Tag: t narasipura

  • ನದಿಯಲ್ಲಿ ಈಜಲು ಹೋದ ಇಬ್ಬರು ಹುಡುಗರು ನೀರುಪಾಲು

    ನದಿಯಲ್ಲಿ ಈಜಲು ಹೋದ ಇಬ್ಬರು ಹುಡುಗರು ನೀರುಪಾಲು

    ಮೈಸೂರು: ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಹುಡುಗರು ನೀರುಪಾಲಾಗಿರುವ ಘಟನೆ ಮೈಸೂರು (Mysuru) ಜಿಲ್ಲೆ ಟಿ.ನರಸೀಪುರ ( T.Narasipura) ತಾಲೂಕಿನ ಮೇದಿನಿ ಗ್ರಾಮದಲ್ಲಿ ನಡೆದಿದೆ.

    ಕೊಳ್ಳೇಗಾಲ ಪಟ್ಟಣದ ನಿವಾಸಿಗಳಾದ ಭರತ್ (17), ಲಿಖಿತ್ (18) ಮೃತರು. ಇದನ್ನೂ ಓದಿ: ತ್ರಿಬಲ್ ಮರ್ಡರ್ ಮಾಡಿದ್ದ ಆರೋಪಿಗಳು ಅರೆಸ್ಟ್ – ಹೆಣ್ಣಿನ ವಿಚಾರಕ್ಕೆ ಬಿತ್ತು ಮೂರು ಹೆಣ

    ಮೇದಿನಿ ಗ್ರಾಮದ ರಾಮಕಟ್ಟೆ ಬಳಿ ಈಜಲು ಐವರು ತೆರಳಿದ್ದರು. ಈ ವೇಳೆ ಭರತ್ ಹಾಗೂ ಲಿಖಿತ್ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದು, ಉಳಿದ ಮೂವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: Tumakuru | ಬಸ್, ಬೈಕ್ ನಡುವೆ ಅಪಘಾತ – ಯುಗಾದಿಗೆ ಊರಿಗೆ ತೆರಳುತ್ತಿದ್ದ ಇಬ್ಬರು ಸಾವು

    ನೀರಿನಲ್ಲಿ ಕೊಚ್ಚಿ ಹೋಗಿರುವ ಭರತ್ ಹಾಗೂ ಲಿಖಿತ್ ಮೃತದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ತಲಕಾಡು ಪೊಲೀಸ್ ಠಾಣೆಯಲ್ಲಿ (Talakadu Police Station) ಪ್ರಕರಣ ದಾಖಲಾಗಿದೆ.

  • Mysuru | ನೀರಿನಲ್ಲಿ ಮುಳುಗಿ ತಾತ, ಇಬ್ಬರು ಮೊಮ್ಮಕ್ಕಳು ಜಲಸಮಾಧಿ

    Mysuru | ನೀರಿನಲ್ಲಿ ಮುಳುಗಿ ತಾತ, ಇಬ್ಬರು ಮೊಮ್ಮಕ್ಕಳು ಜಲಸಮಾಧಿ

    ಮೈಸೂರು: ನೀರಿನಲ್ಲಿ ಮುಳುಗಿ ತಾತ (Grandfather) ಹಾಗೂ ಇಬ್ಬರು ಮೊಮ್ಮಕ್ಕಳು (Grandchildren) ಜಲಸಮಾಧಿಯಾದ ಘಟನೆ ಮೈಸೂರು (Mysuru) ಜಿಲ್ಲೆ ಟಿ.ನರಸಿಪುರ (T Narasipura) ತಾಲೂಕಿನಲ್ಲಿ ನಡೆದಿದೆ.

    ಚೌಡಯ್ಯ (70), ಭರತ್ (13), ಧನುಷ್ (10) ಮೃತ ದುರ್ದೈವಿಗಳು. ಮೃತರು ಟಿ.ನರಸೀಪುರ ಪಟ್ಟಣದ ತಿರುಮಕೂಡಲಿನ ನಿವಾಸಿಗಳಾಗಿದ್ದು, ಕಾವೇರಿ ನದಿ ಬಳಿಗೆ ತೆರಳಿದ್ದ ವೇಳೆ ಘಟನೆ ಸಂಭವಿಸಿದೆ. ಇದನ್ನೂ ಓದಿ: ಜಮೀರ್ ಕಣ್ಣೀರು ಮತ್ತು 100 ಬಿರಿಯಾನಿ..!

    ಇಬ್ಬರು ಮೊಮ್ಮಕ್ಕಳು ನೀರಿನಲ್ಲಿ ಮುಳುಗಿದ್ದ ಹಿನ್ನೆಲೆ ತಾತ ಮಕ್ಕಳ ರಕ್ಷಣೆಗೆಂದು ತಾವೂ ನೀರಿಗಿಳಿದಿದ್ದರು. ಈ ವೇಳೆ ಇಬ್ಬರು ಮೊಮ್ಮಕ್ಕಳನ್ನು ರಕ್ಷಿಸಲಾಗದೇ ಚೌಡಯ್ಯ ಕೂಡ ಸಾವನ್ನಪ್ಪಿದ್ದಾರೆ. ಮೂವರ ಮೃತದೇಹಗಳನ್ನು ಟಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಟಿ.ನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಇನ್ಮುಂದೆ ಕಸಕ್ಕೂ ಶುಲ್ಕ – ತಿಂಗಳಿಗೆ ವಸತಿ, ವಾಣಿಜ್ಯ ಕಟ್ಟಡಗಳಿಗೆ ಎಷ್ಟು?

  • ಫೆ.10, 11, 12ರಂದು ಟಿ.ನರಸೀಪುರದಲ್ಲಿ ಕುಂಭಮೇಳ: ಹೆಚ್‌ಸಿ ಮಹದೇವಪ್ಪ

    ಫೆ.10, 11, 12ರಂದು ಟಿ.ನರಸೀಪುರದಲ್ಲಿ ಕುಂಭಮೇಳ: ಹೆಚ್‌ಸಿ ಮಹದೇವಪ್ಪ

    ಮೈಸೂರು: ಫೆ.11, 11 ಮತ್ತು 12ರಂದು ಮೂರು ನದಿಗಳ ಸಂಗಮದ ಸ್ಥಳವಾದ ಟಿ.ನರಸೀಪುರದಲ್ಲಿ (T Narasipura) ಕುಂಭಮೇಳ (Kumbh Mela) ನಡೆಯಲಿದೆ ಎಂದು ಉಸ್ತುವಾರಿ ಸಚಿವ ಹೆಚ್‌ಸಿ ಮಹದೇವಪ್ಪ (HC Mahadevappa) ಹೇಳಿದ್ದಾರೆ.

    ಟಿ.ನರಸೀಪುರದಲ್ಲಿ ಕುಂಭಮೇಳ ಹಿನ್ನೆಲೆ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಮೂರು ವರ್ಷಗಳಿಗೊಮ್ಮೆ ಕುಂಭಮೇಳ ಜರುಗಲಿದೆ. ಕುಂಭಮೇಳಕ್ಕೆ 10 ಕೋಟಿ ಪ್ರಸ್ತಾವನೆಯನ್ನು ಜಿಲ್ಲಾಡಳಿತ ಸಲ್ಲಿಸಿದೆ. ಕಳೆದ ಬಾರಿ 4 ಕೋಟಿ ಕೊಟ್ಟಿದ್ದರು. ಈ ಬಾರಿ 5 ರಿಂದ 6 ಕೋಟಿ ಸರ್ಕಾರ ಕೊಡಬಹುದು. ಮೂರು ದಿನಗಳ ಕಾಲ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು. ಇದನ್ನೂ ಓದಿ: ಬಿಜೆಪಿಯಲ್ಲಿ ತೀವ್ರಗೊಂಡ ಬಣ ಕಚ್ಚಾಟ – ವಸ್ತುಸ್ಥಿತಿ ವರದಿ ಪಡೆಯಲು ರಾಜ್ಯಕ್ಕೆ ಬಿಎಲ್ ಸಂತೋಷ್ ಎಂಟ್ರಿ

    ಪುಣ್ಯಸ್ನಾನಕ್ಕೆ ನೀವು ಭಾಗಿಯಾಗುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಡೈಲಿ ಪುಣ್ಯ ಸ್ನಾನ ಮಾಡುತ್ತಿದ್ದೇನೆ. ಧಾರ್ಮಿಕ ಆಚರಣೆಗಳಿಗೆ ವೈಯಕ್ತಿಕ ವಿರೋಧ ಇಲ್ಲ. ಅವರವರ ಧಾರ್ಮಿಕ ನಂಬಿಕೆ ಆಚರಿಸುವುದು ಸಂವಿಧಾನತ್ಮಕ ಹಕ್ಕು ಎಂದು ತಿಳಿಸಿದರು. ಇದನ್ನೂ ಓದಿ: ಒಂದೇ ವಾರದಲ್ಲಿ ಇಬ್ಬರಿಗೆ ಕೆಎಫ್‌ಡಿ ಸೋಂಕು – ಆತಂಕದಲ್ಲಿ ಕಾಫಿನಾಡ ಜನ

  • ಟಿ.ನರಸೀಪುರದಲ್ಲಿ 10 ಸ್ಫೋಟಕಗಳು ಪತ್ತೆ – ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ

    ಟಿ.ನರಸೀಪುರದಲ್ಲಿ 10 ಸ್ಫೋಟಕಗಳು ಪತ್ತೆ – ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ

    ಮೈಸೂರು: ಟಿ.ನರಸೀಪುರದ ( T.Narasipura) ಕೆಂಪಯ್ಯನಹುಂಡಿ ಗೇಟ್ ಬಳಿಯ ಹೋಟೆಲ್ ಸಮೀಪ 10 ಸ್ಫೋಟಕ ವಸ್ತುಗಳು ಪತ್ತೆಯಾಗಿವೆ.

    ಸ್ಫೋಟಕ ವಸ್ತುಗಳನ್ನು ಅಪರಿಚಿತರು ನೀಲಿ ಬಣ್ಣದ ಪ್ಲಾಸ್ಟಿಕ್ ಕವರ್‌ನಲ್ಲಿ ಇಟ್ಟು ಹೋಗಿದ್ದರು. ಸ್ಥಳೀಯರು ಹಾಗೂ ಹೋಟೆಲ್ ಸಿಬ್ಬಂದಿ ಅನುಮಾನಗೊಂಡು ನೋಡಿದಾಗ ಸ್ಫೋಟಕ ವಸ್ತುಗಳು ಎಂದು ತಿಳಿದು ಬಂದಿದೆ. ಬಳಿಕ ಹೋಟೆಲ್ ಸಿಬ್ಬಂದಿ ಪ್ಲಾಸ್ಟಿಕ್ ಕವರ್‍ನ್ನು ಪಕ್ಕದಲ್ಲಿರುವ ಮರಕ್ಕೆ ನೇತು ಹಾಕಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Kolkata Horror | 36 ಗಂಟೆಗಳ ಅಮಾನುಷ ಶಿಫ್ಟ್ ಸರಿಯಲ್ಲ ಎಂದ ಸುಪ್ರೀಂ – ಸುಳ್ಳುಪತ್ತೆ ಪರೀಕ್ಷೆಗೆ ಅಸ್ತು!

    ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಭೇಟಿ ನೀಡಿ ಸ್ಫೋಟಕಗಳಿದ್ದ ಕವರ್‌ನ್ನು ಪರಿಶೀಲಿಸಿದ್ದಾರೆ. ಈ ವೇಳೆ ಟ್ಯೂಬ್ ಆಕಾರದಲ್ಲಿರುವ 9 ಸ್ಪೋಟಕಗಳು ಮತ್ತು ಒಂದು ನಾಡ ಬಾಂಬ್ ಆಕಾರದ ವಸ್ತು ಪತ್ತೆಯಾಗಿದೆ. ಸ್ಫೋಟಕ ವಸ್ತುಗಳು ಕಲ್ಲು ಗಣಿಗಾರಿಕೆಗೆ ಹಾಗೂ ನಾಡ ಬಾಂಬ್ ಕಾಡು ಪ್ರಾಣಿಗಳ ಬೇಟೆಗೆ ಬಳಕೆಗೆ ಬಳಸಲಾಗುವ ವಸ್ತುಗಳಂತೆ ಕಂಡುಬಂದಿವೆ.

    ಪೊಲೀಸರು (Police) ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಬ್ರಿಜ್‌ ಭೂಷಣ್‌ ವಿರುದ್ಧ ಸಾಕ್ಷಿ ಹೇಳಲು ಹೊರಟಿದ್ದ ಮಹಿಳಾ ಕುಸ್ತಿಪಟುಗಳ ಭದ್ರತೆ ಹಿಂಪಡೆಯಲಾಗಿದೆ: ವಿನೇಶ್‌

  • ಧರ್ಮಕ್ಕಾಗಿಯೇ ನನ್ನ ಗಂಡನ ಕೊಲೆ ಆಗಿದೆ: ಯುವಬ್ರಿಗೇಡ್ ಕಾರ್ಯಕರ್ತನ ಪತ್ನಿ ಆರೋಪ

    ಧರ್ಮಕ್ಕಾಗಿಯೇ ನನ್ನ ಗಂಡನ ಕೊಲೆ ಆಗಿದೆ: ಯುವಬ್ರಿಗೇಡ್ ಕಾರ್ಯಕರ್ತನ ಪತ್ನಿ ಆರೋಪ

    ಮೈಸೂರು: ನನ್ನ ಗಂಡ ಹತ್ತು ಜನ ಬಂದರೂ ಹೆದರಲ್ಲ. ನನ್ನ ಗಂಡನ ಹತ್ಯೆ ವೈಯಕ್ತಿಕ ಕಾರಣಕ್ಕೆ ನಡೆದಿಲ್ಲ. ಧರ್ಮಕ್ಕಾಗಿಯೇ ನನ್ನ ಗಂಡನ ಕೊಲೆ ಆಗಿದೆ ಎಂದು ಯುವ ಬ್ರಿಗೇಡ್ (Yuva Brigade) ಕಾರ್ಯಕರ್ತ ದಿವಂಗತ ವೇಣುಗೋಪಾಲ್ (L.Venugopal) ಪತ್ನಿ ಪೂರ್ಣಿಮಾ ಆರೋಪಿಸಿದ್ದಾರೆ.

    ಮೈಸೂರಿನ (Mysuru) ಟಿ.ನರಸೀಪುರದಲ್ಲಿ (T.Narasipura) ಜುಲೈ 8ರಂದು ನಡೆದ ಹನುಮ ಜಯಂತಿ (Hanuma Jayanthi) ವೇಳೆ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಜಗಳ ನಡೆದಿದ್ದು, ಜಗಳದಲ್ಲಿ ಯುವಬ್ರಿಗೇಡ್ ಸಕ್ರಿಯ ಕಾರ್ಯಕರ್ತನಾಗಿದ್ದ ವೇಣುಗೋಪಾಲ್ ನಾಯಕ್ ಅವರನ್ನು ದುಷ್ಕರ್ಮಿಗಳು ಬಾಟಲಿಯಿಂದ ಇರಿದು ಹತ್ಯೆಗೈದಿದ್ದರು. ಇದನ್ನೂ ಓದಿ: ಕೇಂದ್ರ ಕೊಡುವ ಅಕ್ಕಿಯಲ್ಲೂ ಕಡಿತ; ಅನ್ನಭಾಗ್ಯವಲ್ಲ ಇದು ಕನ್ನ ಭಾಗ್ಯ – ಬೊಮ್ಮಾಯಿ

    ಈ ಕುರಿತು ಮಾತನಾಡಿದ ವೇಣುಗೋಪಾಲ್ ಪತ್ನಿ, ನಾನು, ವೇಣುಗೋಪಾಲ್ ಪ್ರೀತಿಸಿ ಮದುವೆ ಆಗಿದ್ದೆವು. ನಾವು ಮೂರು ವರ್ಷಗಳಿಂದ ಹನುಮ ಜಯಂತಿ ಆಚರಣೆ ಮಾಡುತ್ತಿದ್ದೇವೆ. ನನ್ನ ಗಂಡನ ಬಳಿ ಹಣ ಇಲ್ಲ, ಅಧಿಕಾರ ಇಲ್ಲ. ಆದರೂ ಅದ್ಧೂರಿಯಾಗಿ ಹನುಮ ಜಯಂತಿ ಆಚರಣೆ ಮಾಡಿದ್ದೆವು. ಅದನ್ನು ಸಹಿಸದೆ ಕೊಲೆ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಚಂದ್ರಯಾನ-3 ಯಶಸ್ವಿ ಆಗಲೆಂದು ತಿರುಪತಿಯಲ್ಲಿ ಪೂಜೆ ಸಲ್ಲಿಸಿದ ಇಸ್ರೋ ವಿಜ್ಞಾನಿಗಳು

    ನನ್ನ ಗಂಡನ ಸಾವಿಗೆ ನ್ಯಾಯ ಬೇಕು. ಇಲ್ಲವಾದರೇ ನಾನು ನನ್ನ ಮಗಳು, ಗಂಡ ಸತ್ತಂತೆಯೇ ಸಾಯುತ್ತೇವೆ. ಇಂದು ನನ್ನ ಗಂಡನನ್ನು ಸಾಯಿಸಿದ್ದಾರೆ. ಮುಂದಿನ ವರ್ಷ ನಾನು ಹನುಮ ಜಯಂತಿ ಮಾಡುತ್ತೇನೆ. ಆಗ ನನ್ನನ್ನು ಸಾಯಿಸುತ್ತಾರೆ. ಅದರ ಮುಂದಿನ ವರ್ಷ ನನ್ನ ಮಗಳು ಹನುಮ ಜಯಂತಿ ಮಾಡಿದರೆ ಆಗ ಅವಳನ್ನೂ ಸಾಯಿಸುತ್ತಾರೆ. ಅಲ್ಲಿಗೆ ಹಿಂದೂ ಧರ್ಮವೂ ಸಾಯುತ್ತದೆ. ನನ್ನ ಗಂಡನ ಏಳಿಗೆ ಸಹಿಸದೆ ಕೊಲೆ ಮಾಡಿದ್ದಾರೆ. ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ದೇಶವ್ಯಾಪಿ ಮುಂಗಾರು ಕುಂಠಿತ – ರಾಜ್ಯದ 25 ಜಿಲ್ಲೆಗಳಲ್ಲಿ ಮಳೆ ಕೊರತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟಿ.ನರಸೀಪುರದಲ್ಲಿ ಕೊನೆಗೂ ಚಿರತೆ ಸೆರೆ – ಸ್ಥಳದಲ್ಲೇ ಕೊಂದುಹಾಕಿ ಅಂತಾ ಜನರ ಪಟ್ಟು

    ಟಿ.ನರಸೀಪುರದಲ್ಲಿ ಕೊನೆಗೂ ಚಿರತೆ ಸೆರೆ – ಸ್ಥಳದಲ್ಲೇ ಕೊಂದುಹಾಕಿ ಅಂತಾ ಜನರ ಪಟ್ಟು

    ಮೈಸೂರು: ತಿ.ನರಸೀಪುರ (T.Narasipura) ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ತೋಟದ ಸಮೀಪ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಕೊನೆಗೂ ಚಿರತೆ ಸೆರೆ ಸಿಕ್ಕಿದೆ. ಸೆರೆಯಾಗಿರುವುದು 6 ವರ್ಷ ವಯಸ್ಸಿನ ಗಂಡು ಚಿರತೆ ಎಂದು ತಿಳಿದುಬಂದಿದೆ.

    ಗುರುವಾರ ಮುಂಜಾನೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಬೋನಿಗೆ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಅದನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಕುತೂಹಲದಿಂದ ನೆರೆದಿದ್ದರು. ಇದನ್ನೂ ಓದಿ: ಚಿರತೆ ದಾಳಿಗೆ 11ರ ಬಾಲಕ ಬಲಿ

    ತೋಟದಲ್ಲಿ ಸೆರೆ ಸಿಕ್ಕ ಚಿರತೆಯನ್ನು ಬೇರೆಡೆಗೆ ಸ್ಥಳಾಂತರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾದರು. ಆದರೆ ಇದಕ್ಕೆ ಗ್ರಾಮಸ್ಥರು ಅವಕಾಶ ನೀಡಲು ನಿರಾಕರಿಸಿದರು. ಚಿರತೆಯನ್ನು ಸ್ಥಳದಲ್ಲೇ ಕೊಲ್ಲುವಂತೆ ಜನರು ಪಟ್ಟು ಹಿಡಿದರು. ಇದರಿಂದಾಗಿ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

    “ಬೋನಿಗೆ ಬಿದ್ದ ಚಿರತೆಯನ್ನು ಕೊಲ್ಲುವ ನಿಯಮ ಇಲ್ಲ. ಪರಿಸ್ಥಿತಿಯನ್ನು ಅರಿತು ಚಿರತೆ ಸ್ಥಳಾಂತರಕ್ಕೆ ಅನುವು ಮಾಡಿಕೊಡಿ” ಎಂದು ಅರಣ್ಯಾಧಿಕಾರಿಗಳು ಜನರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. ನಂತರ ಅಧಿಕಾರಿಗಳ ಮಾತಿಗೆ ಜನರು ಸಮ್ಮತಿ ಸೂಚಿಸಿ, ಸ್ಥಳಾಂತರಕ್ಕೆ ಅವಕಾಶ ಮಾಡಿಕೊಟ್ಟರು. ಇದನ್ನೂ ಓದಿ: ಮೈಸೂರಿನಲ್ಲಿ ಚಿರತೆ ದಾಳಿಗೆ 3ನೇ ಬಲಿ – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನಾಕ್ರೋಶ

    ಹೊರಳಹಳ್ಳಿ ಗ್ರಾಮದಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಚಿರತೆ ದಾಳಿಗೆ ಬಾಲಕನೊಬ್ಬ ಬಲಿಯಾಗಿದ್ದ. ಇದಕ್ಕೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದರು. ಆದರೆ ಈಗ ಸೆರೆ ಸಿಕ್ಕಿರುವ ಚಿರತೆ, ಬಾಲಕನನ್ನು ಕೊಂದಿದ್ದೇ ಎಂಬುದು ಖಚಿತವಾಗಿಲ್ಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೈಸೂರಿನಲ್ಲಿ ಚಿರತೆ ದಾಳಿಗೆ 3ನೇ ಬಲಿ – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನಾಕ್ರೋಶ

    ಮೈಸೂರಿನಲ್ಲಿ ಚಿರತೆ ದಾಳಿಗೆ 3ನೇ ಬಲಿ – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನಾಕ್ರೋಶ

    ಮೈಸೂರು: ಟಿ.ನರಸೀಪುರ (T.Narasipura) ತಾಲೂಕಿನಲ್ಲಿ ಚಿರತೆ ಅಟ್ಟಹಾಸ ಮುಂದುವರಿದಿದ್ದು, ಚಿರತೆ (Leopard) ದಾಳಿಗೆ ಮೂರನೇ ಬಲಿಯಾಗಿದೆ. ತಾಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆ ಭೀತಿ ಮತ್ತಷ್ಟು ಹೆಚ್ಚಿದೆ.

    ಕನ್ನನಾಯಕನಹಳ್ಳಿ ಗ್ರಾಮದಲ್ಲಿ ಸಿದ್ದಮ್ಮ (60) ಎಂಬ ಮಹಿಳೆಯನ್ನು ಚಿರತೆ ಬಲಿ ಪಡೆದಿದೆ. ಮನೆಯಾಚೆಯಿದ್ದ ಸೌದೆ ಎತ್ತಿಕೊಳ್ಳಲು ಬಂದಿದ್ದ ವೇಳೆ ಮಹಿಳೆ ಮೇಲೆ ಚಿರತೆ ದಾಳಿ ಮಾಡಿದೆ. ನಂತರ ಸಿದ್ದಮ್ಮರನ್ನು ಎಳೆದೊಯ್ದಿದೆ. ಈ ವೇಳೆ ಗ್ರಾಮಸ್ಥರು ಕಿರುಚಾಡಿದ ಬೆನ್ನಲ್ಲೇ ಸ್ಥಳದಲ್ಲೇ ಮಹಿಳೆಯ ದೇಹ ಬಿಟ್ಟು ಪರಾರಿಯಾಗಿದೆ. ಇದನ್ನೂ ಓದಿ: ಮೈಸೂರಿನಲ್ಲಿ ಚಿರತೆ ದಾಳಿಗೆ ಎರಡನೇ ಬಲಿ – ಕಂಡಲ್ಲಿ ಗುಂಡು ಹಾರಿಸಲು ಅರಣ್ಯ ಇಲಾಖೆ ಸೂಚನೆ

    ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆ ನಡೆದು ಗಂಟೆಗಳು ಕಳೆದರೂ ಸ್ಥಳಕ್ಕೆ ಆಗಮಿಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

    ತಿಂಗಳ ಹಿಂದೆಯಷ್ಟೇ ಕುರಿ ಕಾಯುತ್ತಿದ್ದ ಹುಡುಗ ಹಾಗೂ ಕಾಲೇಜು ವಿದ್ಯಾರ್ಥಿನಿಯನ್ನು ಚಿರತೆ ಬಲಿ ಪಡೆದಿತ್ತು. ಇದರಿಂದ ಜನರು ಹೊರಗಡೆ ಓಡಾಡಲು ಭಯ ಪಡುತ್ತಿದ್ದರು. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆಯು ಚಿರತೆ ಕಂಡಲ್ಲಿ ಗುಂಡಿಕ್ಕಿ ಕೊಲ್ಲುವಂತೆ ಸೂಚಿಸಿತ್ತು. ಇದನ್ನೂ ಓದಿ: ಹಾಡಹಗಲೇ ಬೈಕ್ ಸವಾರನ ಮೇಲೆ ಎರಗಿದ ಚಿರತೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೈಸೂರಿನಲ್ಲಿ ಚಿರತೆ ದಾಳಿಗೆ ಎರಡನೇ ಬಲಿ – ಕಂಡಲ್ಲಿ ಗುಂಡು ಹಾರಿಸಲು ಅರಣ್ಯ ಇಲಾಖೆ ಸೂಚನೆ

    ಮೈಸೂರಿನಲ್ಲಿ ಚಿರತೆ ದಾಳಿಗೆ ಎರಡನೇ ಬಲಿ – ಕಂಡಲ್ಲಿ ಗುಂಡು ಹಾರಿಸಲು ಅರಣ್ಯ ಇಲಾಖೆ ಸೂಚನೆ

    ಮೈಸೂರು: ಟಿ ನರಸೀಪುರ (T Narasipura)  ತಾಲೂಕಿನಲ್ಲಿ ಚಿರತೆ (Leopard) ದಾಳಿಗೆ ಎರಡನೇ ಬಲಿಯಾದ ಬೆನ್ನಲ್ಲೇ ಚಿರತೆಗೆ ಕಂಡಲ್ಲಿ ಗುಂಡು ಹಾರಿಸಲು ಅರಣ್ಯ ಇಲಾಖೆಯ ಸೂಚನೆ ನೀಡಿದೆ.

    ಮೈಸೂರಿನಲ್ಲಿ ಕಳೆದ ಕೆಲ ತಿಂಗಳಿಂದ ಸಾರ್ವಜನಿಕರ ನಿದ್ದೆಗೆಡಿಸಿದ್ದ ಚಿರತೆ ಇದೀಗ ಎರಡನೇ ಬಲಿ ಪಡೆದಿದೆ. ನಿನ್ನೆ ಸಂಜೆ ಟಿ.ನರಸೀಪುರ ತಾಲೂಕಿನಲ್ಲಿ ಕಾಲೇಜು ಯುವತಿ ಮೇಲೆ ಚಿರತೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿತು. ಬಳಿಕ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಮೃತಪಟ್ಟಿದ್ದಾಳೆ. ಈ ಹಿಂದೆ ಕಳೆದ ತಿಂಗಳು ಯುವಕನೋರ್ವನನ್ನು ಚಿರತೆ ದಾಳಿ ನಡೆಸಿ ಕೊಂದು ಹಾಕಿತ್ತು. ಹಾಗಾಗಿ ಸಾರ್ವಜನಿಕರಿಂದ ತೀವ್ರ ಆಕ್ಷೇಪ ಕೇಳಿ ಬಂದ ಹಿನ್ನೆಲೆ ಅರಣ್ಯ ಇಲಾಖೆ ಚಿರತೆಗೆ ಕಂಡಲ್ಲಿ ಗುಂಡು ಹಾರಿಸಲು ಸೂಚಿಸಿದೆ. ಇದನ್ನೂ ಓದಿ: ಪಾರಿವಾಳ ಹಿಡಿಯಲು ಹೋಗಿ ಮಕ್ಕಳಿಬ್ಬರಿಗೆ ಕರೆಂಟ್ ಶಾಕ್ – ಸ್ಥಿತಿ ಚಿಂತಾಜನಕ

    ಚಿರತೆ ಕಂಡು ಬಂದಲ್ಲಿ ಗುಂಡು ಹಾರಿಸಲು ಡಿಸಿಎಫ್ ಕಮಲ ಕರಿಕಾಲನ್ ಸೂಚನೆ ಹೊರಡಿಸಿದ್ದಾರೆ. ಜೊತೆಗೆ ಚಿರತೆ ದಾಳಿಯಿಂದ ಮೃತಪಟ್ಟ ಯುವತಿಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ, ಕುಟುಂಬಕ್ಕೆ 5 ವರ್ಷಗಳ ಕಾಲ 2 ಸಾವಿರ ರೂ. ಮಾಸಾಶನ. ಕುಟುಂಬದ ಒಬ್ಬ ಸದಸ್ಯರಿಗೆ ಹೊರ ಗುತ್ತಿಗೆ ಆಧಾರದಡಿ ಕೆಲಸ ನೀಡಲು ಅರಣ್ಯ ಇಲಾಖೆ ಮುಂದಾಗಿದೆ. ಅಲ್ಲದೇ ಟಿ. ನರಸೀಪುರ ಎಫ್‍ಆರ್‌ಓಗೆ ಕಡ್ಡಾಯ ರಜೆ ನೀಡಿ ಈ ಬಗ್ಗೆ ತನಿಖೆ ನಡೆಸಲು ಆದೇಶ ಹೊರಡಿಸಿದ್ದು, ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ: ಕತ್ತು ಕೊಯ್ದು ವೃದ್ಧ ದಂಪತಿಯ ಬರ್ಬರ ಹತ್ಯೆ

    Live Tv
    [brid partner=56869869 player=32851 video=960834 autoplay=true]

  • ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ಮೇಳ – ಮೊದಲ ಬಾರಿಗೆ ಗಂಗಾರತಿ

    ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ಮೇಳ – ಮೊದಲ ಬಾರಿಗೆ ಗಂಗಾರತಿ

    ಮೈಸೂರು: ಜಿಲ್ಲೆಯ ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ 11ನೇ ಮಹಾಕುಂಭ ಮೇಳ ಆರಂಭವಾಗಿದ್ದು, 2ನೇ ದಿನವಾದ ಇಂದು ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.

    ನವಗ್ರಹ ಹೋಮ, ಸುದರ್ಶನ ಹೋಮ, ರುದ್ರ ಹೋಮ, ನದಿ ಪಾತ್ರದಲ್ಲಿ ಪುಣ್ಯ ಹೋಮಗಳು ನೆರವೇರಿಸಲಾಯಿತು. ಮಹಾಕುಂಭ ಮೇಳಕ್ಕೆ ಅಪಾರ ಪ್ರಮಾಣದಲ್ಲಿ ಭಕ್ತಗಣ ಬರುತ್ತಿದ್ದು, ಪುಣ್ಯಸ್ನಾನ ಮಾಡಿ ದೇವಿಯ ಅನುಗ್ರಹ ಪಡೆಯುತ್ತಿದ್ದಾರೆ.

    ವಾರಣಾಸಿಯಲ್ಲಿ ಗಂಗಾರತಿ ನಡೆಸುವ ತಂಡದಿಂದಲೇ ವಾರಣಾಸಿ ಮಾದರಿಯಲ್ಲಿ ನದಿ ಮಧ್ಯ (ತ್ರಿವೇಣಿ ಸಂಗಮದಲ್ಲಿ) ಆರತಿ ಪೂಜೆ ಮಾಡಲಾಯಿತು. ಈ ಮೂಲಕ ಇದೇ ಮೊದಲ ಬಾರಿಗೆ ತ್ರಿವೇಣಿ ಸಂಗಮದಲ್ಲಿ ಗಂಗಾರತಿ ಪೂಜೆ ನೆರವೇರಿತು. ಈ ವೇಳೆ ನದಿ ಮಧ್ಯೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

    ಸುತ್ತೂರು ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ನಿರ್ಮಲಾನಂದ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರು ಗಂಗಾ ಪೂಜೆಯನ್ನು ಕಣ್ತುಂಬಿಕೊಂಡರು. ಪತಿ ಸಿಎಂ ಕುಮಾರಸ್ವಾಮಿ ಅವರ ಜೊತೆಗೆ ಕುಳಿತು ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಗಂಗಾರತಿ ಕಾರ್ಯಕ್ರಮ ವೀಕ್ಷಿಸಿದರು. ಸಚಿವರಾದ ಜಿ.ಟಿ ದೇವೇಗೌಡ, ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು ಶಾಸಕರಾದ ಯತೀಂದ್ರ, ಅಶ್ವಿನ್ ಕುಮಾರ್ ಅವರು ಗಂಗಾ ಪೂಜೆಯಲ್ಲಿ ಭಾಗಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಿ. ನರಸೀಪುರ ತಹಸೀಲ್ದಾರ್ ನೇಣಿಗೆ ಶರಣು

    ತಿ. ನರಸೀಪುರ ತಹಸೀಲ್ದಾರ್ ನೇಣಿಗೆ ಶರಣು

    ಮೈಸೂರು: ತಿ.ನರಸೀಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಹಸೀಲ್ದಾರ್ ಬಿ.ಶಂಕರಯ್ಯ(50) ವಸತಿ ಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ತಿ.ನರಸೀಪುರ ಪಟ್ಟಣದಲ್ಲಿರುವ ವಸತಿಗೃಹದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಿಂದೆ ಪಾಂಡವಪುರ ತಾಲೂಕಿನಲ್ಲಿ ತಹಸೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದ ಶಂಕರಯ್ಯ ಕಳೆದ ಒಂದು ವರ್ಷದಿಂದ ತಿ.ನರಸೀಪುರ ತಾಲೂಕಿಗೆ ವರ್ಗಾವಣೆಯಾಗಿದ್ದರು.

    ವಸತಿ ಗೃಹದಲ್ಲಿ ಸಕಲ ಸೌಕರ್ಯಗಳಿದ್ದರೂ ಕುಟುಂಬದವರನ್ನು ಕರೆ ತಂದಿರಲಿಲ್ಲ. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ವಸತಿ ಗೃಹದಲ್ಲಿ ವಾಸವಿರುತ್ತಿದ್ದ ಶಂಕರಯ್ಯ ಸಾಮಾನ್ಯವಾಗಿ ಮಂಡ್ಯದಲ್ಲಿರುವ ನಿವಾಸದಿಂದಲೇ ಬಂದು ಹೋಗುತ್ತಿದ್ದರು.

    ಶಂಕರಯ್ಯ ಹಾಗೂ ಪುಷ್ಪಲತಾ ಅಂತರ್ಜಾತಿ ವಿವಾಹವಾಗಿದ್ದು ಸಂಸಾರದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಶಂಕರಯ್ಯ ಪತ್ನಿ ಪುಷ್ಪಲತಾ ವಕೀಲ ವೃತ್ತಿಯಲ್ಲಿದ್ದಾರೆ. ಮೊದಲ ಪುತ್ರ ಸುಮನ್ ಎಂಜಿನಿಯರ್ ಓದಿದ್ದರೆ, ಎರಡನೇ ಪುತ್ರ ನಂದೀಶ್ ಮೈಸೂರಿನಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ. ಪುತ್ರಿ ನಂದಿನಿಗೆ ಮದುವೆ ಫಿಕ್ಸ್ ಆಗಿತ್ತು.

    ಶಂಕರಯ್ಯ ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಶವದ ಮರಣೋತ್ತರ ಪರೀಕ್ಷೆಯ ಫಲಿತಾಂಶ ಲಭ್ಯವಾಗಬೇಕಿದೆ.