Tag: t20 cricket

  • ಅಂದು ಅವಮಾನವಾಗಿದ್ದ ಜಾಗದಲ್ಲೇ ಸನ್ಮಾನ – ನೆನಪಿದೆಯಾ 2007ರ ರೋಮಾಂಚನಕಾರಿ ಕ್ಷಣ!

    ಅಂದು ಅವಮಾನವಾಗಿದ್ದ ಜಾಗದಲ್ಲೇ ಸನ್ಮಾನ – ನೆನಪಿದೆಯಾ 2007ರ ರೋಮಾಂಚನಕಾರಿ ಕ್ಷಣ!

    – ಅದು ಚುಟುಕು ಕ್ರಿಕೆಟ್ ಯುಗಾರಂಭ – ಚೊಚ್ಚಲ ಆವೃತ್ತಿಯಲ್ಲೇ ಭಾರತ ಚಾಂಪಿಯನ್!

    ಚೊಚ್ಚಲ ಟಿ20 ವಿಶ್ವಕಪ್ ಆರಂಭ: 2007
    ಆತಿಥ್ಯ: ದಕ್ಷಿಣ ಆಫ್ರಿಕಾ
    ವಿಶ್ವಕಪ್ ವಿಜೇತ ತಂಡ: ಭಾರತ
    ರನ್ನರ್‌ಅಪ್: ಪಾಕಿಸ್ತಾನ

    2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ (T20 World Cup) ಟೂರ್ನಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ನೆನಪಿನಲ್ಲಿಡಬೇಕಾದ ವರ್ಷ. ಏಕೆಂದರೆ ಆಗಷ್ಟೇ ಮಹತ್ವ ಪಡೆದುಕೊಳ್ಳುತ್ತಿದ್ದ ಮೊಟ್ಟ ಮೊದಲ ಚುಟುಕು ಕ್ರಿಕೆಟ್‌ಗೆ ಬುನಾದಿ ಹಾಕಿಕೊಟ್ಟ ಟೂರ್ನಿ ಅದಾಗಿತ್ತು. ಅಲ್ಲದೇ ಎಂ.ಎಸ್ ಧೋನಿ ( MS Dhoni) ಅವರಂತಹ `ಮಹಾನಾಯಕ’ ಉದಯಕ್ಕೆ ಸಾಕ್ಷಿಯಾದ ಟೂರ್ನಿಯೂ ಅದಾಗಿತ್ತು.

    2007ರಲ್ಲಿ ಅದೇ ವರ್ಷ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ಏಕದಿನ ವಿಶ್ವಕಪ್ (2007 ODI World Cup) ಟೂರ್ನಿಯೂ ನಡೆದಿತ್ತು. ಆ ಆವೃತ್ತಿಯಲ್ಲಿ ಟೀಂ ಇಂಡಿಯಾ (Team India) ಲೀಗ್‌ ಹಂತದಲ್ಲೇ ಹೀನಾಯ ಸೋಲು ಕಂಡು ಹೊರಬಿದ್ದಿತ್ತು. ಇದಾದ ಬಳಿಕ ದೇಶಾದ್ಯಂತ ಪ್ರತಿಭಟನೆ ನಡೆದು, ಪ್ರಮುಖ ಆಟಗಾರರ ಮನಗಳ ಮೇಲೆ ಕಲ್ಲು ತೂರಾಟವೂ ನಡೆದಿತ್ತು. ರಸ್ತೆಯಲ್ಲೇ ಆಟಗಾರರ ಭಾವಚಿತ್ರಗಳಿಗೆ ಬೆಂಕಿಯಿಟ್ಟು ಆಕ್ರೋಶ ಹೊರಹಾಕಿದ್ದರು. ಇದಾದ ಕೆಲವೇ ದಿನಗಳಲ್ಲಿ ಟಿ20 ವಿಶ್ವಕಪ್ ಟೂರ್ನಿಯೂ ನಿಗದಿಯಾಗಿತ್ತು. ಏಕದಿನ ಕ್ರಿಕೆಟ್‌ನಲ್ಲಿ ಆಡಿದ್ದ ಖ್ಯಾತನಾಮರು ಟಿ20 ಆಡಲು ಹಿಂದೇಟು ಹಾಕಿದ್ದ ಕಾರಣ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಎಂ.ಎಸ್ ಧೋನಿ ಅವರಿಗೆ ನಾಯಕತ್ವದ ಹೊಣೆ ನೀಡಲಾಯಿತು.

    ಟಿ20 ಚುಟುಕು ಕ್ರಿಕೆಟ್ (T20 Cricket) ಆಗಿನ್ನು ಜನಪ್ರಿಯವಾಗಿರಲಿಲ್ಲ. ಇದರಿಂದ ಬಹಳಷ್ಟು ಜನರು ಇದನ್ನು ಟೀಕಿಸಿದ್ದರು. ಆದ್ರೆ ರಾಂಚಿ ಮೂಲದ ಎಂ.ಎಸ್ ಧೋನಿ ಅವರು ಆ ಟೂರ್ನಿಯಲ್ಲಿ ಕೈಗೊಂಡ ನಿರ್ಧಾರಗಳಿಂದ ಟೀಂ ಇಂಡಿಯಾ, ಚೊಚ್ಚಲ ಆವೃತ್ತಿಯಲ್ಲೇ ವಿಶ್ವಕಪ್ ಟ್ರೋಫಿ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

    ಪಾಕ್ ವಿರುದ್ಧ ಗೆದ್ದು ಬೀಗಿದ್ದೇ ರೋಚಕ:
    ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಫೈನಲ್ ಪಂದ್ಯ ಕೊನೆಯವರೆಗೂ ರೋಚಕತೆಯಿಂದ ಕೂಡಿತ್ತು. ಅಂದು ಇಡೀ ಭಾರತವೇ ಈ ಪಂದ್ಯವನ್ನು ಕುತೂಹಲದಿಂದ ನೋಡುತ್ತಿತ್ತು.

    ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 157 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡದ ಗೆಲುವಿಗೆ ಕೊನೆಯ ಓವರ್‌ನಲ್ಲಿ 12 ರನ್ ಮಾತ್ರವೇ ಬೇಕಿತ್ತು. ಪಾಕ್ ಮೊದಲೇ 9 ವಿಕೆಟ್ ಕಳೆದುಕೊಂಡಿದ್ದರಿಂದ ಭಾರತದ ಗೆಲುವಿಗೆ ಒಂದು ವಿಕೆಟ್ ಅಗತ್ಯವಿತ್ತು. ಹಾಗಾಗಿ ಕೊನೇ ಕ್ಷಣದ ವರೆಗೂ ರೋಚಕತೆಯಿಂದ ಕೂಡಿದ್ದ ಪಂದ್ಯವನ್ನು ದೇಶದ ಕೋಟ್ಯಂತರ ಜನ ಕಣ್ಣು ಮಿಟುಕಿಸದಂತೆ ನೋಡುತ್ತಿದ್ದರು. ಪ್ರಮುಖ ಬೌಲರ್‌ಗಳು ತಮ್ಮ ಓವರ್ ಮುಕ್ತಾಯ ಗೊಳಿಸಿದ್ದರಿಂದ ಮಹಿ, ಜೋಗಿಂದರ್ ಶರ್ಮಾ ಅವರಿಗೆ ಬೌಲಿಂಗ್ ನೀಡಿದರು. ಪಾಕ್‌ನ ಸ್ಫೋಟಕ ಬ್ಯಾಟರ್ ಮಿಸ್ಬಾ ಉಲ್ ಹಕ್ ಸ್ಟ್ರೈಕ್‌ನಲ್ಲಿದ್ದರು.

    ಮೊದಲಿಗೆ ವೈಡ್ ರನ್ ಬಿಟ್ಟುಕೊಟ್ಟ ಜೋಗಿಂದರ್ ಶರ್ಮಾ ಮೊದಲ ಎಸೆತದಲ್ಲಿ ಹಿಡಿತ ಸಾಧಿಸಿದರು. ಆದ್ರೆ 2ನೇ ಎಸೆತದಲ್ಲಿ ಮಿಸ್ಬಾ ಉಲ್ ಹಕ್‌ ಭರ್ಜರಿ ಸಿಕ್ಸರ್ ಸಿಡಿಸಿದಾಗ ಪಾಕ್‌ತಂಡ ಗೆದ್ದೇಬಿಟ್ಟೆವು ಎಂಬ ಸಂತಸದಲ್ಲಿ ಕುಣಿದು ಕುಪ್ಪಳಿಸಿತ್ತು, ಪಾಕ್ ಅಭಿಮಾನಿಗಳು ಕೇಕೆ ಹಾಕಲು ಶುರು ಮಾಡಿದ್ದರು. ಮರು ಎಸೆತದಲ್ಲಿ ಆನ್‌ಸ್ಟಂಪ್ ಮೂಲಕ ಶಾರ್ಟ್ ಫೈನ್‌ಲೆಗ್ ಶಾರ್ಟ್ ಪ್ರಯತ್ನಿಸಿದ ಮಿಸ್ಬಾ, ಶ್ರೀಶಾಂತ್‌ಗೆ ಕ್ಯಾಚ್ ನೀಡಿ ಔಟಾದರು. ಪಾಕ್ ಮೊದಲೇ 9 ವಿಕೆಟ್ ಕಳೆದುಕೊಂಡಿದ್ದ ಪರಿಣಾಮ ಪಾಕಿಸ್ತಾನ ತಂಡ ಆಲೌಟ್ ಆಗಿ ಟೀಂ ಇಂಡಿಯಾ ಎದುರು ಮಂಡಿಯೂರಿತು. ಅಂತಿಮವಾಗಿ ಭಾರತ 5 ರನ್‌ಗಳ ರೋಚಕ ಜಯ ಸಾಧಿಸಿತು. ಕುತೂಹಲದಿಂದ ನೋಡುತ್ತಿದ್ದ ಇಡೀ ಭಾರತ ಸಂಭ್ರಮದಲ್ಲಿ ತೇಲಿತು.

  • ವಿಶ್ವಕಪ್‌ ಗೆದ್ದ ಬೆನ್ನಲ್ಲೇ ಟಿ20 ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಕೊಹ್ಲಿ

    ವಿಶ್ವಕಪ್‌ ಗೆದ್ದ ಬೆನ್ನಲ್ಲೇ ಟಿ20 ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಕೊಹ್ಲಿ

    ಬ್ರಿಡ್ಜ್‌ಟೌನ್‌(ಬಾರ್ಬಡೋಸ್‌): ಭಾರತ (Team India) ಎರಡನೇ ಟಿ20 ವಿಶ್ವಕಪ್‌ ಕ್ರಿಕೆಟ್‌ (T20 World Cup) ಗೆದ್ದ ಬೆನ್ನಲ್ಲೇ ವಿರಾಟ್‌ ಕೊಹ್ಲಿ (Virat Kohli) ಟಿ20 ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ.

    ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್‌ನಲ್ಲಿ ವಿಕೆಟ್‌ ಉರುಳುತ್ತಿದ್ದಾಗ ಗಟ್ಟಿ ಬಂಡೆಯಂತೆ ನಿಂತು 76 ರನ್‌ (59 ಎಸೆತ, 6 ಬೌಂಡರಿ, 2 ಸಿಕ್ಸರ್‌) ಸಿಡಿಸಿದ ವಿರಟ್‌ ಕೊಹ್ಲಿ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದನ್ನೂ ಓದಿ: ವಿಶ್ವಕಪ್‌ ಜೊತೆ ವಿಶ್ವದಾಖಲೆ – ಟೀಂ ಇಂಡಿಯಾದ ಸಾಧನೆ ಮುರಿಯುವುದು ಬಲು ಕಷ್ಟ

    ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಇದು ನನ್ನ ಕೊನೆಯ ಟಿ 20 ವಿಶ್ವಕಪ್. ಇಲ್ಲಿಯವರೆಗೆ ಇದನ್ನೇ ಸಾಧಿಸಲು ನಾವು ಬಯಸುತ್ತಿದ್ದೆವು ಎಂದು ಹೇಳಿದರು.

    ಇದು ಭಾರತಕ್ಕಾಗಿ ಆಡುತ್ತಿರುವ ನನ್ನ ಕೊನೆಯ ಟಿ20 ಪಂದ್ಯ. ಮುಂದೆ ಯುವ ಪೀಳಿಗೆ ಕ್ರಿಕೆಟ್ ತಂಡದ ನೇತೃತ್ವ ವಹಿಸಿಕೊಳ್ಳಬೇಕು ಎಂದು ತಿಳಿಸಿ ಈ ಯಶಸ್ಸಿಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದರು. ಇದನ್ನೂ ಓದಿ: 11 ವರ್ಷಗಳ ನಂತರ ಐಸಿಸಿ ಟ್ರೋಫಿಯನ್ನು ಗೆದ್ದ ಭಾರತ

  • 24 ರನ್‌ಗಳ ಗೆಲುವು, ಸೆಮಿಗೆ ಎಂಟ್ರಿ – ವಿಶ್ವಕಪ್‌ ಫೈನಲ್ ಸೋಲಿಗೆ ಸೇಡು ತೀರಿಸಿದ ಭಾರತ

    24 ರನ್‌ಗಳ ಗೆಲುವು, ಸೆಮಿಗೆ ಎಂಟ್ರಿ – ವಿಶ್ವಕಪ್‌ ಫೈನಲ್ ಸೋಲಿಗೆ ಸೇಡು ತೀರಿಸಿದ ಭಾರತ

    ಗ್ರಾಸ್‌ ಐಲೆಟ್‌(ಸೇಂಟ್‌ ಲೂಸಿಯಾ): ಟಿ20 ವಿಶ್ವಕಪ್‌ (T20 World Cup) ಕ್ರಿಕೆಟ್‌ ಸೂಪರ್‌ 8 ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ಭಾರತ 24 ರನ್‌ಗಳ ಜಯ ಸಾಧಿಸಿ ಸೆಮಿಫೈನಲ್‌ ಪ್ರವೇಶಿಸಿದೆ. ಈ ಮೂಲಕ ಕಳೆದ ವರ್ಷದ ವಿಶ್ವಕಪ್‌ ಕ್ರಿಕೆಟ್‌ ಫೈನಲಿನಲ್ಲಿ ಸೋತಿದ್ದ ಭಾರತ ಈ ಪಂದ್ಯವನ್ನು ಗೆಲ್ಲುವ ಮೂಲಕ ಸೇಡು ತೀರಿಸಿದೆ.

    ಗೆಲ್ಲಲು 205 ರನ್‌ಗಳ ಕಠಿಣ ಗುರಿಯನ್ನು ಪಡೆದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 181 ರನ್‌ ಹೊಡೆದು ಜಯಗಳಿಸಿತು. ಕೊನೆಯಲ್ಲಿ ಆರ್ಶ್‌ದೀಪ್‌ ಸಿಂಗ್‌, ಕುಲದೀಪ್‌ ಯಾದವ್‌, ಬುಮ್ರಾ ಉತ್ತಮ ಬೌಲಿಂಗ್‌ ದಾಳಿ ನಡೆಸಿದ ಪರಿಣಾಮ ಭಾರತ ಗೆಲುವು ಸಾಧಿಸಿತು.

    ಡೇವಿಡ್‌ ವಾರ್ನರ್‌ 6 ರನ್‌ಗಳಿಸಿ ಬೇಗನೇ ಔಟಾದರೂ ಟ್ರಾವಿಸ್‌ ಹೆಡ್‌ ಮತ್ತು ಮಿಚೆಲ್‌ ಮಾರ್ಷ್‌ ಎರಡನೇ ವಿಕೆಟಿಗೆ 81 ರನ್‌ ಜೊತೆಯಾಟವಾಡಿ ಚೇತರಿಕೆ ನೀಡಿದರು.

    ವಿಕೆಟ್‌ ಉರುಳುತ್ತಿದ್ದರೂ ಟ್ರಾವಿಸ್‌ ಹೆಡ್‌ ನಿಂತು ಆಡುತ್ತಿದ್ದರು. ಬೂಮ್ರಾ ಎಸೆದ ಇನ್ನಿಂಗ್ಸ್‌ 17ನೇ ಓವರ್‌ನಲ್ಲಿ ಟ್ರಾವಿಸ್‌ ಹೆಡ್‌ 76 ರನ್‌ (43 ಎಸೆತ, 9 ಬೌಂಡರಿ,4 ಸಿಕ್ಸ್‌) ಗಳಿಸಿದ್ದಾಗ ರೋಹಿತ್‌ ಶರ್ಮಾ ಕ್ಯಾಚ್‌ ನೀಡಿ ಔಟಾದ ಬಳಿಕ ಭಾರತದತ್ತ ಪಂದ್ಯ ವಾಲಿತು.

    ಆರ್ಶ್‌ದೀಪ್‌ ಸಿಂಗ್‌ 3 ವಿಕೆಟ್‌, ಕುಲದೀಪ್‌ ಯಾದವ್‌ 2 , ಬುಮ್ರಾ ಮತ್ತು ಅಕ್ಷರ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಕಿತ್ತರು. ಇದನ್ನೂ ಓದಿ: ಸಿಕ್ಸ್‌, ಬೌಂಡರಿ ಸುರಿಮಳೆ – ವಿಶ್ವದಾಖಲೆ ನಿರ್ಮಿಸಿದ ರೋಹಿತ್‌ ಶರ್ಮಾ

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ಪರ ವಿರಾಟ್‌ ಕೊಹ್ಲಿ ಶೂನ್ಯಕ್ಕೆ ಔಟಾದರು. ವಿಕೆಟ್‌ ಉರುಳಿದ್ದರೂ ರೋಹಿತ್‌ ಶರ್ಮಾ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದರು. ಕೇವಲ 41 ಎಸೆತಗಳಲ್ಲಿ 91 ರನ್‌ ಹೊಡೆಯವ ಮೂಲಕ ಹಲವು ದಾಖಲೆ ನಿರ್ಮಿಸಿದರು. ಈ ಸುಂದರ ರೋಹಿತ್‌ ಶರ್ಮಾ (Rohit Sharma) ಸಿಕ್ಸ್‌ ಮತ್ತು ಬೌಂಡರಿ ಮೂಲಕವೇ 76 ರನ್‌ ಚಚ್ಚಿದ್ದರು. 19 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ ರೋಹಿತ್‌ ಮಿಚೆಲ್‌ ಸ್ಟ್ರಾಕ್‌ ಎಸೆತದಲ್ಲಿ ಬೌಲ್ಡ್‌ ಔಟ್‌ ಆದರು.

    ರಿಷಭ್‌ ಪಂತ್‌ 15 ರನ್‌, ಸೂರ್ಯಕುಮಾರ್‌ ಯಾದವ್‌ 31 ರನ್‌(16 ಎಸೆತ, 3 ಬೌಂಡರಿ, 2 ಸಿಕ್ಸರ್‌), ಶಿವಂ ದುಬೆ 28 ರನ್‌ (22 ಎಸೆತ, 2 ಬೌಂಡರಿ, 1 ಸಿಕ್ಸ್‌), ಹಾರ್ದಿಕ್‌ ಪಾಂಡ್ಯ ಔಟಾಗದೇ 27 ರನ್‌ ( 17 ಎಸೆತ, 1 ಬೌಂಡರಿ, 2 ಸಿಕ್ಸ್‌), ಜಡೇಜಾ ಔಟಾಗದೇ 9 ರನ್‌ (5 ಎಸೆತ, 1 ಸಿಕ್ಸ್‌) ಹೊಡೆದ ಪರಿಣಾಮ ಭಾರತ ಅಂತಿಮವಾಗಿ 5 ವಿಕೆಟ್‌ ನಷ್ಟಕ್ಕೆ 205 ರನ್‌ ಹೊಡೆಯಿತು.

  • ಸಿಕ್ಸ್‌, ಬೌಂಡರಿ ಸುರಿಮಳೆ – ವಿಶ್ವದಾಖಲೆ ನಿರ್ಮಿಸಿದ ರೋಹಿತ್‌ ಶರ್ಮಾ

    ಸಿಕ್ಸ್‌, ಬೌಂಡರಿ ಸುರಿಮಳೆ – ವಿಶ್ವದಾಖಲೆ ನಿರ್ಮಿಸಿದ ರೋಹಿತ್‌ ಶರ್ಮಾ

    ಗ್ರಾಸ್‌ ಐಲೆಟ್‌(ಸೇಂಟ್‌ ಲೂಸಿಯಾ): ಟಿ20 ವಿಶ್ವಕಪ್‌ (T20 World Cup) ಆಸ್ಟ್ರೇಲಿಯಾ (Australia) ವಿರುದ್ಧ ನಡೆದ ಸೂಪರ್‌ 8 ಪಂದ್ಯದಲ್ಲಿ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ವಿಶ್ವ ದಾಖಲೆ (World Record) ಬರೆದಿದ್ದಾರೆ.

    ಕೇವಲ 41 ಎಸೆತಗಳಲ್ಲಿ 91 ರನ್‌ ಹೊಡೆಯವ ಮೂಲಕ ಹಲವು ದಾಖಲೆ ನಿರ್ಮಿಸಿದ್ದಾರೆ. ಈ ಸುಂದರ ಇನ್ನಿಂಗ್ಸ್‌ ಬರೋಬ್ಬರಿ 8 ಸಿಕ್ಸ್‌, 7 ಬೌಂಡರಿ ಒಳಗೊಂಡಿತ್ತು. ರೋಹಿತ್‌ ಶರ್ಮಾ (Rohit Sharma) ಸಿಕ್ಸ್‌ ಮತ್ತು ಬೌಂಡರಿ ಮೂಲಕವೇ 76 ರನ್‌ ಚಚ್ಚಿದ್ದರು.

    ವಿರಾಟ್‌ ಕೊಹ್ಲಿ (Virat Kohli) ಶೂನ್ಯಕ್ಕೆ ಔಟಾದರೂ ರೋಹಿತ್‌ ಶರ್ಮಾ ಆಸೀಸ್‌ ಬೌಲರ್‌ಗಳನ್ನು ಬೆಂಡೆತ್ತಿದ್ದರು. 19 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ ರೋಹಿತ್‌ ಮಿಚೆಲ್‌ ಸ್ಟ್ರಾಕ್‌ ಎಸೆತದಲ್ಲಿ ಬೌಲ್ಡ್‌ ಔಟ್‌ ಆದರು. ಇದನ್ನೂ ಓದಿ: ಟೀಂ ಇಂಡಿಯಾ ಮುಖ್ಯಕೋಚ್‌ ಹುದ್ದೆಗೆ ಗಂಭೀರ್‌ ಫಿಕ್ಸ್‌? – ಗಂಭೀರ್‌ ಸ್ಪಷ್ಟನೆ ಏನು?

    ಅತಿ ಹೆಚ್ಚು ರನ್‌:
    ಟಿ20 ಕ್ರಿಕೆಟ್‌ ಅತಿ ಹೆಚ್ಚು ರನ್‌ ಸಿಡಿಸಿದ ಬ್ಯಾಟರ್‌ ಆಗಿ ಹೊರಹೊಮ್ಮಿದ್ದಾರೆ. ಪಾಕಿಸ್ತಾನದ ಬಾಬರ್‌ ಅಜಂ 146 ಇನ್ನಿಂಗ್ಸ್‌ನಿಂದ 4,145 ರನ್‌ ಹೊಡೆದರೆ ರೋಹಿತ್‌ ಶರ್ಮಾ 149 ಇನ್ನಿಂಗ್ಸ್‌ನಿಂದ 4,165 ರನ್‌ ಹೊಡೆದಿದ್ದಾರೆ.


    ನಾಯಕನಾಗಿ ವೇಗದ ಅರ್ಧಶತಕ
    19 ಎಸೆತಗಳಲ್ಲಿ ರೋಹಿತ್‌ ಶರ್ಮಾ ಅರ್ಧಶತಕ ಹೊಡೆದರು. ಈ ಮೊದಲು 2007ರಲ್ಲಿ ಬಾಂಗ್ಲಾದ ಮೊಹಮ್ಮದ್‌ ಅಶ್ರಫುಲ್‌ 20 ಎಸೆತಗಳಲ್ಲಿ ಫಿಫ್ಟಿ ಹೊಡೆದಿದ್ದರು.

    ಭಾರತದ ಪರ ಅತಿ ಹೆಚ್ಚು ಸಿಕ್ಸ್‌:
    ಭಾರತದ ಪರ ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸ್‌ ಸಿಡಿಸಿದ ಆಟಗಾರನಾಗಿ ರೋಹಿತ್‌ ಶರ್ಮಾ ಹೊರ ಹೊಮ್ಮಿದ್ದಾರೆ. ಈ ಹಿಂದೆ ಯುವರಾಜ್‌ ಸಿಂಗ್‌ 2007ರಲ್ಲಿ ಇಂಗ್ಲೆಂಡ್‌ ವಿರುದ್ಧ 7 ಸಿಕ್ಸ್‌ ಹೊಡೆದಿದ್ದರು. ಈ ಪಂದ್ಯದಲ್ಲಿ ಯುವರಾಜ್‌ ಒಂದೇ ಓವರ್‌ನಲ್ಲಿ 6 ಸಿಕ್ಸ್‌ ಸಿಡಿಸಿ ವಿಶ್ವದಾಖಲೆ ಬರೆದಿದ್ದರು.

     

  • ಟಿ20 ವಿಶ್ವಕಪ್‌ನಿಂದ ಪಾಕಿಸ್ತಾನ ಔಟ್‌

    ಟಿ20 ವಿಶ್ವಕಪ್‌ನಿಂದ ಪಾಕಿಸ್ತಾನ ಔಟ್‌

    – ಅಮೆರಿಕ, ಐರ್ಲೆಂಡ್‌ ಪಂದ್ಯ ಮಳೆಗೆ ಬಲಿ
    – ಸೂಪರ್‌  8ಕ್ಕೆ  ಪ್ರವೇಶ ಪಡೆದ ಅಮೆರಿಕ

    ಫ್ಲೋರಿಡಾ: ಈ ಬಾರಿ ಟಿ20 ವಿಶ್ವಕಪ್‌ (T20 World Cup) ಗೆಲ್ಲಲೇಬೇಕೆಂದು ಸೇನಾ ಕೇಂದ್ರಗಳಲ್ಲಿ ತರಬೇತಿ ಪಡೆದಿದ್ದ ಪಾಕಿಸ್ತಾನ (Pakistan) ಈಗ ಟೂರ್ನಿಯಿಂದಲೇ ಔಟ್‌ ಆಗಿದೆ.

    ಅಮೆರಿಕ, ಐರ್ಲೆಂಡ್‌ ಪಂದ್ಯ ಮಳೆಯಿಂದ (Rain) ರದ್ದಾಗಿದೆ. ಪರಿಣಾಮ ಅಮೆರಿಕ (USA) ಅಧಿಕೃತವಾಗಿ ಸೂಪರ್‌ 8 ಪ್ರವೇಶಿಸಿದ್ದು ಪಾಕ್‌ ಕನಸು ನುಚ್ಚು ನೂರಾಗಿದೆ. ಅಷ್ಟೇ ಅಲ್ಲದೇ ಮೊದಲ ಟಿ20 ವಿಶ್ವಕಪ್‌ನಲ್ಲೇ ಸೂಪರ್‌ 8 ಹಂತ ಪ್ರವೇಶಿಸಿದ ಸಾಧನೆ ಮಾಡಿದೆ.

    ಎ ಗುಂಪಿನಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿ 6 ಅಂಕಗಳನ್ನು ಪಡೆದು ಭಾರತ (Team India) ಈಗಾಗಲೇ ಸೂಪರ್‌ 8 (Super 8) ಪ್ರವೇಶಿಸಿದ್ದರೆ ಅಮೆರಿಕ ಮತ್ತು ಪಾಕ್‌ ಮಧ್ಯೆ ತೀವ್ರ ಸ್ಪರ್ಧೆ ಇತ್ತು. ಅಮೆರಿಕ ಎರಡು ಪಂದ್ಯ ಗೆದ್ದಿದ್ದರೆ ಪಾಕ್‌ ಒಂದು ಪಂದ್ಯ ಗೆದ್ದಿತ್ತು.

    ಶುಕ್ರವಾರದ ಪಂದ್ಯ ರದ್ದಾದ ಕಾರಣ ಇತ್ತಡಗಳಿಗೆ ತಲಾ ಒಂದೊಂದು ಅಂಕವನ್ನು ನೀಡಲಾಗಿದೆ. ಇದರಿಂದಾಗಿ 5 ಅಂಕದೊಂದಿಗೆ ಅಮೆರಿಕ ಸೂಪರ್‌ 8 ಪ್ರವೇಶಿಸಿತು. ಒಂದು ವೇಳೆ ಅಮೆರಿಕ ಈ ಪಂದ್ಯವನ್ನು ಸೋತಿದ್ದರೆ ಪಾಕ್‌ಗೆ ಒಂದು ಅವಕಾಶವಿತ್ತು. ಇದನ್ನೂ ಓದಿ: ಪಾಕ್‌ ತಂಡದ ವಿರುದ್ಧ ದೇಶದ್ರೋಹದ ಕೇಸ್‌!

    ಪಾಕಿಸ್ತಾನ 3 ಪಂದ್ಯವಾಡಿ ಒಂದು ಪಂದ್ಯದಲ್ಲಿ ಮಾತ್ರ ಜಯಗಳಿಸಿದೆ. ಭಾನುವಾರ ಐರ್ಲೆಂಡ್‌ ವಿರುದ್ಧ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಗೆದ್ದರೂ 4 ಅಂಕ ಮಾತ್ರ ಸಂಪಾದಿಸುವುದರಿಂದ ಪಾಕ್‌ ಸೂಪರ್‌ 8 ಪ್ರವೇಶಿಸಲು ವಿಫಲವಾಯಿತು. ಪಾಕ್‌ ಜೊತೆಗೆ ಎ ಗುಂಪಿನಲ್ಲಿದ್ದ ಕೆನಡಾ ಮತ್ತು ಐರ್ಲೆಂಡ್‌ ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ.

    2026ರ ವಿಶ್ವಕಪ್‌ಗೂ ಅಮೆರಿಕ ನೇರ ಪ್ರವೇಶ ಪಡೆಯಿತು.  ಸೂಪರ್‌-8 ಹಂತಕ್ಕೇರುವ ಎಲ್ಲಾ 8 ತಂಡಗಳು 2026ರ  ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯಲಿದೆ.  ಈ ವಿಶ್ವಕಪ್‌ ಟೂರ್ನಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿದೆ. ಶ್ರೀಲಂಕಾ ಸೂಪರ್‌ 8 ಹಂತಕ್ಕೆ ಅರ್ಹತೆ ಪಡೆಯದೇ ಇದ್ದರೂ ಆತಿಥ್ಯ ವಹಿಸಿದ ಕಾರಣ ಅರ್ಹತೆ ಪಡೆಯಲಿದೆ.

  • ಅಮೆರಿಕದಲ್ಲಿ ಕಾಫಿನಾಡಿನ ಯುವಕ – ಕೊರೊನಾ ವೇಳೆ ಚಿಕ್ಕಮಗಳೂರಿನಲ್ಲಿ ಅಭ್ಯಾಸ!

    ಅಮೆರಿಕದಲ್ಲಿ ಕಾಫಿನಾಡಿನ ಯುವಕ – ಕೊರೊನಾ ವೇಳೆ ಚಿಕ್ಕಮಗಳೂರಿನಲ್ಲಿ ಅಭ್ಯಾಸ!

    – ಪಾಕ್‌ ವಿರುದ್ಧ ಮಿಂಚಿದ ನಾಸ್ತುಷ್ ಕೆಂಜಿಗೆ

    ಚಿಕ್ಕಮಗಳೂರು: ಪಾಕಿಸ್ತಾನದ (Pakistan) ವಿರುದ್ಧ ಯಾವುದೇ ತಂಡ ಕ್ರಿಕೆಟ್ ಆಡಿದರೂ ಆ ತಂಡಕ್ಕೆ ಭಾರತೀಯರ ಬೆಂಬಲ ಇದ್ದೇ ಇರುತ್ತೆ. ಹೀಗಿರುವಾಗ ಮೊನ್ನೆ ಟಿ20 ವಿಶ್ವಕಪ್ (T20 World Cup) ನಲ್ಲಿ ಅದೇ ಪಾಕಿಸ್ತಾನಕ್ಕೆ ಕ್ರಿಕೆಟ್ ಶಿಶು ಅಮೆರಿಕ (USA) ಮಣ್ಣು ಮುಕ್ಕಿಸಿದ್ದು ಈಗ ಇತಿಹಾಸ. ಆದರೆ ಅಮೆರಿಕ ತಂಡದ ಎಡಗೈ ಆಫ್ ಸ್ಪಿನ್ನರ್ ಕಾಫಿನಾಡ ಮನೆಮಗ ನಾಸ್ತುಷ್ ಕೆಂಜಿಗೆ (Nosthush Kenjige) ಆಟಕ್ಕೆ ಕಾಫಿನಾಡು ಫುಲ್ ಫಿದಾ ಆಗಿದ್ದಾರೆ. ಪಾಕ್ ವಿರುದ್ಧ ಗೆದ್ದಿದ್ದು ಅಮೆರಿಕವಾದರೂ ಸಂಭ್ರಮಿಸಿದ್ದು ಮಾತ್ರ ಭಾರತ.

    ಟಿ20 ಮಾದರಿಯ ಬೆಸ್ಟ್ ಟೀಂ ಪಾಕಿಸ್ತಾನವನ್ನ ಕ್ರಿಕೆಟ್ ಶಿಶುಗಳಾದ ಅಮೆರಿಕ ಸೋಲಿಸುತ್ತೆ ಅಂತ ಯಾರೂ ಊಹಿಸರಲಿಲ್ಲ. 159 ರನ್ ಚೇಸ್ ಮಾಡಲಾಗದ ಪಾಕಿಸ್ತಾನ ಮ್ಯಾಚ್ ಟೈ ಮಾಡ್ಕೊಂಡು ಸೂಪರ್ ಓವರ್ ನಲ್ಲಿ ಅಮೆರಿಕದೆದುರು ಮಂಡಿಯೂರಿತ್ತು. ಆ ಮ್ಯಾಚಿನಲ್ಲಿ ಕಾಫಿನಾಡು ಚಿಕ್ಕಮಗಳೂರು ಹುಡುಗನ ಸಾಧನೆ ಅಮೋಘವಾಗಿತ್ತು.

    ಆ ಪಂದ್ಯದಲ್ಲಿ ಫಸ್ಟ್ ಓವರ್ ಸ್ಪಿನ್‌ ಮಾಡಿದ ನಾಸ್ತುಷ್ ಚಿಕ್ಕಮಗಳೂರು (Chikkamagluru) ಜಿಲ್ಲೆ ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದವರು. ಪೂರ್ಣಚಂದ್ರ ತೇಜಸ್ವಿ ಅವರ ಸ್ನೇಹಿತ ಪ್ರದೀಪ್‌ ಕೆಂಜಿಗೆ ಅವರ ಮಗನಾಗಿರುವ ನಾಸ್ತುಷ್ ಉದ್ಯೋಗದ ನಿಮಿತ್ತ ಅಮೆರಿಕಕ್ಕೆ ಹೋಗಿ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದು ಅಮೆರಿಕದ ಜೊತೆ ಭಾರತದ ಹೆಸರನ್ನೂ ಬೆಳೆಸುತ್ತಿದ್ದಾರೆ. ಇದನ್ನೂ ಓದಿ: T20 World Cup: ಇಂದು ಇಂಡೋ-ಪಾಕ್‌ ಹೈವೋಲ್ಟೇಜ್‌ ಕದನ – 1 ಸೆಕೆಂಡ್‌ ಜಾಹೀರಾತಿಗೆ 4 ಲಕ್ಷ ರೂ.!

    ನಾಸ್ತುಷ್ ಕೆಂಜಿಗೆ ಹುಟ್ಟಿದ್ದು ಅಮೇರಿಕಾದಲ್ಲೇ. ಆದರೆ ಬೆಳೆದಿದ್ದು ಮಾತ್ರ ಚಿಕ್ಕಮಗಳೂರು, ಬೆಂಗಳೂರಿನಲ್ಲಿ. ಬೆಂಗಳೂರಿನ ದಯಾನಂದ ವಿದ್ಯಾಸಾಗರ ಕಾಲೇಜಿನಲ್ಲಿ ಎಂ.ಟಿಕ್ (ಬಯೋ ಮೆಡಿಕಲ್) ಓದಿದ ಅವರು ಅವರು ಕರ್ನಾಟಕದಲ್ಲಿ ಕ್ರಿಕೆಟಿಗನಾಗಿ ಬೆಳೆದಿದ್ದರು.

    ಬೆಂಗಳೂರು, ಚಿಕ್ಕಮಗಳೂರಿನಲ್ಲಿ ವಿದ್ಯಾಭ್ಯಾಸದ ಜೊತೆ ಕ್ರಿಕೆಟ್ ಕೋಚ್ ಪಡೆದಿದ್ದಾರೆ. 2022ರ ಕೊರೊನಾ ಅವಧಿಯಲ್ಲಿ ನಾಸ್ತುಷ್ ಕೆಂಜಿಗೆ ಚಿಕ್ಕಮಗಳೂರಿನ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ಅಭ್ಯಾಸ ಮಾಡಿದ್ದರು. ಇಲ್ಲಿರುವ ಕ್ರೀಡಾ ಪಟುಗಳ ಜೊತೆ ನಿತ್ಯ ಪ್ರಾಕ್ಟಿಸ್ ಮಾಡುತ್ತಿದ್ದರು. ಹುಡುಗರಿಗೆ ಕ್ರಿಕೆಟ್‌ ಹೇಗೆ ಆಡಬೇಕು? ಬ್ಯಾಟಿಂಗ್-ಬೌಲಿಂಗ್ ಬಗ್ಗೆಯೂ ತರಬೇತಿ ನೀಡಿದ್ದರು.

     

  • T20 World Cup: ಚುಟುಕು ಕ್ರಿಕೆಟ್ ಯುಗದ ಆರಂಭ – ಚೊಚ್ಚಲ ಆವೃತ್ತಿಯಲ್ಲೇ ಭಾರತ ಚಾಂಪಿಯನ್!

    T20 World Cup: ಚುಟುಕು ಕ್ರಿಕೆಟ್ ಯುಗದ ಆರಂಭ – ಚೊಚ್ಚಲ ಆವೃತ್ತಿಯಲ್ಲೇ ಭಾರತ ಚಾಂಪಿಯನ್!

    ಚೊಚ್ಚಲ ಟಿ20 ವಿಶ್ವಕಪ್ ಆರಂಭ: 2007
    ಆತಿಥ್ಯ: ದಕ್ಷಿಣ ಆಫ್ರಿಕಾ
    ವಿಶ್ವಕಪ್ ವಿಜೇತ ತಂಡ: ಭಾರತ
    ರನ್ನರ್‌ಅಪ್: ಪಾಕಿಸ್ತಾನ

    2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ (T20 World Cup) ಟೂರ್ನಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ನೆನಪಿನಲ್ಲಿಡಬೇಕಾದ ವರ್ಷ. ಏಕೆಂದರೆ ಆಗಷ್ಟೇ ಮಹತ್ವ ಪಡೆದುಕೊಳ್ಳುತ್ತಿದ್ದ ಮೊಟ್ಟ ಮೊದಲ ಚುಟುಕು ಕ್ರಿಕೆಟ್‌ಗೆ ಬುನಾದಿ ಹಾಕಿಕೊಟ್ಟ ಟೂರ್ನಿ ಅದಾಗಿತ್ತು. ಅಲ್ಲದೇ ಎಂ.ಎಸ್ ಧೋನಿ ( MS Dhoni) ಅವರಂತಹ `ಮಹಾನಾಯಕ’ ಉದಯಕ್ಕೆ ಸಾಕ್ಷಿಯಾದ ಟೂರ್ನಿಯೂ ಅದಾಗಿತ್ತು.

    2007ರಲ್ಲಿ ಅದೇ ವರ್ಷ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ಏಕದಿನ ವಿಶ್ವಕಪ್ (2007 ODI World Cup) ಟೂರ್ನಿಯೂ ನಡೆದಿತ್ತು. ಆ ಆವೃತ್ತಿಯಲ್ಲಿ ಟೀಂ ಇಂಡಿಯಾ (Team India) ಲೀಗ್‌ ಹಂತದಲ್ಲೇ ಹೀನಾಯ ಸೋಲು ಕಂಡು ಹೊರಬಿದ್ದಿತ್ತು. ಇದಾದ ಬಳಿಕ ದೇಶಾದ್ಯಂತ ಪ್ರತಿಭಟನೆ ನಡೆದು, ಪ್ರಮುಖ ಆಟಗಾರರ ಮೆನಗಳ ಮೇಲೆ ಕಲ್ಲು ತೂರಾಟವೂ ನಡೆದಿತ್ತು. ಇದಾದ ಕೆಲವೇ ದಿನಗಳಲ್ಲಿ ಟಿ20 ವಿಶ್ವಕಪ್ ಟೂರ್ನಿಯೂ ನಿಗದಿಯಾಗಿತ್ತು. ಏಕದಿನ ಕ್ರಿಕೆಟ್‌ನಲ್ಲಿ ಆಡಿದ್ದ ಖ್ಯಾತನಾಮರು ಟಿ20 ಆಡಲು ಹಿಂದೇಟು ಹಾಕಿದ್ದ ಕಾರಣ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಎಂ.ಎಸ್ ಧೋನಿ ಅವರಿಗೆ ನಾಯಕತ್ವದ ಹೊಣೆ ನೀಡಲಾಯಿತು. ಇದನ್ನೂ ಓದಿ: IPL 2024 Champions: 10 ವರ್ಷಗಳ ಬಳಿಕ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡ ಕೆಕೆಆರ್‌!

    ಟಿ20 ಚುಕುಟು ಕ್ರಿಕೆಟ್ (T20 Cricket) ಆಗಿನ್ನು ಜನಪ್ರಿಯವಾಗಿರಲಿಲ್ಲ. ಇದರಿಂದ ಬಹಳಷ್ಟು ಜನರು ಇದನ್ನು ಟೀಕಿಸಿದ್ದರು. ಆದ್ರೆ ರಾಂಚಿ ಮೂಲದ ಎಂ.ಎಸ್ ಧೋನಿ ಅವರು ಆ ಟೂರ್ನಿಯಲ್ಲಿ ಕೈಗೊಂಡ ನಿರ್ಧಾರಗಳಿಂದ ಟೀಂ ಇಂಡಿಯಾ, ಚೊಚ್ಚಲ ಆವೃತ್ತಿಯಲ್ಲೇ ವಿಶ್ವಕಪ್ ಟ್ರೋಫಿ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

    ಪಾಕ್ ವಿರುದ್ಧ ಗೆದ್ದು ಬೀಗಿದ್ದೇ ರೋಚಕ:
    ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಫೈನಲ್ ಪಂದ್ಯ ಕೊನೆಯವರೆಗೂ ರೋಚಕತೆಯಿಂದ ಕೂಡಿತ್ತು. ಅಂದು ಇಡೀ ಭಾರತವೇ ಈ ಪಂದ್ಯವನ್ನು ಕುತೂಹಲದಿಂದ ನೋಡುತ್ತಿತ್ತು. ಇದನ್ನೂ ಓದಿ: IPL 2024: ದಣಿವರಿಯದೇ ದುಡಿದ ಕ್ರೀಡಾ ಸಿಬ್ಬಂದಿಗೆ ತಲಾ 25 ಲಕ್ಷ ರೂ. ಬಹುಮಾನ ಘೋಷಿಸಿದ ಜಯ್‌ ಶಾ

    ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 157 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡದ ಗೆಲುವಿಗೆ ಕೊನೆಯ ಓವರ್‌ನಲ್ಲಿ 12 ರನ್ ಮಾತ್ರವೇ ಬೇಕಿತ್ತು. ಪಾಕ್ ಮೊದಲೇ 9 ವಿಕೆಟ್ ಕಳೆದುಕೊಂಡಿದ್ದರಿಂದ ಭಾರತದ ಗೆಲುವಿಗೆ ಒಂದು ವಿಕೆಟ್ ಅಗತ್ಯವಿತ್ತು. ಪ್ರಮುಖ ಬೌಲರ್‌ಗಳು ತಮ್ಮ ಓವರ್ ಮುಕ್ತಾಯ ಗೊಳಿಸಿದ್ದರಿಂದ ಮಹಿ, ಜೋಗಿಂದರ್ ಶರ್ಮಾ ಅವರಿಗೆ ಬೌಲಿಂಗ್ ನೀಡಿದರು. ಪಾಕ್‌ನ ಸ್ಫೋಟಕ ಬ್ಯಾಟರ್ ಮಿಸ್ಬಾ ಉಲ್ ಹಕ್ ಸ್ಟ್ರೈಕ್‌ನಲ್ಲಿದ್ದರು. ಇದನ್ನೂ ಓದಿ: IPL 2024: ಚಾಂಪಿಯನ್‌ KKRಗೆ 20 ಕೋಟಿ ರೂ., ಆರೆಂಜ್‌, ಪರ್ಪಲ್‌ ಕ್ಯಾಪ್‌‌ ಗೆದ್ದವ್ರಿಗೆ ಸಿಕ್ಕಿದ್ದೆಷ್ಟು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್‌

    ಮೊದಲಿಗೆ ವೈಡ್ ರನ್ ಬಿಟ್ಟುಕೊಟ್ಟ ಜೋಗಿಂದರ್ ಶರ್ಮಾ ಮೊದಲ ಎಸೆತದಲ್ಲಿ ಹಿಡಿತ ಸಾಧಿಸಿದರು. ಆದ್ರೆ 2ನೇ ಎಸೆತದಲ್ಲಿ ಮಿಸ್ಬಾ ಉಲ್ ಹಲ್ ಸಿಕ್ಸರ್ ಸಿಡಿಸಿದಾಗ ಪಾಕ್‌ತಂಡ ಗೆದ್ದೇಬಿಟ್ಟೆವು ಎಂಬ ಸಂತಸದಲ್ಲಿ ಕುಣಿದು ಕುಪ್ಪಳಿಸಿತ್ತು, ಪಾಕ್ ಅಭಿಮಾನಿಗಳು ಕೇಕೆ ಹಾಕಲು ಶುರು ಮಾಡಿದ್ದರು. ಮರು ಎಸೆತದಲ್ಲಿ ಆನ್‌ಸ್ಟಂಪ್ ಮೂಲಕ ಶಾರ್ಟ್ ಫೈನ್‌ಲೆಗ್ ಶಾರ್ಟ್ ಪ್ರಯತ್ನಿಸಿದ ಮಿಸ್ಬಾ, ಶ್ರೀಶಾಂತ್‌ಗೆ ಕ್ಯಾಚ್ ನೀಡಿ ಔಟಾದರು. ಪಾಕ್ ಮೊದಲೇ 9 ವಿಕೆಟ್ ಕಳೆದುಕೊಂಡಿದ್ದ ಪರಿಣಾಮ ಪಾಕಿಸ್ತಾನ ತಂಡ ಆಲೌಟ್ ಆಗಿ ಟೀಂ ಇಂಡಿಯಾ ಎದುರು ಮಂಡಿಯೂರಿತು. ಅಂತಿಮವಾಗಿ ಭಾರತ 5 ರನ್‌ಗಳ ರೋಚಕ ಜಯ ಸಾಧಿಸಿತು. ಕುತೂಹಲದಿಂದ ನೋಡುತ್ತಿದ್ದ ಇಡೀ ಭಾರತ ಸಂಭ್ರಮದಲ್ಲಿ ತೇಲಿತು.

  • ವಿಶ್ವಕಪ್‌ ಒಂದು ಪಂದ್ಯಕ್ಕೆ ಕೊಹ್ಲಿ ಗೈರು ಸಾಧ್ಯತೆ

    ವಿಶ್ವಕಪ್‌ ಒಂದು ಪಂದ್ಯಕ್ಕೆ ಕೊಹ್ಲಿ ಗೈರು ಸಾಧ್ಯತೆ

    ಮುಂಬೈ: ಅಮೆರಿಕದಲ್ಲಿ(USA) ನಡೆಯಲಿರುವ ಟಿ20 ವಿಶ್ವಕಪ್‌ನ (T20 World Cup) ಅಭ್ಯಾಸ ಪಂದ್ಯಕ್ಕೆ ಕೊಹ್ಲಿ ಗೈರಾಗುವ ಸಾಧ್ಯತೆಯಿದೆ.

    ಬಾಂಗ್ಲಾದೇಶದ ವಿರುದ್ಧ ಜೂನ್‌ 1 ರಂದು ಭಾರತ ಅಭ್ಯಾಸ ಪಂದ್ಯವನ್ನು ಆಡಲಿದೆ. ವಿರಾಟ್‌ ಕೊಹ್ಲಿ (Virat Kohli) ತಡವಾಗಿ ತಂಡವನ್ನು ಸೇರುವ ಕಾರಣದಿಂದ ಈ ಪಂದ್ಯಕ್ಕೆ ಅವರು ಗೈರಾಗುವ ಸಾಧ್ಯತೆಯಿದೆ ಎಂದು ಮಾಧ್ಯಮ ವರದಿ ಮಾಡಿದೆ. ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಲೂಟಿ ನಡೀತಿದೆ: ಡಿಕೆಶಿ ವಿರುದ್ಧ ಹೆಚ್‌ಡಿಕೆ ಕಿಡಿ

    ಐಪಿಎಲ್‌ ಎಲಿಮಿನೇಟರ್‌ನಲ್ಲಿ ಆರ್‌ಸಿಬಿ (RCB) ಸೋತ ಬಳಿಕ ಕೊಹ್ಲಿ ಕೆಲ ದಿನ ವಿಶ್ರಾಂತಿ ನೀಡಬೇಕೆಂದು ಬಿಸಿಸಿಐಗೆ (BCCI) ಮನವಿ ಮಾಡಿದ್ದಾರೆ. ಈ ಮನವಿಯನ್ನು ಬಿಸಿಸಿಐ ಪುರಸ್ಕರಿಸಿದ್ದು ತಡವಾಗಿ ಟೀಂ ಇಂಡಿಯಾವನ್ನು ಕೊಹ್ಲಿ ಸೇರಲಿದ್ದಾರೆ.

    ಮಾಧ್ಯಮಗಳಲ್ಲಿ ಬಂದಿರುವ ಮಾಹಿತಿ ಪ್ರಕಾರ ಕೊಹ್ಲಿ ಮೇ 30 ರಂದು ನ್ಯೂಯಾರ್ಕ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾದ ಉಪನಾಯಕ ಹಾರ್ದಿಕ್‌ ಪಾಂಡ್ಯ ಈಗ ಎಲ್ಲಿದ್ದಾರೆ?

    ಅಮೆರಿಕ (USA) ಮತ್ತು ವೆಸ್ಟ್‌ ಇಂಡೀಸ್‌ (West Indies) ಜಂಟಿಯಾಗಿ ಈ ಬಾರಿಯ ಟಿ20 ಕ್ರಿಕೆಟ್‌ ಆಯೋಜನೆ ಮಾಡಿದ್ದು ಜೂನ್‌ 2 ರಿಂದ ಜೂನ್‌ 29 ವರೆಗೆ ಪಂದ್ಯಾಟ ನಡೆಯಲಿದೆ. ಜೂನ್‌ 5 ರಂದು ಐರ್ಲೆಂಡ್‌ ವಿರುದ್ಧ, ಜೂನ್‌ 9 ರಂದು ಪಾಕಿಸ್ತಾನದ ವಿರುದ್ಧ ಭಾರತ ಆಡಲಿದೆ.

    ಟೀಂ ಇಂಡಿಯಾದ ಒಂದು ತಂಡ ಈಗಾಗಲೇ ಅಮೆರಿಕಕ್ಕೆ ತೆರಳಿದೆ. ಶನಿವಾರ ನಾಯಕ ರೋಹಿತ್‌ ಶರ್ಮಾ (Rohit Sharma), ಕೋಚ್‌ ರಾಹುಲ್‌ ದ್ರಾವಿಡ್‌ (Rahul Drvaid) ಸೇರಿದಂತೆ ಹಲವು ಮಂದಿ ನ್ಯೂಯಾರ್ಕ್‌ ವಿಮಾನ ಹತ್ತಿದ್ದಾರೆ.

  • ಪಾಕಿಸ್ತಾನ ಸೂಪರ್‌ ಲೀಗ್‌ಗಿಂತಲೂ ನಮ್ಮ ಹೆಣ್ಮಕ್ಕಳ ಟೂರ್ನಿಯೇ ಹೆಚ್ಚು ಶ್ರೀಮಂತ

    ಪಾಕಿಸ್ತಾನ ಸೂಪರ್‌ ಲೀಗ್‌ಗಿಂತಲೂ ನಮ್ಮ ಹೆಣ್ಮಕ್ಕಳ ಟೂರ್ನಿಯೇ ಹೆಚ್ಚು ಶ್ರೀಮಂತ

    ನವದೆಹಲಿ/ಇಸ್ಲಾಮಾಬಾದ್‌: ಮಹಿಳಾ ಪ್ರೀಮಿಯರ್‌ ಲೀಗ್‌ನ 2ನೇ ಆವೃತ್ತಿಯಲ್ಲಿ ಟ್ರೋಫಿ ಎತ್ತಿಹಿಡಿಯುವ ಮೂಲಕ ಆರ್‌ಸಿಬಿ ಮಹಿಳಾ ತಂಡ ʻಈ ಸಲ ಕಪ್‌ ನಮ್ದೆʼ ಎನ್ನುತ್ತಿದ್ದ ಅಭಿಮಾನಿಗಳ 16 ವರ್ಷಗಳ ಕನಸನ್ನು ನನಸು ಮಾಡಿದೆ. ಮಹಿಳಾ ಕ್ರಿಕೆಟಿಗರ ಗೆಲುವನ್ನು ದೇಶದ ಅಭಿಮಾನಿಗಳು ಇನ್ನೂ ಸಂಭ್ರಮಿಸುತ್ತಿದ್ದಾರೆ. ಈ ನಡುವೆ ಪಾಕಿಸ್ತಾನ ಸೂಪರ್‌ ಲೀಗ್‌ (Pakistan Super League) ಟೂರ್ನಿಗಿಂತಲೂ ನಮ್ಮ ದೇಶದ ಡಬ್ಲ್ಯೂಪಿಎಲ್‌ ಹಾಗೂ ಐಪಿಎಲ್‌ (WPL And IPL) ಹೆಚ್ಚು ಶ್ರೀಮಂತ ಅನ್ನೋದು ಮತ್ತೊಂದು ಹೆಗ್ಗಳಿಕೆಯಾಗಿದೆ. ಇದನ್ನೂ ಓದಿ: RCB Unbox: ‘ಬೆಂಗಳೂರ್‌’ ಅಲ್ಲ ಇನ್ಮುಂದೆ ಹೇಳಿ ‘ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು’

    ಕಳೆದ ಎರಡು ದಿನಗಳ ಹಿಂದೆಯಷ್ಟೇ 2024ನೇ ಆವೃತ್ತಿಯ ಪಾಕಿಸ್ತಾನ ಸೂಪರ್‌ ಲೀಗ್‌ ಟೂರ್ನಿಯು ಮುಕ್ತಾಯಗೊಂಡಿತು. ಇಸ್ಲಾಮಾಬಾದ್ ಯುನೈಟೆಡ್ ಲೀಗ್‌ನ ಇತಿಹಾಸದಲ್ಲಿ 3ನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದಕ್ಕೆ ಒಂದು ದಿನ ಮುಂಚಿತವಾಗಿ ಭಾರತದಲ್ಲಿ ಮಹಿಳಾ ಪ್ರೀಮಿಯರ್‌ ಲೀಗ್‌ (WPL 2024) ಮುಕ್ತಾಯಗೊಂಡು ಆರ್‌ಸಿಬಿ ಮಹಿಳಾ ತಂಡ ಚೊಚ್ಚಲ ಚಾಂಪಿಯನ್‌ ಪಟ್ಟ ಅಲಂಕರಿಸಿತು. ಆದ್ರೆ ಪಾಕಿಸ್ತಾನ ಸೂಪರ್‌ ಲೀಗ್‌ ವಿಜೇತ ತಂಡಕ್ಕಿಂತಲೂ ಡಬ್ಲ್ಯೂಪಿಎಲ್‌ ಮಹಿಳಾ ತಂಡ ಪಡೆದ ಬಹುಮಾನ ದೊಡ್ಡಮಟ್ಟದ್ದು, ಅನ್ನೋದು ವಿಶೇಷ. ಅಲ್ಲದೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವುದೂ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಇದನ್ನೂ ಓದಿ: ಟ್ರೋಫಿ ಗೆದ್ದು ಕೋಟಿ ಕೋಟಿ ದೋಚಿದ ಹೆಣ್ಮಕ್ಕಳು – ಆರ್‌ಸಿಬಿಗೆ ಸಿಕ್ಕ ನಗದು ಬಹುಮಾನ ಎಷ್ಟು ಗೊತ್ತಾ?

    ಸೂಪರ್‌ ಲೀಗ್‌ನಲ್ಲಿ ಪ್ರಶಸ್ತಿ ಗೆದ್ದ ಇಸ್ಲಾಮಾಬಾದ್‌ ತಂಡ 14 ಕೋಟಿ ಪಾಕಿಸ್ತಾನ ರೂಪಾಯಿ (4.13 ಕೋಟಿ ರೂ. ಭಾರತದ ರೂಪಾಯಿಗಳಲ್ಲಿ) ಬಹುಮಾನ ಗಳಿಸಿತು. ರನ್ನರ್‌ ಅಪ್‌ ತಂಡವು 5.60 ಕೋಟಿ ರೂ. ಪಾಕಿಸ್ತಾನ ರೂಪಾಯಿ (1.65 ಕೋಟಿ ರೂ. ಭಾರತದ ರೂಪಾಯಿಗಳಲ್ಲಿ) ಸ್ವೀಕರಿಸಿತು. ಆದ್ರೆ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಆರ್‌ಸಿಬಿ ಮಹಿಳಾ ತಂಡ (ವಿಜೇತ ತಂಡ) ಸ್ವೀಕರಿಸಿದ ಬಹುಮಾನದ ಮೊತ್ತ ಬರೋಬ್ಬರಿ 6 ಕೋಟಿ ರೂ., ರನ್ನರ್‌ ಅಪ್‌ ತಂಡ 3 ಕೋಟಿ ರೂ. ದೋಚಿಕೊಂಡಿತು. ಇನ್ನೂ ವಿಶ್ವದ ಶ್ರೀಮಂತ ಲೀಗ್‌ ಟೂರ್ನಿ ಎಂದೇ ಗುರುತಿಸಿಕೊಂಡಿರುವ ಐಪಿಎಲ್‌ನಲ್ಲಿ ವಿಜೇತ ತಂಡಕ್ಕೆ ಸಿಗುವ ಬಹುಮಾನ ಬರೋಬ್ಬರಿ 20 ಕೋಟಿ ರೂ. ಆಗಿದೆ, ರನ್ನರ್‌ ಅಪ್‌ ತಂಡಕ್ಕೆ 13 ಕೋಟಿ ರೂ. ಬಹುಮಾನ ನಿಗದಿಯಾಗಿದೆ. ಇದನ್ನೂ ಓದಿ: 16 ವರ್ಷಗಳ ಸಾರ್ಥಕ ಸಂಭ್ರಮ – ಆರ್‌ಸಿಬಿ ಕಪ್‌ ಗೆದ್ದ ನಂತ್ರ ಏನಾಯ್ತು? ಇಲ್ಲಿದೆ ಸ್ಪೆಷಲ್‌ ವೀಡಿಯೋ…

    2023ರ ಐಪಿಎಲ್‌ ಪ್ರಶಸ್ತಿ ವಿಜೇತ ತಂಡಗಳು:
    ವಿಜೇತ ತಂಡ: ಚೆನ್ನೈ ಸೂಪರ್ ಕಿಂಗ್ಸ್ – 20 ಕೋಟಿ ರೂ.
    ರನ್ನರ್ ಅಪ್ ತಂಡ: ಗುಜರಾತ್ ಟೈಟಾನ್ಸ್ – 13 ಕೋಟಿ ರೂ.

    2024ರ ಡಬ್ಲ್ಯೂಪಿಎಲ್‌ ಪ್ರಶಸ್ತಿ ವಿಜೇತ ತಂಡಗಳು ಮತ್ತು ಆಟಗಾರರು:
    ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಚಾಂಪಿಯನ್‌): 6 ಕೋಟಿ ರೂ.
    ಡೆಲ್ಲಿ ಕ್ಯಾಪಿಟಲ್ಸ್‌ (ರನ್ನರ್‌ ಅಪ್‌): 3 ಕೋಟಿ ರೂ.
    ಶಫಾಲಿ ವರ್ಮಾ (ಎಲೆಕ್ಟ್ರಿಕ್‌ ಸ್ಟ್ರೈಕರ್‌ ಆಫ್ ದಿ ಮ್ಯಾಚ್‌): 1 ಲಕ್ಷ ರೂ.
    ಶಫಾಲಿ ವರ್ಮಾ (ಸಿಕ್ಸರ್‌ ಆಫ್‌ ದಿ ಮ್ಯಾಚ್‌): 1 ಲಕ್ಷ ರೂ.
    ಶಫಾಲಿ ವರ್ಮಾ ( ಸಿಕ್ಸರ್‌ ಆಫ್‌ ದಿ ಸೀಸನ್‌): 5 ಲಕ್ಷ ರೂ.
    ಶ್ರೇಯಾಂಕಾ ಪಾಟೀಲ್‌ (ಉದಯೋನ್ಮುಖ ಆಟಗಾರ್ತಿ): 5 ಲಕ್ಷ ರೂ.
    ಎಲಿಸ್‌ ಪೆರ್ರಿ (ಆರಂಜ್‌ ಕ್ಯಾಪ್): 5 ಲಕ್ಷ ರೂ.
    ಶ್ರೇಯಾಂಕಾ ಪಾಟೀಲ್ (ಪರ್ಪಲ್‌ ಕ್ಯಾಪ್‌): 5 ಲಕ್ಷ ರೂ.
    ದೀಪ್ತಿ ಶರ್ಮಾ (ಅತ್ಯಂತ ಮೌಲ್ಯಯುತ ಆಟಗಾರ್ತಿ): 5 ಲಕ್ಷ ರೂ.

    2024ರ ಪಿಎಸ್ಎಲ್ ಪ್ರಶಸ್ತಿ ವಿಜೇತ ತಂಡಗಳು:
    ವಿಜೇತ ತಂಡ: ಇಸ್ಲಾಮಾಬಾದ್ ಯುನೈಟೆಡ್ – 4.13 ಕೋಟಿ ರೂ.
    ರನ್ನರ್ ಅಪ್ ತಂಡ: ಮುಲ್ತಾನ್‌ ಸುಲ್ತಾನ್ಸ್‌ – 1.65 ಕೋಟಿ ರೂ.

  • 10,000 ರನ್‌ ಪೂರೈಸಿ ದಾಖಲೆ; ಬಾಬಾರ್‌ ಸ್ಫೋಟಕ ಆಟಕ್ಕೆ ಗೇಲ್‌, ವಿರಾಟ್‌ ಕೊಹ್ಲಿ ದಾಖಲೆ ಉಡೀಸ್‌

    10,000 ರನ್‌ ಪೂರೈಸಿ ದಾಖಲೆ; ಬಾಬಾರ್‌ ಸ್ಫೋಟಕ ಆಟಕ್ಕೆ ಗೇಲ್‌, ವಿರಾಟ್‌ ಕೊಹ್ಲಿ ದಾಖಲೆ ಉಡೀಸ್‌

    ಇಸ್ಲಾಮಾಬಾದ್‌: ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಫ್ಲಾಪ್‌ ಪ್ರದರ್ಶನ ನೀಡಿದ್ದ ಪಾಕ್‌ ತಂಡದ ಮಾಜಿ ನಾಯಕ ಬಾಬರ್‌ ಆಜಂ (Babar Azam)ಪಾಕಿಸ್ತಾನ ಸೂಪರ್‌ ಲೀಗ್‌ನಲ್ಲಿ ಭರ್ಜರಿ ಫಾರ್ಮ್‌ ಕಂಡುಕೊಂಡಿದ್ದಾರೆ.

    ಈ ಲೀಗ್‌ ಮೂಲಕ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 10 ಸಾವಿರ ರನ್‌ ಪೂರೈಸಿದ ವಿಶೇಷ ಸಾಧನೆ ಮಾಡಿದ್ದಾರೆ. ಈ ಮೂಲಕ ಕ್ರಿಸ್ ಗೇಲ್ (Chris Gayle) ಹಾಗೂ ವಿರಾಟ್‌ ಕೊಹ್ಲಿ (Virat Kohli) ಅವರ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ICC Test Ranking: 14 ಸ್ಥಾನ ಜಿಗಿದು ಟಾಪ್‌-20ಯಲ್ಲಿ ಸ್ಥಾನ ಪಡೆದ ಯಶಸ್ವಿ!

    ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಕರಾಚಿ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ಪೇಶಾವರ್ ಝಲ್ಮಿ ತಂಡದ ನಾಯಕ ಬಾಬರ್ ಆಜಂ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಈ ಮೂಲಕ ಟಿ20 ಸ್ವರೋಪದಲ್ಲಿ ಅತಿ ವೇಗವಾಗಿ 10 ಸಾವಿರ ರನ್‌ ಪೂರೈಸಿದ ದಾಖಲೆ ಮಾಡಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪೇಶಾವರ್ ಝಲ್ಮಿ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಬಾಬರ್ 6 ರನ್ ಗಳಿಸುತ್ತಿದ್ದಂತೆ 271 ಪಂದಗಳಲ್ಲೇ 10,000 ರನ್ ಪೂರ್ಣಗೊಳಿಸಿದ್ದಾರೆ.

    CHRIS GAYLE

    2017ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಆರಂಭಿಕ ಆಟಗಾರ ಕ್ರಿಸ್ ಗೇಲ್ ರಾಜ್ ಕೋಟ್ ಅಂಗಳದಲ್ಲಿ ಗುಜರಾತ್ ಲಯನ್ಸ್ ತಂಡದ ವಿರುದ್ಧ ತಮ್ಮ 285ನೇ ಟಿ20 ಇನಿಂಗ್ಸ್ ನಲ್ಲಿ ಅತಿ ವೇಗದ 10,000 ಚುಟುಕು ರನ್ ಪೂರೈಸಿ ಮಹತ್ತರ ದಾಖಲೆ ಸೃಷ್ಟಿಸಿದ್ದರು. ಈಗ ಆ ದಾಖಲೆ ಬಾಬರ್ ಹಿಂದಿಕ್ಕಿದ್ದಾರೆ. ಅಲ್ಲದೇ ಪಾಕಿಸ್ತಾನ ಸೂಪರ್‌ ಲೀಗ್‌ನಲ್ಲಿ 3,000 ರನ್ ಪೂರೈಸಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ದಾಖಲೆಯನ್ನೂ ನಿರ್ಮಿಸಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್‌ ವಿರುದ್ಧ 4ನೇ ಟೆಸ್ಟ್‌ ಪಂದ್ಯಕ್ಕೆ ಕೆ.ಎಲ್‌ ರಾಹುಲ್‌ ಕಂಬ್ಯಾಕ್‌ – ಸುಳಿವು ಕೊಟ್ಟ ರೋಹಿತ್‌

    ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 10,000 ರನ್ ಪೂರೈಸಿದ ಸ್ಟಾರ್ಸ್‌:
    * 271 ಪಂದ್ಯ- ಬಾಬರ್ ಆಜಂ- ಪಾಕಿಸ್ತಾನ
    * 285 ಪಂದ್ಯ- ಕ್ರಿಸ್ ಗೇಲ್- ವೆಸ್ಟ್ ಇಂಡೀಸ್
    * 299 ಪಂದ್ಯ- ವಿರಾಟ್ ಕೊಹ್ಲಿ- ಭಾರತ
    * 303 ಪಂದ್ಯ- ಡೇವಿಡ್ ವಾರ್ನರ್- ಆಸ್ಟ್ರೇಲಿಯಾ
    * 327 ಪಂದ್ಯ- ಆರನ್‌ ಫಿಂಚ್- ಆಸ್ಟ್ರೇಲಿಯಾ
    * 350 ಪಂದ್ಯ- ಜೋಸ್‌ ಬಟ್ಲರ್- ಇಂಗ್ಲೆಂಡ್‌