Tag: T20 World Cup 2022

  • 2019 ಏಕದಿನ ವಿಶ್ವಕಪ್ ನೆನೆಪಿಸಿದ ಬೆನ್‍ಸ್ಟೋಕ್ಸ್ – ನಿಜವಾದ ಮ್ಯಾಚ್ ವಿನ್ನರ್ ಎಂದ ಫ್ಯಾನ್ಸ್

    2019 ಏಕದಿನ ವಿಶ್ವಕಪ್ ನೆನೆಪಿಸಿದ ಬೆನ್‍ಸ್ಟೋಕ್ಸ್ – ನಿಜವಾದ ಮ್ಯಾಚ್ ವಿನ್ನರ್ ಎಂದ ಫ್ಯಾನ್ಸ್

    ಮೆಲ್ಬರ್ನ್: ಟಿ20 ವಿಶ್ವಕಪ್ ಫೈನಲ್ (T20 World Cup 2022) ಪಂದ್ಯದಲ್ಲಿ ಪಾಕಿಸ್ತಾನ (Pakistan) ವಿರುದ್ಧ ಇಂಗ್ಲೆಂಡ್ (England) ತಂಡ ಗೆಲ್ಲಬೇಕಾದರೆ ಮಹತ್ವದ ಪಾತ್ರ ವಹಿಸಿದ ಆಲ್‍ರೌಂಡರ್ ಬೆನ್‍ಸ್ಟೋಕ್ಸ್ (Ben Stokes)  ಆಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಪಾಕಿಸ್ತಾನ ನೀಡಿದ 138 ರನ್‍ಗಳ ಅಲ್ಪಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ಒಂದು ಹಂತದಲ್ಲಿ 45 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಅಗ್ರಕ್ರಮಾಂಕದ ಮೂವರು ಬ್ಯಾಟ್ಸ್‌ಮ್ಯಾನ್‌ಗಳು ಪೆವಿಲಿಯನ್ ಸೇರಿಕೊಂಡಿದ್ದರು. ಈ ವೇಳೆ ಇಂಗ್ಲೆಂಡ್‍ಗೆ ಬೆನ್ನೆಲುಬಾಗಿ ನಿಂತಿದ್ದು ಬೆನ್‍ಸ್ಟೋಕ್ಸ್ ತಾನು ಬಿಗ್ ಮ್ಯಾಚ್‍ಗಳಲ್ಲಿ ಅಬ್ಬರಿಸುವ ಆಟಗಾರ. ನಾನೇ ಮ್ಯಾಚ್ ವಿನ್ನರ್ ಎಂಬಂತೆ ಹೋರಾಟ ನಡೆಸಿದ ಸ್ಟೋಕ್ಸ್ ತಾಳ್ಮೆಯುತ ಬ್ಯಾಟಿಂಗ್ ಮೂಲಕ ಕೊನೆಯ ವರೆಗೆ ನಿಂತು ಇಂಗ್ಲಂಡ್‍ಗೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದ ಇಂಗ್ಲೆಂಡ್!

    ಈ ಪ್ರದರ್ಶನ ಕಂಡ ಪ್ರೇಕ್ಷಕರು ಬೆನ್‍ಸ್ಟೋಕ್ಸ್ ನಿಜವಾದ ಮ್ಯಾಚ್ ವಿನ್ನರ್. ಆತ ಆಡಿದ ಆಟ 2019 ಏಕದಿನ ವಿಶ್ವಕಪ್ ಫೈನಲ್ ಪಂದ್ಯವನ್ನು ನೆನಪಿಸಿತ್ತು ಎಂದು ಹಾಡಿ ಹೊಗಳಿದ್ದಾರೆ.

    ಬೆನ್‍ಸ್ಟೋಕ್ಸ್ 2019ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಇದೇ ರೀತಿ ಆಡಿ ಕೈಜಾರಿದ್ದ ಪಂದ್ಯವನ್ನು ಗೆದ್ದು ಇಂಗ್ಲೆಂಡ್‌ಗೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. ಆ ಬಳಿಕ ಇದೀಗ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕ್ ವಿರುದ್ಧ ಮತ್ತೊಮ್ಮೆ ಘರ್ಜಿಸಿ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದಾರೆ.

    2019ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅಜೇಯ 84 ರನ್ (98 ಎಸೆತ) ಸಿಡಿಸಿದ್ದರು. ಇಂದು ಪಾಕ್ ವಿರುದ್ಧ ಫೈನಲ್‍ನಲ್ಲಿ ಅಜೇಯ 52 ರನ್ (49 ಎಸೆತ) ಚಚ್ಚಿ, ಬೌಲಿಂಗ್‌ನಲ್ಲಿ 1 ವಿಕೆಟ್‌ ಕಿತ್ತು ಇಂಗ್ಲೆಂಡ್‍ಗೆ ಕಪ್ ತಂದುಕೊಟ್ಟಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸ್ಟೋಕ್ಸ್ ಆಟಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದನ್ನೂ ಓದಿ: ಫೈನಲ್‍ನಲ್ಲಿ ಪಾಕ್‍ಗೆ ಸೋಲು – 12 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್

    ಪಂದ್ಯದಲ್ಲಿ ಪಾಕಿಸ್ತಾನ ನೀಡಿದ 137 ರನ್‍ಗಳ ಅಲ್ಪಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ಪರ ಬೌಲಿಂಗ್‍ನಲ್ಲಿ ಸ್ಯಾಮ್ ಕರನ್ ಮಿಂಚಿದರೆ, ಬ್ಯಾಟಿಂಗ್‍ನಲ್ಲಿ ಬೆನ್‍ಸ್ಟೋಕ್ಸ್ ಆಧಾರವಾದರು. ಪರಿಣಾಮ 19 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 138 ರನ್ ಬಾರಿಸಿ ಇನ್ನೂ 1 ಓವರ್ ಬಾಕಿ ಇರುವಂತೆ 5 ವಿಕೆಟ್‍ಗಳ ಅಂತರದಿಂದ ಇಂಗ್ಲೆಂಡ್ ಗೆದ್ದು ವಿಶ್ವಕಪ್ ಎತ್ತಿ ಹಿಡಿಯಿತು.

    Live Tv
    [brid partner=56869869 player=32851 video=960834 autoplay=true]

  • ಭಾರತ-ಇಂಗ್ಲೆಂಡ್ ಸೆಮಿ ಸಮರ – ಗೆದ್ದವರು ಫೈನಲ್‍ಗೆ ಸೋತವರು ಮನೆಗೆ

    ಭಾರತ-ಇಂಗ್ಲೆಂಡ್ ಸೆಮಿ ಸಮರ – ಗೆದ್ದವರು ಫೈನಲ್‍ಗೆ ಸೋತವರು ಮನೆಗೆ

    ಆಡಿಲೇಡ್: ಟಿ20 ವಿಶ್ವಕಪ್‍ನ (T20 World Cup)  ಎರಡನೇ ಸೆಮಿಫೈನಲ್ (Semi-Final) ಕಾದಾಟದಲ್ಲಿ ಇಂದು ಭಾರತ (India) ಹಾಗೂ ಇಂಗ್ಲೆಂಡ್ (Englan) ಕಾದಾಡುತ್ತಿದೆ. ವಿಶ್ವಕ್ರಿಕೆಟ್ ಪ್ರೇಮಿಗಳ ಚಿತ್ತ ಆಡಿಲೇಡ್‍ನತ್ತ (Adelaide) ನೆಟ್ಟಿದೆ.

    ಇಂದು ಗೆದ್ದ ತಂಡ ಫೈನಲ್‍ನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಈಗಾಗಲೇ ಎರಡು ತಂಡಗಳು ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ಪಡೆಯನ್ನು ಹೊಂದಿದೆ. ಭಾರತಕ್ಕೆ ಬ್ಯಾಟಿಂಗ್ ಬಲವಾದರೆ, ಅತ್ತ ಇಂಗ್ಲೆಂಡ್‍ಗೆ ಆಲ್‍ರೌಂಡರ್‌ಗಳ ಬಲವಿದೆ. ಹಾಗಾಗಿ ಈ ಪಂದ್ಯ ಬಹಳ ರೋಚಕತೆಯನ್ನು ಮೂಡಿಸಿದೆ. ಇದನ್ನೂ ಓದಿ: ಕಿವೀಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ – 3ನೇ ಬಾರಿ ಫೈನಲ್‍ಗೇರಿದ ಪಾಕ್

    ಭಾರತಕ್ಕೆ ರೋಹಿತ್, ರಾಹುಲ್, ಕೊಹ್ಲಿ, ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಶಕ್ತಿಯಾದರೆ, ಅತ್ತ ಅಲೆಕ್ಸ್ ಹೇಲ್ಸ್, ಬಟ್ಲರ್, ಅಲಿ, ಬೆನ್‍ಸ್ಟೋಕ್ಸ್ ಬ್ಯಾಟಿಂಗ್ ಬಿರುಗಾಳಿಗಳು ಹಾಗಾಗಿ ಆಡಿಲೇಡ್‍ನಲ್ಲಿ ರನ್ ಮಳೆ ಸುರಿಯುವ ಸಾಧ್ಯತೆ ಇದೆ. ಇಂದು ಗೆದ್ದ ತಂಡ ನ.13 ರಂದು ಈಗಾಗಲೇ ಫೈನಲ್ ಪ್ರವೇಶಿಸಿರುವ ಪಾಕಿಸ್ತಾನ ತಂಡವನ್ನು ಎದುರಿಸಲಿದ್ದು, ಸೋತ ತಂಡ ಮನೆ ದಾರಿ ಹಿಡಿಯಲಿದೆ. ಇದನ್ನೂ ಓದಿ: ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿಗೆ ಬಿಜೆಪಿಯಿಂದ ಟಿಕೆಟ್?

    ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯ ಅತ್ಯಂತ ಮಹತ್ವ ಪಡೆದುಕೊಂಡಿದ್ದು, 2013ರ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ಟೀಂ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಇದೀಗ ಇಂಗ್ಲೆಂಡ್ ಮಣಿಸಿ, ಫೈನಲ್ ಪ್ರವೇಶಿಸಿ ಟ್ರೋಫಿ ಗೆಲ್ಲುವ ಇರಾದೆಯಲ್ಲಿ ಭಾರತವಿದ್ದರೆ, ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮಣಿಸಬೇಕಾದ ಸವಾಲು ಟೀಂ ಇಂಡಿಯಾ ಮುಂದಿದೆ. ಇತ್ತ ಅಭಿಮಾನಿಗಳೂ ಕೂಡ ಇದೆ ಆಸೆಯಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧ ಭಾರತ ಗೆದ್ದು ಫೈನಲ್‍ನಲ್ಲಿ ಪಾಕಿಸ್ತಾನವನ್ನು ಎದುರಿಸಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆಫ್ರಿಕಾಗೆ ಸೋಲು – ಚಿಗುರಿಕೊಂಡ ಪಾಕಿಸ್ತಾನದ ಸೆಮಿಫೈನಲ್ ಕನಸು

    ಆಫ್ರಿಕಾಗೆ ಸೋಲು – ಚಿಗುರಿಕೊಂಡ ಪಾಕಿಸ್ತಾನದ ಸೆಮಿಫೈನಲ್ ಕನಸು

    ಸಿಡ್ನಿ: ಬ್ಯಾಟ್ಸ್‌ಮ್ಯಾನ್‌ಗಳ ವೈಫಲ್ಯಕ್ಕೆ ಬೆಲೆತೆತ್ತ ದಕ್ಷಿಣ ಆಫ್ರಿಕಾ (South Africa) ಪಾಕಿಸ್ತಾನ (Pakistan) ವಿರುದ್ಧ ಸೋಲುಂಡಿದೆ. ಪಾಕ್ ತಂಡ 33 ರನ್‌ಗಳ ಭರ್ಜರಿ ಜಯದೊಂದಿಗೆ ತನ್ನ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

    186 ರನ್‍ಗಳ ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ 9 ಓವರ್‌ಗಳಲ್ಲಿ 69 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದಾಗ ಮಳೆ ಬಂತು. ಬಳಿಕ 14 ಓವರ್‌ಗಳಿಗೆ ಪಂದ್ಯವನ್ನು ಇಳಿಸಲಾಯಿತು. ದಕ್ಷಿಣ ಆಫ್ರಿಕಾಗೆ 30 ಎಸೆತಗಳಲ್ಲಿ 73 ರನ್ ಟಾರ್ಗೆಟ್ ನೀಡಲಾಯಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 14 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 108 ರನ್‌  ಸಿಡಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿದೆ. ಇದನ್ನೂ ಓದಿ: ಬಾಂಗ್ಲಾ ಸೋತ ಬಳಿಕ ಕೊಹ್ಲಿ ವಿರುದ್ಧ ಫೇಕ್ ಫೀಲ್ಡಿಂಗ್ ಆರೋಪ

    ಆಫ್ರಿಕಾ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಾಗಿತು. ಮೊದಲ ಓವರ್‌ನಲ್ಲೇ ಡಿಕಾಕ್‍ರನ್ನು ಶೂನ್ಯಕ್ಕೆ ಪೆವಿಲಿಯನ್‍ ಗಟ್ಟುವುದರಲ್ಲಿ ಶಾಹೀನ್ ಅಫ್ರಿದಿ ಯಶಸ್ವಿಯಾದರು. ಆ ಬಳಿಕ ಬಂದ ಬ್ಯಾಟ್ಸ್‌ಮ್ಯಾನ್‌ಗಳು ಆಫ್ರಿಕಾ ಕೈಹಿಡಿಯಲಿಲ್ಲ. ಬವುಮ 36 ರನ್ (19 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿದ್ದೆ ಆಫ್ರಿಕಾ ಬ್ಯಾಟಿಂಗ್ ಸರದಿಯ ಹೆಚ್ಚಿನ ಗಳಿಕೆ. ಇತ್ತ ಪಾಕ್ ಪರ ಶಾಹೀನ್ ಅಫ್ರಿದಿ 3 ವಿಕೆಟ್ ಪಡೆದು ಆಫ್ರಿಕಾ ಗೆಲುವಿನ ರೂವಾರಿಯಾದರು. ಇದನ್ನೂ ಓದಿ: T20 ವಿಶ್ವಕಪ್‍ನಲ್ಲಿ ಕೊಹ್ಲಿ ಕಿಂಗ್ – ನೂತನ ವಿಶ್ವದಾಖಲೆ

    ಈ ಮೊದಲು ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ದುಕೊಂಡಿತು. ಪಾಕಿಸ್ತಾನದ ಈ ನಿರ್ಧಾರ ಆರಂಭದಲ್ಲೇ ತಲೆಕೆಳಗಾಯಿತು. 38 ರನ್ ಆಗುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿಕೊಂಡರು. ಆ ಬಳಿಕ ಮೊಹಮ್ಮದ್ ಹ್ಯಾರಿಸ್ 28 ರನ್ (11 ಎಸೆತ, 2 ಬೌಂಡರಿ, 3 ಸಿಕ್ಸ್) ಚಚ್ಚಿ ಎಲ್‍ಬಿಡಬ್ಲ್ಯೂ ಬಲೆಗೆ ಬಿದ್ದರು. ನಂತರ ಇಫ್ತಿಕರ್ ಅಹಮದ್ ಪಾಕಿಸ್ತಾನದ ರನ್ ಹೆಚ್ಚಿಸುವ ಜವಾಬ್ಧಾರಿ ವಹಿಸಿಕೊಂಡರು. ಇವರಿಗೆ ಕೆಲ ಕ್ರಮಾಂಕದಲ್ಲಿ ಶಬಾದ್ ಖಾನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚಿದರು.

    ಶಬಾದ್ ಖಾನ್ ಸ್ಫೋಟಕ ಇನ್ನಿಂಗ್ಸ್ 52 ರನ್‍ಗೆ (22 ಎಸೆತ, 3 ಬೌಂಡರಿ, 4 ಸಿಕ್ಸ್) ಅಂತ್ಯವಾಯಿತು. ಇವರ ಬೆನ್ನಲ್ಲೇ ಇಫ್ತಿಕರ್ 51 ರನ್ (35 ಎಸೆತ, 3 ಬೌಂಡರಿ, 2 ಸಿಕ್ಸ್) ಸಿಡಿಸಿ 19ನೇ ಓವರ್‌ನ ಮೊದಲ ಎಸೆತದಲ್ಲಿ ರಿಲೀ ರೋಸೌವ್ ಹಿಡಿದ ಅದ್ಭುತ ಕ್ಯಾಚ್‍ಗೆ ಬಲಿಯಾದರು. ಅಂತಿಮವಾಗಿ ಪಾಕಿಸ್ತಾನ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 185 ರನ್ ಒಟ್ಟುಗೂಡಿಸಿತು.

    Live Tv
    [brid partner=56869869 player=32851 video=960834 autoplay=true]

  • T20 ವಿಶ್ವಕಪ್‍ಗೆ ಮಳೆ ಕಾಟ – ಗ್ರೂಪ್ 1ರ ತಂಡಗಳ ಸೆಮಿಫೈನಲ್ ಲೆಕ್ಕಾಚಾರ ಅತಂತ್ರ

    T20 ವಿಶ್ವಕಪ್‍ಗೆ ಮಳೆ ಕಾಟ – ಗ್ರೂಪ್ 1ರ ತಂಡಗಳ ಸೆಮಿಫೈನಲ್ ಲೆಕ್ಕಾಚಾರ ಅತಂತ್ರ

    ಸಿಡ್ನಿ: ಆಸ್ಟ್ರೇಲಿಯಾದಲ್ಲಿ (Australia) ನಡೆಯುತ್ತಿರುವ ಟಿ20 ವಿಶ್ವಕಪ್‍ಗೆ (T20 World Cup) ಮಳೆರಾಯ (Rain) ಕಾಟ ಕೊಡುತ್ತಿದ್ದಾನೆ. ಈಗಾಗಲೇ ಮಳೆಯಿಂದಾಗಿ ಹಲವು ಪಂದ್ಯಗಳು ಒಂದು ಎಸೆತವನ್ನು ಕಾಣದೆ ರದ್ದುಗೊಂಡಿದೆ. ಇದರಿಂದ ಗ್ರೂಪ್ 1ರ ತಂಡಗಳ ಸೆಮಿಫೈನಲ್ (Semi-Final)  ಲೆಕ್ಕಾಚಾರ ತಲೆಕೆಳಗಾಗಿದೆ.

    ಇಂದು ಗ್ರೂಪ್ 1ರ ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ ಹಾಗೂ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಎರಡು ಪಂದ್ಯಗಳು ಮಳೆಯಿಂದಾಗಿ ರದ್ದುಗೊಂಡಿದೆ. ಇದರಿಂದ ಸೆಮಿಫೈನಲ್ ಹಾದಿ ಕೂಡ ಈ ತಂಡಗಳಿಗೆ ದುರ್ಗಮವಾಗಿದೆ. ಸೆಮಿಫೈನಲ್ ನಿಟ್ಟಿನಲ್ಲಿ 4 ತಂಡಗಳಿಗೂ ಇಂದಿನ ಪಂದ್ಯ ಮಹತ್ವ ಪಡೆದುಕೊಂಡಿತ್ತು. ಆದರೆ ಇಲ್ಲಿ ವರುಣ ಆಟಕ್ಕೆ ಅವಕಾಶ ಕೊಡದೆ ನಿರಾಸೆ ಮೂಡಿಸಿದ್ದಾನೆ. ಇದನ್ನೂ ಓದಿ:  ಸೆಮಿಫೈನಲ್ ನಂತರ ಭಾರತ ಕೂಡ ಮನೆಗೆ – ಶೋಯೆಬ್ ಅಖ್ತರ್

    ಮಳೆಯಿಂದಾಗಿ ಕೆಲ ಪಂದ್ಯ ರದ್ದುಗೊಂಡಿರುವ ಕಾರಣ ಗ್ರೂಪ್ 1ರ 6 ತಂಡಗಳಿಗೂ ಹೊಡೆತಬಿದ್ದಿದೆ. ಈ ಪೈಕಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಗೆ ಹೆಚ್ಚಿನ ಹಿನ್ನಡೆಯಾಗಿದೆ. ಆಸ್ಟ್ರೇಲಿಯಾ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿದಿದೆ. ಜೊತೆಗೆ ಆಸ್ಟ್ರೇಲಿಯಾ ತಂಡದ ರನ್‍ರೇಟ್ (Run Rate) ಕೂಡ ಪಾತಾಳಕ್ಕಿಳಿದಿದೆ. ಹಾಗಾಗಿ ಸೆಮಿಫೈನಲ್ ಹಾದಿ ಆಸ್ಟ್ರೇಲಿಯಾ ತಂಡಕ್ಕೆ ದುರ್ಗಮವಾಗಿದೆ. ಇದನ್ನೂ ಓದಿ: ಪಾಕ್ ರಿಜ್ವಾನ್ ಹಿಂದಿಕ್ಕಿ ನಂ.1 ಪಟ್ಟಕ್ಕೆ ಏರಿದ ಸೂರ್ಯ

    ಪಾಯಿಂಟ್ ಟೇಬಲ್:
    ಇದೀಗ ಗ್ರೂಪ್ 1ರಲ್ಲಿ ಸೆಮಿಫೈನಲ್ ರೇಸ್‍ನಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಮುಂದಿದೆ. ಆದರೆ ಇಂಗ್ಲೆಂಡ್ ತಂಡ ರನ್‍ರೇಟ್‍ನಲ್ಲಿ ಹಿಂದೆ ಬಿದ್ದಿದೆ. ಹಾಗಾಗಿ ಉಳಿದ ಪಂದ್ಯಗಳು ಪ್ರತಿಯೊಂದು ತಂಡಕ್ಕೂ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್ 3 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 3 ಅಂಕಗಳೊಂದಿಗೆ ಇಂಗ್ಲೆಂಡ್, ಐರ್ಲೆಂಡ್, ಆಸ್ಟ್ರೇಲಿಯಾ ಕ್ರಮವಾಗಿ ಎರಡು, ಮೂರು, ನಾಲ್ಕನೇ ಸ್ಥಾನ ಪಡೆದಿದೆ. ಶ್ರೀಲಂಕಾ 2 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದ್ದರೆ, ಅಫ್ಘಾನಿಸ್ತಾನ 2 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ.

    ರನ್‍ರೇಟ್
    ನ್ಯೂಜಿಲೆಂಡ್ ತಂಡ 4.450 ರನ್‍ರೇಟ್‍ನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ 0.239 ರನ್‍ರೇಟ್‍ನೊಂದಿಗೆ 2ನೇ ಸ್ಥಾನದಲ್ಲಿದೆ. ಐರ್ಲೆಂಡ್ -1.169 ಮತ್ತು ಆಸ್ಟ್ರೇಲಿಯಾ -1.555 ರನ್‍ರೇಟ್‍ನೊಂದಿಗೆ ನಂತರದ ಸ್ಥಾನದಲ್ಲಿದೆ. ಶ್ರೀಲಂಕಾ 0.450 ಉತ್ತಮ ರನ್‍ರೇಟ್‍ನೊಂದಿಗೆ 5ನೇ ಸ್ಥಾನ ಪಡೆದರೆ, ಅಫ್ಘಾನಿಸ್ತಾನ -0.620 ರನ್‍ರೇಟ್ ಪಡೆದು 6ನೇ ಸ್ಥಾನ ಪಡೆದುಕೊಂಡಿದೆ.  ಇದನ್ನೂ ಓದಿ: ಪಾಕ್‍ಗೆ ಮರ್ಮಾಘಾತ – 1 ರನ್‍ಗಳ ರೋಚಕ ಜಯ ಸಾಧಿಸಿದ ಜಿಂಬಾಬ್ವೆ

    ಹಾಗಾಗಿ ಮುಂದಿನ ಪಂದ್ಯಗಳು ಪ್ರತಿ ತಂಡಕ್ಕೂ ಡೂ ಆರ್ ಡೈ ಪಂದ್ಯಗಳಾಗಿರುತ್ತವೆ. ನ್ಯೂಜಿಲೆಂಡ್ ಮುಂದಿನ ಎರಡು ಪಂದ್ಯಗಳ ಪೈಕಿ ಶ್ರೀಲಂಕಾ, ಇಂಗ್ಲೆಂಡ್ ಮತ್ತು ಐರ್ಲೆಂಡ್‌ನ್ನು ಎದುರಿಸಲಿದೆ. ಇಂಗ್ಲೆಂಡ್ ತಂಡ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾವನ್ನು ಎದುರಿಸಲಿದೆ. ಆಸ್ಟ್ರೇಲಿಯಾ ತಂಡ, ಐರ್ಲೆಂಡ್‌ ಮತ್ತು ಅಫ್ಘಾನಿಸ್ತಾನ ವಿರುದ್ಧ ಹೋರಾಡಲಿದೆ. ಐರ್ಲೆಂಡ್‌ ತಂಡ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಸೆಣಸಾಡಲಿದೆ. ಶ್ರೀಲಂಕಾ ತಂಡ, ನ್ಯೂಜಿಲೆಂಡ್, ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧ ಕಾದಾಡಲಿದೆ. ಅಫ್ಘಾನಿಸ್ತಾನ ತಂಡ, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಕೊನೆಯ 2 ಪಂದ್ಯಗಳನ್ನು ಆಡಲಿದೆ.

    ಈ ಪೈಕಿ ಆಸ್ಟ್ರೇಲಿಯಾ ತಂಡದ ಸ್ಥಿತಿ ತುಂಬಾ ಶೋಚನೀಯವಾಗಿದೆ. ನ್ಯೂಜಿಲೆಂಡ್ ಮುಂದಿನ 2 ಪಂದ್ಯಗಳನ್ನು ಗೆದ್ದರೆ, ಸೆಮಿಫೈನಲ್‍ಗೇರಬಹುದು. ಇಂಗ್ಲೆಂಡ್ ಮುಂದಿನ ಪಂದ್ಯಗಳನ್ನು ಗೆಲ್ಲುವುದರೊಂದಿಗೆ ರನ್‍ರೇಟ್ ಹೆಚ್ಚಿಸಿಕೊಳ್ಳುವ ಸಾಹಸಕ್ಕೆ ಮುಂದಾಗಬೇಕಿದೆ. ಶ್ರೀಲಂಕಾಗೆ ರನ್‍ರೇಟ್ ಕೈ ಹಿಡಿದಿದ್ದು, ಮುಂದಿನ ಪಂದ್ಯಗಳನ್ನು ಗೆದ್ದರೆ ಅವಕಾಶವಿದೆ. ಐರ್ಲೆಂಡ್ ಮತ್ತು ಅಫ್ಘಾನಿಸ್ತಾನ ಅಪಾಯದ ಸ್ಥಿತಿಯಲ್ಲಿದೆ.

    Live Tv
    [brid partner=56869869 player=32851 video=960834 autoplay=true]

  • ಟೀಂ ಇಂಡಿಯಾ ಜೊತೆ ಆಸ್ಟ್ರೇಲಿಯಾಗೆ ಬುಮ್ರಾ – ಮೆಡಿಕಲ್ ಟೀಂನಿಂದ ಶುಭ ಸುದ್ದಿ

    ಟೀಂ ಇಂಡಿಯಾ ಜೊತೆ ಆಸ್ಟ್ರೇಲಿಯಾಗೆ ಬುಮ್ರಾ – ಮೆಡಿಕಲ್ ಟೀಂನಿಂದ ಶುಭ ಸುದ್ದಿ

    ಮುಂಬೈ: ಟೀಂ ಇಂಡಿಯಾದ (Team India) ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಗಾಯಾಳುವಾಗಿ ಟಿ20 ವಿಶ್ವಕಪ್‍ನಿಂದ (T20 World Cup 2022) ಹೊರಗುಳಿಯಲಿದ್ದಾರೆ ಎಂದು ವರದಿಯಾದ ಬೆನ್ನಲ್ಲೇ ಇದೀಗ ಬುಮ್ರಾ ಮೆಡಿಕಲ್ ರಿಪೋರ್ಟ್ ಶುಭ ಸುದ್ದಿಯೊಂದನ್ನು ನೀಡಿದೆ.

    ಬಿಸಿಸಿಐ (BCCI)  ಮೆಡಿಕಲ್ ಟೀಂ ನೀಡಿರುವ ರಿಪೋರ್ಟ್ ಪ್ರಕಾರ ಬುಮ್ರಾಗೆ ಸರ್ಜರಿ ಬೇಕಾಗಿಲ್ಲ. ಬದಲಾಗಿ ವಿಶ್ರಾಂತಿ ನೀಡಿದರೆ ಸಾಕು ಸರಿಹೊಂದುತ್ತಾರೆ. ಹಾಗಾಗಿ ಟಿ20 ವಿಶ್ವಕಪ್‍ಗೂ ಮುನ್ನ ಸಂಪೂರ್ಣ ವಿಶ್ರಾಂತಿಯಲ್ಲಿರಲಿ ಎಂದು ತಿಳಿಸಿದೆ. ಅಲ್ಲದೆ ಟೀಂ ಇಂಡಿಯಾ ವಿಶ್ವಕಪ್ ತಂಡದೊಂದಿಗೆ ಬುಮ್ರಾ ಆಸ್ಟ್ರೇಲಿಯಾಗೆ (Australia) ತೆರಳಲಿ ಗಾಯದಿಂದ ಚೇತರಿಕೆ ಕಂಡರೆ ಆಡಬಹುದೆಂಬ ಲೆಕ್ಕಾಚಾರವೊಂದು ಹಾಕಲಾಗಿದೆ. ಹಾಗಾಗಿ ಬುಮ್ರಾ ತಂಡದೊಂದಿಗೆ ತೆರಳುವ ಸಾಧ್ಯತೆ ಇದೆ. ಇದನ್ನೂ ಓದಿ: ಭಾರತ-ದಕ್ಷಿಣ ಆಫ್ರಿಕಾ 2ನೇ ಪಂದ್ಯಕ್ಕೆ ಮಳೆ ಅಡ್ಡಿ?

    ಇತ್ತ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಕೂಡ ಬುಮ್ರಾ ಕುರಿತಾಗಿ ಮಾತನಾಡಿದ್ದು, ಬುಮ್ರಾ ವಿಶ್ವಕಪ್ ತಂಡದಿಂದ ಹೊರ ಬಿದ್ದಿಲ್ಲ. ಈ ಬಗ್ಗೆ ಮುಂದಿನ ಮೂರು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಬುಮ್ರಾ ಎನ್‍ಸಿಎನಲ್ಲಿ (NCA) ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 2023ರಲ್ಲಿ ನಡೆಯಲಿದೆ ಭಾರತದ ಮೊದಲ MotoGP ರೇಸ್‌

    ಬುಮ್ರಾ ಬೆನ್ನು ನೋವಿನಿಂದ ಬಳಲುತ್ತಿದ್ದು, ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಿಂದ ಬುಮ್ರಾ ಹೊರಗುಳಿದಿದ್ದರು. ಆ ಬಳಿಕ ಗಾಯಳುವಾಗಿರುವ ಕಾರಣ ಮುಂದಿನ 2 ಟಿ20 ಪಂದ್ಯದಿಂದ ಬುಮ್ರಾ ಹೊರನಡೆದಿದ್ದಾರೆ. ಆಫ್ರಿಕಾ ಸರಣಿಗೆ ಬುಮ್ರಾ ಬದಲು ಸಿರಾಜ್‍ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಐಸಿಸಿ ಟಿ20 ವಿಶ್ವಕಪ್ ಆಸ್ಟ್ರೇಲಿಯಾ ಆತಿಥ್ಯ ವಹಿಸುತ್ತಿದ್ದು, ಅಕ್ಟೋಬರ್ 16 ರಿಂದ ನವೆಂಬರ್ 13ರವರೆಗೆ ಚುಟುಕು ಸಮರ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • 2022ರ ಟಿ20 ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ – ಭಾರತಕ್ಕೆ ಮೊದಲ ಎದುರಾಳಿ ಪಾಕ್

    2022ರ ಟಿ20 ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ – ಭಾರತಕ್ಕೆ ಮೊದಲ ಎದುರಾಳಿ ಪಾಕ್

    ದುಬೈ: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2022ರ ಟಿ20 ವಿಶ್ವಕಪ್‍ನ ವೇಳಾಪಟ್ಟಿಯನ್ನು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಕಟಿಸಿದೆ.

    ಟೀಂ ಇಂಡಿಯಾ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಅಕ್ಟೋಬರ್ 23 ರಂದು ಭಾರತ ಹಾಗೂ ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದೆ. 8ನೇ ಆವೃತ್ತಿಯ ಟಿ20 ವಿಶ್ವಕಪ್ ಆಸ್ಟ್ರೇಲಿಯಾ 7 ಮೈದಾನದಲ್ಲಿ ನಡೆಯಲಿದ್ದು, ಅಡಿಲೇಡ್, ಬ್ರಿಸ್ಬೇನ್, ಗೀಲಾಂಗ್, ಹೊಬಾರ್ಟ್, ಮೆಲ್ಬರ್ನ್, ಪರ್ತ್ ಮತ್ತು ಸಿಡ್ನಿಯಲ್ಲಿ ಟೂರ್ನಿಯ ಎಲ್ಲಾ ಪಂದ್ಯಗಳು ನಡೆಯಲಿದ್ದು, ಟೂರ್ನಿಯ ಫೈನಲ್ ಪಂದ್ಯಾಟ ನವೆಂಬರ್ 13 ರಂದು ನಡೆಯಲಿದೆ. ಇದನ್ನೂ ಓದಿ: ಒಂದೇ ರೈಡ್‍ನಲ್ಲಿ 8 ಅಂಕ – ವಿವಾದಾತ್ಮಕ ತೀರ್ಪು, ಸೋತ ಬುಲ್ಸ್

    ಒಟ್ಟು 16 ವಿಶ್ವದ ಬಲಾಢ್ಯ ತಂಡಗಳು ವಿಶ್ವಕಪ್‍ಗಾಗಿ ಸೆಣಸಾಡಲಿದ್ದು, 45 ಪಂದ್ಯಗಳು ನಡೆಯಲಿದೆ. ಗ್ರೂಪ್ A ವಿಭಾಗದಲ್ಲಿ ಇಂಗ್ಲಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಸ್ಥಾನಪಡೆದಿದ್ದರೆ, ಗ್ರೂಪ್ B ವಿಭಾಗದಲ್ಲಿ ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲದೇಶ ಸ್ಥಾನ ಪಡೆದುಕೊಂಡಿದೆ.

     

    2021ರ ಟಿ20 ವಿಶ್ವಕಪ್‍ನಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಸೋಲು ಕಂಡಿತ್ತು. ಈ ಸೋಲಿನ ಸೇಡು ತೀರಿಸಲು ಭಾರತ ಸಜ್ಜಾಗುತ್ತಿದೆ. ಇದನ್ನೂ ಓದಿ: ಐಸಿಸಿ ವರ್ಷದ ಟಿ20, ಏಕದಿನ ತಂಡದಲ್ಲಿಲ್ಲ ಭಾರತೀಯರು – ಪಾಕ್‌ ಆಟಗಾರರ ಮೇಲುಗೈ