Tag: t20 cricket

  • `ಸೂರ್ಯ’ನ ಶಾಖಕ್ಕೆ ಕರಗಿದ ವಿಂಡೀಸ್ – ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ

    `ಸೂರ್ಯ’ನ ಶಾಖಕ್ಕೆ ಕರಗಿದ ವಿಂಡೀಸ್ – ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ

    ಟ್ರೆನಿನಾಡ್: ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಅಬ್ಬರ ಹಾಗೂ ಭುವನೇಶ್ವರ್ ಕುಮಾರ್ ಅವರ ಬೌಲಿಂಗ್ ಬಲದಿಂದ ಭಾರತ ತಂಡ 3ನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು 7 ವಿಕೆಟ್ ಭರ್ಜರಿ ಸಾಧಿಸಿದೆ.

    ಇಲ್ಲಿನ ವಾರ್ನರ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿ, ಭಾರತಕ್ಕೆ 165 ರನ್‌ಗಳ ಗುರಿ ನೀಡಿತು. ಸಾಧಾರಣ ರನ್‌ಗಳ ಗುರಿ ಬೆನ್ನತ್ತಿದ ಭಾರತ 19 ಓವರ್‌ಗಳಲ್ಲೇ 3 ವಿಕೆಟ್ ನಷ್ಟಕ್ಕೆ 165 ರನ್‌ಗಳಿಸಿ ಮುನ್ನಡೆ ಸಾಧಿಸಿತು. ರೋಹಿತ್ ಶರ್ಮಾ ಬಳಗ ಈ ಗೆಲುವಿನ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಭಾರತ 2-1ರ ಮುನ್ನಡೆ ಸಾಧಿಸಿದೆ.

    https://twitter.com/Abdullah__Neaz/status/1554541514750959616

    165 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಅವರು ಬೆನ್ನಿನ ಸ್ನಾಯು ಸೆಳೆತಕ್ಕೆ ಒಳಗಾಗಿ 11 ರನ್‌ಗಳಿಸಿ ಪೆವಿಲಿಯನ್‌ಗೆ ಮರಳಿದರು. ಇದನ್ನೂ ಓದಿ: Commonwealth Games: ಹರ್ಜಿಂದರ್ ಹವಾ – ಭಾರತಕ್ಕೆ ಮತ್ತೊಂದು ಕಂಚು

    ಈ ವೇಳೆ ಮತ್ತೊಬ್ಬ ಆರಂಭಿಕನಾಗಿದ್ದ ಸೂರ್ಯಕುಮಾರ್ ಯಾದವ್‌ಗೆ 2ನೇ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್ ಸಾಥ್ ನೀಡಿದರು. ಸೂರ್ಯಕುಮಾರ್ ಮತ್ತು ಶ್ರೇಯಸ್ ಅಯ್ಯರ್ 86 ರನ್ ಜೊತೆಯಾಟ ಆಡಿದರು.

    ವಿಂಡೀಸ್ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಸೂರ್ಯಕುಮಾರ್ 8 ಬೌಂಡರಿ ಮತ್ತು 4 ಸಿಕ್ಸರ್ ಚಚ್ಚಿದರು. ಡೊಮಿನಿಕ್ ಡ್ರೇಕ್ಸ್ ಎಸೆತದಲ್ಲಿ ಔಟಾಗುವ ಮುನ್ನ ಅವರು ತಂಡವನ್ನು ಉತ್ತಮ ಸ್ಥಿತಿಗೆ ತಂದು ನಿಲ್ಲಿಸಿದ್ದರು. ಇದನ್ನೂ ಓದಿ: ಮೆಕಾಯ್ ಮ್ಯಾಜಿಕ್, 2ನೇ T20ಯಲ್ಲಿ ವಿಂಡೀಸ್‌ಗೆ ರೋಚಕ ಜಯ – ಹೋರಾಡಿ ಸೋತ ಭಾರತ

    ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾಕ್ಕೆ ಆಸರೆಯಾದ ರಿಷಭ್ ಪಂತ್ 26 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೊಂದಿಗೆ ಅಜೇಯ 33 ರನ್‌ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ದೀಪಕ್ ಹೂಡಾ ಅಜೇಯ 10 ಹಾಗೂ ಹಾರ್ದಿಕ್ ಪಾಂಡ್ಯ 4 ರನ್ ಗಳಿಸಿದರು. ಟೀಂ ಇಂಡಿಯಾ ಬೌಲರ್‌ಗಳಾದ ಭುವನೇಶ್ವರ್ ಕುಮಾರ್ 4 ಓವರ್‌ಗಳಲ್ಲಿ 35 ರನ್ ನೀಡಿ 2 ವಿಕೆಟ್ ಉರುಳಿಸಿದರು. ಹಾರ್ದಿಕ್ ಪಾಂಡ್ಯ, ಅರ್ಶ್ದೀಪ್ ಸಿಂಗ್ ತಲಾ ಒದೊಂದು ವಿಕೆಟ್ ಪಡೆದರು.

    ಮೇಯರ್ಸ್ ಆಸರೆ: ಮೊದಲು ಬ್ಯಾಟ್ ಮಾಡಿದ್ದ ವೆಸ್ಟ್ ಇಂಡೀಸ್ ಕೈಲ್ ಮೇಯರ್ಸ್ ಅವರ ಅರ್ಧಶತಕದ ನೆರವಿನಿಂದ ಉತ್ತಮ ಮೊತ್ತ ಕಲೆಹಾಕಿತ್ತು. 50 ಎಸೆತಗಳನ್ನು ಎದುರಿಸಿದ ಮೇಯರ್ಸ್ 8 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 73 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಬ್ರೆಂಡನ್ ಕಿಂಗ್ 20 ರನ್, ನಾಯಕ ನಿಕೊಲಸ್ ಪೂರನ್ 22 ರನ್ ಸೇರಿಸಿ ತಂಡಕ್ಕೆ ಆಸರೆಯಾದರು.

    ಒಟ್ಟಿನಲ್ಲಿ ಟೀಂ ಇಂಡಿಯಾವನ್ನು ಕಟ್ಟಿಹಾಕುವಲ್ಲಿ ವೆಸ್ಟ್ ಇಂಡೀಸ್ ಬೌಲರ್‌ಗಳು ವಿಫಲವಾದ್ದರಿಂದ ಗೆಲುವು ಟೀಂ ಇಂಡಿಯಾ ಪಾಲಾಯಿತು.

    Live Tv
    [brid partner=56869869 player=32851 video=960834 autoplay=true]

  • ಮೆಕಾಯ್ ಮ್ಯಾಜಿಕ್, 2ನೇ T20ಯಲ್ಲಿ ವಿಂಡೀಸ್‌ಗೆ ರೋಚಕ ಜಯ – ಹೋರಾಡಿ ಸೋತ ಭಾರತ

    ಮೆಕಾಯ್ ಮ್ಯಾಜಿಕ್, 2ನೇ T20ಯಲ್ಲಿ ವಿಂಡೀಸ್‌ಗೆ ರೋಚಕ ಜಯ – ಹೋರಾಡಿ ಸೋತ ಭಾರತ

    ಟ್ರೆನಿನಾಡ್: ಬ್ರಾಂಡನ್ ಕಿಂಗ್ ಅವರ ಆಕರ್ಷಕ ಅರ್ಧ ಶತಕ ಹಾಗೂ ಒಬೆಡ್ ಮೆಕಾಯ್ ಅವರ ಮಾರಕ ಬೌಲಿಂಗ್ ನೆರವಿನಿಂದ ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ವಿಂಡೀಸ್ ರೋಚಕ ಜಯ ಸಾಧಿಸಿದೆ.

    ಇಲ್ಲಿನ ವಾರ್ನರ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ 2ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿದ ವೆಸ್ಟ್ ಇಂಡೀಸ್, ಬ್ಯಾಟಿಂಗ್ ಮಾಡುವ ಅವಕಾಶವನ್ನು ಟೀಂ ಇಂಡಿಯಾಕ್ಕೆ ನೀಡಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ 19.4 ಓವರ್‌ಗಳಲ್ಲಿ 138 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ರನ್‌ಗಳ ಗುರಿ ಬೆನ್ನತ್ತಿದ ವಿಂಡೀಸ್ ತಂಡ 19.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 141 ರನ್‌ಗಳಿಸಿ ರೋಚಕ ಜಯ ಸಾಧಿಸಿತು. ಇದನ್ನೂ ಓದಿ: Commonwealth Games: ಹರ್ಜಿಂದರ್ ಹವಾ – ಭಾರತಕ್ಕೆ ಮತ್ತೊಂದು ಕಂಚು

    ಅರಂಭದಿಂದಲೇ ಮಾರಕ ಬೌಲಿಂಗ್ ದಾಳಿ ಮಾಡಿದ ವಿಂಡೀಸ್ ತಂಡದ ಬೌಲರ್‌ಗಳು ಟೀಂ ಇಂಡಿಯಾದ ಯಾವೊಬ್ಬ ಆಟಗಾರರೂ ಸ್ಥಿರವಾಗಿ ಕ್ರೀಸ್‌ನಲ್ಲಿ ನಿಲ್ಲದಂತೆ ಕಟ್ಟಿಹಾಕಿದರು. ಪರಿಣಾಮವಾಗಿ 138 ರನ್‌ಗಳ ಸಾಧಾರಣ ಮೊತ್ತವನ್ನಷ್ಟೇ ಭಾರತ ಪೇರಿಸಲು ಸಾಧ್ಯವಾಯಿತು. ಈ ಮೊತ್ತವನ್ನು ರಕ್ಷಣೆ ಮಾಡಲು ಭಾರತೀಯ ಬೌಲರ್‌ಗಳು ಕೂಡ ಅಂತಿಮ ಹಂತದವರೆಗೂ ಹೋರಾಡಿದರಾದರೂ ಕೊನೆಯ ಹಂತದಲ್ಲಿ ವಿಂಡೀಸ್ ಗೆದ್ದು ಬೀಗಿದೆ. ಇದನ್ನೂ ಓದಿ: ಪದಕ ಗೆದ್ದಾಗಿದೆ ಇನ್ನಾದರೂ ಸಿನಿಮಾ ನೋಡು – ಚಿನ್ನದ ಹುಡುಗ ಅಚಿಂತ್‌ಗೆ ಮೋದಿ ಸಂದೇಶ

    ಮೆಕಾಯ್ ಮ್ಯಾಜಿಕ್: ಇನ್ನೂ ಭಾರತೀಯ ಬ್ಯಾಟಿಂಗ್ ವಿಭಾಗಕ್ಕೆ ದೊಡ್ಡ ಆಘಾತ ನೀಡಿದ್ದು ವೆಸ್ಟ್ ಇಂಡೀಸ್ ತಂಡದ ವೇಗಿ ಒಬೆದ್ ಮೆಕಾಯ್. ಪಂದ್ಯದ ಮೊದಲ ಎಸೆತವೇ ಭಾರತ ತಂಡಕ್ಕೆ ಆಘಾತ ನೀಡಿತು. ಪಂದ್ಯದ ಮೊದಲ ಎಸೆತದಲ್ಲಿಯೇ ಆರಂಭಿಕ ಆಟಗಾರ ರೋಹಿತ್ ಶರ್ಮಾ ವಿಕೆಟ್ ಉರುಳಿಸಿದರು. ತಮ್ಮ ಮುಂದಿನ ಓವರ್‌ನ ಮೊದಲ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ವಿಕೆಟ್ ಪಡೆದರು. ಅದಾದ ಬಳಿಕ ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಆರ್.ಅಶ್ವಿನ್ ಹಾಗೂ ಭುವನೇಶ್ವರ್ ಕುಮಾರ್ ವಿಕೆಟ್ ಕಬಳಿಸಿ ಟೀಂ ಇಂಡಿಯಾವನ್ನು ಅಲ್ಪ ಮೊತ್ತದಲ್ಲೇ ಕಟ್ಟಿಹಾಕಿದರು. 4 ಓವರ್‌ಗಳಲ್ಲಿ ಕೇವಲ 17 ರನ್ ನೀಡಿದ ಮೆಕಾಯ್ 6 ವಿಕೆಟ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.

    ಬ್ರೆಂಡನ್ ಕಿಂಗ್ ಅರ್ಧ ಶತಕ: ಅದರಂತೆ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಆರಂಭಿಕ ಆಟಗಾರ ಬ್ರೆಂಡನ್ ಕಿಂಗ್ ಜವಾಬ್ದಾರಿಯುತ ಅರ್ಧ ಶತಕ ಸಿಡಿಸಿ ತಂಡಕ್ಕೆ ನೆರವಾಗಿದ್ದಾರೆ. 52 ಎಸೆತಗಳನ್ನು ಎದುರಿಸಿದ ಬ್ರೆಂಡನ್ 68 ರನ್ (8 ಬೌಂಡರಿ, 2 ಸಿಕ್ಸರ್) ಗಳಿಸಿದರು. ಬಳಿಕ ಅಂತಿಮ ಹಂತದಲ್ಲಿ ಡೆವೋನ್ ಥೋಮಸ್ ಸ್ಪೋಟಕ ಪ್ರದರ್ಶನ ನೀಡಿ ಭಾರತದಿಂದ ಗೆಲುವನ್ನು ಕಸಿದರು. ಥೋಮರ್ 19 ಎಸೆತಗಳಲ್ಲಿ ಸ್ಪೋಟಕ 31 ರನ್ (1 ಬೌಂಡರಿ, 2 ಸಿಕ್ಸರ್) ಸಿಡಿಸಿದರು.

    ರೋಹಿತ್ ಶರ್ಮಾ ಶೂನ್ಯಕ್ಕೆ ನಿರ್ಗಮಿಸಿದ ನಂತರ ಸೂರ್ಯಕುಮಾರ್ ಯಾದವ್ 11, ಶ್ರೇಯಸ್ ಅಯ್ಯರ್ 10 ಗಳಿಸಿ ಪೆವಿಲಿಯನ್ ಸೇರಿದರು. ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ರಿಷಭ್‌ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರು. ಸ್ಫೋಟಕ ಬ್ಯಾಟಿಂಗ್ ಆರಂಭಿಸಿದ ರಿಷಭ್ ಪಂತ್ 12 ಎಸೆಗಳಲ್ಲಿ 2 ಸಿಕ್ಸರ್ ಹಾಗೂ 1 ಬೌಂಡರಿಯೊಂದಿಗೆ 24 ರನ್ ಸಿಡಿಸಿದರೆ, ಹಾರ್ದಿಕ್ ಪಾಂಡ್ಯ 31 ಎಸೆತಗಳಲ್ಲಿ 31 ರನ್ (1 ಬೌಂಡರಿ, 2 ಸಿಕ್ಸರ್) ಸಿಡಿಸಿದರು. ಇವರಿಬ್ಬೆ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 55 ರನ್‌ಗಳನ್ನು ಗಳಿಸಿತ್ತು. ನಂತರದಲ್ಲಿ ಬಂದ ಆಟಗಾರರು ಸ್ಥಿರವಾಗಿ ನಿಲ್ಲದ ಕಾರಣ ಟೀಂ ಇಂಡಿಯಾ ಸೋಲನ್ನು ಎದುರಿಸಬೇಕಾಯಿತು.

    ಬೌಲಿಂಗ್‌ನಲ್ಲಿ ಅರ್ಶ್‌ದೀಪ್‌ ಸಿಂಗ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಹಾರ್ದಿಕ್ ಪಾಂಡ್ಯ, ಅವೇಶ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು. ಇದನ್ನೂ ಓದಿ: IND vs WI 2nd T20: ಎರಡು ಗಂಟೆ ತಡವಾಗಿ ಪಂದ್ಯ ಆರಂಭ – ಕಾರಣ ಮಾತ್ರ ಸಿಂಪಲ್

    ಸರಣಿ ಸಮಬಲ: ಇನ್ನು ಈ ಫಲಿತಾಂಶದಿಂದಾಗಿ 5 ಟಿ20 ಪಂದ್ಯಗಳ ಟಿ20 ಸರಣಿ ಈಗ 1-1ರಲ್ಲಿ ಸಮಬಲಗೊಂಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 2ನೇ ಓವರ್‌ನಿಂದಲೇ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದರೂ ಅತಿ ವೇಗವಾಗಿಯೇ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಐದು ಓವರ್‌ಗಳಲ್ಲಿ 48 ರನ್ ಗಳಿಸಿದ್ದ ಟೀಂ ಇಂಡಿಯಾ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

    Live Tv
    [brid partner=56869869 player=32851 video=960834 autoplay=true]

  • Commonwealth Cricket: ಮಂದಾನ ಬ್ಯಾಟಿಂಗ್‌ಗೆ ಮಂಕಾದ ಪಾಕ್ – ಭಾರತದ ವನಿತೆಯರಿಗೆ ಸುಲಭ ಜಯ

    Commonwealth Cricket: ಮಂದಾನ ಬ್ಯಾಟಿಂಗ್‌ಗೆ ಮಂಕಾದ ಪಾಕ್ – ಭಾರತದ ವನಿತೆಯರಿಗೆ ಸುಲಭ ಜಯ

    ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಕ್ರೀಡಾಕೂಟ-2022ರ ಟಿ20ಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಪರಾಭವಗೊಂಡಿದ್ದ ಭಾರತದ ಮಹಿಳೆಯರ ತಂಡ 2ನೇ ಪಂದ್ಯದಲ್ಲಿ ಎದುರಾಳಿ ಪಾಕಿಸ್ತಾನದ ಎದುರು ಸುಲಭ ಜಯ ಸಾಧಿಸಿದೆ.

    ಪಾಕಿಸ್ತಾನ ನೀಡಿದ 100 ರನ್‌ಗಳ ಗುರಿ ಬೆನ್ನತ್ತಿದ್ದ ವನಿತೆಯರ ತಂಡ 11.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 102 ರನ್ ಸಿಡಿಸುವ ಮೂಲಕ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಇದನ್ನೂ ಓದಿ: Commonwealth Games: ಭಾರತಕ್ಕೆ ಮತ್ತೊಂದು ಚಿನ್ನ ತಂದ ಜೆರೆಮಿ ಚಮತ್ಕಾರ

    ಮಂದಾನ ಬ್ಯಾಟಿಂಗ್‌ಗೆ ಮಂಕಾದ ಪಾಕ್: ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭಿಕರಾದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂದಾನ ಉತ್ತಮ ಅಡಿಪಾಯ ಹಾಕಿಕೊಟ್ಟರು. ಪವರ್ ಪ್ಲೇ ಮುಗಿಯುವ ಹೊತ್ತಿಗೆ 5.5 ಓವರ್‌ಗಳಲ್ಲಿ 61 ರನ್ ಚಚ್ಚಿದ್ದರು. ಈ ವೇಳೆ 16 ರನ್ ಗಳಿಸಿದ್ದ ವರ್ಮಾ ಔಟಾದರು. ನಂತರ ಕ್ರೀಸ್‌ಗಿಳಿದ ಸಭಿನೇನಿ ಮೇಘನಾ 14 ರನ್ ಗಳಿಸಿ, ತಂಡ ಜಯದ ಹೊಸ್ತಿಲಲ್ಲಿದ್ದಾಗ ವಿಕೆಟ್ ಒಪ್ಪಿಸಿದರು.

    ಅಜೇಯ ಆಟವಾಡಿದ ಮಂದಾನ ಕೇವಲ 42 ಎಸೆತಗಳಲ್ಲಿ 63 ರನ್ (3 ಸಿಕ್ಸರ್, 8 ಬೌಂಡರಿ) ಬಾರಿಸಿ, ಪಾಕ್ ಬೌಲರ್‌ಗಳ ಬೆವರಿಳಿಸಿದರು. ಕೊನೆಯವರೆಗೂ ಅಬ್ಬರಿಸಿದ ಮಂದಾನ ತಂಡವನ್ನು ಜಯದ ಹಾದಿಗೆ ತಂದು ನಿಲ್ಲಿಸಿದರು. ಮಂದಾನ ಜೊತೆ ಕೊನೆಯಲ್ಲಿ ಕಣಕ್ಕಿಳಿದ ಜೆಮಿಯಾ ರಾಡ್ರಿಗಸ್ 2 ರನ್ ಗಳಿಸಿ ಅಜೇಯರಾಗುಳಿದರು. ಇದನ್ನೂ ಓದಿ: Commonwealth Games 2022: ಭಾರತಕ್ಕೆ ನಾಲ್ಕನೇ ಪದಕ – ವೇಟ್‍ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದ ಬಿಂದ್ಯಾರಾಣಿ ದೇವಿ

    ಭಾರತ ಪರ ಸ್ನೇಹ್ ರಾಣಾ ಮತ್ತು ರಾಧಾ ಯಾದವ್ ತಲಾ ಎರಡು ವಿಕೆಟ್ ಉರುಳಿಸಿದರು. ರೇಣುಕಾ ಸಿಂಗ್, ಮೇಘನಾ ಸಿಂಗ್ ಮತ್ತು ಶಫಾಲಿ ವರ್ಮಾ ಒಂದೊಂದು ವಿಕೆಟ್ ಪಡೆದುಕೊಂಡರು.

    ಮಳೆಯಿಂದಾಗಿ ಎರಡು ಓವರ್ ಕಡಿತಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ, ಖಾತೆ ತೆರೆಯುವ ಮುನ್ನವೇ ಮೊದಲ ವಿಕೆಟ್ ಕಳೆದುಕೊಂಡಿತು. ಬಳಿಕ ಬಂದ ನಾಯಕಿ ಬಿಸ್ಮಾ ಮಹರೂಫ್ ಹಾಗೂ ಮುನೀಬಾ ಅಲಿ ಜೊತೆಗೂಡಿ 2ನೇ ವಿಕೆಟ್‌ಗೆ 50 ರನ್ ಪೇರಿಸಿದರು.

    ಈ ವೇಳೆ ದಾಳಿಗಿಳಿದ ಸ್ನೇಹ್ ರಾಣಾ, ಮಹರೂಫ್ ವಿಕೆಟ್ ಪಡೆದು ಪೆಟ್ಟುಕೊಟ್ಟರು. ಇದಾದ ಬಳಿಕ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದು ಪಾಕ್ ಪಡೆಗೆ ಮುಳುವಾಯಿತು. ಇದನ್ನೂ ಓದಿ: CommonwealthGames: ಚಿನ್ನದ ಬೇಟೆಯೊಂದಿಗೆ ದಾಖಲೆ ಬರೆದ ಮೀರಾಬಾಯಿ ಚಾನು

    ಮುನೀಬಾ 32 ರನ್ ಕಲೆ ಹಾಕಿದರೆ, ಅಲಿಯಾ ರಿಯಾಜ್ 18 ಮತ್ತು ಮಹರೂಫ್ 17 ರನ್ ಗಳಿಸಿದರು. ಉಳಿದವರಿಂದ ನಿರೀಕ್ಷಿತ ಆಟ ಮೂಡಿಬರಲಿಲ್ಲ. ಹೀಗಾಗಿ ಪಾಕ್ ವನಿತೆಯರು 99 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಹಾದಿ ಹಿಡಿಯಿತು.

    ಭಾರತ ತಂಡವು ಆಗಸ್ಟ್ 3 ರಂದು ನಡೆಯುವ ತನ್ನ ಮುಂದಿನ ಪಂದ್ಯದಲ್ಲಿ ಬಾರ್ಬಡಾಸ್ ವಿರುದ್ಧ ಕಣಕ್ಕಿಳಿಯಲಿದೆ. ಅದೇ ದಿನ ಪಾಕಿಸ್ತಾನವು ಆಸ್ಟ್ರೇಲಿಯಾ ತಂಡದ ವಿರುದ್ಧ ಸೆಣಸಲಿದೆ.

    Live Tv
    [brid partner=56869869 player=32851 video=960834 autoplay=true]

  • ರೋಹಿತ್‌, ಡಿಕೆ ಬ್ಯಾಟಿಂಗ್‌ ಅಬ್ಬರಕ್ಕೆ ವೆಸ್ಟ್‌ಇಂಡೀಸ್‌ ತತ್ತರ – ಭಾರತಕ್ಕೆ 68 ರನ್‌ಗಳ ಭರ್ಜರಿ ಜಯ

    ರೋಹಿತ್‌, ಡಿಕೆ ಬ್ಯಾಟಿಂಗ್‌ ಅಬ್ಬರಕ್ಕೆ ವೆಸ್ಟ್‌ಇಂಡೀಸ್‌ ತತ್ತರ – ಭಾರತಕ್ಕೆ 68 ರನ್‌ಗಳ ಭರ್ಜರಿ ಜಯ

    ಟ್ರಿನಿನಾಡ್: ನಾಯಕ ರೋಹಿತ್‌ ಶರ್ಮಾರ ಆಕರ್ಷಕ ಅರ್ಧಶತಕ ಹಾಗೂ ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಭಾರತ ತಂಡವು ಟಿ20 ಸರಣಿಯ ಮೊದಲ ಪಂದ್ಯದಲ್ಲೇ ವೆಸ್ಟ್‌ ಇಂಡೀಸ್‌ ವಿರುದ್ಧ 68 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

    ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಆಥಿತೇಯ ವೆಸ್ಟ್‌ಇಂಡೀಸ್‌ಗೆ ತವರಿನಲ್ಲೇ ವೈಟ್‌ವಾಶ್‌ ಮಾಡಿದ ಟೀಂ ಇಂಡಿಯಾ, ಜಯದ ಅಬ್ಬರ ಮುಂದುವರಿಸಿದೆ.

    ಇಲ್ಲಿನ ಬ್ರಯಾನ್‌ ಲಾರಾ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್‌ ತಂಡದ ನಾಯಕ ನಿಕೋಲಸ್‌ ಪೂರನ್‌ ಬೌಲಿಂಗ್‌ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 190 ರನ್‌ಗಳಿಸಿ ಆಥಿತೇಯರಿಗೆ 191 ರನ್‌ಗಳ ಬೃಹತ್‌ ಮೊತ್ತದ ಗುರಿ ನೀಡಿತು. ಈ ರನ್‌ಗಳ ಗುರಿ ಬೆನ್ನತ್ತಿದ ವೆಸ್ಟ್‌ ಇಂಡೀಸ್‌ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ  122 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಗಿ ಭಾರತದ ಎದುರು ಮಂಡಿಯೂರಿತು.

    ಟಾಸ್‌ ಸೋತು ನಂತರ ಬ್ಯಾಟಿಂಗ್‌ ಮಾಡಿದ ವಿಂಡೀಸ್‌ ತಂಡವು ನಿಧಾನಗತಿಯ ಬ್ಯಾಟಿಂಗ್‌ ಆರಂಭಿಸಿತು. ಪವರ್‌ ಪ್ಲೇ ಮುಗಿಯುವ ಹೊತ್ತಿಗೆ ಟೀಂ ಇಂಡಿಯಾ ನಾಲ್ಕು ವಿಕೆಟ್‌ಗಳನ್ನು ಕಸಿದುಕೊಂಡಿತ್ತು. ಆರಂಭಿಕರಾಗಿ ಕಣಕ್ಕಿಳಿದ ಕೈಲ್ ಮೇಯರ್ಸ್ ಹಾಗೂ ಶಮರ್ ಬ್ರೂಕ್ಸ್ ಸ್ಥಿರವಾಗಿ ನಿಲ್ಲಲಿಲ್ಲ. ಕೈಲ್‌ ಮೇಯರ್ಸ್‌ 6 ಎಸೆತಗಳಲ್ಲಿ 15 ರನ್‌ ಗಳಿಸಿದರೆ, ಬ್ರೂಕ್ಸ್‌ 15 ಎಸೆತಗಳಲ್ಲಿ 20 ರನ್‌ಗಳನ್ನು ಗಳಿಸಿ ಪೆವಿಲಿಯನ್‌ ಸೇರಿದರು.

    2ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಭರವಸೆಯ ಆಟಗಾರ ಜೇಸನ್ ಹೋಲ್ಡರ್ 4 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ನಿರ್ಗಮಿಸಿದರು. ಉತ್ತಮ ಬ್ಯಾಟಿಂಗ್‌ ನಿರೀಕ್ಷೆಯಲ್ಲಿದ್ದ ನಾಯಕ ನಿಕೋಲಸ್ ಪೂರನ್ 18ರನ್‌ ಗಳಿಸಿದರೆ, ರೋವ್ಮನ್ ಪೊವೆಲ್ ಹಾಗೂ ಶಿಮ್ರಾನ್ ಹೆಟ್ಮೆಯರ್ ತಲಾ 14 ರನ್‌ ಗಳಿಸಿ ಔಟಾದರು. 11 ಓವರ್‌ ಪೂರೈಸುವ ಹೊತ್ತಿಗೆ 82 ರನ್‌ಗಳನ್ನು ಗಳಿಸಿದ್ದ ವೆಸ್ಟ್‌ ಇಂಡೀಸ್‌ 5 ವಿಕೆಟ್‌ಗಳನ್ನು ಕಳೆದುಕೊಂಡು ಬಹುತೇಕ ಸೋಲಿನ ಹಾದಿಯನ್ನು ಕಂಡಿತ್ತು. ಪ್ರಮುಖ ಬ್ಯಾಟರ್‌ಗಳ ಬ್ಯಾಟಿಂಗ್‌ ವೈಫಲ್ಯದಿಂದ ವೆಸ್ಟ್‌ ಇಂಡೀಸ್‌ ಟಿ20 ಸರಣಿಯ ಮೊದಲ ಪಂದ್ಯದಲ್ಲೂ ಸೋಲಿನ ರುಚಿ ಕಂಡಿತು.

    ವಿಂಡೀಸ್‌ ಪರ ಅಲ್ಜಾರಿ ಜೋಸೆಫ್‌ 2 ವಿಕೆಟ್‌ ಪಡೆದರೆ, ಒಬೆಡ್ ಮೆಕಾಯ್‌, ಜೇಸನ್‌ ಹೋಲ್ಡರ್‌, ಅಕೀಲ್‌ ಹೊಸೈನ್‌, ಕೀಮೋ ಪೌಲ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಟೀಂ ಇಂಡಿಯಾ ಅಬ್ಬರ: ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾದ ರೋಹಿತ್‌ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್‌ ಉತ್ತಮ ಆರಂಭ ನೀಡಿದರು. ಇವರಿಬ್ಬರು ಮೊದಲ ವಿಕೆಟ್‌ಗೆ ಕೇವಲ 4.4 ಓವರ್‌ಗಳಲ್ಲೇ 44 ರನ್‌ ಕಲೆಹಾಕಿದರು. ಇದೇ ವೇಳೆ 24 ರನ್‌ಗಳಿಸಿದ್ದ ಸೂರ್ಯಕುಮಾರ್‌ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿದರು. ನಂತರದಲ್ಲಿ ಕ್ರೀಸ್‌ಗಿಳಿದ ಶ್ರೇಯಸ್‌ ಅಯ್ಯರ್‌ ಶೂನ್ಯಕ್ಕೆ ನಿರ್ಗಮಿಸಿದರೆ, ರಿಷಭ್‌ ಪಂತ್‌ 14 ರನ್‌, ಹಾರ್ದಿಕ್‌ ಪಾಂಡ್ಯ 1 ರನ್‌ ಹಾಗೂ ರವೀಂದ್ರ ಜಡೇಜಾ 16 ರನ್‌ಗಳಿಸಿದರು. ಭರವಸೆಯ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು. ಕೊನೆಯಲ್ಲಿ ಬಂದ ದಿನೇಶ್‌ ಕಾರ್ತಿಕ್‌ ನಾಯಕ ರೋಹಿತ್‌ ಶರ್ಮಾಗೆ ಜೊತೆಯಾದರು.

    ಹಿಟ್‌ ಮ್ಯಾನ್‌ ರೋಹಿತ್‌, ಡಿಕೆ ಬ್ಯಾಟಿಂಗ್‌ ಅಬ್ಬರ: ನಾಯಕನ ಆಟವಾಡಿದ ರೋಹಿತ್‌ ಶರ್ಮಾ 44 ಎಸೆತಗಳಲ್ಲಿ 64 ರನ್‌ (7 ಬೌಂಡರಿ, 2 ಸಿಕ್ಸರ್‌) ಬಾರಿಸಿದರೆ, ದಿನೇಶ್‌ ಕಾರ್ತಿಕ್‌ ಕೇವಲ 19 ಎಸೆತಗಳಲ್ಲಿ 41 ರನ್‌(4 ಬೌಂಡರಿ, 2 ಸಿಕ್ಸರ್)‌ ಸಿಡಿಸಿ ವೆಸ್ಟ್‌ ಇಂಡೀಸ್‌ ಬೌಲರ್‌ಗಳ ಬೆವರಿಳಿಸಿದರು.

    ಕೊನೆಯಲ್ಲಿ ದಿನೇಶ್‌ ಕಾರ್ತಿಕ್‌ ಹಾಗೂ ರವಿಚಂದ್ರನ್‌ ಅಶ್ಚಿನ್‌ ಅವರ ಬಿರುಸಿನ ಆಟದಿಂದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 190 ರನ್‌ ಚಚ್ಚಿತ್ತು. ಇವರಿಬ್ಬರು 7ನೇ ವಿಕೆಟ್‌ಗೆ 24 ಎಸೆತಗಳಲ್ಲಿ 52 ರನ್‌ ಕಲೆಹಾಕಿದರು. ದಿನೇಶ್‌ 19 ಎಸೆತಗಳಲ್ಲಿ 41 ರನ್‌ ಬಾರಿಸಿದರೆ, ಅವರಿಗೆ ಅಶ್ವಿನ್‌ 13 ರನ್ ಗಳಿಸಿ, ಅಜೇರಾಗುಳಿದರು.

    ಟೀಂ ಇಂಡಿಯಾ ಪರ ರವಿಚಂದ್ರನ್‌ ಅಶ್ವಿನ್‌, ರವಿ ಬಿಷ್ನೋಯ್‌, ಅರ್ಶ್‌ದೀಪ್‌ ಸಿಂಗ್‌ ತಲಾ 2 ವಿಕೆಟ್‌ ಪಡೆದರೆ, ಭುವನೇಶ್ವರ್‌ ಕುಮಾರ್‌, ರವಿಂದ್ರ ಜಡೇಜಾ, ಹಾರ್ದಿಕ್‌ ಪಾಂಡ್ಯ, ತಲಾ ಒಂದೊಂದು ವಿಕೆಟ್‌ ಪಡೆದು ಟೀಂ ಇಂಡಿಯಾ ಗೆಲುವಿಗೆ ನೆರವಾದರು.

    ರನ್‌ ಏರಿದ್ದು ಹೇಗೆ?
    42 ಎಸೆತ, 50 ರನ್‌
    69 ಎಸೆತ, 100 ರನ್‌
    105 ಎಸೆತ, 150 ಎನ್‌
    120 ಎಸೆತ, 190 ರನ್‌

    Live Tv
    [brid partner=56869869 player=32851 video=960834 autoplay=true]

  • ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಲು ರೋಹಿತ್ ಶರ್ಮಾಗೆ ಇನ್ನೊಂದೆ ಹೆಜ್ಜೆ

    ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಲು ರೋಹಿತ್ ಶರ್ಮಾಗೆ ಇನ್ನೊಂದೆ ಹೆಜ್ಜೆ

    ಮುಂಬೈ: ಟೀಂ ಇಂಡಿಯಾ ನಾಯಕ ಹಾಗೂ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತದ ಯಶಸ್ವಿ ಪ್ರದರ್ಶನ ಮುಂದುವರಿದಿದೆ. ಐಪಿಎಲ್‌ನಲ್ಲಿ ಶೂನ್ಯ ಸುತ್ತಿ ತೀವ್ರ ಮುಖಭಂಗಕ್ಕೀಡಾಗಿದ್ದ ರೋಹಿತ್ ಶರ್ಮಾ ಈಗ ಫಾರ್ಮ್‌ನಲ್ಲಿದ್ದು  ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

    ಈಗಾಗಲೇ ಇಂಗ್ಲೆಂಡ್ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ರೋಹಿತ್ ಶರ್ಮಾ ನೇತೃತ್ವದಲ್ಲಿ ಮುನ್ನಡೆ ಸಾಧಿಸಿದೆ. ಬೆಸ್ಟ್ ಆಫ್ 3ರಲ್ಲಿ ಕ್ರಮವಾಗಿ 50 ಹಾಗೂ 49 ರನ್‌ಗಳ ಅಂತರದಿಂದ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 3ನೇ ಪಂದ್ಯದಲ್ಲಿ ಗೆದ್ದು ಇಂಗ್ಲೆಂಡ್ ತವರಲ್ಲೇ ವೈಟ್‌ವಾಶ್ ಮಾಡುವ ಗುರಿ ಹೊಂದಿದೆ. ಈ ನಡುವೆ ನಾಯಕ ರೋಹಿತ್ ಶರ್ಮಾ ಮತ್ತೊಂದು ವಿಶ್ವದಾಖಲೆ ಬರೆಯುವ ಸನಿಹದಲ್ಲಿದ್ದಾರೆ. ಇದನ್ನೂ ಓದಿ: ಕ್ಯಾಪ್ಟನ್ ಪಟ್ಟದಿಂದ ಇಳಿಯಲಿದ್ದಾರೆ ಕೊಹ್ಲಿ, ರೋಹಿತ್‍ಗೆ ನಾಯಕತ್ವ

    ರಿಕಿ ಪಾಂಟಿಂಗ್ ವಿಶ್ವದಾಖಲೆ ಸರಿಗಟ್ಟುವ ಅವಕಾಶ: ಇಂಗ್ಲೆಂಡ್ ವಿರುದ್ಧದ ಟಿ20ಯ 2 ಪಂದ್ಯಗಳಲ್ಲಿ ಗೆಲ್ಲುವ ಮೂಲಕ ರೋಹಿತ್ ನಾಯಕನಾಗಿ ಸತತ 19 ಪಂದ್ಯಗಳನ್ನ ಗೆದ್ದಂತಹ ಸಾಧನೆ ಮಾಡಿದ್ದಾರೆ. ಟ್ರೆಂಟ್‌ಬ್ರಿಡ್ಜ್‌ನಲ್ಲಿ ನಡೆಯಲಿರುವ 3ನೇ ಪಂದ್ಯವನ್ನೂ ಗೆದ್ದರೆ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಲಿದ್ದಾರೆ. ಇದನ್ನೂ ಓದಿ: ಭಾರತ ಟೆಸ್ಟ್‌ ಕ್ರಿಕೆಟ್‌ ತಂಡದ ಕ್ಯಾಪ್ಟನ್‌ ಆಗಿ ರೋಹಿತ್‌ ಶರ್ಮಾ ನೇಮಕ

    2003ರಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ರಿಕಿ ಪಾಂಟಿಂಗ್ ಅವರ ನೇತೃತ್ವದಲ್ಲಿ ಆಸ್ಟ್ರೇಲಿಯಾ ತಂಡವು 20 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದು ಪುರುಷರ ಕ್ರಿಕೆಟ್ ಪಂದ್ಯದಲ್ಲಿ ಅತಿದೊಡ್ಡ ಗೆಲುವಾಗಿದೆ. ಆದರೆ ಈಗಾಗಲೇ 19 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ರೋಹಿತ್ ಶರ್ಮಾ ತಂಡವು ಇನ್ನೊಂದು ಪಂದ್ಯದಲ್ಲಿ ಗೆದ್ದರೆ ರೋಹಿತ್ ವಿಶ್ವದಾಖಲೆಗೆ ಖ್ಯಾತಿಯಾಗಲಿದ್ದಾರೆ.

    ಟಿ20 ನಾಯಕತ್ವದ ದಾಖಲೆ: ಟೀಂ ಇಂಡಿಯಾ ನಾಯಕನಾಗಿ ರೋಹಿತ್ ಶರ್ಮಾ ಅಮೋಘ ದಾಖಲೆ ಬರೆದಿದ್ದಾರೆ. ಇದುವರೆಗೆ 30 ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಭಾರತವನ್ನ ಮುನ್ನಡೆಸಿರುವ ರೋಹಿತ್ ಶರ್ಮಾ 26 ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದು, ಇವರ ನಾಯಕತ್ವದಲ್ಲಿ ಕೇವಲ 4 ಪಂದ್ಯಗಳನ್ನಷ್ಟೇ ಭಾರತ ಸೋತಿದೆ. ಇನ್ನು ಗೆಲುವಿನಲ್ಲಿ ಶೇ.86.66ರಷ್ಟು ಸರಾಸರಿ ಹೊಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಿಟ್‌ಮ್ಯಾನ್ ರೋಹಿತ್ ಶರ್ಮಾ ಕೋವಿಡ್‌ನಿಂದ ಗುಣಮುಖ – T20ಗೆ ಲಭ್ಯ

    ಹಿಟ್‌ಮ್ಯಾನ್ ರೋಹಿತ್ ಶರ್ಮಾ ಕೋವಿಡ್‌ನಿಂದ ಗುಣಮುಖ – T20ಗೆ ಲಭ್ಯ

    ಬರ್ಮಿಂಗ್‌ಹ್ಯಾಮ್: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ ಕೋವಿಡ್‌ನಿಂದ ಸಂಪೂರ್ಣ ಗುಣಮುಖರಾಗಿದ್ದು, ಅವರು ಜುಲೈ 7 ರಿಂದ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟಿ20 ಪಂದ್ಯಗಳಿಗೆ ಲಭ್ಯವಾಗಲಿದ್ದಾರೆ.

    ನಿನ್ನೆಯಷ್ಟೇ ಅವರ ಕೊರೊನಾ ಫಲಿತಾಂಶ ನೆಗೆಟಿವ್ ವರದಿ ಬಂದಿದ್ದು, ಕ್ವಾರಂಟೈನ್ ಮುಗಿಸಿ ಹೊರಬಂದಿದ್ದಾರೆ. ಅವರು ಇದೇ ಜುಲೈ 7ರಂದು ನಡೆಯಲಿರುವ ಟಿ20 ಸರಣಿಗೆ ಲಭ್ಯವಾಗಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಇದನ್ನೂ ಓದಿ: ಮತ್ತೆ ನಿರ್ದೇಶನದತ್ತ ಮುಖ ಮಾಡಿದ ಅಜಯ್ ದೇವಗನ್

    ಇಂಗ್ಲೆಂಡ್ ಟೆಸ್ಟ್ ಆರಂಭಕ್ಕೂ ಮುನ್ನ ಲೀಸೆಸ್ಟರ್‌ಶೈರ್ ಎದುರಿನ ಅಭ್ಯಾಸ ಪಂದ್ಯದ 2ನೇ ದಿನ ರೋಹಿತ್ ಶರ್ಮಾಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿತ್ತು. ಹೀಗಾಗಿ ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದಿಂದ ಹೊರಗುಳಿಯುವುದು ಅನಿವಾರ್ಯವಾಯಿತು. ಇದನ್ನೂ ಓದಿ: ಕಾಳಿ ಕೈಲಿ ಸಿಗರೇಟು ವಿವಾದ : ಲೀನಾ ಮೇಲೆ ಹಲವು ದೂರು ದಾಖಲು

    ಜುಲೈ 5ಕ್ಕೆ ಅಂತಿಮ ಟೆಸ್ಟ್ ಮುಕ್ತಾಯಗೊಳ್ಳಲಿದ್ದು, ಜುಲೈ 7ರಿಂದ T20 ಸರಣಿ ಆರಂಭವಾಗಲಿದೆ. ಮೊದಲ T20 ಪಂದ್ಯವು ಇಂಗ್ಲೆಂಡ್‌ನ ರೋಸ್‌ ಬೌಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • IND Vs SA T20 – ರದ್ದಾದ ಪಂದ್ಯದ ಶೇ.50 ರಷ್ಟು ಟಿಕೆಟ್ ಹಣ ಜುಲೈ 1ರಿಂದ ವಾಪಸ್

    IND Vs SA T20 – ರದ್ದಾದ ಪಂದ್ಯದ ಶೇ.50 ರಷ್ಟು ಟಿಕೆಟ್ ಹಣ ಜುಲೈ 1ರಿಂದ ವಾಪಸ್

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 19ರಂದು ನಿಗದಿಯಾಗಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾದ ನಡುವಿನ 5ನೇ ಟಿ20 ಕ್ರಿಕೆಟ್ ಪಂದ್ಯವು ಮಳೆಯಿಂದಾಗಿ ರದ್ದಾದ ಹಿನ್ನೆಲೆಯಲ್ಲಿ ಎಲ್ಲ ಮಾದರಿಯ (ಕಾಂಪ್ಲಿಮೆಂಟ್ರಿ ಪಾಸ್ ಹೊರತುಪಡಿಸಿ) ಟಿಕೆಟ್‌ಗಳ ಶೇ.50ರಷ್ಟು ಹಣವನ್ನು ಹಿಂತಿರುಗಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ – ಸಂಸ್ಥೆ (ಕೆಎಸ್‌ಸಿಎ) ನಿರ್ಧರಿಸಿದೆ.

    ಆನ್‌ಲೈನ್ ಮತ್ತು ಬಾಕ್ಸ್ ಆಫೀಸ್‌ನಲ್ಲಿ ಖರೀದಿಸಲಾಗಿದ್ದ ವಿವಿಧ ಮೊತ್ತದ ಟಿಕೆಟ್‌ಗಳ ಅರ್ಧದಷ್ಟು ಹಣವನ್ನು ಜುಲೈ 1, 2 ಹಾಗೂ 3ರಂದು ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 7 ಗಂಟೆ ಒಳಗೆ ಮರುಪಾವತಿ ಮಾಡಲಾಗುವುದು ಕೆಎಸ್‌ಸಿಎ ತಿಳಿಸಿದೆ. ಇದನ್ನೂ ಓದಿ: ಕನ್ನಡಿಗ ಮಯಾಂಕ್‌ಗೆ ದಿಢೀರ್‌ ಬುಲಾವ್ – ಟೀಂ ಇಂಡಿಯಾಗೆ ಬನ್ನಿ

    ಷರತ್ತುಗಳು ಅನ್ವಯ: ಟಿಕೆಟ್ ಅಸಲಿ, ನಕಲಿ ಬಗ್ಗೆ ಪರಿಶೀಲನೆ, ಟಿಕೆಟ್ ಮೇಲೆ ಬರೆದಿರುವುದಾಗಲಿ, ಮಡಚಿರುವುದಾಗಲಿ ಮಾಡಿರಬಾರದು ಮತ್ತು ಟಿಕೆಟ್ ಸಮವಾಗಿ ಗೋಚರಿಸುವಂತಿರಬೇಕು. ಒಬ್ಬ ವ್ಯಕ್ತಿ ಗರಿಷ್ಠ 5 ಟಿಕೆಟ್‌ಗಳ ಹಣವನ್ನು ಮಾತ್ರ ಹಿಂಪಡೆಯಬಹುದು. ಇದನ್ನೂ ಓದಿ: ಐರ್ಲೆಂಡ್ ವಿರುದ್ಧ ಶುಭಾರಂಭ ಕಂಡ ಭಾರತ – ಆರಂಭಿಕನಾಗಿ ಕಣಕ್ಕಿಳಿದು ಮಿಂಚಿದ ದೀಪಕ್ ಹೂಡಾ

    ಒಂದು ವೇಳೆ ಕೌಂಟರ್‌ನಲ್ಲಿ ವಿವಿಧ ಕಾರಣಗಳಿಗಾಗಿ ಕೊಡುವುದು ನಿರಾಕರಿಸಿದರೆ ಅದು ಕೆಎಸ್‌ಸಿಎ ಅಂತಿಮ ನಿರ್ಧಾರವಾಗಿರುತ್ತದೆ ಅಥವಾ ಷರತ್ತುಗಳಿಂದ ನಿರಾರಿಸಲಾಗಿರುತ್ತದೆ ಅಷ್ಟೇ ಎಂದು ಸೂಚಿಸಿದೆ.

    Live Tv

  • ಟಿ20 ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿ ದಾಖಲೆ ಬರೆದ ಡೇವಿಡ್ ವಾರ್ನರ್

    ಟಿ20 ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿ ದಾಖಲೆ ಬರೆದ ಡೇವಿಡ್ ವಾರ್ನರ್

    ಮುಂಬೈ: ನಿನ್ನೆ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‍ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ ಡೆಲ್ಲಿ ತಂಡದ ಎಡಗೈ ಬ್ಯಾಟ್ಸ್‌ಮ್ಯಾನ್ ಡೇವಿಡ್ ವಾರ್ನರ್ ಟಿ-20 ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿ ದಾಖಲೆ ಬರೆದಿದ್ದಾರೆ.

    ವಾರ್ನರ್ ತಮ್ಮ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ 3 ಸಿಕ್ಸರ್‌ಗಳನ್ನು ಒಳಗೊಂಡಂತೆ ಅಜೇಯ 92 ರನ್ ಗಳಿಸಿದರು. ಈ ಮೂಲಕ ಟಿ-20 ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ಅರ್ಧಶತಕಗಳನ್ನು ಗಳಿಸಿದ್ದ ಕ್ರಿಸ್ ಗೇಲ್ ಅವರ ದಾಖಲೆಯನ್ನು ಉಡೀಸ್ ಮಾಡಿ ನಂ.1 ಪಟ್ಟವನ್ನು ಅಲಂಕರಿಸಿದ್ದಾರೆ. ಈ ಪಟ್ಟಿಯಲ್ಲಿ ಕ್ರಿಸ್ ಗೆಲ್ (88) ಅರ್ಧಶತಕಗಳನ್ನು ಗಳಿಸಿದ್ದು, 2 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅದೇ ರೀತಿ ವಿರಾಟ್ ಕೊಹ್ಲಿ (77), ಆ್ಯರನ್ ಫಿಂಚ್ (70), ರೋಹಿತ್ ಶರ್ಮಾ (69), ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಐಪಿಎಲ್‍ನಲ್ಲಿ ವೇಗಿಗಳ ಮಿಂಚಿನ ಎಸೆತಗಳ ದಾಖಲೆ

    ಟೂರ್ನಿಯಲ್ಲಿ ತಮ್ಮ ಹಳೆಯ ತಂಡವಾದ ಹೈದರಾಬಾದ್ ವಿರುದ್ಧ ಆಕರ್ಷಕ ಅರ್ಧಶತಕವನ್ನು ಗಳಿಸಿದ್ದಾರೆ. ಈ ಮೂಲಕ ಐಪಿಎಲ್‍ನಲ್ಲಿಯೂ ಸಹ ದಾಖಲೆಯ (54) ಅರ್ಧಶತಕಗಳನ್ನು ಗಳಿಸಿದ್ದಾರೆ. 15ನೇ ಆವೃತ್ತಿ ಐಪಿಎಲ್‍ನಲ್ಲಿ ವಾರ್ನರ್ ಅವರ 4ನೇ ಅರ್ಧಶತಕವಾಗಿದೆ. ಇದನ್ನೂ ಓದಿ: ವಾರ್ನರ್ ಬಿಂದಾಸ್ ಬ್ಯಾಟಿಂಗ್ – ಟ್ರೋಲ್ ಕ್ವೀನ್ ಆದ ಕಾವ್ಯಾ ಮಾರನ್

    ಡೆಲ್ಲಿ ಪರ ಬ್ಯಾಟಿಂಗ್‍ನಲ್ಲಿ ಡೇವಿಡ್ ವಾರ್ನರ್ ಮತ್ತು ಪೊವೆಲ್ ಪರಾಕ್ರಮದ ಮುಂದೆ ಧೂಳಿಪಟವಾದ ಹೈದರಾಬಾದ್ ಬೌಲರ್‌ಗಳ ಉರಿ ಚೆಂಡಿನ ದಾಳಿ ಒಂದು ಕಡೆಯಾದರೆ, ಇನ್ನೊಂದೆಡೆ ಬ್ಯಾಟ್ಸ್‌ ಮ್ಯಾನಗಳ ವೈಫಲ್ಯದಿಂದಾಗಿ ಡೆಲ್ಲಿ ವಿರುದ್ಧ ಹೈದರಾಬಾದ್ 21 ರನ್‍ಗಳ ಅಂತರದಿಂದ ಸೋಲಿಗೆ ಶರಣಾಯಿತು.

  • ಮೈದಾನದಲ್ಲಿ ರೋಹಿತ್ ಕಾಲಿಗೆ ಬಿದ್ದ ಅಭಿಮಾನಿ – ವಿಡಿಯೋ ವೈರಲ್

    ಮೈದಾನದಲ್ಲಿ ರೋಹಿತ್ ಕಾಲಿಗೆ ಬಿದ್ದ ಅಭಿಮಾನಿ – ವಿಡಿಯೋ ವೈರಲ್

    ರಾಂಚಿ: ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅಭಿಮಾನಿಯೊಬ್ಬರು ನಾಯಕ ರೋಹಿತ್ ಶರ್ಮಾ ಅವರ ಕಾಲಿಗೆ ಅಡ್ಡ ಬಿದ್ದಿದ್ದು ವಿಡಿಯೋ ವೈರಲ್ ಆಗಿದೆ.

    ಅಭಿಯಾನಿಯೊಬ್ಬರು ರೋಹಿತ್ ಶರ್ಮಾ ಅವರ ಮುಂದೆ ಬಂದು ಕಾಲುಗಳನ್ನು ಸ್ಪರ್ಶಿಸಿ ಸಾಷ್ಟಾಂಗ ನಮಸ್ಕಾರ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಅವರಿಗೆ ರೋಹಿತ್ ಶರ್ಮಾ ಅವರ ಕಾಲುಗಳನ್ನು ಸ್ಪರ್ಶಿಸಲು ಅವಕಾಶ ದೊರೆಯಲಿಲ್ಲ. ಟೀಂ ಇಂಡಿಯಾ ನಾಯಕ ಪಾದಗಳನ್ನು ಸ್ಪರ್ಶಿಸದಂತೆ ತಿಳಿಸುತ್ತಿದ್ದ ದೃಶ್ಯ ಹಾಗೂ ಸೆಕ್ಯೂರಿಟಿ ಹಿಂಬಾಲುಸುತ್ತಿದ್ದಂತೆ ಆ ಅಭಿಮಾನಿ ಹಿಂದಿರುಗಿ ಓಡುತ್ತಿರುವ ವೀಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಕೊಹ್ಲಿ ಅಲ್ಲ ಗುಪ್ಟಿಲ್ ಈಗ ಟಿ20 ಕ್ರಿಕೆಟ್‍ನ ಕಿಂಗ್

    ಹಿಟ್‍ಮೆನ್‍ನ ಪಾದ ಸ್ಪರ್ಶಿಸಲು ಅಥವಾ ಶೆಕ್ ಹ್ಯಾಂಡ್‍ಗಾಗಿ ಬಂದಿರುವುದು ಇದೇನು ಮೊದಲ ಬಾರಿಯಲ್ಲ. ಈ ರೀತಿಯ ವರ್ತನೆಗಳು ಕ್ರಿಕೆಟ್ ಲೋಕದಲ್ಲಿ ಆಗಾಗ ಆಗುತ್ತಿರುವುದು ಸಾಮಾನ್ಯವಾಗಿದೆ. ಅಷ್ಟೇ ಅಲ್ಲದೇ ಆಟಗಾರರಿಗೂ ಸಾಮಾನ್ಯವಾಗಿದೆ. ಈ ವೀಡಿಯೋಕ್ಕೆ ನೆಟ್ಟಿಗರು ಫನ್ನಿ ಫನ್ನಿ ಕಾಮೆಂಟ್‍ಗಳನ್ನು ಮಾಡುತ್ತಿದ್ದಾರೆ, ಅಷ್ಟೇ ಅಲ್ಲದೇ ಹೆಚ್ಚು ಟ್ರೋಲ್‍ನಲ್ಲಿರುವ ವೀಡಿಯೋಗಳಲ್ಲಿ ಇದು ಒಂದಾಗಿದೆ.

    ರಾಂಚಿಯಲ್ಲಿ ನಡೆದ 2ನೇ ಟೀ-20 ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್‍ಗಳ ಅಂತರದಿಂದ ಗೆಲುವು ಸಾಧಿಸಿದೆ. ಟೀಮ್ ಇಂಡಿಯಾ ಇನ್ನೊಂದು ಪಂದ್ಯ ಬಾಕಿ ಇರುವಂತೆ ಸರಣಿ ಕೈವಶ ಮಾಡಿಕೊಂಡಿದೆ. ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್ ಜೊತೆ ಆರ್‌ಸಿಬಿಗೂ ವಿದಾಯ ಹೇಳಿದ ಎಬಿಡಿ

  • ಕೊಹ್ಲಿ ಅಲ್ಲ ಗುಪ್ಟಿಲ್ ಈಗ ಟಿ20 ಕ್ರಿಕೆಟ್‍ನ ಕಿಂಗ್

    ಕೊಹ್ಲಿ ಅಲ್ಲ ಗುಪ್ಟಿಲ್ ಈಗ ಟಿ20 ಕ್ರಿಕೆಟ್‍ನ ಕಿಂಗ್

    ರಾಂಚಿ: ಟಿ20 ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ದಾಖಲೆ ಭಾರತ ತಂಡದ ಏಕದಿನ ಮತ್ತು ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೆಸರಲ್ಲಿತ್ತು. ಇದೀಗ ಈ ದಾಖಲೆಯನ್ನು ನ್ಯೂಜಿಲೆಂಡ್ ತಂಡದ ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ ಮುರಿದು ಟಿ20 ಕ್ರಿಕೆಟ್‍ನ ಕಿಂಗ್ ಆಗಿದ್ದಾರೆ.

    ಅಂತರಾಷ್ಟ್ರೀಯ ಟಿ20 ಕ್ರಿಕೆಟ್‍ನಲ್ಲಿ ವಿರಾಟ್ ಕೊಹ್ಲಿ 95 ಪಂದ್ಯಗಳಿಂದ 29 ಅರ್ಧಶತಕ ಸಹಿತ 3,227 ರನ್ ಸಿಡಿಸಿ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದರು. ಭಾರತ ಮತ್ತು ನ್ಯೂಜಿಲೆಂಡ್ ಸರಣಿಯಲ್ಲಿ ಮಾರ್ಟಿನ್ ಗುಪ್ಟಿಲ್ ಕೊಹ್ಲಿಯ ಈ ದಾಖಲೆಯನ್ನು ಮುರಿದು ನೂತನವಾಗಿ ಟಿ20 ಕ್ರಿಕೆಟ್‍ನ ಕಿಂಗ್ ಆಗಿದ್ದಾರೆ. ಗುಪ್ಟಿಲ್ 111 ಪಂದ್ಯಗಳಿಂದ 2 ಶತಕ, 19 ಅರ್ಧಶತಕ ಸಹಿತ 3,248 ರನ್ ಬಾರಿಸಿ ಟಿ20 ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ವಿಶ್ವದ ನಂ.1 ಆಟಗಾರರಾಗಿದ್ದಾರೆ. ಇದನ್ನೂ ಓದಿ: ರಾಹುಲ್‌, ರೋಹಿತ್‌ ಶತಕದ ಜೊತೆಯಾಟ- ಟಿ20 ಸರಣಿ ಗೆದ್ದ ಟೀಂ ಇಡಿಯಾ

    ಗುಪ್ಟಿಲ್ ಮತ್ತು ಕೊಹ್ಲಿ ಟಿ20 ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ರನ್ ಸಿಡಿಸಿದವರ ಪಟ್ಟಿಯಲ್ಲಿ ಒಂದು ಮತ್ತು ಎರಡನೇ ಸ್ಥಾನ ಪಡೆದರೆ ಮೂರನೇ ಸ್ಥಾನದಲ್ಲಿ ಭಾರತ ಟಿ20 ತಂಡದ ನಾಯಕ ರೋಹಿತ್ ಶರ್ಮಾ ಇದ್ದಾರೆ. ರೋಹಿತ್ 118 ಪಂದ್ಯಗಳಿಂದ 4 ಶತಕ, 25 ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ ಕೊಹ್ಲಿಗಿಂತ 86 ರನ್‍ಗಳ ಹಿನ್ನಡೆಯಲ್ಲಿದ್ದಾರೆ.

    ಭಾರತ ಹಾಗೂ ನ್ಯೂಜಿಲೆಂಡ್ ಸರಣಿಯಲ್ಲಿ ಮಾರ್ಟಿನ್ ಗುಪ್ಟಿಲ್ ಆಡುತ್ತಿದ್ದರೆ, ವಿರಾಟ್ ಕೊಹ್ಲಿ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ. ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು ಈಗಾಗಲೇ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿದ್ದು, ಇನ್ನೊಂದು ಪಂದ್ಯ ಬಾಕಿ ಇದೆ. ನಾಳೆ ಕೋಲ್ಕತ್ತಾದಲ್ಲಿ ಮೂರನೇ ಟಿ20 ಪಂದ್ಯ ನಡೆಯಲಿದೆ. ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್ ಜೊತೆ ಆರ್‌ಸಿಬಿಗೂ ವಿದಾಯ ಹೇಳಿದ ಎಬಿಡಿ