ರನ್‍ಗಳನ್ನು ಬೆನ್ನಟ್ಟಿದ ಮುಂಬೈ ಇಶಾನ್ ಕಿಶನ್‍ನನ್ನು ಬೇಗನೆ ಕಳೆದುಕೊಂಡಿತು. ಆದರೆ ನಾಯಕ ರೋಹಿತ್ ಶರ್ಮಾ 27 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 44 ರನ್ ಸೇರಿಸಿದರು. 43 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಮೂರು ಸಿಕ್ಸರ್‍ಗಳೊಂದಿಗೆ ಗ್ರೀನ್ 67 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಮೂರು ಸಿಕ್ಸರ್‍ನೊಂದಿಗೆ 57 ರನ್ ಗಳಿಸಿದರು. ಮುಂಬೈ ಉತ್ತಮ ಹೋರಾಟದ ನಡುವೆಯೂ ಸೋಲು ಕಂಡಿತು. ಪಂಜಾಬ್ ತಂಡ 13 ರನ್‍ಗಳಿಂದ ಗೆಲುವು ದಾಖಲಾಯಿತು.

    ಈ ಗೆಲುವಿನೊಂದಿಗೆ ಪಂಜಾಬ್ ಏಳು ಪಂದ್ಯಗಳಲ್ಲಿ ನಾಲ್ಕು ಗೆಲುವು ಮತ್ತು ಮೂರು ಸೋಲು ಸೇರಿ ಒಟ್ಟು ಎಂಟು ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಮುಂಬೈ ಆರು ಪಂದ್ಯಗಳಲ್ಲಿ ಮೂರು ಗೆಲುವು ಮತ್ತು ಮೂರು ಸೋಲು ಕಂಡು ಒಟ್ಟು ಆರು ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ.

    ಟಿ20ಯಲ್ಲಿ ವೇಗವಾಗಿ 6,000 ರನ್ ಗಳಿಸಿದ ಆಟಗಾರರು
    ಆಂಡ್ರೆ ರಸೆಲ್ (3,550 ಎಸೆತಗಳಿಗೆ), ಗ್ಲೆನ್ ಮ್ಯಾಕ್ಸ್‌ವೆಲ್ (3,890 ಎಸೆತ), ಕೀರಾನ್ ಪೊಲಾರ್ಡ್ (3918 ಎಸೆತ), ಕ್ರಿಸ್ ಗೇಲ್ (4,008 ಎಸೆತ), ಸೂರ್ಯಕುಮಾರ್ ಯಾದವ್ 4,017 ಎಸೆತಗಳಿಗೆ 6,000 ರನ್ ಗಳಿಸಿದ್ದಾರೆ. ಇದನ್ನೂ ಓದಿ: ಒಂದೇ ಓವರ್‌ನಲ್ಲಿ 31 ರನ್‌ ಕೊಟ್ಟ ಅರ್ಜುನ್‌ ತೆಂಡೂಲ್ಕರ್‌; ಹರ್ಷ ತಂದ ಅರ್ಷ್‌ದೀಪ್‌ – ಪಂಜಾಬ್‌ಗೆ 13 ರನ್‌ಗಳ ಜಯ