Tag: T20 World Cup

  • ಕಿವೀಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ – 3ನೇ ಬಾರಿ ಫೈನಲ್‍ಗೇರಿದ ಪಾಕ್

    ಕಿವೀಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ – 3ನೇ ಬಾರಿ ಫೈನಲ್‍ಗೇರಿದ ಪಾಕ್

    ಸಿಡ್ನಿ: ಆರಂಭಿಕ ಆಟಗಾರರಾದ ಮೊಹಮ್ಮದ್ ರಿಜ್ವಾನ್ (Mohammad Rizwan) ಮತ್ತು ಬಾಬರ್ ಅಜಮ್ (Babar Azam) ಅಬ್ಬರದಾಟದ ಮುಂದೆ ಕಿವೀಸ್ ಮಂಕಾಗಿದೆ. ಸೆಮಿಫೈನಲ್‍ನಲ್ಲಿ ನ್ಯೂಜಿಲೆಂಡ್ (New Zealand)  ವಿರುದ್ಧ ಪಾಕಿಸ್ತಾನ (Pakistan) 7 ವಿಕೆಟ್‌ಗಳ ಅಂತರದ ಭರ್ಜರಿ ಜಯದೊಂದಿಗೆ ಪ್ರಶಸ್ತಿ ಸುತ್ತಿಗೇರಿದೆ.

    ನ್ಯೂಜಿಲೆಂಡ್ ನೀಡಿದ 153 ರನ್‍ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡಕ್ಕೆ ಈ ಮೊತ್ತ ಸವಾಲಾಗಿ ಪರಿಣಮಿಸಲಿಲ್ಲ. ಆರಂಭಿಕ ಆಟಗಾರರಿಬ್ಬರೆ 105 ರನ್ ಜೊತೆಯಾಟವಾಡಿ ಪಾಕ್‍ಗೆ ಮೇಲುಗೈ ತಂದುಕೊಟ್ಟರು. ಆ ಬಳಿಕ ಅಂತಿಮವಾಗಿ ಪಾಕ್ 19.1 ಓವರ್‌ಗಳ ಅಂತ್ಯಕ್ಕೆ 3 ವಿಕೆಟ್‌ ನಷ್ಟಕ್ಕೆ 153 ರನ್‌ ಸಿಡಿಸಿ ಜಯದ ನಗೆ ಬೀರಿತು. ಇತ್ತ ಈ ಜಯದೊಂದಿಗೆ ಪಾಕಿಸ್ತಾನ ತಂಡ ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೂರನೇ ಬಾರಿ ಫೈನಲ್‍ಗೆ ಲಗ್ಗೆ ಇಟ್ಟಿದೆ. 2007ರಲ್ಲಿ ಪಾಕಿಸ್ತಾನ ರನ್ನರ್‌ ಅಪ್‌ ಆಗಿತ್ತು. 2009ರಲ್ಲಿ ಚಾಂಪಿಯನ್ ಆಗಿತ್ತು. ಇದನ್ನೂ ಓದಿ: ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿಗೆ ಬಿಜೆಪಿಯಿಂದ ಟಿಕೆಟ್?

    ಪಾಕ್ ಪರ ಬ್ಯಾಟಿಂಗ್‍ನಲ್ಲಿ ಮಿಂಚಿದ ಬಾಬರ್ ಮತ್ತು ರಿಜ್ವಾನ್ ಭರ್ಜರಿ ಆರಂಭ ನೀಡಿದರು. 2022ರ ಟಿ20 ವಿಶ್ವಕಪ್‍ನಲ್ಲಿ ಮಂಕಾಗಿದ್ದ ಈ ಜೋಡಿ ಸೆಮಿಫೈನಲ್‍ನಲ್ಲಿ ಮೊದಲ ವಿಕೆಟ್‍ಗೆ 105 ರನ್ (76 ಎಸೆತ) ಸಿಡಿಸಿ ಮೈಚಳಿ ಬಿಟ್ಟು ಆಡಿತು. ಬಾಬರ್ ಅಜಮ್ 53 ರನ್ (42 ಎಸೆತ, 7 ಬೌಂಡರಿ) ಬಾರಿಸಿ ಔಟ್ ಆದರು. ಆ ಬಳಿಕ ರಿಜ್ವಾನ್ ಜೊತೆ ಸೇರಿಕೊಂಡ ಮೊಹಮ್ಮದ್ ಹ್ಯಾರಿಸ್ ಪಾಕಿಸ್ತಾನಕ್ಕೆ ಜಯ ತಂದುಕೊಟ್ಟರು ಎನ್ನುವಷ್ಟರಲ್ಲಿ ರಿಜ್ವಾನ್ 57 ರನ್ (43 ಎಸೆತ, 5 ಬೌಂಡರಿ) ಸಿಡಿಸಿ ವಿಕೆಟ್ ಕೈಚೆಲ್ಲಿಕೊಂಡರು. ನಂತರ ಹ್ಯಾರಿಸ್ 30  ರನ್ (26 ಎಸೆತ, 2 ಬೌಂಡರಿ, 1 ಸಿಕ್ಸ್‌) ಸಿಡಿಸಿ ಗೆಲುವಿಗೆ 2 ರನ್‌ ಬೇಕಾಗಿದ್ದಾಗ ಔಟ್‌ ಆದರು. ಬಳಿಕ ಮಸೂದ್ 3 ರನ್‌ ಸಿಡಿಸಿ ಗೆಲುವಿನ ದಡ ಸೇರಿಸಿದರು. ಈ ಮೂಲಕ ಲೀಗ್ ಹಂತದಲ್ಲೇ ಹೊರಬೀಳುವ ಸ್ಥಿತಿಯಲ್ಲಿದ್ದ ಪಾಕ್ ಅದೃಷ್ಟದಿಂದ ಸೆಮಿಫೈನಲ್ ಪ್ರವೇಶಿಸಿ ಇದೀಗ ಫೈನಲ್ ಹಂತಕ್ಕೆ ತೇರ್ಗಡೆಗೊಂಡಿದೆ. ಇದನ್ನೂ ಓದಿ: ನೆಟ್ ಪ್ರಾಕ್ಟೀಸ್ ವೇಳೆ ರೋಹಿತ್ ಶರ್ಮಾ ಬಲಗೈಗೆ ಪೆಟ್ಟು – ಟೀಂ ಇಂಡಿಯಾಗೆ ಆಘಾತ

    ಈ ಮೊದಲು ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಮಾಡಲು ನಿರ್ಧರಿಸಿತ್ತು. ಈ ನಿರ್ಧಾರ ಆರಂಭದಲ್ಲೇ ತಲೆಕೆಳಗಾಯಿತು. ಆರಂಭಿಕ ಅಟಗಾರ ಫಿನ್ ಅಲೆನ್ ಕೇವಲ 4 ರನ್ (3 ಎಸೆತ, 1 ಬೌಂಡರಿ) ಸಿಡಿಸುವಷ್ಟರಲ್ಲಿ ಸುಸ್ತಾದರು. ಇನ್ನೊಂದೆಡೆ ಡೆವೂನ್ ಕಾನ್ವೇ ನಿಧಾನವಾಗಿ ಅಬ್ಬರಿಸುವ ಸೂಚನೆ ನೀಡಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಾಯಕ ಕೇನ್ ವಿಲಿಯಮ್ಸನ್ ತಂಡಕ್ಕೆ ಚೇತರಿಕೆ ನೀಡಲು ಮುಂದಾದರು. ಆದರೆ ಕಾನ್ವೇ ಆಟ 21 ರನ್ (20 ಎಸೆತ, 3 ಬೌಂಡರಿ) ಸಿಡಿಸಿ ರನೌಟ್ ಆಗುವುದರೊಂದಿಗೆ ಅಂತ್ಯಕಂಡಿತು.

    ಬಳಿಕ ಬಂದ ಗ್ಲೆನ್ ಫಿಲಿಪ್ಸ್ ಆಟ 6 ರನ್‍ಗಳಿಗೆ (8 ಎಸೆತ, 1 ಬೌಂಡರಿ) ಸೀಮಿತವಾಯಿತು. ಆ ಬಳಿಕ ಒಂದಾದ ವಿಲಿಯಮ್ಸನ್ ಮತ್ತು ಡೇರಿಲ್ ಮಿಚೆಲ್ ಅಬ್ಬರಿಸಲು ಆರಂಭಿಸಿದರು. ಇಬ್ಬರೂ ಕೂಡ ಜವಾಬ್ದಾರಿಯುತ ಬ್ಯಾಟ್ ಬೀಸಿದ ಪರಿಣಾಮ 4ನೇ ವಿಕೆಟ್‍ಗೆ 68 ರನ್ (50 ಎಸೆತ) ಜೊತೆಯಾಟ ಇವರಿಂದ ಬಂತು. ಕೇನ್ ವಿಲಿಯಮ್ಸನ್ 46 ರನ್ (42 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ವಿಕೆಟ್ ಕಳೆದುಕೊಂಡರು.

    ಅಂತಿಮವಾಗಿ ಡೇರಿಲ್ ಮಿಚೆಲ್ ಅಜೇಯ 53 ರನ್ (35 ಎಸೆತ, 3 ಬೌಂಡರಿ, 1 ಸಿಕ್ಸ್) ಮತ್ತು ಜೇಮ್ಸ್ ನಿಶಾಮ್ 16 ರನ್ (12 ಎಸೆತ, 1 ಬೌಂಡರಿ) ಬಾರಿಸಿದ ಪರಿಣಾಮ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 152 ರನ್‍ಗಳ ಸಾಧಾರಣ ಮೊತ್ತ ಪೇರಿಸಿತು. ಪಾಕಿಸ್ತಾನ ಪರ ಶಾಹೀನ್ ಆಫ್ರಿದಿ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರೆ, ಇನ್ನೊಂದು ವಿಕೆಟ್ ನವಾಝ್ ಪಾಲಾಯಿತು.

    Live Tv
    [brid partner=56869869 player=32851 video=960834 autoplay=true]

  • 2024ರ T20 ವಿಶ್ವಕಪ್‍ಗೆ 20 ತಂಡ – ಯಾವೆಲ್ಲ ತಂಡಗಳಿಗೆ ನೇರ ಪ್ರವೇಶ?

    2024ರ T20 ವಿಶ್ವಕಪ್‍ಗೆ 20 ತಂಡ – ಯಾವೆಲ್ಲ ತಂಡಗಳಿಗೆ ನೇರ ಪ್ರವೇಶ?

    ದುಬೈ: ಆಸ್ಟ್ರೇಲಿಯಾದಲ್ಲಿ (Australia) ನಡೆಯುತ್ತಿರುವ 2022ರ ಟಿ20 ವಿಶ್ವಕಪ್ (‌T20 World Cup) ಕೊನೆ ಹಂತಕ್ಕೆ ತಲುಪಿದೆ. ಇದೀಗ 2024ರ ಟಿ20 ವಿಶ್ವಕಪ್ ಬಗ್ಗೆ ಚರ್ಚೆ ಆರಂಭವಾಗಿದ್ದು, ಈ ಟೂರ್ನಿಯಲ್ಲಿ 20 ತಂಡಗಳು ಆಡಲಿದ್ದು, ಒಟ್ಟು 12 ತಂಡಗಳಿಗೆ ನೇರ ಪ್ರವೇಶ ಅವಕಾಶ ಸಿಕ್ಕಿದೆ.

    ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿ ಸಾರಥ್ಯದಲ್ಲಿ 2024ರ ಟಿ20 ವಿಶ್ವಕಪ್ ನಡೆಯಲಿದೆ. ಒಟ್ಟು 20 ತಂಡಗಳು ಭಾಗವಹಿಸಲಿದ್ದು, ಟಿ20 ವಿಶ್ವಕಪ್‍ನ 9ನೇ ಸೀಸನ್ ಐತಿಹಾಸಿಕ ಸಾಧನೆಗಾಗಿ ಹಾತೊರೆಯುತ್ತಿದೆ. ಟಿ20 ವಿಶ್ವಕಪ್‍ನ ಇತಿಹಾಸದಲ್ಲಿ ಮೊದಲ ಬಾರಿಗೆ ಒಟ್ಟು 20 ತಂಡಗಳು ಆಡಲು ಸಿದ್ಧವಾಗುತ್ತಿದೆ. 2022ರ ಟಿ20 ವಿಶ್ವಕಪ್‍ನಲ್ಲಿ ಒಟ್ಟು 16 ತಂಡಗಳು ಕಾದಾಡಿದ್ದವು. ಇದನ್ನೂ ಓದಿ: ಸೆಮಿಫೈನಲ್‍ಗೇರಿದ ನಾಲ್ಕು ತಂಡಗಳು – ಯಾರಿಗೆ ಯಾರು ಎದುರಾಳಿ, ಯಾವಾಗ ಪಂದ್ಯ?

    ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್ ಪ್ರದರ್ಶನ ಗಮನಿಸಿ ಭಾರತ (India), ನ್ಯೂಜಿಲೆಂಡ್, ಪಾಕಿಸ್ತಾನ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನೆದರ್‌ಲ್ಯಾಂಡ್, ಶ್ರೀಲಂಕಾ ಟಾಪ್ 8 ತಂಡಗಳಾಗಿ ಅರ್ಹತೆ ಪಡೆದಿದೆ. ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡ ಟಿ20 ರ್‍ಯಾಂಕಿಂಗ್ ಆಧಾರದಲ್ಲಿ ಮತ್ತು ವೆಸ್ಟ್ ಇಂಡೀಸ್, ಯುಎಸ್‍ಎ ತಂಡಗಳು ಟಿ20 ವಿಶ್ವಕಪ್ ಆತಿಥ್ಯ ವಹಿಸಿಕೊಂಡ ಕಾರಣದಿಂದ ನೇರ ಅರ್ಹತೆ ಪಡೆದುಕೊಂಡಿದೆ. ಇದು ನೇರ ಅರ್ಹತೆ ಪಡೆದ ತಂಡಗಳಾದರೆ, ಇನ್ನೂಳಿದ 6 ತಂಡಗಳು ಅರ್ಹತಾ ಸುತ್ತು ಆಡಿ ಪ್ರವೇಶ ಪಡೆಯಬೇಕಾಗಿದೆ. ಇದನ್ನೂ ಓದಿ: ರೋಹಿತ್‍ರನ್ನು ನೋಡಲೆಂದು ಮೈದಾನಕ್ಕಿಳಿದ ಅಭಿಮಾನಿಗೆ 6.5 ಲಕ್ಷ ರೂ. ಫೈನ್

    2022 ಟಿ20 ವಿಶ್ವಕಪ್‍ನ ಮೊದಲ ಸೆಮಿಫೈನಲ್‍ನಲ್ಲಿ ಗ್ರೂಪ್ 1ರ ಮೊದಲ ಸ್ಥಾನ ಪಡೆದ ನ್ಯೂಜಿಲೆಂಡ್, ಗ್ರೂಪ್ 2ರ ಎರಡನೇ ಸ್ಥಾನ ಪಡೆದ ಪಾಕಿಸ್ತಾನವನ್ನು ಸಿಡ್ನಿಯಲ್ಲಿ ನ.9 ರಂದು ಎದುರಿಸಲಿದೆ. ಎರಡನೇ ಸೆಮಿಫೈನಲ್‍ನಲ್ಲಿ ಗ್ರೂಪ್ 2ರ ಮೊದಲ ಸ್ಥಾನ ಪಡೆದ ಭಾರತ, ಗ್ರೂಪ್ 1ರ ಎರಡನೇ ಸ್ಥಾನ ಪಡೆದ ಇಂಗ್ಲೆಂಡ್ ತಂಡವನ್ನು ಆಡಿಲೇಡ್‍ನಲ್ಲಿ ನ.10 ರಂದು ಎದುರಿಸಲಿದೆ. ಇಲ್ಲಿ ಗೆದ್ದ ಎರಡು ತಂಡಗಳು ನ.13 ರಂದು ಫೈನಲ್ ಪಂದ್ಯವಾಡಲಿದೆ.

    Live Tv
    [brid partner=56869869 player=32851 video=960834 autoplay=true]

  • ರೋಹಿತ್‍ರನ್ನು ನೋಡಲೆಂದು ಮೈದಾನಕ್ಕಿಳಿದ ಅಭಿಮಾನಿಗೆ 6.5 ಲಕ್ಷ ರೂ. ಫೈನ್

    ರೋಹಿತ್‍ರನ್ನು ನೋಡಲೆಂದು ಮೈದಾನಕ್ಕಿಳಿದ ಅಭಿಮಾನಿಗೆ 6.5 ಲಕ್ಷ ರೂ. ಫೈನ್

    ಮೆಲ್ಬರ್ನ್: ಭಾರತ (India) ಹಾಗೂ ಜಿಂಬಾಬ್ವೆ (Zimbabwe) ನಡುವಿನ ಪಂದ್ಯದ ನಡುವೆ ಹಿಟ್‍ಮ್ಯಾನ್ ರೋಹಿತ್ ಶರ್ಮಾರ (Rohit Sharma) ಅಭಿಮಾನಿಯೋರ್ವ (Fan) ಮೈದಾನಕ್ಕೆ ನುಗ್ಗಿ ಬರೋಬ್ಬರಿ 6.5 ಲಕ್ಷ ರೂ. ದಂಡ (Fine) ಕಟ್ಟುವಂತಾಗಿದೆ.

    ಜಿಂಬಾಬ್ವೆ ಬ್ಯಾಟಿಂಗ್ ವೇಳೆ ರೋಹಿತ್ ಶರ್ಮಾ ಫೀಲ್ಡಿಂಗ್ ಮಾಡುತ್ತಿದ್ದರು. ಒಬ್ಬ ಬಾಲಕ ಏಕಾಏಕಿ ಭಾರತದ ಧ್ವಜ ಹಿಡಿದು ಪ್ರೇಕ್ಷಕರ ಗ್ಯಾಲರಿಯಿಂದ ಹಾರಿ ಮೈದಾನಕ್ಕೆ ಬಂದಿದ್ದಾನೆ. ಬಳಿಕ ರೋಹಿತ್ ಶರ್ಮಾ ಫೀಲ್ಡಿಂಗ್ ಮಾಡುತ್ತಿದ್ದೆಡೆಗೆ ಓಡಿದ್ದಾನೆ. ತಕ್ಷಣ ಭದ್ರತಾ ಸಿಬ್ಬಂದಿ ಬಾಲಕನನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಬಾಲಕ ಕಣ್ಣೀರಿಟ್ಟಿದ್ದಾನೆ. ರೋಹಿತ್ ಶರ್ಮಾ ಬಾಲಕನನ್ನು ಮೈದಾನಬಿಟ್ಟು ತೆರಳುವಂತೆ ಮನವಿ ಮಾಡಿಕೊಂಡಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೈದಾನಕ್ಕೆ ಬಂದ ಬಾಲಕನಿಗೆ ಮೆಲ್ಬರ್ನ್‌ ಕ್ರಿಕೆಟ್‌ ಗ್ರೌಂಡ್‌ (MCG)  6.5 ಲಕ್ಷ ರೂ. ದಂಡ ಪ್ರಯೋಗಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಸೆಮಿಫೈನಲ್‍ಗೇರಿದ ನಾಲ್ಕು ತಂಡಗಳು – ಯಾರಿಗೆ ಯಾರು ಎದುರಾಳಿ, ಯಾವಾಗ ಪಂದ್ಯ?

    ಇತ್ತ ಭಾರತ ಹಾಗೂ ಜಿಂಬಾಬ್ವೆ ನಡುವಿನ ಕಾದಾಟದಲ್ಲಿ 71 ರನ್‍ಗಳ ಭರ್ಜರಿ ಜಯದೊಂದಿಗೆ ಭಾರತ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದೆ. ಭಾರತ ನಿಡಿದ 187 ರನ್‍ಗಳ ಗುರಿ ಬೆನ್ನಟ್ಟಿದ ಜಿಂಬಾಬ್ವೆ 17.2 ಓವರ್‌ಗಳಲ್ಲಿ 115 ರನ್‍ಗಳಿಗೆ ಆಲೌಟ್ ಆಯಿತು. ಇದನ್ನೂ ಓದಿ: ಭಾರತಕ್ಕೆ 71 ರನ್‍ಗಳ ಭರ್ಜರಿ ಜಯ – ಸೆಮಿಯಲ್ಲಿ ಇಂಗ್ಲೆಂಡ್ ಎದುರಾಳಿ

    ಈ ಮೂಲಕ ಗ್ರೂಪ್ 2ರ ಮೊದಲ ಸ್ಥಾನ ಪಡೆದ ಭಾರತ, ಗ್ರೂಪ್ 1ರ ಎರಡನೇ ಸ್ಥಾನ ಪಡೆದ ಇಂಗ್ಲೆಂಡ್ (England) ನಡುವೆ ಆಡಿಲೇಡ್‍ನಲ್ಲಿ ನ.10 ರಂದು ಸೆಮಿಫೈನಲ್‌ (Semi Final) ಪಂದ್ಯ ನಡೆಯಲಿದೆ. ಇದನ್ನೂ ಓದಿ: ಒಂದೇ ವರ್ಷದಲ್ಲಿ ಟಿ20ಯಲ್ಲಿ ಗರಿಷ್ಠ ರನ್‌ – ಭಾರತದ ಪರ ದಾಖಲೆ ಬರೆದ ಸೂರ್ಯ

    Live Tv
    [brid partner=56869869 player=32851 video=960834 autoplay=true]

  • ಸೆಮಿಫೈನಲ್‍ಗೇರಿದ ನಾಲ್ಕು ತಂಡಗಳು – ಯಾರಿಗೆ ಯಾರು ಎದುರಾಳಿ, ಯಾವಾಗ ಪಂದ್ಯ?

    ಸೆಮಿಫೈನಲ್‍ಗೇರಿದ ನಾಲ್ಕು ತಂಡಗಳು – ಯಾರಿಗೆ ಯಾರು ಎದುರಾಳಿ, ಯಾವಾಗ ಪಂದ್ಯ?

    ಸಿಡ್ನಿ: ಟಿ20 ವಿಶ್ವಕಪ್ (T20 World Cup) ಪಂದ್ಯದ ಕೊನೆಯ 3 ಪಂದ್ಯಗಳಿಗೆ ವೇದಿಕೆ ಸಜ್ಜಾಗಿದೆ. ಈಗಾಗಲೇ 4 ತಂಡಗಳು ಸೆಮಿಫೈನಲ್‍ಗೆ (Semi Final) ಲಗ್ಗೆ ಇಟ್ಟಿವೆ.

    ಗ್ರೂಪ್ 1ರಲ್ಲಿ ನ್ಯೂಜಿಲೆಂಡ್ (New Zealand) ಮತ್ತು ಇಂಗ್ಲೆಂಡ್ (England) ಪ್ರವೇಶ ಪಡೆದರೆ, ಗ್ರೂಪ್ 2ರಲ್ಲಿ ಭಾರತ (India) ಹಾಗೂ ಪಾಕಿಸ್ತಾನ (Pakistan) ತಂಡಗಳು ಪ್ರವೇಶ ಪಡೆದಿದೆ. ಸಿಡ್ನಿ, ಆಡಿಲೇಡ್ ಮತ್ತು ಮೆಲ್ಬರ್ನ್‍ನಲ್ಲಿ ಸೆಮಿಫೈನಲ್ ಮತ್ತು ಫೈನಲ್ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಚೋಕರ್ಸ್ ಹಣೆಪಟ್ಟಿಯೊಂದಿಗೆ ಆಫ್ರಿಕಾ ಮನೆಗೆ – ಪಾಕ್‌ಗೆ ಖುಲಾಯಿಸಿದ ಅದೃಷ್ಟ

    ಮೊದಲ ಸೆಮಿಫೈನಲ್‍ನಲ್ಲಿ ಗ್ರೂಪ್ 1ರ ಮೊದಲ ಸ್ಥಾನ ಪಡೆದ ನ್ಯೂಜಿಲೆಂಡ್, ಗ್ರೂಪ್ 2ರ ಎರಡನೇ ಸ್ಥಾನ ಪಡೆದ ಪಾಕಿಸ್ತಾನವನ್ನು ಸಿಡ್ನಿಯಲ್ಲಿ ನ.9 ರಂದು ಎದುರಿಸಲಿದೆ. ಎರಡನೇ ಸೆಮಿಫೈನಲ್‍ನಲ್ಲಿ ಗ್ರೂಪ್ 2ರ ಮೊದಲ ಸ್ಥಾನ ಪಡೆದ ಭಾರತ, ಗ್ರೂಪ್ 1ರ ಎರಡನೇ ಸ್ಥಾನ ಪಡೆದ ಇಂಗ್ಲೆಂಡ್ ತಂಡವನ್ನು ಆಡಿಲೇಡ್‍ನಲ್ಲಿ ನ.10 ರಂದು ಎದುರಿಸಲಿದೆ. ಇಲ್ಲಿ ಗೆದ್ದ ಎರಡು ತಂಡಗಳು ಫೈನಲ್ ಪಂದ್ಯವಾಡಲಿದೆ. ಇದನ್ನೂ ಓದಿ: ಭಾರತಕ್ಕೆ 71 ರನ್‍ಗಳ ಭರ್ಜರಿ ಜಯ – ಸೆಮಿಯಲ್ಲಿ ಇಂಗ್ಲೆಂಡ್ ಎದುರಾಳಿ

    ಸೆಮಿಫೈನಲ್ ಪಂದ್ಯ ಮಳೆಯಿಂದಾಗಿ ರದ್ದಾದರೆ, ಮೀಸಲು ದಿನವನ್ನು ನಿಗದಿಪಡಿಸಲಾಗಿದೆ. ಫೈನಲ್ ಪಂದ್ಯ ಮೆಲ್ಬರ್ನ್‍ನಲ್ಲಿ ನ.13 ರಂದು ನಡೆಯಲಿದೆ. ಮಳೆಯಿಂದ ರದ್ದಾದರೆ ಫೈನಲ್ ಪಂದ್ಯಕ್ಕೂ ಮೀಸಲು ದಿನವನ್ನು ಕಲ್ಪಿಸಲಾಗಿದೆ. ಇದನ್ನೂ ಓದಿ: ಒಂದೇ ವರ್ಷದಲ್ಲಿ ಟಿ20ಯಲ್ಲಿ ಗರಿಷ್ಠ ರನ್‌ – ಭಾರತದ ಪರ ದಾಖಲೆ ಬರೆದ ಸೂರ್ಯ

    Live Tv
    [brid partner=56869869 player=32851 video=960834 autoplay=true]

  • ಭಾರತಕ್ಕೆ 71 ರನ್‍ಗಳ ಭರ್ಜರಿ ಜಯ – ಸೆಮಿಯಲ್ಲಿ ಇಂಗ್ಲೆಂಡ್ ಎದುರಾಳಿ

    ಭಾರತಕ್ಕೆ 71 ರನ್‍ಗಳ ಭರ್ಜರಿ ಜಯ – ಸೆಮಿಯಲ್ಲಿ ಇಂಗ್ಲೆಂಡ್ ಎದುರಾಳಿ

    ಮೆಲ್ಬರ್ನ್: ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತು ಕೆ.ಎಲ್ ರಾಹುಲ್ (KL Rahul)  ಬ್ಯಾಟಿಂಗ್ ವೈಭವ, ಬೌಲರ್‌ಗಳ ಸಂಘಟಿತ ಹೋರಾಟದ ಫಲವಾಗಿ ಜಿಂಬಾಬ್ವೆ (Zimbabwe)  ವಿರುದ್ಧ ಭಾರತ (India) 71 ರನ್‍ಗಳ ಭರ್ಜರಿ ಜಯ ಗಳಿಸಿದೆ. ಈ ಜಯದೊಂದಿಗೆ ಭಾರತ ಗ್ರೂಪ್ 2ರ ಟೇಬಲ್ ಟಾಪರ್ ಆಗಿ ಸೆಮಿಫೈನಲ್ ಪ್ರವೇಶಿಸಿದೆ.

    187 ರನ್‍ಗಳ ಗುರಿ ಬೆನ್ನಟ್ಟಿದ ಜಿಂಬಾಬ್ವೆಗೆ ಭಾರತದ ಬೌಲರ್‌ಗಳ ವಿಕೆಟ್ ಬೇಟೆಯ ಮುಂದೆ ನಿಲ್ಲಲಾಗದೆ 17.2 ಓವರ್‌ಗಳಲ್ಲಿ 115 ರನ್‍ಗಳಿಗೆ ಆಲೌಟ್ ಆಯಿತು. ಈ ಗೆಲುವಿನೊಂದಿಗೆ ಭಾರತ ನ.10 ರಂದು ಇಂಗ್ಲೆಂಡ್ (England) ತಂಡವನ್ನು ಸೆಮಿಫೈನಲ್‍ನಲ್ಲಿ ಎದುರಿಸಲಿದೆ. ಇದನ್ನೂ ಓದಿ: ಚೋಕರ್ಸ್ ಹಣೆಪಟ್ಟಿಯೊಂದಿಗೆ ಆಫ್ರಿಕಾ ಮನೆಗೆ – ಪಾಕ್‌ಗೆ ಖುಲಾಯಿಸಿದ ಅದೃಷ್ಟ

    ಜಿಂಬಾಬ್ವೆಗೆ ಮೊದಲ ಎಸೆತದಲ್ಲೇ ಭುವನೇಶ್ವರ್ ಕುಮಾರ್ ಶಾಕ್ ನೀಡಿದರು. ಆರಂಭಿಕ ಆಟಗಾರ ವೆಸ್ಲಿ ಮಾಧೆವೆರೆ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಯಾವೊಬ್ಬ ಬ್ಯಾಟ್ಸ್‌ಮ್ಯಾನ್‌ಗಳು ರನ್ ಪೇರಿಸುವ ಇರಾದೆಯಲ್ಲಿದ್ದಂತೆ ಕಾಣದೇ ಭಾರತದ ಬೌಲರ್‌ಗಳ ದಾಳಿಗೆ ಪಟಪಟನೆ ಉದುರಿಕೊಂಡರು. ಜಿಂಬಾಬ್ವೆ ಪರ ರಯಾನ್ ಬರ್ಲ್ 35 ರನ್ (22 ಎಸೆತ, 5 ಬೌಂಡರಿ, 1 ಸಿಕ್ಸ್) ಸಿಡಿಸಿ ವಿಕೆಟ್ ಕಳೆದುಕೊಂಡರು. ಬಳಿಕ ಒಂದೆಡೆ ಹೋರಾಟ ನಡೆಸುತ್ತಿದ್ದ ಸಿಕಂದರ್ ರಜಾ 34 ರನ್ (24 ಎಸೆತ, 3 ಬೌಂಡರಿ) ಗಳಿಸಿ ಔಟ್ ಆಗುವುದರೊಂದಿಗೆ ಜಿಂಬಾಬ್ವೆ ಗೆಲುವಿನ ಆಸೆ ಕಮರಿತು. ಅಂತಿಮವಾಗಿ 17.2 ಓವರ್‌ಗಳಲ್ಲಿ 115 ರನ್‍ಗಳಿಗೆ ಅಲೌಟ್ ಆಯಿತು.

    ಭಾರತ ಪರ ಅಶ್ವಿನ್ 3, ಮೊಹಮ್ಮದ್ ಶಮಿ ಮತ್ತು ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಪಡೆದರೆ, ಅರ್ಷದೀಪ್ ಸಿಂಗ್, ಭುವನೇಶ್ವರ್ ಕುಮಾರ್, ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದರು. ಇದನ್ನೂ ಓದಿ: ಅತ್ಯಾಚಾರ ಆರೋಪ – ಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕ ಸಿಡ್ನಿಯಲ್ಲಿ ಬಂಧನ

    ಈ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ, ರೋಹಿತ್ ಶರ್ಮಾರನ್ನು (15 ರನ್ (13 ಎಸೆತ, 2 ಬೌಂಡರಿ) ಕಳೆದುಕೊಂಡಿತು. ಇನ್ನೊಂದೆಡೆ ಕೆ.ಎಲ್ ರಾಹುಲ್ ತಮ್ಮ ಅಬ್ಬರದಾಟ ಮುಂದುವರಿಸಿದರು. ಕೆಲಕಾಲ ರಾಹುಲ್‍ಗೆ ಉತ್ತಮ ಸಾಥ್ ನೀಡಿದ ಕೊಹ್ಲಿ ಆಟ 26 ರನ್ (25 ಎಸೆತ, 2 ಬೌಂಡರಿ) ಅಂತ್ಯವಾಯಿತು. ಆದರೆ ರಾಹುಲ್ ಜೊತೆ 2ನೇ ವಿಕೆಟ್‍ಗೆ 60 ರನ್ (48 ಎಸೆತ) ಜೊತೆಯಾಟ ತಂಡಕ್ಕೆ ವರವಾಯಿತು.

    ಇತ್ತ ರಾಹುಲ್ 51 ರನ್ (35 ಎಸೆತ, 3 ಬೌಂಡರಿ, 3 ಸಿಕ್ಸ್) ಸಿಡಿಸಿ ಅರ್ಧಶತಕದ ಆಟದೊಂದಿಗೆ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕೈಚೆಲ್ಲಿಕೊಂಡರು. ಬಳಿಕ ಸೂರ್ಯಕುಮಾರ್ ವೈಲೆಂಟ್ ಆದರು. ಪಾಂಡ್ಯ ಜೊತೆ ಸೇರಿಕೊಂಡು ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದ ಸೂರ್ಯ ಆಕರ್ಷಕ ಹೊಡೆತಗಳ ಮೂಲಕ ಬೌಂಡರಿ, ಸಿಕ್ಸರ್‌ಗಳ ಮಳೆ ಸುರಿಸಿದರು.

    ಕೊನೆಯ 5 ಓವರ್‌ಗಳಲ್ಲಿ 79 ರನ್:
    ಸೂರ್ಯ ಜಿಂಬಾಬ್ವೆ ಬೌಲರ್‌ಗಳಿಗೆ ಮನಬಂದಂತೆ ಚಚ್ಚಲು ಆರಂಭಿಸಿದರೆ, ಇತ್ತ ಪಾಂಡ್ಯ 18 ರನ್ (18 ಎಸೆತ, 2 ಬೌಂಡರಿ) ಸಿಡಿಸಿ ಕೊನೆಯ ಓವರ್‌ನಲ್ಲಿ ಔಟ್ ಆದರು. ಈ ಮೊದಲು ಸೂರ್ಯ ಜೊತೆ 5ನೇ ವಿಕೆಟ್‍ಗೆ 65 ರನ್ (36 ಎಸೆತ) ಜೊತೆಯಾಟವಾಡಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಸೂರ್ಯ ಸ್ಫೋಟಕ ಆಟ ಕೊನೆಯ ಎಸೆತದ ವರೆಗೆ ಮುಂದುವರಿಯಿತು. ಸೂರ್ಯ ಅಜೇಯ 61 ರನ್ (25 ಎಸೆತ, 6 ಬೌಂಡರಿ, 4 ಸಿಕ್ಸ್) ಸಿಡಿಸಿದ ಪರಿಣಾಮ ತಂಡದ ಮೊತ್ತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186ಕ್ಕೆ ಏರಿಕೆ ಕಂಡಿತು. ಕೊನೆಯ 5 ಓವರ್‌ಗಳಲ್ಲಿ 79 ರನ್ ಹರಿದುಬಂತು.

    Live Tv
    [brid partner=56869869 player=32851 video=960834 autoplay=true]

  • ಚೋಕರ್ಸ್ ಹಣೆಪಟ್ಟಿಯೊಂದಿಗೆ ಆಫ್ರಿಕಾ ಮನೆಗೆ – ಪಾಕ್‌ಗೆ ಖುಲಾಯಿಸಿದ ಅದೃಷ್ಟ

    ಚೋಕರ್ಸ್ ಹಣೆಪಟ್ಟಿಯೊಂದಿಗೆ ಆಫ್ರಿಕಾ ಮನೆಗೆ – ಪಾಕ್‌ಗೆ ಖುಲಾಯಿಸಿದ ಅದೃಷ್ಟ

    ಆಡಿಲೇಡ್: ಟಿ20 ವಿಶ್ವಕಪ್‍ನಲ್ಲಿ (T20 World Cup) ಸೆಮಿಫೈನಲ್ ಪ್ರವೇಶಿಸುವ ಮುಕ್ತ ಅವಕಾಶ ಹೊಂದಿದ್ದ ದಕ್ಷಿಣ ಆಫ್ರಿಕಾ (South Africa), ನೆದರ್‌ಲ್ಯಾಂಡ್‌ (Netherland) ವಿರುದ್ಧ ಸೋಲಿನೊಂದಿಗೆ ಮನೆದಾರಿ ಹಿಡಿದಿದೆ. ಇತ್ತ ಆಫ್ರಿಕಾ ಸೋಲಿನ ಪ್ರಯೋಜನ ಪಡೆದ ಪಾಕಿಸ್ತಾನ (Pakistan) ತಂಡ ಬಾಂಗ್ಲಾದೇಶ (Bangladesh) ವಿರುದ್ಧದ ಗೆಲುವಿನೊಂದಿಗೆ ಅದೃಷ್ಟದಾಟದಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.

    ದಿನದ ಮೊದಲ ಆಟದಲ್ಲಿ ನೆದರ್‌ಲ್ಯಾಂಡ್‌ ವಿರುದ್ಧದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪರಾಭವಗೊಂಡು ತಮ್ಮ ತಂಡಕ್ಕಿದ್ದ ಚೋಕರ್ಸ್ ಹಣೆಪಟ್ಟಿಯನ್ನು ತೊಡೆದು ಹಾಕಲು ವಿಫಲವಾಯಿತು. ಮೊದಲು ಬ್ಯಾಟಿಂಗ್ ಮಾಡಿದ ನೆದರ್‌ಲ್ಯಾಂಡ್‌ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 158 ರನ್ ಪೇರಿಸಿತು. 159 ರನ್‍ಗಳ ಉತ್ತಮ ಮೊತ್ತವನ್ನು ಬೆನ್ನಟ್ಟಿದ ಆಫ್ರಿಕಾ ನೆದರ್‌ಲ್ಯಾಂಡ್‌ ಬೌಲರ್‌ಗಳ ಸಂಘಟಿತ ದಾಳಿಗೆ ಕಕ್ಕಾಬಿಕ್ಕಿಯಾಗಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ನೆದರ್‌ಲ್ಯಾಂಡ್‌ 13 ರನ್‍ಗಳ ಜಯದೊಂದಿಗೆ ತೃಪ್ತಿದಾಯಕ ವಿದಾಯ ಹೇಳಿತು. ಇದನ್ನೂ ಓದಿ: ಅತ್ಯಾಚಾರ ಆರೋಪ – ಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕ ಸಿಡ್ನಿಯಲ್ಲಿ ಬಂಧನ

    ಈ ಸೋಲಿನೊಂದಿಗೆ ಆಫ್ರಿಕಾ ಮನೆ ದಾರಿ ಹಿಡಿಯಿತು. ಇತ್ತ ಭಾರತ (India) ಸೆಮಿಫೈನಲ್‍ಗೆ ಪ್ರವೇಶ ಪಡೆದರೆ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಕ್ಕೆ ಸೆಮಿಫೈನಲ್ ಬಾಗಿಲು ತೆರೆದುಕೊಂಡಿತು. ಹಾಗಾಗಿ ಪಾಕ್, ಬಾಂಗ್ಲಾ ನಡುವಿನ ಕಾದಾಟ ಕುತೂಹಲ ಮೂಡಿಸಿತ್ತು. ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ ಪಾಕಿಸ್ತಾನ ತಂಡ ಬಾಂಗ್ಲಾದೇಶವನ್ನು ಬಗ್ಗುಬಡಿದು ಸೆಮಿಫೈನಲ್‍ಗೆ ಪ್ರವೇಶ ಪಡೆದಿದೆ. ಇದನ್ನೂ ಓದಿ: ಲಂಕಾ ವಿರುದ್ಧ ಜಯ – ಆಸ್ಟ್ರೇಲಿಯಾವನ್ನು ಹೊರದಬ್ಬಿ ಸೆಮಿಸ್‍ಗೆ ಎಂಟ್ರಿಕೊಟ್ಟ ಇಂಗ್ಲೆಂಡ್

    ಬಾಂಗ್ಲಾದೇಶ ನೀಡಿದ 128 ರನ್‍ಗಳ ಅಲ್ಪಮೊತ್ತವನ್ನು ಪಾಕಿಸ್ತಾನ ತಂಡ 18.1 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 128 ರನ್ ಸಿಡಿಸಿ ಇನ್ನೂ 11 ಎಸೆತ ಬಾಕಿ ಇರುವಂತೆ 5 ವಿಕೆಟ್‍ಗಳ ಅಂತರದ ಜಯ ಗಳಿಸಿ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದೆ.

    ಇದೀಗ ಸೆಮಿಫೈನಲ್‍ಗೆ ಗ್ರೂಪ್ 1ರಿಂದ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಪ್ರವೇಶ ಪಡೆದರೆ, ಗ್ರೂಪ್ 2ರಲ್ಲಿ ಭಾರತ ಹಾಗೂ ಪಾಕಿಸ್ತಾನ ಸೆಮಿಫೈನಲ್‍ಗೆ ತೇರ್ಗಡೆಗೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಅತ್ಯಾಚಾರ ಆರೋಪ – ಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕ ಸಿಡ್ನಿಯಲ್ಲಿ ಬಂಧನ

    ಅತ್ಯಾಚಾರ ಆರೋಪ – ಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕ ಸಿಡ್ನಿಯಲ್ಲಿ ಬಂಧನ

    ಕ್ಯಾನ್‌ಬೆರಾ: ಟಿ20 ವಿಶ್ವಕಪ್‌ನ (T20 World) ಶ್ರೀಲಂಕಾದ (Sri Lanka) ತಂಡದಲ್ಲಿರುವ ಕ್ರಿಕೆಟಿಗ (Cricketer) ದನುಷ್ಕಾ ಗುಣತಿಲಕ (Danushka Gunathilaka) ಅವರನ್ನು ಲೈಂಗಿಕ ದೌರ್ಜನ್ಯದ (Sexual Assault) ಆರೋಪದ ಮೇಲೆ ಆಸ್ಟ್ರೇಲಿಯಾದಲ್ಲಿ (Australia) ಬಂಧಿಸಲಾಗಿದೆ ಎಂದು ಮೂಲಗಳು ಭಾನುವಾರ ತಿಳಿಸಿದೆ.

    ನವೆಂಬರ್ 2 ರಂದು ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ತನಿಖೆಯ ಬಳಿಕ ಗುಣತಿಲಕ (31) ಅವರನ್ನು ಇಂದು ಮುಂಜಾನೆ ಬಂಧಿಸಿ, ಸಿಡ್ನಿ (Sydney) ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

    ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ತಂಡ ಸೋತಿದ್ದು, ಟೂರ್ನಿಯಿಂದ ಹೊರಬಿದ್ದಿದೆ. ಇದರ ಬೆನ್ನಲ್ಲೇ ಅತ್ಯಾಚಾರದ ಆರೋಪದಡಿ ಲಂಕಾದ ಕ್ರಿಕೆಟಿಗ ದನುಷ್ಕಾ ಗುಣತಿಲಕ ಅವರನ್ನು ಆಸ್ಟ್ರೇಲಿಯಾದಲ್ಲಿ ಬಂಧಿಸಲಾಗಿದೆ. ಇದೀಗ ಶ್ರೀಲಂಕಾದ ತಂಡ ಗುಣತಿಲಕ ಅವರನ್ನು ಬಿಟ್ಟು, ಆಸ್ಟ್ರೇಲಿಯಾವನ್ನು ತೊರೆದಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಲಂಕಾ ವಿರುದ್ಧ ಜಯ – ಆಸ್ಟ್ರೇಲಿಯಾವನ್ನು ಹೊರದಬ್ಬಿ ಸೆಮಿಸ್‍ಗೆ ಎಂಟ್ರಿಕೊಟ್ಟ ಇಂಗ್ಲೆಂಡ್

    ವರದಿಗಳ ಪ್ರಕಾರ ಸಿಡ್ನಿಯ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ಮೇಲೆ ಗುಣತಿಲಕ ಅವರನ್ನು ಬಂಧಿಸಲಾಗಿದೆ. ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಹಲವು ದಿನಗಳ ಹಿಂದೆ ಇಬ್ಬರ ಪರಿಚಯವಾಗಿದ್ದು, ನವೆಂಬರ್ 2 ರಂದು ಅವರಿಬ್ಬರು ಭೇಟಿಯಾದ ವೇಳೆ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ: ಭಾರತ-ಜಿಂಬಾಬ್ವೆ ಪಂದ್ಯ ಮಳೆಯಿಂದ ರದ್ದಾದರೆ ಯಾರಿಗೆ ಅವಕಾಶ? – ಸೆಮಿಸ್ ಲೆಕ್ಕಾಚಾರ ಹೀಗಿದೆ

    Live Tv
    [brid partner=56869869 player=32851 video=960834 autoplay=true]

  • ಲಂಕಾ ವಿರುದ್ಧ ಜಯ – ಆಸ್ಟ್ರೇಲಿಯಾವನ್ನು ಹೊರದಬ್ಬಿ ಸೆಮಿಸ್‍ಗೆ ಎಂಟ್ರಿಕೊಟ್ಟ ಇಂಗ್ಲೆಂಡ್

    ಲಂಕಾ ವಿರುದ್ಧ ಜಯ – ಆಸ್ಟ್ರೇಲಿಯಾವನ್ನು ಹೊರದಬ್ಬಿ ಸೆಮಿಸ್‍ಗೆ ಎಂಟ್ರಿಕೊಟ್ಟ ಇಂಗ್ಲೆಂಡ್

    ಸಿಡ್ನಿ: ಶ್ರೀಲಂಕಾ (Sri Lanka) ವಿರುದ್ಧ ಇಂಗ್ಲೆಂಡ್ (England) 4 ವಿಕೆಟ್‍ಗಳ ಜಯದೊಂದಿಗೆ ಟಿ20 ವಿಶ್ವಕಪ್‌ನಲ್ಲಿ (T20 World Cup) ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದೆ.

    ಶ್ರೀಲಂಕಾ ನೀಡಿದ 142 ರನ್‍ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 19.4 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 144 ರನ್ ಬಾರಿಸಿ ಇನ್ನೆರಡು ಎಸೆತ ಬಾಕಿ ಇರುವಂತೆ ಜಯಭೇರಿ ಬಾರಿಸಿತು. ಈ ಜಯದೊಂದಿಗೆ ಇಂಗ್ಲೆಂಡ್ ಗ್ರೂಪ್-1ರಲ್ಲಿ 2ನೇ ತಂಡವಾಗಿ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದೆ. ಇತ್ತ ಇಂಗ್ಲೆಂಡ್ ಗೆಲುವು ದಾಖಲಿಸುತ್ತಿದ್ದಂತೆ ಆಸ್ಟ್ರೇಲಿಯಾ (Australia) ತಂಡ ಟೂರ್ನಿಯಿಂದ ಹೊರಬಿದ್ದಿದೆ. ಈ ಮೂಲಕ ಹಾಲಿ ಚಾಂಪಿಯನ್ನರಿಗೆ ತವರಿನಲ್ಲಿ ನಿರಾಸೆಯಾಗಿದೆ. ಇದನ್ನೂ ಓದಿ: ಭಾರತ-ಜಿಂಬಾಬ್ವೆ ಪಂದ್ಯ ಮಳೆಯಿಂದ ರದ್ದಾದರೆ ಯಾರಿಗೆ ಅವಕಾಶ? – ಸೆಮಿಸ್ ಲೆಕ್ಕಾಚಾರ ಹೀಗಿದೆ

    142 ರನ್‍ಗಳ ಸಾಧಾರಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಉತ್ತಮ ಆರಂಭದ ನಡುವೆಯೂ ಕೊನೆಯಲ್ಲಿ ಪರದಾಡಿತು. ಜೋಸ್ ಬಟ್ಲರ್ 28 ರನ್ (23 ಎಸೆತ, 2 ಬೌಂಡರಿ, 1 ಸಿಕ್ಸ್) ಮತ್ತು ಅಲೆಕ್ಸ್ ಹೇಲ್ಸ್ 47 ರನ್ (30 ಎಸೆತ, 7 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದ ಬಳಿಕ ಇಂಗ್ಲೆಂಡ್ ಕುಸಿತ ಕಂಡಿತು. ಆದರೆ ಇಂಗ್ಲೆಂಡ್ ಗೆಲುವಿಗಾಗಿ ಕೊನೆಯ ಓವರ್‌ ವರೆಗೆ ಹೋರಾಡಿದ ಬೆನ್‍ಸ್ಟೋಕ್ಸ್ ಅಜೇಯ 42 ರನ್ (36 ಎಸೆತ, 2 ಬೌಂಡರಿ) ಸಿಡಿಸಿ ಸುರಕ್ಷಿತವಾಗಿ ಗೆಲುವಿನ ದಡ ಸೇರಿಸಿದರು. ಇದನ್ನೂ ಓದಿ: ಖೇಲ್ ರತ್ನ ಪ್ರಶಸ್ತಿಗೆ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಹೆಸರು ಶಿಫಾರಸು

    ಈ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಆರಂಭಿಕ ಆಟಗಾರ ಪಾತುಂ ನಿಸ್ಸಾಂಕ 67 ರನ್ (45 ಎಸೆತ, 2 ಬೌಂಡರಿ, 5 ಸಿಕ್ಸ್) ಚಚ್ಚಿದ ಪರಿಣಾಮ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 141 ರನ್ ಬಾರಿಸಿತು. ಇಂಗ್ಲೆಂಡ್ ಬೌಲರ್‌ ಮಾರ್ಕ್‍ವುಡ್ 3 ವಿಕೆಟ್ ಕಿತ್ತು ಶ್ರೀಲಂಕಾಗೆ ಬ್ಯಾಟ್ಸ್‌ಮ್ಯಾನ್‌ಗಳಿಗೆ ಲಗಾಮು ಹಾಕಿದರು.

    Live Tv
    [brid partner=56869869 player=32851 video=960834 autoplay=true]

  • ಭಾರತ-ಜಿಂಬಾಬ್ವೆ ಪಂದ್ಯ ಮಳೆಯಿಂದ ರದ್ದಾದರೆ ಯಾರಿಗೆ ಅವಕಾಶ? – ಸೆಮಿಸ್ ಲೆಕ್ಕಾಚಾರ ಹೀಗಿದೆ

    ಭಾರತ-ಜಿಂಬಾಬ್ವೆ ಪಂದ್ಯ ಮಳೆಯಿಂದ ರದ್ದಾದರೆ ಯಾರಿಗೆ ಅವಕಾಶ? – ಸೆಮಿಸ್ ಲೆಕ್ಕಾಚಾರ ಹೀಗಿದೆ

    ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ (T20 World Cup) ರೋಚಕ ಹಂತಕ್ಕೆ ತಲುಪಿದೆ. ಸೂಪರ್ 12 ಹಂತದಿಂದ ಸೆಮಿಫೈನಲ್‍ಗೇರಲು (Semi-Final) ಎಲ್ಲಾ ತಂಡಗಳು ಹರಸಾಹಸ ಪಡುತ್ತಿದೆ. ಈ ನಡುವೆ ಮಳೆಯಿಂದಾಗಿ (Rain) ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬಿದ್ದಿದೆ.

    ಇದೀಗ ಗ್ರೂಪ್ 2 ರಿಂದ ಸೆಮಿಫೈನಲ್‍ಗೇರುವ ತಂಡಗಳ ಲೆಕ್ಕಾಚಾರ ಕುತೂಹಲ ಮೂಡಿಸಿದೆ. ಭಾರತ (India), ದಕ್ಷಿಣ ಆಫ್ರಿಕಾ (South Africa), ಪಾಕಿಸ್ತಾನ (Pakistan), ಬಾಂಗ್ಲಾದೇಶ (Bangladesh) ತಂಡಗಳ ನಡುವೆ ಸೆಮಿಸ್ ರೇಸ್ ಆರಂಭಗೊಂಡಿದೆ. ಇದೀಗ ಅಂಕಪಟ್ಟಿಯಲ್ಲಿ 6 ಪಾಯಿಂಟ್‍ಗಳೊಂದಿಗೆ ನಂಬರ್ 1 ಸ್ಥಾನದಲ್ಲಿ ಭಾರತವಿದೆ. ನಂಬರ್ 2ರಲ್ಲಿ  ದಕ್ಷಿಣ ಆಫ್ರಿಕಾ, ನಂಬರ್ 3ರಲ್ಲಿ ಪಾಕಿಸ್ತಾನವಿದೆ. 4ರಲ್ಲಿ ಬಾಂಗ್ಲಾದೇಶವಿದೆ. ನಾಲ್ಕು ತಂಡಗಳಿಗೂ ಒಂದೊಂದು ಪಂದ್ಯ ಬಾಕಿ ಇದೆ. ಇದನ್ನೂ ಓದಿ: ಖೇಲ್ ರತ್ನ ಪ್ರಶಸ್ತಿಗೆ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಹೆಸರು ಶಿಫಾರಸು

    ಈ ಪೈಕಿ ಭಾರತ ತನ್ನ ಕೊನೆಯ ಪಂದ್ಯವನ್ನು ಜಿಂಬಾಬ್ವೆ ವಿರುದ್ಧ ಆಡಲಿದೆ. ಈ ಪಂದ್ಯಕ್ಕೆ ಮಳೆ ಕಾಟ ಕೊಡುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದರೆ ಎರಡೂ ತಂಡಗಳಿಗೂ ತಲಾ ಒಂದೊಂದು ಅಂಕವನ್ನು ಹಂಚಿಕೆ ಮಾಡಲಾಗುತ್ತದೆ. ಹೀಗಾದಲ್ಲಿ ಭಾರತ ತಂಡ 7 ಅಂಕಗಳೊಂದಿಗೆ ಸೆಮಿಫೈನಲ್‍ಗೆ ಭಾರತ ಲಗ್ಗೆ ಇಟ್ಟರೂ, ಅಂಕಪಟ್ಟಿಯಲ್ಲಿ ನಂಬರ್ 1 ಸ್ಥಾನ ಉಳಿಸಿಕೊಳ್ಳಲು ಕಷ್ಟವಿದೆ. ಎಲ್ಲಾದರೂ ಜಿಂಬಾಬ್ವೆ ವಿರುದ್ಧ ಭಾರತ ಗೆದ್ದರೆ, 8 ಅಂಕಗಳೊಂದಿಗೆ ನಂಬರ್ 1 ಸ್ಥಾನದಲ್ಲಿ ಉಳಿಯಲಿದೆ.

    ಇತ್ತ ಭಾರತದ ಪಂದ್ಯ ಮಳೆಯಿಂದ ರದ್ದಾದರೆ, ದಕ್ಷಿಣ ಆಫ್ರಿಕಾ ತಂಡ ನೆದರ್‌ಲ್ಯಾಂಡ್‌ ವಿರುದ್ಧ ಗೆದ್ದರೆ, ರನ್‍ರೇಟ್ ಆಧಾರದಲ್ಲಿ ದಕ್ಷಿಣ ಆಫ್ರಿಕಾ ನಂಬರ್ 1 ಸ್ಥಾನಕ್ಕೆ ಏರಬಹುದಾದ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾ ಮತ್ತು ನೆದರ್‌ಲ್ಯಾಂಡ್‌ ಪಂದ್ಯ ಮಳೆಯಿಂದ ರದ್ದಾದರೆ ಆಗ ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಅವಕಾಶವಿದೆ. ಅದರಲ್ಲೂ ಪಾಕಿಸ್ತಾನಕ್ಕೆ ಹೆಚ್ಚಿನ ಅವಕಾಶವಿದೆ. ಆದರೆ ರನ್‍ರೇಟ್ ಉತ್ತಮ ಪಡಿಸಿಕೊಳ್ಳುವ ಅನಿವಾರ್ಯತೆ ಇದೆ. ಇತ್ತ ಬಾಂಗ್ಲಾ ರನ್‍ರೇಟ್ -1.276 ಇರುವುದರಿಂದ ಅವಕಾಶ ಕಡಿಮೆ ಇದೆ. ಪಾಕ್ ಮತ್ತು ಬಾಂಗ್ಲಾ ಪಂದ್ಯ ಮಳೆಯಿಂದ ರದ್ದಾದರೆ, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸುಲಭವಾಗಿ ಸೆಮಿಫೈನಲ್‍ಗೇರಲಿದೆ. ಇದನ್ನೂ ಓದಿ: ಭಾರತವನ್ನ ಸೋಲಿಸಿದ್ರೆ ಜಿಂಬಾಬ್ವೆ ಹುಡುಗನನ್ನ ಮದ್ವೆ ಆಗ್ತೀನಿ – ಪಾಕ್ ನಟಿ ಬಂಪರ್ ಆಫರ್

    ಗ್ರೂಪ್-2ರಲ್ಲಿ ಮೊದಲ ಸ್ಥಾನ ಪಡೆದ ತಂಡ ಗ್ರೂಪ್-1 ರಲ್ಲಿ 2ನೇ ಸ್ಥಾನ ಪಡೆದ ತಂಡದೊಂದಿಗೆ ಸೆಮಿಫೈನಲ್ ಪಂದ್ಯವಾಡಲಿದೆ. ಗ್ರೂಪ್-2ರಲ್ಲಿ 2ನೇ ಸ್ಥಾನ ಪಡೆದ ತಂಡ ಗ್ರೂಪ್-1ರಲ್ಲಿ ಮೊದಲ ಸ್ಥಾನ ಪಡೆದ ತಂಡದೊಂದಿಗೆ ಸೆಮಿಫೈನಲ್ ಆಡಲಿದೆ.

    Live Tv
    [brid partner=56869869 player=32851 video=960834 autoplay=true]

  • ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ ಜೋಶುವಾ ಲಿಟಲ್

    ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ ಜೋಶುವಾ ಲಿಟಲ್

    ಆಡಿಲೇಡ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 2022ರ ಟಿ20 ವಿಶ್ವಕಪ್‍ನಲ್ಲಿ (T20 World Cup) ಐರ್ಲೆಂಡ್ (Ireland) ಬೌಲರ್ ಜೋಶುವಾ ಲಿಟಲ್ (Joshua Little) ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಜೋಶುವಾ ಲಿಟಲ್ ಹ್ಯಾಟ್ರಿಕ್ ವಿಕೆಟ್ ಪಡೆದು 2022ರ ಟಿ20 ವಿಶ್ವಕಪ್‍ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಈ ಮೊದಲು ಅರ್ಹತಾ ಸುತ್ತಿನಲ್ಲಿ ಯುಎಇಯ ಕಾರ್ತಿಕ್ ಮಯ್ಯಪ್ಪನ್ ಹ್ಯಾಟ್ರಿಕ್ ಪಡೆದಿದ್ದರು. ಇದನ್ನೂ ಓದಿ: ಆಫ್ರಿಕಾಗೆ ಸೋಲು – ಚಿಗುರಿಕೊಂಡ ಪಾಕಿಸ್ತಾನದ ಸೆಮಿಫೈನಲ್ ಕನಸು

    ಕಿವೀಸ್ ವಿರುದ್ಧ 19ನೇ ಎಸೆದ ಜೋಶುವಾ ಲಿಟಲ್ ಮೊದಲು ಕೇನ್ ವಿಲಿಯಮ್ಸನ್ ವಿಕೆಟ್ ಪಡೆದರೆ ಮುಂದಿನ ಎರಡು ಎಸೆತಗಳಲ್ಲಿ ಜೆಮ್ಮಿ ನಿಶಾಮ್ ಮತ್ತು ಮಿಚೆಲ್ ಸ್ಯಾಂಟ್ನರ್ ವಿಕೆಟ್ ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದರು. ಇದನ್ನೂ ಓದಿ: ಬಾಂಗ್ಲಾ ಸೋತ ಬಳಿಕ ಕೊಹ್ಲಿ ವಿರುದ್ಧ ಫೇಕ್ ಫೀಲ್ಡಿಂಗ್ ಆರೋಪ

     

    View this post on Instagram

     

    A post shared by ICC (@icc)

    ಈ ಪಂದ್ಯದಲ್ಲಿ ಐರ್ಲೆಂಡ್ ಸೋಲುನುಭವಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 185 ರನ್ ಬಾರಿಸಿತು. 186 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಐರ್ಲೆಂಡ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 150 ರನ್ ಗಲಿಸಲಷ್ಟೇ ಶಕ್ತವಾಯಿತು. ಈ ಮೂಲಕ 35 ರನ್‍ಗಳ ಭರ್ಜರಿ ಜಯದೊಂದಿಗೆ ಕಿವೀಸ್ ಸೆಮಿಫೈನಲ್ ಹಾದಿ ಮತ್ತಷ್ಟು ಸುಗಮಗೊಂಡಿದೆ.

    Live Tv
    [brid partner=56869869 player=32851 video=960834 autoplay=true]