ಹೈದರಾಬಾದ್: ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನ ಮಾಡಿದ ಆರೋಪದಲ್ಲಿ ಮಂಗಳವಾರ ಬಂಧನವಾಗಿದ್ದ ತೆಲಂಗಾಣ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಅವರಿಗೆ ಕೆಲವೇ ಗಂಟೆಗಳಲ್ಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ನ್ಯಾಯಾಲಯ ರಾಜಾ ಸಿಂಗ್ ಅವರ ಬಿಡುಗಡೆಗೆ ಆದೇಶಿಸಿದೆ.
ಈ ಹಿನ್ನೆಲೆ ರಾಜಾ ಸಿಂಗ್ ವಿರುದ್ಧ ಐಪಿಸಿಯ ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ, ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಕಾನೂನಿನ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
Live Tv
[brid partner=56869869 player=32851 video=960834 autoplay=true]
ಹೈದರಾಬಾದ್: ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿದ್ದಕ್ಕೆ ತೆಲಂಗಾಣದ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರವಾದಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ಶಾಸಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನಿನ್ನೆ ರಾತ್ರಿ ಹೈದರಾಬಾದ್‌ನಲ್ಲಿ ಭಾರಿ ಪ್ರತಿಭಟನೆ ನಡೆಸಲಾಯಿತು. ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಕಾನೂನಿನ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೈದರಾಬಾದ್‌ನ ದಕ್ಷಿಣ ವಲಯದ ಉಪ ಪೊಲೀಸ್ ಆಯುಕ್ತ ಪಿ.ಸಾಯಿ ಚೈತನ್ಯ ತಿಳಿಸಿದ್ದಾರೆ. ಇದನ್ನೂ ಓದಿ: ನೂಪುರ್ ಶರ್ಮಾ ಹತ್ಯೆಗೈಯಲು ಟರ್ಕಿಯಲ್ಲಿ ಉಗ್ರನಿಗೆ ಐಸಿಸ್ ತರಬೇತಿ!
ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡುವ ವೀಡಿಯೋವನ್ನು ಸಿಂಗ್ ಬಿಡುಗಡೆ ಮಾಡಿದ್ದರು. ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸೋಮವಾರ ರಾತ್ರಿ ನಗರ ಪೊಲೀಸ್ ಕಮಿಷನರ್ ಸಿ.ವಿ.ಆನಂದ್ ಅವರ ಕಚೇರಿ ಮತ್ತು ಹೈದರಾಬಾದ್‌ನ ಇತರ ಭಾಗಗಳಲ್ಲಿ ಪ್ರತಿಭಟನೆಗಳು ನಡೆದವು.
ಸಿಂಗ್ ಅವರು ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅವರನ್ನು ತಕ್ಷಣ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು. ತಕ್ಷಣ ಅವರನ್ನು ವಶಕ್ಕೆ ಪಡೆದು ನಂತರ ವಿವಿಧ ಠಾಣೆಗಳಿಗೆ ರವಾನಿಸಲಾಗಿದೆ. ಇದನ್ನೂ ಓದಿ: 2 ವರ್ಷಗಳ ನಂತರ ಭಾರತದ ವಿದ್ಯಾರ್ಥಿಗಳಿಗೆ ವೀಸಾ ನೀಡಲು ಚೀನಾ ಅನುಮತಿ
ನಗರದ ಗೋಶಾಮಹಲ್‌ನ ಶಾಸಕ ಟಿ.ರಾಜಾ ಸಿಂಗ್ ಕಳೆದ ವಾರ ಹಾಸ್ಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದರು. ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವ್ವರ್ ಫಾರೂಕಿ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಲು ಸುಮಾರು 50 ಬೆಂಬಲಿಗರೊಂದಿಗೆ ಕಾರ್ಯಕ್ರಮದ ಸ್ಥಳಕ್ಕೆ ತಲುಪಲು ಪ್ರಯತ್ನಿಸಿದಾಗ ಅವರನ್ನು ಶುಕ್ರವಾರ ಪೊಲೀಸರು ತಡೆದು ಕಸ್ಟಡಿಗೆ ತೆಗೆದುಕೊಂಡರು.
Live Tv
[brid partner=56869869 player=32851 video=960834 autoplay=true]
ಬೆಳಗಾವಿ: ಬ್ರಿಟಿಷರು ಭಾರತ ದೇಶವನ್ನು ಬಿಟ್ಟು ಹೋದರು ಆದರೆ ಈ ಕಾಂಗ್ರೆಸ್ ಪಕ್ಷದವರನ್ನು ಇಲ್ಲಿಯೇ ಬಿಟ್ಟು ಹೋಗಿದ್ದಾರೆ ಎಂದು ಹೈದರಾಬಾದ್‌ನ ಭಾಗ್ಯನಗರ ಕ್ಷೇತ್ರದ ಬಿಜೆಪಿ ಶಾಸಕ ರಾಜಾಸಿಂಗ್ ಠಾಕೂರ್ ವ್ಯಂಗ್ಯವಾಡಿದರು.
ಬೆಳಗಾವಿ ತಾಲೂಕಿನ ಗಣೇಶ್ ಭಾಗ್‌ನಲ್ಲಿ ಹಿಂದೂಪರ ಕಾರ್ಯಕರ್ತರ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ ಹಿಂದೂಗಳ ಮಧ್ಯೆ, ಭಾಷೆಗಳ ಮಧ್ಯೆ ಜಗಳ ಹಚ್ಚಲು ಷಡ್ಯಂತ್ರ ನಡೀತಿದೆ. ಬ್ರಿಟಿಷರು ದೇಶ ಬಿಟ್ಟು ಹೋದರು ಆದರೆ ದ್ರೋಹಿಗಳನ್ನು ಬಿಟ್ಟು ಹೋದರು. ಬೆಳಗಾವಿಯ ನೆಲ ಪುಣ್ಯ, ವೀರಭೂಮಿಯಾಗಿದೆ. ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಆ ವೇಳೆಯೂ ನಮ್ಮಲ್ಲಿ ದ್ರೋಹಿಗಳು ಇದ್ದರು. ಮತಾಂತರ ನಡೆಯುತ್ತಿದ್ದಾಗ ಅದರ ತಡೆಗೆ ಮಹಾತ್ಮ ಬಸವೇಶ್ವರರು ಜನ್ಮ ತಾಳಿದರು. ಕೆಲವರು ನಮ್ಮ ನಮ್ಮ ಮಧ್ಯೆ ಜಗಳ ಹಚ್ಚಲು ಯತ್ನಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಸೋಮವಾರ ಯಾದಗಿರಿಯಲ್ಲಿ ಚುನಾವಣೆ – ಪೊಲೀಸ್ ಇಲಾಖೆ ಸಜ್ಜು
ಕನ್ನಡಿಗ ಮತ್ತು ಮರಾಠಿಗರ ಮಧ್ಯೆ ಜಗಳ ಹಚ್ಚಲು ಷಡ್ಯಂತ್ರ ನಡೆಯುತ್ತಿದೆ ಇದನ್ನ ನೆನಪಿನಲ್ಲಿಟ್ಟುಕೊಳ್ಳಿ. ನಾನು ನಿಮಗೆ ಒಂದು ಕೆಲಸ ಒಪ್ಪಿಸಲು ಬಯಸುತ್ತೇನೆ. ದೇಶ, ಧರ್ಮದ ಸಲುವಾಗಿ ಸಂಘಟಿತರಾಗಿ ಕೆಲಸ ಮಾಡಬೇಕು. ದೇಶದಲ್ಲಿ ಮೋದಿ ಸರ್ಕಾರ ಇದೆ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದೆ. ಆದ್ರೆ ಧರ್ಮಕ್ಕೆ ಸಂಕಟ ಬಂದಾಗ ಸರ್ಕಾರ ಮುಂದೆ ಬರಲ್ಲ, ನೀವೇ ಮುಂದೆ ಬರಬೇಕು. ಧರ್ಮಕ್ಕೆ ಸಂಕಷ್ಟ ಬಂದಾಗ ನೀವೇ ಕೈಯಲ್ಲಿ ತಲ್ವಾರ್ ಹಿಡಿದು ಹೊರ ಬರಬೇಕು. ಶಾಸಕರು, ಸಂಸದರು ಯಾರೂ ಸಹ ತಲ್ವಾರ್ ಹಿಡಿದು ಹೊರ ಬರಲ್ಲ. ನಮ್ಮ ಹಿಂದೂಗಳನ್ನು ಮತಾಂತರ ಮಾಡುವ ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಕಿಡಿಕಾರಿದರು.
ಹಿಂದೂ ಕಾರ್ಯಕರ್ತರು ಪ್ರತಿ ಗ್ರಾಮಕ್ಕೆ ತೆರಳಿ ಒಂದು ಸೇನಾ ನಿರ್ಮಾಣ ಮಾಡುವೆ ಎಂದು ಸಂಕಲ್ಪ ಮಾಡಬೇಕು. ದುಡ್ಡು ನೀಡಿ ಮತಾಂತರ ಮಾಡಲಾಗುತ್ತಿದೆ. ಹಸಿರು ಟೋಪಿಯವರದ್ದು ಏನೂ ದೊಡ್ಡ ಇತಿಹಾಸ ಇಲ್ಲ ಕೇವಲ ಎರಡೂವರೆ ಸಾವಿರ ವರ್ಷದ ಇತಿಹಾಸ ಇದೆ. ಧರ್ಮದ್ರೋಹಿಗಳ ಸರ್ಕಾರ ಬಂದಾಗ ಟಿಪ್ಪು ಜಯಂತಿ ಆಚರಣೆ ಮಾಡಲಾಗುತ್ತದೆ. ಟಿಪ್ಪು ಸುಲ್ತಾನ್ ಹಿಂದೂಗಳ ಹಂತಕ, ಹಿಂದೂಗಳ ಕೊಚ್ಚಿ ಕೊಚ್ಚಿ ಹತ್ಯೆ ಮಾಡುವ ದುಷ್ಟ ರಾಕ್ಷಸನಾಗಿದ್ದ. ಟಿಪ್ಪು ಸುಲ್ತಾನ್ ಒಂದು ಗ್ರಾಮದ ಮೇಲೆ ದಾಳಿ ಮಾಡಿ ಬ್ರಾಹ್ಮಣರಿಗೆ ಇಸ್ಲಾಂ ಧರ್ಮ ಸ್ವೀಕರಿಸುವಂತೆ ಹೇಳಿದ್ದ. ದೀಪಾವಳಿಯಂದು ಆ ಗ್ರಾಮದ 800 ಬ್ರಾಹ್ಮಣರನ್ನು ಕೊಚ್ಚಿ ಕೊಂದಿದ್ದ. ಕೇರಳದ ಕ್ಯಾಲಿಕಟ್‌ಗೆ ಟಿಪ್ಪು ಸುಲ್ತಾನ್ 30 ಸಾವಿರ ಕಾರ್ಯಕರ್ತರ ಜೊತೆ ದಾಳಿ ಮಾಡಿದ್ದ. ಒಂದು ಕೈಯಲ್ಲಿ ಹಸಿರು ಪುಸ್ತಕ ಮತ್ತೊಂದು ಕೈಯಲ್ಲಿ ಖಡ್ಗ ಹಿಡಿದು ಎರಡರಲ್ಲಿ ಒಂದು ಆಯ್ಕೆ ಮಾಡು ಅಂತಾ ಆತನ ಸೈನಿಕರು ಕೇಳುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.
ಕೇರಳದಲ್ಲಿ 600ಕ್ಕೂ ಹೆಚ್ಚು ಆರ್‌ಎಸ್‌ಎಸ್ ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿತ್ತು. ಪಿಎಫ್‌ಐ ಸಂಘಟನೆ ಯವರು ಈ ಹತ್ಯೆಗಳನ್ನು ಮಾಡಿದ್ದಾರೆ. ಭಾರತವನ್ನು ಇಸ್ಲಾಂ ರಾಷ್ಟç ಮಾಡಲು ಪಿಎಫ್‌ಐ ಸಂಘಟನೆ ಯತ್ನಸಿದೆ. ಹಿಂದೂ ಹುಡುಗಿಯರಿಗೆ ಮೋಸ ಮಾಡುವಂತೆ ಪಿಎಫ್‌ಐ ಯುವಕರಿಗೆ ತರಬೇತಿ ಕೊಟ್ಟು ಲವ್ ಜಿಹಾದ್ ಮಾಡುತ್ತಿದ್ದಾರೆ. ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಡೇಂಜರಸ್ ಸಂಘಟನೆಯಾಗಿದೆ. ಶಸ್ತ್ರಾಸ್ತ್ರ ಹಿಡಿದು ಕೇರಳದಲ್ಲಿ ಪಿಎಫ್‌ಐ ಪಥಸಂಚಲನ ಕಾರ್ಯಕ್ರಮ ಮಾಡಿತ್ತು ಎಂದು ಆರೋಪಿಸಿದರು.
ಕನ್ನಡ ಮರಾಠಿಗರ ಮಧ್ಯೆ ಜಗಳ ಹಚ್ಚಲು ಕೆಲವರ ಷಡ್ಯಂತ್ರ ನಡೆಸಿದ್ದು, ಹೊಡೆಯೋವನು ಹಿಂದೂ ಆಗಿರಬೇಕು ಹೊಡಿಸಿಕೊಳ್ಳವನು ಹಿಂದೂ ಆಗಿರಬೇಕು ಅಂತಾ ಷಡ್ಯಂತ್ರ ನಡೆಸಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರು ತಲ್ವಾರ್ ಹಿಡಿಯದಿದ್ದರೆ ನಾವು ಹಿಂದೂಗಳಾಗಿ ಇರುತ್ತಿರಲಿಲ್ಲ. ಮತಾಂತರ ನಿಷೇಧ ಕಾಯ್ದೆ ಜಾರಿ ತರುತ್ತಿರುವ ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ಎಂದರು. ಇದನ್ನೂ ಓದಿ: ಹಾಸ್ಟೆಲ್‍ನಲ್ಲಿರುವ ಬ್ಯಾಗ್ ತರುತ್ತೇನೆಂದು ಹೇಳಿ ಹೋದ ಯುವತಿ ನಾಪತ್ತೆ
ಮದರಸಾಗಳಲ್ಲಿ ಉಗ್ರರ ಉತ್ಪಾದನೆ ಆಗುತ್ತೆ. ಇದನ್ನ ಉತ್ತರ ಪ್ರದೇಶ ಶಾಸಕರು, ಐಬಿ ಅಧಿಕಾರಿಗಳು ಹೇಳಿದ್ದಾರೆ. ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಮಾಡಿದಂತೆ ಕರ್ನಾಟಕದಲ್ಲಿಯೂ ಆ ಕಾರ್ಯ ನಡೆಯಬೇಕಿದೆ. ಕರ್ನಾಟಕದಿಂದ ಈ ಕಾರ್ಯಕ್ರಮ ಆರಂಭವಾದರೆ ಇವರ ಅಂತ್ಯ ಶುರು. ‘ಹಮ್ ದೋ ಹಮಾರಿ ದೋ’ ಈ ಸ್ಕೀಮ್ ನಾವ್ಯಾಕೆ ಫಾಲೋ ಮಾಡಬೇಕು. ಹಸಿರು ಟೋಪಿಯವರಿಂದ ‘ಹಮ್ ಪಾಂಚ್ ಹಮಾರೇ ಪಚಾಸ್’ ಕಾರ್ಯಕ್ರಮ ನಡೀತಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಕಿಡಿಕಾರಿದರು.
ಉತ್ತರ ಪ್ರದೇಶದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಸೌಲಭ್ಯ ಕಡಿತ ಮಾಡಿದ್ದಾರೆ. ಅದನ್ನ ಎಲ್ಲಾ ರಾಜ್ಯಗಳಲ್ಲಿ ಜಾರಿ ಮಾಡಬೇಕು. ಮೋದಿಜಿ, ಯೋಗೀಜಿ ಇರದಿದ್ದರೆ ಮುಂದೆ ನಿಮ್ಮದೇನು ಅಂತಾ ಅಸಾದುದ್ದೀನ್ ಒವೈಸಿ ಕೇಳುತ್ತಾನೆ. ೧೨೦೦ ವರ್ಷಗಳಿಂದ ಭಾರತ ಇಸ್ಲಾಂ ರಾಷ್ಟ್ರ ಮಾಡಲು ಷಡ್ಯಂತ್ರ ನಡೀತಿದೆ. ಲವ್ ಜಿಹಾದ್, ಮತಾಂತರ ಹೆಸರಿನಲ್ಲಿ ಈ ಕಾರ್ಯ ನಡೆಯುತ್ತಿದ್ದು ಇದನ್ನ ತಡಿಯಬೇಕಿದೆ. ಕನ್ನಡ ಮರಾಠಿ ಅಂತಾ ಜಗಳವಾಡದೇ ಎಲ್ಲರೂ ಒಗ್ಗೂಡಬೇಕಿದೆ ಎಂದರು.
ಹೈದರಾಬಾದ್: ತೆಲಂಗಾಣ ರಾಜ್ಯದ ಗೋಶಮಹಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಭಾನುವಾರ ತೆಲಂಗಾಣದ ಬಿಜೆಪಿ ರಾಜ್ಯಾಧ್ಯಕ್ಷರಾದ ಕೆ. ಲಕ್ಷ್ಮಣ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ಕೇಂದ್ರದಲ್ಲಿ ತಮ್ಮ ಪಕ್ಷ ಆಡಳಿತದಲ್ಲಿ ಇದ್ದರೂ, ಗೋ ರಕ್ಷಣೆ ಬಗ್ಗೆ ಸೂಕ್ತವಾದ ನಿರ್ಣಯ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಟಿ.ರಾಜಾ ಸಿಂಗ್ ಪರೋಕ್ಷವಾಗಿ ತಮ್ಮ ರಾಜೀನಾಮೆಯ ಕಾರಣವನ್ನು ತಿಳಿಸಿದ್ದಾರೆ.
ಈ ಸಂಬಂಧ ಟ್ವಿಟ್ಟರ್‍ನಲ್ಲಿ ಸೆಲ್ಫಿ ವಿಡಿಯೋ ಅಪ್ಲೋಡ್ ಮಾಡಿಕೊಂಡಿರುವ ಟಿ.ರಾಜಾ ಸಿಂಗ್, ನನಗೆ ಹಿಂದೂ ಧರ್ಮ, ಗೋರಕ್ಷೆ ಮೊದಲು, ನಂತರ ರಾಜಕೀಯ. ಈ ಸಂಬಂಧ ನನ್ನ ರಾಜೀನಾಮೆ ಪತ್ರವನ್ನು ಲಕ್ಷ್ಮಣ್ ಅವರಿಗೆ ನೀಡಿದ್ದೇನೆ. ನಾನು ಹಲವು ಬಾರಿ ಸದನದಲ್ಲಿ ಗೋ ರಕ್ಷಣೆಯ ಬಗ್ಗೆ ಕಟ್ಟು ನಿಟ್ಟಿನ ಕಾನೂನುಗಳನ್ನು ತರಬೇಕೆಂದು ನಾಯಕರ ಮೇಲೆ ಒತ್ತಡ ತಂದಿದ್ದೇನೆ. ಆದ್ರೆ ಯಾರು ನನ್ನ ಮಾತುಗಳನ್ನು ಕೇಳಿಲ್ಲ ಎಂದು ಟಿ.ರಾಜಾ ಅಸಮಾಧಾನ ಹೊರಹಾಕಿದ್ದಾರೆ.
ವಿಡಿಯೋದಲ್ಲಿ ಏನಿದೆ?:
ನಾನು ಬಿಜೆಪಿಗೆ ರಾಜೀನಾಮೆ ನೀಡಿದ್ದು ಯಾಕೆ ಎಂದು ನನ್ನ ಬೆಂಬಲಿಗರು ಹಾಗು ಮಾಧ್ಯಮ ಮಿತ್ರರು ಪ್ರಶ್ನೆ ಮಾಡುತ್ತಿದ್ದಾರೆ. ತೆಲಂಗಾಣ ಸರ್ಕಾರ ಗೋ ಹತ್ಯೆ ಮಾಡಲು ಮುಂದಾಗುತ್ತಿದೆ. ಈ ಬಾರಿಯ ಬಕ್ರೀದ್ ಹಬ್ಬದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೋವುಗಳನ್ನು ಹತ್ಯೆ ಮಾಡಲಾಗುತ್ತಿದೆ. ಬಕ್ರೀದ್ ನಲ್ಲಿ ಎಷ್ಟು ಗೋವುಗಳನ್ನು ಹತ್ಯೆ ಮಾಡಲಾಗುತ್ತೋ ಅಷ್ಟು ಮುಸ್ಲಿಂ ಮತಗಳು ಸಿಎಂ ಕೆಸಿ ಚಂದ್ರಶೇಖರ್ ಅವರಿಗೆ ಲಭಿಸಲಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಗೋ ಹತ್ಯೆ ಮಾಡುವವರಿಗೆ ಪೊಲೀಸ್ ರಕ್ಷಣೆ ನೀಡಿದ್ದು, ವಿರೋಧಿಸಿದವರನ್ನು ಬಂಧಿಸಬೇಕೆಂದು ತಿಳಿಸಿದೆ. ನಾವು ಹಲವು ವರ್ಷಗಳಿಂದ ಗೋ ರಕ್ಷಣೆಯಲ್ಲಿ ತೊಡಗಿಕೊಂಡಿದ್ದೇವೆ. ಕಳೆದ ಬಾರಿ ನಮ್ಮ ಒತ್ತಡಗಳಿಂದ ಬಕ್ರೀದ್ ನಲ್ಲಿ ಪ್ರಾಣಿ ಬಲಿ ಕಡಿಮೆಯಾಗಿತ್ತು. ನಾನು ಗೋ ರಕ್ಷಣೆಗಾಗಿ ರಸ್ತೆಗೆ ಇಳಿದ್ರೆ ಏನು ಬೇಕಾದ್ರೂ ಆಗಬಹುದು. ನನ್ನಿಂದಾಗಿ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರ ಮೇಲೆ ಆರೋಪಗಳು ಬಾರದೇ ಇರಲಿ ಎಂದು ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.