Tag: t a saravana

  • ತಿರುಪತಿಗೆ ಭೇಟಿ ನೀಡಿದ ಮಾಜಿ ವಿಧಾನಪರಿಷತ್ ಶಾಸಕ ಡಾ.ಟಿ.ಎ ಶರವಣ

    ತಿರುಪತಿಗೆ ಭೇಟಿ ನೀಡಿದ ಮಾಜಿ ವಿಧಾನಪರಿಷತ್ ಶಾಸಕ ಡಾ.ಟಿ.ಎ ಶರವಣ

    ಬೆಂಗಳೂರು: ಇಂದು ಮಾಜಿ ವಿಧಾನ ಪರಿಷತ್ ನ ಶಾಸಕ ಡಾ. ಟಿ.ಎ.ಶರವಣ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಇಂದು ತಿರುಪತಿಗೆ ಭೇಟಿ ನೀಡಿದ್ದಾರೆ.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸಾಂಕ್ರಮಿಕ ರೋಗದಿಂದ ಸಂಪೂರ್ಣ ಮುಕ್ತವಾಗಲಿ ಮತ್ತು ರಾಜ್ಯದ ರೈತರ ಒಳ್ಳೆಯ ಮಳೆ, ಬೆಳೆಯಾಗಲಿ ಮತ್ತು ಎಲ್ಲರ ಜೀವನದಲ್ಲಿ ಸುಖ,ಶಾಂತಿ, ನೆಮ್ಮದಿ ಸಿಗಲಿ. ಲೋಕ ಕಲ್ಯಾಣವಾಗಲಿ ಎಂದು ಶ್ರೀ ವೆಂಕಟೇಶ್ವರ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇದನ್ನೂ ಓದಿ: ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ಉತ್ತರಾರಾಧನೆ

    ತಿರುಪತಿ ದೇವಸ್ಥಾನ ಬಳಿ ಪೌರ ಕಾರ್ಮಿಕರ ಜೊತೆಯಲ್ಲಿ ಸರಳವಾಗಿ ಡಾ.ಟಿ.ಎ.ಶರವಣರವರು ಹುಟ್ಟುಹಬ್ಬವನ್ನು ಅಚರಿಸಿದರು. ಕೊರೊನಾ ವಾರಿಯರ್ಸ್ ಗಳಾದ ಸ್ವಚ್ಛತಾ ಕಾರ್ಮಿಕರನ್ನು ಅಭಿನಂದಿಸಿ, ಉಡುಗೊರೆ ನೀಡಲಾಯಿತು. ನಂತರ ಸಂಜೆ ವಿಕಲಚೇತನರಿಗೆ ವೀಲ್‍ಚೇರ್ ವಿತರಣೆ ಮತ್ತು ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮದ ಮೂಲಕ ಸರಳ ಹುಟ್ಟುಹಬ್ಬವನ್ನು ಆಚರಿಸಲಾಯಿತು ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

  • ನಿಖಿಲ್‍ಗೆ ಗಂಡು ಮಗುವಾಗಲಿದೆ: ವಿನಯ್ ಗುರೂಜಿ

    ನಿಖಿಲ್‍ಗೆ ಗಂಡು ಮಗುವಾಗಲಿದೆ: ವಿನಯ್ ಗುರೂಜಿ

    – ರಾಜಕೀಯವಾಗಿ ನಿಖಿಲ್‍ಗೆ ಉತ್ತಮ ಭವಿಷ್ಯ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ಅವರಿಗೆ ಗಂಡು ಮಗುವಾಗಲಿದ್ದು, ನಂತರ ಒಳ್ಳೆಯ ಯೋಗ ಬರುತ್ತದೆ ಎಂದು ಅವಧೂತ ವಿನಯ್ ಗುರೂಜಿ ಭವಿಷ್ಯ ನುಡಿದಿದ್ದಾರೆ.

    ಇಂದು ಜೆಡಿಎಸ್ ಮಾಜಿ ಪರಿಷತ್ ಸದಸ್ಯ ಟಿ.ಎ ಶರವಣ ಮನೆಯಲ್ಲಿ ಭೇಟಿಯಾಗಿ ಹೆಚ್‍ಡಿಕೆ ಅವರಿಗೆ ಗುರೂಜಿ ಆಶೀರ್ವಚನ ನೀಡಿದ್ದಾರೆ. ನಿಖಿಲ್ ಶಾಸಕರಾಗಿ ಆಯ್ಕೆಯಾಗುತ್ತಾರೆ. ಮನೆಗೆ ಗಂಡು ಮಗುವಿನ ಆಗಮನ ಆಗುತ್ತದೆ. ನಂತರ ನಿಖಿಲ್ ಗೆ ಒಳ್ಳೆಯ ಯೋಗ ಬರುತ್ತದೆ. ರಾಜಕೀಯವಾಗಿ ನಿಖಿಲ್ ಗೆ ಉತ್ತಮ ಭವಿಷ್ಯ ಇದೆ ಎಂದಿದ್ದಾರೆ.

    ಜೆಡಿಎಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಮತ್ತೆ ಅಧಿಕಾರ ಹಿಡಿಯುವುದು ಖಚಿತ. ರಾಜ್ಯದಲ್ಲಿ ಜೆಡಿಎಸ್ ಆಡಳಿತ ನಡೆಸಲಿದೆ ಎಂದು ವಿನಯ್ ಗುರೂಜಿ ತಿಳಿಸಿದ್ದಾರೆ. ಇದನ್ನೂ ಓದಿ: ಹೌದು ತಂದೆಯಾಗುತ್ತಿರುವುದು ನಿಜ: ನಿಖಿಲ್

    ಈ ಹಿಂದೆ ಮಾಧ್ಯಮಗಳ ಜೊತೆ ಮಾತನಾಡಿದ್ದ ನಿಖಿಲ್, ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದನ್ನು ಸ್ಪಷ್ಟಪಡಿಸಿದ್ದರು. ಇದಕ್ಕೂ ಮೊದಲು ಹೆಚ್.ಡಿ.ಕುಮಾರಸ್ವಾಮಿ ತಾವು ಅಜ್ಜನಾಗುತ್ತಿರುವ ವಿಚಾರವನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದರು. ಸೊಸೆ ರೇವತಿ 5 ತಿಂಗಳ ಗರ್ಭಿಣಿ ಎಂದು ಸಂತಸದ ಸುದ್ದಿಯನ್ನು ರಿವೀಲ್ ಮಾಡಿದ್ದರು.