Tag: T20 final

  • ಸಿಕ್ಸರ್, ಬೌಂಡರಿಗಳ ಸುರಿಮಳೆ- 67 ರನ್‍ಗಳ ಜಯ, ಭಾರತಕ್ಕೆ ಸರಣಿ

    ಸಿಕ್ಸರ್, ಬೌಂಡರಿಗಳ ಸುರಿಮಳೆ- 67 ರನ್‍ಗಳ ಜಯ, ಭಾರತಕ್ಕೆ ಸರಣಿ

    ಮುಂಬೈ: ಕನ್ನಡಿಗ ಕೆ.ಎಲ್.ರಾಹುಲ್ ಸ್ಫೋಟಕ ಬ್ಯಾಟಿಂಗ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿರಾವೇಷದ ಅರ್ಧಶತಕದಿಂದ ಭಾರತವು ವೆಸ್ಟ್ ಇಂಡೀಸ್ ವಿರುದ್ಧ 67 ರನ್‍ಗಳಿಂದ ಗೆದ್ದು, ಸರಣಿಯನ್ನು ತನ್ನದಾಗಿಸಿಕೊಂಡಿದೆ.

    ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಭಾರತದ ವಿರುದ್ಧದ  ಟಿ20 ಸರಣಿಯ ಕೊನೆಯ ಹಾಗೂ ಮೂರನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 67 ರನ್‍ಗಳಿಂದ ಸೋಲು ಕಂಡಿದೆ. ಈ ಮೂಲಕ ಭಾರತವು 2-1 ಅಂತರದಿಂದ ಸರಣಿಯನ್ನು ಗೆದ್ದು ಬೀಗಿದೆ. ವೆಸ್ಟ್ ಇಂಡೀಸ್ ಶಿಮ್ರೊನ್ ಹೆಟ್ಮೆಯರ್ 41 ರನ್, ಕೀರನ್ ಪೋಲಾರ್ಡ್ 68 ರನ್ ಸಹಾಯದಿಂದ 173 ರನ್ ಗಳಿಸಲು ಶಕ್ತವಾಯಿತು.

    ಭಾರತ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿದ ವಿಂಡೀಸ್ ಪಡೆ ಇನ್ನಿಂಗ್ಸ್ ನ 2ನೇ ಓವರ್ ನಲ್ಲಿ ಬ್ರೆಂಡನ್ ಕಿಂಗ್ (5 ರನ್) ವಿಕೆಟ್ ಕಳೆದುಕೊಂಡಿತು. ಮೊದಲ ವಿಕೆಟ್ ಪಡೆಯುವ ಮೂಲಕ ಭುವನೇಶ್ವರ್ ಕುಮಾರ್ ತಂಡಕ್ಕೆ ಆಸರೆಯಾದರು. ಈ ಬೆನ್ನಲ್ಲೇ ಮೊಹಮ್ಮದ್ ಶಮಿ ಹಾಗೂ ದೀಪಕ್ ಚಹಾರ್ ಕ್ರಮವಾಗಿ ಲೆಂಡ್ಲೆ ಸಿಮನ್ಸ್ (7 ರನ್) ಹಾಗೂ ನಿಕೋಲಸ್ ಪೂರನ್ (ಶೂನ್ಯಕ್ಕೆ) ವಿಕೆಟ್ ಪಡೆದರು. ಈ ವೇಳೆ ಮೂರು ವಿಕೆಟ್ ನಷ್ಟಕ್ಕೆ ವಿಂಡೀಸ್ 17 ರನ್ ಪೇರಿಸಿತು.

    ಶಿಮ್ರೊನ್ ಹೆಟ್ಮೆಯರ್ ಜೊತೆಗೂಡಿದ ನಾಯಕ ಪೋಲಾರ್ಡ್ ವಿಕೆಟ್ ಕಾಯ್ದುಕೊಂಡು ಸ್ಫೋಟಕ ಬ್ಯಾಟಿಂಗ್ ಆರಂಭಿಸಿದರು. ಈ ಜೋಡಿಯು 4ನೇ ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿ ತಂಡದ ಮೊತ್ತವನ್ನು ಏರಿಸಿತು. ಈ ಬೌಲಿಂಗ್ ಕಮಾಲ್ ತೋರಿದ ಕುಲದೀಪ್ ಯಾದವ್ ಹೆಟ್ಮೆಯರ್ ವಿಕೆಟ್ ಕಿತ್ತರು. 24 ಎಸೆತಗಳಲ್ಲಿ ಹೆಟ್ಮೆಯರ್ (5 ಸಿಕ್ಸರ್, ಬೌಂಡರಿ) 41 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕಿಳಿದ ಜೇಸನ್ ಹೋಲ್ಡರ್ (8 ರನ್) ಬಹುಬೇಗ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು.

    ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದ್ದ ಪೋಲಾರ್ಡ್ ಕೂಡ ಇನ್ನಿಂಗ್ಸ್ ನ 15ನೇ ಓವರ್ ನಲ್ಲಿ ವಿಕೆಟ್ ನೀಡಿದರು. ಪೋಲಾರ್ಡ್ 39 ಎಸೆತಗಳಲ್ಲಿ (5 ಬೌಂಡರಿ, 6 ಸಿಕ್ಸರ್) 68 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕಿಳಿದ ಆಟಗಾರರು ಬಹುಬೇಗ ವಿಕೆಟ್ ಒಪ್ಪಿಸಿ ಪೆವಿಲಿಯನ್ ತೆರಳಿದರು. ಈ ಮೂಲಕ ವೆಸ್ಟ್ ಇಂಡೀಸ್ 8 ವಿಕೆಟ್‍ಗಳ ನಷ್ಟಕ್ಕೆ 173 ರನ್ ಗಳಿಸಲು ಶಕ್ತವಾಯಿತು.

    ಟೀಂ ಇಂಡಿಯಾ ಬೌಲರ್ ಗಳಾದ ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್ ಹಾಗೂ ದೀಪಕ್ ಚಹಾರ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಈ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್ ಗಳು 19 ಬೌಂಡರಿ ಹಾಗೂ 16 ಸಿಕ್ಸರ್ ಸಿಡಿಸಿದರೆ, ವೆಸ್ಟ್ ಇಂಡೀಸ್ ತಂಡವು 12 ಬೌಂಡರಿ ಹಾಗೂ 12 ಸಿಕ್ಸರ್ ಸಿಡಿಸಿದೆ.

    ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಭಾರತ ರೋಹಿತ್ ಶರ್ಮಾ 71 ರನ್, ಕೆ.ಎಲ್.ರಾಹುಲ್ 91 ರನ್, ವಿರಾಟ್ ಕೊಹ್ಲಿ 70 ರನ್‍ಗಳಿಂದ 3 ವಿಕೆಟ್ ನಷ್ಟಕ್ಕೆ 240 ರನ್‍ಗಳ ಬೃಹತ್ ಮೊತ್ತವನ್ನು ಪೇರಿಸಿತ್ತು.

    ಯುವಿ ಸರಿಗಟ್ಟಿದ ರಾಹುಲ್:
    ಅಂತರರಾಷ್ಟ್ರೀಯ ಟಿ20ಯಲ್ಲಿ 8 ಅರ್ಧ ಶತಕ ಸಿಡಿಸುವ ಮೂಲಕ ಕೆ.ಎಲ್.ರಾಹುಲ್ ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಸಾಧನೆಯನ್ನು ಸರಿಗಟ್ಟಿದ್ದಾರೆ. ಯುವಿ 51 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದರೆ ಕೆ.ಎಲ್.ರಾಹುಲ್ 31 ಇನ್ನಿಂಗ್ಸ್ ಗಳಲ್ಲಿ ಪೂರೈಸಿದ್ದಾರೆ.

    ಹಿಟ್‍ಮ್ಯಾನ್ ಸಿಕ್ಸರ್ ದಾಖಲೆ:
    ಪಂದ್ಯದಲ್ಲಿ ಮೊದಲ ಸಿಕ್ಸ್ ಸಿಡಿಸಿದ ಹಿಟ್‍ಮ್ಯಾನ್ ರೋಹಿತ್ ಶರ್ಮಾ 400 ಸಿಕ್ಸರ್ ದಾಖಲೆ ಬರೆದಿದ್ದಾರೆ. 400 ಸಿಕ್ಸರ್ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಹಾಗೂ ವಿಶ್ವದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾದರು. 360 ಇನ್ನಿಂಗ್ಸ್ ಗಳಲ್ಲಿ ರೋಹಿತ್ ಈ ಸಾಧನೆ ಮಾಡಿದ್ದು, ಟೆಸ್ಟ್ ಕ್ರಿಕೆಟ್‍ನಲ್ಲಿ 52, ಏಕದಿನ ಪಂದ್ಯಗಳಲ್ಲಿ 232 ಮತ್ತು ಟಿ-20ಯಲ್ಲಿ 120 ಸಿಕ್ಸರ್ ಸೇರಿ ಒಟ್ಟು 404 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. ಈ ಪಟ್ಟಿಯ ಮೊದಲ ಸ್ಥಾನದಲ್ಲಿ 534 ಸಿಕ್ಸರ್ ಸಿಡಿದ ವೆಸ್ಟ್ ಇಂಡೀಸ್‍ನ ಕ್ರಿಸ್ ಗೇಲ್ ಮತ್ತು ಎರಡನೇ ಸ್ಥಾನದಲ್ಲಿ 476 ಸಿಕ್ಸರ್ ದಾಖಲಿಸಿದ ಪಾಕಿಸ್ತಾನದ ಆಲ್‍ರೌಂಡರ್ ಶಾಹೀದ್ ಆಫ್ರಿದಿ ಇದ್ದಾರೆ.

    ಕೊಹ್ಲಿ-ರೋಹಿತ್ ಸಮಬಲ:
    ವಿಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ 2ನೇ ಪಂದ್ಯದಲ್ಲಿ 19 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಭಾರತದ ಪರ ಅಂತರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ರೋಹಿತ್ ದಾಖಲೆಯನ್ನು ಹಿಂದಿಕ್ಕಿದ್ದರು. ಈ ಪಂದ್ಯದಲ್ಲಿ 71 ಸಿಡಿಸುವ ಮೂಲಕ ರೋಹಿತ್ ಶರ್ಮಾ ಮತ್ತೆ ಅಗ್ರಸ್ಥಾನಕ್ಕೆ ಏರಿದರು. ಈ ಬೆನ್ನಲ್ಲೇ ಮೈದಾಕ್ಕಿಳಿದ ವಿರಾಟ್ 70 ರನ್ ಗಳಿಸಿ ರೋಹಿತ್‍ರನ್ನು ಸರಿಗಟ್ಟಿದರು. ರೋಹಿತ್ ಶರ್ಮಾ ಹಾಗೂ ಕೊಹ್ಲಿ ತಲಾ 2,633 ರನ್ ಗಳಿಸಿದ್ದಾರೆ.

  • ರೋಹಿತ್ ಸಿಕ್ಸರ್ ದಾಖಲೆ, ಯುವಿ ಸರಿಗಟ್ಟಿದ ರಾಹುಲ್- ವಿಂಡೀಸ್‍ಗೆ 241 ರನ್‍ಗಳ ಗುರಿ

    ರೋಹಿತ್ ಸಿಕ್ಸರ್ ದಾಖಲೆ, ಯುವಿ ಸರಿಗಟ್ಟಿದ ರಾಹುಲ್- ವಿಂಡೀಸ್‍ಗೆ 241 ರನ್‍ಗಳ ಗುರಿ

    – ಯುವಿ ಅರ್ಧಶತಕ ಸಾಧನೆ ಸರಿಗಟ್ಟಿದ ರಾಹುಲ್

    ಮುಂಬೈ: ಹಿಟ್‍ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಸಿಕ್ಸರ್ ದಾಖಲೆ, ಕನ್ನಡಿಗ ಕೆ.ಎಲ್.ರಾಹುಲ್ ಹಾಗೂ ವಿರಾಟ್ ಕೊಹ್ಲಿ ಅಮೋಘ ಅರ್ಧಶತಕದ ಸಹಾಯದಿಂದ ಟೀಂ ಇಂಡಿಯಾ ವೆಸ್ಟ್ ಇಂಡೀಸ್‍ಗೆ 241 ರನ್‍ಗಳ ಗುರಿ ನೀಡಿದೆ.

    ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಕೊನೆಯ ಹಾಗೂ ಮೂರನೇ ಪಂದ್ಯದಲ್ಲಿ ಭಾರತವು ರೋಹಿತ್ ಶರ್ಮಾ 71 ರನ್, ಕೆ.ಎಲ್.ರಾಹುಲ್ 91 ರನ್, ವಿರಾಟ್ ಕೊಹ್ಲಿ 70ರನ್‍ಗಳಿಂದ 3 ವಿಕೆಟ್ ನಷ್ಟಕ್ಕೆ 240 ರನ್‍ಗಳ ಬೃಹತ್ ಮೊತ್ತವನ್ನು ಪೇರಿಸಿದೆ.

    ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ಬೌಲರ್ ಗಳು ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ ಹಾಗೂ ಕೆ.ಎಲ್. ರಾಹುಲ್ ಜೋಡಿಯನ್ನು ಕಟ್ಟಿ ಹಾಕಲು ವಿಫಲರಾದರು. ಸಿಕ್ಸರ್ ಹಾಗೂ ಬೌಂಡರಿ ಸುರಿಮಳೆ ಸುರಿಸಿದ ಈ ಜೋಡಿಯು ಯಾವುದೇ ವಿಕೆಟ್ ನಷ್ಟವಿಲ್ಲದೆ ಇನ್ನಿಂಗ್ಸ್ ನ 5ನೇ ಓವರ್ ಮುಕ್ತಾಯಕ್ಕೆ 58 ರನ್ ಗಳಿಸಿತು. ಇದೇ ಓವರ್ ನ ಮೊದಲ ಎಸೆತದಲ್ಲಿ ಸಿಕ್ಸ್ ಸಿಡಿಸಿದ್ದ ರೋಹಿತ್, ಎರಡನೇ ಎಸೆತವನ್ನು ಸಿಕ್ಸ್ ಸಿಡಿಸಲು ಯತ್ನಿಸಿದರು. ಆದರೆ ಬೌಂಡರಿ ಲೈನ್‍ನಲ್ಲಿ ನಿಂತಿದ್ದ ಎವಿನ್ ಲೂಯಿಸ್ ಎತ್ತರಕ್ಕೆ ಜಿಗಿದು ಕ್ಯಾಚ್ ಹಿಡಿದು ಬೌಂಡರಿ ಲೈನ್ ದಾಟುವ ಮುನ್ನವೇ ಕೈಚೆಲ್ಲಿದರು. ಜೀವದಾನ ಪಡೆದ ರೋಹಿತ್ ಶರ್ಮಾ ಈ ಎಸೆತದಲ್ಲಿ ಎರಡು ರನ್ ಗಳಿಸಿದರು.

    ಇನ್ನಿಂಗ್ಸ್ ನ 8ನೇ ಓವರ್ ನಲ್ಲಿ ನಿರಂತರ ಎರಡು ಸಿಕ್ಸರ್ ಸಿಡಿಸಿ ಶರ್ಮಾ ಅರ್ಧಶತಕ (23 ಎಸೆತ, 51 ರನ್) ಪೂರೈಸಿದರು. ಅಂತರಾಷ್ಟ್ರೀಯ ಟಿ20ಯಲ್ಲಿ ಇದು ಹಿಟ್‍ಮ್ಯಾನ್ ಅವರ 19ನೇ ಅರ್ಧಶತಕವಾಗಿದೆ. ಈ ಬೆನ್ನಲ್ಲೇ ಕೆ.ಎಲ್.ರಾಹುಲ್ ಕೂಡ ಅರ್ಧಶತಕ (29 ಎಸೆತ) ದಾಖಲಿಸಿದರು.

    ಯುವಿ ಸರಿಗಟ್ಟಿದ ರಾಹುಲ್:
    ಅಂತರರಾಷ್ಟ್ರೀಯ ಟಿ20ಯಲ್ಲಿ 8 ಅರ್ಧ ಶತಕ ಸಿಡಿಸುವ ಮೂಲಕ ಕೆ.ಎಲ್.ರಾಹುಲ್ ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಸಾಧನೆಯನ್ನು ಸರಿಗಟ್ಟಿದ್ದಾರೆ. ಯುವಿ 51 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದರೆ, ಕೆ.ಎಲ್.ರಾಹುಲ್ 31 ಇನ್ನಿಂಗ್ಸ್ ಗಳಲ್ಲಿ 8 ಅರ್ಧಶತಕ ಪೂರೈಸಿದ್ದಾರೆ.

    ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದ ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿದರು. ಇನ್ನಿಂಗ್ಸ್ ನ 11ನೇ ಓವರ್ ನಲ್ಲಿ ಸಿಕ್ಸ್ ಹೊಡೆಯಲು ಯತ್ನಿಸಿದ ರೋಹಿತ್ ಕ್ಯಾಚ್ ನೀಡಿದರು. ರೋಹಿತ್ 34 ಎಸೆತಗಳಲ್ಲಿ (6 ಬೌಂಡರಿ, 5 ಸಿಕ್ಸರ್) 71 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕಿಳಿದ ರಿಷಭ್ ಪಂತ್ (ಶೂನ್ಯಕ್ಕೆ) ಬಹುಬೇಗ ಪೆವಿಲಿಯನ್‍ಗೆ ತೆರಳಿದರು. ನಂತರ ಮೈದಾಕ್ಕಿಳಿದ ನಾಯಕ ವಿರಾಟ್ ಕೊಹ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್.ರಾಹುಲ್‍ಗೆ ಸಾಥ್ ನೀಡಿದರು. ಇನ್ನಿಂಗ್ಸ್ ನ 17ನೇ ಓವರ್ ಮುಕ್ತಾಯಕ್ಕೆ ಭಾರತವು ಎರಡು ವಿಕೆಟ್ ನಷ್ಟದಿಂದ 204 ರನ್ ಗಳಿಸಿತು. ಈ ಬೆನ್ನಲ್ಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೊಹ್ಲಿ ಅರ್ಧಶತಕ (21 ಎಸೆತ) ಪೂರೈಸಿದರು. ಶತಕದ ಹೊಸ್ತಿಲಲ್ಲಿದ್ದ ಕೆ.ಎಲ್.ರಾಹುಲ್ 91 ರನ್ ಗಳಿಗೆ ವಿಕೆಟ್‍ ಒಪ್ಪಿಸಿದರು.

    ಹಿಟ್‍ಮ್ಯಾನ್ ಸಿಕ್ಸರ್ ದಾಖಲೆ:
    ಪಂದ್ಯದಲ್ಲಿ ಮೊದಲ ಸಿಕ್ಸ್ ಸಿಡಿಸಿದ ಹಿಟ್‍ಮ್ಯಾನ್ ರೋಹಿತ್ ಶರ್ಮಾ 400 ಸಿಕ್ಸರ್ ದಾಖಲೆ ಬರೆದಿದ್ದಾರೆ. 400 ಸಿಕ್ಸರ್ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್‍ಮನ್ ಹಾಗೂ ವಿಶ್ವದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾದರು. 360 ಇನ್ನಿಂಗ್ಸ್ ಗಳಲ್ಲಿ ರೋಹಿತ್ ಈ ಸಾಧನೆ ಮಾಡಿದ್ದು, ಟೆಸ್ಟ್ ಕ್ರಿಕೆಟ್‍ನಲ್ಲಿ 52, ಏಕದಿನ ಪಂದ್ಯಗಳಲ್ಲಿ 232 ಮತ್ತು ಟಿ-20ಯಲ್ಲಿ 120 ಸಿಕ್ಸರ್ ಸೇರಿ ಒಟ್ಟು 404 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. ಈ ಪಟ್ಟಿಯ ಮೊದಲ ಸ್ಥಾನದಲ್ಲಿ 534 ಸಿಕ್ಸರ್ ಸಿಡಿದ ವೆಸ್ಟ್ ಇಂಡೀಸ್‍ನ ಕ್ರಿಸ್ ಗೇಲ್ ಮತ್ತು ಎರಡನೇ ಸ್ಥಾನದಲ್ಲಿ 476 ಸಿಕ್ಸರ್ ದಾಖಲಿಸಿದ ಪಾಕಿಸ್ತಾನದ ಆಲ್‍ರೌಂಡರ್ ಶಾಹೀದ್ ಆಫ್ರಿದಿ ಇದ್ದಾರೆ.

    ಕೊಹ್ಲಿ-ರೋಹಿತ್ ಸಮಬಲ:
    ವಿಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ 2ನೇ ಪಂದ್ಯದಲ್ಲಿ 19 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಭಾರತದ ಪರ ಅಂತರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ರೋಹಿತ್ ದಾಖಲೆಯನ್ನು ಹಿಂದಿಕ್ಕಿದ್ದರು. ಈ ಪಂದ್ಯದಲ್ಲಿ 71 ಸಿಡಿಸುವ ಮೂಲಕ ರೋಹಿತ್ ಶರ್ಮಾ ಮತ್ತೆ ಅಗ್ರಸ್ಥಾನಕ್ಕೆ ಏರಿದರು. ಈ ಬೆನ್ನಲ್ಲೇ ಮೈದಾಕ್ಕಿಳಿದ ವಿರಾಟ್ 70 ರನ್ ಗಳಿಸಿ ರೋಹಿತ್‍ರನ್ನು ಸರಿಗಟ್ಟಿದರು. ರೋಹಿತ್ ಶರ್ಮಾ ಹಾಗೂ ಕೊಹ್ಲಿ ತಲಾ 2,633 ರನ್ ಗಳಿಸಿದ್ದಾರೆ.