Tag: T20 Series

  • ಧೋನಿ ಫೋಟೋ ಶೇರ್ ಮಾಡಿ ರೋಮಾಂಚನಕಾರಿ ಅನುಭವ ಹಂಚಿಕೊಂಡ ವಿರಾಟ್ ಕೊಹ್ಲಿ

    ಧೋನಿ ಫೋಟೋ ಶೇರ್ ಮಾಡಿ ರೋಮಾಂಚನಕಾರಿ ಅನುಭವ ಹಂಚಿಕೊಂಡ ವಿರಾಟ್ ಕೊಹ್ಲಿ

    ಲಂಡನ್: ಮ್ಯಾಂಚೆಸ್ಟರ್ ಓಲ್ಡ್ ಟ್ರಾಫರ್ ಅಂಗಳದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಟಿ20 ಪಂದ್ಯದಲ್ಲಿ ಗೆಲುವು ಪಡೆದು ಬೀಗುತ್ತಿರುವ ಟೀಂ ಇಂಡಿಯಾ, ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಕೈ ವಶ ಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ.

    ಇದೇ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಧೋನಿ ಸೇರಿದಂತೆ ತಂಡದ ಆಟಗಾರರಿರುವ ಫೋಟೋ ಶೇರ್ ಮಾಡಿ ತಮ್ಮ ರೋಮಾಂಚನಕಾರಿ ಅನುಭವವನ್ನು ಹಂಚಿಕೊಂಡಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಕೊಹ್ಲಿ, ತಂಡದ ಇತರೇ ಸದಸ್ಯರೊಂದಿಗೆ ದೇಶವನ್ನು ಪ್ರತಿನಿಧಿಸಲು ನಡೆಯುವುದು ಹೆಮ್ಮೆ ಎನಿಸುತ್ತದೆ. ಈ ವೇಳೆ ಅಭಿಮಾನಿಗಳ ಬೆಂಬಲ ರೋಮಾಂಚನಕಾರಿಯಾಗಿರುತ್ತದೆ. ಅದನ್ನು ಪದಗಳಲ್ಲಿ ವಿವರಿಸುವುದು ಕಷ್ಟಸಾಧ್ಯ ಎಂದು ಟ್ವೀಟ್ ಮಾಡಿದ್ದಾರೆ.

    ಸದ್ಯ ಟೀಂ ಇಂಡಿಯಾ ಸತತ 6 ನೇ ಟಿ20 ಸರಣಿಯ ಗೆಲುವಿನ ವಿಶ್ವಾಸದಲ್ಲಿದ್ದು, ಕಳೆದ ಸೆಪ್ಟೆಂಬರ್ ತಿಂಗಳಿಂದ ಆಡಿರುವ ಎಲ್ಲಾ ಸರಣಿಗಳನ್ನು ಗೆದ್ದು ಬೀಗಿದೆ. ಅಂದರೆ ನ್ಯೂಜಿಲೆಂಡ್ ವಿರುದ್ಧ ಸರಣಿಯನ್ನು 2-1 ಬಳಿಕ ನಡೆದ ಶ್ರೀಲಂಕಾ ವಿರುದ್ಧ ಸರಣಿ(3-0), ದಕ್ಷಿಣ ಆಫ್ರಿಕಾ (2-1), ನಿದಾಸ್ ತ್ರಿಕೋನಸರಣಿ ಮತ್ತು ಐರ್ಲೆಂಡ್ ವಿರುದ್ಧದ ಸರಣಿಯನ್ನು (2-0) ಯಿಂದ ಗೆದ್ದುಕೊಂಡಿತ್ತು.

    ಸದ್ಯ ಇಂಗ್ಲೆಂಡ್ ವಿರುದ್ಧದ ಸರಣಿ ಗೆಲುವು ಸಾಧಿಸಿದರೆ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾದೊಂದಿಗೆ 2ನೇ ಸ್ಥಾನ ಹಂಚಿಕೊಳ್ಳಲಿದೆ. ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಆಸೀಸ್ 3-0 ಅಂತರದಿಂದ ಸೋಲುಂಡರೆ ಟೀಂ ಇಂಡಿಯಾ ಶ್ರೇಯಾಂಕ ಪಟ್ಟಿಯಲ್ಲಿ 3ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಏರಲಿದೆ. ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಸದ್ಯ ಪಾಕ್ ಮೊದಲ ಸ್ಥಾನ ಪಡೆದಿದೆ.