Tag: T20 World

  • ನಾಲ್ಕೇ ತಿಂಗಳಿಗೆ ಪಾಕ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ ಗ್ಯಾರಿ ಗುಡ್‌ಬೈ

    ನಾಲ್ಕೇ ತಿಂಗಳಿಗೆ ಪಾಕ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ ಗ್ಯಾರಿ ಗುಡ್‌ಬೈ

    – 2011ರ ವಿಶ್ವಕಪ್‌ ವೇಳೆ ಟೀಂ ಇಂಡಿಯಾ ಕೋಚ್‌ ಆಗಿದ್ದ ಗ್ಯಾರಿ ಕರ್ಸ್ಟನ್‌

    ಇಸ್ಲಾಮಾಬಾದ್‌: ಪಾಕಿಸ್ತಾನ ಕ್ರಿಕೆಟ್‌ನಲ್ಲಿ (Pakistan, Cricket) ಯಾರು ಯಾವ ಹುದ್ದೆಯಲ್ಲಿದ್ದಾರೆಂದು ಹೇಳುವುದೇ ಕಷ್ಟವಾಗುತ್ತಿದೆ. ಏಕೆಂದರೆ ಕ್ರಿಕೆಟ್‌ ತಂಡದಲ್ಲಿ ತತಕ್ಷಣದ ಬದಲಾವಣೆಗಳು ನಡೆಯುತ್ತಲೇ ಇವೆ. ಇತ್ತೀಚೆಗಷ್ಟೆ ನಾಯಕನ ಬದಲಾವಣೆಯೂ ಮಾಡಿರುವ ಪಾಕ್‌ ತಂಡ ಇದೀಗ ಮುಖ್ಯಕೋಚ್‌ ಬದಲಾವಣೆಗೂ ಮುಂದಾಗಿದೆ. 4 ತಿಂಗಳ ಹಿಂದೆಯಷ್ಟೇ ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೆ ವೈಟ್‌ಬಾಲ್‌ ಕ್ರಿಕೆಟ್‌ನ ಮುಖ್ಯಕೋಚ್‌ ಆಗಿ ನೇಮಕವಾಗಿದ್ದ ಗ್ಯಾರಿ ಕರ್ಸ್ಟನ್ (Gary Kirsten) ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

    ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಗ್ಯಾರಿ ಕರ್ಸ್ಟನ್‌ ಅವರು ಕೋಚಿಂಗ್‌ನಲ್ಲಿ ಉತ್ತಮ ಹೆಸರು ಸಂಪಾದಿಸಿದ್ದ ಕ್ರಿಸ್ಟನ್‌ ಐಪಿಎಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ತಂಡದ ಮೆಂಟರ್‌ ಆಗಿದ್ದರು. 2011ರಲ್ಲಿ ವಿಶ್ವಕಪ್‌ ಗೆದ್ದ ವೇಳೆ ಅವರು ಭಾರತ ತಂಡದ ಕೋಚ್‌ ಆಗಿದ್ದವರು. ಕಳೆದ ನಾಲ್ಕು ತಿಂಗಳ ಹಿಂದೆ ಅವರು ಪಾಕಿಸ್ತಾನದ ಏಕದಿನ ಮತ್ತು ಟಿ20 ಕ್ರಿಕೆಟ್‌ ತಂಡದ ಕೋಚ್‌ ಆಗಿ ನೇಮಕವಾಗಿದ್ದರು. ಇದನ್ನೂ ಓದಿ: ಮೊದಲ ದಿನ ಸ್ಪಿನ್ನರ್‌ಗಳ ಆಟ – ವಾಷಿಂಗ್ಟನ್‌, ಅಶ್ವಿನ್‌ ಶೈನ್‌; ಕಿವೀಸ್‌ 259ಕ್ಕೆ ಆಲೌಟ್‌

    ಗ್ಯಾರಿ ಕರ್ಸ್ಟನ್ ವೈಟ್‌ಬಾಲ್‌ ಕ್ರಿಕೆಟ್‌ನ ಮುಖ್ಯಕೋಚ್‌ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮುಂಬರುವ ಆಸ್ಟ್ರೇಲಿಯಾ ಮತ್ತು ಜಿಂಬಾಬ್ವೆ ವಿರುದ್ಧದ ಸರಣಿಗೆ ಟೆಸ್ಟ್ ತಂಡದ ಕೋಚ್ ಜೇಸನ್ ಗಿಲ್ಲೆಸ್ಪಿ ಅವರನ್ನು ವೈಟ್ ಬಾಲ್ ಕೋಚ್‌ ಆಗಿ ನೇಮಕ ಮಾಡಿರುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ತಿಳಿಸಿದೆ. ಈ ಸಂದೇಶವನ್ನು ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. ವೈಟ್‌ಬಾಲ್‌ ಕ್ರಿಕೆಟ್‌ಗೆ ನೂತನ ಕೋಚ್‌ ಅನ್ನು ಸೂಕ್ತ ಸಮಯದಲ್ಲಿ ನೇಮಿಸಲಾಗುವುದು. ಅಲ್ಲಿಯವರೆಗೆ ಗಿಲ್ಲೆಸ್ಪಿಯವರ ತಾತ್ಕಾಲಿಕ ಕೋಚ್‌ ಆಗಿ ಮುಂದುವರಿಯುವುದಾಗಿ ತಿಳಿಸಿದೆ.

    ಕರ್ಸ್ಟನ್‌ ಅವರು ಮುಂಬರುವ ಆಸ್ಟ್ರೇಲಿಯಾ ಮತ್ತು ಜಿಂಬಾಬ್ವೆ ವಿರುದ್ಧದ ಸರಣಿಗಳಿಗೆ ತಂಡದ ಆಯ್ಕೆ ಬಗ್ಗೆ ಪಿಸಿಬಿಯೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು. ಕೊನೆಗೆ ಪಿಸಿಬಿ ಕಸ್ಟರ್ನ್‌ ಅವರ ಸಲಹೆಗಳನ್ನೇ ಪರಿಗಣನೆಗೆ ತೆಗೆದುಕೊಳ್ಳದೇ ತಂಡವನ್ನು ಪ್ರಕಟಿಸಿದೆ. ಇದರಿಂದ ಬೇಸರಗೊಂಡ ಕರ್ಸ್ಟನ್‌ ತಮ್ಮ ಹುದ್ದೆಗೆ ಗುಡ್‌ಬೈ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜಾರ್ಖಂಡ್ ವಿಧಾನಸಭಾ ಚುನಾವಣೆ ರಾಯಭಾರಿಯಾಗಿ ಲೆಜೆಂಡ್ ಕ್ರಿಕೆಟಿಗ ಎಂ.ಎಸ್ ಧೋನಿ ನೇಮಕ

    2024ರ ಐಪಿಎಲ್‌ ಟೂರ್ನಿ ಬಳಿಕ ಪಾಕ್‌ ತಂಡದ ವೈಟ್‌ಬಾಲ್‌ ಕ್ರಿಕೆಟ್‌ ಮುಖ್ಯಕೋಚ್‌ ಆಗಿ ನೇಮಕಗೊಂಡು, 2024ರ ಟಿ20 ವಿಶ್ವಕಪ್‌ ಟೂರ್ನಿಯಿಂದ ತಮ್ಮ ವೃತ್ತಿ ಆರಂಭಿಸಿದ್ದರು. ಅಲ್ಲದೇ 2025ಕ್ಕೆ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿ, 2025ರ ಐಸಿಸಿ ಟಿ20 ಏಷ್ಯಾಕಪ್‌, 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ ಟೂರ್ನಿಗಳಿಗೆ ಪಾಕ್‌ ತಂಡದ ಮುಖ್ಯಕೋಚ್‌ ಆಗಿ ಗ್ಯಾರಿ ಕೆಲಸ ಮಾಡಲಿದ್ದಾರೆ ಎಂದು ಪಿಸಿಬಿ ಹೇಳಿತ್ತು. ಆದ್ರೆ ಕೋಚ್‌ ಆಗಿ ನೇಮಕಗೊಂಡ ನಾಲ್ಕೇ ತಿಂಗಳಿಗೆ ಕೋಚ್‌ಹುದ್ದೆಗೆ ಗುಡ್‌ಬೈ ಹೇಳಿದ್ದಾರೆ.

    ಗ್ಯಾರಿ ಕೋಚ್‌ ಆಗಿ ನಿರ್ವಹಿಸಿದ ಮೊದಲ ಟಿ20 ವಿಶ್ವಕಪ್‌ ಆವೃತ್ತಿಯಲ್ಲೇ ಪಾಕ್‌ ಹೀನಾಯ ಸೋಲಿಗೆ ತುತ್ತಾಯಿತು. ಆ ಆವೃತ್ತಿಯಲ್ಲಿ ಪಾಕ್‌ ಲೀಗ್‌ಸುತ್ತಿನಲ್ಲೇ ಹೊರಬಿದ್ದಿತು. ಇದನ್ನೂ ಓದಿ: 2025ರ ಐಪಿಎಲ್‌ನಲ್ಲೂ ಮಹಿ ಆಡೋದು ಫಿಕ್ಸ್‌ – ಅ.31ಕ್ಕೆ ರಿಟೇನ್‌ ಆಟಗಾರರ ಭವಿಷ್ಯ!

  • ಟಿ20 ವಿಶ್ವಕಪ್‌ ಪ್ರಶಸ್ತಿಯನ್ನು ದೇಶಕ್ಕೆ ಅರ್ಪಿಸಿದ ರೋಹಿತ್‌ – ವೇದಿಕೆಯಲ್ಲಿ ಕೊಹ್ಲಿ ಭಾವುಕ!

    ಟಿ20 ವಿಶ್ವಕಪ್‌ ಪ್ರಶಸ್ತಿಯನ್ನು ದೇಶಕ್ಕೆ ಅರ್ಪಿಸಿದ ರೋಹಿತ್‌ – ವೇದಿಕೆಯಲ್ಲಿ ಕೊಹ್ಲಿ ಭಾವುಕ!

    ಬೆಂಗಳೂರು: 2024ರ ಟಿ20 ವಿಶ್ವಕಪ್‌ (T20 World Cup 2024) ವಿಜೇತ ಭಾರತ ತಂಡಕ್ಕೆ ಗೌರವಿಸುವ ಸಲುವಾಗಿ ವಾಂಖೆಡೆ ಮೈದಾನದಲ್ಲಿ ನಡೆದ ವಿಜಯೋತ್ಸವ ಕಾರ್ಯಕ್ರಮವು ಅನೇಕ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ಟೀಂ ಇಂಡಿಯಾದ ಪ್ರತಿಯೊಬ್ಬ ಆಟಗಾರರು ಮಾತನಾಡಿ ಹಂಚಿಕೊಂಡರು. ಈ ವೇಳೆ ಟಿ20 ವಿಶ್ವಕಪ್‌ ಪ್ರಶಸ್ತಿಯನ್ನು ರೋಹಿತ್‌ ಶರ್ಮಾ ಇಡೀ ದೇಶಕ್ಕೆ ಸಮರ್ಪಿಸಿದರು.

    ನಾಯಕ ರೋಹಿತ್‌ ಶರ್ಮಾ ಮಾತನಾಡಿ ಮುಂಬೈ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು. ಜೊತೆಗೆ ತಂಡದ ಪ್ರತಿಯೊಬ್ಬ ಆಟಗಾರನ ಶ್ರಮವನ್ನು ಗುಣಗಾನ ಮಾಡಿದರು. ಅಷ್ಟೇ ಅಲ್ಲದೇ ಈ ಗೆಲುವಿನಲ್ಲಿ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಅವರ ಕೊಡುಗೆಯನ್ನು ಸ್ಮರಿಸಿದರು. ಇದನ್ನು ಕೇಳಿದ ಪಾಂಡ್ಯ ಮೈದಾನದಲ್ಲೇ ಕಣ್ಣೀರಿಟ್ಟರು. ಕೊನೇ ಓವರ್‌ನ ಮೊದಲ ಎಸೆತದಲ್ಲಿ ಡೇವಿಡ್‌ ಮಿಲ್ಲರ್‌ ಅವರನ್ನು ಔಟ್‌ ಮಾಡಿದ್ದೇ ಗೆಲುವಿಗೆ ದೊಡ್ಡ ತಿರುವು ಕೊಟ್ಟಿತು ಎಂದು ರೋಹಿತ್‌ ಗುಣಗಾನ ಮಾಡಿದರು.

    ಅಷ್ಟೇ ಅಲ್ಲ, ಭಾರತೀಯ ಕ್ರಿಕೆಟ್ ತಂಡವನ್ನು ಸ್ವಾಗತಿಸಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು, ಅವರು ಈ ಟಿ20 ವಿಶ್ವಕಪ್ ಪ್ರಶಸ್ತಿಗಾಗಿ ಆಟಗಾರರಂತೆ ಹಪಹಪಿಸುತ್ತಿದ್ದರು. ಇಂದು ಎಲ್ಲರ ಕನಸು ನನಸಾಗಿದೆ. ಈ ವಿಶ್ವಕಪ್‌ ನಮ್ಮ ಗೆಲುವಲ್ಲ, ದೇಶದ ಗೆಲುವು, ದೇಶದ ಪ್ರತಿಯೊಬ್ಬರಿಗೂ ಸೇರಿದ್ದು ಎಂದು ಭಾವುಕರಾದರು.

    ಇದೇ ವೇಳೆ ಮಾತನಾಡಿದ ನಿರ್ಗಮಿತ ಕೋಚ್ ರಾಹುಲ್ ದ್ರಾವಿಡ್, ನಾನು ಈ ಪ್ರೀತಿಯನ್ನು ಕಳೆದುಕೊಳ್ಳಲಿದ್ದೇನೆ, ರಾತ್ರಿ ಬೀದಿಗಳಲ್ಲಿ ನಾನು ಕಂಡದ್ದನ್ನು ನಾನು ಮರೆಯುವುದಿಲ್ಲ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

    ಕೊಹ್ಲಿಯೂ ಭಾವುಕ:
    ರೋಹಿತ್‌ ಬಳಿಕ ಮಾತನಾಡಿದ ಕಿಂಗ್‌ ಕೊಹ್ಲಿ, ನನ್ನ 15 ವರ್ಷಗಳ ವೃತ್ತಿಜೀವನದಲ್ಲಿ ರೋಹಿತ್ ಇಷ್ಟೊಂದು ಭಾವುಕರಾಗಿರುವುದನ್ನು ನಾನು ನೋಡಿಲ್ಲ. ನಾನು ಡ್ರೆಸ್ಸಿಂಗ್ ರೂಮ್‌ಗೆ ಹೋಗುತ್ತಿದ್ದೆ ಮತ್ತು ರೋಹಿತ್ ಹೊರಗೆ ಬರುತ್ತಿದ್ದರು. ಇಬ್ಬರೂ ಭಾವುಕರಾಗಿ ಪರಸ್ಪರ ಅಪ್ಪಿಕೊಂಡೆವು. ಆ ಕ್ಷಣ ನನಗೆ ವಿಶೇಷವಾಗಿತ್ತು ಎಂದು ಹೇಳಿದರು.

    2007 ಅಥವಾ 2011ರಲ್ಲಿ ನಾವು ವಿಶ್ವಕಪ್ ಗೆದ್ದಾಗ ಹಿರಿಯ ಆಟಗಾರರು ತುಂಬಾ ಅಳುತ್ತಿದ್ದರು. ಆದರೆ ನಾನು ಅವರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಲಿಲ್ಲ. ಖುಷಿಯ ಸಂದರ್ಭದಲ್ಲಿ ಅವರೆಲ್ಲಾ ಯಾಕೆ ಇಷ್ಟೊಂದು ಭಾವುಕರಾಗುತ್ತಿದ್ದಾರೆ ಎಂದು ಆಶ್ಚರ್ಯ ಪಡುತ್ತಿದ್ದೆ. ಆದರೆ ಈಗ ನನಗೆ ಅರ್ಥವಾಯಿತು. ನಾನಿರಲಿ ಅಥವಾ ರೋಹಿತ್ ಆಗಿರಲಿ, ಇಬ್ಬರೂ ಬಹುಕಾಲ ಟ್ರೋಫಿ ಗೆಲ್ಲುವುದರಲ್ಲಿ ನಿರತರಾಗಿದ್ದರು. ಮೊದಲು ನನ್ನ ನಾಯಕತ್ವದಲ್ಲಿ ಮತ್ತು ನಂತರ ರೋಹಿತ್ ನಾಯಕತ್ವದಲ್ಲಿ. ನಾವಿಬ್ಬರೂ ಈ ಟ್ರೋಫಿ ಗೆಲ್ಲಲು ಹತಾಶರಾಗಿದ್ದೆವು. ಈಗ ನಾವು ಗೆದ್ದಿರುವುದು ನಮಗೆ ವಿಶೇಷ. ಗೆದ್ದು ಮತ್ತೆ ವಾಂಖೆಡೆಗೆ ಬರುವುದು ನಮ್ಮ ಪಾಲಿಗೆ ವಿಶೇಷವಾಗಿದೆ ಎಂದು ಹಳೆಯ ನೆನಪುಗಳನ್ನು ಮೆಲುಕುಹಾಕಿದರು.

  • ಅಂದು ಅವಮಾನ, ಇಂದು ಸನ್ಮಾನ – ಟೀಕಿಸಿದ್ದ ಜನರೇ ಜೈಕಾರ ಕೂಗಿದ್ರು; ಭಾವುಕನಾದ ಪಾಂಡ್ಯ

    ಅಂದು ಅವಮಾನ, ಇಂದು ಸನ್ಮಾನ – ಟೀಕಿಸಿದ್ದ ಜನರೇ ಜೈಕಾರ ಕೂಗಿದ್ರು; ಭಾವುಕನಾದ ಪಾಂಡ್ಯ

    ಮುಂಬೈ: ಇಲ್ಲಿನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ನಡೆದ ವಿಶೇಷ ಸನ್ಮಾನ ಕಾರ್ಯಕ್ರಮದಲ್ಲಿ ಭಾರತೀಯ ಆಟಗಾರರ ಪರ ಅಭಿಮಾನಿಗಳು ಜೈಕಾರ ಕೂಗಿದರು. ಇದರಲ್ಲಿ ವಿಶೇಷ ಅನಿಸಿದ್ದು ಹಾರ್ದಿಕ್‌ ಪಾಂಡ್ಯ. ಏಕೆಂದರೆ 2024ರ ಐಪಿಎಲ್‌ ಟೂರ್ನಿ ವೇಳೆ ಇದೇ ಮೈದಾನದಲ್ಲಿ ಪಾಂಡ್ಯ ಪ್ರೇಕ್ಷಕರು ಹಾಗೂ ರೋಹಿತ್‌ ಅಭಿಮಾನಿಗಳಿಂದ ಭಾರೀ ಟೀಕೆಗೆ ಗುರಿಯಾಗಿದ್ದರು. ಅಂದು ಅವಮಾನಿಸಿದ್ದ ಜಾಗದಲ್ಲೇ ಇಂದು ಸನ್ಮಾನ ದೊರೆಯಿತು. ಟೀಕಿಸಿದ್ದ ಅಭಿಮಾನಿಗಳೇ ಜೈಕಾರ ಕೂಗಿದ್ದನ್ನು ಕಂಡು ಹಾರ್ದಿಕ್‌ ಭಾವುಕರಾದರು.

    ಹೌದು. 2024ರ ಐಪಿಎಲ್‌ ಆವೃತ್ತಿಯಲ್ಲಿ ಮುಂಬೈ ಫ್ರಾಂಚೈಸಿ ಹೊಸ ನಾಯಕತ್ವ ತರಲು ಬಯಸಿತ್ತು. ಅದಕ್ಕಾಯೇ ಗುಜರಾತ್‌ ಟೈಟಾನ್ಸ್‌ ತಂಡದಿಂದ ಹಾರ್ದಿಕ್‌ ಪಾಂಡ್ಯ ಅವರನ್ನು ಮತ್ತೆ ತವರು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಟಿ20 ವಿಶ್ವಕಪ್‌ ಒತ್ತಡವನ್ನೂ ನಿಭಾಯಿಸಬೇಕಿದ್ದ ಕಾರಣ,‌ 5 ಬಾರಿ ಚಾಂಪಿಯನ್‌ ಪಟ್ಟ ಗೆದ್ದುಕೊಟ್ಟ ರೋಹಿತ್‌ ಶರ್ಮಾರನ್ನು ಬಿಟ್ಟು ಹಾರ್ದಿಕ್‌ ಪಾಂಡ್ಯಗೆ ನಾಯಕತ್ವ ನೀಡಲಾಯಿತು. ಆದ್ರೆ ನಾಯಕತ್ವದ ಹೊಣೆ ಹೊತ್ತ ಭರದಲ್ಲಿ ಹಾರ್ದಿಕ್‌ ಪಾಂಡ್ಯ ಅವರು ಫೀಲ್ಡ್‌ನಲ್ಲಿ ರೋಹಿತ್‌ರನ್ನು ನಡೆಸಿಕೊಂಡ ರೀತಿ ಭಾರೀ ಟೀಕೆಗೆ ಗುರಿಯಾಗುವಂತೆ ಮಾಡಿತ್ತು.

    ಒಂದೊಮ್ಮೆ ಪಂದ್ಯದ ಮಧ್ಯದಲ್ಲೇ ನಾಯಿಯೊಂದು ಮೈದಾನ ಪ್ರವೇಶಿಸಿತ್ತು, ಈ ವೇಳೆ ಪ್ರೇಕ್ಷಕರು ಅದನ್ನು ಹಾರ್ದಿಕ್‌, ಹಾರ್ದಿಕ್‌ ಎಂದು ಕೂಗಿ ಅವಮಾನಿಸಿದ್ದರು. ಇದ್ಯಾ‌ವುದಕ್ಕೂ ಕುಗ್ಗದ ಪಾಂಡ್ಯ ತಮ್ಮ ಪ್ರದರ್ಶನ ಮುಂದುವರಿಸಿದರು. ಆದ್ರೆ ಸತತ ಸೋಲುಗಳಿಂದಾಗಿ ಮುಂಬೈ ತಂಡ ಲೀಗ್‌ ಸುತ್ತಿನಲ್ಲಿ ಹೊರಬಿದ್ದಿತು. ಇದರಿಂದ ಪಾಂಡ್ಯ ನಾಯಕತ್ವದ ಬಗ್ಗೆಯೂ ಭಾರೀ ಟೀಕೆ ವ್ಯಕ್ತವಾಗಿತ್ತು. ಇಂದು ಅದೇ ಮೈದಾನದಲ್ಲಿ ಪಾಂಡ್ಯ ಸನ್ಮಾನ ಸ್ವೀಕರಿಸಿದ್ದಾರೆ.

    ಟಿ20 ವಿಶ್ವಕಪ್‌ ಟೂರ್ನಿಯ ಅಂತಿಮ ಓವರ್‌ನಲ್ಲಿ ಪಾಂಡ್ಯ ಅವರ ಚಾಣಾಕ್ಷ ಬೌಲಿಂಗ್‌ ಭಾರತಕ್ಕೆ ಗೆಲುವು ತಂದುಕೊಟ್ಟಿತು. ನಿರ್ಣಾಯಕ ಸಮಯದಲ್ಲಿ ಹೆನ್ರಿಕ್‌ ಕ್ಲಾಸೆನ್‌, ಡೇವಿಡ್‌ ಮಿಲ್ಲರ್‌ ಅವರ ವಿಕೆಟ್‌ಗಳನ್ನು ಪಡೆಯುವ ಮೂಲಕ ಟೀಂ ಇಂಡಿಯಾ ಗೆಲುವಿಗೆ ಕಾರಣರಾದರು. ಹೀಗಾಗಿ ಭಾರತದ ಟಿ 20 ವಿಶ್ವಕಪ್ ಗೆಲುವಿನ ನಂತರ ಪಾಂಡ್ಯ ಅವರ ಜೀವನವು ಅನೇಕ ರೀತಿಯಲ್ಲಿ ಬದಲಾವಣೆ ಕಂಡಿತು.

    ಕಠಿಣ ದಿನಗಳನ್ನು ನೆನಪಿಸಿಕೊಂಡ ಪಾಂಡ್ಯ
    ಪಂದ್ಯದ ಬಳಿಕ ಮಾತನಾಡಿದ್ದ ಪಾಂಡ್ಯ ಕಠಿಣ ದಿನಗಳನ್ನು ನೆನಪಿಸಿಕೊಂಡಿದ್ದರು. ಇದು ತುಂಬಾ ಭಾವನಾತ್ಮಕ ಕ್ಷಣ. ನಾವು ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ಇಂದು ಇಡೀ ರಾಷ್ಟ್ರವು ಬಯಸಿದ್ದನ್ನ ನಾವು ಪೂರೈಸಿದ್ದೇವೆ. ಇದು ನನಗೆ ಹೆಚ್ಚು ವಿಶೇಷವಾಗಿದೆ. ಏಕೆಂದರೆ ನನ್ನ ಕೊನೆಯ 6 ತಿಂಗಳು ಕಷ್ಟಕರವಾಗಿದ್ದವು ಎಂದು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದರು.

  • Champions: ವಿಶ್ವ ಚಾಂಪಿಯನ್ಸ್‌ಗೆ ಬಂಪರ್‌ ಗಿಫ್ಟ್‌ – 125 ಕೋಟಿ ರೂ. ಬಹುಮಾನ ಚೆಕ್‌ ವಿತರಣೆ

    Champions: ವಿಶ್ವ ಚಾಂಪಿಯನ್ಸ್‌ಗೆ ಬಂಪರ್‌ ಗಿಫ್ಟ್‌ – 125 ಕೋಟಿ ರೂ. ಬಹುಮಾನ ಚೆಕ್‌ ವಿತರಣೆ

    ಮುಂಬೈ: 2024ರ ಟಿ20 ವಿಶ್ವಕಪ್‌ (T20 World Cup 2024) ವಿಜೇತ ಭಾರತ ತಂಡ ಅದ್ಧೂರಿ ವಿಜಯಯಾತ್ರೆ ಮುಗಿಸಿದ ಬೆನ್ನಲ್ಲೇ ಬಿಸಿಸಿಐ ಭರ್ಜರಿ ಉಡುಗೊರೆ ನೀಡಿ ಸನ್ಮಾನಿಸಿದೆ.

    ತಾಯ್ನಾಡಿಗೆ ಮರಳಿದ್ದ ಟೀಂ ಇಂಡಿಯಾ ಆಟಗಾರರಿಗೆ ಮುಂಬೈನಲ್ಲಿ ಅದ್ಧೂರಿ ಸ್ವಾಗತ ದೊರೆಯಿತು. ಮುಂಬೈ ಕಡಲತೀರ ನಾರೀಮನ್ ಪಾಯಿಂಟ್‌ನಿಂದ ಆರಂಭಗೊಂಡ ಅದ್ಧೂರಿ ಯಾತ್ರೆ ವಾಂಖೆಡೆ ಕ್ರೀಡಾಂಗಣ ತಲುಪಿತು. ಬಳಿಕ ಟೀಂ ಇಂಡಿಯಾ ಆಟಗಾರರು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಿದ ಬಿಸಿಸಿಐ 125 ಕೋಟಿ ರೂ. ಬಹುಮಾನ ಮೊತ್ತದ (BCCI Prizemoney) ಚೆಕ್‌ ವಿತರಣೆ ಮಾಡಿತು. ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ ಹಾಗೂ ಕಾರ್ಯದರ್ಶಿ ಜಯ್‌ ಶಾ, ಆಟಗಾರರಿಗೆ ಚೆಕ್‌ ವಿತರಣೆ ಮಾಡಿದರು. ಇದಕ್ಕೂ ಮುನ್ನ ಟೀಂ ಇಂಡಿಯಾ (Team India) ಆಟಗಾರರು ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದರು. ಇದನ್ನೂ ಓದಿ: ಅಂದು ಅವಮಾನವಾಗಿದ್ದ ಜಾಗದಲ್ಲೇ ಸನ್ಮಾನ – ನೆನಪಿದೆಯಾ 2007ರ ರೋಮಾಂಚನಕಾರಿ ಕ್ಷಣ!

    ರೋ-ಕೊ ಜೋಡಿ ಕಮಾಲ್:‌
    ಮುಂಬೈನಲ್ಲಿ ನಡೆದ ಅದ್ಧೂರಿ ವಿಜಯಯಾತ್ರೆಯಲ್ಲಿ ನಾಯಕ ರೋಹಿತ್‌ ಶರ್ಮಾ (Rohit Sharma), ಸ್ಟಾರ್‌ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಭರ್ಜರಿ ಕಮಾಲ್‌ ಮಾಡಿದರು. ವಿಜಯೋತ್ಸವ ಪರೇಡ್‌ ವೇಳೆ ಆಟಗಾರರ ಮಧ್ಯೆ ನಿಂತು ಸಂಭ್ರಮದ ಕಡಲಲ್ಲಿ ತೇಲುತ್ತಿದ್ದ ರೋಹಿತ್‌ ಶರ್ಮಾರ ಹೆಗಲ ಮೇಲೆ ಕೈಹಾಕಿಕೊಂಡು ಕೊಹ್ಲಿ ಬಸ್‌ ಮುಂಭಾಗಕ್ಕೆ ಕರೆತಂದರು. ಬಳಿಕ ಇಬ್ಬರೂ ಟ್ರೋಫಿ ಎತ್ತಿ ಹಿಡಿದು ಜೋರಾಗಿ ಘರ್ಜಿಸಿದರು. ಈ ದೃಶ್ಯದ ವೀಡಿಯೋ ತುಣುಕು ಕೆಲವೇ ಕ್ಷಣಗಳಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿತು. ಇದನ್ನೂ ಓದಿ: ವಿಜಯಯಾತ್ರೆ ಶುರು – ʻವಿಶ್ವʼಗೆದ್ದ ವೀರರನ್ನು ಕಣ್ತುಂಬಿಕೊಂಡ ಅಭಿಮಾನಿಗಳು!

    ನಂಬಿಕೆ ಉಳಿಸಿಕೊಂಡ ಕೊಹ್ಲಿ:
    ವಿಶ್ವಕಪ್‌ ಟೂರ್ನಿಯ ಆರಂಭದಿಂದಲೂ ʻರೋ-ಕೊʼ ಆರಂಭಿಕ ಜೋಡಿ ಭರ್ಜರಿ ಕಮಾಲ್‌ ಮಾಡಿತ್ತು. ಆದ್ರೆ ಆರಂಭಿಕ ಪಂದ್ಯದಿಂದಲೂ ಫಾರ್ಮ್‌ ಕಳೆದುಕೊಂಡಿದ್ದ ಕಿಂಗ್‌ ಕೊಹ್ಲಿ ಬಗ್ಗೆ ಅನೇಕರಿಂದ ಟೀಕೆಗಳು ವ್ಯಕ್ತವಾಗುತ್ತಿತ್ತು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ನಾಯಕ ರೋಹಿತ್‌, ವಿರಾಟ್‌ ಪರವಾಗಿಯೇ ಮಾತನಾಡುತ್ತಾ ಬಂದಿದ್ದರು. ಬಹುಶಃ ವಿರಾಟ್‌ ತಮ್ಮ ಆಟವನ್ನು ಫೈನಲ್‌ಗೆ ಉಳಿಸಿಕೊಂಡಿದ್ದಾರೆ ಎಂದು ವಿಶ್ವಾಸದ ನುಡಿಗಳನ್ನಾಡಿದ್ದರು. ಅದರಂತೆ ರೋಹಿತ್‌ ಶರ್ಮಾ ಅವರ ನಂಬಿಕೆಯನ್ನು ಕೊಹ್ಲಿ ಸುಳ್ಳಾಗಿಸಲಿಲ್ಲ. ಸ್ಫೋಟಕ ಪ್ರದರ್ಶನದೊಂದಿಗೆ ತಾಳ್ಮೆಯ ಆಟವಾಡಿದ ಕೊಹ್ಲಿ 59 ಎಸೆತಗಳಲ್ಲಿ 76 ರನ್‌ ಗಳಿಸಿದ್ದರು. ಇದು ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತ 170 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಅಲ್ಲದೇ ವಿಶ್ವಕಪ್‌ ಇತಿಹಾಸದಲ್ಲೇ ತಂಡದವೊಂದರ ಗರಿಷ್ಠ ರನ್‌ ಮೊತ್ತವೂ (176) ಆಯಿತು.

    ʻವಿಶ್ವʼ ವಿಜೇತರಿಗೆ ನಮೋ ಅಭಿನಂದನೆ:
    ಮುಂಬೈಗೆ ತೆರಳುವ ಮುನ್ನ ಟೀಮ್​ ಇಂಡಿಯಾ ಆಟಗಾರರು ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi)ಅವರ ನಿವಾಸಕ್ಕೆ (Team India Arrival) ಭೇಟಿ ನೀಡಿ ವಿಶ್ವಕಪ್​ ಗೆಲುವಿನ ಕುರಿತು ಪ್ರಧಾನಿ ಜತೆ ತಮ್ಮ ಅನುಭವ ಹಂಚಿಕೊಂಡರು. ಮೋದಿ ಕೂಡ ಆಟಗಾರರೊಂದಿಗೆ ಕೆಲ ಕಾಲ ಕುಶಲೋಪರಿ ನಡೆಸಿದರು. ಜೊತೆಗೆ ಗ್ರೂಫ್​ ಫೋಟೊ ತೆಗೆಸಿಕೊಂಡರು. ಆಟಗಾರರಿಗೆ ವಿಶೇಷ ಭೋಜನ ಕೂಟ ಸಹ ಏರ್ಪಡಿಸಲಾಗಿತ್ತು. ಈ ವೇಳೆ ಬಿಸಿಸಿಐ ಕಡೆಯಿಂದ ಮೋದಿಗೆ (PM Modi) ನಮೋ ನಂ.1 ಎಂದು ಬರೆದ ಟೀಂ​ ಇಂಡಿಯಾ ಜೆರ್ಸಿಯನ್ನು (Indian Cricket Jersey) ಉಡುಗೊರೆಯಾಗಿ ನೀಡಲಾಯಿತು. ಇದನ್ನೂ ಓದಿ: T20 ವಿಶ್ವಕಪ್‌ ಗೆಲುವಿನ ಸಂಭ್ರಮ – ಬಿಸಿಸಿಐನಿಂದ ಮೋದಿಗೆ ʻನಮೋ ನಂ.1ʼ ಟೀ ಶರ್ಟ್‌ ಗಿಫ್ಟ್‌!

  • ವಿಶ್ವಕಪ್‌ ಟ್ರೋಫಿ ಹಿಡಿದು ಘರ್ಜಿಸಿದ ʻರೋ-ಕೊʼ – ವಾಂಖೆಡೆ ಮೈದಾನ ತಲುಪಿದ ವಿಜಯಯಾತ್ರೆ!

    ವಿಶ್ವಕಪ್‌ ಟ್ರೋಫಿ ಹಿಡಿದು ಘರ್ಜಿಸಿದ ʻರೋ-ಕೊʼ – ವಾಂಖೆಡೆ ಮೈದಾನ ತಲುಪಿದ ವಿಜಯಯಾತ್ರೆ!

    ಮುಂಬೈ: 17 ವರ್ಷಗಳ ಬಳಿಕ ಟಿ20 ವಿಶ್ವಕಪ್‌ (T20 World Cup) ಗೆದ್ದು ತಂದ ಟೀಂ ಇಂಡಿಯಾ ಕ್ರಿಕೆಟ್‌ ಆಟಗಾರರನ್ನು ಗೌರವಿಸುವ ಸಲುವಾಗಿ ಮುಂಬೈನಲ್ಲಿಂದು ಅದ್ಧೂರಿ ವಿಜಯಯಾತ್ರೆ ನಡೆಯಿತು. ಮುಂಬೈ (Mumbai) ಕಡಲತೀರ ನಾರೀಮನ್ ಪಾಯಿಂಟ್‌ನಿಂದ ಆರಂಭಗೊಂಡ ಅದ್ಧೂರಿ ಯಾತ್ರೆ ಸುಮಾರು 2 ಕಿಮೀ ತಲುಪಿತು. ವಿಜಯಯಾತ್ರೆಯಲ್ಲಿ ನಾಯಕ ರೋಹಿತ್‌ ಶರ್ಮಾ, ಸ್ಟಾರ್‌ ಕ್ರಿಕೆಟಿಗ ವಿರಾಟ್‌ ಕೊಹ್ಲಿ (Virat Kohli) ಇಬ್ಬರು ನೆರೆದಿದ್ದ ಅಭಿಮಾನಿಗಳ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುವ ಕೆಲಸ ಮಾಡಿದರು.

    ವಿಜಯೋತ್ಸವ ಪರೇಡ್‌ ವೇಳೆ ಆಟಗಾರರ ಮಧ್ಯೆ ನಿಂತು ಸಂಭ್ರಮದ ಕಡಲಲ್ಲಿ ತೇಲುತ್ತಿದ್ದ ರೋಹಿತ್‌ ಶರ್ಮಾರ (Rohit Sharma) ಹೆಗಲ ಮೇಲೆ ಕೈಹಾಕಿಕೊಂಡು ಕೊಹ್ಲಿ ಬಸ್‌ ಮುಂಭಾಗಕ್ಕೆ ಕರೆತಂದರು. ಬಳಿಕ ಇಬ್ಬರೂ ಟ್ರೋಫಿಯನ್ನು ಎತ್ತಿ ಹಿಡಿದು ಜೋರಾಗಿ ಕೇಕೆ ಹಾಕಿದರು. ಈ ದೃಶ್ಯದ ವೀಡಿಯೋ ತುಣುಕು ಕೆಲವೇ ಕ್ಷಣಗಳಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಅಂದು ಅವಮಾನವಾಗಿದ್ದ ಜಾಗದಲ್ಲೇ ಸನ್ಮಾನ – ನೆನಪಿದೆಯಾ 2007ರ ರೋಮಾಂಚನಕಾರಿ ಕ್ಷಣ!

    ನಾಯಕನ ನಂಬಿಕೆ ಎತ್ತಿ ಹಿಡಿದ ಕಿಂಗ್‌ ಕೊಹ್ಲಿ:
    ವಿಶ್ವಕಪ್‌ ಟೂರ್ನಿಯ ಆರಂಭದಿಂದಲೂ ʻರೋ-ಕೊʼ ಆರಂಭಿಕ ಜೋಡಿ ಭರ್ಜರಿ ಕಮಾಲ್‌ ಮಾಡಿತ್ತು. ಆದ್ರೆ ಆರಂಭಿಕ ಪಂದ್ಯದಿಂದಲೂ ಫಾರ್ಮ್‌ ಕಳೆದುಕೊಂಡಿದ್ದ ಕಿಂಗ್‌ ಕೊಹ್ಲಿ ಬಗ್ಗೆ ಅನೇಕರಿಂದ ಟೀಕೆಗಳು ವ್ಯಕ್ತವಾಗುತ್ತಿತ್ತು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ನಾಯಕ ರೋಹಿತ್‌, ವಿರಾಟ್‌ ಪರವಾಗಿಯೇ ಮಾತನಾಡುತ್ತಾ ಬಂದಿದ್ದರು. ಬಹುಶಃ ವಿರಾಟ್‌ ತಮ್ಮ ಆಟವನ್ನು ಫೈನಲ್‌ಗೆ ಉಳಿಸಿಕೊಂಡಿದ್ದಾರೆ ಎಂದು ವಿಶ್ವಾಸದ ನುಡಿಗಳನ್ನಾಡಿದ್ದರು. ಅದರಂತೆ ರೋಹಿತ್‌ ಶರ್ಮಾ ಅವರ ನಂಬಿಕೆಯನ್ನು ಕೊಹ್ಲಿ ಸುಳ್ಳಾಗಿಸಲಿಲ್ಲ. ಸ್ಫೋಟಕ ಪ್ರದರ್ಶನದೊಂದಿಗೆ ತಾಳ್ಮೆಯ ಆಟವಾಡಿದ ಕೊಹ್ಲಿ 59 ಎಸೆತಗಳಲ್ಲಿ 76 ರನ್‌ ಗಳಿಸಿದ್ದರು. ಇದು ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತ 170 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಅಲ್ಲದೇ ವಿಶ್ವಕಪ್‌ ಇತಿಹಾಸದಲ್ಲೇ ತಂಡದವೊಂದರ ಗರಿಷ್ಠ ರನ್‌ ಮೊತ್ತವೂ (176) ಆಯಿತು.

    ವಿಜಯಯಾತ್ರೆ ಮುಕ್ತಾಯ:
    ಟಿ-20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೋಜಕ ಜಯ ಸಾಧಿಸಿ, 17 ವರ್ಷಗಳ ಬಳಿಕ ಚಾಂಪಿಯನ್ ಆದ ಟೀಂ ಇಂಡಿಯಾಗೆ ಸ್ವದೇಶದಲ್ಲಿ ಅದ್ಧೂರಿ, ವೈಭವೋಪೇತ ಸ್ವಾಗತ ಸಿಕ್ಕಿದೆ. ಮುಂಬೈನ ಕಡಲ ಕಿನಾರೆಯಲ್ಲಿ 2 ಕಿಮೀ ರೋಡ್ ಶೋನಲ್ಲಿ ಅಬ್ಬಬ್ಬಾ… ಎನಿಸುವಷ್ಟು ಜನಸಾಗರ ಜಮಾಯಿಸಿ ಬರಮಾಡಿಕೊಂಡಿದೆ. ಸದ್ಯ ರೋಡ್‌ ಶೋ ಮುಕ್ತಾಯಗೊಂಡು ಮುಂಬೈನ ವಾಂಖೆಡೆ ಕ್ರೀಡಾಂಗಣ ತಲುಪಿದೆ. ಕೆಲವೇ ಕ್ಷಣದಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆಟಗಾರರು ಹಾಗೂ ಬಿಸಿಸಿಐ ಸಿಬ್ಬಂದಿ ಬಳಗವನ್ನು ಸನ್ಮಾನಿಸಲಾಗುತ್ತದೆ. ಇದಾದ ಬಳಿಕ ಬಿಸಿಸಿಐ ಘೋಷಿಸಿರುವ 125 ಕೋಟಿ ರೂ. ಬಹುಮಾನ ಮೊತ್ತವನ್ನು ಆಟಗಾರರಿಗೆ ಪ್ರದಾನ ಮಾಡಲಾಗುತ್ತದೆ. ಇದನ್ನೂ ಓದಿ: ವಿಜಯಯಾತ್ರೆ ಶುರು – ʻವಿಶ್ವʼಗೆದ್ದ ವೀರರನ್ನು ಕಣ್ತುಂಬಿಕೊಂಡ ಅಭಿಮಾನಿಗಳು!

    ವಿಜಯೋತ್ಸವಕ್ಕೆ ಆಹ್ವಾನಿಸಿದ್ದ ರೋಹಿತ್‌:
    ಮುಂಬೈನವರೇ ಆಗಿರುವ ನಾಯಕ ರೋಹಿತ್ ಶರ್ಮಾ ತಮ್ಮ ತವರಿನ ಅಭಿಮಾನಿಗಳಿಗೆ ಈ ಬೃಹತ್ ಮೆರವಣಿಯಲ್ಲಿ ಪಾಲ್ಗೊಳ್ಳುವಂತೆ ವಿಶೇಷವಾಗಿ ಮನವಿ ಮಾಡಿದ್ದರು. ಭಾರತಕ್ಕೆ ಬರುವ ಮುನ್ನವೇ ರೋಹಿತ್​ ‘ಇಂತಹ ವಿಶೇಷ ಸಂಭ್ರಮವನ್ನು ನಿಮ್ಮೊಂದಿಗೆ ಆಚರಿಸುವ ಬಯಕೆಯಿದೆ. ಮರೈನ್ ಡ್ರೈವ್ ಹಾಗೂ ವಾಂಖೇಡೆ ಕ್ರೀಡಾಂಗಣದಲ್ಲಿ ನಮ್ಮೊಂದಿಗೆ ನೀವೂ ಜತೆಯಾಗಿ’ ಎಂದು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಲ್ಲದೇ ವಾಂಖೆಡೆ ಮೈದಾನಕ್ಕೆ ಉಚಿತ ಪ್ರವೇಶ ಕಲ್ಪಿಸಿದ್ದರಿಂದ ಮೈದಾನದ ತುಂಬಾ ಅಭಿಮಾನಿಗಳು ಕಿಕ್ಕಿರಿದಿದ್ದರು. ಇದನ್ನೂ ಓದಿ: ʻವಿಶ್ವʼ ವಿಜಯಯಾತ್ರೆಗೆ ಕ್ಷಣಗಣನೆ – ಕ್ರಿಕೆಟ್‌ ಅಭಿಮಾನಿಗಳಿಂದ ʻಮೋದಿ ಮೋದಿʼ ಘೋಷಣೆ!

    ಮುಂಬೈಗೆ ತೆರಳುವ ಮುನ್ನ ಟೀಮ್​ ಇಂಡಿಯಾ ಆಟಗಾರರು ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi)ಅವರ ನಿವಾಸಕ್ಕೆ (Team India Arrival) ಭೇಟಿ ನೀಡಿ ವಿಶ್ವಕಪ್​ ಗೆಲುವಿನ ಕುರಿತು ಪ್ರಧಾನಿ ಜತೆ ತಮ್ಮ ಅನುಭವ ಹಂಚಿಕೊಂಡರು. ಮೋದಿ ಕೂಡ ಆಟಗಾರರೊಂದಿಗೆ ಕೆಲ ಕಾಲ ಕುಶಲೋಪರಿ ನಡೆಸಿದರು. ಜೊತೆಗೆ ಗ್ರೂಫ್​ ಫೋಟೊ ತೆಗೆಸಿಕೊಂಡರು. ಆಟಗಾರರಿಗೆ ವಿಶೇಷ ಭೋಜನ ಕೂಟ ಸಹ ಏರ್ಪಡಿಸಲಾಗಿತ್ತು. ಈ ವೇಳೆ ಬಿಸಿಸಿಐ ಕಡೆಯಿಂದ ಮೋದಿಗೆ (PM Modi) ನಮೋ ನಂ.1 ಎಂದು ಬರೆದ ಟೀಂ​ ಇಂಡಿಯಾ ಜೆರ್ಸಿಯನ್ನು (Indian Cricket Jersey) ಉಡುಗೊರೆಯಾಗಿ ನೀಡಲಾಯಿತು.

  • ವಿಜಯಯಾತ್ರೆ ಶುರು – ʻವಿಶ್ವʼಗೆದ್ದ ವೀರರನ್ನು ಕಣ್ತುಂಬಿಕೊಂಡ ಅಭಿಮಾನಿಗಳು!

    ವಿಜಯಯಾತ್ರೆ ಶುರು – ʻವಿಶ್ವʼಗೆದ್ದ ವೀರರನ್ನು ಕಣ್ತುಂಬಿಕೊಂಡ ಅಭಿಮಾನಿಗಳು!

    – ವಿಶ್ವವಿಜೇತರನ್ನು ನೋಡಲು ಇರುವೆಗಳಂತೆ ಮುತ್ತಿಕೊಂಡ ಫ್ಯಾನ್ಸ್‌
    – ಸಮುದ್ರವನ್ನೂ ಮೀರಿಸಿದ ಅಭಿಮಾನಿಗಳ ಸಾಗರ!

    ಮುಂಬೈ: 17 ವರ್ಷಗಳ ಬಳಿಕ ಟಿ20 ವಿಶ್ವಕಪ್‌ ಗೆದ್ದು ಐಸಿಸಿ ಪ್ರಶಸ್ತಿಯ ಬರ ನೀಗಿಸಿದ ʻವಿಶ್ವʼ ವಿಜೇತ ಟೀಂ ಇಂಡಿಯಾದ (Team India) ವಿಜಯಯಾತ್ರೆ ಶುರುವಾಗಿದೆ. ಮುಂಬೈ ಕಡಲತೀರ ನಾರೀಮನ್ ಪಾಯಿಂಟ್‌ನಿಂದ ಅದ್ಧೂರಿ ಯಾತ್ರೆ ಆರಂಭವಾಗಿದೆ. ಇಲ್ಲಿಂದ ಸುಮಾರು 2 ಕಿಮೀ ವಿಜಯೋತ್ಸವ ಯಾತ್ರೆ ನಡೆಯಲಿದ್ದು, ನಂತರ ವಾಂಖೆಡೆ ಮೈದಾನ ತಲುಪಲಿದೆ.

    ನಾಯಕ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಹಾರ್ದಿಕ್‌ ಪಾಂಡ್ಯ, ಜಸ್ಪ್ರೀತ್‌ ಬುಮ್ರಾ ಸೇರಿದಂತೆ ವಿಶ್ವಕಪ್‌ ವಿಜೇತ ತಂಡ ತೆರೆದ ಬಸ್‌ನಲ್ಲಿ ಹೊರಟಿದೆ. ಪಕ್ಕದಲ್ಲೇ ಇದ್ದ ಸಮುದ್ರವನ್ನೂ ನಾಚಿಸುವಂತೆ ನೆರೆದಿದ್ದ ಅಭಿಮಾನಿಗಳ ಸಾಗರ ಕಂಡು ಆಟಗಾರರು ಹರ್ಷಗೊಂಡಿದ್ದಾರೆ. ಮೈಮೇಲೆ ರಾಷ್ಟ್ರಧ್ವಜ ಹೊದ್ದು, ಕೈಯಲ್ಲಿ ವಿಶ್ವಕಪ್‌ ಟ್ರೋಫಿ ಹಿಡಿದು ಅಭಿಮಾನಿಗಳೊಂದಿಗೆ ಸಂಭ್ರಮಿಸುತ್ತಾ ಕೈಬೀಸಿ ಮುಂದೆ ಸಾಗುತ್ತಿದ್ದಾರೆ.

    ವಿಜಯಯಾತ್ರೆಯಲ್ಲಿ ʻರೋಹಿತ್‌ ಭಾಯ್‌, ಕೊಹ್ಲಿ ಭಾಯ್‌ʼ ಘೋಷಣೆಗಳು ಮೊಳಗಿವೆ. ಬೆಳಗ್ಗೆಯಿಂದಲೇ ಕಾದು ನಿಂತಿದ್ದ ಅಭಿಮಾನಿಗಳು ಮಳೆಯಲ್ಲೂ ಉತ್ಸಾಹ ಕಳೆದಕೊಳ್ಳದೇ ವಿಶ್ವವೀರರನ್ನ ಸ್ವಾಗತಿಸಿದ್ದಾರೆ. ಸುಮಾರು 2 ಕಿಮೀ ವಿಜಯಯಾತ್ರೆ ತೆರಳಲಿದ್ದು, ನಂತರ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆಟಗಾರರು ಹಾಗೂ ಬಿಸಿಸಿಐ ಸಿಬ್ಬಂದಿ ಬಳಗವನ್ನು ಸನ್ಮಾನಿಸಲಾಗುತ್ತದೆ. ಇದಾದ ಬಳಿಕ ಬಿಸಿಸಿಐ ಘೋಷಿಸಿರುವ 125 ಕೋಟಿ ರೂ. ಬಹುಮಾನ ಮೊತ್ತವನ್ನು ಆಟಗಾರರಿಗೆ ಪ್ರದಾನ ಮಾಡಲಾಗುತ್ತದೆ.

    ವೀ

    ಅವಮಾನವಾದ ಜಾಗದಲ್ಲೇ ಸನ್ಮಾನ:
    ಮಾಜಿ ನಾಯಕ ಎಂ.ಎಸ್‌ ಧೋನಿ ಅವರ ನಾಯಕತ್ವದಲ್ಲಿ ಭಾರತ ತಂಡ ಚೊಚ್ಚಲ ಟಿ20 ವಿಶ್ವಕಪ್ ಗೆಲುವನ್ನು ಕ್ರಿಕೆಟ್‌ ಜಗತ್ತು ಮರೆಯುವಂತಿಲ್ಲ. ಹೌದು… 2007ರಲ್ಲಿ ಟೀಂ ಇಂಡಿಯಾಕ್ಕೆ ಅತ್ಯಂತ ಪ್ರತಿಷ್ಠೆಯ ಟೂರ್ನಿ ಅದಾಗಿತ್ತು. 2007ರ ಅದೇ ವರ್ಷ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ಏಕದಿನ ವಿಶ್ವಕಪ್ (2007 ODI World Cup) ಟೂರ್ನಿಯೂ ನಡೆದಿತ್ತು. ಆ ಆವೃತ್ತಿಯಲ್ಲಿ ಟೀಂ ಇಂಡಿಯಾ (Team India) ಲೀಗ್‌ ಹಂತದಲ್ಲೇ ಹೀನಾಯ ಸೋಲು ಕಂಡು ಹೊರಬಿದ್ದಿತ್ತು. ಇದಾದ ಬಳಿಕ ದೇಶಾದ್ಯಂತ ಪ್ರತಿಭಟನೆ ನಡೆದು, ಪ್ರಮುಖ ಆಟಗಾರರ ಮೆನಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಇದಾದ ಕೆಲವೇ ದಿನಗಳಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯೂ ನಿಗದಿಯಾಗಿತ್ತು. ಏಕದಿನ ಕ್ರಿಕೆಟ್‌ನಲ್ಲಿ ಆಡಿದ್ದ ಖ್ಯಾತನಾಮರು ಟಿ20 ಆಡಲು ಹಿಂದೇಟು ಹಾಕಿದ್ದ ಕಾರಣ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಎಂ.ಎಸ್ ಧೋನಿ ಅವರಿಗೆ ನಾಯಕತ್ವದ ಹೊಣೆ ನೀಡಲಾಯಿತು. ಟೂರ್ನಿಯುದ್ದಕ್ಕೂ ಸಂಘಟಿತ ಪ್ರದರ್ಶನದೊಂದಿಗೆ ಟೀಂ ಇಂಡಿಯಾ ಚೊಚ್ಚಲ ಆವೃತ್ತಿಯಲ್ಲೇ ಟ್ರೋಫಿ ಎತ್ತಿ ಹಿಡಿಯಿತು. ಅಂದು ಸಹ ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳು ಟೀಂ ಇಂಡಿಯಾವನ್ನು ತವರಿಗೆ ಅದ್ಧೂರಿಯಾಗಿ ಸ್ವಾಗತಿಸಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಕಲ್ಲುತೂರಾಟ ನಡೆಸಿದ್ದ ಅಭಿಮಾನಿಗಳು ಧೋನಿ ಬಳಗ ಕಪ್‌ ಎತ್ತಿ ಹಿಡಿಯುತ್ತಿದ್ದಂತೆ ಹೂವಿನ ಮಳೆ ಸುರಿಸಿದ್ದರು. ಇದೀಗ ರೋಹಿತ್‌ ಬಳಗವನ್ನು ಸ್ವಾಗತಿಸಿರುವುದು ಅದೇ ದೃಶ್ಯವನ್ನು ನೆನಪಿಸಿದೆ.

    ವಿಜಯೋತ್ಸವಕ್ಕೆ ಆಹ್ವಾನಿಸಿದ್ದ ರೋಹಿತ್‌:
    ಮುಂಬೈನವರೇ ಆಗಿರುವ ನಾಯಕ ರೋಹಿತ್ ಶರ್ಮಾ ತಮ್ಮ ತವರಿನ ಅಭಿಮಾನಿಗಳಿಗೆ ಈ ಬೃಹತ್ ಮೆರವಣಿಯಲ್ಲಿ ಪಾಲ್ಗೊಳ್ಳುವಂತೆ ವಿಶೇಷವಾಗಿ ಮನವಿ ಮಾಡಿದ್ದರು. ಭಾರತಕ್ಕೆ ಬರುವ ಮುನ್ನವೇ ರೋಹಿತ್​ ‘ಇಂತಹ ವಿಶೇಷ ಸಂಭ್ರಮವನ್ನು ನಿಮ್ಮೊಂದಿಗೆ ಆಚರಿಸುವ ಬಯಕೆಯಿದೆ. ಮರೈನ್ ಡ್ರೈವ್ ಹಾಗೂ ವಾಂಖೇಡೆ ಕ್ರೀಡಾಂಗಣದಲ್ಲಿ ನಮ್ಮೊಂದಿಗೆ ನೀವೂ ಜತೆಯಾಗಿ’ ಎಂದು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಲ್ಲದೇ ವಾಂಖೆಡೆ ಮೈದಾನಕ್ಕೆ ಉಚಿತ ಪ್ರವೇಶ ಕಲ್ಪಿಸಿದ್ದರಿಂದ ಮೈದಾನದ ತುಂಬಾ ಅಭಿಮಾನಿಗಳು ಕಿಕ್ಕಿರಿದಿದ್ದರು.

    ಮುಂಬೈಗೆ ತೆರಳುವ ಮುನ್ನ ಟೀಮ್​ ಇಂಡಿಯಾ ಆಟಗಾರರು ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ನಿವಾಸಕ್ಕೆ (Team India Arrival) ಭೇಟಿ ನೀಡಿ ವಿಶ್ವಕಪ್​ ಗೆಲುವಿನ ಕುರಿತು ಪ್ರಧಾನಿ ಜತೆ ತಮ್ಮ ಅನುಭವ ಹಂಚಿಕೊಂಡರು. ಮೋದಿ ಕೂಡ ಆಟಗಾರರೊಂದಿಗೆ ಕೆಲ ಕಾಲ ಕುಶಲೋಪರಿ ನಡೆಸಿದರು. ಜೊತೆಗೆ ಗ್ರೂಫ್​ ಫೋಟೊ ತೆಗೆಸಿಕೊಂಡರು. ಆಟಗಾರರಿಗೆ ವಿಶೇಷ ಭೋಜನ ಕೂಟ ಸಹ ಏರ್ಪಡಿಸಲಾಗಿತ್ತು. ಈ ವೇಳೆ ಬಿಸಿಸಿಐ ಕಡೆಯಿಂದ ಮೋದಿಗೆ (PM Modi) ನಮೋ ನಂ.1 ಎಂದು ಬರೆದ ಟೀಂ​ ಇಂಡಿಯಾ ಜೆರ್ಸಿಯನ್ನು (Indian Cricket Jersey) ಉಡುಗೊರೆಯಾಗಿ ನೀಡಲಾಯಿತು.

  • T20 ವಿಶ್ವಕಪ್ ಆಡಲು ಬುಮ್ರಾ, ಹರ್ಷಲ್ ಪಟೇಲ್ ಫಿಟ್ – ಜಡೇಜಾ ಆಡಲ್ಲ?

    T20 ವಿಶ್ವಕಪ್ ಆಡಲು ಬುಮ್ರಾ, ಹರ್ಷಲ್ ಪಟೇಲ್ ಫಿಟ್ – ಜಡೇಜಾ ಆಡಲ್ಲ?

    ಮುಂಬೈ: ಗಾಯಾಳುವಾಗಿ ಏಷ್ಯಾಕಪ್‍ನಿಂದ (Asia Cup 2022) ಹೊರಗುಳಿದಿದ್ದ ಟೀಂ ಇಂಡಿಯಾದ ವೇಗಿಗಳಾದ ಜಸ್ಪ್ರೀತ್ ಬುಮ್ರಾ (Jasprit Bumrah) ಮತ್ತು ಹರ್ಷಲ್ ಪಟೇಲ್ (Harshal Patel)  ಟಿ20 ವಿಶ್ವಕಪ್‍ಗೆ (T20 World) ಆಯ್ಕೆ ಆಗುವುದು ಖಚಿಗೊಂಡಿದ್ದು, ಆಲ್‍ರೌಂಡರ್ ರವೀಂದ್ರ ಜಡೇಜಾ ಬಹುತೇಕ ಹೊರಗುಳಿಯುವ ಸಾಧ್ಯತೆ ಬಗ್ಗೆ ವರದಿಯಾಗಿದೆ.

    ಮೂಲಗಳ ಪ್ರಕಾರ ಈಗಾಗಲೇ ಬುಮ್ರಾ ಮತ್ತು ಹರ್ಷಲ್ ಪಟೇಲ್ ಫಿಟ್‍ನೆಸ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಟಿ20 ವಿಶ್ವಕಪ್ ಆಯ್ಕೆಗೆ ಲಭ್ಯರಾಗಿದ್ದಾರೆ ಎಂದು ವರದಿಯಾಗಿದೆ. ಇಬ್ಬರೂ ವೇಗಿಗಳು ಏಷ್ಯಾಕಪ್‍ಗೂ ಮುನ್ನ ಗಾಯಾಳುವಾಗಿ ತಂಡದಿಂದ ಹೊರಗುಳಿದಿದ್ದರು. ಹರ್ಷಲ್ ಪಟೇಲ್ ಕೈ ಸೆಳೆತಕ್ಕೊಳಗಾಗಿ ಹೊರಗುಳಿದರೆ, ಬುಮ್ರಾ ಬೆನ್ನುನೋವಿನಿಂದಾಗಿ ಹೊರಗುಳಿದಿದ್ದರು. ಇದನ್ನೂ ಓದಿ: ಸೆ.20ರಿಂದ ಭಾರತ-ಆಸಿಸ್ ಟಿ20 ಸರಣಿ – ಬುಮ್ರಾ ಮೇಲೆ ಬೆಂಕಿ ಕಣ್ಣು

    ಆ ಬಳಿಕ ಬುಮ್ರಾ ಮತ್ತು ಹರ್ಷಲ್ ಪಟೇಲ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (National Cricket Academy in Bengaluru) ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡು ಚೇತರಿಕೆ ಕಂಡಿದ್ದಾರೆ. ಈ ಮೂಲಕ ಮತ್ತೆ ತಂಡಕ್ಕೆ ವಾಪಾಸ್ ಆಗಲು ಸಿದ್ಧತೆ ಆರಂಭಿಸಿದ್ದಾರೆ. ಜೊತೆಗೆ ಮುಂದಿನ ವಾರದೊಳಗಾಗಿ ಬಿಸಿಸಿಐ (BCCI) ಟಿ20 ವಿಶ್ವಕಪ್‍ಗೆ ಟೀಂ ಇಂಡಿಯಾವನ್ನು ಆಯ್ಕೆಮಾಡುವ ಸಾಧ್ಯತೆ ಇದೆ.

    ಏಷ್ಯಾಕಪ್‍ನಲ್ಲಿ ಬುಮ್ರಾ ಅಲಭ್ಯತೆ ಕಾಡಿತು. ಜೊತೆಗೆ ಆಲ್‍ರೌಂಡರ್ ರವೀಂದ್ರ ಜಡೇಜಾ (Ravindra Jadeja) ಗಾಯಗೊಂಡು ತಂಡದಿಂದ ಹೊರುಗುಳಿದಿದ್ದು, ಹಿನ್ನಡೆ ತಂದಿತ್ತು. ಆ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಜಡೇಜಾ ಟಿ20 ವಿಶ್ವಕಪ್ ಆಡುವುದು ಅನುಮಾನವಾಗಿದೆ. ಇದನ್ನೂ ಓದಿ: ದುಬೈನಲ್ಲಿ ರವೀಂದ್ರ ಜಡೇಜಾ ಎಡವಟ್ಟು – BCCI ಕೆಂಡಾಮಂಡಲ

    ಬುಮ್ರಾ, ಹರ್ಷಲ್ ಪಟೇಲ್ ಮತ್ತು ಮೊಹಮ್ಮದ್ ಶಮಿ ಮತ್ತೆ ತಂಡಕ್ಕೆ ವಾಪಸ್ ಆಗುವುದು ಬಹುತೇಕ ಖಚಿಗೊಂಡಿದ್ದು, ಆವೇಶ್ ಖಾನ್ ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ. ಏಷ್ಯಾಕಪ್‍ನಲ್ಲಿ ಶಮಿಯನ್ನು ಆಯ್ಕೆ ಮಾಡದೇ ಇದ್ದಿದ್ದಕ್ಕೆ ಟೀಕೆಗಳು ಕೇಳಿಬಂದಿತ್ತು. ಇದೀಗ ಶಮಿ ಟಿ20 ವಿಶ್ವಕಪ್ ಆಡುವುದು ಬಹುತೇಕ ಕನ್ಫರ್ಮ್ ಅಗಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರತದ ಇಬ್ಬರು ಆಟಗಾರರನ್ನು ಹೊರತು ಪಡಿಸಿದರೆ ಉಳಿದವರ ಬಗ್ಗೆ ಪಾಕಿಸ್ತಾನ ತಲೆಕೆಡಿಸಿಕೊಳ್ಳಲ್ಲ: ಹಫೀಜ್

    ಭಾರತದ ಇಬ್ಬರು ಆಟಗಾರರನ್ನು ಹೊರತು ಪಡಿಸಿದರೆ ಉಳಿದವರ ಬಗ್ಗೆ ಪಾಕಿಸ್ತಾನ ತಲೆಕೆಡಿಸಿಕೊಳ್ಳಲ್ಲ: ಹಫೀಜ್

    ಇಸ್ಲಾಮಾಬಾದ್: 2022ರ ಟಿ20 ವಿಶ್ವಕಪ್‍ನಲ್ಲಿ ಈಗಾಗಲೇ ಮೊದಲ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಎದುರುಬದುರಾಗಲಿದೆ. ಇದೀಗ ಈ ಬಗ್ಗೆ ಮಾಜಿ ಕ್ರಿಕೆಟಿಗರು ಮಾತನಾಡಲಾರಂಭಿಸಿದ್ದಾರೆ.  ಪಾಕಿಸ್ತಾನ ತಂಡ ಭಾರತದ ಆ ಇಬ್ಬರು ಆಟಗಾರರನ್ನು ಹೊರತು ಪಡಿಸಿದರೆ ಇತರ ಆಟಗಾರರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದು ಪಾಕಿಸ್ತಾನದ ಮಾಜಿ ಆಟಗಾರ ಮೊಹಮ್ಮದ್ ಹಫೀಜ್ ಹೇಳಿಕೆ ನೀಡಿದ್ದಾರೆ.

    ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2022ರ ಟಿ20 ವಿಶ್ವಕಪ್‍ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಾಟದ ವೇಳಾ ಪಟ್ಟಿಬಿಡುಗಡೆಯಾಗಿದೆ. ಈ ಬಗ್ಗೆ ಮಾಧ್ಯಮವೊಂದರ ಪ್ರಶ್ನೆಗೆ ಉತ್ತರಿಸಿದ ಹಫೀಜ್, ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಾಟದಲ್ಲಿ ಭಾರತದ ತಂಡದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರನ್ನು ಹೊರತು ಪಡಿಸಿದರೆ ಭಾರತ ತಂಡದಲ್ಲಿರುವ ಇತರ ಆಟಗಾರರು ಆ ಒತ್ತಡವನ್ನು ನಿಭಾಯಿಸುತ್ತಾರೆ ಎಂಬ ನಂಬಿಕೆ ಇಲ್ಲ. ಆದರೆ ಇವರಿಬ್ಬರು ಮಾತ್ರ ಅಪಾಯಕಾರಿ ಆಟಗಾರರು ಹಾಗಾಗಿ ಪಾಕಿಸ್ತಾನ ಈ ಇಬ್ಬರ ಬಗ್ಗೆ ಎಚ್ಚರಿಕೆಯ ನಡೆ ಇಡಬೇಕು ಎಂದಿದ್ದಾರೆ. ಇದನ್ನೂ ಓದಿ: 2022ರ ಟಿ20 ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ – ಭಾರತಕ್ಕೆ ಮೊದಲ ಎದುರಾಳಿ ಪಾಕ್

    ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಪಂದ್ಯ ನಡೆದಾಗ ಹೆಚ್ಚಿನ ಒತ್ತಡ ಇರುತ್ತದೆ. ನಾನು ಸಾಕಷ್ಟು ಬಾರಿ ಆಡಿದ್ದೇನೆ ದುಬೈನಲ್ಲಿ 2021ರ ಟಿ20 ವಿಶ್ವಕಪ್‍ನಲ್ಲಿ ನಮ್ಮ ತಂಡ 10 ವಿಕೆಟ್‍ಗಳಿಂದ ಗೆದ್ದಿರುವುದು ಅವಿಸ್ಮರಣೀಯ. ಭಾರತ ಸೂಪರ್‌-12 ಹಂತದಲ್ಲಿ ಸೋತರ, ನಾವು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತೆವು ಎಂದರು. ಇದನ್ನೂ ಓದಿ: ಅಮೆರಿಕದ ನ್ಯಾಷನಲ್ ಕ್ರಿಕೆಟ್ ಟೀಂನಲ್ಲಿ ಕಾಫಿನಾಡ ಪ್ರತಿಭೆ ನಾಸ್ತೋಶ್ ಕೆಂಜಿಗೆ

  • ಟಿ20 ವಿಶ್ವಕಪ್ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ತಂಡದಲ್ಲಿ ಸ್ಟಾರ್ ಆಟಗಾರರಿಗಿಲ್ಲ ಸ್ಥಾನ

    ಟಿ20 ವಿಶ್ವಕಪ್ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ತಂಡದಲ್ಲಿ ಸ್ಟಾರ್ ಆಟಗಾರರಿಗಿಲ್ಲ ಸ್ಥಾನ

    ದುಬೈ: ಅಕ್ಟೋಬರ್, ನವೆಂಬರ್​ನಲ್ಲಿ ದುಬೈನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ಗೆ ಈಗಾಗಲೇ ಹಲವು ದೇಶಗಳು ತಮ್ಮ ತಂಡವನ್ನು ಪ್ರಕಟಿಸಿದೆ. ಈ ನಡುವೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ತಂಡದಲ್ಲಿ ಟಿ20 ಸ್ಪೇಷಲಿಸ್ಟ್ ಎನಿಸಿಕೊಂಡಿರುವ ಸ್ಟಾರ್ ಆಟಗಾರರು ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

    ಪ್ರತಿ ದೇಶಗಳು ಕೂಡ ಮಹತ್ವದ ಕ್ರಿಕೆಟ್ ಟೂರ್ನಿಗೆ ಬಲಿಷ್ಠ ತಂಡವನ್ನು ಕಟ್ಟಿ ದುಬೈಗೆ ಕಳುಹಿಸಿಕೊಡಲು ಪ್ಲ್ಯಾನ್ ಹಾಕಿಕೊಂಡಿದೆ. ಅದರಲ್ಲೂ ಕೂಡ ಟಿ20 ಕ್ರಿಕೆಟ್‍ನಲ್ಲಿ ತಮ್ಮ ಬ್ಯಾಟಿಂಗ್, ಬೌಲಿಂಗ್ ಮೂಲಕ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರು ಕೆಲ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗದೆ ನಿರಾಸೆ ಅನುಭವಿಸಿದ್ದಾರೆ. ಇದನ್ನೂ ಓದಿ: ಇದೇ ಧೋನಿಯ ಕೊನೆಯ ಐಪಿಎಲ್?

    ದಕ್ಷಿಣ ಆಫ್ರಿಕಾದ ಟಿ20 ಸ್ಪೇಷಲಿಸ್ಟ್ ಆಟಗಾರರಾದ ಫಾಫ್ ಡು ಪ್ಲೆಸಿಸ್, ಕ್ರೀಸ್ ಮೋರಿಸ್, ಇಮ್ರಾನ್ ತಾಹೀರ್ ಟಿ20 ವಿಶ್ವಕಪ್‍ಗಾಗಿ ಆಯ್ಕೆ ಮಾಡಿರುವ ರಾಷ್ಟ್ರೀಯ ತಂಡದಲ್ಲಿ ಆಯ್ಕೆಯಾಗಿಲ್ಲ. ಇವರೊಂದಿಗೆ ಇಂಗ್ಲೆಂಡ್ ತಂಡದ ಆಲ್‍ರೌಂಡರ್‍ ಗಳಾದ ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಕೂಡ ತಂಡದಲ್ಲಿ ಸ್ಥಾನ ಪಡೆದಿಲ್ಲ. ಈ ಎಲ್ಲ ಆಟಗಾರರು ಕೂಡ ಟಿ20 ಕ್ರಿಕೆಟ್‍ಗೆ ಹೇಳಿ ಮಾಡಿಸಿದಂತಿರುವ ಆಟಗಾರರು. ಇವರು ವಿದೇಶಗಳಲ್ಲಿ ನಡೆಯುವ ಪ್ರಮುಖ ಟಿ20 ಲೀಗ್‍ಗಳಲ್ಲಿನ ತಾರಾ ಆಟಗಾರರು. ಹೀಗಿರುವಾಗ ರಾಷ್ಟ್ರೀಯ ತಂಡದಲ್ಲಿ ಇವರಿಗೆ ಸ್ಥಾನ ಸಿಕ್ಕಿಲ್ಲ. ಇದನ್ನೂ ಓದಿ: ಟೀಂ ಇಂಡಿಯಾ ಮೆಂಟರ್ ಸ್ಥಾನ ಸಿಗುತ್ತಿದ್ದಂತೆ ಧೋನಿಗೆ ಸ್ವಹಿತಾಸಕ್ತಿ ಸಂಕಷ್ಟ