Tag: t 20

  • T20 World Cup: ರೋಹಿತ್ ಶರ್ಮಾ ನಾಯಕ, ಹಾರ್ದಿಕ್ ಉಪನಾಯಕ: ಜಯ್ ಶಾ

    T20 World Cup: ರೋಹಿತ್ ಶರ್ಮಾ ನಾಯಕ, ಹಾರ್ದಿಕ್ ಉಪನಾಯಕ: ಜಯ್ ಶಾ

    ಮುಂಬರುವ T20 ವಿಶ್ವಕಪ್ 2024 ರಲ್ಲಿ ರೋಹಿತ್ ಶರ್ಮಾ (Rohit Sharma) ಭಾರತವನ್ನು ಮುನ್ನಡೆಸಲಿದ್ದಾರೆ. ಟಿ-20 ವಿಶ್ವಕಪ್‌ನಲ್ಲಿ ರೋಹಿತ್ ನಾಯಕತ್ವದಲ್ಲಿ ಭಾರತ ತಂಡ ಆಡಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (BCCI secretary Jay Shah) ಬುಧವಾರ ಹೇಳಿದ್ದಾರೆ. ಹಾರ್ದಿಕ್ ಪಾಂಡ್ಯ ಉಪನಾಯಕನಾಗಿದ್ದು, ರಾಹುಲ್ ದ್ರಾವಿಡ್ (Rahul Dravid) ಕೋಚ್ ಆಗಲಿದ್ದಾರೆ.

    ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂಗೆ ಬಿಸಿಸಿಐನ ಮಾಜಿ ಕಾರ್ಯದರ್ಶಿ ನಿರಂಜನ್ ಶಾ (Niranjan Shah) ಅವರ ಹೆಸರಿಡುವ ಕಾರ್ಯಕ್ರಮದ ವೇಳೆ ಜಯ್ ಶಾ ಅವರು, 2023ರಲ್ಲಿ ಅಹಮದಾಬಾದ್‌ನಲ್ಲಿ ಸತತ 10 ಗೆಲುವಿನ ನಂತರ ನಾವು ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ, ಆದರೆ ನಾವು ಹೃದಯವನ್ನು ಗೆದ್ದಿದ್ದೇವೆ ಎಂದು ಹೇಳಿದರು. 2024ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಬಾರ್ಬಡೋಸ್‌ನಲ್ಲಿ ಭಾರತದ ಧ್ವಜವನ್ನು ಹಾರಿಸುವ ಭರವಸೆ ನೀಡುವುದಾಗಿ ತಿಳಿಸಿದರು.

    ಈ ವೇಳೆ ನಿರಂಜನ್ ಶಾ, ಮಾಜಿ ನಾಯಕ ಸುನಿಲ್ ಗವಾಸ್ಕರ್, ಅನಿಲ್ ಕುಂಬ್ಳೆ ಮತ್ತು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್, ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಅಕ್ಷರ್ ಪಟೇಲ್ ಉಪಸ್ಥಿತರಿದ್ದರು. ಇದನ್ನೂ ಓದಿ: ಮುಸ್ಲಿಂ ರಾಷ್ಟ್ರದಲ್ಲಿ ಹಿಂದೂ ದೇಗುಲ ಉದ್ಘಾಟಿಸಿದ PM ಮೋದಿ- ಫೋಟೋಗಳಲ್ಲಿ ನೋಡಿ

  • ಪೋಲಾರ್ಡ್ ವಿದಾಯ ಹೇಳಿದ್ದು ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ: ಕ್ರಿಸ್‌ಗೇಲ್

    ಪೋಲಾರ್ಡ್ ವಿದಾಯ ಹೇಳಿದ್ದು ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ: ಕ್ರಿಸ್‌ಗೇಲ್

    ಮುಂಬೈ: 15 ವರ್ಷಗಳ ಕಾಲ ವೆಸ್ಟ್ಇಂಡೀಸ್ ತಂಡದಲ್ಲಿ ಕ್ರಿಕೆಟ್ ಆಡಿದ 34 ವರ್ಷದ ಕೀರನ್ ಪೊಲಾರ್ಡ್ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಅಭಿಮಾನಿಗಳು ಮಾತ್ರವಲ್ಲದೇ ಸ್ಟಾರ್ ಕ್ರಿಕೆಟರ್‌ಗಳು ಅಭಿನಂದನೆ ಸಲ್ಲಿಸಿದ್ದಾರೆ. ತಮ್ಮ ಜಾಲತಾಣಗಳಲ್ಲಿ ಪೊಲಾರ್ಡ್ ಅವರ ಫೋಟೋ ಹಂಚಿಕೊಳ್ಳುವ ಮೂಲಕ ವಿದಾಯದ ಶುಭಾಶಯ ಕೋರಿದ್ದಾರೆ.

    IPL 2022 MI (1)

    ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸಹ ತಮ್ಮ ಟ್ವೀಟ್‌ನಲ್ಲಿ ಪೋಲಾರ್ಡ್ ಅವರ ಫೋಟೋ ಹಂಚಿಕೊಂಡಿದ್ದು, ಅವರನ್ನು `ಆಲ್‌ರೌಂಡರ್, ಚಾಲೆಂಜರ್, ಫೈಟರ್’ ಎಂದು ಕರೆದಿದ್ದಾರೆ. ಇದನ್ನೂ ಓದಿ: ಡೆಲ್ಲಿ ದರ್ಬಾರ್‌ಗೆ ಪಂಜಾಬ್ ಪಂಚರ್ – 10 ಓವರ್‌ಗಳಲ್ಲಿ ಟಾರ್ಗೆಟ್ ಉಡೀಸ್

    ವೆಸ್ಟ್ಇಂಡೀಸ್ ತಂಡದ ಕ್ರಿಕೆಟಿಗ ಕ್ರಿಸ್‌ಗೇಲ್, ನನಗಿಂತಲೂ ಮುಂಚಿತವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವುದು ನನಗೆ ನಂಬಲಾಗುತ್ತಿಲ್ಲ. ನಿಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಅಭಿನಂದನೆಗಳು. ನಿಮ್ಮ ಜೊತೆಯಲ್ಲಿ ಆಡಿದ ಆಟಗಳು ತುಂಬಾ ಚೆನ್ನಾಗಿವೆ ಎಂದು ನೆನಪಿಸಿಕೊಂಡಿದ್ದಾರೆ.

    ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಪೊಲಾರ್ಡ್ ಅವರು ಆಡುತ್ತಿದ್ದಾರೆ. T20 ಫ್ರಾಂಚೈಸಿ ಹಾಗೂ T-10 ಲೀಗ್ ಟೂರ್ನಿಗಳಲ್ಲೂ ತಮ್ಮ ಆಟ ಮುಂದುವರಿಸಲಿದ್ದಾರೆ. ಬಹಳಷ್ಟು ಯೋಚಿಸಿದ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ನಿರ್ಧಾರ ಕೈಗೊಂಡಿದ್ದೇನೆ ಎಂದು ಅವರು ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಚಾಪ್ಟರ್-2 ಡೈಲಾಗ್ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ವ್ಯಂಗ್ಯ

    Kieron Pollard a

    34 ವರ್ಷ ವಯಸ್ಸಿನ ಪೊಲಾರ್ಡ್ 2007ರಲ್ಲಿ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಕೊನೆಯ ಸರಣಿಯನ್ನು ಭಾರತ ತಂಡದ ವಿರುದ್ಧ ಆಡಿದರು. ಈವರೆಗೆ 123 ಏಕದಿನ ಪಂದ್ಯಗಳು ಹಾಗೂ ಹಾಗೂ 101 ಟಿ20 ಪಂದ್ಯಗಳಲ್ಲಿ ಮಿಂಚಿರುವ ಪೊಲಾರ್ಡ್ ಏಕದಿನ ಪಂದ್ಯಗಳಲ್ಲಿ 2706 (13 ಅರ್ಧ ಶತಕ, 3 ಶತಕ) ಹಾಗೂ T20 ಪಂದ್ಯಗಳಲ್ಲಿ 1569 ರನ್ (6 ಅರ್ಧಶತಕ) ಗಳನ್ನು ಗಳಿಸಿದ್ದಾರೆ. ಏಕದಿನ ಪಂದ್ಯದಲ್ಲಿ 119 ಗರಿಷ್ಠ ರನ್ ಗಳಿಸಿರುವ ಅವರು T20 ನಲ್ಲಿ 75 ಗರಿಷ್ಠ ರನ್‌ಗಳನ್ನು ಪೇರಿಸಿದ್ದಾರೆ.

    ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿರುವ ಅವರು, ಅನೇಕ ಪಂದ್ಯಗಳಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಗೆಲುವಿನ ದಡ ಸೇರಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟಿಗರ ಸ್ಪೋಟಕ ಆಟಗಾರರ ಪಟ್ಟಿಯಲ್ಲೂ ಸ್ಥಾನ ಗಳಿಸಿದ್ದಾರೆ.

  • ಚಹರ್ ಸಿಕ್ಸ್‌ಗೆ ಸೆಲ್ಯೂಟ್ ಹೊಡೆದ ರೋಹಿತ್

    ಚಹರ್ ಸಿಕ್ಸ್‌ಗೆ ಸೆಲ್ಯೂಟ್ ಹೊಡೆದ ರೋಹಿತ್

    ಕೋಲ್ಕತಾ: ಕೀವಿಸ್ ವಿರುದ್ಧ ನಡೆದ ಮೂರನೇ ಟಿ-20 ಪಂದ್ಯದಲ್ಲಿ ಭಾರತದ ವೇಗಿ ದೀಪಕ್ ಚಹರ್ ಸಿಡಿಸಿದ ಸಿಕ್ಸ್‌ಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸೆಲ್ಯೂಟ್ ಹೊಡೆದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

    20ನೇ ಓವರ್ ಎಸೆದ ಆಡಮ್ ಮಿಲ್ನೆ ಅವರ 4ನೇ ಎಸೆತವನ್ನು ಡೀಪ್ ಮಿಡ್ ವಿಕೆಟ್‍ನಲ್ಲಿ ಸಿಕ್ಸ್ ಸಿಡಿಸಿದರು. ಇದರಿಂದ ಪ್ರಭಾವಿತನಾದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಡ್ರೆಸ್ಸಿಂಗ್ ರೂಮಿನಲ್ಲಿ ಸೆಲ್ಯೂಟ್ ಹೊಡೆದಿದ್ದಾರೆ. ಈ ವಿಡಿಯೋಕ್ಕೆ ಈಗ ನೆಟ್ಟಿಗರಿಂದ ಪ್ರಶಂಸೆಯ ಸುರಿಮಳೆ ಹರಿದು ಬರುತ್ತಿದೆ. ಇದನ್ನೂ ಓದಿ: ಲಿಂಗ ತಾರತಮ್ಯವಿಲ್ಲದೇ ಒಂದೇ ರೀತಿ ಸಮವಸ್ತ್ರ ನೀಡಿದ ಕೇರಳ ಶಾಲೆ

    ಕೇವಲ 8 ಎಸೆತಗಳಲ್ಲಿ 21 ರನ್ ದಾಖಲಿಸುವ ಮೂಲಕ ಭಾರತದ ವೇಗಿ ದೀಪಕ್ ಚಹರ್ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದರು. 9ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಚಹರ್ ಎರಡು ಬೌಂಡರಿ ಮತ್ತು 1 ಸಿಕ್ಸ್ ಹೊಡೆಯುವ ಮೂಲಕ ಎಲ್ಲರ ಗಮನ ಸೆಳೆದರು. ಇದನ್ನೂ ಓದಿ: ಸಂಪೂರ್ಣ ಮನೆ ಹಾನಿಯಾಗಿದ್ದರೆ 1 ಲಕ್ಷ ರೂ. ಪರಿಹಾರ: ಸಿಎಂ

    ಭಾರತ ನಿಗದಿತ 20 ಓವರ್‍ನಲ್ಲಿ 7 ವಿಕೆಟ್ ನಷ್ಟಕ್ಕೆ 187 ಬೃಹತ್ ಮೊತ್ತವನ್ನು ಪೇರಿಸಿತ್ತು. ಕೋಲ್ಕತಾದ ಈಡನ್ ಗಾರ್ಡ್‍ನ್‍ಲ್ಲಿ ನಡೆದ ಕೊನೆಯ ಟಿ-20 ಪಂದ್ಯದಲ್ಲಿ ಭಾರತ ತಂಡ 72 ರನ್‍ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ 3-0 ಅಂತರದಲ್ಲಿ ರೋಹಿತ್ ಪಡೆ ಸರಣಿಯನ್ನು ತನ್ನದಾಗಿಸಿಕೊಂಡಿದೆ.

  • ಆರ್‌ಸಿಬಿ ವಿರುದ್ಧ 1 ಬೌಂಡರಿ, 5 ಸಿಕ್ಸರ್ – ಟಿ-20 ಇತಿಹಾಸದಲ್ಲೇ ಗೇಲ್ ಹೊಸ ದಾಖಲೆ

    ಆರ್‌ಸಿಬಿ ವಿರುದ್ಧ 1 ಬೌಂಡರಿ, 5 ಸಿಕ್ಸರ್ – ಟಿ-20 ಇತಿಹಾಸದಲ್ಲೇ ಗೇಲ್ ಹೊಸ ದಾಖಲೆ

    ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಐದು ಸಿಕ್ಸರ್ ಮತ್ತು ಒಂದು ಬೌಂಡರಿ ಸಿಡಿಸಿದ ಪಂಜಾಬ್ ತಂಡದ ದೈತ್ಯ ಆಟಗಾರ ಗೇಲ್, ಟಿ-20 ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ.

    ನಿನ್ನೆ ಶಾರ್ಜಾ ಮೈದಾನದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಪಂದ್ಯದಲ್ಲಿ ಪಂಜಾಬ್ ತಂಡ 8 ವಿಕೆಟ್‍ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ನಾಯಕ ಕೆಎಲ್ ರಾಹುಲ್ ಮತ್ತು ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಅವರು ಅರ್ಧಶತಕ ಸಿಡಿಸಿ ಮಿಂಚಿದರು. ಈ ಮೂಲಕ ಪಂಜಾಬ್ ತಂಡ ಐಪಿಎಲ್-2020ಯಲ್ಲಿ ಎರಡನೇ ಗೆಲುವು ಸಾಧಿಸಿದೆ.

    ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಅಬ್ಬರಿಸಿದ ಗೇಲ್, 45 ಎಸೆತದಲ್ಲಿ ಒಂದು ಬೌಂಡರಿ ಮತ್ತು ಐದು ಭರ್ಜರಿ ಸಿಕ್ಸರ್ ಸಮೇತ 53 ರನ್ ಸಿಡಿಸಿ ಪಂದ್ಯದ ಕೊನೆಯ ಓವರಿನಲ್ಲಿ ರನೌಟ್ ಆದರು. ಆದರೆ ಒಂದು ಬೌಂಡರಿ ಮತ್ತು ಐದು ಭರ್ಜರಿ ಸಿಕ್ಸರ್ ನೊಂದಿಗೆ ಟಿ-20 ಇತಿಹಾದಲ್ಲೇ ಫೋರ್ ಮತ್ತು ಸಿಕ್ಸ್ ಮೂಲಕ 10 ಸಾವಿರ ರನ್ ಮೂಲಕ ಏಕೈಕ ಬ್ಯಾಟ್ಸ್ ಮ್ಯಾನ್ ಎಂಬ ಹೊಸ ದಾಖಲೆ ಬರೆದಿದ್ದಾರೆ.

    ಗೇಲ್ ಟಿ-20 ಮಾದರಿಯ ಆಟಕ್ಕೆ ಹೇಳಿ ಮಾಡಿಸಿದಂತ ಬ್ಯಾಟ್ಸ್‍ಮ್ಯಾನ್ ಆಗಿದ್ದಾರೆ. ಈ ಹೊಡಿಬಡಿ ಆಟದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದಿರುವ ಅವರು, ತಮ್ಮ ವೃತ್ತಿಜೀವನದಲ್ಲಿ ಅಂತಾರಾಷ್ಟ್ರೀಯ ಮತ್ತು ಇತರ ಲೀಗ್‍ಗಳಿಂದ ಬರೋಬ್ಬರಿ 397 ಟಿ-20 ಇನ್ನಿಂಗ್ಸ್ ಗನ್ನು ಆಡಿದ್ದಾರೆ. ಇದರಲ್ಲಿ ಒಟ್ಟು 1,027 ಬೌಂಡರಿಗಳು ಮತ್ತು 983 ಸಿಕ್ಸರ್ ಗಳನ್ನು ಭಾರಿಸಿದ್ದಾರೆ. ಈ ಮೂಲಕ ಟಿ-20ಯಲ್ಲಿ 13,349 ರನ್‍ಗಳಿಸಿದ್ದಾರೆ. ಇದರಲ್ಲಿ 10,006 ರನ್ ಸಿಕ್ಸ್ ಮತ್ತು ಫೋರ್ ಗಳಿಂದ ಬಂದಿವೆ.

    ಜೊತೆಗೆ ಐಪಿಎಲ್‍ನಲ್ಲೂ ಕೂಡ ಗೇಲ್ ಅವರು ಹಲವಾರು ದಾಖಲೆ ಮಾಡಿದ್ದಾರೆ. 125 ಐಪಿಎಲ್ ಪಂದ್ಯಗಳಿಂದ 4,537 ರನ್ ಗಳಿಸಿ ಐಪಿಎಲ್‍ನಲ್ಲಿ ಅತೀ ಹೆಚ್ಚು ರನ್ ಗಳಿಸಿದವರ ಪೈಕಿ 9ನೇ ಸ್ಥಾನದಲ್ಲಿದ್ದಾರೆ. 41.13 ಸರಾಸರಿಯಲ್ಲಿ 6 ಶತಕ ಮತ್ತು 29 ಅರ್ಧಶತಕ ಭಾರಿಸಿದ್ದಾರೆ. ಐಪಿಎಲ್‍ನಲ್ಲಿ 331 ಸಿಕ್ಸರ್ ಭಾರಿಸಿ ಅತೀ ಹೆಚ್ಚು ಸಿಕ್ಸರ್ ಭಾರಿಸಿ ಆಟಗಾರ ಎನಿಸಿಕೊಂಡಿದ್ದಾರೆ. 6 ಶತಕ ಸಿಡಿಸಿ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್ ಮ್ಯಾನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ 175 ರನ್ ಹೊಡೆದು ಅತಿ ಹೆಚ್ಚು ವೈಯಕ್ತಿಕ ರನ್ ಸ್ಕೋರರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

  • ಡೆಲ್ಲಿ ವಿರುದ್ಧ ಸೋತರೂ ಹೊಸ ದಾಖಲೆ ಬರೆದ ಕಿಂಗ್ ಕೊಹ್ಲಿ

    ಡೆಲ್ಲಿ ವಿರುದ್ಧ ಸೋತರೂ ಹೊಸ ದಾಖಲೆ ಬರೆದ ಕಿಂಗ್ ಕೊಹ್ಲಿ

    ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಟಿ-20 ಮಾದರಿಯ ಕ್ರಿಕೆಟಿನಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ.

    ಸೋಮವಾರ ಡೆಲ್ಲಿ ಕ್ಯಾಪಿಟಲ್ ಮತ್ತು ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಕೊಹ್ಲಿ ನೇತೃತ್ವದ ಬೆಂಗಳೂರು ತಂಡ ಸೋತರೂ ಈ ಪಂದ್ಯದಲ್ಲಿ 43 ರನ್ ಗಳಿಸಿದ ವಿರಾಟ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಟಿ-20ಯಲ್ಲಿ 9 ಸಾವಿರ ರನ್ ಪೂರೈಸಿದ ಮೊದಲ ಭಾರತದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಸೋಮವಾರ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಒಂದು ಸಿಕ್ಸರ್ ಮತ್ತು ಎರಡು ಬೌಂಡರಿ ಸಮೇತ 39 ಎಸೆತದಲ್ಲಿ 43 ರನ್ ಸಿಡಿಸಿದ್ದರು. ಈ ಪಂದ್ಯದಲ್ಲಿ 10 ರನ್ ಪೂರ್ಣ ಗೊಳಿಸಿದಾಗಲೇ 9 ಸಾವಿರದ ಮೈಲುಗಲ್ಲನ್ನು ದಾಟಿದರು. ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ ಒಟ್ಟು 285 ಟಿ-20 ಪಂದ್ಯಗಳನ್ನು ಆಡಿದ್ದು, 271 ಇನ್ನಿಂಗ್ಸ್ ಗಳಲ್ಲಿ 9 ಸಾವಿರ ರನ್ ಪೂರ್ಣಗೊಳಿಸಿದ್ದಾರೆ.

    ಕೊಹ್ಲಿಯವರನ್ನು ಬಿಟ್ಟರೆ ಇಂಡಿಯನ್ ಪ್ಲೇಯರ್ಸ್ ಗಳಲ್ಲಿ, ಭಾರತದ ಕ್ರಿಕೆಟ್ ತಂಡದ ಉಪನಾಯಕ ರೋಹಿತ್ ಶರ್ಮಾ ಅವರು 8,818 ರನ್‍ಗಳಿಸಿ ಎರಡನೇ ಸ್ಥಾನ ಮತ್ತು ಭಾರತದ ಮಾಜಿ ಆಟಗಾರ ಸುರೇಶ್ ರೈನಾ ಅವರು 8,392 ರನ್ ಸಿಡಿಸಿ ಮೂರನೇ ಸ್ಥಾನದಲ್ಲಿ ಇದ್ದಾರೆ. 271 ಇನ್ನಿಂಗ್ಸ್ ಗಳಲ್ಲಿ 9 ಸಾವಿರ ರನ್ ಪೂರ್ಣಗೊಳಿಸಿದ ಕೊಹ್ಲಿ ಅತಿ ವೇಗದಲ್ಲಿ 9 ಸಾವಿರ ರನ್ ಗಳಿಸಿದ ಎರಡನೇ ಆಟಗಾರನಾಗಿದ್ದಾರೆ. ಇವರಿಗೂ ಮುಂಚೆ ಕ್ರಿಸ್ ಗೇಲ್ ಅವರು ಕೇವಲ 252 ಇನ್ನಿಂಗ್ಸ್ ನಲ್ಲಿ 9 ಸಾವಿರ ರನ್ ಪೂರ್ಣಗೊಳಿಸಿ ಮೊದಲ ಸ್ಥಾನದಲ್ಲಿ ಇದ್ದಾರೆ.

    ಅಂತಾರಾಷ್ಟ್ರೀಯ ಮಟ್ಟದಲ್ಲಿ 404 ಟಿ-20 ಪಂದ್ಯಗಳನ್ನಾಡಿ 13,296 ರನ್ ಗಳಿಸಿರುವ ದಿಗ್ಗಜ ಆಟಗಾರ ಕ್ರಿಸ್ ಗೇಲ್ ಅವರು ಟಿ-20ಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಇವರ ನಂತರ 517 ಪಂದ್ಯಗಳಲ್ಲಿ 10,370 ರನ್ ಗಳಿಸಿದ ಕಿರನ್ ಪೊಲಾರ್ಡ್ ಅವರು ಎರಡನೇ ಸ್ಥಾನದಲ್ಲಿ ಇದ್ದಾರೆ. ಮೂರನೇ ಸ್ಥಾನದಲ್ಲಿ ಪಾಕಿಸ್ತಾನದ ಶೋಯೆಬ್ ಮಲಿಕ್ ಅವರ ಇದ್ದು, ಇವರು 392 ಪಂದ್ಯಗಳಲ್ಲಿ 9,926 ಗಳಿಸಿದ್ದಾರೆ. ಕೊಹ್ಲಿ ಈ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿ ಇದ್ದಾರೆ.

    ಈಗಾಗಲೇ ವಿರಾಟ್ ಕೊಹ್ಲಿಯವರು ಐಪಿಎಲ್‍ನಲ್ಲಿ 5 ಸಾವಿರದ ಗಡಿ ದಾಟಿದ್ದು, 5,412 ರನ್ ಗಳಿಸಿ ಪ್ರಥಮ ಸ್ಥಾನದಲ್ಲಿ ಇದ್ದಾರೆ. ಅಂತಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ 80 ಟಿ-20 ಪಂದ್ಯಗಳನ್ನು ಆಡಿರುವ ಕೊಹ್ಲಿ 50.80 ಸರಾಸರಿಲ್ಲಿ 2,794 ರನ್ ಸಿಡಿಸಿ ಮೊದಲ ಸ್ಥಾನದಲ್ಲಿ ಇದ್ದಾರೆ. ಇವರ ನಂತರ 108 ಪಂದ್ಯಗಳನ್ನಾಡಿ 2,773 ರನ್ ಸಿಡಿಸಿರುವ ರೋಹಿತ್ ಶರ್ಮಾ ಅವರು ಎರಡನೇ ಸ್ಥಾನದಲ್ಲಿ ಇದ್ದಾರೆ.

  • ಮತ್ತೆ ಮೈದಾನಕ್ಕೆ ಸಿಕ್ಸರ್ ಕಿಂಗ್ ಯುವಿ – ಪಂಜಾಬ್ ತಂಡಕ್ಕಾಗಿ ಕಮ್‍ಬ್ಯಾಕ್?

    ಮತ್ತೆ ಮೈದಾನಕ್ಕೆ ಸಿಕ್ಸರ್ ಕಿಂಗ್ ಯುವಿ – ಪಂಜಾಬ್ ತಂಡಕ್ಕಾಗಿ ಕಮ್‍ಬ್ಯಾಕ್?

    ನವದೆಹಲಿ: ಕಳೆದ ವರ್ಷ ನಿವೃತ್ತಿ ಘೋಷಿಸಿದ ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಮತ್ತೆ ತಮ್ಮ ತವರು ತಂಡ ಪಂಜಾಬ್‍ಗಾಗಿ ಕಮ್‍ಬ್ಯಾಕ್ ಮಾಡುವ ಸಾಧ್ಯತೆಯಿದೆ.

    ಭಾರತ ತಂಡಕ್ಕಾಗಿ 17 ವರ್ಷಗಳ ಕಾಲ ಕ್ರಿಕೆಟ್ ಆಡಿದ ಯುವಿ, ಇಂಡಿಯಾ ಎರಡು ಐಸಿಸಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ 2019ರ ಜೂನ್ ತಿಂಗಳಿನಲ್ಲಿ ಯುವಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು. ಆದರೆ ಈಗ ಮತ್ತೆ ಪಂಜಾಬ್ ತಂಡದ ಪರವಾಗಿ ದೇಶೀಯ ಟಿ-20 ಪಂದ್ಯವಾಡಲು ಮರಳಿ ಮೈದಾನಕ್ಕೆ ಬರುತ್ತಾರೆ ಎಂದು ಹೇಳಲಾಗುತ್ತಿದೆ.

    ನಿವೃತ್ತಿ ನಂತರ ಯುವರಾಜ್ ಪಂಜಾಬ್ ಟಿ-20 ತಂಡಕ್ಕೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದರು. ಈಗ ಯುವರಾಜ್ ಸಿಂಗ್ ಅವರು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ (ಪಿಸಿಎ)ಗೆ ಪತ್ರ ಬರೆದಿದ್ದು, ನಿವೃತ್ತಿಯಿಂದ ಹೊರಬಂದು ಪಂಜಾಬ್ ತಂಡಕ್ಕಾಗಿ ಟಿ-20 ಪಂದ್ಯಗಳನ್ನು ಆಡಲು ಉತ್ಸುಕನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ. ಪಿಸಿಎ ಅನುಮತಿ ನೀಡಿದರೆ ಅವರು ಪಂಜಾಬ್ ಪರ ಟಿ-20 ಪಂದ್ಯವನ್ನಾಡುವುದು ಪಕ್ಕಾ ಎಂದು ಹೇಳಲಾಗುತ್ತಿದೆ.

    ಯುವರಾಜ್ ಸಿಂಗ್ ಅವರು ತಮ್ಮ ತವರು ತಂಡವಾದ ಪಂಜಾಬ್‍ಗೆ ಮಾರ್ಗದರ್ಶಕರನಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಕಾರಣದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಪಂಜಾಬ್ ಆಟಗಾರರು ಮುಂದಿನ ಆಕ್ಟೋಬರ್ ತಿಂಗಳಿಂದ ಅಭ್ಯಾಸವನ್ನು ಆರಂಭಿಸಲಿದ್ದಾರೆ. ಈ ಬಗ್ಗೆ ಈ ಹಿಂದೆ ಮಾತನಾಡಿದ್ದ ಪಿಸಿಎ ಸೆಕ್ರಟರಿ ಪುನೀತ್ ಬಾಲಿ, ನಾವು ಯುವರಾಜ್ ಅವರು ಆಡಬೇಕು ಎಂದು ಪತ್ರ ಬರೆದಿದ್ದೇವೆ. ಅವರು ಆಟಗಾರ ಮತ್ತು ಮಾರ್ಗದರ್ಶಕರಾಗಿ ನಮ್ಮ ತಂಡದಲ್ಲಿ ಇದ್ದರೆ ನಮಗೆ ಒಳ್ಳೆಯದು ಎಂದು ಹೇಳಿದ್ದರು.

    ಸದ್ಯ ನಿವೃತ್ತಿ ನಂತರ ಕಳೆದ ವರ್ಷ ಬಿಸಿಸಿಐನಿಂದ ಅನುಮತಿ ಪಡೆದುಕೊಂಡಿದ್ದ ಯುವರಾಜ್, ಗ್ಲೋಬಲ್ ಟಿ-20 ಲೀಗ್ ಕೆನಡಾ ಮತ್ತು ಟಿ-10 ಲೀಗ್ ಅಬುಧಾಬಿ ಎಂಬ ಎರಡು ವಿದೇಶಿ ಟೂರ್ನಿಯಲ್ಲಿ ಭಾಗವಹಿಸಿದ್ದರು. ಇವುಗಳ ನಂತರ ಅವರು ಮುಂದಿನ ಡಿಸೆಂಬರ್ 3ರಂದು ಆರಂಭವಾಗುವ ಬಿಗ್ ಬ್ಯಾಶ್ ಲೀಗ್‍ನಲ್ಲೂ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯುವರಾಜ್ ಪ್ರತಿಕ್ರಿಯೆ ನೀಡಿಲ್ಲ.

    2017ರಲ್ಲಿ ಭಾರತದ ಪರ ಕಡೆ ಪಂದ್ಯವನ್ನು ಆಡಿದ್ದ ಯುವಿ 2 ವರ್ಷದ ನಂತರ ಯಾವುದೇ ವಿದಾಯ ಪಂದ್ಯವನ್ನು ಆಡದೆ ನಿವೃತ್ತಿ ಘೋಷಿಸಿದ್ದರು. 17 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಯುವರಾಜ್ 40 ಟೆಸ್ಟ್, 304 ಏಕದಿನ ಮತ್ತು 58 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಒಟ್ಟಾರೆಯಾಗಿ ಯುವಿ 231 ಟಿ-20 ಪಂದ್ಯಗಳನ್ನು ಆಡಿದ್ದು, ಈ ಪಂದ್ಯಗಳಲ್ಲಿ 25.69 ಸರಾಸರಿಯಲ್ಲಿ 4,857 ರನ್ ಗಳಿಸಿದ್ದಾರೆ.

  • ಬಾಂಗ್ಲಾ ವಿರುದ್ಧ ಗೆದ್ದು ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ದಾಖಲೆ ಬರೆದ ಭಾರತ

    ಬಾಂಗ್ಲಾ ವಿರುದ್ಧ ಗೆದ್ದು ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ದಾಖಲೆ ಬರೆದ ಭಾರತ

    ನವದೆಹಲಿ: ಗುರುವಾರ ಬಾಂಗ್ಲಾದೇಶದ ವಿರುದ್ಧ ನಡೆದ ಎರಡನೇ ಟಿ-20 ಗೆಲ್ಲುವ ಮೂಲಕ ಭಾರತ ಚುಟುಕು ಪಂದ್ಯಗಳ ಚೇಸಿಂಗ್‍ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿದೆ.

    ಬಾಂಗ್ಲಾ ವಿರುದ್ಧ ಭಾನುವಾರ ನಡೆದ ಮೊದಲ ಟಿ-20 ಪಂದ್ಯದಲ್ಲಿ ಸೋತಿದ್ದ ಭಾರತ, ಗುರುವಾರ ರಾಜ್‍ಕೋಟ್‍ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಸೇಡು ತೀರಿಸಿಕೊಂಡಿತ್ತು. ಬಾಂಗ್ಲಾ ನೀಡಿದ 154 ರನ್‍ಗಳ ಸಾಧಾರಣ ಮೊತ್ತ ಬೆನ್ನತ್ತಿದ ಭಾರತ ನಾಯಕ ರೋಹಿತ್ ಶರ್ಮಾ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 15.4 ಓವರ್ ಗಳಲ್ಲೇ 154 ರನ್ ಹೊಡೆದು ಜಯಗಳಿಸಿತು.

    ಬಾಂಗ್ಲಾ ವಿರುದ್ಧ ಪಂದ್ಯದಲ್ಲಿ ಎಂಟು ವಿಕೆಟ್‍ಗಳ ಜಯ ಸಾಧಿಸಿದ ಭಾರತ, ಟಿ-20 ಚೇಸಿಂಗ್‍ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ ಹೊಸ ದಾಖಲೆಯನ್ನು ಬರೆದಿದೆ. ಟಿ-20 ಯಲ್ಲಿ ಒಟ್ಟು 69 ಬಾರಿ ಚೇಸಿಂಗ್ ಮಾಡಿರುವ ಆಸಿಸ್ ಅದರಲ್ಲಿ 40 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಆದರೆ 61 ಪಂದ್ಯಗಳಲ್ಲಿ ಚೇಸಿಂಗ್ ಮಾಡಿರುವ ಭಾರತ ಅದರಲ್ಲಿ 41 ಪಂದ್ಯಗಳನ್ನು ಗೆದ್ದು ಹೊಸ ದಾಖಲೆಯನ್ನು ನಿರ್ಮಾಣ ಮಾಡಿದೆ. ಈ ಎರಡು ತಂಡಗಳನ್ನು ಬಿಟ್ಟರೆ ಒಟ್ಟು 67 ಚೇಸಿಂಗ್ ನಲ್ಲಿ ಪಾಕಿಸ್ತಾನ 36 ರಲ್ಲಿ ಗೆಲವು ಸಾಧಿಸಿ ಮೂರನೇ ಸ್ಥಾನ ಪಡೆದಿದೆ.

    ಎರಡನೇ ಪಂದ್ಯದಲ್ಲಿ ಬಾಂಗ್ಲಾ ನೀಡಿದ 154 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತ 15.4 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 154 ರನ್ ಹೊಡೆದು ಜಯಗಳಿಸಿತು. ತನ್ನ 100 ನೇ ಪಂದ್ಯವನ್ನು ಸ್ಮರಣೀಯವಾಗಿಸಿದ ರೋಹಿತ್ ಶರ್ಮಾ ತಾನು ಹಿಟ್ ಮ್ಯಾನ್ ಎನ್ನುವುದನ್ನು ಮತ್ತೊಮ್ಮೆ ತೋರಿಸಿದರು. 23 ಎಸೆತಗಳಲ್ಲಿ ಅರ್ಧ ಶತಕ ಹೊಡೆತ ರೋಹಿತ್ 85 ರನ್ (43 ಎಸೆತ, 6 ಬೌಂಡರಿ, 6 ಸಿಕ್ಸರ್) ಹೊಡೆದು ಶತಕದಿಂದ ವಂಚಿತರಾದರು. ತನ್ನ ಅತ್ಯುತ್ತಮ ಆಟಕ್ಕಾಗಿ ರೋಹಿತ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

    ರೋಹಿತ್ ಬ್ಯಾಟಿಂಗ್ ಆರ್ಭಟ ಹೇಗಿತ್ತು ಅಂದರೆ 5.2 ಓವರ್ ಗಳಲ್ಲಿ 50 ರನ್ ಬಂದರೆ, 9.2 ಓವರ್ ಗಳಲ್ಲಿ ಭಾರತ 100 ರನ್ ಗಳಿಸಿತು. ನಾಯಕನಿಗೆ ಉತ್ತಮ ಸಾಥ್ ನೀಡಿದ ಶಿಖರ್ ಧವನ್ 31 ರನ್ (27 ಎಸೆತ, 4 ಬೌಂಡರಿ) ಹೊಡೆದರು. ಇವರಿಬ್ಬರು ಮೊದಲ ವಿಕೆಟಿಗೆ 11.5 ಓವರ್ ಗಳಲ್ಲಿ 118 ರನ್ ಜೊತೆಯಾಟವಾಡಿ ಭಾರತದ ಗೆಲುವಿಗೆ ಭದ್ರ ಬುನಾದಿ ಹಾಕಿದರು. ಕೊನೆಯಲ್ಲಿ ಕೆ.ಎಲ್. ರಾಹುಲ್ ಔಟಾಗದೇ 8 ರನ್, ಶ್ರೇಯಸ್ ಅಯ್ಯರ್ ಔಟಾಗದೇ 24 ರನ್ (13 ಎಸೆತ, 3 ಬೌಂಡರಿ,1 ಸಿಕ್ಸರ್) ಹೊಡೆದರು. ಕೊನೆಯ ಟಿ 20 ಪಂದ್ಯ ಭಾನುವಾರ ನಾಗ್ಪುರದಲ್ಲಿ ನಡೆಯಲಿದೆ.

  • ದುರ್ಬಲರಂತೆ ಬಂದರೂ ಕೋಚ್ ಉತ್ತಮ ತರಬೇತಿ ನೀಡಿದ್ರು- ಮುಷ್ಫಿಕರ್ ರಹೀಮ್

    ದುರ್ಬಲರಂತೆ ಬಂದರೂ ಕೋಚ್ ಉತ್ತಮ ತರಬೇತಿ ನೀಡಿದ್ರು- ಮುಷ್ಫಿಕರ್ ರಹೀಮ್

    ನವದೆಹಲಿ: ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವು ಭಾರತವನ್ನು 7 ವಿಕೆಟ್‌ಗಳಿಂದ ಸೋಲಿಸಿ, ಐತಿಹಾಸಿಕ ಗೆಲುವಿಗೆ ಸಾಕ್ಷಿಯಾಯಿತು. ದೆಹಲಿಯ ವಾಯುಮಾಲಿನ್ಯವು ಗಂಭೀರ ಮಟ್ಟದಲ್ಲಿರುವುದರಿಂದ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ. ಬಾಂಗ್ಲಾ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದ ಮುಷ್ಫಿಕರ್ ರಹೀಮ್, ಇದು ನನಗೆ ವಿಶೇಷ ವಿಷಯವಲ್ಲ. ಮಾಲಿನ್ಯಕ್ಕಿಂತ ಭಾರತೀಯ ಬೌಲರ್‌ಗಳನ್ನು ಎದುರಿಸುವ ಬಗ್ಗೆ ನನಗೆ ಹೆಚ್ಚು ಚಿಂತೆ ಇತ್ತು ಎಂದು ಹೇಳಿಕೊಂಡಿದ್ದಾರೆ.

    ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯುವಾಗ ಮಾತನಾಡಿದ ಮುಷ್ಫಿಕರ್ ರಹೀಮ್, ನಾವು ಪರಿಸ್ಥಿತಿಯ ಬಗ್ಗೆ ಚಿಂತಿಸದೆ ಪಂದ್ಯವನ್ನು ಆಡಿದ್ದೇವೆ. ಭಾರತಕ್ಕೆ ಭೇಟಿ ನೀಡಿದಾಗಿನಿಂದಲೂ ಇದೇ ರೀತಿಯ ಹವಾಮಾನವನ್ನು ಎದುರಿಸಿದ್ದೇವೆ. ಅದಕ್ಕಾಗಿಯೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ. ಭಾರತದ ನೆಲದಲ್ಲಿಯೇ ಟೀಂ ಇಂಡಿಯಾವನ್ನು ಸೋಲಿಸಿದ್ದೇವೆ. ಇದಕ್ಕಿಂತ ಉತ್ತಮ ಸಾಧನೆ ಮತ್ತೊಂದಿಲ್ಲ. ಈ ಪಂದ್ಯದಲ್ಲಿ ನನಗೆ ಸೌಮ್ಯ ಸರ್ಕಾರ್ ಸಾಥ್ ಸಾಥ್ ನೀಡಿ ತಂಡದ ಗೆಲುವಿಗೆ ಅವಕಾಶ ಮಾಡಿಕೊಟ್ಟರು ಎಂದು ತಿಳಿಸಿದರು. ಇದನ್ನೂ ಓದಿ: ಕ್ಯಾಚ್ ಡ್ರಾಪ್, ಕೊನೆಯಲ್ಲಿ ಸತತ 4‌ ಬೌಂಡರಿ – ಗೆದ್ದು ಇತಿಹಾಸ ನಿರ್ಮಿಸಿದ ಬಾಂಗ್ಲಾ

    ನಾವು ಇಲ್ಲಿಗೆ ಬಂದಿರುವುದು ದುರ್ಬಲರಂತೆ. ಕಳೆದ ಮೂರು ವಾರಗಳಲ್ಲಿ ತಂಡದ ಕೋಚ್ ನಮಗೆ ಉತ್ತಮ ತರಬೇತಿ ನೀಡಿದ್ದಾರೆ. ಇದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದರು.

    ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶಕ್ಕೆ 149 ರನ್‌ಗಳ ಗುರಿ ನೀಡಿತ್ತು. ಇದನ್ನು ಬಾಂಗ್ಲಾದೇಶದ ತಂಡವು 19.3 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 154 ರನ್ ಹೊಡೆದು ಜಯಗಳಿಸಿತು. ಬಾಂಗ್ಲಾ ಪರ ಮುಷ್ಫಿಕರ್ ರಹೀಮ್ ಅತ್ಯಧಿಕ (60 ರನ್) ಮತ್ತು ಸೌಮ್ಯ ಸರ್ಕಾರ್ 39 ರನ್ ಗಳಿಸಿದ್ದರು. ಮೂರನೇ ವಿಕೆಟಿಗೆ ಇವರಿಬ್ಬರೂ 60 ರನ್ ಜೊತೆಯಾಟವಾಡಿ ಬಾಂಗ್ಲಾ ತಂಡವನ್ನು ಗೆಲುವಿನ ಸಮೀಪ ತಂದರು.

    ವಾಯುಮಾಲಿನ್ಯದ ವಿಪರೀತ ಪರಿಸ್ಥಿತಿಯ ಮಧ್ಯೆ ಅದ್ಭುತವಾಗಿ ಆಡಿದ ಮತ್ತು ಪ್ರದರ್ಶನ ನೀಡಿದ ಉಭಯ ತಂಡಗಳಿಗೆ ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಧನ್ಯವಾದ ತಿಳಿಸಿದ್ದಾರೆ.

    ಸ್ಟೇಡಿಯಂ ಭರ್ತಿ:
    ದೆಹಲಿಯಲ್ಲಿ ಪಂದ್ಯಕ್ಕೂ ಮುನ್ನ ಮಾಲಿನ್ಯದ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಇದರ ಹೊರತಾಗಿಯೂ ಅರುಣ್ ಜೇಟ್ಲಿ ಕ್ರೀಡಾಂಗಣವು ಭಾನುವಾರ ಸಂಪೂರ್ಣ ಭರ್ತಿಯಾಗಿತ್ತು. ಈ ಮಾಲಿನ್ಯವು ಆಟಗಾರರಿಗೆ ಮತ್ತು ಪ್ರೇಕ್ಷಕರಿಗೆ ಅಪಾಯಕಾರಿ ಎಂದು ಹೇಳಲಾಗಿತ್ತು. ಆದರೆ ಇದು ಕ್ರಿಕೆಟ್ ಅಭಿಮಾನಿಗಳ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಜೊತೆಗೆ ಪಂದ್ಯ ಪ್ರಾರಂಭವಾಗುವ ಮುನ್ನ ಸುಮಾರು 46 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ಕ್ರೀಡಾಂಗಣ ಸಂಪೂರ್ಣವಾಗಿ ತುಂಬಿತ್ತು.

  • ಬಾಂಗ್ಲಾ ವಿರುದ್ಧದ ಟಿ-20 ಪಂದ್ಯಕ್ಕೂ ಮುನ್ನವೇ ಹಿಟ್‍ಮ್ಯಾನ್‍ಗೆ ಗಾಯ

    ಬಾಂಗ್ಲಾ ವಿರುದ್ಧದ ಟಿ-20 ಪಂದ್ಯಕ್ಕೂ ಮುನ್ನವೇ ಹಿಟ್‍ಮ್ಯಾನ್‍ಗೆ ಗಾಯ

    ನವದೆಹಲಿ: ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಮೂರು ಟಿ-20 ಪಂದ್ಯಗಳ ಕ್ರಿಕೆಟ್ ಸರಣಿಗೆ ದಿನಗಣನೆ ಆರಂಭವಾಗಿದೆ. ಆದರೆ ನೆಟ್ ಅಭ್ಯಾಸದ ವೇಳೆ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‍ಮನ್ ರೋಹಿತ್ ಶರ್ಮಾ ಗಾಯಗೊಂಡಿದ್ದಾರೆ.

    ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಇಂದು ಟೀಂ ಇಂಡಿಯಾ ನೆಟ್ ಅಭ್ಯಾಸ ನಡೆಸಿತ್ತು. ಈ ವೇಳೆ ಭಾರತದ ಥ್ರೋಡೌನ್ ಪರಿಣಿತ ನುವಾನ್ ಸೆನೆವಿರತ್ನ ಬೌಲಿಂಗ್ ಮಾಡುತ್ತಿದ್ದರು. ಚೆಂಡು ಏಕಾಏಕಿ ರೋಹಿತ್ ಶರ್ಮಾ ಕಾಲಿಗೆ ಬಡಿದ ಪರಿಣಾಮ ನೋವಿನಿಂದ ತಕ್ಷಣವೇ ಅಭ್ಯಾಸ ಮೊಟಕುಗೊಳಿಸಿ ಕ್ರೀಡಾಂಗಣದಿಂದ ಹೊರ ನಡೆದಿದ್ದಾರೆ.

    ದಿನವಿಡಿ ಅಭ್ಯಾಸದಿಂದ ರೋಹಿತ್ ಶರ್ಮಾ ಮೈದಾನದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ರೋಹಿತ್ ಶರ್ಮಾ ಬಾಂಗ್ಲಾ ವಿರುದ್ಧ ಟಿ-20 ಪಂದ್ಯಕ್ಕೆ ಅಲಭ್ಯರಾಗುತ್ತಾರಾ ಎನ್ನುವ ಆತಂಕ ಅಭಿಮಾನಿಗಳಲ್ಲಿ ಶುರುವಾಗಿದೆ.

    ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕತ್ವದ ಜವಾಬ್ದಾರಿ ರೋಹಿತ್ ಶರ್ಮಾ ಹೊತ್ತುಕೊಂಡಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನವೆಂಬರ್ 3ರಂದು ಬಾಂಗ್ಲಾ ವಿರುದ್ಧದ ಮೊದಲ ಟಿ-20 ಪಂದ್ಯ ನಡೆಯಲಿದೆ. ಅದಕ್ಕಾಗಿ ಈಗಾಗಲೇ ಉಭಯ ತಂಡಗಳು ನೆಟ್‍ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿವೆ.

    ರೋಹಿತ್ ಶರ್ಮಾ ಇನ್ನೆರಡು ದಿನಗಳಲ್ಲಿ ಚೇತರಿಸಿಕೊಂಡು ಬಾಂಗ್ಲಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಅಂತ ಟೀಂ ಇಂಡಿಯಾ ತಿಳಿಸಿದೆ ಎಂದು ವರದಿಯಾಗಿದೆ.

  • ಟಿ-20ಯಲ್ಲಿ ಧೋನಿ, ರೋಹಿತ್ ಮಾಡದ ಸಾಧನೆ ಮಾಡಿದ ಹರ್ಮನ್‍ಪ್ರೀತ್ ಕೌರ್

    ಟಿ-20ಯಲ್ಲಿ ಧೋನಿ, ರೋಹಿತ್ ಮಾಡದ ಸಾಧನೆ ಮಾಡಿದ ಹರ್ಮನ್‍ಪ್ರೀತ್ ಕೌರ್

    ನವದೆಹಲಿ: ಭಾರತದ ಮಹಿಳಾ ಟಿ-20 ಕ್ರಿಕೆಟ್ ತಂಡದ ನಾಯಕಿ ಹರ್ಮನ್‍ಪ್ರೀತ್ ಕೌರ್ ಎಂ.ಎಸ್ ಧೋನಿ ಮತ್ತು ರೋಹಿತ್ ಶರ್ಮಾ ಅವರು ಮಾಡಿರದ ಸಾಧನೆಯನ್ನು ಟಿ-20ಯಲ್ಲಿ ಮಾಡಿದ್ದಾರೆ.

    ಶುಕ್ರವಾರ ಸೂರತ್‍ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧ ಟಿ-20 ಪಂದ್ಯವನ್ನು ಆಡಿದ ಹರ್ಮನ್‍ಪ್ರೀತ್ ಕೌರ್, ಈ ಮೂಲಕ ಭಾರತ ಪರವಾಗಿ 100 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡಿದ ಮೊದಲ ಆಟಗಾರ್ತಿಯಾಗಿದ್ದಾರೆ. ಈವರೆಗೆ ಪುರುಷರ ವಿಭಾಗದಲ್ಲೂ ಕೂಡ ಯಾರು ಈ ಸಾಧನೆ ಮಾಡಿಲ್ಲ.

    ಭಾರತದ ಪರ ಪುರುಷರ ವಿಭಾಗದಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಆಡಿರುವ ಮಾಜಿ ನಾಯಕ ಎಂ.ಎಸ್ ಧೋನಿ ಮತ್ತು ಉಪನಾಯಕ ರೋಹಿತ್ ಶರ್ಮಾ ಇಬ್ಬರು ತಲಾ 98 ಪಂದ್ಯಗಳನ್ನು ಆಡಿದ್ದಾರೆ. ಆದರೆ ಹರ್ಮನ್‍ಪ್ರೀತ್ ಕೌರ್ ಅವರು ಇವರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ.

    2006 ರಲ್ಲಿ ಚುಟುಕು ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ ಧೋನಿ ಅವರು ಇಲ್ಲಿಯವರಿಗೆ 98 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡಿದ್ದಾರೆ. ಇದಾದ ನಂತರ 2007 ರಲ್ಲಿ ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ ರೋಹಿತ್ ಕೂಡ 98 ಪಂದ್ಯಗಳನ್ನು ಆಡಿದ್ದಾರೆ. ಆದರೆ 2009 ರಲ್ಲಿ ಇಂಗ್ಲೆಂಡ್ ವಿರುದ್ಧ ಟಿ-20 ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ ಹರ್ಮನ್‍ಪ್ರೀತ್ ಕೌರ್ ಆಗಲೇ 100 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡಿದ್ದಾರೆ.

    ಟಿ-20 ಪಂದ್ಯಗಳಲ್ಲಿ ಭಾರತದ ಪರ ಉತ್ತಮ ಆಲ್‍ರೌಂಡರ್ ಆಗಿರುವ ಹರ್ಮನ್‍ಪ್ರೀತ್ ಕೌರ್, ಆಡಿರುವ 100 ಪಂದ್ಯಗಳಲ್ಲಿ 28.61 ಸರಾಸರಿಯಲ್ಲಿ ಬ್ಯಾಟ್ ಬೀಸಿ ಒಟ್ಟು 2,003 ರನ್ ಗಳಿಸಿದ್ದಾರೆ. ತಂಡಕ್ಕೆ ಅಗತ್ಯವಿದ್ದ ಸಮಯದಲ್ಲಿ ಬೌಲಿಂಗ್ ಕೂಡ ಮಾಡುವ ಕೌರ್ ಒಟ್ಟು 27 ವಿಕೆಟ್ ಕಿತ್ತು ಮಿಂಚಿದ್ದಾರೆ. ಇದರ ಜೊತೆ ಭಾರತದ ಮಹಿಳಾ ಟಿ-20 ತಂಡದ ನಾಯಕಿಯಾಗಿಯೂ ಕಾರ್ಯನಿರ್ವಹಿಸುತಿದ್ದಾರೆ.

    ಹರ್ಮನ್ ಅವರ ಈ ಸಾಧನೆ ಕುರಿತು ಟ್ವೀಟ್ ಮಾಡಿರುವ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಮಹಿಳಾ ತಂಡದ ಮುಖ್ಯ ಕೋಚ್ ಡಬ್ಲ್ಯು.ವಿ ರಾಮನ್ ಅವರು ಹರ್ಮನ್‍ಪ್ರೀತ್ ಕೌರ್ ಕ್ಯಾಪ್ ನೀಡಿ ಅಭಿನಂದನೆ ಅಲ್ಲಿಸಿದ ವಿಡಿಯೋ ಹಾಕಿ 100 ಅಂತಾರಾಷ್ಟ್ರೀಯ ಪಂದ್ಯವಾಡಿದ ನಾಯಕಿಗೆ ವಿಶೇಷ ಕ್ಯಾಪ್ ಎಂದು ಬರೆದುಕೊಂಡಿದೆ.

    ಸದ್ಯ ಭಾರತದ ಮಹಿಳಾ ತಂಡ ಸೌತ್ ಅಫ್ರಿಕಾ ವಿರುದ್ಧ ಆರು ಪಂದ್ಯಗಳ ಟಿ-20 ಸರಣಿಯನ್ನು ಆಡುತ್ತಿದ್ದು, ಈ ಸರಣಿಯ ಎರಡು ಪಂದ್ಯಗಳು ಮಳೆಯಿಂದಾಗಿ ರದ್ದಾಗಿವೆ. ಉಳಿದ ಮೂರು ಪಂದ್ಯಗಳಲ್ಲಿ ಗೆದ್ದಿರುವ ಭಾರತ 3-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.