Tag: t-20 match

  • ಇಂದಿನ ಟಿ20 ಪಂದ್ಯಕ್ಕೆ ಮಳೆಯಾಗಲ್ಲ –  ಸತತ 11 ಪಂದ್ಯ ಗೆದ್ದು ಬೀಗಿದ ಭಾರತ

    ಇಂದಿನ ಟಿ20 ಪಂದ್ಯಕ್ಕೆ ಮಳೆಯಾಗಲ್ಲ – ಸತತ 11 ಪಂದ್ಯ ಗೆದ್ದು ಬೀಗಿದ ಭಾರತ

    ಚಂಡೀಗಢ: ಧರ್ಮಶಾಲಾದಲ್ಲಿ ನಡೆಯಲಿರುವ ಭಾರತ ಮತ್ತು ಶ್ರೀಲಂಕಾ ತಂಡದ ನಡುವಿನ 3ನೇ ಟಿ-20 ಸರಣಿಯ ಅಂತಿಮ ಪಂದ್ಯಕ್ಕೆ ಮಳೆಯಾಗುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಈಗಾಗಲೇ ಧರ್ಮಶಾಲಾದಲ್ಲಿ ಮೋಡ ಕವಿದ ವಾತಾವರಣವಿದೆ. ಹೀಗಿದ್ದರೂ ಹವಾಮಾನ ವರದಿ ಪ್ರಕಾರ ಮಳೆಯಾಗುವುದಿಲ್ಲ ಎಂದು ಹೇಳಿದೆ.

    ದಿನದ ಗರಿಷ್ಠ ತಾಪಮಾನವು 12 ಡಿಗ್ರಿ ಸೆಲ್ಸಿಯಸ್ ಇದ್ದು, ಇದು ರಾತ್ರಿಯಲ್ಲಿ 4 ಡಿಗ್ರಿಗಳಿಗೆ ಇಳಿಯಬಹುದು. ಗಾಳಿಯ ವೇಗ ಗಂಟೆಗೆ 8 ಕಿಲೋಮೀಟರ್ ವರೆಗೆ ಇರುತ್ತದೆ. ಹಗಲಿನಲ್ಲಿ ತೇವಾಂಶವು 69 ಪ್ರತಿಶತದಷ್ಟು ಇರುತ್ತದೆ. ಇದು ರಾತ್ರಿಯಲ್ಲಿ 53 ಪ್ರತಿಶತಕ್ಕೆ ಇಳಿಯುತ್ತದೆ ಎಂಬ ಮಾಹಿತಿ ಸಿಕ್ಕಿದೆ. ಆದ್ದರಿಂದ, ಯಾವುದೇ ಅಡೆತಡೆಗಳಿಲ್ಲದೆ ಭಾರತ ಮತ್ತು ಶ್ರೀಲಂಕಾ ನಡುವಿನ ಅಂತಿಮ ಪಂದ್ಯ ನಡೆಯಲಿದೆ.

    ಭಾನುವಾರ (ಫೆಬ್ರವರಿ 27) ಹಿಮಾಚಲ ಪ್ರದೇಶದ ಸುಂದರವಾದ ಧರ್ಮಶಾಲಾ ಕ್ರೀಡಾಂಗಣದಲ್ಲಿ ಸರಣಿಯನ್ನು ವೈಟ್‍ವಾಶ್ ಮಾಡಲು ನೋಡುತ್ತಿದೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಈಗಾಗಲೇ ಇದೇ ಸ್ಥಳದಲ್ಲಿ ಶನಿವಾರ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಏಳು ವಿಕೆಟ್‍ಗಳಿಂದ ಲಂಕಾ ತಂಡವನ್ನು ಸೋಲಿಸುವ ಮೂಲಕ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

    ಗೆಲ್ಲಲು 184 ರನ್‍ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 17.1 ಓವರ್‍ಗಳಲ್ಲಿ ಇನ್ನೂ 17 ಎಸೆತ ಬಾಕಿ ಇರುವಂತೆ 186 ರನ್ ಸಿಡಿಸಿ 7 ವಿಕೆಟ್‍ಗಳ ಭರ್ಜರಿ ಗೆಲುವಿನ ನಗೆ ಬೀರಿತು. ಈ ಮೊದಲು ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಟಿ-20 ಸರಣಿ ಗೆದ್ದಿತ್ತು. ಇದೀಗ ಶ್ರೀಲಂಕಾ ವಿರುದ್ಧ ಸರಣಿ ಜಯದೊಂದಿಗೆ ಹ್ಯಾಟ್ರಿಕ್ ಸರಣಿ ಗೆದ್ದಂತಾಗಿದೆ.

    ಭಾರತದ ಪರ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ 1 ರನ್ ಮತ್ತು ಇಶನ್ ಕಿಶನ್ 16 ರನ್ (15 ಎಸೆತ, 2 ಬೌಂಡರಿ) ಸಿಡಿಸಿ ಔಟ್ ಆಗುವ ಮೂಲಕ ನಿರಾಸೆ ಅನುಭವಿಸಿದರು. ನಂತರ ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾಗೆ ಆಸರೆಯಾದ ಸಂಜು ಸ್ಯಾಮ್ಸನ್ 39 ರನ್ (25 ಎಸೆತ, 2 ಬೌಂಡರಿ, 3 ಸಿಕ್ಸ್) ಸಿಡಿಸಿ ನೆರವಾದರು. ಇನ್ನೊಂದೆಡೆ ಶ್ರೇಯಸ್ ಅಯ್ಯರ್ ಆರ್ಭಟಿಸಿದರು. ಲಂಕಾ ಬೌಲರ್‍ಗಳನ್ನು ಮನಬಂದಂತೆ ದಂಡಿಸಿದ ಅಯ್ಯರ್ ಅಜೇಯ 74 ರನ್ (44 ಎಸೆತ, 6 ಬೌಂಡರಿ, 4 ಸಿಕ್ಸ್) ಬಾರಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ರವೀಂದ್ರ ಜಡೇಜಾ ಬಿರುಸಿನ ಬ್ಯಾಟಿಂಗ್ ನಡೆಸಿ 45 ರನ್ (18 ಎಸೆತ, 7 ಬೌಂಡರಿ, 1 ಸಿಕ್ಸ್) ಸಿಡಿಸಿ ಇನ್ನೂ 17 ಎಸೆತ ಬಾಕಿ ಇರುವಂತೆ ತಂಡವನ್ನು ಗೆಲುವಿನ ದಡ ಸೇರಿಸಿದರು.

    ಈ ಪಂದ್ಯದ ಗೆಲುವಿನ ಮೂಲಕ ಟೀಂ ಇಂಡಿಯಾವು ತನ್ನ ಗೆಲುವಿನ ಓಟವನ್ನು 11 ಪಂದ್ಯಗಳಿಗೆ ವಿಸ್ತರಿಸಿದೆ. ಟೀಂ ಇಂಡಿಯಾ ಕಳೆದ ವರ್ಷದ ವಿಶ್ವಕಪ್‍ನಲ್ಲಿ ಲೀಗ್ ಹಂತದಲ್ಲೇ ಹೊರ ಬಿದ್ದರೂ ಕೊನೆಯಲ್ಲಿ ನಡೆದ ಅಫ್ಘಾನಿಸ್ತಾನ, ಸ್ಕಾಟ್ಲೆಂಡ್, ನಮೀಬಿಯಾ ವಿರುದ್ದ ಜಯಗಳಿಸಿತ್ತು. ಅಲ್ಲಿಂದ ಆರಂಭವಾಗಿ ಎಲ್ಲ ಪಂದ್ಯಗಳನ್ನು ಭಾರತ ಜಯಗಳಿಸಿದೆ.

    ಯಾವ ತಂಡದ ವಿರುದ್ಧ ಜಯ?
    * ಅಫ್ಘಾನಿಸ್ತಾನ ವಿರುದ್ಧ 66 ರನ್
    * ಸ್ಕಾಟ್ಲೆಂಡ್ ವಿರುದ್ಧ 8 ವಿಕೆಟ್
    * ನಮೀಬಿಯಾ ವಿರುದ್ಧ 9 ವಿಕೆಟ್‍ಗಳು
    * ನ್ಯೂಜಿಲೆಂಡ್ ವಿರುದ್ಧ 5 ವಿಕೆಟ್
    * ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್
    * ನ್ಯೂಜಿಲೆಂಡ್ ವಿರುದ್ಧ 73 ರನ್
    * ವೆಸ್ಟ್ ಇಂಡೀಸ್ ವಿರುದ್ಧ 6 ವಿಕೆಟ್
    * ವೆಸ್ಟ್ ಇಂಡೀಸ್ ವಿರುದ್ಧ 8 ರನ್
    * ವೆಸ್ಟ್ ಇಂಡೀಸ್ ವಿರುದ್ಧ 17 ರನ್
    * ಶ್ರೀಲಂಕಾ ವಿರುದ್ಧ 62 ರನ್
    * ಶ್ರೀಲಂಕಾ ವಿರುದ್ಧ 7 ವಿಕೆಟ್

  • ಟಿ20 ನಿಯಮದಲ್ಲಿ ಬದಲಾವಣೆ – ನಿಧಾನಗತಿ ಬೌಲಿಂಗ್‌ ಮಾಡಿದ್ರೆ ಮೈದಾನದಲ್ಲೇ ಶಿಕ್ಷೆ

    ಟಿ20 ನಿಯಮದಲ್ಲಿ ಬದಲಾವಣೆ – ನಿಧಾನಗತಿ ಬೌಲಿಂಗ್‌ ಮಾಡಿದ್ರೆ ಮೈದಾನದಲ್ಲೇ ಶಿಕ್ಷೆ

    ದುಬೈ: ಟಿ20 ಪಂದ್ಯದ ವೇಳೆ ನಿಗದಿತ ಸಮಯದ ಒಳಗಡೆ ಓವರ್‌ಗಳನ್ನು ಮುಗಿಸದ ತಂಡಕ್ಕೆ ದಂಡದ ಜೊತೆಗೆ ಪಂದ್ಯ ನಡೆಯುವಾಗಲೇ ಮೈದಾನದಲ್ಲೇ ಶಿಕ್ಷೆಯನ್ನು ವಿಧಿಸಲು ಐಸಿಸಿ ನಿರ್ಧರಿಸಿದೆ.

    ಈ ಹಿಂದೆ ನಿಗದಿತ ಸಮಯದಲ್ಲಿ ಓವರ್‌ಗಳನ್ನು ಮುಗಿಸದ ತಂಡಗಳಿಗೆ ಪಂದ್ಯ ಮುಗಿದ ಮೇಲೆ ದಂಡ ಹಾಕುವ ನಿಯಮ ಚಾಲ್ತಿಯಲ್ಲಿತ್ತು. ಆದರೆ ಈಗ ಆ ನಿಯಮಗಳೊಂದಿಗೆ ಪಂದ್ಯದ ವೇಳೆಯೂ ಶಿಕ್ಷೆ ನೀಡಲು ಐಸಿಸಿ ನಿರ್ಧರಿಸಿದೆ. ಈ ಎಲ್ಲಾ ಹೊಸ ನಿಯಮಗಳು ಈ ತಿಂಗಳಿನಿಂದಲೇ ಜಾರಿಗೆ ಬರಲಿವೆ.

    ಹೊಸ ನಿಯಮದಲ್ಲಿ ಏನಿದೆ?: ಐಸಿಸಿ ನಿಯಮದ ಪ್ರಕಾರ ಒಂದು ಇನ್ನಿಂಗ್ಸ್ ಗರಿಷ್ಠ 85 ನಿಮಿಷದಲ್ಲಿ(2:30 ನಿಮಿಷದ ಎರಡು ಪಾನಿಯ ವಿರಾಮ ಸೇರಿದರೆ 90 ನಿಮಿಷ) ಮುಗಿಯಬೇಕು. ಹೀಗಾಗಿ‌ ಒಂದು ಓವರ್ ಅನ್ನು 4‌ ನಿಮಿಷ 25 ಸೆಕೆಂಡ್ ನಲ್ಲಿ‌ ಮುಗಿಸಬೇಕಾಗುತ್ತದೆ‌.

    ಸದ್ಯ ಐಸಿಸಿಯ ಹೊಸ ನಿಯಮ ಹೇಳುವ ಪ್ರಕಾರ ಬೌಲಿಂಗ್ ತಂಡವೊಂದು ಇನಿಂಗ್ಸ್ ಕೊನೆಯ ಓವರಿನ ಮೊದಲ ಎಸೆತ ಎಸೆಯುವಾಗ ನಿಗದಿತ ಅವಧಿಯಲ್ಲಿ ಇನಿಂಗ್ಸ್ ಮುಗಿಸುವ ಸ್ಥಿತಿಯಲ್ಲಿರಬೇಕು. ಒಂದು ವೇಳೆ ಹೀಗಿರದಿದ್ದಲ್ಲಿ, ಇನಿಂಗ್ಸ್ ಓವರ್‌ಗಳನ್ನು ಎಸೆಯುವಾಗ 30 ಯಾರ್ಡ್ ಹೊರಗಡೆ 5 ಕ್ಷೇತ್ರ ರಕ್ಷಕರ ಬದಲಿಗೆ ಕೇವಲ ನಾಲ್ಕು ಕ್ಷೇತ್ರ ರಕ್ಷಕರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.

    ಉದಾಹರಣೆಗೆ ಮಧ್ಯಾಹ್ನ 4 ಗಂಟೆ ಹೊತ್ತಿಗೆ ಇನ್ನಿಂಗ್ಸ್ ಮುಗಿಯಬೇಕು ಎಂದಿರುತ್ತದೆ. ಬೌಲಿಂಗ್ ಮಾಡುವ ತಂಡವೊಂದು 81:35 ನಿಮಿಷ ಒಳಗಡೆ 19ನೇ ಓವರ್ ಪೂರ್ಣ ಮಾಡಿರಬೇಕು. ಒಂದು ವೇಳೆ ಆ ಹೊತ್ತಿಗೆ ಇನ್ನೂ 18ನೇ ಓವರ್ ಚಾಲ್ತಿಯಲ್ಲಿದ್ದರೆ, ಅಂಪೈರ್ ಗಳಿಗೆ 30 ಯಾರ್ಡ್ ಹೊರಗಡೆ ಕ್ಷೇತ್ರ ರಕ್ಷಕರನ್ನು ಕಡಿಮೆ ಮಾಡುವ ಅಧಿಕಾರವಿರುತ್ತದೆ.

    ಹಿಂದಿನ ನಿಯಮ ಹೇಗಿತ್ತು?: ನಿಗದಿತ ಅವಧಿಯಲ್ಲಿ ಓವರ್‌ಗಳನ್ನು ಮುಗಿಸದಿದ್ದಲ್ಲಿ ತಂಡದ ನಾಯಕ ಮತ್ತು ಆಟಗಾರರಿಗೆ ಆರ್ಥಿಕ ದಂಡ ವಿಧಿಸಲಾಗುತ್ತಿತ್ತು. ಈ ನಿಯಮಗಳು ಮುಂದೆನೂ ಚಾಲ್ತಿಯಲ್ಲಿರುತ್ತದೆ. ಇದರ ಜೊತೆಗೆ ಹೊಸ ಶಿಕ್ಷೆಯೂ ಸೇರ್ಪಡೆಯಾಗುತ್ತದೆ.

    ಇತರೆ ಬದಲಾವಣೆ: ದ್ವಿಪಕ್ಷೀಯ ಸರಣಿಯಲ್ಲಿ ಐಪಿಎಲ್ ಮಾದರಿಯಲ್ಲಿ ಇನಿಂಗ್ಸ್ ನಡುವೆ 2:30 ನಿಮಿಷಗಳ ಟೈಮ್ ಔಟ್ ತೆಗೆದುಕೊಳ್ಳಲು ಅನುಮತಿಯಿದೆ. ಆದರೆ ಎರಡು ಕ್ರಿಕೆಟ್ ಮಂಡಳಿಗಳು ಸರಣಿ ಆರಂಭದಲ್ಲೇ ಒಪ್ಪಿಗೆ ಮಾಡಿಕೊಂಡರೆ ಮಾತ್ರ ಸಾಧ್ಯ. ಇದರಿಂದ ಪ್ರಸಾರಕರು ಹೆಚ್ಚಿನ ಸಂಖ್ಯೆಯಲ್ಲಿ ಜಾಹೀರಾತು ಪ್ರಸಾರ ಮಾಡಬಹುದಾಗಿದೆ.

    ಬೌಲರ್‌ಗಳು ಸ್ಟಂಪ್ ಔಟ್‍ಗೆ ಮನವಿ ಸಲ್ಲಿಸುವ ವೇಳೆ ಚೆಂಡಿನ ಶೇ.50ರಷ್ಟು ಭಾಗ ಬೇಲ್ಸ್ ಗಳನ್ನು ಆವರಿಸಿಕೊಂಡಿರಬೇಕು. ಈ ಹಿಂದೆ ಬೇಲ್ಸ್ ಗೆ ಚೆಂಡು ತಾಕುವಂತಿದ್ದರೆ ಮಾತ್ರ ಸಾಕಿತ್ತು.

    ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನ ಹಿಂದಿನ ಆವೃತ್ತಿಯಲ್ಲಿ ಪ್ರತಿ ಸರಣಿಗೆ ಒಟ್ಟಾರೆ ಫಲಿತಾಂಶಗಳ ಲೆಕ್ಕಾಚಾರದಲ್ಲಿ ನೀಡಲಾಗುತ್ತಿತ್ತು. ಇದೀಗ ಪ್ರತಿ ಪಂದ್ಯಗಳ ಫಲಿತಾಂಶವನ್ನು ನೋಡಿಕೊಂಡು ಅಂಕ ನೀಡಲಾಗುತ್ತದೆ. ಇದನ್ನೂ ಓದಿ: ರಾಜ್ಯದಲ್ಲಿ 8,449, ಬೆಂಗಳೂರಿನಲ್ಲಿ 6,812 ಪಾಸಿಟವ್ – 4 ಸಾವು

    ಜನವರಿ 16ರಂದು ಜಮೈಕಾದ ಸಬಿನಾ ಪಾರ್ಕ್‍ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ನಡುವಿನ ಟಿ-20 ಪಂದ್ಯದಿಂದಲೇ ಈ ಹೊಸ ನಿಯಮಗಳು ಅನ್ವಯಿಸಲಿದೆ. ಇದನ್ನೂ ಓದಿ: ಕೊರೊನಾ ನಿಯಮ ಉಲ್ಲಂಘಿಸಿ ಹೋರಾಟ ಮಾಡ್ಬೇಡಿ – ಕಾಂಗ್ರೆಸ್‍ಗೆ ಕಾರಜೋಳ ಮನವಿ

     

  • 500 ಟಿ20 ಪಂದ್ಯವಾಡಿ ದಾಖಲೆ ಬರೆದ ಬ್ರಾವೋ

    500 ಟಿ20 ಪಂದ್ಯವಾಡಿ ದಾಖಲೆ ಬರೆದ ಬ್ರಾವೋ

    ಬಾಸೆಟೆರ್ರೆ: 500 ಟಿ-20 ಪಂದ್ಯವಾಡಿದ ವಿಶ್ವದ ಎರಡನೇ ಆಟಗಾರ ಎಂಬ ವಿಶ್ವ ದಾಖಲೆಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರ ಡ್ವೇನ್ ಬ್ರಾವೋ ಭಾಜರಾಗಿದ್ದಾರೆ.

    37 ವರ್ಷದ ಈ ದೈತ್ಯ ಆಟಗಾರ, ನಿನ್ನೆ ನಡೆದ ಕೆರೆಬಿಯನ್ ಲೀಗ್ ನ ಫೈನಲ್ ಪಂದ್ಯವನ್ನು ಆಡುವ ಮೂಲಕ ಈ ವಿಶ್ವದಲ್ಲೇ 500 ಟಿ-20 ಪಂದ್ಯವಾಡಿದ ಎರಡನೇ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

    ಮೊದಲ ಸ್ಥಾನವನ್ನು ಅವರದೇ ದೇಶದ ಮತ್ತೊಬ್ಬ ಸ್ಟಾರ್ ಆಟಗಾರ ಕೀರೊನ್ ಪೊಲಾರ್ಡ್ ಅವರಿಸಿಕೊಂಡಿದ್ದಾರೆ. ತಮ್ಮ ದೇಶಕ್ಕಾಗಿ ಅಷ್ಟೇ ಅಲ್ಲದೆ ಎಲ್ಲಾ ದೇಶದ ಫ್ರಾಂಚೈಸಿ ಟಿ-20 ಲೀಗ್ ನಲ್ಲಿ ಆಡಿರುವ ಬ್ರಾವೋ ಉತ್ತಮ ಆಟಗಾರ ಎಂದು ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಫೀಲ್ಡಿಂಗ್ ಮಾಡಿದ ಶ್ವಾನಕ್ಕೆ ಐಸಿಸಿ ಪುರಸ್ಕಾರ..!

    2006ರಲ್ಲಿ ಟಿ-20 ಪಂದ್ಯಕ್ಕೆ ಪಾದರ್ಪಣೆ ಮಾಡಿದ ಬ್ಯಾವೋ, 2010ರಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. 2017ರ ಬಳಿಕ ಏಕದಿನ ಕ್ರಿಕೆಟ್ ನಲ್ಲೂ ಕೂಡ ಭಾಗವಹಿಸಿಲ್ಲ. ಆದರೆ ಟಿ-20 ಕ್ರಿಕೆಟ್ ನಲ್ಲಿ ಮಾತ್ರ ಅಬ್ಬರಿಸುತ್ತಾ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ.  ಇದನ್ನೂ ಓದಿ: ಐಪಿಎಲ್ ನಿಯಮಿತ ಪ್ರೇಕ್ಷಕರಿಗೆ ಗ್ಯಾಲರಿ ಪ್ರವೇಶ ಪಡೆಯಲು ಅನುಮತಿ

    ಸಿಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ 499 ಟಿ 20 ಪಂದ್ಯವಾಡಿದ್ದ ಬ್ರಾವೋ ಒಟ್ಟು 6566 ರನ್ ಕಲೆ ಹಾಕಿದ್ದಾರೆ. ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್ ನಲ್ಲಿಯು ಮಿಂಚಿರುವ ಬ್ರಾವೋ ಬರೋಬ್ಬರಿ 540 ವಿಕೆಟ್ ಉರುಳಿಸಿದ್ದಾರೆ. ಆಟದ ಜೊತೆ ಪ್ರೇಕ್ಷರಿಕೆ ಮೈದಾನದಲ್ಲಿ ವಿಶಿಷ್ಟ ಡ್ಯಾನ್ಸ್ ಮೂಲಕ ರಂಜಿಸುವ ಬ್ರಾವೋ ಪ್ರಸ್ತುತ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುತ್ತಿದ್ದಾರೆ.