Tag: T20 World Cup

  • ಟಿ20 ವಿಶ್ವಕಪ್‌: ಸ್ಕಾಟ್ಲೆಂಟ್‌ ತಂಡದ ಜೆರ್ಸಿಯಲ್ಲಿ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್‌ ಲೋಗೋ

    ಟಿ20 ವಿಶ್ವಕಪ್‌: ಸ್ಕಾಟ್ಲೆಂಟ್‌ ತಂಡದ ಜೆರ್ಸಿಯಲ್ಲಿ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್‌ ಲೋಗೋ

    ನವದೆಹಲಿ: ಟಿ20 ಕ್ರಿಕೆಟ್‌ ವಿಶ್ವಕಪ್‌ಗಾಗಿ (T20 World Cup 2024) ತನಗೆ ಪ್ರಾಯೋಜಕತ್ವ ನೀಡಿರುವ ಕರ್ನಾಟಕ ಹಾಲು ಒಕ್ಕೂಟದ ‘ನಂದಿನಿ’ (Nandini Brand) ಬ್ರ್ಯಾಂಡ್‌ ಲೋಗೋ ಇರುವ ಜೆರ್ಸಿಯನ್ನು ಸ್ಕಾಟ್ಲೆಂಡ್‌ (Scotland) ತಂಡ ಅನಾವರಣಗೊಳಿಸಿದೆ.

    ವೆಸ್ಟ್ ಇಂಡೀಸ್ ಮತ್ತು USA ನಲ್ಲಿ ನಡೆಯುವ ಪಂದ್ಯಾವಳಿ ಜೂ.2 ರಿಂದ ಆರಂಭವಾಗಲಿದೆ. ಸ್ಕಾಟ್ಲೆಂಡ್ ಪುರುಷರ ಪ್ಲೇಯಿಂಗ್ ಶರ್ಟ್‌ಗಳ ಎಡ ತೋಳಿನ ಮೇಲೆ ನಂದಿನಿ ಲೋಗೋ ಇರುತ್ತದೆ. ಲೋಗೋದಲ್ಲಿ ‘ನಂದಿನಿ’ ಎಂದು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಬರೆಯಲಾಗಿದೆ. ಇದನ್ನೂ ಓದಿ: IPL 2024: ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯದಲ್ಲಿ ಗೆದ್ದು ಬೀಗಿದ ಪಂಜಾಬ್‌ – ಕಿಂಗ್ಸ್‌ಗೆ 5 ವಿಕೆಟ್‌ಗಳ ಜಯ!

    ನಂದಿನಿ ಬ್ರಾಂಡ್‌ನಲ್ಲಿ (Nandini Milk) ತನ್ನ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ (KMF), ಟಿ20 ಕ್ರಿಕೆಟ್ ವಿಶ್ವಕಪ್‌ಗಾಗಿ (T20 World Cup 2024) ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳಿಗೆ ಪ್ರಾಯೋಜಕತ್ವ ನೀಡಿದೆ. ಪ್ರತಿ ತಂಡಕ್ಕೆ ಪ್ರಾಯೋಜಕತ್ವದ ಮೊತ್ತ ಸುಮಾರು 2.5 ಕೋಟಿ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.

    ಜೂನ್‌ 1 ರಿಂದ 18ರ ವರೆಗೆ ಗುಂಪು ಹಂತದ ಪಂದ್ಯಗಳು ನಡೆಯಲಿದೆ. ಜೂನ್‌ 19 ರಿಂದ 24ರ ವರೆಗೆ ಸೂಪರ್‌-8 ಪಂದ್ಯಗಳು, ಜೂನ್‌ 26 ಮತ್ತು ಜೂನ್‌ 27 ರಂದು ಸೆಮಿಫೈನಲ್‌ ಪಂದ್ಯಗಳು ನಡಯೆಲಿದ್ದು, ಜೂನ್‌ 29ರಂದು ಬಾರ್ಬಡೋಸ್ ಮೈದಾನದಲ್ಲಿ ಫೈನಲ್‌ ಪಂದ್ಯ ನಡೆಯಲಿದೆ. ಗುಂಪು ಹಂತದಲ್ಲಿ ಭಾರತ ಎದುರಿಸುವ 4 ಪಂದ್ಯಗಳ ಪೈಕಿ ಮೂರು ಪಂದ್ಯಗಳು ನ್ಯೂಯಾರ್ಕ್‌ ನಗರದಲ್ಲಿ, ಒಂದು ಪಂದ್ಯ ಫ್ಲೋರಿಡಾ ನಗರದಲ್ಲಿ ನಡೆಯಲಿದೆ. ಗುಂಪು ಹಂತದಲ್ಲಿ ಜೂನ್‌ 5 ರಂದು ಐರ್ಲೆಂಡ್‌ ವಿರುದ್ಧ, ಜೂನ್‌ 12 ರಂದು ಯುಎಸ್‌ಎ ವಿರುದ್ಧ, ಜೂನ್‌ 15 ರಂದು ಕೆನಡಾ ವಿರುದ್ಧ ಭಾರತ ತಂಡ ಸೆಣಸಲಿದೆ. ಇನ್ನೂ ಬಹು ನಿರೀಕ್ಷಿತ ಹೈವೋಲ್ಟೇಜ್‌ ಕದನದಲ್ಲಿ ಜೂನ್‌ 9 ರಂದು ಪಾಕಿಸ್ತಾನ ವಿರುದ್ಧ ನ್ಯೂಯಾರ್ಕ್‌ನ ಅಂಗಳದಲ್ಲಿ ಭಾರತ ಸೆಣಸಲಿದೆ. ಇದನ್ನೂ ಓದಿ: ಹೈವೋಲ್ಟೇಜ್ ಕದನ ವಾಷ್‌ಔಟ್‌ ಆಗುವ ಸಾಧ್ಯತೆ – ಆರ್‌ಸಿಬಿ ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ!

    ಯಾವ ಗುಂಪಿನಲ್ಲಿ-ಯಾವ ತಂಡಗಳು?
    ಗುಂಪು-ಎ:
    ಭಾರತ, ಪಾಕಿಸ್ತಾನ, ಐರ್ಲೆಂಡ್‌, ಕೆನಡಾ, ಯುಎಸ್‌ಎ

    ಗ್ರೂಪ್‌-ಬಿ:
    ಇಂಗ್ಲೆಂಡ್‌, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್‌ಲೆಂಡ್‌, ಒಮನ್‌

    ಗ್ರೂಪ್‌-ಸಿ:
    ನ್ಯೂಜಿಲೆಂಡ್‌, ವೆಸ್ಟ್‌ ಇಂಡೀಸ್‌, ಅಫ್ಘಾನಿಸ್ತಾನ, ಉಗಾಂಡ, ಪಪುವಾ ನ್ಯೂ ಗಿನಿಯಾ

    ಗ್ರೂಪ್‌-ಡಿ:
    ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲೆಂಡ್ಸ್‌, ನೇಪಾಳ

  • T20 World Cup: ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಕ್ರಿಕೆಟಿಗರಿಗೆ ಲಕ್ಷ ಲಕ್ಷ ಬಹುಮಾನ ಘೋಷಿಸಿದ ಪಾಕ್‌!

    T20 World Cup: ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಕ್ರಿಕೆಟಿಗರಿಗೆ ಲಕ್ಷ ಲಕ್ಷ ಬಹುಮಾನ ಘೋಷಿಸಿದ ಪಾಕ್‌!

    – ಈ ಬಾರಿ ಪಾಕ್‌ ವಿಶ್ವಕಪ್‌ ಗೆಲ್ಲಲಿದೆ, ಇದು ದೇವರ ಇಚ್ಛೆ ಎಂದ ಪಿಸಿಬಿ ಮುಖ್ಯಸ್ಥ

    ಇಸ್ಲಾಮಾಬಾದ್‌: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪಾಕಿಸ್ತಾನ ದಯನೀಯ ಸ್ಥಿತಿ ತಲುಪಿದೆ. ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ. 1 ಕಿಲೋ ಗೋಧಿ ಹಿಟ್ಟಿಗೆ 800 ಪಾಕಿಸ್ತಾನಿ ರೂ.ಗಳು, 1 ರೊಟ್ಟಿಯ ಬೆಲೆ 25 ಪಾಕಿಸ್ತಾನಿ ರೂ. ತಲುಪಿದೆ. ಪೆಟ್ರೋಲ್‌ ದರವಂತು ಹೇಳತೀರದಾಗಿದೆ. ಹೀಗಿದ್ದರೂ ಕ್ರಿಕೆಟ್‌ ಆಟಗಾರರಿಗೆ (Pak Cricketers) ಬಂಪರ್‌ ಬಹುಮಾನ ಘೋಷಿಸಿದೆ.

    ಹೌದು. ಜೂನ್‌ ತಿಂಗಳಲ್ಲಿ ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ (T20 World Cup) ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಗೆದ್ದರೆ ತಂಡದ ಪ್ರತಿ ಆಟಗಾರನಿಗೂ 1 ಲಕ್ಷ US ಡಾಲರ್‌ (ಭಾರತದ ರೂಪಾಯಿ 83.44 ಲಕ್ಷ ರೂ.) ಬಹುಮಾನ ನೀಡುವುದಾಗಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಘೋಷಣೆ ಮಾಡಿದೆ.

    ಪಾಕ್‌ ತಂಡವು ಐರ್ಲೆಂಡ್‌ ಮತ್ತು ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಗೆ ಹೊರಡುವ ಮುನ್ನ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ (Mohsin Naqvi) ಆಟಗಾರರೊಂದಿಗೆ 2 ಗಂಟೆಗಳ ಕಾಲ ಸಮಾಲೋಚನೆ ನಡೆಸಿದರು. ಈ ವೇಳೆ ಬಹುಮಾನದ ಮೊತ್ತವನ್ನು ಘೋಷಣೆ ಮಾಡಿದರಲ್ಲದೇ ವಿಶ್ವಕಪ್‌ ಟ್ರೋಫಿ ಎತ್ತಿ ಹಿಡಿಯುವ ಘನತೆಗೆ ಹೋಲಿಸಿದ್ರೆ, ಈ ಹಣ ಏನೇನು ಅಲ್ಲ. ಆದ್ದರಿಂದ ಟಿ20 ವಿಶ್ವಕಪ್‌ ಗೆದ್ದರೆ ತಂಡದ ಪ್ರತಿಯೊಬ್ಬ ಆಟಗಾರನಿಗೂ 100,000 ಯುಎಸ್‌ ಡಾಲರ್‌ ಬಹುಮಾನ ನೀಡುವುದಾಗಿ ಘೋಷಿಸಿದ್ದೇವೆ ಎಂದು ತಿಳಿಸಿದರು.

    ಇದೇ ವೇಳೆ ಆಟಗಾರರಿಗೆ ಖಡಕ್‌ ಸೂಚನೆ ನೀಡಿದ ಪಿಸಿಬಿ ಮುಖ್ಯಸ್ಥ, ಸದ್ಯಕ್ಕೆ ನೀವು ಯಾರ ಬಗ್ಗೆಯೂ ಕಾಳಜಿ ವಹಿಸಬೇಡಿ, ತಂಡಕ್ಕಾಗಿ, ದೇಶಕ್ಕಾಗಿ ಆಡುವ ಬಗ್ಗೆ ಮಾತ್ರ ಗಮನಹರಿಸಿ. ತಂಡದಲ್ಲಿ ಎಲ್ಲಾ ಆಟಗಾರರು ಒಗ್ಗಟ್ಟಾಗಿದ್ದಾರೆ, ವೇಗಿ ಶಾಹೀನ್ ಶಾ ಆಫ್ರಿದಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ಭರವಸೆಯೂ ನಮಗಿದೆ. ಈ ಸಲ ಟ್ರೋಫಿ ಗೆಲ್ಲಬೇಕು ಎಂಬುದು ದೇವರ ಇಚ್ಚೆ. ಖಚಿತವಾಗಿ ನಮ್ಮ ತಂಡ ಗೆಲುವು ಸಾಧಿಸುತ್ತದೆ. ಈ ದೇಶವು ನಿಮ್ಮ ಮೇಲೆ ಸಾಕಷ್ಟು ನಿರೀಕ್ಷೆಯಿಟ್ಟಿದೆ. ಅವುಗಳನ್ನು ಯಾವುದೇ ಕಾರಣಕ್ಕೂ ಹುಸಿಗೊಳಿಸಬಾರದು ಎಂದು ಸಲಹೆ ನೀಡಿದರು.

    ಇದೇ ವೇಳೆ ವಿಕೆಟ್‌ ಕೀಪರ್‌-ಬ್ಯಾಟರ್‌ ಮೊಹಮ್ಮದ್‌ ರಿಜ್ವಾನ್‌ ಟಿ20 ಕ್ರಿಕೆಟ್‌ನಲ್ಲಿ 3,000 ರನ್‌ ಪೂರೈಸಿದ್ದರ ನೆನಪಿಗಾಗಿ ಕೆಲ ಆಟಗಾರರಿಗೆ ಪಾಕ್‌ ತಂಡದ ಜೆರ್ಸಿಯನ್ನು ವಿತರಿಸಲಾಯಿತು.

  • ಟಿ20 ವಿಶ್ವಕಪ್‌ ತಂಡದಿಂದ ರಾಹುಲ್‌ ಬಿಟ್ಟಿದ್ದೇಕೆ? ಕೊಹ್ಲಿ ಸ್ಟ್ರೈಕ್‌ರೇಟ್‌ ಬಗ್ಗೆ ರೋಹಿತ್‌ ಹೇಳಿದ್ದೇನು?

    ಟಿ20 ವಿಶ್ವಕಪ್‌ ತಂಡದಿಂದ ರಾಹುಲ್‌ ಬಿಟ್ಟಿದ್ದೇಕೆ? ಕೊಹ್ಲಿ ಸ್ಟ್ರೈಕ್‌ರೇಟ್‌ ಬಗ್ಗೆ ರೋಹಿತ್‌ ಹೇಳಿದ್ದೇನು?

    – ಮೀಸಲು ಆಟಗಾರನಾಗಿ ರಿಂಕು ಆಯ್ಕೆ ಬಗ್ಗೆ ರೋಹಿತ್‌, ಅಗರ್ಕರ್‌ ನೀಡಿದ ಸ್ಪಷ್ಟನೆ ಏನು?

    ಮುಂಬೈ: ಮುಂಬರುವ 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಭಾರತ ತಂಡದ ಆಯ್ಕೆ ಕುರಿತು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್‌ ಅಗರ್ಕರ್‌ ಹಾಗೂ ರೋಹಿತ್‌ ಶರ್ಮಾ (Rohit Sharma) ಸ್ಪಷ್ಟನೆ ನೀಡಿದ್ದಾರೆ. ಕೊಹ್ಲಿ ಸ್ಟ್ರೈಕ್‌ರೇಟ್‌? ಮೀಸಲು ಆಟಗಾರನಾಗಿ ರಿಂಕು ಆಯ್ಕೆ, ತಂಡದಿಂದ ಕೆ.ಎಲ್‌ ರಾಹುಲ್‌ (KL Rahul) ಅವರನ್ನು ಕೈಬಿಟ್ಟಿದ್ದೇಕೆ? ಈ ಎಲ್ಲ ವಿಚಾರಗಳ ಬಗ್ಗೆಯೂ ಅವರು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಮ್ಯಾಚ್‌ ಫಿನಿಷರ್‌ ರಿಂಕು ಸಿಂಗ್‌ಗೆ ಏಕೆ ಅವಕಾಶ ನೀಡಲಾಗಿಲ್ಲ ಎಂಬ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

    ಕೆ.ಎಲ್‌ ರಾಹುಲ್‌ ಕೈಬಿಟ್ಟಿದ್ದೇಕೆ?
    ಸದ್ಯ ಐಪಿಎಲ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ಕೆ.ಎಲ್‌ ರಾಹುಲ್‌ ಉತ್ತಮ ಪ್ರದರ್ಶನವನ್ನೇ ನೀಡುತ್ತಿದ್ದಾರೆ. ಆದರೆ ನಮಗೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಅಗತ್ಯತ್ತು. ಆದ್ದರಿಂದ ರಿಷಭ್‌ ಪಂತ್‌, ಸಂಜು ಸ್ಯಾಮ್ಸನ್‌ ಅವರನ್ನು ತಂಡಕ್ಕೆ ಆಯ್ಕೆ ಮಾಡಿದ್ದೇವೆ. ರಾಹುಲ್‌ಗೆ ಮುಂದೆ ಉತ್ತಮ ಅವಕಾಶಗಳಿವೆ ಎಂದು ರೋಹಿತ್‌, ಅಗರ್ಕರ್‌ ತಿಳಿಸಿದ್ದಾರೆ.

    ರಿಂಕು ಸಿಂಗ್‌ ಅವರನ್ನು ಕಡೆಗಣಿಸಿದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಚೀಫ್‌ ಸೆಲೆಕ್ಟರ್‌ ಅಜಿತ್‌ ಅಗರ್ಕರ್ ಮಾತನಾಡಿ, ರಿಂಕು ಸಿಂಗ್‌ ಅವರನ್ನು ಕೈ ಬಿಟ್ಟ ನಿರ್ಧಾರ ಕಠಿಣವಾಗಿತ್ತು. ಏಕೆಂದರೆ, ವೆಸ್ಟ್ ಇಂಡೀಸ್‌ ಹಾಗೂ ಅಮೆರಿಕ ಕಂಡೀಷನ್ಸ್ ಬಗ್ಗೆ ನಮಗೆ ಗೊತ್ತಿಲ್ಲ. ಈ ಕಾರಣದಿಂದ ನಾವು ಹೆಚ್ಚಿನ ಬೌಲಿಂಗ್‌ ಆಯ್ಕೆಗಳನ್ನು ಉಳಿಸಿಕೊಂಡಿದ್ದೇವೆ ಎಂದಿದ್ದಾರೆ.

    ರಿಂಕು ತಪ್ಪು ಮಾಡಿಲ್ಲ:
    ಆಯ್ಕೆಯ ಸಂಧರ್ಭದಲ್ಲಿ ನಾವು ಕೆಲ ಕಠಿಣ ಸಂಗತಿಗಳನ್ನು ಎದುರಿಸಿದ್ದೇವೆ. ರಿಂಕು ಸಿಂಗ್‌ (Rinku Singh) ಯಾವುದೇ ತಪ್ಪು ಮಾಡಿಲ್ಲ ಹಾಗೂ ಶುಭಮನ್ ಗಿಲ್‌ ಕೂಡ ಅಷ್ಟೇ. ಇಲ್ಲಿ ಸಂಯೋಜನೆ ಪ್ರಮುಖ ಸಂಗತಿಯಾಗಿದೆ. ಅಲ್ಲಿನ ಕಂಡೀಷನ್ಸ್ ಹೇಗಿದೆ? ಎಂದು ನಮಗೆ ಇನ್ನೂ ಗೊತ್ತಿಲ್ಲ ಎಂದು ರೋಹಿತ್‌ ಶರ್ಮಾ ಹೇಳಿದ್ದಾರೆ. ಟಿ20 ವಿಶ್ವಕಪ್‌ ಭಾರತ ತಂಡದಿಂದ ರಿಂಕು ಸಿಂಗ್‌ ಅವರನ್ನು ಕೈ ಬಿಟ್ಟಿರುವುದು ಅನಿರೀಕ್ಷಿತ ಕರೆ. ಏಕೆಂದರೆ, ಹೆಚ್ಚುವರಿ ಬೌಲರ್ ಇದ್ದರೆ, ನಮಗೆ ಟೂರ್ನಿಯಲ್ಲಿ ನೆರವಾಗಬಹುದು ಎಂಬುದು ನಮ್ಮ ತಂತ್ರವಾಗಿದೆ ಹಾಗಾಗಿ ನಾಲ್ವರು ಸ್ಪಿನ್ನರ್‌ಗಳನ್ನು ಉಳಿಸಿಕೊಂಡಿದ್ದೇವೆ ಎಂದು ಅಗರ್ಕರ್‌ ಹೇಳಿದ್ದಾರೆ.

    ರಿಂಕು ಸಿಂಗ್ ರೀತಿ ಬ್ಯಾಕೆಂಡ್‌ನಲ್ಲಿ ಸ್ಪೋಟಕ ಬ್ಯಾಟ್‌ ಮಾಡುವ ಆಟಗಾರ ಇಲ್ಲವೆಂದು ನಾನು ನಂಬುತ್ತೇನೆ. ರಿಂಕು ಆಯ್ಕೆಯಾಗದೇ ಇರಲು ಅವರದು ಯಾವುದೇ ತಪ್ಪಿಲ್ಲ. ಗರಿಷ್ಠ 15 ಆಟಗಾರರಲ್ಲಿ ಇಬ್ಬರು ವಿಕೆಟ್‌ ಕೀಪರ್‌ಗಳೇ ಭಯಾನಕ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಈ ಕಾರಣದಿಂದಾಗಿಯೇ ಹಚ್ಚುವರಿ ಬೌಲರ್‌ಗಳನ್ನು ತೆಗೆದುಕೊಂಡಿದ್ದೇವೆ. ಆದರೆ, ಮೀಸಲು ಆಟಗಾರನಾಗಿ ಅವರು ತಂಡದ ಜೊತೆ ಪ್ರಯಾಣ ಬೆಳೆಸಲಿದ್ದಾರೆ. ಆದರೆ, ದಿನದಾಂತ್ಯಕ್ಕೆ ತಂಡಕ್ಕೆ ಕೇವಲ 15 ಆಟಗಾರರನ್ನು ಮಾತ್ರ ಆಯ್ಕೆ ಮಾಡಬೇಕಾಗುತ್ತದೆ ಎಂದು ಅಜಿತ್‌ ಅಗರ್ಕರ್‌ (Ajit Agarkar) ತಿಳಿಸಿದ್ದಾರೆ.

    ಕೊಹ್ಲಿ ಸಮರ್ಥಿಸಿಕೊಂಡ ಅಗರ್ಕರ್‌:
    ವಿರಾಟ್ ಕೊಹ್ಲಿ ಎಲ್ಲಾ ಸ್ವರೂಪಗಳಲ್ಲಿ ದೊಡ್ಡ ಮಟ್ಟದ ಸ್ಕೋರ್ ಮಾಡುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಅವರ ಸ್ಟ್ರೈಕ್ ರೇಟ್​ ಕಾರಣಕ್ಕೆ ಟೀಕೆಗಳನ್ನು ಎದುರಿಸುತ್ತಿದ್ದಾರೆ. ವರದಿಗಳ ಪ್ರಕಾರ ಆಯ್ಕೆದಾರರು ಈ ವರ್ಷದ ಆರಂಭದಲ್ಲಿ ಅವರನ್ನು ಟಿ20ಐ ತಂಡಕ್ಕೆ ಮರಳಿ ಕರೆಸಿಕೊಳ್ಳುವ ಮೊದಲು ತಂಡದ ಬೇಡಿಕೆಗಳಿಗೆ ಅನುಗುಣವಾಗಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಲು ಹೇಳಲಾಗಿತ್ತು. ಅದೇ ಷರತ್ತಿನ ಮೇರೆಗೆ ಅವರಿಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ರೋಹಿತ್‌ ಅವರನ್ನೂ ಕೇಳಲಾಗಿತ್ತು. ಆದರೆ, ಅವರು ಜೋರಾಗಿ ನಕ್ಕು ಇದೊಂದು ಚರ್ಚೆಯ ವಿಷಯವೇ ಅಲ್ಲ ಎಂಬುದಾಗಿ ಹೇಳಿದ್ದಾರೆ.

  • ಟಿ20 ವಿಶ್ವಕಪ್‍ಗೆ ಟೀಂ ಇಂಡಿಯಾ ಪ್ರಕಟ – ಯಾರಿಗೆಲ್ಲ ಸ್ಥಾನ?

    ಟಿ20 ವಿಶ್ವಕಪ್‍ಗೆ ಟೀಂ ಇಂಡಿಯಾ ಪ್ರಕಟ – ಯಾರಿಗೆಲ್ಲ ಸ್ಥಾನ?

    ಮುಂಬೈ: ಮುಂಬರುವ ಟಿ20 ವಿಶ್ವಕಪ್‍ಗಾಗಿ (T20 World Cup) ಟೀಂ ಇಂಡಿಯಾ (Team India)  15 ಮಂದಿ ಆಟಗಾರರ ತಂಡವನ್ನು ಪ್ರಕಟಿಸಿದೆ.

    ಯಾರಿಗೆಲ್ಲ ಸ್ಥಾನ?
    ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪ ನಾಯಕ), ಯಶಸ್ವಿ ಜೈಶ್ವಾಲ್, ವಿರಾಟ್ ಕೊಹ್ಲಿ, ಎಸ್.ದುಬೆ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ಮಹಮ್ಮದ್ ಸಿರಾಜ್, ವಿಕೆಟ್ ಕೀಪರ್‌ಗಳಾಗಿ ರಿಷಬ್ ಪಂತ್, ಎಸ್.ಸ್ಯಾಮ್ಸನ್ ಇರಲಿದ್ದಾರೆ.

    ಮೀಸಲು ಆಟಗಾರು:
    ಶುಭಮನ್ ಗಿಲ್, ಖಲೀಲ್ ಅಹ್ಮದ್, ರಿಂಕು ಸಿಂಗ್, ಅವೇಶ್ ಖಾನ್

    ವಿಶ್ವಕಪ್ ಕ್ರಿಕೆಟ್ ಪಂದ್ಯಗಳು ಜೂನ್ 1 ರಿಂದ ಪ್ರಾರಂಭವಾಗಲಿದ್ದು ಅಮೆರಿಕ ಮತ್ತು ವೆಸ್ಟ್ ಇಂಡೀಸ್‍ನಲ್ಲಿ ನಡೆಯಲಿದೆ. ಈ ಮೂಲಕ ಮೊದಲ ಬಾರಿಗೆ ಅಮೆರಿಕದ ಅಂಗಳದಲ್ಲಿ ವಿಶ್ವಕಪ್ ಕ್ರಿಕೆಟ್ ನಡೆಯಲಿದೆ.

    ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಈಗಾಗಲೇ ಪ್ರಕಟಿಸಿದ್ದು, ಜೂನ್ 9 ರಂದು ಭಾರತ ಹಾಗೂ ಪಾಕಿಸ್ತಾನದ ನಡುವೆ ಪಂದ್ಯ ನಡೆಯಲಿದೆ.

  • T20 ವಿಶ್ವಕಪ್‌ಗೆ ಶೀಘ್ರದಲ್ಲೇ ಭಾರತ ತಂಡ ಪ್ರಕಟ; ರೋಹಿತ್‌ ಜೊತೆಗೆ ಆರಂಭಿಕ ಯಾರಾಗ್ತಾರೆ ಅನ್ನೋದೇ ಸಸ್ಪೆನ್ಸ್‌!

    T20 ವಿಶ್ವಕಪ್‌ಗೆ ಶೀಘ್ರದಲ್ಲೇ ಭಾರತ ತಂಡ ಪ್ರಕಟ; ರೋಹಿತ್‌ ಜೊತೆಗೆ ಆರಂಭಿಕ ಯಾರಾಗ್ತಾರೆ ಅನ್ನೋದೇ ಸಸ್ಪೆನ್ಸ್‌!

    ನವದೆಹಲಿ: 2024ರ ಐಸಿಸಿ ಟಿ20 ವಿಶ್ವಕಪ್‌ (T20 World Cup 2024) ಟೂರ್ನಿ ಈ ಬಾರಿ ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಅಜಿತ್‌ ಅಗರ್ಕರ್‌ ಸಾರಥ್ಯದ ಆಯ್ಕೆ ಸಮಿತಿ ಶೀಘ್ರದಲ್ಲೇ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ದೆಹಲಿಯಲ್ಲಿ ಬಿಸಿಸಿಐ ಆಯ್ಕೆಗಾರರನ್ನು ಭೇಟಿಯಾಗಲಿದ್ದಾರೆ.

    ಶನಿವಾರ (ಏ.27) ದೆಹಲಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ (DC vs MI) ಕಣಕ್ಕಿಳಿಯಲಿದೆ. ಪಂದ್ಯ ಮುಗಿದ ಬಳಿಕ ರೋಹಿತ್‌ ಶರ್ಮಾ (Rohit Sharma) ಆಯ್ಕೆ ಸಮಿತಿ ಮುಖ್ಯಸ್ಥರನ್ನು ಭೇಟಿಯಾಗಲಿದ್ದು, ಆಟಗಾರರ ಬಗ್ಗೆ ಚರ್ಚಿಸಲಾಗುತ್ತದೆ. ಮೊದಲಿಗೆ ತಾತ್ಕಾಲಿಕ ತಂಡವನ್ನು ಪ್ರಕಟಿಸಲು ಮೇ 1 ಕೊನೆಯದಿನವಾಗಿದೆ. ಆದ್ದರಿಂದ ಯಾವುದೇ ಕ್ಷಣದಲ್ಲಿ ತಂಡವನ್ನು ಅಂತಿಮಗೊಳಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ರನ್‌ ಮಳೆಯಲ್ಲಿ ಪಂಜಾಬ್‌ಗೆ 8 ವಿಕೆಟ್‌ಗಳ ಜಯ – ಚೇಸಿಂಗ್‌ನಲ್ಲಿ ಆರ್‌ಸಿಬಿ ದಾಖಲೆ ಸರಿಗಟ್ಟಿದ ಕಿಂಗ್ಸ್‌

    ಪ್ರಸಕ್ತ ಟಿ20 ವಿಶ್ವಕಪ್‌ ಟೂರ್ನಿಯ ನಿಮಿತ್ತ 2024ರ ಐಪಿಎಲ್‌ (IPL 2024) ಟೂರ್ನಿಯು ಎಲ್ಲಾ ಆಟಗಾರರಿಗೆ ಅತ್ಯಂತ ಮಹತ್ವದ್ದಾಗಿದೆ. ಈ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಆಟಗಾರರನ್ನ ಟಿ20 ವಿಶ್ವಕಪ್‌ ಟೂರ್ನಿಗೆ ಭಾರತ ತಂಡ ಪರಿಗಣಿಸುವ ಸಾಧ್ಯತೆಯಿದೆ. ರೋಹಿತ್‌ ಶರ್ಮಾ ತಂಡದ ನಾಯಕನಾಗಿ ಮುನ್ನಡೆಸುವುದು ಬಹುತೇಕ ಖಚಿತವಾಗಿದೆ. ಅದರೊಂದಿಗೆ 15 ಆಟಗಾರರ ಸಂಭಾವ್ಯ ಪಟ್ಟಿಯನ್ನೂ ಸಿದ್ಧಪಡಿಸಲಾಗಿದೆ. ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ಕೃನಾಲ್‌ ಪಾಂಡ್ಯ ಪತ್ನಿ

    ಗುಜರಾತ್‌ ಟೈಟಾನ್ಸ್‌ ತಂಡದ ಕ್ಯಾಪ್ಟನ್‌ ಆದ ನಂತರ ಶುಭಮನ್‌ ಗಿಲ್‌ ಅವರು ಬ್ಯಾಟಿಂಗ್‌ ಪರ್ಫಾರ್ಮೆನ್ಸ್‌ ಕಳೆದುಕೊಂಡಿದ್ದಾರೆ. ಇನ್ನೂ ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿ ಕೊಹ್ಲಿ ಮೊದಲ ಸ್ಥಾನದಲ್ಲಿ ಮುನ್ನುಗ್ಗುತ್ತಿದ್ದರೂ ಅವರ ಸ್ಟ್ರೈಕ್‌ರೇಟ್‌ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಆದ್ದರಿಂದ ಕೊಹ್ಲಿ ಅವರನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

    ಸಂಭಾವ್ಯ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ?
    ಆಟಂಭಿಕರು – ಟಾಪ್‌-3:
    ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌

    ಮಧ್ಯಮ ಕ್ರಮಾಂಕದ ಬ್ಯಾಟರ್ಸ್‌ಗಳು:
    ಸೂರ್ಯಕುಮಾರ್ ಯಾದವ್, ಶಿವಂ ದುಬೆ, ರಿಂಕು ಸಿಂಗ್,

    ಆಲ್‌ರೌಂಡರ್‌ಗಳು:
    ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್

    ವಿಕೆಟ್ ಕೀಪರ್‌:
    ರಿಷಬ್ ಪಂತ್, ಸಂಜು ಸ್ಯಾಮ್ಸನ್, ಕೆ.ಎಲ್‌ ರಾಹುಲ್‌

    ಸ್ಪಿನ್ನರ್‌ಗಳು:
    ಕುಲ್ದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌, ರವಿ ಬಿಷ್ಣೋಯಿ

    ವೇಗದ ಬೌಲರ್ಸ್‌:
    ಜಸ್ಪ್ರೀತ್ ಬುಮ್ರಾ, ಅರ್ಷ್‌ದೀಪ್‌ ಸಿಂಗ್‌, ಮೊಹಮ್ಮದ್ ಸಿರಾಜ್, ಟಿ.ನಟರಾಜನ್,

    ಸಂಭಾವ್ಯ ತಂಡ:
    ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಟಿ.ನಟರಾಜನ್, ರಿಂಕು, ಯಜುವೇಂದ್ರ ಚಾಹಲ್‌, ಸಂಜು ಸ್ಯಾಮ್ಸನ್, ಅರ್ಷ್‌ದೀಪ್‌ ಸಿಂಗ್‌.

    ಬ್ಯಾಕ್ ಅಪ್: ಶುಭಮನ್ ಗಿಲ್, ಮೊಹಮ್ಮದ್ ಸಿರಾಜ್

  • ಫೇಕ್‌ ನ್ಯೂಸ್‌ ಬಗ್ಗೆ ಹಿಟ್‌ಮ್ಯಾನ್‌ ಸ್ಪಷ್ಟನೆ – ಟಿ20 ವಿಶ್ವಕಪ್‌ಗೆ ಹೀಗಿದೆ ಭಾರತದ ಸಂಭಾವ್ಯ ತಂಡ!

    ಫೇಕ್‌ ನ್ಯೂಸ್‌ ಬಗ್ಗೆ ಹಿಟ್‌ಮ್ಯಾನ್‌ ಸ್ಪಷ್ಟನೆ – ಟಿ20 ವಿಶ್ವಕಪ್‌ಗೆ ಹೀಗಿದೆ ಭಾರತದ ಸಂಭಾವ್ಯ ತಂಡ!

    ಮುಂಬೈ: ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ 2024ರ ಐಸಿಸಿ ಟಿ20 ವಿಶ್ವಕಪ್‌ (T20 World Cup 2024) ಟೂರ್ನಿ ನಡೆಯಲಿದೆ. ಈ ಟೂರ್ನಿಗೆ ಭಾರತ ತಂಡವನ್ನು ಏಪ್ರಿಲ್‌ ಅಂತ್ಯದಲ್ಲಿ ಅಜಿತ್‌ ಅಗರ್ಕರ್‌ ಸಾರಥ್ಯದ ಆಯ್ಕೆ ಸಮಿತಿ ಪ್ರಕಟಿಸುವ ಸಾಧ್ಯತೆ ಇದೆ. ಈ ನಡುವೆ ಬಿಸಿಸಿಐ (BCCI) ಈಗಾಗಲೇ ಭಾರತ ತಂಡದ 15 ಸಂಭಾವ್ಯ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: T20 World Cup 2024 ವೇಳಾಪಟ್ಟಿ ಬಿಡುಗಡೆ; ಜೂ.9ಕ್ಕೆ ನ್ಯೂಯಾರ್ಕ್‌ನಲ್ಲಿ ಇಂಡೋ-ಪಾಕ್‌ ಕದನ

    ಟಿ20 ವಿಶ್ವಕಪ್‌ ಟೂರ್ನಿಯ ನಿಮಿತ್ತ 2024ರ ಐಪಿಎಲ್‌ (IPL 2024) ಟೂರ್ನಿಯು ಎಲ್ಲಾ ಆಟಗಾರರಿಗೆ ಅತ್ಯಂತ ಮಹತ್ವದ್ದಾಗಿದೆ. ಈ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಆಟಗಾರರನ್ನ ಟಿ20 ವಿಶ್ವಕಪ್‌ ಟೂರ್ನಿಗೆ ಭಾರತ ತಂಡ ಪರಿಗಣಿಸುವ ಸಾಧ್ಯತೆಯಿದೆ. ಅಂದ ಹಾಗೆ ರೋಹಿತ್‌ ಶರ್ಮಾ (Rohit Sharma) ತಂಡವನ್ನು ಮುನ್ನಡೆಸುವುದು ಬಹುತೇಕ ಖಚಿತವಾಗಿದ್ದು, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್, ಜಸ್ಪ್ರೀತ್‌ ಬುಮ್ರಾ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ: RCBಗೆ ‘ಹೆಡ್ಡೇಕ್’- ತನ್ನದೇ ದಾಖಲೆ ಮುರಿದು IPLನಲ್ಲಿ ಮತ್ತೆ ಇತಿಹಾಸ ನಿರ್ಮಿಸಿದ ಹೈದರಾಬಾದ್

    ಫೇಕ್‌ ನ್ಯೂಸ್‌ ಬಗ್ಗೆ ಹಿಟ್‌ಮ್ಯಾನ್‌ ಸ್ಪಷ್ಟನೆ:
    2024ರ ಟಿ20 ವಿಶ್ಚಕಪ್‌ ಟೂರ್ನಿಯಲ್ಲಿ ರೋಹಿತ್‌ ಜೊತೆಗೆ ಆರಂಭಿಕನಾಗಿ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಈ ಬಗ್ಗೆ ಅಜಿತ್‌ ಅಗರ್ಕರ್‌ ಹಾಗೂ ರಾಹುಲ್‌ ದ್ರಾವಿಡ್‌ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬ ವರದಿಗಳು ಕೇಳಿಬರುತ್ತಿದ್ದಂತೆ ಅದಕ್ಕೆ ರೋಹಿತ್‌ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಯಾರನ್ನೂ ಭೇಟಿ ಮಾಡಿಲ್ಲ, ಈಗ ಹರಿದಾಡುತ್ತಿರುವ ಮಾಹಿತಿಗಳೆಲ್ಲವೂ ಸುಳ್ಳು. ಅಜಿತ್‌ ಅಗರ್ಕರ್‌ ದುಬೈನಲ್ಲಿ ಗಾಲ್ಫ್‌ ಆಡ್ತಿದ್ದಾರೆ, ದ್ರಾವಿಡ್‌ (Rahul Dravid) ಬೆಂಗಳೂರಿನಲ್ಲಿ ತಮ್ಮ ಮಕ್ಕಳ ಆಟ ನೋಡುತ್ತಿದ್ದಾರೆ. ಅಜಿತ್, ದ್ರಾವಿಡ್‌ ಅಥವಾ ನನ್ನಿಂದ ಬಂದರೆ ಮಾತ್ರ ಅದು ಅಧಿಕೃತವಾಗಿರುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೊನೇ ಓವರ್‌ನಲ್ಲಿ 26 ರನ್‌ ಚಚ್ಚಿಸಿಕೊಂಡ ಪಾಂಡ್ಯ – ಹಾರ್ದಿಕ್‌ ಕಳಪೆ ಬೌಲಿಂಗ್‌ಗೆ ಫುಲ್‌ ಕ್ಲಾಸ್‌

    ಪಾಂಡ್ಯ ಆಯ್ಕೆ ಸ್ಪಷ್ಟತೆ ಇಲ್ಲ:
    ಆಲ್‌ರೌಂಡರ್‌ಗಳ ಸ್ಥಾನಕ್ಕೆ ಹಾರ್ದಿಕ್‌ ಪಾಂಡ್ಯ, ಶಿವಂ ದುಬೆ, ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ನಡುವೆ ಪೈಪೋಟಿ ನಡೆದಿದೆ. ಸಿಎಸ್‌ಕೆ ತಂಡದ ಪರ ಅಬ್ಬರಿಸುತ್ತಿರುವ ಶಿವಂ ದುಬೆ ಅವರನ್ನ ಆಯ್ಕೆ ಮಾಡುವ ವಿಷಯದಲ್ಲೂ ಬಿಸಿಸಿಐ ಸ್ಪಷ್ಟತೆ ಹೊಂದಿದೆ. ಏಕೆಂದರೆ ಚೆನ್ನೈ ಸೂಪರ್‌ ಕಿಂಗ್ಸ್ ತಂಡದಲ್ಲಿ ದುಬೆ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದಾರೆ. ಅಲ್ಲದೇ ಐಪಿಎಲ್‌ಗೂ ಮುನ್ನ ಅಫ್ಘಾಸ್ತಾನದ ವಿರುದ್ಧದ ಟಿ20 ಸರಣಿಯಲ್ಲಿ ಶಿವಂ ದುಬೆ ಬ್ಯಾಕ್‌ ಟು ಬ್ಯಾಕ್‌ ಫಿಫ್ಟಿ ಸಿಡಿಸಿ ಗಮನ ಸೆಳೆದಿದ್ದರು. ಆದ್ರೆ ಕಳಪೆ ಬೌಲಿಂಗ್‌ ಫಾರ್ಮ್‌ನಲ್ಲಿರುವ ಹಾರ್ದಿಕ್‌ ಪಾಂಡ್ಯ ಅವರು 6 ಪಂದ್ಯಗಳಲ್ಲಿ ಒಂದೇ ಒಂದು ಫಿಫ್ಟಿಯನ್ನೂ ಬಾರಿಸಿಲ್ಲ. ಹಾಗಾಗಿ ಅವರ ಆಯ್ಕೆ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ ಎಂದು ಹೇಳಲಾಗಿದೆ.

    ಶಾರ್ಟ್‌ಲಿಸ್ಟ್‌ ವಿಕೆಟ್‌ ಕೀಪರ್ಸ್‌:
    ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ಗಳ ಸ್ಥಾನಕ್ಕೆ ರಿಷಭ್‌ ಪಂತ್‌, ಕೆ.ಎಲ್‌ ರಾಹುಲ್‌ ಹಾಗೂ ಸಂಜು ಸ್ಯಾಮ್ಸನ್‌ ಅವರನ್ನು ಬಿಸಿಸಿಐ ಶಾರ್ಟ್‌ ಲಿಸ್ಟ್‌ ಮಾಡಿದೆ. ಇದರಲ್ಲಿ ಒಬ್ಬರನ್ನು ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ಆಯ್ಕೆ ಮಾಡಬಹುದು. ಕಳೆದ ವರ್ಷ ಏಕದಿನ ಏಷ್ಯಾಕಪ್‌, ಏಕದಿನ ವಿಶ್ವಕಪ್‌ ಟೂರ್ನಿಗಳಿಂದ ವಂಚಿತರಾಗಿದ್ದ ಸಂಜು ಸ್ಯಾಮ್ಸನ್‌ ಈ ಬಾರಿಯಾದರೂ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದುಕೊಳ್ಳುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: IPL 2024: ಮಕ್ಕಳ ಶಾಲಾ ಶುಲ್ಕಕ್ಕೆ ಕೂಡಿಟ್ಟ ಹಣದಲ್ಲೇ ಟಿಕೆಟ್‌ ಖರೀದಿಸಿದ ಧೋನಿ ಅಭಿಮಾನಿ!

    20 ಸದಸ್ಯರ ಭಾರತ ಸಂಭಾವ್ಯ ತಂಡ:
    ಬ್ಯಾಟರ್ಸ್‌: ರೋಹಿತ್‌ ಶರ್ಮಾ, ಯಶಸ್ವಿ ಜೈಸ್ವಾಲ್‌, ಶುಭಮನ್ ಗಿಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ರಿಂಕು ಸಿಂಗ್‌
    ಆಲ್‌ರೌಂಡರ್‌ಗಳು: ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಶಿವಂ ದುಬೆ, ಅಕ್ಷರ್‌ ಪಟೇಲ್‌
    ಸ್ಪಿನ್ನರ್‌ಗಳು: ಕುಲ್ದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌, ರವಿ ಬಿಷ್ಣೋಯಿ
    ವಿಕೆಟ್‌ ಕೀಪರ್‌-ಬ್ಯಾಟರ್ಸ್‌: ರಿಷಭ್‌ ಪಂತ್‌, ಕೆ.ಎಲ್‌ ರಾಹುಲ್‌, ಸಂಜು ಸ್ಯಾಮ್ಸನ್‌
    ವೇಗಿಗಳು: ಜಸ್ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌, ಅರ್ಷ್‌ದೀಪ್‌ ಸಿಂಗ್, ಅವೇಶ್‌ ಖಾನ್‌

  • ಮಹಿ ಚಚ್ಚಿದ ಆ 3 ಸಿಕ್ಸರ್‌ ಪಾಂಡ್ಯಗೆ ಸಂಕಷ್ಟ ತಂದೊಡ್ಡಿತಾ?

    ಮಹಿ ಚಚ್ಚಿದ ಆ 3 ಸಿಕ್ಸರ್‌ ಪಾಂಡ್ಯಗೆ ಸಂಕಷ್ಟ ತಂದೊಡ್ಡಿತಾ?

    – ಹಾರ್ದಿಕ್‌ ಪಾಂಡ್ಯ ಮುಂದಿರುವ ಸವಾಲುಗಳೇನು?

    ನವದೆಹಲಿ: ಇತ್ತೀಚೆಗೆ ಮುಂಬೈ ಇಂಡಿಯನ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಸಿಎಸ್‌ಕೆ (MI vs CSK) ಬ್ಯಾಟರ್‌ ಎಂ.ಎಸ್‌ ಧೋನಿ, ಹಾರ್ದಿಕ್‌ ಪಾಂಡ್ಯ (Hardik Pandya) ಅವರ ಬೌಲಿಂಗ್‌ನಲ್ಲಿ ಹ್ಯಾಟ್ರಿಕ್‌ ಸಿಕ್ಸರ್‌ ಸಿಡಿಸಿದ್ದರು. ಆ ಓವರ್‌ ಮುಕ್ತಾಯದ ವೇಳೆಗೆ ಪಾಂಡ್ಯ 26 ರನ್‌ ಬಿಟ್ಟುಕೊಟ್ಟಿದ್ದರು. ಅಲ್ಲದೇ ಮುಂಬೈ ಇಂಡಿಯನ್ಸ್‌ 20 ರನ್‌ಗಳ ಅಂತರದಿಂದಲೂ ಸೋಲುವಂತಾಯ್ತು. ಮುಂಬೈ ಈ ಪಂದ್ಯ ಸೋತ ಬಳಿಕ ಹಾರ್ದಿಕ್‌ ಪಾಂಡ್ಯ ಅವರ ಕಳಪೆ ಬೌಲಿಂಗ್‌ ಬಗ್ಗೆ ಭಾರೀ ಚರ್ಚೆ ಹುಟ್ಟಿಕೊಂಡಿದೆ. ಅಲ್ಲದೇ ಇದು ಅವರ ವಿಶ್ವಕಪ್‌ ಕೆರಿಯರ್‌ ಮೇಲೂ ಪರಿಣಾಮ ಉಂಟುಮಾಡಿದೆ.

    ಮುಂಬರುವ ಟಿ20 ವಿಶ್ವಕಪ್‌ಗೆ (T20 World Cup) ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಲು ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಎದುರು ನೋಡುತ್ತಿದ್ದಾರೆ. ಆದರೆ ಸದ್ಯ ನಡೆಯುತ್ತಿರುವ ಐಪಿಎಲ್‌ನಲ್ಲಿ (IPL 2024) ಪಾಂಡ್ಯ ಅವರ ಬೌಲಿಂಗ್‌ ಪ್ರದರ್ಶನದ ಮೇಲೆ ಅವರ ವಿಶ್ವಕಪ್‌ ಭವಿಷ್ಯ ಅಡಗಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಬ್ಯಾಟಿಂಗ್‌ನಲ್ಲಿ ಅಬ್ಬರಿಸುತ್ತಿರುವ ಶಿವಂ ದುಬೆ, ಸ್ಪಿನ್ನರ್‌ ಯಜುವೇಂದ್ರ ಚಹಲ್‌ರನ್ನ ಆಯ್ಕೆ ಸಮಿತಿ ವಿಶ್ವಕಪ್‌ಗೆ ಪರಿಗಣಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

    ಕಳೆದ ವಾರ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma), ಕೋಚ್‌ ರಾಹುಲ್‌ ದ್ರಾವಿಡ್‌ ಹಾಗೂ ಆಯ್ಕೆ ಸಮಿತಿ ಸದಸ್ಯರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಹಾರ್ದಿಕ್‌ ಬಗ್ಗೆಯೂ ಚರ್ಚೆಯಾಗಿದ್ದು, ಅವರು ಐಪಿಎಲ್‌ನಲ್ಲಿ ಉತ್ತಮವಾಗಿ ಬೌಲ್‌ ಮಾಡಿದರಷ್ಟೇ ವಿಶ್ವಕಪ್‌ಗೆ ಆಯ್ಕೆ ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಐಪಿಎಲ್‌ನಲ್ಲಿ ಆಡಿರುವ 6 ಪಂದ್ಯಗಳ ಪೈಕಿ 4ರಲ್ಲಿ ಹಾರ್ದಿಕ್‌ 11 ಓವರ್‌ ಬೌಲ್‌ ಮಾಡಿದ್ದಾರೆ. ಆದರೆ 12ರ ಎಕಾನಮಿಯಲ್ಲಿ ರನ್‌ ಬಿಟ್ಟುಕೊಟ್ಟಿದ್ದು, ಕೇವಲ 3 ವಿಕೆಟ್‌ ಪಡೆದಿದ್ದಾರೆ. ಇನ್ನುಳಿದ ಪಂದ್ಯಗಳಲ್ಲಿ ಉತ್ತಮ ಬೌಲ್‌ ಮಾಡಿದರೆ ಅವರು ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗಬಹುದು ಎನ್ನಲಾಗುತ್ತಿದೆ.

    ಮತ್ತೊಂದೆಡೆ ಸಿಎಸ್‌ಕೆ ತಂಡದ ಪರ ಮಧ್ಯಮ ಕ್ರಮಾಂಕದ ಬ್ಯಾಟರ್‌ ಶಿವಂ ದುಬೆ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಇದರೊಂದಿಗೆ ಪರ್ಪಲ್‌ ಕ್ಯಾಪ್‌ ರೇಸ್‌ನಲ್ಲಿರುವ ಆರ್‌ಆರ್‌ ಆಟಗಾರ ಯಜುವೇಂದ್ರ ಚಾಹಲ್‌ ಅವರ ಹೆಸರೂ ಸಹ ವಿಶ್ವಕಪ್‌ ತಂಡದಲ್ಲಿ ಕೇಳಿಬರುತ್ತಿದೆ. ಇದರಿಂದ ಹಾರ್ದಿಕ್‌ ಪಾಂಡ್ಯ ನಾಯಕತ್ವದ ಜೊತೆಗೆ ತಮ್ಮ ಆಲ್‌ರೌಂಡ್‌ ಪ್ರದರ್ಶನದಲ್ಲಿ ಯಾವ ರೀತಿ ಯಶಸ್ಸು ಕಂಡುಕೊಳ್ಳುತ್ತಾರೆ ಎಂದಬುದನ್ನು ಮುಂದೆ ಕಾದು ನೋಡಬೇಕಿದೆ.

    ಏಕದಿನ ವಿಶ್ವಕಪ್‌ನಿಂದಲೂ ಹೊರಗುಳಿದಿದ್ದ ಪಾಂಡ್ಯ:
    ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ (ICC World Cup) ಟೂರ್ನಿಯ 17ನೇ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಸೆಣಸಾಟ ನಡೆಸಿದ್ದವು. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ 9ನೇ ಓವರ್ ನಲ್ಲಿ ಬೌಲಿಂಗ್ ಮಾಡುತ್ತಿದ್ದ ಪಾಂಡ್ಯ 3ನೇ ಎಸೆತ ಬೌಲಿಂಗ್ ಮಾಡಿದಾಗ ಕ್ರೀಸ್‌ನಲ್ಲಿದ್ದ ಲಿಟ್ಟನ್ ದಾಸ್ ಸ್ರೈಟ್‌ಡ್ರೈವ್‌ ಮಾಡಿದರು. ಆಗ ಪಾಂಡ್ಯ ಕಾಲಿನಿಂದ ಚೆಂಡನ್ನು ತಡೆಯಲು ಪ್ರಯತ್ನಿಸಿದಾಗ ಬ್ಯಾಲೆನ್ಸ್ ತಪ್ಪಿ ಕಾಲು ಉಳುಕಿಸಿಕೊಂಡರು. ತಕ್ಷಣವೇ ಫಿಸಿಯೋ ಥೆರಪಿಸ್ಟ್ ಬಂದು ಚಿಕಿತ್ಸೆ ನೀಡಿದರೂ ಮತ್ತೆ ಬೌಲಿಂಗ್ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಆಟದ ಮಧ್ಯದಲ್ಲೇ ಮೈದಾನ ತೊರೆಯಲು ನಿರ್ಧರಿಸಿದರು. ಬಳಿಕ ರೋಹಿತ್ ಶರ್ಮಾ ಜೊತೆ ಮಾತುಕತೆ ನಡೆದ ಕೊಹ್ಲಿ ಉಳಿದಿದ್ದ ಮೂರು ಎಸೆತಗಳನ್ನು ತಾವೇ ಎಸೆಯುವ ಮೂಲಕ ಬೌಲಿಂಗ್ ಪೂರ್ಣಗೊಳಿಸಿದರು. ಆ ಬಳಿಕ ವೃತ್ತಿಪರ ಕ್ರಿಕೆಟ್‌ನಿಂದ ದೀರ್ಘಕಾಲ ಹೊರಗುಳಿದಿದ್ದರು.

  • ರೋಹಿತ್ ಶರ್ಮಾ ಫಾರ್ಮ್‍ನಲ್ಲಿದ್ದರೆ 2024ರ ಟಿ20 ವಿಶ್ವಕಪ್‍ನಲ್ಲಿ ತಂಡವನ್ನು ಮುನ್ನಡೆಸಲಿ: ಗಂಭೀರ್

    ರೋಹಿತ್ ಶರ್ಮಾ ಫಾರ್ಮ್‍ನಲ್ಲಿದ್ದರೆ 2024ರ ಟಿ20 ವಿಶ್ವಕಪ್‍ನಲ್ಲಿ ತಂಡವನ್ನು ಮುನ್ನಡೆಸಲಿ: ಗಂಭೀರ್

    ನವದೆಹಲಿ: ರೋಹಿತ್ ಶರ್ಮಾ (Rohit Sharma) ಉತ್ತಮ ಫಾರ್ಮ್‍ನಲ್ಲಿಯೇ ಉಳಿದಿದ್ದರೆ, 2024ರ ಟಿ20 ವಿಶ್ವಕಪ್ (T20 World Cup) ಪಂದ್ಯದಲ್ಲಿ ಭಾರತ ತಂಡವನ್ನು (Team India) ಮುನ್ನಡೆಸಬೇಕು ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ (Gautam Gambhir) ಹೇಳಿದ್ದಾರೆ.

    ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ರೋಹಿತ್ ಉತ್ತಮ ಫಾರ್ಮ್‍ನಲ್ಲಿ ಉಳಿದರೆ ಟಿ20 ವಿಶ್ವಕಪ್‍ನ್ನು ಮುನ್ನಡೆಸಲಿ. ಅಲ್ಲದೇ ಉತ್ತಮ ಫಾರ್ಮ್‍ನಲ್ಲಿ ಇಲ್ಲದವರನ್ನು ಟಿ20 ವಿಶ್ವಕಪ್‍ಗೆ ಆಯ್ಕೆ ಮಾಡಬಾರದು. ನಾಯಕತ್ವ ಎನ್ನುವುದು ದೊಡ್ಡ ಜವಾಬ್ದಾರಿ. ಆಟಗಾರನ ಉತ್ತಮ ಪ್ರದರ್ಶನದ ಮೇಲೆ ನಾಯಕನಾಗುವ ಅರ್ಹತೆ ಬೆಳೆಯುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಹೆತ್ತವರಿಗೆ ಉಡುಗೊರೆಯಾಗಿ ಕನಸಿನ ಕಾರು ನೀಡುತ್ತೇನೆ: ವೃಂದಾ ದಿನೇಶ್

    ಆಟಗಾರನನ್ನು ತಂಡದಿಂದ ಕೈಬಿಡಲು ವಯಸ್ಸು ಮಾನದಂಡವಾಗಬಾರದು. ಕೇವಲ ಫಾರ್ಮ್ ಮಾತ್ರ ಮಾನದಂಡವಾಗಿರಬೇಕು. ಆಟಗಾರನನ್ನು ಏಕೆ ಕೈಬಿಡಬೇಕು ಅಥವಾ ಏಕೆ ಆಯ್ಕೆ ಮಾಡಬೇಕು ಎಂಬುದಕ್ಕೆ ವಯಸ್ಸು ಅರ್ಹತೆಯೇ ಅಲ್ಲ. ಆಟಗಾರನ ನಿವೃತ್ತಿ ಆತನ ವೈಯಕ್ತಿಕ ನಿರ್ಧಾರವಾಗಿದೆ. ಇದರಲ್ಲಿ ಯಾರ ಒತ್ತಾಯವು ಇರಬಾರದು ಎಂದು ಅವರು ಹೇಳಿದ್ದಾರೆ.

    ರೋಹಿತ್ ಶರ್ಮಾ ಈ ಬಾರಿಯ ಏಕದಿನ ವಿಶ್ವಕಪ್‍ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನಿಡಿದ್ದಾರೆ. ಆರಂಭಿಕ ಆಟಗಾರನಾಗಿ ತಂಡದಲ್ಲಿ ಮಹತ್ವದ ಪಾತ್ರವಹಿಸಿದ್ದರು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಗಂಭೀರ್ ವಿರುದ್ಧ ಆರೋಪ – ಶ್ರೀಶಾಂತ್‍ಗೆ ಲೀಗಲ್ ನೋಟಿಸ್ ಜಾರಿ

  • ಟೀಂ ಇಂಡಿಯಾಕ್ಕೆ ಮತ್ತೆ ಮತ್ತೆ ಮರೆಯಲಾಗದ ನೋವು – ಏಕೆ ಗೊತ್ತೇ?

    ಟೀಂ ಇಂಡಿಯಾಕ್ಕೆ ಮತ್ತೆ ಮತ್ತೆ ಮರೆಯಲಾಗದ ನೋವು – ಏಕೆ ಗೊತ್ತೇ?

    ಅಹಮದಾಬಾದ್: 13ನೇ ಆವೃತ್ತಿಯ ಏಕದಿನ ವಿಶ್ವಕಪ್ (ODI World Cup) ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ (Team India) ಭಾರೀ ನಿರಾಸೆಯಾಗಿದೆ. ಶತಕೋಟಿ ಭಾರತೀಯರ ಕನಸು ಭಗ್ನಗೊಂಡಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಅತೀವ ನೋವುಂಟುಮಾಡಿದೆ.

    ಬೆಳಗ್ಗೆಯಿಂದಲೂ ಹರ್ಷೋದ್ಘಾರ ಹಾಕುತ್ತಾ ಟೀಂ ಇಂಡಿಯಾ ಗೆಲುವಿಗಾಗಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಆಸ್ಟ್ರೇಲಿಯಾ (Australia) ತಂಡದ ಗೆಲುವು ಹೇಳತೀರದ ನೋವು ತರಿಸಿತು. ಭಾರತದ ಧ್ವಜ ಹಾರಿಸುತ್ತಾ ದೇಶಾಭಿಮಾನ ಮೆರೆಯುತ್ತಿದ್ದ ಅಭಿಮಾನಿಗಳು ಕೊನೆಯಲ್ಲಿ ಕಣ್ಣಲ್ಲಿ ನೀರು ಕಚ್ಚಿಕೊಂಡು ಹೋಗುವಂತೆ ಮಾಡಿತು. 12 ವರ್ಷಗಳ ನಂತರ ಟ್ರೋಫಿ ಗೆಲ್ಲುವ ಭಾರತದ ಕನಸು ಮತ್ತೆ ಕನಸಾಗಿಯೇ ಉಳಿಯಿತು.

    ಕೈತಪ್ಪಿದ 9ನೇ ಟ್ರೋಫಿ: ಭಾರತ ತಂಡ ಮಾಜಿ ಕ್ರಿಕೆಟಿಗ ಎಂ.ಎಸ್ ಧೋನಿ (MS Dhoni) ನಾಯಕತ್ವದಲ್ಲಿ 2011ರಲ್ಲಿ ಕೊನೆಯ ವಿಶ್ವಕಪ್ ಕಿರೀಟ ಗೆದ್ದು ಬೀಗಿತ್ತು. ಆದ್ರೆ 2013ರಿಂದ ಈಚೆಗೆ 9 ಐಸಿಸಿ ಟ್ರೋಫಿಗಳನ್ನ ಕಳೆದುಕೊಂಡಿರುವುದನ್ನು ಮರೆಯುವಂತಿಲ್ಲ. ಇದನ್ನೂ ಓದಿ: ಡಿಆರ್‌ಎಸ್‌ ತೆಗೆದುಕೊಳ್ಳದೇ ಪೆವಿಲಿಯನ್‌ಗೆ ಹೆಜ್ಜೆ ಹಾಕಿದ ಸ್ಮಿತ್‌

    2014ರ ಟಿ20 ವಿಶ್ವಕಪ್ ಟೂರ್ನಿ ಫೈನಲ್, 2015ರಲ್ಲಿ ಏಕದಿನ ವಿಶ್ವಕಪ್ ಸೆಮಿಫೈನಲ್, 2016ರ ಟಿ20 ವಿಶ್ವಕಪ್ ಸೆಮಿಫೈನಲ್, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್, 2019ರ ಏಕದಿನ ವಿಶ್ವಕಪ್ ಸೆಮಿಫೈನಲ್, 2021ರ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್, 2022ರ ಟಿ20 ವಿಶ್ವಕಪ್ ಸೆಮಿಫೈನಲ್, 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿ ಐಸಿಸಿ ಟ್ರೋಫಿ ಕಳೆದುಕೊಂಡಿದ್ದ ಭಾರತ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಸೋಲನುಭವಿಸಿ ಮತ್ತೆ ಅಭಿಮಾನಿಗಳ ಆಸೆಗೆ ತಣ್ಣೀರು ಹಾಕಿದೆ.

    ಭಾನುವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 240 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 43 ಓವರ್‌ಗಳಲ್ಲೇ 4 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿ ಗೆಲುವು ಸಾಧಿಸಿತು. ಈ ಮೂಲಕ 6ನೇ ಬಾರಿಗೆ ಏಕದಿನ ವಿಶ್ವಕಪ್ ಟೂರ್ನಿ ಟ್ರೋಫಿ ಗೆಲ್ಲುವ ಕನಸನ್ನು ನನಸು ಮಾಡಿಕೊಂಡಿತು. ಇದನ್ನೂ ಓದಿ: 140 ಕೋಟಿ ಭಾರತೀಯರ ಕನಸು ಭಗ್ನ – ವಿಶ್ವ ವಿಜೇತ ಆಸ್ಟ್ರೇಲಿಯಾ

  • T20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಸೋಲಿಗೆ ಕಾರಣವಾಗಿದ್ದ ಇಂಗ್ಲೆಂಡ್‌ ಬ್ಯಾಟರ್‌ ನಿವೃತ್ತಿ ಘೋಷಣೆ

    T20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಸೋಲಿಗೆ ಕಾರಣವಾಗಿದ್ದ ಇಂಗ್ಲೆಂಡ್‌ ಬ್ಯಾಟರ್‌ ನಿವೃತ್ತಿ ಘೋಷಣೆ

    ಲಂಡನ್‌: ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ (T20 WorldCup) ಟೂರ್ನಿಯ ಪ್ಲೇ ಆಫ್‌ ಸುತ್ತಿನಲ್ಲಿ ಟೀಂ ಇಂಡಿಯಾ ಹೀನಾಯ ಸೋಲಿಗೆ ಕಾರಣವಾಗಿದ್ದ ಇಂಗ್ಲೆಂಡ್‌ ತಂಡದ ಸ್ಫೋಟಕ ಬ್ಯಾಟ್ಸ್‌ಮ್ಯಾನ್ ಅಲೆಕ್ಸ್‌ ಹೇಲ್ಸ್‌ (Alex Hales)ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.


    34 ವರ್ಷದ ಕ್ರಿಕೆಟಿಗ ಅಲೆಕ್ಸ್‌ ಹೇಲ್ಸ್‌ 2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇಂಗ್ಲೆಂಡ್‌ (England) ತಂಡದಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್‌ ಆಗಿ ಗುರುತಿಸಿಕೊಂಡಿದ್ದರು. ಮೂರು ಸ್ವರೂಪದ ಕ್ರಿಕೆಟ್‌ನಲ್ಲಿ 156 ಪಂದ್ಯಗಳನ್ನಾಡಿರುವ ಹೇಲ್ಸ್‌ 5,066 ರನ್‌ಗಳನ್ನ ಪೂರೈಸಿದ್ದಾರೆ. ಇದರಲ್ಲಿ 7 ಶತಕಗಳು, 578 ಬೌಂಡರಿ ಹಾಗೂ 123 ಸಿಕ್ಸರ್‌ ಒಳಗೊಂಡಿದೆ. ಏಕದಿನ ಕ್ರಿಕೆಟ್‌ನಲ್ಲಿ 37.79 ಸರಾಸರಿಯಲ್ಲಿ 2,419 ರನ್‌, ಟಿ20 ಕ್ರಿಕೆಟ್‌ನಲ್ಲಿ 2,000 ರನ್‌ ಪೂರೈಸಿದ್ದಾರೆ. ಇದನ್ನೂ ಓದಿ: ಹೊಸ ಕೋಚ್ ನೇಮಿಸಿದ RCB – ಮುಂದಿನ ಸಲ ಕಪ್ ನಮ್ದೆ ಅಂತಿದ್ದಾರೆ ಫ್ಯಾನ್ಸ್

    2014ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಮೊದಲ ಇಂಗ್ಲೆಂಡ್‌ ಬ್ಯಾಟ್ಸ್‌ಮ್ಯಾನ್‌ ಎನಿಸಿಕೊಂಡಿದ್ದಾರೆ. ಪ್ರಸಕ್ತ ವರ್ಷ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೂ ಮುನ್ನವೇ ನಿವೃತ್ತಿ ಘೋಷಣೆ ಮಾಡಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

    2015-16ರ ಅವಧಿಯಲ್ಲಿ 11 ಟೆಸ್ಟ್‌ ಪಂದ್ಯಗಳನ್ನಾಡಿರುವ ಹೇಲ್ಸ್‌ 27.28 ಸರಾಸರಿಯಲ್ಲಿ ಬ್ಯಾಟಿಂಗ್‌ ಮಾಡಿ 5 ಅರ್ಧಶತಕ ಗಳಿಸಿದ್ದರು. 2016-17ರಿಂದ ರೆಡ್‌ಬಾಲ್‌ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದರು.

    ಕಳೆದ ವರ್ಷ ಟಿ20 ವಿಶ್ವಕಪ್‌ ಪ್ಲೇ ಆಫ್‌ ಸುತ್ತಿನಲ್ಲಿ ಟೀಂ ಇಂಡಿಯಾ ವಿರುದ್ಧ ಭರ್ಜರಿ ಬ್ಯಾಟಿಂಗ್‌ ಮಾಡಿದ್ದರು. ಜೋಸ್‌ ಬಟ್ಲರ್‌ ಜೊತೆಗೂಡಿದ ಅಲೆಕ್ಸ್‌ ಹೇಲ್ಸ್‌ 86 ರನ್‌ (47 ಎಸೆತ, 4 ಬೌಂಡರಿ, 7 ಸಿಕ್ಸರ್‌) ಚಚ್ಚಿ ಇಂಗ್ಲೆಂಡ್‌ಗೆ 10 ವಿಕೆಟ್‌ಗಳ ಜಯವನ್ನು ತಂದುಕೊಟ್ಟಿದ್ದರು. ಇದನ್ನೂ ಓದಿ: IND vs WI T20: ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಹಾರ್ದಿಕ್‌ ಪಡೆ – ವಿಂಡೀಸ್‌ ಗೆಲುವಿಗೆ ಟರ್ನಿಂಗ್‌ ಪಾಯಿಂಟ್‌ ಸಿಕ್ಕಿದ್ದೆಲ್ಲಿ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]