Tag: syndicate bank

  • ರಾಜ್ಯ ಕೃಷಿ ಮಾರಾಟ ಮಂಡಳಿಯ 50 ಕೋಟಿ ರೂ. ಲಪಟಾಟಯಿಸಿದ್ದ ಆರೋಪಿಗಳು ಅರೆಸ್ಟ್

    ರಾಜ್ಯ ಕೃಷಿ ಮಾರಾಟ ಮಂಡಳಿಯ 50 ಕೋಟಿ ರೂ. ಲಪಟಾಟಯಿಸಿದ್ದ ಆರೋಪಿಗಳು ಅರೆಸ್ಟ್

    ಬೆಂಗಳೂರು: ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ನಿಶ್ಚಿತ ಠೇವಣಿ ಹಣದ ನೂರು ಕೋಟಿ ರೂ.ಗಳಲ್ಲಿ 48 ಕೋಟಿ ರೂ. ಹಣ ನುಂಗಿ ನೀರು ಕುಡಿದಿದ್ದ ಸಿಂಡಿಕೇಟ್ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಸೇರಿ 6 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಅಸಿಸ್ಟೆಂಟ್ ಮ್ಯಾನೇಜರ್ ಜಯರಾಮ್, ಮುಸ್ತಪಾ, ಅಬ್ದುಲ್ ಅಸ್ಲಾಂ, ಸಿದ್ದಗಂಗಯ್ಯ, ರೇವಣ್ಣ ನನ್ನ ಬಂಧಿಸಿರುವ ಸಿಸಿಬಿ ಪೊಲೀಸರು ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. 2019ರ ನವೆಂಬರ್ ನಲ್ಲಿ ಮಂಡಳಿಯ ಅವರ್ತ ನಿಧಿಯಿಂದ ಉತ್ತರ ಹಳ್ಳಿ ಬ್ರಾಂಚ್‍ನ ಸಿಂಡಿಕೇಟ್ ಬ್ಯಾಂಕ್‍ನಲ್ಲಿ ಬರೋಬ್ಬರಿ 100 ಕೋಟಿ ರೂ. ನಿಶ್ಚಿತ ಠೇವಣಿ ಮಾಡಲಾಗಿತ್ತು.

    ಅಧಿಕ ಬಡ್ಡಿ ಆಸೆಗಾಗಿ ಸಿಂಡಿಕೇಟ್ ಬ್ಯಾಂಕ್‍ನಲ್ಲಿದ್ದ 100 ಕೋಟಿ ರೂ. ನಿಶ್ಚಿತ ಠೇವಣಿ ಮಾಡಿದ್ದ ಮಂಡಳಿ ಪ್ರತ್ಯೇಕವಾಗಿ ಎರಡು ಅಕೌಂಟ್‍ನಲ್ಲಿ ತಲಾ 50 ಕೋಟಿ ರೂ. ಹಣ ಇಟ್ಟಿತ್ತು. ಜನವರಿಯಲ್ಲಿ ನಿಶ್ಚಿತ ಠೇವಣಿ ಬಗ್ಗೆ ಮಾಹಿತಿ ಕೇಳಿದ ಕೃಷಿ ಅಧಿಕಾರಿಗಳು ಸಿಂಡಿಕೇಟ್ ಬ್ಯಾಂಕ್‍ನಲ್ಲಿ ಕೇವಲ 50 ಕೋಟಿ ರೂ. ಇದೇ ಎಂದು ಮಾಹಿತಿ ಕೊಟ್ಟಿದ್ದರು. ಬ್ಯಾಂಕ್ ಅಧಿಕಾರಿಗಳ ಮಾಹಿತಿ ಇಂದ ಕಂಗಾಲಾದ ಮಂಡಳಿ ಅಧಿಕಾರಿಗಳು ಕಮರ್ಷಿಯಲ್ ಪೊಲೀಸ್ ಠಾಣೆಯಲ್ಲಿ ವಂಚನೆಯ ಬಗ್ಗೆ ದೂರು ದಾಖಲಿಸಿದ್ದರು.

    ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡ ಸರ್ಕಾರ ಸಿಸಿಬಿ ಹೆಗಲಿಗೆ ನೀಡಿತ್ತು. ಮೊದಲು ಬಂಧಿತರು ನೀಡಿದ್ದ 2 ನಿಶ್ಚಿತ ಠೇವಣಿ ಸಂಖ್ಯೆ ನಕಲಿ ಎಂದು ತಿಳಿದು ಬಂದಿತ್ತು. ಸದ್ಯ ಉಳಿದ 50 ಕೋಟಿ ರೂ. ಹಣದ ಮಾಹಿತಿಯನ್ನು ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಡಿಸಿಪಿ ರವಿಕುಮಾರ್ ನೇತೃತ್ವದ ತಂಡ ತನಿಖೆ ನಡೆಸಿ 50 ಕೋಟಿ ರೂ. ಹಣವನ್ನು ವಶಕ್ಕೆ ಪಡೆದು ಉಳಿದ 50 ಕೋಟಿ ರೂ. ಹಣದ ಮಾಹಿತಿಯನ್ನು ಬಂಧಿತ ಆರೋಪಿಗಳಿಂದ ಪಡೆದು ರಿಕವರಿ ಮಾಡಲು ಮುಂದಾಗಿದ್ದಾರೆ.

  • ಕೆನರಾ ಜೊತೆ ಸಿಂಡಿಕೇಟ್ ಬ್ಯಾಂಕ್ ವಿಲೀನ

    ಕೆನರಾ ಜೊತೆ ಸಿಂಡಿಕೇಟ್ ಬ್ಯಾಂಕ್ ವಿಲೀನ

    ನವದೆಹಲಿ: ಕರ್ನಾಟಕದ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್‍ಗಳನ್ನು ವಿಲೀನ ಮಾಡಲು ಸರ್ಕಾರ ಮುಂದಾಗಿದೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, 2017 ರಲ್ಲಿ 17 ಸಾರ್ವಜನಿಕ ವಲಯದ ಬ್ಯಾಂಕ್‍ಗಳಿದ್ದವು. ಇದನ್ನು 13ಕ್ಕೆ ಇಳಿಸುವ ನಿಟ್ಟಿನಲ್ಲಿ ಈ ವಿಲೀನ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.

    ಪಂಜಾಬ್ ನ್ಯಾಷನಲ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಹಾಗೂ ಯುನೈಟೆಡ್ ಬ್ಯಾಂಕ್ ವಿಲೀನವಾದರೆ ಇಂಡಿಯನ್ ಬ್ಯಾಂಕ್ ಜೊತೆ ಅಲಹಾಬಾದ್ ಬ್ಯಾಂಕ್ ವಿಲೀನವಾಗಲಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಆಂಧ್ರ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್ ವಿಲೀನವಾಗಲಿದೆ.

    ವಸೂಲಾಗದ ಸಾಲ(ಎನ್‍ಪಿಎ) ಪ್ರಮಾಣ 8.65 ಲಕ್ಷ ಕೋಟಿಯಿಂದ 7.90 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ. ಆರ್ಥಿಕತೆಯನ್ನು 5 ಟ್ರಿಲಿಯನ್ ಗುರಿ ತಲುಪಲು ಕೇಂದ್ರ ಸರಕಾರ ಎಲ್ಲ ರೀತಿಯ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ 10 ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

    1906ರಲ್ಲಿ ಮಂಗಳೂರಿನಲ್ಲಿ ಅಮ್ಮೆಂಬಳ ಸುಬ್ಬರಾವ್ ಪೈ ಕೆನರಾ ಬ್ಯಾಂಕ್ ಆರಂಭಿಸಿದ್ದರೆ, ಸಿಂಡಿಕೇಟ್ ಬ್ಯಾಂಕ್ ಅನ್ನು ಉಪೇಂದ್ರ ಅನಂತ್ ಪೈ, ಟಿಎಂಎ ಪೈ, ವಾಮನ ಕುಡುವ 1924 ರಲ್ಲಿ ಮಣಿಪಾಲದಲ್ಲಿ ಆರಂಭಿಸಿದ್ದರು. ಕಾರ್ಪೋರೇಷನ್ ಬ್ಯಾಂಕ್ ಅನ್ನು 1906 ರಲ್ಲಿ ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಮಂಗಳೂರಿನಲ್ಲಿ ಸ್ಥಾಪಿಸಿದ್ದರು. ಈ ಹಿಂದೆ ಮಂಗಳೂರು ಮೂಲದ ವಿಜಯ್ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾದ ಜೊತೆ ವಿಲೀನಗೊಂಡಿತ್ತು.

  • ಮತ್ತೊಮ್ಮೆ ಬ್ಯಾಂಕ್ ಗಳ ವಿಲೀನ: ಯಾವ ಬ್ಯಾಂಕ್ ಜೊತೆ ಯಾವ ಬ್ಯಾಂಕ್ ಗಳು ವಿಲೀನ?

    ಮತ್ತೊಮ್ಮೆ ಬ್ಯಾಂಕ್ ಗಳ ವಿಲೀನ: ಯಾವ ಬ್ಯಾಂಕ್ ಜೊತೆ ಯಾವ ಬ್ಯಾಂಕ್ ಗಳು ವಿಲೀನ?

    ನವದೆಹಲಿ: ಸಾರ್ವಜನಿಕ ವಲಯದಲ್ಲಿರುವ 21 ಬ್ಯಾಂಕ್ ಗಳನ್ನು 12ಕ್ಕೆ ಇಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಮತ್ತೊಂದು ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ.

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜೊತೆ 5 ಬ್ಯಾಂಕ್ ಗಳು ವಿಲೀನ ಪ್ರಕ್ರಿಯೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಮತ್ತಷ್ಟು ಬ್ಯಾಂಕ್ ಗಳನ್ನು ವಿಲೀನಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

    ಮೂರು ಬ್ಯಾಂಕ್ ಗಳನ್ನು ಒಂದು ಬ್ಯಾಂಕಿನಲ್ಲಿ ವಿಲೀನಗೊಳಿಸುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಝೀ ಬಿಸಿನೆಸ್ ವಾಹಿನಿಯು ಯಾವೆಲ್ಲ ಬ್ಯಾಂಕ್ ಗಳು ಯಾವ ಬ್ಯಾಂಕ್ ಜೊತೆ ವಿಲೀನಗೊಳ್ಳಲಿದೆ ಎನ್ನುವ ವರದಿಯನ್ನು ಪ್ರಕಟಿಸಿದೆ.

    21 ಸಣ್ಣ ಪುಟ್ಟ ಬ್ಯಾಂಕ್ ಗಳ ಬದಲಿಗೆ 12 ದೊಡ್ಡ ಬ್ಯಾಂಕ್ ಗಳನ್ನು ಸೃಷ್ಟಿಸಲು ಸರ್ಕಾರ ಮುಂದಾಗಿದೆ. ಎಸ್‍ಬಿಐ ವಿಲೀನದಂತೆ ಮತ್ತಷ್ಟು ಬ್ಯಾಂಕ್ ಗಳನ್ನು ಮುಂದೆ ವಿಲೀನ ಮಾಡಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಜೂನ್ ಮೊದಲ ವಾರದಲ್ಲಿ ಹೇಳಿಕೆ ನೀಡಿದ್ದರು.

    ಯಾವ ಬ್ಯಾಂಕ್ ಯಾವ ಬ್ಯಾಂಕ್ ಜೊತೆ ವಿಲೀನ
    1. ಯುನೈಟೆಡ್ ಬ್ಯಾಂಕ್ + ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್ —-> ಬ್ಯಾಂಕ್ ಆಫ್ ಬರೋಡಾ
    2. ಸಿಂಡಿಕೇಟ್ ಬ್ಯಾಂಕ್ + ಇಂಡಿಯನ್ ಓವರ್‍ಸೀಸ್ ಬ್ಯಾಂಕ್ + ಯುಕೋ ಬ್ಯಾಂಕ್ —-> ಕೆನರಾ ಬ್ಯಾಂಕ್
    3. ಐಡಿಬಿಐ ಬ್ಯಾಂಕ್ + ಸೆಂಟ್ರಲ್ ಬ್ಯಾಂಕ್ + ದೆನಾ ಬ್ಯಾಂಕ್ —-> ಯೂನಿಯನ್ ಬ್ಯಾಂಕ್
    4. ಆಂಧ್ರ ಬ್ಯಾಂಕ್ + ಬ್ಯಾಂಕ್ ಆಫ್ ಮಹಾರಾಷ್ಟ್ರ+ ವಿಜಯ ಬ್ಯಾಂಕ್ —-> ಬ್ಯಾಂಕ್ ಆಫ್ ಇಂಡಿಯಾ

    ಬ್ಯಾಂಕ್ ಗಳು ಎಸ್‍ಬಿಐ ಜೊತೆ ವಿಲೀನವಾಗಿದ್ದು ಯಾಕೆ?
    ವಿಶ್ವದ ಟಾಪ್ 50 ಪಟ್ಟಿಯಲ್ಲಿ ಭಾರತದ ಯಾವೊಂದು ಬ್ಯಾಂಕ್ ಸ್ಥಾನ ಪಡೆದಿಲ್ಲ. ಈ ಪಟ್ಟಿಯಲ್ಲಿ ಸ್ಥಾನ ಪಡೆಯಲು ಎಸ್‍ಬಿಐ ಮುಂದಾಗುತ್ತಿದ್ದು, ಕೇಂದ್ರದ ಒಪ್ಪಿಗೆಯ ಹಿನ್ನೆಲೆಯಲ್ಲಿ ಬ್ಯಾಂಕ್‍ಗಳ ವಿಲೀನ ಪ್ರಕ್ರಿಯೆ ನಡೆದಿದೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು(ಎಸ್‍ಬಿಎಂ), ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಹಾಗೂ ಜೈಪುರ್ (ಎಎಸ್‍ಬಿಜೆ), ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್(ಎಸ್‍ಟಿ), ಸ್ಟೇಟ್ ಬ್ಯಾಂಕ್ ಪಟಿಯಾಲಾ (ಎಎಸ್‍ಬಿಪಿ), ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ (ಎಎಸ್‍ಬಿಎಚ್)ಹಾಗೂ ಭಾರತೀಯ ಮಹಿಳಾ ಬ್ಯಾಂಕ್ (ಬಿಬಿಎಂ)ಗಳು ಎಸ್‍ಬಿಐ ಜೊತೆ ಏಪ್ರಿಲ್ 1ರಂದು ವಿಲೀನವಾಗಿತ್ತು.