Tag: T20 World Cup 2021

  • ಟಿ20 ವಿಶ್ವಕಪ್ ಗೆದ್ದ ಖುಷಿಗೆ ಬೂಟ್‍ನಲ್ಲಿ ಬಿಯರ್ ಸೇವಿಸಿದ ಆಸ್ಟ್ರೇಲಿಯಾ ಆಟಗಾರರು

    ಟಿ20 ವಿಶ್ವಕಪ್ ಗೆದ್ದ ಖುಷಿಗೆ ಬೂಟ್‍ನಲ್ಲಿ ಬಿಯರ್ ಸೇವಿಸಿದ ಆಸ್ಟ್ರೇಲಿಯಾ ಆಟಗಾರರು

    ದುಬೈ: ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಆಟಗಾರರು ಭರ್ಜರಿ ಸಂಭ್ರಮಾಚರಣೆ ಮಾಡಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾ ತಂಡದ ಇಬ್ಬರು ಆಟಗಾರರು ಬೂಟ್‍ನಲ್ಲಿ ಬಿಯರ್ ಕುಡಿದು ಸಂಭ್ರಮಿಸಿದ್ದಾರೆ.

    ನಿನ್ನೆ ನಡೆದ ಅಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ತಂಡವನ್ನು 8 ವಿಕೆಟ್‍ಗಳಿಂದ ಬಗ್ಗು ಬಡಿದು ಚೊಚ್ಚಲ ಬಾರಿಗೆ ವಿಶ್ವಕಪ್ ಮುಡಿಗೇರಿಸಿಕೊಂಡು ಬೀಗಿತ್ತು. ಆಸೀಸ್ ವಿಶ್ವಕಪ್ ಟ್ರೋಫಿ ಜೊತೆಗೆ 1.6 ಮಿಲಿಯನ್ ಡಾಲರ್, ಸುಮಾರು 12 ಕೋಟಿ ರೂಪಾಯಿಗಳ ನಗದು ಬಹುಮಾನ ಗೆದ್ದು ಸಂಭ್ರಮಿಸಿತು. ಇದನ್ನೂ ಓದಿ: ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ

     

    View this post on Instagram

     

    A post shared by ICC (@icc)

    ಆಸ್ಟ್ರೇಲಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಮ್ಯಾಥ್ಯೂ ವೇಡ್ ಮತ್ತು ಮಾರ್ಕಸ್ ಸ್ಟೋಯಿನಸ್ ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಂ ನಲ್ಲಿ ನಡೆದ ಆಟಗಾರರ ಸಂಭ್ರಮಾಚರಣೆಯಲ್ಲಿ ಮೊದಲು ವೇಡ್ ತಮ್ಮ ಕಾಲಿನ ಶೂ ಬಿಚ್ಚಿ ಅದಕ್ಕೆ ಬಿಯರ್ ಸುರಿದು ಕುಡಿದಿದ್ದಾರೆ. ಆ ಬಳಿಕ ಸ್ಟೋಯಿನಿಸ್ ಕೂಡ ಅದೇ ರೀತಿ ಬಿಯರ್ ಕುಡಿದು ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಹೀಗೆ ಆಸೀಸ್ ಆಟಗಾರರು ಶೂ ನಲ್ಲಿ ಬಿಯರ್ ಕುಡಿಯುತ್ತಿರುವ ವೀಡಿಯೋವನ್ನು ಐಸಿಸಿ ಪೋಸ್ಟ್ ಮಾಡಿದ್ದು, ಇದೀಗ ಈ ವೀಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ಟೀಂ ಇಂಡಿಯಾಗೆ ಬಲ ತುಂಬಲಿದ್ದಾರೆ ನಾಲ್ವರು ಕನ್ನಡಿಗರು