Tag: t 20

  • ಭರ್ಜರಿ ಗೆಲುವು ಸಾಧಿಸಿ ಟಿ-20 ಸರಣಿ ಸಮಬಲಗೊಳಿಸಿಕೊಂಡ ದ.ಆಫ್ರಿಕಾ

    ಭರ್ಜರಿ ಗೆಲುವು ಸಾಧಿಸಿ ಟಿ-20 ಸರಣಿ ಸಮಬಲಗೊಳಿಸಿಕೊಂಡ ದ.ಆಫ್ರಿಕಾ

    ಬೆಂಗಳೂರು: ಟೀಂ ಇಂಡಿಯಾ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 9 ವಿಕೆಟ್‍ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಟಿ-20 ಸರಣಿಯು ಸಮಬಲದೊಂದಿಗೆ ಅಂತ್ಯಕಂಡಿದೆ.

    ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟಿ-20 ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯವು ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು. ಟೀಂ ಇಂಡಿಯಾ ಒಡ್ಡಿದ 135 ರನ್‍ಗಳ ಸವಾಲನ್ನು ದಕ್ಷಿಣ ಆಫ್ರಿಕಾ 3 ಓವರ್ ಗಳು ಬಾಕಿ ಇರುವಾಗಲೇ ಭೇದಿಸಿತು.

    ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರೀಜಾ ಹೆಂಡ್ರಿಕ್ಸ್ 26 ಎಸೆತಗಳನ್ನು ಎದುರಿಸಿ 4 ಬೌಂಡರಿ ಸೇರಿ 28 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಾಯಕ ಕ್ವಿಂಟನ್ ಡಿಕಾಕ್ 25 ಎಸೆತಗಳನ್ನು ಎದುರಿಸಿ 5 ಸಿಕ್ಸರ್, 6 ಬೌಂಡರಿ ಸೇರಿ ಅಜೇಯ 79 ರನ್ ಸಿಡಿಸಿದರೆ, ತೆಂಬಾ ಬವೂಮಾ 23 ಎಸೆತಗಳಲ್ಲಿ ಸಿಕ್ಸ್, 2 ಬೌಂಡರಿ ಸಿಡಿಸಿ ಅಜೇಯ 27 ರನ್ ಕಲೆ ಹಾಕಿದರು.

    ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್‍ಗಳ ನಷ್ಟಕ್ಕೆ 134 ರನ್ ದಾಖಲಿಸಿತ್ತು. ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದ್ದರು. ಆದರೆ ಇನ್ನಿಂಗ್ಸ್ ನ ಮೂರನೇ ಓವರ್ ನ ಎರಡನೇ ಎಸೆತದಲ್ಲಿ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಬಳಿಕ ಭರ್ಜರಿ ಬ್ಯಾಟಿಂಗ್ ಮುಂದುವರಿಸಿದ ಶಿಖರ್ ಧವನ್‍ಗೆ ಕೊಹ್ಲಿ ಸಾಥ್ ನೀಡಿದ್ದರು.

    ಇನ್ನಿಂಗ್ಸ್ ನ ಏಳನೇ ಓವರ್ ನಲ್ಲಿ ಶಿಖರ್ ಧವನ್ ವಿಕೆಟ್ ಒಪ್ಪಿಸಿದರು. 25 ಎಸೆತಗಳನ್ನು ಎದುರಿಸಿದ ಶಿಖರ್ ಧವನ್ ಎರಡು ಸಿಕ್ಸರ್, 4 ಬೌಂಡರಿ ಸೇರಿ 36 ರನ್ ಕಲೆಹಾಕಿದರು. ಧವನ್ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಕೂಡ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. 15 ಎಸೆತಗಳನ್ನು ಎದುರಿಸಿದ ವಿರಾಟ್ 9 ರನ್ ದಾಖಲಿಸಲು ಶಕ್ತರಾದರು.

    ಇನ್ನಿಂಗ್ಸ್ ನ 9 ಓವರ್‌ಗಳ ವೇಳೆಗೆ ಟೀಂ ಇಂಡಿಯಾ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತ್ತು. ಆಗ ಯುವ ಆಟಗಾರರಾದ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ವಿಕೆಟ್ ಕಾಯ್ದುಕೊಂಡು ರನ್ ಕದಿಯಲು ಆರಂಭಿಸಿದರು. ಆದರೆ ಇನ್ನಿಂಗ್ಸ್ ನ 13ನೇ ಓವರ್ ನ 4ನೇ ಎಸೆತದಲ್ಲಿ ರಿಷಭ್ ಪಂತ್ ಹಾಗೂ 5ನೇ ಎಸೆತದಲ್ಲಿ ಶ್ರೇಯಸ್ ಅಯ್ಯರ್ ವಿಕೆಟ್ ಒಪ್ಪಿಸಿದರು. 20 ಎಸೆತಗಳನ್ನು ಎದುರಿಸಿದ ಪಂತ್ ಸಿಕ್ಸ್, ಒಂದು ಬೌಂಡರಿ ಸೇರಿ 19 ರನ್ ದಾಖಲಿಸಿದರೆ, ಶ್ರೇಯಸ್ ಅಯ್ಯರ್ 5 ರನ್ ಕದಿಕಲು ಶಕ್ತರಾದರು.

    ರವೀಂದ್ರ ಜಡೇಜಾ 19 ರನ್, ಹಾರ್ದಿಕ್ ಪಾಂಡ್ಯ 14 ರನ್ ದಾಖಲಿಸಿ ತಂಡಕ್ಕೆ ಆಸರೆಯಾದರು. ಈ ಮೂಲಕ ಟೀಂ ಇಂಡಿಯಾ ಇನ್ನಿಂಗ್ಸ್ ನ ನಿಗದಿತ 20 ಓವರ್ ಗಳಲ್ಲಿ 134 ರನ್ ದಾಖಲಿಸಿತ್ತು.

    ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟಿ-20 ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಬಳಿಕ ಮೊಹಾಲಿಯಲ್ಲಿ ಸೆಪ್ಟೆಂಬರ್ 18ರಂದು ನಡೆದ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿತ್ತು. ಭಾನುವಾರ ಬೆಂಗಳೂರಿನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಭರ್ಜರಿ ಗೆಲುವು ಸಾಧಿಸಿ ಸರಣಿ ಸಮಬಲಗೊಳಿಸಿಕೊಂಡಿದೆ.

  • ಎರಡಂಕಿ ದಾಟದ ಕೊಹ್ಲಿ ಪಡೆಯ ಐವರು ಆಟಗಾರರು- ದ.ಆಫ್ರಿಕಾಗೆ 135 ರನ್ ಗುರಿ

    ಎರಡಂಕಿ ದಾಟದ ಕೊಹ್ಲಿ ಪಡೆಯ ಐವರು ಆಟಗಾರರು- ದ.ಆಫ್ರಿಕಾಗೆ 135 ರನ್ ಗುರಿ

    ಬೆಂಗಳೂರು: ದಕ್ಷಿಣ ಆಫ್ರಿಕಾ ತಂಡದ ಬೌಲರ್‌ಗಳ ದಾಳಿಗೆ ಆರಂಭದಲ್ಲಿಯೇ ಮುಗ್ಗರಿಸಿದ ಕೊಹ್ಲಿ ಪಡೆ 135 ರನ್‍ಗಳ ಗುರಿ ನೀಡಿದೆ.

    ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟಿ-20 ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯವು ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಶಿಖರ್ ಧವನ್ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್‍ಗಳ ನಷ್ಟಕ್ಕೆ 134 ರನ್ ದಾಖಲಿಸಿದೆ.

    ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದ್ದರು. ಆದರೆ ಇನ್ನಿಂಗ್ಸ್ ನ ಮೂರನೇ ಓವಲರ್‌ನ ಎರಡನೇ ಎಸೆತದಲ್ಲಿ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಬಳಿಕ ಭರ್ಜರಿ ಬ್ಯಾಟಿಂಗ್ ಮುಂದುವರಿಸಿದ ಶಿಖರ್ ಧವನ್‍ಗೆ ಕೊಹ್ಲಿ ಸಾಥ್ ನೀಡಿದರು.

    ಇನ್ನಿಂಗ್ಸ್ ನ ಏಳನೇ ಓವರ್ ನಲ್ಲಿ ಶಿಖರ್ ಧವನ್ ವಿಕೆಟ್ ಒಪ್ಪಿಸಿದರು. 25 ಎಸೆತಗಳನ್ನು ಎದುರಿಸಿದ ಶಿಖರ್ ಧವನ್ ಎರಡು ಸಿಕ್ಸರ್, 4 ಬೌಂಡರಿ ಸೇರಿ 36 ರನ್ ಕಲೆಹಾಕಿದರು. ಧವನ್ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಕೂಡ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. 15 ಎಸೆತಗಳನ್ನು ಎದುರಿಸಿದ ವಿರಾಟ್ 9 ರನ್ ದಾಖಲಿಸಲು ಶಕ್ತರಾದರು.

    ಇನ್ನಿಂಗ್ಸ್ ನ 9 ಓವರ್‌ಗಳ ವೇಳೆಗೆ ಟೀಂ ಇಂಡಿಯಾ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತ್ತು. ಆಗ ಯುವ ಆಟಗಾರರಾದ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ವಿಕಟ್ ಕಾಯ್ದುಕೊಂಡು ರನ್ ಕದಿಯಲು ಆರಂಭಿಸಿದರು. ಆದರೆ ಇನ್ನಿಂಗ್ಸ್ ನ 13ನೇ ಓವರ್‌ನ 4ನೇ ಎಸೆತದಲ್ಲಿ ರಿಷಭ್ ಪಂತ್ ಹಾಗೂ 5ನೇ ಎಸೆತದಲ್ಲಿ ಶ್ರೇಯಸ್ ಅಯ್ಯರ್ ವಿಕೆಟ್ ಒಪ್ಪಿಸಿದರು. 20 ಎಸೆತಗಳನ್ನು ಎದುರಿಸಿದ ಪಂತ್ ಸಿಕ್ಸ್, ಒಂದು ಬೌಂಡರಿ ಸೇರಿ 19 ರನ್ ದಾಖಲಿಸಿದರೆ, ಶ್ರೇಯಸ್ ಅಯ್ಯರ್ 5 ರನ್ ಕದಿಯಲು ಶಕ್ತರಾದರು.

    ರವೀಂದ್ರ ಜಡೇಜಾ 19 ರನ್, ಹಾರ್ದಿಕ್ ಪಾಂಡ್ಯ 14 ರನ್ ದಾಖಲಿಸಿ ತಂಡಕ್ಕೆ ಆಸರೆಯಾದರು. ಈ ಮೂಲಕ ಟೀಂ ಇಂಡಿಯಾ ಇನ್ನಿಂಗ್ಸ್ ನ ನಿಗದಿತ 20 ಓವರ್‍ಗಳಲ್ಲಿ 134 ರನ್ ದಾಖಲಿಸಿದೆ.

  • ಚುಟುಕು ಪಂದ್ಯದಲ್ಲಿ ರೋಹಿತ್‍ನನ್ನು ಹಿಂದಿಕ್ಕಿದ ವಿರಾಟ್

    ಚುಟುಕು ಪಂದ್ಯದಲ್ಲಿ ರೋಹಿತ್‍ನನ್ನು ಹಿಂದಿಕ್ಕಿದ ವಿರಾಟ್

    ನವದೆಹಲಿ: ಟಿ-20 ಮಾದರಿಯ ಪಂದ್ಯದಲ್ಲಿ ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ ಉಪನಾಯಕ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ.

    ಬುಧವಾರ ಮೊಹಾಲಿಯಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧ ಟಿ-20 ಪಂದ್ಯದಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಗೆಲುವಿಗೆ ಕಾರಣವಾದ ವಿರಾಟ್ ಕೊಹ್ಲಿ ಔಟಾಗದೆ 52 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸೇರಿ 72 ರನ್ ಸಿಡಿಸಿದರು. ಈ ಮೂಲಕ ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ ಅತೀ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ.

    ಇದಕ್ಕೂ ಮೊದಲು 96 ಪಂದ್ಯಗಳನ್ನು ಆಡಿ 32.71 ರ ಸರಾಸರಿಯಲ್ಲಿ 2,422 ರನ್ ಗಳಿಸಿದ್ದ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿದ್ದರು. ನಂತರದ ಸ್ಥಾನದಲ್ಲಿ 70 ಪಂದ್ಯಗಳನ್ನಾಡಿ 49.35 ರ ಸರಾಸರಿಯಲ್ಲಿ 2,369 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದರು. ಆದರೆ ಬುಧವಾರ ನಡೆದ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ ಕೊಹ್ಲಿ ರೋಹಿತ್ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ.

    ಸೌತ್ ಆಫ್ರಿಕಾ ನಡುವಿನ ಎರಡನೇ ಟಿ-10 ಪಂದ್ಯದಲ್ಲಿ ಕೇವಲ 12 ರನ್ ಗಳಿಸಿ ನಿರಾಶೆ ಮೂಡಿಸಿದ ರೋಹಿತ್ ಶರ್ಮಾ ಒಟ್ಟು 2,434 ರನ್ ಗಳಿಸಿ ಎರಡನೇ ಸ್ಥಾನಕ್ಕೆ ಜಾರಿದರು. ಆದರೆ ಇದೇ ಪಂದ್ಯದಲ್ಲಿ 72 ರನ್ ಗಳಿಸಿ ಭಾರತವನ್ನು ಗೆಲುವಿನತ್ತ ಕರೆದುಕೊಂಡು ಹೋದ ಕೊಹ್ಲಿ 71 ಪಂದ್ಯಗಳಲ್ಲಿ 2,441 ರನ್ ಗಳಿಸುವ ಮೂಲಕ ಮೊದಲ ಸ್ಥಾನಕ್ಕೇರಿದರು. ಈ ಸಾಧನೆ ಜೊತೆಗೆ ಕ್ರಿಕೆಟ್ ಮೂರು ಮಾದರಿಯ ಪಂದ್ಯಗಳಲ್ಲಿ 50.01 ಸರಾಸರಿ ಹೊಂದಿರುವ ಏಕೈಕ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

    ಹರಿಣರು ನೀಡಿದ್ದ 150 ರನ್‍ಗಳ ಮೊತ್ತವನ್ನು ಬೆನ್ನಟ್ಟಿದ ಟೀಂ ಇಂಡಿಯಾ ಒಂದು ಓವರ್ ಬಾಕಿ ಇರುವಾಗಲೇ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಕೇವಲ 12 ರನ್ ಗಳಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ತೆರಳಿದರು. ಶಿಖರ್ ಧವನ್‍ಗೆ ಸಾಥ್ ನೀಡುತ್ತ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದರು. 31 ಎಸೆತಗಳನ್ನು ಎದುರಿಸಿದ ಶಿಖರ್ ಧವನ್ 1 ಸಿಕ್ಸ್, 4 ಬೌಂಡರಿ ಸೇರಿ 40 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ರಿಷಭ್ ಪಂತ್ ಕೇವಲ 4 ಗಳಿಸಲು ಶಕ್ತರಾದರು. ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಗೆಲುವಿಗೆ ಕಾರಣವಾದ ವಿರಾಟ್ ಕೊಹ್ಲಿ ಔಟಾಗದೆ 52 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸೇರಿ 72 ರನ್ ಸಿಡಿಸಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಬ್ಯಾಟ್ಸ್ ಮನ್ ರೀಝಾ ಹೆಂಡ್ರಿಕ್ಸ್ ಕೇವಲ 6 ರನ್‍ಗಳಿಗೆ ವಿಕೆಟ್ ಒಪ್ಪಿಸಿದರು. ಇತ್ತ ಕ್ವಿಂಟನ್ ಡಿಕಾಕ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದರು. ಕ್ವಿಂಟನ್ ಡಿಕಾಕ್ 37 ಎಸೆತಗಳಲ್ಲಿ 8 ಬೌಂಡರಿ ಸೇರಿದಂತೆ 52 ರನ್ ಕಲೆಹಾಕಿದರು. ಡಿಕಾಕ್‍ಗೆ ಸಾಥ್ ನೀಡಿದ ತೆಂಬಾ ಬವೂಮಾ ಕೂಡ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚಿದರು. ದುರಾದೃಷ್ಟವಶಾತ್ 50 ರನ್‍ಗಳಿಗೆ ಒಂದು ರನ್ ಬಾಕಿ ಇರುವಂತೆ ವಿಕೆಟ್ ಒಪ್ಪಿಸಿ ಅರ್ಧ ಶತಕ ವಂಚಿತರಾದರು. 43 ಎಸೆತಗಳನ್ನು ಎದುರಿಸಿದ ತೆಂಬಾ ಬವೂಮಾ 1 ಸಿಕ್ಸ್, 3 ಬೌಂಡರಿ ಸೇರಿದಂತೆ 49 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡವು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 149 ಕಲೆ ಹಾಕಿತ್ತು.

    ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

  • ದ.ಆಫ್ರಿಕಾ ವಿರುದ್ಧ ಅಬ್ಬರಿಸಿದ ಟೀಂ ಇಂಡಿಯಾ- ವಿರಾಟ್ ಸ್ಫೋಟಕ ಬ್ಯಾಟಿಂಗ್, ಎಡವಿದ ಪಂತ್

    ದ.ಆಫ್ರಿಕಾ ವಿರುದ್ಧ ಅಬ್ಬರಿಸಿದ ಟೀಂ ಇಂಡಿಯಾ- ವಿರಾಟ್ ಸ್ಫೋಟಕ ಬ್ಯಾಟಿಂಗ್, ಎಡವಿದ ಪಂತ್

    ಮೊಹಾಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಫೋಟಕ ಅರ್ಧ ಶತಕ ಹಾಗೂ ಶಿಖರ್ ಧವನ್ ತಾಳ್ಮೆಯ ಆಟದಿಂದ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.

    ಮೊಹಾಲಿಯ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರು ಟಿ-20 ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 1-0 ಇಂದ ಕೊಹ್ಲಿ ಪಡೆ ಮುನ್ನಡೆ ಪಡೆದಿದೆ.

    ಹರಿಣರು ನೀಡಿದ್ದ 150 ರನ್‍ಗಳ ಮೊತ್ತವನ್ನು ಬೆನ್ನುಹತ್ತಿದ ಟೀಂ ಇಂಡಿಯಾ ಒಂದು ಓವರ್ ಬಾಕಿ ಇರುವಾಗಲೇ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿದೆ.

    ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಕೇವಲ 12 ರನ್ ಗಳಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ತೆರಳಿದರು. ಶಿಖರ್ ಧವನ್‍ಗೆ ಸಾಥ್ ನೀಡುತ್ತ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದರು. 31 ಎಸೆತಗಳನ್ನು ಎದುರಿಸಿದ ಶಿಖರ್ ಧವನ್ 1 ಸಿಕ್ಸ್, 4 ಬೌಂಡರಿ ಸೇರಿ 40 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಒಳಿಕ ಬಂದ ರಿಷಭ್ ಪಂತ್ ಕೇವಲ 4 ಗಳಿಸಲು ಶಕ್ತರಾದರು.

    ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಗೆಲುವಿಗೆ ಕಾರಣವಾದ ವಿರಾಟ್ ಕೊಹ್ಲಿ ಔಟಾಗದೆ 52 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸೇರಿ 72 ರನ್ ಸಿಡಿಸಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಬ್ಯಾಟ್ಸ್ ಮನ್ ರೀಝಾ ಹೆಂಡ್ರಿಕ್ಸ್ ಕೇವಲ 6 ರನ್‍ಗಳಿಗೆ ವಿಕೆಟ್ ಒಪ್ಪಿಸಿದರು. ಇತ್ತ ಕ್ವಿಂಟನ್ ಡಿಕಾಕ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದರು. ಕ್ವಿಂಟನ್ ಡಿಕಾಕ್ 37 ಎಸೆತಗಳಲ್ಲಿ 8 ಬೌಂಡರಿ ಸೇರಿದಂತೆ 52 ರನ್ ಕಲೆಹಾಕಿದರು. ಡಿಕಾಕ್‍ಗೆ ಸಾಥ್ ನೀಡಿದ ತೆಂಬಾ ಬವೂಮಾ ಕೂಡ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚಿದರು. ದುರಾದೃಷ್ಟವಶಾತ್ 50 ರನ್‍ಗಳಿಗೆ ಒಂದು ರನ್ ಬಾಕಿ ಇರುವಂತೆ ವಿಕೆಟ್ ಒಪ್ಪಿಸಿ ಅರ್ಧ ಶತಕ ವಂಚಿತರಾದರು. 43 ಎಸೆತಗಳನ್ನು ಎದುರಿಸಿದ ತೆಂಬಾ ಬವೂಮಾ 1 ಸಿಕ್ಸ್, 3 ಬೌಂಡರಿ ಸೇರಿದಂತೆ 49 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡವು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 149 ಕಲೆ ಹಾಕಿತ್ತು.

    ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

  • ಟಿ-20ಯಲ್ಲಿ ದಾಖಲೆ ಬರೆದ ಹಿಟ್‍ಮ್ಯಾನ್ ರೋಹಿತ್ ಶರ್ಮಾ

    ಟಿ-20ಯಲ್ಲಿ ದಾಖಲೆ ಬರೆದ ಹಿಟ್‍ಮ್ಯಾನ್ ರೋಹಿತ್ ಶರ್ಮಾ

    ನವದೆಹಲಿ: ಉತ್ತಮ ಲಯದಲ್ಲಿರುವ ಭಾರತ ತಂಡದ ಉಪನಾಯಕ ಹಿಟ್‍ಮ್ಯಾನ್ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ-20 ಯಲ್ಲಿ ದಾಖಲೆಯ ವೀರನಾಗಿ ಮಿಂಚುತ್ತಿದ್ದಾರೆ.

    ಇಂಗ್ಲೆಂಡ್‍ನಲ್ಲಿ ನಡೆದ 2019 ರ ವಿಶ್ವಕಪ್‍ನಲ್ಲಿ 5 ಶತಕಗಳನ್ನು ಬಾರಿಸಿದ ರೋಹಿತ್ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಹೊಡೆದ ಆಟಗಾರ ಆಗಿದ್ದರು. ಈಗ ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ಭಾನುವಾರ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಗೆದ್ದಿದೆ. ಈ ಪಂದ್ಯದಲ್ಲಿ ರೋಹಿತ್ 51 ಎಸೆತಗಳಲ್ಲಿ 61 ರನ್ ಹೊಡೆಯುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ.

    ಈ ಮೂಲಕ ಒಟ್ಟಿ 96 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ರೋಹಿತ್ ಶರ್ಮಾ ಒಟ್ಟು 2,422 ರನ್ ಹೊಡೆಯುವ ಮೂಲಕ ಈ ಮಾದರಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಆಗಿದ್ದಾರೆ. ಅದನ್ನು ಬಿಟ್ಟರೆ 2,310 ರನ್ ಹೊಡೆದಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ 2,272 ರನ್ ಹೊಡೆದಿರುವ ನ್ಯೂಜಿಲೆಂಡ್‍ನ ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ ಅವರು ಇದ್ದಾರೆ.

    ಇದರ ಜೊತೆ ಅಂತಾರಾಷ್ಟ್ರೀಯ ಟಿ-20ಯಲ್ಲಿ ಅತೀ ಹೆಚ್ಚು ಶತಕ ಸಿಡಿರುವವರ ಪಟ್ಟಿಯಲ್ಲೂ ಮುಂಚೂಣಿಯಲ್ಲಿರುವ ರೋಹಿತ್ ಶರ್ಮಾ ಒಟ್ಟು 4 ಶತಕ ಸಿಡಿಸಿ ಮೊದಲ ಸ್ಥಾನದಲ್ಲಿ ಇದ್ದಾರೆ. ರೋಹಿತ್ ನಂತರ ತಲಾ ಮೂರು ಶತಕಗಳನ್ನು ಸಿಡಿಸಿರುವ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‍ವೆಲ್ ಮತ್ತು ನ್ಯೂಜಿಲೆಂಡ್‍ನ ಕಾಲಿನ್ ಮನ್ರೋ ನಂತರದ ಸ್ಥಾನದಲ್ಲಿ ಇದ್ದಾರೆ.

    ಒಟ್ಟು 225 ಬೌಂಡರಿಯನ್ನು ಸಿಡಿಸಿರುವ ವಿರಾಟ್ ಕೊಹ್ಲಿ ಅವರು ಟಿ-20 ಮಾದರಿಯಲ್ಲಿ ಅತೀ ಹೆಚ್ಚು ಬೌಂಡರಿ ಸಿಡಿಸಿದ ಆಟಗಾರ ಆಗಿದ್ದಾರೆ. ಆದರೆ ಸಿಕ್ಸರ್ ಮತ್ತು ಬೌಂಡರಿಯನ್ನು ಕೂಡಿಸಿ ಲೆಕ್ಕ ಹಾಕಿದರೆ 215 ಬೌಂಡರಿ ಮತ್ತು 107 ಸಿಕ್ಸರ್ ಸಿಡಿಸಿರುವ ರೋಹಿತ್ ಒಟ್ಟು 322 ಬೌಂಡರಿ ಮತ್ತು ಸಿಕ್ಸರ್‍ನೊಂದಿಗೆ ಅಗ್ರಸ್ಥಾನಕ್ಕೆ ಬರಲಿದ್ದಾರೆ. ರೋಹಿತ್ ಶರ್ಮಾ ನಂತರ ಒಟ್ಟು 303 ಬೌಂಡರಿ ಮತ್ತು ಸಿಕ್ಸರ್ ಸಿಡಿಸಿರುವ ಮಾರ್ಟಿನ್ ಗುಪ್ಟಿಲ್ ಎರಡನೇ ಸ್ಥಾನದಲ್ಲಿ ಇದ್ದಾರೆ.

    ಭಾನುವಾರ ನಡೆದ ವೆಸ್ಟ್ ಇಂಡೀಸ್ ನಡುವಿನ ಟಿ-20 ಪಂದ್ಯದಲ್ಲಿ 6 ಸಿಕ್ಸರ್‍ನೊಂದಿಗೆ ಭರ್ಜರಿ ಅರ್ಧಶತಕ ಸಿಡಿಸಿದ ರೋಹಿತ್ ಟಿ-20 ಕ್ರಿಕೆಟ್‍ನಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ ಕ್ರಿಸ್ ಗೇಲ್ (105) ಅವರ ದಾಖಲೆ ಮುರಿದು ಒಟ್ಟು 107 ಸಿಕ್ಸರ್ ಸಿಡಿಸಿ ಅಗ್ರಸ್ಥಾನದಲ್ಲಿ ಇದ್ದಾರೆ. ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ರೋಹಿತ್ ಚುಟುಕು ಪಂದ್ಯದಲ್ಲಿ ಅತೀ ಹೆಚ್ಚು ಅರ್ಧಶತಕ ಸಿಡಿಸಿದ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.

  • ವಿಂಡೀಸ್ ವಿರುದ್ಧದ ಟಿ-20 ಪಂದ್ಯದಲ್ಲಿ ಭಾರತಕ್ಕೆ ಗೆಲುವು

    ವಿಂಡೀಸ್ ವಿರುದ್ಧದ ಟಿ-20 ಪಂದ್ಯದಲ್ಲಿ ಭಾರತಕ್ಕೆ ಗೆಲುವು

    ಕೋಲ್ಕತ್ತ: ವೆಸ್ಟ್ ಇಂಡೀಸ್ ವಿರುದ್ಧದ ಮೊದಲನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್‍ಗಳಿಂದ ಗೆಲ್ಲುವ ಮೂಲಕ ಶುಭಾರಂಭ ಪಡೆದಿದೆ.

    ವೆಸ್ಟ್ ಇಂಡೀಸ್ ವಿರುದ್ಧದ ಮೂರು ಟಿ-20 ಪಂದ್ಯಗಳ ಪೈಕಿ, ಮೊದಲನೇ ಪಂದ್ಯ ಕೋಲ್ಕತ್ತದ ಈಡನ್‍ಗಾರ್ಡ್ ಮೈದಾನದಲ್ಲಿ ಇಂದು ನಡೆದಿತ್ತು. ಮೊದಲು ಬ್ಯಾಟ್ ಮಾಡಿ ವಿಂಡೀಸ್ 109 ರನ್‍ಗಳಿಸಿತ್ತು. 110 ರನ್ ಗಳ ಸುಲಭ ಸವಾಲನ್ನು ಸ್ವೀಕರಿಸಿದ ಭಾರತ 17.5 ಓವರ್ ಗಳಲ್ಲಿ 110 ರನ್ ಗಳಿಸುವ ಮೂಲಕ 5 ವಿಕೆಟ್‍ಗಳಿಂದ ಗೆಲುವು ಸಾಧಿಸಿತು.

    ಪ್ರಾರಂಭದಲ್ಲೇ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ 6 ರನ್ ಹಾಗೂ ಆರಂಭಿಕ ಆಟಗಾರ ಶಿಖರ್ ಧವನ್ 3 ರನ್ ಗಳಿಸಿ ಔಟಾದರು. ನಂತರ ಬಂದ ಕ್ರುನಾಲ್ ಪಾಂಡ್ಯಾ 21 ರನ್ ಹಾಗೂ  ದಿನೇಶ್ ಕಾರ್ತಿಕ್‍  31 ರನ್ ಗಳು ಭಾರತದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದವು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ, ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿತ್ತು. ವಿಂಡೀಸ್ ಪರ ಫ್ಯಾಬಿಯನ್ ಅಲೆನ್ 27 ರನ್, ಕೀಮೊ ಪೌಲ್ 15 ರನ್ ಹೊಡೆಯುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ್ದರು. ಟೀಂ ಇಂಡಿಯಾದ ಕುಲ್‍ದೀಪ್ ಯಾದವ್ 4 ಓವರ್ ಗಳಲ್ಲಿ 13 ರನ್ ನೀಡಿ 3 ವಿಕೆಟ್ ಪಡೆದರೆ, ಉಮೇಶ್ ಯಾದವ್, ಜಸ್ಪ್ರಿತ್ ಬೂಮ್ರಾ, ಕೆ ಖಲೀಲ್ ಅಹಮದ್ ಹಾಗೂ ಕ್ರುನಾಲ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದುಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗೇಲ್ 10 ಸಾವಿರ ರನ್- ಹೋಟೆಲ್‍ನಲ್ಲಿ ಆರ್‍ಸಿಬಿ ಸಂಭ್ರಮಾಚರಣೆ ಹೀಗಿತ್ತು: ವಿಡಿಯೋ ನೋಡಿ

    ಗೇಲ್ 10 ಸಾವಿರ ರನ್- ಹೋಟೆಲ್‍ನಲ್ಲಿ ಆರ್‍ಸಿಬಿ ಸಂಭ್ರಮಾಚರಣೆ ಹೀಗಿತ್ತು: ವಿಡಿಯೋ ನೋಡಿ

    ರಾಜ್‍ಕೋಟ್‍: ಟಿ 20 ಕ್ರಿಕೆಟ್‍ನಲ್ಲಿ ವೆಸ್ಟ್ ಇಂಡೀಸ್‍ನ ಟಾಪ್ ಆಟಗಾರ, ಆರ್‍ಸಿಬಿಯ ಓಪನಿಂಗ್ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಐತಿಹಾಸಿಕ ಮೇಲಿಗಲ್ಲನ್ನು ಬರೆದಿದ್ದಾರೆ. ಚುಟುಕು ಕ್ರಿಕೆಟ್‍ನಲ್ಲಿ 10 ಸಾವಿರ ರನ್‍ಗಳ ಗಡಿಯನ್ನು ದಾಟಿದ ಮೊದಲ ಆಟಗಾರ ಎಂಬ ಹೆಗ್ಗಳಿಕಿಗೆ ಗೇಲ್ ಈಗ ಪಾತ್ರರಾಗಿದ್ದಾರೆ.

    ಮಂಗಳವಾರ ಗುಜರಾತ್ ಲಯನ್ಸ್ ವಿರುದ್ಧ ರಾಜ್‍ಕೋಟ್‍ನಲ್ಲಿ ನಡೆದ ಪಂದ್ಯದಲ್ಲಿ 63 ರನ್ ಗಳಿಸಿದ ವೇಳೆ ಗೇಲ್ ಈ ಮೈಲಿಗಲ್ಲನ್ನು ಬರೆದಿದ್ದಾರೆ. ಈ ಪಂದ್ಯವನ್ನು ಆರ್‍ಸಿಬಿ 21 ರನ್‍ಗಳಿಂದ ಗೆದ್ದುಕೊಂಡಿದ್ದು, 38 ಎಸೆತದಲ್ಲಿ 77 ರನ್(5 ಬೌಂಡರಿ, 7 ಸಿಕ್ಸರ್) ಚಚ್ಚಿದ್ದ ಗೇಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ಈ ಪಂದ್ಯಕ್ಕೂ ಮೊದಲು ನಡೆದ ಪಂದ್ಯಗಳಲ್ಲಿ ಗೇಲ್ 32, 6, 22 ರನ್‍ಗಳನ್ನು ಹೊಡೆದಿದ್ದರು. ಎರಡು ಪಂದ್ಯಗಳಿಂದ ಹೊರಗಡೆ ಉಳಿದಿದ್ದ ಕಾರಣ ಈ ಮೈಲಿಗಲ್ಲನ್ನು ಬರೆಯಲು ವಿಳಂಬವಾಗಿತ್ತು.

    ಗೇಲ್ ನಂತರದ ಸ್ಥಾನದಲ್ಲಿ 7,596 ರನ್ ಹೊಡೆದ ನ್ಯೂಜಿಲೆಂಡಿನ ಬ್ರೆಂಡಮ್ ಮೆಕ್ಕಲಂ ಇದ್ದರೆ 7,338 ರನ್‍ಗಳಿಸುವ ಮೂಲಕ ಬ್ರಾಡ್ ಹಾಡ್ಜ್ ಮೂರನೇ ಸ್ಥಾನದಲ್ಲಿ ಇದ್ದಾರೆ.

    ಏಕದಿನ ಪಂದ್ಯಗಳಲ್ಲಿ 10 ಸಾವಿರ ರನ್ ಗಳಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕಗೆ ಸಚಿನ್ ಪಾತ್ರವಾಗಿದ್ದರೆ, ಟೆಸ್ಟ್ ನಲ್ಲಿ ಈ ಸಾಧನೆಯನ್ನು ಮಾಡಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಸುನೀಲ್ ಗವಾಸ್ಕರ್ ಭಾಜನರಾಗಿದ್ದಾರೆ.

    10 ಸಾವಿರ ರನ್‍ಗಳ ಗಡಿಯನ್ನು ದಾಟಿದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಆರ್‍ಸಿಬಿ ತಂಗಿದ್ದ ಹೊಟೇಲ್‍ನಲ್ಲಿ ಸಂಭ್ರಮ ಮನೆ ಮಾಡಿತ್ತು. ಗೇಲ್ ಕೇಕ್ ಕತ್ತರಿಸಿ ಈ ಸಂಭ್ರಮವನ್ನು ಆಚರಿಸಿದರು.

    https://www.youtube.com/watch?v=nbJmczErrtM

  • ಬ್ಯಾಟಿಂಗ್ ವೈಫಲ್ಯದ ಬಗ್ಗೆ ಕೇಳಿದ್ದಕ್ಕೆ ಮಾಧ್ಯಮಗಳಿಗೆ ಕೊಹ್ಲಿ ಮರು ಪ್ರಶ್ನೆ ಎಸೆದಿದ್ದು ಹೀಗೆ: ವಿಡಿಯೋ ನೋಡಿ

    ಬ್ಯಾಟಿಂಗ್ ವೈಫಲ್ಯದ ಬಗ್ಗೆ ಕೇಳಿದ್ದಕ್ಕೆ ಮಾಧ್ಯಮಗಳಿಗೆ ಕೊಹ್ಲಿ ಮರು ಪ್ರಶ್ನೆ ಎಸೆದಿದ್ದು ಹೀಗೆ: ವಿಡಿಯೋ ನೋಡಿ

    ಬೆಂಗಳೂರು: ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ತಂಡದ ನಾಯಕ ವಿರಾಟ್ ಕೊಹ್ಲಿ ಅಲ್ಪಮೊತ್ತಕ್ಕೆ ಔಟಾಗುತ್ತಿದ್ದು ಈ ಸಂಬಂಧ ಪತ್ರಕರ್ತರು ಕೇಳಿದ ಪ್ರಶ್ನೆಗೆ ಕೊಹ್ಲಿ ಈ ರೀತಿ ಉತ್ತರ ನೀಡಿದ್ದಾರೆ.

    `ನಾನು ಹೆಚ್ಚು ರನ್ ಗಳಿಸಿದ ಸಂದರ್ಭದಲ್ಲಿ ಹೋ.. ಕ್ರಿಕೆಟ್ ಜಗತ್ತಿನಲ್ಲೇ ಕೊಹ್ಲಿ ಕ್ರಾಂತಿ ಮೂಡಿಸಿದ್ದಾರೆ ಅಂತ ಹೇಳ್ತಿರ ಹೊರತು ಬೇರೆ ಏನೂ ಕೇಳಲ್ಲ. ಆದ್ರೆ ಆದರೆ ಈಗ ನಾನು ರನ್ ಗಳಿಸಿದೇ ಇರುವುದು ನಿಮಗೆ ಸಮಸ್ಯೆಯಾಗಿ ಕಾಣುತ್ತಿದೆಯೇ ಎಂದು ಮರು ಪ್ರಶ್ನೆಯನ್ನು ಎಸೆದರು. ನನ್ನಂತೆಯೇ ಉಳಿದವರ ಆಟದತ್ತನೂ ಗಮನ ಕೊಡಿ. ಒಂದು ಟೀಂ ನಲ್ಲಿ 10 ಮಂದಿ ಆಟಗಾರರಿದ್ದಾರೆ. ನಾನೇ ಎಲ್ಲವನ್ನೂ ಮಾಡಿ ಮುಗಿಸಿದರೆ ಇನ್ನುಳಿದವರು ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು.

    ಆರಂಭಿಕ ಬ್ಯಾಟ್ಸ್ ಮನ್ ಆಗಿ ಕಣಕ್ಕೆ ಇಳಿದ ಕೊಹ್ಲಿ ಮೂರು ಪಂದ್ಯದಲ್ಲಿ ಒಟ್ಟು 52 ರನ್ ಗಳಿಸಿದ್ದರು. ಈ ಹಿನ್ನೆಲೆಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಸರಣಿಯಲ್ಲಿ ನನ್ನ ಆಟದ ಬಗ್ಗೆ ಸಂತೋಷವಿದೆ. ಒಂದು ವೇಳೆ ಎರಡೂ ಪಂದ್ಯಗಳಲ್ಲಿ 70 ರನ್ ಗಳಿಸಿದ್ದರೆ ನೀವು ಈ ಪ್ರಶ್ನೆಯನ್ನು ಕೇಳುತ್ತಿದ್ರಾ ಅಂತಾ ಪ್ರಶ್ನಿಸಿದ ಅವರು, ಸರಣಿ ಆಟಗಳ ಬಗ್ಗೆ ಖುಷಿ ಪಡಿ. ಅದೇ ನಮಗೆ ಗೆಲುವು ತಂದುಕೊಡುತ್ತೆ ಅಂತಾ ಕೊಹ್ಲಿ ಹೇಳಿದ್ದಾರೆ.

    ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಇಂಗ್ಲೆಂಡ್-ಟೀಂ ಇಂಡಿಯಾ ನಡುವಿನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 2 ರನ್ ಗೆ ಔಟಾಗಿದ್ದರು. ಈ ಪಂದ್ಯದಲ್ಲಿ ಸುರೇಶ್ ರೈನಾ, ಎಂಎಸ್ ಧೋನಿ, ಯುವರಾಜ್ ಸಿಂಗ್ ಅಬ್ಬರದ ಬ್ಯಾಟಿಂಗ್ ನಿಂದಾಗಿ ಭಾರತ 202 ರನ್ ಗಳಿಸಿತ್ತು. ಜತೆಗೆ ಇಂಗ್ಲೆಂಡ್ ತಂಡವನ್ನು 127 ರನ್ ಗಳಿಗೆ ಆಲೌಟ್ ಮಾಡುವ ಮೂಲಕ 75 ರನ್ ಗಳಿಂದ ಜಯಗಳಿಸಿತ್ತು.

  • ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಂದು ಭಾರತ-ಇಂಗ್ಲೆಂಡ್ ಟಿ20 ಫೈನಲ್

    – ಭಾರತ ಗೆದ್ರೆ ಕೊಹ್ಲಿ ಟಿ-20ಗೂ ಸಾಮ್ರಾಟ್

    ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಇಂಡೋ-ಇಂಗ್ಲೆಂಡ್ ಟಿ-20 ಸರಣಿಯ ಅಂತಿಮ ಹಣಾಹಣಿ ನಡೆಯಲಿದೆ. 3 ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿರೋದ್ರಿಂದ ಜಿದ್ದಾಜಿದ್ದಿನ ಹೋರಾಟ ನಡೆಯೋದಂತೂ ಸತ್ಯ.

    ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಜಯಿಸಿದ ಕೊಹ್ಲಿ ಮೂರೂ ಪ್ರಕಾರದ ಪಂದ್ಯಗಳಿಗೆ ನಾಯಕರಾದ ಮೇಲೆ ಏಕದಿನ ಸರಣಿಯನ್ನೂ ಬಾಚಿಕೊಂಡು ಈಗ ಟಿ-20 ಮೇಲೂ ಕಣ್ಣಿಟ್ಟಿದ್ದಾರೆ. ಟೀಂ ಇಂಡಿಯಾ ಗೆದ್ರೆ ಆಂಗ್ಲರ ಭಾರತ ಪ್ರವಾಸ `ಹೋದ ಪುಟ್ಟಾ ಬಂದ ಪುಟ್ಟ’ ಎಂಬಂತಾಗುತ್ತೆ. ಇಂದು ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ.

    ಆರ್‍ಸಿಬಿ ನಾಯಕರಾಗಿರೋ ಹಾಗೂ ಟಿ-20 ನಾಯಕರಾಗಿ ಆಯ್ಕೆಯಾದ ಬಳಿಕ ವಿರಾಟ್ ಕೊಹ್ಲಿಗೆ ಬೆಂಗಳೂರಿನಲ್ಲಿ ಇದೇ ಮೊದಲ ಪಂದ್ಯವಾಗಿದೆ. ಹೀಗಾಗಿ ನೆಚ್ಚಿನ ನಾಯಕನ ಆಟದ ಜೊತೆಗೆ ಟೀಂ ಇಂಡಿಯಾದ ಆಟವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.