Tag: T.A Sharavana

  • ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ ಸರ್ಕಾರದ ಹತ್ಯಾಕಾಂಡ: ಶರವಣ

    ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ ಸರ್ಕಾರದ ಹತ್ಯಾಕಾಂಡ: ಶರವಣ

    ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ ಸರ್ಕಾರದಿಂದ ಆದ ಹತ್ಯಾಕಾಂಡ. ಇದಕ್ಕೆ ಸರ್ಕಾರವೇ ಹೊಣೆ. ಸಿಎಂ, ಡಿಸಿಎಂ, ಗೃಹ ಸಚಿವರು ರಾಜೀನಾಮೆ ಕೊಡಬೇಕು ಎಂದು ಜೆಡಿಎಸ್ MLC ಶರವಣ (T.A.Sharavana) ಆಗ್ರಹಿಸಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ಕುಸಿದಿದೆ. ಅರಾಜಕತೆ ತಾಂಡವ ಆಡ್ತಿದೆ. ಯಾವ ರೀತಿ ಆಡಳಿತ ನಡೆಯುತ್ತಿದೆ ಅಂತ ಚಿನ್ನಸ್ವಾಮಿ ಘಟನೆಯಿಂದ ಗೊತ್ತಾಗಿದೆ. 11 ಜನರ ಸಾವಾಗಿದೆ. ಅಷ್ಟು ಬೇಗ ಯಾಕೆ ಕಾರ್ಯಕ್ರಮ ಮಾಡಬೇಕಿತ್ತು. ಭಾರತ ಚಾಂಪಿಯನ್ಸ್‌ ಟ್ರೋಫಿ ಗೆದ್ದಾಗಲೂ ಸಮಯ ತಗೊಂಡು ಕಾರ್ಯಕ್ರಮ ಮಾಡಿದ್ರು. ಸಿಎಂ, ಡಿಸಿಎಂ, ಗೃಹ ಸಚಿವರು ಇದಕ್ಕೆ ಹೊಣೆ. ಡಿಸಿಎಂ ಡಿಕೆ ಶಿವಕುಮಾರ್ ಜನರಿಗೆ ಆಹ್ವಾನ ಮಾಡಿದ್ರು. ಯಾಕೆ ಆಹ್ವಾನ ಕೊಟ್ರಿ. ವಿಧಾನಸೌಧದಲ್ಲಿ ಕಾರ್ಯಕ್ರಮ ಬೇಡ ಅಂತ ಪೊಲೀಸರು ಪತ್ರ ಬರೆದಿದ್ದರು. ಯಾಕೆ ಕಾರ್ಯಕ್ರಮ ಮಾಡಿದ್ರಿ. ಜನಕ್ಕೆ ಬನ್ನಿ ಅಂದ್ರಿ, ಕಪ್‌ಗೆ ಮುತ್ತು ಕೊಟ್ಟವರು ಡಿಕೆಶಿ. ಪರಮೇಶ್ವರ್ ಅನುಭವ ಇರೋ ಮಂತ್ರಿ. ನಿಮಗೂ ಮಾಹಿತಿ ಇಲ್ಲ ಅಂತೀರಾ. ಹಾಗಾದ್ರೆ ನೀವು ಈ ಜಾಗದಲ್ಲಿ ಇರೋದಕ್ಕೆ ಏನು ನೈತಿಕತೆ ಇದೆ. ಸಿಎಂ ವೈಫಲ್ಯ ಅಂತ ಒಪ್ಪಿದ್ದಾರೆ. ಅವರು ಕೂಡ ರಾಜೀನಾಮೆ ಕೊಡಬೇಕು ಎಂದರು. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ; ತನಿಖಾ ಆಯೋಗದ ಮುಂದೆ ಮಾಹಿತಿ ಕೊಡ್ತೀವಿ – ಪರಮೇಶ್ವರ್

    ಡಿಸಿಎಂ ಅವರು ಜನರು ಸತ್ತಿದ್ದಾರೆ ಅಂತ ಗೊತ್ತಿದ್ದರೂ ಸೆಲೆಬ್ರೇಷನ್‌ನಲ್ಲಿ ಭಾಗಿಯಾಗಿದ್ರು. ಹತ್ಯಾಕಾಂಡ ಈ ರಾಜ್ಯದಲ್ಲಿ ನಡೆದಿದೆ. ಇದಕ್ಕೆ ಸರ್ಕಾರ ಹೊಣೆ. 25 ಲಕ್ಷ ಕೊಟ್ಟರೂ ಸತ್ತವರು ವಾಪಸ್ ಬರೊಲ್ಲ. ಇದನ್ನ ಪ್ರಶ್ನೆ ಮಾಡಿದ್ರೆ ಕುಂಭಮೇಳದ ಬಗ್ಗೆ ಮಾತಾಡ್ತಾರೆ ಕಾಂಗ್ರೆಸ್‌ನವರು. ನಮ್ಮ ರಾಜ್ಯದಲ್ಲಿ ಇಂತಹ ದುರಾಡಳಿತ ನಡೆಯುತ್ತಿದೆ‌. ಕರ್ನಾಟಕದ ಇತಿಹಾಸದಲ್ಲಿ ಇದು ಮರೆಯಲಾಗದ ಘಟನೆ. ಕಾಂಗ್ರೆಸ್ ಹೈಕಮಾಂಡ್ ಇದರ ಬಗ್ಗೆ ಮಾತಾಡಬೇಕು. ರಾಹುಲ್ ಗಾಂಧಿ ಈ ಬಗ್ಗೆ ಮಾತಾಡಬೇಕು. ರಾಜ್ಯದಲ್ಲಿ ಸರ್ಕಾರದ ವ್ಯವಸ್ಥೆ ಸರಿಯಾಗಿ ನಡೆಯುತ್ತಿಲ್ಲ. ಸಿಎಂ ಹಿಡಿತದಲ್ಲಿ ಆಡಳಿತ ವ್ಯವಸ್ಥೆ ‌ಇಲ್ಲ. ಎರಡು ಬಾರಿ ಸಿಎಂ ಆದವರಿಂದ ಆಡಳಿತ ನಿಯಂತ್ರಣ ತಪ್ಪಿದೆ. ನಿಮಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ಇಲ್ಲ ಅಂದರೆ ಈ ಸ್ಥಾನದಲ್ಲಿ ಇರಲು ಸಾಧ್ಯವಿಲ್ಲ. ರಾಜ್ಯದಲ್ಲಿ ತುಘಲಕ್ ಸರ್ಕಾರ ನಡೆಯುತ್ತಿದೆ. ಸಿಎಂ, ಡಿಸಿಎಂ, ಗೃಹ ಸಚಿವರಿಗೆ ಆಡಳಿತ ಮಾಡಲು ಆಗದೇ ಹೋದ್ರೆ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಕಿಡಿಕಾರಿದರು.

    ಸರ್ಕಾರ ಅನುಮತಿ ಕೊಟ್ಟಿಲ್ಲ ಅಂದರೆ ಡಿಸಿಎಂ ಡಿಕೆ ಶಿವಕುಮಾರ್ ಯಾಕೆ ಹೋದ್ರು. ಕಪ್‌ಗೆ ಮುತ್ತು ಕೊಟ್ರು. ಮಕ್ಕಳು, ಮೊಮ್ಮಕ್ಕಳನ್ನ ಯಾಕೆ ಕರೆದುಕೊಂಡು ಹೋಗಿದ್ರಿ. ಇದು ವಿಜಯೋತ್ಸವ ಅಲ್ಲ. ಮರಣೋತ್ಸವ ಆಗಿದೆ. ನಾವೆಲ್ಲರು ತಲೆ ತಗ್ಗಿಸೋ ಕೆಲಸ ಆಗಿದೆ. ಸತ್ತವರ ಕುಟುಂಬ ನೋವು ಗೊತ್ತಿದೆಯಾ? ಕುನ್ಹಾ ನೇತೃತ್ವದ ತನಿಖೆ ಆಗ್ತಿದೆ, ಆಗಲಿ. ಪ್ರಾಮಾಣಿಕ ಅಧಿಕಾರಿಗಳನ್ನ ಅಮಾನತು ಮಾಡಿದ್ದೀರಾ? ಯಾಕೆ ಅಮಾನತು ಮಾಡಿದ್ರಿ? ತೆಲಂಗಾಣದಲ್ಲಿ ಅಲ್ಲು ಅರ್ಜುನ್‌ರನ್ನ ಬಂಧನ ಮಾಡ್ತಾರೆ. ನಮ್ಮಲ್ಲಿ ಯಾಕೆ ಇದು ಆಗಲಿಲ್ಲ. ನಿಮಗೆ ಶಿಕ್ಷೆ ಇಲ್ಲವಾ? ಸಿದ್ದರಾಮಯ್ಯ ಅವರು ನನಗೇನು ಗೊತ್ತಿಲ್ಲ ಅಂತ ಮುಂದುವರಿಸಿಕೊಂಡು ಹೋಗ್ತಿದ್ದಾರೆ. ಈ ಸರ್ಕಾರ ಈ ರಾಜ್ಯವನ್ನು ಬಿಟ್ಟು ಹೋಗಬೇಕು. ಸಿಎಂ, ಡಿಸಿಎಂ, ಗೃಹ ಸಚಿವರು ರಾಜೀನಾಮೆ ಕೊಡಬೇಕು. ಜನರು ಇದನ್ನೇ ಬಯಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದು ನೀಚ ಸರ್ಕಾರ. ನೀವು ಮಾಡಿದ ತಪ್ಪಿಗೆ ಬಲಿಯಾಗಬೇಕು. ಕಾಂಗ್ರೆಸ್ ಹೈಕಮಾಂಡ್ ಯಾರನ್ನ ಬಲಿ ಕೊಡುತ್ತದೆಯೋ ನೋಡೋಣ ಎಂದರು. ಇದನ್ನೂ ಓದಿ: ನೀವು ರಾಜ್ಯದ ಮುಖ್ಯಮಂತ್ರಿಗಳೋ or ವಿಧಾನಸೌಧ ಮೆಟ್ಟಿಲುಗಳ ಮುಖ್ಯಮಂತ್ರಿಗಳೋ: ಸಿದ್ದರಾಮಯ್ಯಗೆ ಹೆಚ್‌ಡಿಕೆ ಟಾಂಗ್‌

  • ಕರ್ನಾಟಕದ ಶಾಸಕರಿಗೆ ತಿರುಪತಿಯಲ್ಲಿ ದರ್ಶನ ಭಾಗ್ಯ ಕೊಡಿಸಿ: ಟಿ.ಎ.ಶರವಣ ಮನವಿ

    ಕರ್ನಾಟಕದ ಶಾಸಕರಿಗೆ ತಿರುಪತಿಯಲ್ಲಿ ದರ್ಶನ ಭಾಗ್ಯ ಕೊಡಿಸಿ: ಟಿ.ಎ.ಶರವಣ ಮನವಿ

    ಬೆಂಗಳೂರು: ಕರ್ನಾಟಕದ ಶಾಸಕರಿಗೆ ತಿರುಪತಿಯಲ್ಲಿ ದರ್ಶನ ಭಾಗ್ಯ ಕಲ್ಪಿಸಬೇಕು ಅಂತ ವಿಧಾನ ಪರಿಷತ್ ಶರವಣ ಸರ್ಕಾರವನ್ನ ಆಗ್ರಹ ಮಾಡಿದರು. ಶಾಸಕರಿಗೆ ವಾರದಲ್ಲಿ ಮೂರು ದಿನ ದರ್ಶನ ಮಾಡೋ ವ್ಯವಸ್ಥೆ ತಿರುಪತಿಯಲ್ಲಿ ಕಲ್ಪಿಸಬೇಕು ಅಂತ ಸರ್ಕಾರಕ್ಕೆ ಆಗ್ರಹಿಸಿದರು.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಪ್ರಶ್ನೆ ಕೇಳಿದ ಶರವಣ, ತಿರುಪತಿಯಲ್ಲಿ ಕರ್ನಾಟಕ ಭವನ ಅತಿಥಿ ಗೃಹ ಅವ್ಯವಸ್ಥೆಯಿಂದ ಕೂಡಿದೆ. ಅದರ ನಿರ್ವಹಣೆ ಸರಿಯಾಗಿ ಮಾಡ್ತಿಲ್ಲ. 51 ಜನ ಸಿಬ್ಬಂದಿ ಇದ್ದರು ಯಾವುದೇ ನಿರ್ವಹಣೆ ಮಾಡುತ್ತಿಲ್ಲ. ಸಿಬ್ಬಂದಿಗಳಿಗೆ ಸಮವಸ್ತ್ರ ಕೊಡಿ. ಹಾಜರಾತಿ ಕಡ್ಡಾಯ ಮಾಡಬೇಕು. ಕರ್ನಾಟಕ ಭವನದಲ್ಲಿ ಅನ್ನ ದಾಸೋಹ ನಿಲ್ಲಿಸಿದ್ದಾರೆ. ಅದನ್ನ ಪುನರ್ ಪ್ರಾರಂಭ ಮಾಡಬೇಕು ಅಂತ ಒತ್ತಾಯಿಸಿದರು.

    ತಿರುಪತಿಯಲ್ಲಿ ಕರ್ನಾಟಕದಿಂದ ಯಾವುದೇ ಶಾಸಕರಿಗೆ ದರ್ಶನ ಭಾಗ್ಯ ಸಿಗ್ತಿಲ್ಲ. ತಿರುಪತಿಯಲ್ಲಿ ದರ್ಶನ ಭಾಗ್ಯ ಬೇಕು ಅಂತ ತೆಲಂಗಾಣದ ಶಾಸಕರು ಆಂಧ್ರಪ್ರದೇಶದ ಸಿಎಂ ಅವರನ್ನ ಭೇಟಿ ಮಾಡಿ ಸರ್ಕಾರಿ ಆದೇಶ ಮಾಡಿಸಿಕೊಂಡಿದ್ದಾರೆ. ಅದರಂತೆ ಕರ್ನಾಟಕದ ಶಾಸಕರ ನಿಯೋಗ ಆಂಧ್ರಪ್ರದೇಶದ ಸಿಎಂ ಅವರನ್ನು ಭೇಟಿಯಾಗಿ ದರ್ಶನ ಭಾಗ್ಯ ಕಲ್ಪಿಸಬೇಕು ಅಂತ ಮನವಿ ಮಾಡಿದರು.

    ಕಾಶಿಯಲ್ಲಿ ನಮ್ಮ ಅತಿಥಿ ಗೃಹ ನೂರು ವರ್ಷ ಆಗಿದೆ ಅಂತ ಕಟ್ಟಡ ನೆಲಸಮ ಮಾಡಿದ್ದಾರೆ. ಆದಷ್ಟು ಬೇಗ ಕಾಶಿಯಲ್ಲಿ ಅತಿಥಿ ಗೃಹ ಕೆಲಸ ಪ್ರಾರಂಭ ಮಾಡಬೇಕು ಅಂತ ಒತ್ತಾಯಿಸಿದರು.

    ಇದಕ್ಕೆ ಸಚಿವ ರಾಮಲಿಂಗಾರೆಡ್ಡಿ ಉತ್ತರ ನೀಡಿ, ತಿರುಪತಿಯಲ್ಲಿ ಕರ್ನಾಟಕ ಭವನದ ನವೀಕರಣ ಕೆಲಸ ಆಗ್ತಿದೆ. ಈಗಾಗಲೇ ಒಂದು ಭವನದ ಕೆಲಸ ಮುಗಿದು ಉದ್ಘಾಟನೆ ಆಗಿದೆ. ಬಾಕಿ ಕಾಮಗಾರಿಗಳನ್ನ ಮೇ ನಲ್ಲಿ ಮುಕ್ತಾಯ ಮಾಡುತ್ತೇವೆ. ಈಗ ಭವನ ನಿರ್ವಹಣೆ ಮಾಡಲು ತಾತ್ಕಾಲಿಕ ವ್ಯವಸ್ಥೆ ಮಾಡಿದ್ದೇವೆ. ಎಲ್ಲಾ ‌ಕಾಮಗಾರಿ ಮುಗಿದ ಮೇಲೆ 4 ಸ್ಟಾರ್ ಮಾದರಿಯಲ್ಲಿ ವ್ಯವಸ್ಥೆ ಮಾಡೋ ಕೆಲಸ ಮಾಡ್ತೀವಿ. ಸಿಬ್ಬಂದಿಗಳಿಗೆ ಸಮವಸ್ತ್ರ ಕಡ್ಡಾಯ ಮಾಡೋ ವ್ಯವಸ್ಥೆ ಮಾಡ್ತೀವಿ. ಕರ್ನಾಟಕ ಭವನದ 60% ರೂಂ ಯಾರು ಬೇಕಾದ್ರು ಬುಕ್ ಮಾಡಿಕೊಳ್ಳಬಹುದು.40% ಕರ್ನಾಟಕದವರಿಗೆ ಮೀಸಲು ಇರಲಿದೆ ಅಂತ ತಿಳಿಸಿದರು.

    ಕಾಶಿಯಲ್ಲಿ ಕರ್ನಾಟಕ ಭವನ ನೂರು ವರ್ಷ ಆಗಿರೋದ್ರಿಂದ ಕಟ್ಟಡ ತೆಗೆಯಲಾಗಿದೆ. ಹೊಸ ಕಟ್ಟಡಕ್ಕೆ 36 ಕೋಟಿ ಹಣ ಬೇಕು.ಹೊಸ ಕಟ್ಟಡ ನಿರ್ಮಾಣದ ಕೆಲಸ ಆದಷ್ಟು ಬೇಗ ಪ್ರಾರಂಭ ಮಾಡ್ತೀವಿ ಅಂತ ಭರವಸೆ ನೀಡಿದರು.

  • ಬರೀ ಪುಸ್ತಕದ ಲೆಕ್ಕಾಚಾರದ ಜೊಳ್ಳು ಬಜೆಟ್: ಶರವಣ

    ಬರೀ ಪುಸ್ತಕದ ಲೆಕ್ಕಾಚಾರದ ಜೊಳ್ಳು ಬಜೆಟ್: ಶರವಣ

    ಬೆಂಗಳೂರು: ರಾಜ್ಯದ ಸಮಗ್ರ ಮೂಲಭೂತ ಅಭಿವೃದ್ಧಿಗೆ ಒತ್ತು ನೀಡದೇ, ರೈತರ ಸಾಲಾ ಯೋಜನೆಯನ್ನು ಹೆಚ್ಚಿನ ಸಂಖ್ಯೆಯ ರೈತರಿಗೆ ವಿಸ್ತರಿಸದೇ, ಯಥಾಸ್ಥಿತಿ ವಾದವನ್ನು ಪ್ರತಿಪಾದಿಸುವ ಬರೀ ಪುಸ್ತಕದ ಲೆಕ್ಕಾಚಾರದ ಜೊಳ್ಳು ಬಜೆಟ್ ಎಂದು ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ಕುರಿತು  ಜೆಡಿಎಸ್ ಹಿರಿಯ ನಾಯಕ ಟಿ.ಎ ಶರವಣ ಗೇಲಿ ಮಾಡಿದ್ದಾರೆ.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್ ಇಲಾಖಾವಾರು ವಿವರ ನೀಡದೇ ಕೇವಲ ಅಂಕಿ ಅಂಶಗಳ ಚಮತ್ಕಾರ ಮಾಡುವ ಬಜೆಟ್ ಆಗಿದೆ. ಕೃಷಿ, ಕೈಗಾರಿಕೆ, ಸಮಾಜಕಲ್ಯಾಣ, ಶಿಕ್ಷಣ, ನೀರಾವರಿ, ಈ ಪ್ರಮುಖ ವಲಯದಲ್ಲಿ ಯಾವುದೇ ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗದೇ, ಇರುವ ಯೋಜನೆಗಳಿಗೆ ಹಣ ಹೊಂದಾಣಿಕೆ ಮಾಡಲಾಗಿದೆ ಟೀಕಿಸಿದ್ದಾರೆ. ಇದನ್ನೂ ಓದಿ: ಇದೊಂದು ನಿರಾಶಾದಾಯಕ ಬಜೆಟ್: ದಿನೇಶ್ ಗೂಳಿಗೌಡ

    ವಿಧವೆಯರಿಗೆ ಮತ್ತು ವಯೋವೃದ್ಧರಿಗೆ ಹೆಚ್ಚಿಸಿರುವ ಪಿಂಚಣಿ, ಏನೇನೂ ಸಾಲದಾಗಿದ್ದು, ಕನಿಷ್ಠ ಒಂದು ಸಾವಿರ ರೂ.ಗೆ ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ. ಅಂಗನವಾಡಿ ನೌಕರರು, ಬಿಸಿಯೂಟ ನೌಕರರು, ಅವರಿಗೆ ಹೆಚ್ಚಿಸಿರುವ ಗೌರವ ಕೂಡ, ಅತ್ಯಂತ ಕಡಿಮೆಯಾಗಿದ್ದು, ಸರಾಸರಿ 2 ಸಾವಿರ ರೂ. ಗಳನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಲ್ಪ ಸಂಖ್ಯಾತರಿಗೆ ಈ ಬಜೆಟ್ ನಲ್ಲಿ, ಸಿಕ್ಕಿರುವುದು ಬರೀ ಶೂನ್ಯ ಮಾತ್ರ. ಮೇಕೆದಾಟು ಯೋಜನೆಗೆ, ತುಂಗಭದ್ರಾ ಹೂಳೆತ್ತುವ ಯೋಜನೆ, ಮಹದಾಯಿ ಯೋಜನೆ, ಈ ಯೋಜನೆಗಳಿಗೆ ಸರ್ಕಾರ ನಿಗದಿ ಪಡಿಸಿರುವ ಹಣ ಕಣ್ಣೊರೆಸುವ ತಂತ್ರವಾಗಿದೆ. ಇದರಲ್ಲಿ 2 ಯೋಜನೆಗಳ ವಿವಾಧ ನ್ಯಾಯಾಲಯ ಮತ್ತು ಟ್ರಿಬ್ಯೂನಲ್ ನಲ್ಲಿದ್ದು, ಅವು ಇತ್ಯರ್ಥವಾಗುವವರೆಗೆ ಹಣ, ಬಿಡುಗಡೆ ಮಾಡಬೇಕಿಲ್ಲ ಎಂದು ಗೊತ್ತಿದ್ದರೂ, ಬಜೆಟ್‍ನಲ್ಲಿ ಹಣ ಘೋಷಿಸಿರುವುದು ಹಾಸ್ಯಾಸ್ಪದವಾಗಿದೆ ಎಂದಿದ್ದಾರೆ. ಇದನ್ನೂ ಓದಿ: Karnataka Budget: ತವರು ಜಿಲ್ಲೆಗೆ 15 ಕಾರ್ಯಕ್ರಮಗಳನ್ನು ಘೋಷಿಸಿದ ಸಿಎಂ

    ಬಿ ಖಾತೆಯನ್ನು ಎ ಖಾತೆಯನ್ನಾಗಿ ಬದಲಾಯಿಸವು ಕೈಗೊಂಡಿರುವಂತ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾಗಿದೆ. ಆದರೆ ಈ ಪ್ರಕ್ರಿಯೆಯನ್ನು ಸಾಧ್ಯವಾದಷ್ಯು ಸರಳೀಕರಣಗೊಳಿಸುವಂತೆ ಅವರು ಸರ್ಕಾರಕ್ಕೆ ವಿನಂತಿಸಿದ್ದಾರೆ. ಕಾರ್ಮಿಕರಿಗೆ, ಕೃಷಿ ಕೂಲಿಕಾರರಿಗೆ, ಸರ್ಕಾರದಿಂದ ಯಾವುದೇ ನೆರವು ಘೋಷಿಸಿಲ್ಲ ಎಂದು ವಿಷಾದಿಸಿದ್ದಾರೆ.

  • 2023 ರಲ್ಲಿ ಜೆಡಿಎಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತೆ, ಇದು ದೈವದ ಆಟ: ಶರವಣ

    2023 ರಲ್ಲಿ ಜೆಡಿಎಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತೆ, ಇದು ದೈವದ ಆಟ: ಶರವಣ

    – ಭೈರತಿ ಸುರೇಶ್‍ರೊಂದಿಗೆ ಜಮೀರ್ ಡೀಲ್ ಮಾಡಿಕೊಂಡಿದ್ರು
    – ಜಮೀರ್ ಸಿಎಂ ಅಭ್ಯರ್ಥಿ ಅಂತ ಘೋಷಣೆ ಮಾಡಿ

    ಬೆಂಗಳೂರು: 2023 ರಲ್ಲಿ ಜೆಡಿಎಸ್ ಪಕ್ಷ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತೆ. ಇದು ದೈವದ ಆಟ ಯಾರು ಇದನ್ನು ತಡೆಯೋಕೆ ಆಗುವುದಿಲ್ಲ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ನಮ್ಮ ಟಾರ್ಗೆಟ್ 123. ನಾವು ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಜೆಡಿಎಸ್ ವಕ್ತಾರ ಟಿ.ಎ ಶರವಣ ಭವಿಷ್ಯ ನುಡಿದಿದ್ದಾರೆ.

    ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಸಿದ್ದರಾಮಯ್ಯಗೆ 5 ಪ್ರಶ್ನೆ ಕೇಳಿದ್ರು. ಆದ್ರೆ ಯಾವುದಕ್ಕೂ ಉತ್ತರ ಕೊಟ್ಟಿಲ್ಲ. ಕಾಂಗ್ರೆಸ್‍ಗೆ ಅಲ್ಪಸಂಖ್ಯಾತರ ಬಗ್ಗೆ ಮಾತಾಡೋ ನೈತಿಕತೆ ಇಲ್ಲ. ಸಿದ್ದರಾಮಯ್ಯ ಉತ್ತರ ಕೊಡೋ ಬದಲಾಗಿ ಕುಮಾರಸ್ವಾಮಿ ಮೇಲೆ ವೈಯಕ್ತಿಕವಾಗಿ ಅಟ್ಯಾಕ್ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಿಮ್ಮ ಹೊಟ್ಟೆಕಿಚ್ಚಿನಿಂದ ಹಾಳಾಗ್ತಿರೋದು ನೀವೇ ಸಿದ್ದರಾಮಯ್ಯ ಅಲ್ಲ – ಹೆಚ್‍ಡಿಕೆ ವಿರುದ್ಧ ಜಮೀರ್ ಗುಡುಗು

    ಡೀಲ್ ಮಾಡಿದ್ದು ಯಾರು?
    ಭೈರತಿ ಸುರೇಶ್ ಅವರನ್ನು ಎಂಎಲ್‍ಸಿ ಮಾಡೋಣ ಎಂದು ಜಮೀರ್ ಅಹ್ಮದ್ ಹೇಳಿದ್ರು. ಆದ್ರೆ ಅವತ್ತು ಅವ್ರ ಕುಲಬಾಂಧವರನ್ನು ಗೆಲ್ಲಿಸಬೇಕು ಅಂತ ಜಮೀರ್‍ಗೆ ಅನ್ನಿಸಿಲ್ಲವಾ? ಭೈರತಿ ಸುರೇಶ್‍ರೊಂದಿಗೆ ಜಮೀರ್ ಡೀಲ್ ಮಾಡಿಕೊಂಡಿದ್ರು. ಇವತ್ತು ಸಮುದಾಯ ಬಗ್ಗೆ ಪ್ರೀತಿ ಉಕ್ಕಿ ಬರುತ್ತಿದೆ. ಇದಕ್ಕೆ ಜಮೀರ್ ಉತ್ತರ ಕೊಡಬೇಕು. ವಿಧಾನಸೌಧದ ಒಳಗೆ ಜಮೀರ್ ಅವರನ್ನು ಬಿಟ್ಟಿರಲಿಲ್ಲ. ಕುಮಾರಸ್ವಾಮಿ ಅವತ್ತು ನಿಮ್ಮ ಹೆಗಲ ಮೇಲೆ ಕೈ ಹಾಕಿ ಎಂಎಲ್‍ಎ ಮಾಡ್ತೀನಿ ಅಂತ ಕರೆದುಕೊಂಡು ಬಂದಿದ್ದರು. ನಿಮ್ಮ ಮೂಲ ಬೇರು ಯಾವುದು? ಅದನ್ನು ಮರೆತು ಹೋದ್ರಾ? ಅಂದು ಕುಮಾರಸ್ವಾಮಿ ಅವರನ್ನು ಇಂದ್ರ, ಚಂದ್ರ ಸರ್ವಸ್ವ ಅಂತ ಹೇಳಿದ್ರು. ಇವತ್ತು ಅವ್ರ ವಿರುದ್ಧ ಮಾತಾಡ್ತೀರಾ? ಜಮೀರ್‍ಗೆ ತಾಕತ್ ಇದ್ದರೆ ಕಾಂಗ್ರೆಸ್‍ನಲ್ಲಿ ಅಲ್ಪಸಂಖ್ಯಾತರಿಗೆ ಸಿಎಂ ಸ್ಥಾನ ಎಂದು ಘೋಷಣೆ ಮಾಡಿಸಲಿ. ಅಥವಾ ಡಿಸಿಎಂ ಸ್ಥಾನ ಘೋಷಣೆ ಮಾಡಲಿ ಅದು ಇಲ್ಲವೆಂದಿದ್ದರೆ ಪರಿಷತ್ ವಿಪಕ್ಷ ಸ್ಥಾನ ಇಬ್ರಾಹಿಗೆ ಕೊಡಲಿ ನೋಡೋಣ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಕುಮಾರಸ್ವಾಮಿ ಒಬ್ಬ ಡೀಲರ್: ಜಮೀರ್ ವಾಗ್ದಾಳಿ

    ಯಾವುದರಲ್ಲಿ ಎಷ್ಟು ಡೀಲ್ ಮಾಡಿದ್ದೀರಿ ಎಂಬುದು ನಮಗೆ ಗೊತ್ತು. ದೇವೇಗೌಡರು ದೇವರು ಎಂದು ಹೇಳಿದ್ರಿ, ಇವತ್ತು ಅವರ ವಿರುದ್ಧವೇ ಮಾತನಾಡಿದ್ದೀರಿ. ಇನ್ನು ಮುಂದೆ ಜಮೀರ್‍ಗೆ ಕುಮಾರಸ್ವಾಮಿ ಉತ್ತರ ಕೊಡಬೇಡಿ. ನಾವು ಅವ್ರಿಗೆ ಉತ್ತರ ಕೊಡ್ತೀವಿ. ಎರಡು ಬಾರಿ ಸೋತು ಮನೆಯಲ್ಲಿ ಜಮೀರ್ ಇದ್ದರು. ಶಾಸಕನಾಗಿ ಮಾಡೋಕೆ ಯಾರು ಕಾರಣ? ಸಿದ್ದರಾಮಯ್ಯ ಇವತ್ತು ನಾಯಕ ಅಂತೀರಾ? ಇಲ್ಲಿ ಇದ್ದಾಗ ಕುಮಾರಣ್ಣ, ಈಗ ಸಿದ್ದರಾಮಣ್ಣ, ಮುಂದೆ ಯಾರನ್ನು ಅಣ್ಣಾ ಅಂತಾರೋ ಗೊತ್ತಿಲ್ಲ. ಸಿದ್ದರಾಮಯ್ಯ ಅಲ್ಪಸಂಖ್ಯಾತ ನಾಯಕರನ್ನು ಮುಗಿಸಿ ಆಯ್ತು. ನಿಮ್ಮನ್ನು ಸಿದ್ದರಾಮಯ್ಯ ಮುಗಿಸುತ್ತಾರೆ. ದೇವೇಗೌಡ ಫ್ಯಾಕ್ಟರಿಯಲ್ಲಿ ಎಷ್ಟೋ ಜನ ಬಂದು ಹೋಗಿದ್ದಾರೆ. ತೊಡೆ ತಟ್ಟಿದವರು ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದಿದ್ದಾರೆ. ಬಾಯಿಗೆ ಬಂದಂತೆ ಮಾತನಾಡಬೇಡಿ. ಯೋಚನೆ ಮಾಡಿ ಹೇಳಿಕೆ ಕೊಡಿ ಎಂದು ಜಮೀರ್ ವಿರುದ್ಧ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಕುಮಾರಸ್ವಾಮಿ ಮಾತು ವೇದವಾಕ್ಯ ಅಲ್ಲ: ಸಿದ್ದರಾಮಯ್ಯ

    ಇಕ್ಬಾಲ್ ಅನ್ಸಾರ್ ಅವ್ರನ್ನು ಮಂತ್ರಿ ಮಾಡಿದ್ದು ಯಾರು? ಕಾಂಗ್ರೆಸ್ ನಿಂದ ಸೋತು ಹೋಗಿದ್ರು. ಕುಮಾರಸ್ವಾಮಿ ಟಿಕೆಟ್ ಕೊಟ್ಟು ಗೆಲ್ಲಿಸಿದ್ರು. ಕುಮಾರಸ್ವಾಮಿ ಹೆಸರಿನಲ್ಲಿ ಅನ್ಸಾರಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ಇವತ್ತು ಅದನ್ನು ಮರೆತು ಮಾತನಾಡುತ್ತಿದ್ದೀರಿ. ಸಿದ್ದರಾಮಯ್ಯರಿಗೆ ಅಲ್ಪಸಂಖ್ಯಾತರ ಮೇಲೆ ಪ್ರೀತಿ ಇದ್ದರೆ ಜಮೀರ್‍ ನ್ನು ಸಿಎಂ ಅಭ್ಯರ್ಥಿ ಅಂತ ಘೋಷಣೆ ಮಾಡಿ. ಸಿದ್ದರಾಮಯ್ಯ 5 ವರ್ಷ ಅಲ್ಪಸಂಖ್ಯಾತರಿಗೆ ಏನ್ ಕೆಲಸ ಮಾಡಿದ್ರು? ಅಕ್ಕಿ ಕೊಟ್ಟೆ, ಆ ಭಾಗ್ಯ, ಈ ಭಾಗ್ಯ ಅಂತೀರಾ ಅಷ್ಟೇ. ಸಿದ್ದರಾಮಯ್ಯ ಅಲ್ಪಸಂಖ್ಯಾತ ನಾಯಕರನ್ನು ಮುಗಿಸಿದ್ದಾರೆ. ಜಮೀರ್ ಅವರನ್ನು ಮುಗಿಸುತ್ತಾರೆ. ಹೀಗಾಗಿ ಜಮೀರ್ ಎಚ್ಚರವಾಗಿ ಇರಿ. ನಮ್ಮದು ಸಣ್ಣ ಪಕ್ಷ ನಾವು ಸಿಎಂ ಮಾಡೋದು ಬಿಡಿ. ನಿಮ್ಮದು ರಾಷ್ಟ್ರೀಯ ಪಕ್ಷ ನೀವು ಅಲ್ಪಸಂಖ್ಯಾತರಿಗೆ ಸಿಎಂ ಸ್ಥಾನ ಕೊಡಿ ಎಂದು ಸವಾಲೆಸೆದರು.