Tag: T-shirt

  • ಕಾರಿನಲ್ಲಿ ಸಾಗಿಸ್ತಿದ್ದ ಟೀ ಶರ್ಟ್ ಬಂಡಲ್ ಜಪ್ತಿ

    ಕಾರಿನಲ್ಲಿ ಸಾಗಿಸ್ತಿದ್ದ ಟೀ ಶರ್ಟ್ ಬಂಡಲ್ ಜಪ್ತಿ

    ಬಾಗಲಕೋಟೆ: ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಟೀ ಶರ್ಟ್ ಬಂಡಲ್ (T Shirt) ಇದ್ದ ವಾಹನವನ್ನು ಪೊಲೀಸರು ಜಪ್ತಿ ಮಾಡಿರುವ ಘಟನೆ ಬಾಗಲಕೋಟೆ (Bagalkote) ನಗರದ ಬಸವೇಶ್ವರ ಸರ್ಕಲ್ (Basaveshwar Circle) ಬಳಿ ನಡೆದಿದೆ.

    ನಗರದ ಬಸವೇಶ್ವರ್ ಸರ್ಕಲ್ ಬಳಿಯ ಪ್ರಭು ನಾರಾ ಎಂಬ ವ್ಯಾಪಾರಸ್ಥರ ಗೋದಾಮಿನಲ್ಲಿದ್ದ ಕಾರು ಒಂದರಲ್ಲಿ ಟೀಶರ್ಟ್ ಬಂಡಲ್ ಇರುವುದು ಪತ್ತೆಯಾಗಿದೆ. ನಾರಾ ಅವರು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ನಿಕಟವರ್ತಿಯಾಗಿದ್ದು, ಮತದಾರರಿಗೆ ಟೀ ಶರ್ಟ್ ಉಡುಗೊರೆ ನೀಡಲು ತರಿಸಿದ್ದಾರೆಂದು ಆರೋಪಿಸಿ, ಕೇಸ್ ದಾಖಲಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಯ ಬೆಂಬಲಿಗರು ಪ್ರತಿಭಟನೆ ನಡೆಸಿದರು.

    ತಪಾಸಣೆ ನಡೆಸಿ ಅವರ ವಿರುದ್ಧ ದೂರು ದಾಖಲಿಸಿ ಎಂದು ಪೊಲೀಸರಿಗೆ ಆಗ್ರಹಿಸಿದರು. ಆದರೆ ಪ್ರಭು ನಾರಾ ಅವರು ಕಾರು ಕೀ ನೀಡದೇ ಕೆಲ ಹೊತ್ತು ಅಧಿಕಾರಿಗಳನ್ನ ಕಾಯಿಸಿ, ಹೈಡ್ರಾಮಾ ಸೃಷ್ಟಿಸಿದರು. ನಂತರ ಕಾರಿನಲ್ಲಿದ್ದ ಬಂಡಲ್‍ಗಳನ್ನ ಓಪನ್ ಮಾಡಿಸುವಂತೆ ಕೆಲ ಕಾರ್ಯಕರ್ತರು ಅಧಿಕಾರಿಗಳ ಎದುರೇ ಪ್ರತಿಭಟನೆ ನಡೆಸಿದಾಗ, ಕಾರ್ ಡೋರ್ ಓಪನ್ ಮಾಡಿಸಲಾಯಿತು. ಈ ವೇಳೆ ಕಾರಿನಲ್ಲಿದ್ದ ಟೀ ಶರ್ಟ್ ಮೇಲೆ ‘4’ ಸಂಖ್ಯೆ ಇರುವುದು ಬೆಳಕಿಗೆ ಬಂತು. ಇದನ್ನೂ ಓದಿ: ಮತದಾನದ ಮಮತೆಯ ಕರೆಯೋಲೆ ಆಮಂತ್ರಣ ಪತ್ರಿಕೆ ಬಿಡುಗಡೆ

    ಬಿಜೆಪಿ ಅಭ್ಯರ್ಥಿ (BJP Candidate) ವೀರಣ್ಣ ಚರಂತಿಮಠ ಅವರ ಕ್ರಮಸಂಖ್ಯೆ ಸಹ ‘4’ ಆಗಿರೋದ್ರಿಂದ, ಮತದಾರರಿಗೆ ಆಮಿಷ ಒಡ್ಡಲು ಟೀ ಶರ್ಟ್ ನೀಡಲು ಮುಂದಾಗಿದ್ದಾರೆಂದು ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಟೀ ಶರ್ಟ್ ಬಂಡಲ್ ಗಳು ಇದ್ದ ಕಾರನ್ನು ಜಪ್ತಿ ಮಾಡಿದ ಅಧಿಕಾರಿಗಳು. ನಂತರ ನಾರಾ ಅವರ ಗೋದಾಮು ಪರಿಶೀಲಿಸಿದ್ರು. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಾಗಿದ್ರೆ, ಅವರ ವಿರುದ್ಧ ಕೇಸ್ ದಾಖಲಿಸಲಾಗುವುದು ಎಂಬ ಭರವಸೆ ನೀಡಿದರು.

    ಇತ್ತ ಗೋದಾಮಿನ ಮಾಲೀಕ ಪ್ರಭು ನಾರಾ, ಈ ಟೀ ಶರ್ಟ್ ಗಳಿಗೂ ಹಾಗೂ ಚುನಾವಣೆಗೂ ಸಂಬಂಧ ಇಲ್ಲ, ಯಾವುದೇ ಪಕ್ಷದ ಚಿನ್ಹೆ ಇಲ್ಲ, ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲು ಟೀ ಶರ್ಟ್ ತರಿಸಲಾಗಿದೆ. ಇದರ ಎಲ್ಲಾ ಬಿಲ್‍ಗಳು ನಮ್ಮ ಬಳಿ ಇವೆ. ನಾಳೆ ಬೆಳಗ್ಗೆ ಅಧಿಕಾರಿಗಳಿಗೆ ಬಿಲ್ ತೋರಿಸುವುದಾಗಿ ಹೇಳಿದರು. ಕೆಲ ಹೊತ್ತು ಬಸವೇಶ್ವರ ಸರ್ಕಲ್ ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ನಂತರ ಪೊಲೀಸರು ಅಲ್ಲಿದ್ದ ಜನರನ್ನು ಚದುರಿಸಿ, ಟೀ ಶರ್ಟ್ ಬಂಡಲ್ ಇದ್ದ ಕಾರನ್ನು ಸೀಜ್ ಮಾಡಿ ಪೊಲೀಸ್ ಠಾಣೆಗೆ ಒಯ್ದರು.

  • ಫಾರಿನ್‌ ಟೀ-ಶರ್ಟ್‌ ಹಾಕ್ಕೊಂಡು ಭಾರತ್‌ ಜೋಡೋ ಯಾತ್ರೆ ಮಾಡ್ತಿದ್ದಾರೆ – ರಾಹುಲ್‌ ಗಾಂಧಿ ಕಾಲೆಳೆದ ಅಮಿತ್‌ ಶಾ

    ಫಾರಿನ್‌ ಟೀ-ಶರ್ಟ್‌ ಹಾಕ್ಕೊಂಡು ಭಾರತ್‌ ಜೋಡೋ ಯಾತ್ರೆ ಮಾಡ್ತಿದ್ದಾರೆ – ರಾಹುಲ್‌ ಗಾಂಧಿ ಕಾಲೆಳೆದ ಅಮಿತ್‌ ಶಾ

    ಜೈಪುರ್‌: ವಿದೇಶಿ ಟೀ-ಶರ್ಟ್‌ (t-shirt) ಧರಿಸಿ, ಭಾರತ್‌ ಜೋಡೋ ಯಾತ್ರೆ (Bharat Jodo Yatra) ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ವ್ಯಂಗ್ಯವಾಡಿದ್ದಾರೆ.

    ‘ಭಾರತ್ ಜೋಡೋ ಯಾತ್ರೆ’ ವೇಳೆ ಹಣದುಬ್ಬರ ವಿಷಯವನ್ನು ಪ್ರಸ್ತಾಪಿಸಿದ್ದ ರಾಹುಲ್ ಗಾಂಧಿ (Rahul Gandhi) ಅವರು ಸ್ವತಃ ವಿದೇಶಿ ಬ್ರ್ಯಾಂಡ್‌ನ 41,257 ರೂ. ಮೌಲ್ಯದ ಟೀ ಶರ್ಟ್ ಧರಿಸಿದ್ದರು ಎಂದು ಬಿಜೆಪಿ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಕಾಲೆಳೆದಿತ್ತು. ಇದು ಕಾಂಗ್ರೆಸ್‌ (Congress) ಮತ್ತು ಬಿಜೆಪಿ (BJP) ನಡುವಿನ ವಾಕ್ಸಮರಕ್ಕೆ ಕಾರಣವಾಗಿತ್ತು. ಇದೇ ವೇಳೆ ಅಮಿತ್‌ ಶಾ ಅವರು ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಧರಿಸಿದ್ದ 41 ಸಾವಿರ ರೂ.ನ ಟೀಶರ್ಟ್ ಕುರಿತು ಬಿಜೆಪಿ ವ್ಯಂಗ್ಯ

    ರಾಹುಲ್ ಗಾಂಧಿ ಅವರು ವಿದೇಶಿ ಟೀ-ಶರ್ಟ್ ಧರಿಸಿ ಭಾರತ್ ಜೋಡೋ ಯಾತ್ರೆಗೆ ಹೊರಟಿದ್ದಾರೆ. ನಾನು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿಗರು ಸಂಸತ್ತಿನಲ್ಲಿ ಮಾಡಿದ ಭಾಷಣವನ್ನು ನೆನಪಿಸುತ್ತೇನೆ. ರಾಹುಲ್ ಬಾಬಾ ʻಭಾರತ ರಾಷ್ಟ್ರವಲ್ಲʼ ಎಂದು ಹೇಳಿದ್ದರು. ರಾಹುಲ್ ಗಾಂಧಿ, ನೀವು ಯಾವ ಪುಸ್ತಕದಲ್ಲಿ ಓದಿದ್ದೀರಿ? ಇದು ಲಕ್ಷಗಟ್ಟಲೆ ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ರಾಷ್ಟ್ರವಾಗಿದೆ. ರಾಹುಲ್ ಗಾಂಧಿ ಅವರು ಭಾರತದ ಇತಿಹಾಸವನ್ನು ಅಧ್ಯಯನ ಮಾಡಬೇಕಾಗಿದೆ ಎಂದು ಜೋಧ್‌ಪುರದಲ್ಲಿ ನಡೆದ ಬೂತ್ ಅಧ್ಯಕ್ಷ ಸಂಕಲ್ಪ್ ಸಮ್ಮೇಳನವನ್ನುದ್ದೇಶಿಸಿ ಮಾತನಾಡುವಾಗ ಶಾ ತಿಳಿಸಿದ್ದಾರೆ.

    ಇಂಧನ ಬೆಲೆ ಏರಿಕೆ ಕುರಿತು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರಿಗೆ ಅಮಿತ್‌ ಶಾ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಿಲ್ಲ. ರಸ್ತೆ ನಿರ್ಮಿಸಲು ಸಾಧ್ಯವಿಲ್ಲ, ವಿದ್ಯುತ್ ನೀಡಲು ಸಾಧ್ಯವಿಲ್ಲ, ಉದ್ಯೋಗ ನೀಡಲು ಸಾಧ್ಯವಿಲ್ಲ. ಗೆಹ್ಲೋಟ್ ಸರ್ಕಾರವು ಕೇವಲ ವೋಟ್ ಬ್ಯಾಂಕ್ ಮತ್ತು ಓಲೈಕೆ ರಾಜಕಾರಣವನ್ನು ಮಾತ್ರ ಮಾಡಬಲ್ಲದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ – ರಾಹುಲ್ ಗಾಂಧಿ ವಿಶ್ರಾಂತಿಗೆ ವಾಹನದಲ್ಲಿ ಬೆಡ್, ಎಸಿ ವ್ಯವಸ್ಥೆ

    Live Tv
    [brid partner=56869869 player=32851 video=960834 autoplay=true]

  • ಟೀ ಶರ್ಟ್ ವಿಚಾರಕ್ಕೆ ಲವರ್ಸ್‌ ಕಿತ್ತಾಟ – ಮೆಟ್ರೋದಲ್ಲೇ ಬಾಯ್ ಫ್ರೆಂಡ್ ಕೆನ್ನೆಗೆ ಬಾರಿಸಿದ್ಲು

    ಟೀ ಶರ್ಟ್ ವಿಚಾರಕ್ಕೆ ಲವರ್ಸ್‌ ಕಿತ್ತಾಟ – ಮೆಟ್ರೋದಲ್ಲೇ ಬಾಯ್ ಫ್ರೆಂಡ್ ಕೆನ್ನೆಗೆ ಬಾರಿಸಿದ್ಲು

    ನವದೆಹಲಿ: ಟೀ ಶರ್ಟ್ ವಿಚಾರಕ್ಕೆ ದೆಹಲಿ ಮೆಟ್ರೋದಲ್ಲಿ ಬಾಯ್‍ಫ್ರೆಂಡ್ ಕಪಾಳಕ್ಕೆ ಯುವತಿ ಬಾರಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ದೆಹಲಿ ಮೆಟ್ರೋ ರೈಲಿನಲ್ಲಿ ಯುವಕ, ಯುವತಿ ಪ್ರಯಾಣಿಸುತ್ತಿರುತ್ತಾರೆ. ಈ ವೇಳೆ ಯುವತಿ 1,000 ರೂಪಾಯಿಗೆ ಟಿ-ಶರ್ಟ್ ಖರೀದಿಸಿರುವ ಬಗ್ಗೆ ತನ್ನ ಬಾಯ್‍ಫ್ರೆಂಡ್ ಬಳಿ ಹೇಳಿಕೊಂಡಿದ್ದಾಳೆ. ಇದಕ್ಕೆ ಯುವಕ ಈ ಟೀ ಶರ್ಟ್ ಬೆಲೆ ರೂಪಾಯಿಗಿಂತಲೂ ಹೆಚ್ಚಿಲ್ಲ ಎಂದು ಹೇಳಿದ್ದಾನೆ. ಇದರಿಂದ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಕೊನೆಗೆ ಕೋಪಗೊಂಡ ಯುವತಿ ಯುವಕನಿಗೆ ಎಲ್ಲರ ಮುಂದೆ ಹೊಡೆಯುತ್ತಾಳೆ. ಇದನ್ನೂ ಓದಿ: ಗರ್ಭಪಾತ ಬೇಡ, ಮಗುವಿಗೆ ಜನ್ಮ ನೀಡಿ ದತ್ತು ಕೊಡಿ – ದೆಹಲಿ ಹೈಕೋರ್ಟ್

    ನಂತರ ಯುವಕ ಇದು ಸಾರ್ವಜನಿಕ ಸ್ಥಳ ಎಂದು ಆಕೆಗೆ ವಾರ್ನಿಂಗ್ ಕೊಡುತ್ತಾನೆ. ಆದರೂ ಹಿಂಜರಿಯದೇ ಯುವತಿ ಆತನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಬಳಿಕ ರೊಚ್ಚಿಗೆದ್ದು ಯುವಕ ಕೂಡ ಆಕೆಯ ಕೆನ್ನೆಗೆ ಬಾರಿಸಿದ್ದಾನೆ. ಇದನ್ನೂ ಓದಿ: ನರ್ತನ್ ನಿರ್ದೇಶನದಲ್ಲಿ ಯಶ್ ನಟಿಸ್ತಾರಾ ಅಥವಾ ಇಲ್ಲವಾ? : ಒಂದು ವಾರ ಡೆಡ್ ಲೈನ್

    ಈ ವೀಡಿಯೋವನ್ನು ಮಂದರ್ ಅವರು ಟ್ವಿಟರ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ಇದು ಕೇವಲ ತಮಾಷೆಯ ವೀಡಿಯೋವೋ ಅಥವಾ ಇಬ್ಬರು ನಿಜವಾಗಿಯೂ ಜಗಳವಾಡುತ್ತಿದ್ದಾರೋ ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ವೀಡಿಯೊ ನೋಡಿ ನೆಟ್ಟಿಗರು ಇವರಿಬ್ಬರು ದಂಪತಿಗಳು ಎಂದರೆ, ಮತ್ತೆ ಕೆಲವರು ಈ ಇಬ್ಬರು ಸಹೋದರ ಮತ್ತು ಸಹೋದರಿ ಇರಬಹುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಟೀ ಶರ್ಟ್, ಜೀನ್ಸ್ ಪ್ಯಾಂಟ್ ತೊಟ್ಟಳೆಂದು ಹುಡುಗಿಯ ಕೊಲೆ ಮಾಡಿದ್ರು!

    ಟೀ ಶರ್ಟ್, ಜೀನ್ಸ್ ಪ್ಯಾಂಟ್ ತೊಟ್ಟಳೆಂದು ಹುಡುಗಿಯ ಕೊಲೆ ಮಾಡಿದ್ರು!

    ಲಕ್ನೋ: ಆಧುನಿಕ ಜಗತ್ತಿನಲ್ಲಿ ಯುವತಿಯರು ಜೀನ್ಸ್ ಪ್ಯಾಂಟ್, ಟೀ ಶರ್ಟ್ ತೊಡುವುದು ಸಾಮಾನ್ಯವಾಗಿದೆ. ಆದರೆ ಕೆಲವೆಡೆಗಳಲ್ಲಿ ಇನ್ನೂ ಜನರು ಇದನ್ನು ವಿರೋಧಿಸುತ್ತಾರೆ. ಇದೀಗ ಜೀನ್ಸ್, ಟಿ- ಶರ್ಟ್ ಧರಿಸಿದಳೆಂದು ಹುಡುಗಿಯೊಬ್ಬಳನ್ನು ಕೊಲೆಗೈದ ಅಚ್ಚರಿಯ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.

    ಮೃತಳನ್ನು ನೇಹಾ (16) ಎಂದು ಗುರುತಿಸಲಾಗಿದೆ. ಈ ಘಟನೆ ಉತ್ತರಪ್ರದೇಶದ ದೇವಾರಿಯಾ ಪ್ರದೇಶದಲ್ಲಿ ನಡೆದಿದೆ. ಈಕೆ ವಿದ್ಯಾಭ್ಯಾಸ ಹಿನ್ನೆಲೆಯಲ್ಲಿ ಲೂಧಿಯಾನದಲ್ಲಿ ನೆಲೆಸಿದ್ದಳು. ಹೀಗಾಗಿ ಅಲ್ಲಿ ಎಲ್ಲರಂತೆ ನೇಹಾ ಕೂಡ ಜೀನ್ಸ್, ಟೀ ಶರ್ಟ್ ಧರಿಸುತ್ತಿದ್ದಳು.

    ಲೂಧಿಯಾನದಲ್ಲಿ ಧರಿಸಿ ಅಭ್ಯಾಸವಿದ್ದ ನೇಹಾ ತಮ್ಮ ಮನೆಗೆ ಬಂದ ಸಂದರ್ಭದಲ್ಲಿಯೂ ಜೀನ್ಸ್, ಟೀ ಶರ್ಟ್ ಹಾಕಿದ್ದಾಳೆ. ಈ ವೇಳೆ ಮನೆಯಲ್ಲಿ ಇಂತಹ ಬಟ್ಟೆಗಳನ್ನು ಹಾಕಿಕೊಳ್ಳಬೇಡ ಎಂದು ನೇಹಾ ಚಿಕ್ಕಪ್ಪ ಹಾಗೂ ಅಜ್ಜ ವಾರ್ನ್ ಮಾಡಿದ್ದಾರೆ. ಈ ವಿಚಾರದಲ್ಲಿ ಮನೆಯಲ್ಲಿ ಗದ್ದಲವೇ ನಡೆದಿದೆ.

    ಜಗಳವಾಗಿ ಕೆಲ ಹೊತ್ತಿನ ಬಳಿಕ ಊರ ಹೊರಗೆ ಸೇತುವೆಯ ಬಳಿ ನೇಣು ಬಿಗಿದುಕೊಂಡ ರೀತಿಯಲ್ಲಿ ನೇಹಾ ಶವವವಾಗಿ ಪತ್ತೆಯಾಗಿದ್ದಾಳೆ. ಹುಡುಗಿ ಶವ ನೋಡಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಅಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಯಾರೋ ಕೊಲೆ ಮಾಡಿ ನೇತು ಹಾಕಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

    ಇತ್ತ ಹುಡುಗಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ನಾನು ಮನೆಯಲ್ಲಿ ಇಲ್ಲದ ವೇಳೆ ನನ್ನ ಮಗಳನ್ನು ಚಿಕ್ಕಪ್ಪ ಹಾಗೂ ಆಕೆಯ ಅಜ್ಜ ಸೇರಿ ಕೊಲೆ ಮಾಡಿದ್ದಾರೆ. ಬಳಿಕ ಅವರೇ ಮಗಳ ಶವವನ್ನು ಇಲ್ಲಿ ಎಸೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬದುಕಿರುವುದಕ್ಕಾಗಿ ನಾನು ಅದೃಷ್ಟವಂತೆ: ಶಿಲ್ಪಾ ಶೆಟ್ಟಿ

    ತಾಯಿ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ಟಿ-ಶರ್ಟ್ ಹಾಕಲ್ಲ ಅಂದ್ರೆ ಶುಭಾಗೆ ಬೈಯ್ಯೋದ್ಯಾರು ಗೊತ್ತಾ?

    ಟಿ-ಶರ್ಟ್ ಹಾಕಲ್ಲ ಅಂದ್ರೆ ಶುಭಾಗೆ ಬೈಯ್ಯೋದ್ಯಾರು ಗೊತ್ತಾ?

    ಬಿಗ್‍ಬಾಸ್ ಕಾರ್ಯಕ್ರಮಕ್ಕೆ ಆಗಮಿಸಿರುವ ಎಲ್ಲಾ ಸ್ಪರ್ಧಿಗಳು ಪ್ರತಿದಿನ ತಮಗೆ ಇಷ್ಟವಾದಂತಹ ಟ್ರೆಂಡಿ ಹಾಗೂ ಡಿಫರೆಂಟ್, ಡ್ರೆಸ್‍ಗಳನ್ನು ಹಾಕಿಕೊಳ್ಳುವ ಮೂಲಕ ಕಂಗೊಳಿಸುತ್ತಿದ್ದಾರೆ. ಸದ್ಯ ಬಿಗ್‍ಬಾಸ್, ಕ್ಯಾಪ್ಟನ್ ಮಂಜು ಸಾರಥ್ಯದಲ್ಲಿ ಮನೆಯ ಸದಸ್ಯರನ್ನು ನಾಲ್ಕು ಗುಂಪುಗಳಾಗಿ ಮಾಡಿ ಟಾಸ್ಕ್ ನೀಡುತ್ತಿದ್ದಾರೆ. ಅಲ್ಲದೆ ಈ ನಾಲ್ಕು ತಂಡದ ಸದಸ್ಯರಿಗೆ ಕೆಂಪು, ಬಿಳಿ, ಪಿಂಕ್ ಹಾಗೂ ಹಸಿರು ಬಣ್ಣದ ಟಿ-ಶರ್ಟ್‍ಗಳನ್ನು ನೀಡಿದ್ದಾರೆ.

    ಹೀಗಾಗಿ ಮನೆಯ ಎಲ್ಲಾ ಸದಸ್ಯರು ಟಿ-ಶರ್ಟ್ ಧರಿಸಿ ಟಾಸ್ಕ್ ಆಡಲು ಮುಂದಾಗಿದ್ದಾರೆ. ಈ ವೇಳೆ ವೈಷ್ಣವಿ ಹಾಗೂ ಶುಭಾ ಪೂಂಜಾ ಕೂಡ ಟಿ-ಶರ್ಟ್ ಧರಿಸಿ ಡ್ರೆಸಿಂಗ್ ಟೇಬಲ್‍ನ ಮೀರರ್ ಮುಂದೆ ನಿಂತು ಮೇಕಪ್ ಮಾಡಿಕೊಳ್ಳುತ್ತಿರುತ್ತಾರೆ. ಆಗ ವೈಷ್ಣವಿ, ಶುಭಾ ಪೂಂಜಾಗೆ ಯಾಕೆ ಟಿ-ಶರ್ಟ್ ಇಷ್ಟ ಇಲ್ವಾ ಅಂತ ಕೇಳ್ತಾರೆ. ಅದಕ್ಕೆ ಶುಭಾ, ಚಿಕ್ಕ ಮಕ್ಕಳಂತೆ ನನಗೆ ಇಷ್ಟ ಇಲ್ಲಾ ವೈಶು, ನನಗೆ ಈ ತರ ಟಿ-ಶಟ್ರ್ಸ್ ಇಷ್ಟ ಆಗಲ್ಲ. ನಾನು ಮನೆಯಲ್ಲೂ ಈ ತರ ಟಿ-ಶಟ್ರ್ಸ್ ಹಾಕಿಕೊಳ್ಳುವುದಿಲ್ಲ ಅಂತಾರೆ. ಅದಕ್ಕೆ ವೈಷ್ಣವಿ ಹಾಗಾದರೆ ಹಾಕಿಕೊಳ್ಳಬೇಡಿ ಬಿಚ್ಚಿಬಿಡಿ. ಗೌನ್ ಹಾಕಿಕೊಳ್ಳಿ ಎಂದು ಹೇಳುತ್ತಾರೆ.

    ಇದಕ್ಕೆ ಶುಭಾ ಇಲ್ಲ,.. ಅವರು ಬೈತಾರೆ, ಹ್ಯಾಸ್ ಇಟ್ ಈಸ್ ಅವರು ನನಗೆ ತುಂಬಾನೇ ಬೈತಿದ್ದಾರೆ ಇತ್ತೀಚಿಗೆ ಅಂತಾ ಹೇಳ್ತಾರೆ. ಆಗ ವೈಷ್ಣವಿ ನಿಮಗೆ ಬೈಯ್ಯಲು ಧೈರ್ಯ ಯಾರಿಗಿದೆ ಹೇಳಿ ಎಂದು ಕೇಳುತ್ತಾರೆ. ಇಲ್ಲ ಬೈತಿದ್ದಾರೆ, ತುಂಬಾ ತುಂಬಾ ಬೈತಿದ್ದಾರೆ, ನಾನು ಏನು ಮಾಡಿದೆ ಎಂದು ಶುಭ ಹೇಳಿದಾಗ, ವೈಷ್ಣವಿ ಮೈಕ್ ಹಾಕಲ್ಲ. ಗ್ಲಾಸ್ ಕದಿತ್ತಿರಾ ಅದಕ್ಕೆ ಬೈಯ್ತಾರೆ ಅಂತಾರೆ. ಇಲ್ಲ ನಾನು ನನ್ನ ಪಾಡಿಗೆ ಆಟ ಆಡ್ತಿದ್ದೀನಿ. ನನಗೆ ಯಾರಾದರೂ ಬೈದರೆ ನನಗೆ ಅರ್ಥನೇ ಆಗುವುದಿಲ್ಲ. ಯಾಕ್ ಬೈಬೇಕು? ನನ್ನ ಪಾಡಿಗೆ ನಾನು ಇದ್ದೇನೆ ಎಂದು ಕ್ಯೂಟ್ ಕ್ಯೂಟ್ ಆಗಿ ಸಣ್ಣ ಮಕ್ಕಳಂತೆ ಶುಭಾ.. ವೈಷ್ಣವಿ ಜೊತೆ ಮಾತನಾಡಿದ್ದಾರೆ.

    ಒಟ್ಟಾರೆ ಮಗುವಿನಂತೆ ಮನಸ್ಸು ಹೊಂದಿರುವ ಶುಭಾ, ನಿಜವಾಗಿಯೂ ಮಗುವಿನಂತೆ ಮುದ್ದು-ಮುದ್ದಾಗಿ ಮಾತನಾಡಿರುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ ಎಂದರೆ ತಪ್ಪಾಗಲಾರದು.

  • ಪುತ್ರನಿಗೆ ‘ನಮೋ ಅಗೇನ್’ ಟಿ-ಶರ್ಟ್ ತೊಡಸಿದ್ರಾ ಕರೀನಾ?

    ಪುತ್ರನಿಗೆ ‘ನಮೋ ಅಗೇನ್’ ಟಿ-ಶರ್ಟ್ ತೊಡಸಿದ್ರಾ ಕರೀನಾ?

    ಮುಂಬೈ: ಸೆಲಿಬ್ರೆಟಿಗಳ ಮೂಲಕ ಮತದಾರರನ್ನು ಸೆಳೆಯುವ ತಂತ್ರವನ್ನು ಅನೇಕ ಪಕ್ಷಗಳು ಮಾಡುತ್ತಿವೆ. ಇಂತಹ ಗಿಮಿಕ್‍ಗೆ ಸದ್ಯ ಬಾಲಿವುಡ್ ಬೆಡಗಿ ಕರೀನಾ ಕಪೂರ್ ಸಿಕ್ಕಿಕೊಂಡಿದ್ದಾರೆ.

    ಹೌದು, ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತು ಸೈಫ್ ಅಲಿಖಾನ್ ದಂಪತಿಯ ಪುತ್ರ ತೈಮೂರ್ ಅಲಿ ಖಾನ್ ‘ನಮೋ ಅಗೇನ್’ ಎಂದು ಬರೆದ ಟಿ-ಶರ್ಟ್ ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

     

    ಕರೀನಾ ಕಪೂರ್ ಪುತ್ರ ತೈಮೂರ್ ಕೈ ಹಿಡಿದು ಹೋಗುತ್ತಿರುವ ಫೋಟೋ ಇದಾಗಿದೆ. ತೈಮೂರ್ ಟಿ-ಶರ್ಟ್ ಮೇಲೆ ಮೋದಿ ಮತ್ತೊಮ್ಮೆ ಎಂದು ಬರೆಯಲಾಗಿದೆ. ಆದರೆ ಅದನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಫೋಟೋ ಎಡಿಟ್ ಮಾಡಿದ್ದಾರೆ ಎಂಬುದು ತಿಳಿಯುತ್ತದೆ.

    ಕರೀನಾ ಕಪೂರ್ ಅವರು ಏಪ್ರಿಲ್ 29ರಂದು ಮತದಾನ ಮಾಡಲು ಪುತ್ರ ತೈಮೂರ್ ನನ್ನು ಕರೆತಂದಿದ್ದರು. ಈ ವೇಳೆ ಕ್ಲಿಕ್ಕಿಸಿದ ಫೋಟೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆದರೆ ಕೆಲ ಬಿಜೆಪಿ ಬೆಂಬಲಿಗರು ಈ ಫೋಟೋವನ್ನು ಎಡಿಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ.

    https://twitter.com/KareenaOnline/status/1122845658942181377

    ಈ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ರಣ್‍ವೀರ್ ಸಿಂಗ್, ನಿವೃತ್ತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಬಿಜೆಪಿ ಬೆಂಬಲಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ರೀತಿಯ ತಂತ್ರದಿಂದ ಸೆಲಿಬ್ರೆಟಿಗಳ ಅಭಿಮಾನಿಗಳನ್ನು ಪಕ್ಷಕ್ಕೆ ಸೆಳೆಯುವ ತಂತ್ರ ನಡೆಯುತ್ತಿದೆ.

    ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕರೀನಾ ಕಪೂರ್ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ನಟಿ, ನಾನು ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನನ್ನ ಗುರಿ ಏನಿದ್ದರೂ ಸಿನಿಮಾ ರಂಗ ಮಾತ್ರ ಎಂದು ಹೇಳಿದ್ದರು.

  • ಪತಿಯ ಶರ್ಟ್ ಮಿಸ್ ಮಾಡ್ಕೊಳ್ತಿದ್ದಾರೆ ರಾಧಿಕಾ

    ಪತಿಯ ಶರ್ಟ್ ಮಿಸ್ ಮಾಡ್ಕೊಳ್ತಿದ್ದಾರೆ ರಾಧಿಕಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ಅವರು, ತಾವು ಗರ್ಭಿಣಿಯಾಗಿದ್ದಾಗ ಧರಿಸುತ್ತಿದ್ದ ಬಟ್ಟೆಯನ್ನು ಈಗ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

    ಹೌದು.. ರಾಧಿಕಾ ಪಂಡಿತ್ ಅವರು ಗರ್ಭಿಣಿಯಾದಾಗ ಪತಿ ಯಶ್ ಅವರ ಶರ್ಟ್ ಅನ್ನು ಧರಿಸುತ್ತಿದ್ದರು. ಆದರೆ ಈಗ ಅದು ಸಾಧ್ಯವಾಗುತ್ತಿಲ್ಲ. ಗರ್ಭಿಣಿಯಾಗಿದ್ದಾಗ ಪತಿ ಯಶ್ ಶರ್ಟ್ ಧರಿಸಿದ್ದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಈ ಬಗ್ಗೆ ರಾಧಿಕಾ ಅವರೇ ಹೇಳಿಕೊಂಡಿದ್ದಾರೆ.

    ನಟಿ ರಾಧಿಕಾ ಅವರು ಗರ್ಭಿಣಿಯಾಗಿದ್ದಾಗ ಯಶ್ ಟಿ-ಶರ್ಟ್ ಧರಿಸಿ, ಸ್ಪೆಕ್ಸ್ ಹಾಕಿ ಫೋಟೋಗೆ ಪೋಸ್ ಕೊಟ್ಟಿದ್ದರು. ಆ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಂ ಮತ್ತು ಫೇಸ್‍ಬುಕ್ ನಲ್ಲಿ ಈಗ ಅಪ್ಲೋಡ್ ಮಾಡಿದ್ದಾರೆ. ಫೋಟೋ ಜೊತೆಗೆ “ನಾನು ಗರ್ಭಿಣಿಯಾಗಿದ್ದಾಗ ಪತಿ ಯಶ್ ಟಿ-ಶರ್ಟ್ ಧರಿಸುತ್ತಿದ್ದೆ. ಆದರೆ ಈಗ ಅದನ್ನು ಧರಿಸಲು ಸಾಧ್ಯವಾಗುತ್ತಿಲ್ಲ. ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ” ಎಂದು ಬರೆದು ಕೊಂಡಿದ್ದಾರೆ.

    ಪತಿ ಯಶ್ ಟಿ-ಶರ್ಟ್ ಧರಿಸಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು, ಚೆನ್ನಾಗಿದೆ, ಸೂಪರ್ ಇಂತಹ ಅನೇಕ ಕಮೆಂಟ್ ಮಾಡುತ್ತಿದ್ದಾರೆ. ಈಗಾಗಲೇ 84 ಸಾವಿರಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದಾರೆ.

    https://www.instagram.com/p/BrfsBMKBsbZ/

    ನಟಿ ರಾಧಿಕಾ ಪಂಡಿತ್ ಅವರು ಡಿಸೆಂಬರ್ 2 ಭಾನುವಾರದಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv