Tag: Symptoms

  • ಯುರೋಪಿನಲ್ಲಿ ಐವರ ಸಾವಿಗೆ ಕಾರಣವಾಯ್ತು ಗಿಳಿ ಜ್ವರ- ಏನಿದು ಫೀವರ್‌, ಲಕ್ಷಣಗಳೇನು..?

    ಯುರೋಪಿನಲ್ಲಿ ಐವರ ಸಾವಿಗೆ ಕಾರಣವಾಯ್ತು ಗಿಳಿ ಜ್ವರ- ಏನಿದು ಫೀವರ್‌, ಲಕ್ಷಣಗಳೇನು..?

    ತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾಗುತ್ತಿದ್ದಂತೆಯೇ ಮನುಷ್ಯ ಒಂದಲ್ಲ ಒಂದು ರೀತಿಯಲ್ಲಿ ಅನಾರೋಗ್ಯಕ್ಕೀಡಾಗುತ್ತಿದ್ದಾನೆ. ಶೀತ, ಜ್ವರ ಹಾಗೂ ಕೆಮ್ಮು ಸಾಮಾನ್ಯವಾಗಿರುತ್ತದೆ. ಡೆಂಗ್ಯೂ, ಮಲೇರಿಯಾ, ಟೈಫಾಯ್ಡು, ಹಂದಿ ಜ್ವರ, ಕೊರೊನಾ ವೈರಸ್‌, ಹಕ್ಕಿ ಜ್ವರ ಕೇಳಿದ್ದೇವೆ. ಸದ್ಯ ಈ ಜ್ವರಗಳ ಜೊತೆ ಅಪರೂಪದಲ್ಲಿ ಅಪರೂಪದ ಗಿಳಿ ಜ್ವರವೂ ಸೇರಿಕೊಂಡಿದೆ.

    ಹೌದು. ಗಿಳಿ ಜ್ವರ ನಾವು ಹೊಸದಾಗಿ ಕೇಳಿಸಿಕೊಂಡ ಸೋಂಕಾದರೆ ಯುರೋಪ್‌ನಾದ್ಯಂತ (Europe) ಈ ವರ್ಷ ಐವರ ಸಾವಿಗೆ ಕಾರಣವಾಗಿದೆ. ಈ ಮೂಲಕ ಯೂರೋಪಿಯನ್ನರನ್ನು ಭಾರೀ ಆತಂಕಕ್ಕೆ ದೂಡಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಡೆನ್ಮಾರ್ಕ್‌ನಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ನೆದರ್‌ಲ್ಯಾಂಡ್‌ನಲ್ಲಿ ಓರ್ವ, ಮತ್ತು ಆಸ್ಟ್ರಿಯಾ, ಜರ್ಮನಿ ಮತ್ತು ಸ್ವೀಡನ್‌ನಾದ್ಯಂತ ಡಜನ್‌ಗಟ್ಟಲೆ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗಿದ್ರೆ ಏನಿದು ಗಿಳಿ ಜ್ವರ..?, ಇದರ ಲಕ್ಷಣಗಳೇನು..?, ಚಿಕಿತ್ಸೆ ಏನು ಎಂಬುದನ್ನು ನೋಡೋಣ.

    ಏನಿದು ಗಿಳಿ ಜ್ವರ?: ಈ ಜ್ವರವನ್ನು ಸಿಟ್ಟಾಕೋಸಿಸ್‌ ಎಂದೂ ಕರೆಯುತ್ತಾರೆ. ಇದು ಅಪರೂಪದ ಗಂಭೀರ ಸಮಸ್ಯೆ ಉಂಟು ಮಾಡುವ ವೈರಸ್‌ ಆಗಿದೆ. ಕ್ಲಮೈಡಿಯ ಸಿಟ್ಟಾಸಿ ಎಂಬ ಬ್ಯಾಕ್ಟೀರಿಯಾದಿಂದ ಇದು ಉಂಟಾಗುತ್ತದೆ. ಇದು ಪಕ್ಷಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ಗಿಳಿಗಳು, ಪಾರಿವಾಳಗಳು ಹಾಗೂ ಕೋಳಿಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಈ ಬ್ಯಾಕ್ಟೀರಿಯಾವು ಗಾಳಿಯಿಂದ ಮನುಷ್ಯರಿಗೂ ಹರಡುತ್ತದೆ ಎಂಬುದಾಗಿ ವೈದ್ಯ ಮೂಲಗಳು ತಿಳಿಸಿವೆ.

    ಗಿಳಿ ಜ್ವರವನ್ನು ಅಪರೂಪದ ಕಾಯಿಲೆ ಎಂದು ಪರಿಗಣಿಸಲಾಗುತ್ತದೆ. ಕೆನಡಾದಲ್ಲಿ (Canada) ಮನುಷ್ಯರ ಮೇಲೆ ಗಿಳಿ ಜ್ವರ (Parrot Fever) ಅಷ್ಟಾಗಿ ಪರಿಣಾಮ ಬೀರಿಲ್ಲ. ಹೀಗಾಗಿ ರಾಷ್ಟ್ರೀಯವಾಗಿ ಸೂಚಿಸಬಹುದಾದ ರೋಗವಲ್ಲ ಎಂದು ಕೆನಡಾ ಆರೋಗ್ಯ ಸಂಸ್ಥೆ ತಿಳಿಸಿದೆ.

    ಗಿಳಿ ಜ್ವರ ಹೇಗೆ ಬರುತ್ತದೆ?: ಗಿಳಿ ಜ್ವರವು ಕ್ಲಮೈಡಿಯ ಸಿಟ್ಟಾಸಿ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಬ್ಯಾಕ್ಟೀರಿಯಾದ ಸೋಂಕು. ಇದು ಸೋಂಕಿತ ಪಕ್ಷಿಗಳ ನೇರ ಸಂಪರ್ಕದ ಮೂಲಕ ಅಥವಾ ಅವುಗಳ ಹಿಕ್ಕೆಗಳು, ಗರಿಗಳು ಅಥವಾ ಉಸಿರಾಟದ ಸ್ರವಿಸುವಿಕೆಯ ಮೂಲಕ ಮನುಷ್ಯರಿಗೆ ಹರಡುತ್ತದೆ. ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ಅಥವಾ ಮೊದಲೇ ಅಸ್ತಿತ್ವದಲ್ಲಿರುವ ಉಸಿರಾಟದ ಪರಿಸ್ಥಿತಿಗಳನ್ನು ಹೊಂದಿರುವ ಜನರು ಈ ಸೋಂಕಿಗೆ ಹೆಚ್ಚು ಒಳಗಾಗುತ್ತಾರೆ.

    ಗಿಳಿ ಜ್ವರವು ಮುಖ್ಯವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಬಳಿಕ ವಿವಿಧ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಕೆನಡಿಯನ್ ಸೆಂಟರ್ ಫಾರ್ ಆಕ್ಯುಪೇಷನಲ್ ಹೆಲ್ತ್ ಅಂಡ್ ಸೇಫ್ಟಿ (CCOHS) ಹೇಳಿದೆ. ಅಪರೂಪದ ಸಂದರ್ಭದಲ್ಲಿ, ಯಕೃತ್ತಿನ ಉರಿಯೂತ, ಪೆರಿಕಾರ್ಡಿಯಮ್ (ಹೃದಯ ಕುಹರದ ಒಳಪದರ), ಮಯೋಕಾರ್ಡಿಯಂ (ಹೃದಯ ಸ್ನಾಯು) ಮತ್ತು ಮೆದುಳಿನ ಉರಿಯೂತ ವರದಿಯಾಗಿದೆ. ಸೋಂಕಿತ ಪ್ರಾಣಿಗಳನ್ನು ತಿನ್ನುವುದರಿಂದ ರೋಗವು ಹರಡುವುದಿಲ್ಲ ಎಂದು CCOHS ಹೇಳಿದೆ.

    ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಈ ಸೋಂಕು ಧೂಳಿನ ಕಣಗಳು, ನೀರಿನ ಹನಿಗಳ ಮೂಲಕ ಹಾಗೂ ಪಕ್ಷಿಗಳು ಮನುಷ್ಯರನ್ನು ಕಚ್ಚಿದಾಗಲೂ ಹರಡುತ್ತದೆ. ಇದಾದ ಕೆಲವು ದಿನಗಳ ಬಳಿಕ ರೋಗಲಕ್ಷಣಗಳು ಉಲ್ಬಣಗೊಳ್ಳುತ್ತಾ ಹೋಗುತ್ತದೆ.ಕ್ರಮೇಣ ಈ ಸೋಂಕಿನಿಂದ ನ್ಯುಮೋನಿಯಾ ಮತ್ತು ಹೃದಯ ರಕ್ತನಾಳಗಳ ಉರಿಯೂತ ಸಂಭವಿಸಬಹುದು. ಹೆಪಟೈಟಿಸ್ ಮತ್ತು ನರಸಂಬಂಧಿ ಸಮಸ್ಯೆ ಕೂಡ ಎದುರಾಗುವ ಸಾಧ್ಯತೆಗಳಿವೆ. ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಸರಿಯಾದ ವೈದ್ಯಕೀಯ ನೆರವು ದೊರೆಯದಿದ್ದರೆ ಸಾವು ಸಂಭವಿಸುವ ಸಾಧ್ಯತೆಗಳಿವೆ.

    ಲಕ್ಷಣಗಳೇನು..?: ಸೋಂಕು ತಗುಲಿದ ಕೂಡಲೇ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳಲ್ಲ. 5 ರಿಂದ 14 ದಿನಗಳ ಬಳಿಕ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ವ್ಯಕ್ತಿಯು ಬ್ಯಾಕ್ಟೀರಿಯಾದ ಸಂಪರ್ಕಕ್ಕೆ ಬಂದಾಗ ಆತನಿಗೆ ಶೀತ, ಒಣ ಕೆಮ್ಮು, ವಾಂತಿ, ಭೇದಿ, ತಲೆನೋವು, ಸ್ನಾಯು ಸೆಳೆತ ಮತ್ತು ಆಯಾಸ ಹಾಗೂ ಜ್ವರದ ರೀತಿಯ ರೋಗಲಕ್ಷಣಗಳು ಕಂಡುಬರುತ್ತದೆ. ಸೌಮ್ಯವಾದ ಪ್ರಕರಣಗಳಲ್ಲಿ ಜ್ವರವು ಮೂರು ವಾರಗಳವರೆಗೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಉಳಿಯಬಹುದು. ಇದು ನ್ಯುಮೋನಿಯಾ ಹಾಗೂ ಕೆಲವರಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಇನ್ನೂ ಕೆಲವರಲ್ಲಿ ಎದೆನೋವು ಕಾಣಿಸಿಕೊಳ್ಳುವ ಸಾಧ್ಯತೆಗಳು ಕೂಡ ಇವೆ.

    ಚಿಕಿತ್ಸೆ ಏನು?: ಸಾಮಾನ್ಯವಾಗಿ ಗಿಳಿ ಜ್ವರಕ್ಕೆ ಆಂಟಿಬಯೋಟಿಕ್‌ಗಳನ್ನು ನೀಡಲಾಗುತ್ತದೆ. ರೋಗ ಲಕ್ಷಣಗಳು ಹೆಚ್ಚಾದಂತೆ ಔಷಧಗಳೂ ಬೇರೆ ಬೇರೆಯಾಗುತ್ತಾ ಹೋಗುತ್ತದೆ. ಏಕೆಂದರೆ ರೋಗ ಲಕ್ಷಣಗಳು ತೀವ್ರಗೊಂಡಾಗ ನ್ಯುಮೋನಿಯಾ ಹಾಗೂ ಹೃದಯದ ರಕ್ತನಾಳಗಳ ಉರಿಯೂತ ಕೂಡಾ ಆಗಬಹುದು. ಹೆಪಟೈಟೀಸ್ ಹಾಗೂ ನರಗಳ ಸಮಸ್ಯೆ ಕೂಡ ಎದುರಾಗಬಹುದು. ಸೂಕ್ತ ಸಮಯದಲ್ಲಿ ವೈದ್ಯಕೀಯ ನೆರವು ಸಿಗದಿದ್ದರೆ ಸಾವನ್ನಪ್ಪುವ ಸಾಧ್ಯತೆಯೂ ಇದೆ.

    ಪಾರಾಗುವುದು ಹೇಗೆ?: ಗಿಳಿ ಜ್ವರವನ್ನು ತಡೆಗಟ್ಟಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಪಕ್ಷಿಗಳನ್ನು ನಿರ್ವಹಿಸುವಾಗ ಅಥವಾ ಪಕ್ಷಿಗಳು ಇರುವ ಪ್ರದೇಶಗಳಲ್ಲಿ ಕೆಲಸ ಮಾಡುವಾಗ ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು. ನೀವು ಪಕ್ಷಿಗಳು ಅಥವಾ ಅವುಗಳ ಪಂಜರಗಳನ್ನು ನಿರ್ವಹಿಸುವಾಗ, ನಿಮ್ಮ ಕೈಗಳನ್ನು ತೊಳೆದುಕೊಳ್ಳಿ ಮತ್ತು ಪಕ್ಷಿ ಪಂಜರಗಳನ್ನು ಸ್ವಚ್ಛಗೊಳಿಸುವಾಗ ಕೈಗೆ ಗ್ಲೌಸ್‌ಗಳು ಮತ್ತು ಮಖಕ್ಕೆ ಮಾಸ್ಕ್ ಧರಿಸುವುದು ಅತ್ಯಗತ್ಯ. ಅಲ್ಲದೆ ಅದರ ಅಪಾಯಗಳ ಬಗ್ಗೆ ನಿಮಗೆ ಮತ್ತು ಇತರರಿಗೆ ಶಿಕ್ಷಣ ನೀಡುವುದು ಮತ್ತು ಅಗತ್ಯವಿದ್ದರೆ ವೈದ್ಯಕೀಯ ಆರೈಕೆಯನ್ನು ಪಡೆಯುವುದು ಅತ್ಯಗತ್ಯ.

    ಯುರೋಪಿನಲ್ಲಿ ಏಕಾಏಕಿ ಸಂಭವಿಸುವ ಬಗ್ಗೆ ಹೇಳುವುದಾದರೆ WHO ಪ್ರಕಾರ, ಆಸ್ಟ್ರಿಯಾದಲ್ಲಿ ಹಿಂದಿನ 8 ವರ್ಷಗಳಲ್ಲಿ ವರ್ಷಕ್ಕೆ ಸರಾಸರಿ ಎರಡು ಪ್ರಕರಣಗಳಿಗೆ ಹೋಲಿಸಿದರೆ, 2023 ರಲ್ಲಿ 14 ಗಿಳಿ ಜ್ವರದ ಪ್ರಕರಣಗಳು ವರದಿಯಾಗಿವೆ. 2024 ರ ಮಾರ್ಚ್ 4 ರ ಹೊತ್ತಿಗೆ ದೇಶವು ನಾಲ್ಕು ಪ್ರಕರಣಗಳನ್ನು ವರದಿ ಮಾಡಿದೆ. ಡೆನ್ಮಾರ್ಕ್ 2023 ರ ಅಂತ್ಯದಿಂದ 2024 ರ ಜನವರಿ ಮಧ್ಯದವರೆಗೆ ಗಿಳಿ ಜ್ವರ ಪ್ರಕರಣಗಳಲ್ಲಿ ಹೆಚ್ಚಳವನ್ನು ವರದಿ ಮಾಡಿದೆ ಎಂದು WHO ಹೇಳಿದೆ. ಫೆಬ್ರವರಿ 27 ರ ಹೊತ್ತಿಗೆ 23 ವ್ಯಕ್ತಿಗಳು ರೋಗಕ್ಕೆ ತುತ್ತಾದರು. 17 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ 15 ಮಂದಿಗೆ ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ ಇದೆ. ಇನ್ನು ನಾಲ್ವರು ಸಾವನ್ನಪ್ಪಿದ್ದಾರೆ.

    2023ರ ಡಿಸೆಂಬರ್‌ನಲ್ಲಿ ಜರ್ಮನಿಯಲ್ಲಿ ಐವರಲ್ಲಿ ಗಿಳಿ ಜ್ವರ ದೃಢಪಟ್ಟಿತ್ತು. ಈ ಮೂಲಕ ಇದೇ ವರ್ಷ ಒಟ್ಟು 14 ಮಂದಿಯಲ್ಲಿ ಈ ಜ್ವರ ಕಾಣಿಸಿಕೊಂಡಿತ್ತು. 2024 ರ ಈ ಅವಧಿಯಲ್ಲಿ ಫೆಬ್ರವರಿ 20ರೊಳಗೆ ಮತ್ತೆ 5 ಪ್ರಕರಣಗಳು ವರದಿಯಾಗಿವೆ. 2023 ರ ನವೆಂಬರ್ ಕೊನೆಯಲ್ಲಿ ಮತ್ತು ಡಿಸೆಂಬರ್ ತಿಂಗಳ ಆರಂಭದಲ್ಲಿ ಸ್ವೀಡನ್ ನಲ್ಲಿಯೂ ಒಂದಷ್ಟು ಪ್ರಕರಣಗಳು ವರದಿಯಾಗಿವೆ. ನವೆಂಬರ್ ನಲ್ಲಿ 7 ಪ್ರಕರಣಗಳು ಮತ್ತು ಡಿಸೆಂಬರ್ ನಲ್ಲಿ 19 ಪ್ರಕರಣಗಳು ವರದಿಯಾಗಿವೆ. ಇದು ಹಿಂದಿನ ತಿಂಗಳುಗಳಲ್ಲಿ ಆಯಾ ತಿಂಗಳುಗಳಿಗೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆಯನ್ನು ದ್ವಿಗುಣಗೊಳಿಸುತ್ತದೆ. ಒಟ್ಟಿನಲ್ಲಿ ಯುರೋಪ್‌ನಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು WHO ಹೇಳಿದೆ.

  • ಹೃದಯಾಘಾತ – ಒಂದು ತಿಂಗಳ ಮುಂಚೆ ಈ 12 ರೋಗಲಕ್ಷಣಗಳು ಕಂಡುಬಂದ್ರೆ ಇರಲಿ ಎಚ್ಚರ!

    ಹೃದಯಾಘಾತ – ಒಂದು ತಿಂಗಳ ಮುಂಚೆ ಈ 12 ರೋಗಲಕ್ಷಣಗಳು ಕಂಡುಬಂದ್ರೆ ಇರಲಿ ಎಚ್ಚರ!

    ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಹೃದಯರಕ್ತನಾಳದ ಕಾಯಿಲೆಗಳು (CVDs) ಜಾಗತಿಕವಾಗಿ ಸಾವಿಗೆ ಪ್ರಮುಖ ಕಾರಣವಾಗಿದೆ. ಪ್ರತಿ ವರ್ಷ ಅಂದಾಜು 17.9 ಮಿಲಿಯನ್ ಜೀವಗಳು ಈ ಕಾಯಿಲೆಗೆ ಬಲಿಯಾಗುತ್ತಿವೆ. 5ರಲ್ಲಿ 4 ಸಾವುಗಳು ಹೃದಯಾಘಾತ ಮತ್ತು ಪಾರ್ಶ್ವವಾಯುವಿನಿಂದ ಆಗುತ್ತಿವೆ.

    ಹೃದಯಾಘಾತವನ್ನು (Heart Attack) ಸಾಮಾನ್ಯವಾಗಿ ‘ಸೈಲೆಂಟ್‌ ಕಿಲ್ಲರ್’ ಎಂದೇ ಕರೆಯಲಾಗುತ್ತದೆ. ಏಕೆಂದರೆ ಇದು ಯಾವುದೇ ರೋಗಲಕ್ಷಣಗಳಿದ್ದರೂ ಗೊತ್ತಾಗದಂತೆ ಕೊಂದುಬಿಡುತ್ತದೆ. ಎಷ್ಟೋ ಜನ ತೊಂದರೆ ಅನುಭವಿಸುತ್ತಿದ್ದರೂ, ಈ ಕಾಯಿಲೆ ಇದೆ ಎಂಬುದನ್ನೇ ತಿಳಿದಿರುವುದಿಲ್ಲ. ಹೃದಯಾಘಾತವು ಯಾವುದೇ ಚಿಹ್ನೆಗಳೊಂದಿಗೆ ಬರುವುದಿಲ್ಲ ಎಂದು ಹಲವರು ನಂಬುತ್ತಾರೆ. ಆದರೆ ಇತ್ತೀಚಿನ ಅಧ್ಯಯನವು ಬೇರೆಯದ್ದನ್ನೇ ಹೇಳುತ್ತದೆ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..

    ಅಧ್ಯಯನ ಹೇಳೋದೇನು?
    ಜರ್ನಲ್‌ ಸರ್ಕ್ಯೂಲೇಷನ್‌ನಲ್ಲಿ ಸಮೀಕ್ಷೆ ವರದಿಯೊಂದನ್ನು ಪ್ರಕಟಿಸಲಾಗಿದೆ. ಹೃದಯಾಘಾತದಿಂದ ಬದುಕುಳಿದ 500 ಕ್ಕೂ ಹೆಚ್ಚು ಮಹಿಳೆಯರನ್ನು ಸಂಶೋಧನೆಯು ಒಳಗೊಂಡಿತ್ತು. ಹೃದಯಾಘಾತವು ಮುಂಚಿತವಾಗಿ ಹಲವು ಹೆಚ್ಚರಿಕೆಯ ಸೂಚನೆಗಳನ್ನು ನೀಡುತ್ತೆ ಎಂಬುದನ್ನು ಸಂಶೋಧನೆಯು ಬಹಿರಂಪಡಿಸಿದೆ.

    ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ಶೇ.95 ರಷ್ಟು ಜನರು ತಮಗೆ ಹೃದಯಾಘಾತವಾಗುವುದಕ್ಕೂ ಒಂದು ತಿಂಗಳ ಮೊದಲು ಅಥವಾ ಅದಕ್ಕಿಂತಲೂ ಹಿಂದೆ ದೈಹಿಕವಾಗಿ ಆರಾಮಾಗಿಲ್ಲ ಎಂಬ ಅಂಶಗಳನ್ನು ಗಮನಸಿರುವುದಾಗಿ ಹೇಳಿಕೊಂಡಿದ್ದಾರೆ. ಶೇ.71 ರಷ್ಟು ಮಂದಿ ಆಯಾಸವನ್ನು ಸಾಮಾನ್ಯ ರೋಗಲಕ್ಷಣವೆಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?

    ಶೇ.48 ರಷ್ಟು ಜನರು ನಿದ್ರೆ ಸಮಸ್ಯೆ ಎದುರಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಕೆಲ ಮಹಿಳೆಯರು ಎದೆ ನೋವು ಅನುಭವಿಸಿದ್ದ ಬಗ್ಗೆ ಹೇಳಿಕೊಂಡಿದ್ದಾರೆ. ಇನ್ನೂ ಕೆಲವರು ಒತ್ತಡ, ನೋವು, ಎದೆಯಲ್ಲಿ ಬಿಗಿತ ಆಗಿದ್ದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

    ಹೃದಯಾಘಾತಕ್ಕೂ ಮುನ್ನ ಸಿಗುವ ಸೂಚನೆಗಳಿವು
    ಅಸಾಮಾನ್ಯ ಆಯಾಸ, ನಿದ್ರಾ ಭಂಗ, ಉಸಿರಾಟದ ತೊಂದರೆ, ಅಜೀರ್ಣ, ಆತಂಕ, ಹಾರ್ಟ್ ರೇಸಿಂಗ್, ತೋಳುಗಳು ದುರ್ಬಲ/ಭಾರ, ಆಲೋಚನೆ ಅಥವಾ ಸ್ಮರಣೆಯಲ್ಲಿ ಬದಲಾವಣೆಗಳು, ದೃಷ್ಟಿ ತೊಂದರೆ, ಹಸಿವಾಗದಿರುವುದು, ಕೈಗಳು ಜುಮ್ಮೆನಿಸುವಿಕೆ, ರಾತ್ರಿಯಲ್ಲಿ ಉಸಿರಾಟದ ತೊಂದರೆ. ಇದನ್ನೂ ಓದಿ: ಪೋಷಕರ ನಡವಳಿಕೆಗಳು ಮಕ್ಕಳ ವ್ಯಕ್ತಿತ್ವದ ಮೇಲೆ ಹೇಗೆ ಪ್ರಭಾವ ಬೀರುತ್ತೆ ಗೊತ್ತಾ?

    Live Tv
    [brid partner=56869869 player=32851 video=960834 autoplay=true]

  • ಟೊಮೆಟೋ ಜ್ವರ ಎಂದರೇನು? ರೋಗಲಕ್ಷಣ ಹಾಗೂ ಚಿಕಿತ್ಸೆ ಹೇಗೆ?

    ಟೊಮೆಟೋ ಜ್ವರ ಎಂದರೇನು? ರೋಗಲಕ್ಷಣ ಹಾಗೂ ಚಿಕಿತ್ಸೆ ಹೇಗೆ?

    ನವದೆಹಲಿ: ಕೇರಳದಲ್ಲಿ ಮೇ 6 ರಂದು ಟೊಮೆಟೋ ಜ್ವರ ಪತ್ತೆಯಾಗಿದೆ. ಭಾರತದಲ್ಲಿಯೇ ಮೊದಲ ಬಾರಿಗೆ ಈ ಜ್ವರ ಕಂಡು ಬಂದಿದ್ದು, ದೇಶದಲ್ಲಿ ಈಗ ಟೊಮೆಟೋ ವೈರಸ್ ತನ್ನ ಆರ್ಭಟ ಶುರುಮಾಡಿದೆ. ಇಲ್ಲಿಯವರೆಗೂ 82 ಪ್ರಕರಣಗಳು ದಾಖಲಾಗಿವೆ. ಇದೀಗ ದೇಶದಲ್ಲಿ ವೈದ್ಯರು ಟೊಮೆಟೋ ವೈರಸ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

    ಅಧ್ಯಯನಗಳ ಪ್ರಕಾರ ಒಂದರಿಂದ ಐದು ವರ್ಷ ವಯಸ್ಸಿನ ಮಕ್ಕಳಲ್ಲಿ ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವ ವಯಸ್ಕರಲ್ಲಿ ಟೊಮೆಟೋ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದು ಕೈ, ಕಾಲು ಮತ್ತು ಬಾಯಿ ಮೂಲಕ ಹರಡುವ ಕಾಯಿಲೆಯಾಗಿದೆ.

    TOMATO

    ಮೊದಲ ಬಾರಿಗೆ ಟೊಮೆಟೋ ಜ್ವರ 2022ರ ಮೇ 6ರಂದು ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಪತ್ತೆಯಾಯಿತು. ಟೊಮೆಟೋ ಜ್ವರ ಕೋವಿಡ್ ರೀತಿಯೇ ರೋಗಲಕ್ಷಣಗಳನ್ನು ಹೊಂದಿದೆ. ಆದರೆ ಕೋವಿಡ್-19ಗೂ ಟೊಮೆಟೋ ಜ್ವರಕ್ಕೂ ಯಾವುದೇ ಸಂಬಂಧವಿಲ್ಲ. ಟೊಮೆಟೊ ಜ್ವರವು ಮಕ್ಕಳಲ್ಲಿ ಚಿಕೂನ್‍ಗುನ್ಯಾ ಅಥವಾ ಡೆಂಗ್ಯೂ ಜ್ವರದಷ್ಟೇ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳ ಮೂಲಕ ತಿಳಿದು ಬಂದಿದೆ.

    Tomato

    ದೇಹದ ಹಲವು ಭಾಗಗಳಲ್ಲಿ ಉಂಟಾಗುವ ಗುಳ್ಳೆಗಳು ಕೆಂಪು ಬಣ್ಣದ ದುಂಡಗಿನ ಆಕಾರದಲ್ಲಿ ಇರುವುತ್ತದೆ. ಇದನ್ನು ಟೊಮೆಟೋ ಜ್ವರ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿದೆ. ಕಾಲಕ್ರಮೇಣ ದೇಹದ ಮೇಲಿನ ಗುಳ್ಳೆಗಳು ಟೊಮೆಟೋ ಗಾತ್ರದಷ್ಟು ದೊಡ್ಡದಾಗುತ್ತದೆ.

    ಲಕ್ಷಣಗಳೇನು?
    ಟೊಮೆಟೊ ಜ್ವರ ಹೊಂದಿರುವ ಮಕ್ಕಳಲ್ಲಿ ಕಂಡುಬರುವ ಪ್ರಾಥಮಿಕ ರೋಗಲಕ್ಷಣಗಳು ಚಿಕುನ್‍ಗುನ್ಯಾದಂತೆಯೇ ಇರುತ್ತವೆ. ಇದರಲ್ಲಿ ಜ್ವರ ಹೆಚ್ಚಿರುತ್ತದೆ. ಕೀಲುಗಳಲ್ಲಿ ತೀವ್ರವಾದ ನೋವು ಬರುತ್ತದೆ. ಮೈ-ಕೈ ನೋವು, ಜ್ವರ ಮತ್ತು ಆಯಾಸದಂತಹ ಕೆಲವು ರೋಗಲಕ್ಷಣಗಳು ಕೋವಿಡ್-19 ವೈರಸ್‍ನಂತೆಯೇ ಇರುತ್ತವೆ. ಇತರ ರೋಗಲಕ್ಷಣಗಳೆಂದರೆ ಕೀಲು ಊತ, ವಾಕರಿಕೆ, ಅತಿಸಾರ, ನಿರ್ಜಲೀಕರಣ, ಕೀಲು ನೋವು ಮತ್ತು ಅಧಿಕ ಜ್ವರ. ಕೆಲವು ವೇಳೆ ರೋಗಿಗಳ ಚರ್ಮದ ಮೇಲೆ ಗುಳ್ಳೆಗಳ ಬೆಳವಣಿಗೆ ಸಹ ಕಂಡು ಬರುತ್ತದೆ.

    ಚಿಕಿತ್ಸೆ
    ಟೊಮೆಟೊ ಜ್ವರದ ಚಿಕಿತ್ಸೆಯು ಚಿಕೂನ್‍ಗುನ್ಯಾ, ಡೆಂಗ್ಯೂ ಮತ್ತು ಕೈ, ಕಾಲು ಮತ್ತು ಬಾಯಿ ಕಾಯಿಲೆಯ ಚಿಕಿತ್ಸೆಯಂತೆಯೇ ಇರುತ್ತದೆ. ಕಿರಿಕಿರಿ ಮತ್ತು ಗುಳ್ಳೆಗಳ ಪರಿಹಾರಕ್ಕಾಗಿ ಶುಚಿತ್ವ ಮತ್ತು ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಬೇಕು. ಸೋಂಕಿತ ಮಕ್ಕಳಿಗೆ ಹೆಚ್ಚು ಕುದಿಸಿ ಆರಿಸಿದ ನೀರನ್ನು ಕುಡಿಸುವ ಮೂಲಕ ನೀರಿನಂಶವನ್ನು ಕಾಪಾಡಿಕೊಳ್ಳಬೇಕು. ನಿಮ್ಮ ಮಗುವಿನಲ್ಲಿ ರೋಗದ ಲಕ್ಷಣಗಳು ಕಂಡು ಬರುತ್ತಿದ್ದಂತೆ ವೈದ್ಯರನ್ನು ಸಂಪರ್ಕಿಸಬೇಕು. ಗುಳ್ಳೆಗಳು ತುರಿಸುವುದು ಅಥವಾ ಒಡೆದುಕೊಳ್ಳದಂತೆ ನೋಡಿಕೊಳ್ಳಬೇಕು. ಬಿಸಿ ನೀರಿನಲ್ಲಿಯೇ ಸ್ನಾನ ಮಾಡುವುದು, ಜ್ವರದ ದೀರ್ಘಕಾಲೀನ ಪರಿಣಾಮಗಳನ್ನು ತಪ್ಪಿಸಲು ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳಬೇಕಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಕಫ, ಕೆಮ್ಮು ಆಯ್ತು ಈಗ ಕೊರೊನಾ ಸೋಂಕಿತರಿಗೆ ವಾಸನೆ, ರುಚಿ ಗ್ರಹಿಸುವ ಶಕ್ತಿ ಇರಲ್ಲ

    ಕಫ, ಕೆಮ್ಮು ಆಯ್ತು ಈಗ ಕೊರೊನಾ ಸೋಂಕಿತರಿಗೆ ವಾಸನೆ, ರುಚಿ ಗ್ರಹಿಸುವ ಶಕ್ತಿ ಇರಲ್ಲ

    ರೋಮ್: ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ಸೋಂಕು ತಗುಲಿದ ಕೆಲವರಿಗೆ ವಾಸನೆ ಗ್ರಹಿಸುವ ಹಾಗೂ ರುಚಿ ತಿಳಿಯುವ ಶಕ್ತಿ ಇರುವುದಿಲ್ಲ ಎನ್ನುವ ವಿಚಾರ ಸಂಶೋಧನೆಯಿಂದ ತಿಳಿದು ಬಂದಿದೆ.

    ಇಟಲಿಯಲ್ಲಿ ಸೋಂಕಿಗೆ ತುತ್ತಾದ ರೋಗಿಯೊಬ್ಬರು ಈ ಬಗ್ಗೆ ತಿಳಿಸಿದ್ದಾರೆ. ನಾನು 2-3 ವಾರದ ಹಿಂದೆ ಕೊರೊನಾ ಸೋಂಕಿನಿಂದ ಬಳಲುತ್ತಿದ್ದೆ. ಆದರೆ ಈಗ ನಾನು ಸಂಪೂರ್ಣ ಗುಣವಾಗಿದ್ದೇನೆ. ನನಗೆ ಸೋಂಕು ತಗುಲಿದ್ದಾಗ ಯಾವುದೇ ವಾಸನೆ ಹಾಗೂ ರುಚಿಯನ್ನು ಗ್ರಹಿಸುವ ಶಕ್ತಿ ನನಗಿರಲಿಲ್ಲ. ನಗರದಲ್ಲಿ ಕೊರೊನಾ ವೈರಸ್ ಹರಡುತ್ತಿದೆ ಎಂದು ತಿಳಿದಾಗ ನಾನು ಮನೆಯನ್ನು ಫಿನಾಯಿಲ್ ಹಾಕಿ ಸ್ವಚ್ಛಗೊಳಿಸಿದ್ದೆ. ಆಗ ನನಗೆ ಫಿನಾಯಿಲ್ ವಾಸನೆ ಗ್ರಹಿಸುವ ಸಾಧ್ಯವಾಗಿರಲಿಲ್ಲ. ಅಡುಗೆ ಮನೆಯಲ್ಲಿ ಬೆಳ್ಳುಳ್ಳಿ ಬಳಸುವಾಗಲೂ ಅದರ ವಾಸನೆ ನನಗೆ ಬರುತ್ತಿರಲಿಲ್ಲ. ಯಾವುದೇ ಅಡುಗೆಯ ರುಚಿ ಕೂಡ ತಿಳಿಯುತ್ತಿರಲಿಲ್ಲ. ಬಳಿಕ ನಾನು ಪರೀಕ್ಷೆ ಮಾಡಿಸಿದಾಗ ಕೊರೊನಾ ತಗುಲಿರುವುದು ದೃಢಪಟ್ಟಿತ್ತು ಎಂದು ಸೋಂಕಿನಿಂದ ಗುಣಪಟ್ಟ ಮಹಿಳೆ ತಿಳಿಸಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ.

    ಇಟಲಿಯಲ್ಲಿ ಕೊರೊನಾ ಸೋಂಕು ಮೊದಲು ಕಾಣಿಸಿಕೊಂಡಾಗ ನಿರ್ಲಕ್ಷಿಸಲಾಯ್ತು. ಈ ಸೋಂಕಿನ ಲಕ್ಷಣಗಳೇನು? ರೋಗಿಗಳಿಗೆ ಸೋಂಕು ತಗುಲಿದಾಗ ಅವರ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು ಎಂದು ವೈಜ್ಞಾನಿಕವಾಗಿ ತಿಳಿದುಕೊಳ್ಳಲು ಹೆಚ್ಚು ಆಸಕ್ತಿ ತೋರಲಿಲ್ಲ. ಹೀಗಾಗಿ ಇಟಲಿಯಲ್ಲಿ ಕೊರೊನಾ ವ್ಯಾಪಾಕವಾಗಿ ಹರಡುತ್ತಿದೆ.

    ಇತ್ತ ಜರ್ಮನಿ ಮೂಲದ ವೈರಾಲಸ್ಟಿಲ್ ಹೆಂಡ್ರಿಕ್ ಸ್ಟ್ರೀಕ್ ಕೊರೊನಾ ಬಗ್ಗೆ ಸಂಶೋಧನೆ ಮಾಡುತ್ತಿದ್ದು, ಕೊರೊನಾ ಸೋಂಕಿತರಲ್ಲಿ ಕಾಣಿಸಿಕೊಳ್ಳುವ ರೋಗ ಲಕ್ಷಣಗಳ ಬಗ್ಗೆ ಅಧ್ಯಯನ ಮಾಡಲು ಆರಂಭಿಸಿದರು. ಜರ್ಮನಿಯಲ್ಲಿ ಸೋಂಕು ಹರಡಿದಾಗ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಲಾಗಿದ್ದ ಸೋಂಕಿತ ರೋಗಿಗಳು ರಕ್ತದ ಸ್ಯಾಂಪಲ್‍ಗಳನ್ನು ಪ್ರತಿ ದಿನ ಸಂಗ್ರಹಿಸಿ, ಸಂಶೋಧನಗೆ ಬಳಸಿಕೊಳ್ಳುವ ಅವಕಾಶ ಸ್ಟ್ರೀಕ್ ತಂಡಕ್ಕೆ ಸಿಕ್ಕಿತು.

    ಈ ಬಗ್ಗೆ ಸ್ಟ್ರೀಕ್ ಸಂದರ್ಶನವೊಂದರಲ್ಲಿ ತಿಳಿಸಿದ್ದು, ಹಾನ್ಸ್‌ಬರ್ಗ್ ನಲ್ಲಿ ಸೋಂಕು ತಗುಲಿದ್ದ ಪ್ರತಿಯೊಬ್ಬ ರೋಗಿಯ ಮನೆಗೆ ನಮ್ಮ ತಂಡವರು ಭೇಟಿ ಕೊಟ್ಟು ಮಾಹಿತಿ ಕಲೆಹಾಕಿದರು. ಸೋಂಕನಿಂದ ಬಳಲಿ ಗುಣಮುಖರಾದವರ ಬಳಿ ಕೂಡ ಸೋಂಕಿನ ರೋಗ ಲಕ್ಷಣಗಳೇನು? ಎನ್ನುವ ಬಗ್ಗೆ ಮಾಹಿತಿ ಪಡೆದುಕೊಂಡೆವು. ನಾವು ಮಾಹಿತಿ ಕಲೆಹಾಕಿದ ಶೇ. 75ರಷ್ಟು ಪ್ರಕರಣಗಳಲ್ಲಿ ರೋಗಿಗಳು ವಾಸನೆ ಗ್ರಹಿಸುವ ಹಾಗೂ ರುಚಿ ಗುರುತಿಸುವ ಶಕ್ತಿಯನ್ನು ಕಳೆದುಕೊಂಡಿದ್ದರು ಎಂಬುದು ತಿಳಿದು ಬಂದಿದೆ. ಆದರೆ ಈ ರೋಗ ಲಕ್ಷಣ ಯಾವಾಗ ಕಾಣಿಸಿಕೊಳ್ಳುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಸೋಂಕು ತಗುಲಿದ ಕೆಲ ಸಮಯದ ಬಳಿಕ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

    ಮಿಲನ್ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಗಳ ಪ್ರಾಧ್ಯಪಕ ಮಿಸ್ಸಿಮೊ ಗಲ್ಲಿ ಅವರು ಕೂಡ ಕೊರೊನಾ ರೋಗ ಲಕ್ಷಣಗಳ ಬಗ್ಗೆ ತಿಳಿಸಿದ್ದಾರೆ. ಕೊರೊನಾ ಸೋಂಕಿತ ಬಹುತೇಕ ರೋಗಿಗಳಲ್ಲಿ ವಾಸನೆಯನ್ನು ಹಾಗೂ ರುಚಿಯನ್ನು ಗುರುತಿಸುವ ಶಕ್ತಿ ಇರುವುದಿಲ್ಲ. ಸೋಂಕು ತಗುಲಿದ ಆರಂಭಿಕ ಹಂತದಲ್ಲಿ ಈ ಲಕ್ಷಣದ ಬಗ್ಗೆ ನಿಖರವಾಗಿ ತಿಳಿಯುವುದಿಲ್ಲ. ಇದೊಂದು ಕೊರೊನಾ ಸೊಂಕಿನ ಅಸಾಮಾನ್ಯ ಲಕ್ಷಣ ಎಂದು ತಿಳಿಸಿದ್ದಾರೆ.

    ಸದ್ಯ ಈ ಲಕ್ಷಣಗಳು ಕೊರೊನಾ ಸೋಂಕಿನ ಲಕ್ಷಣವೇ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಕೆಲ ವೈರಸ್‍ಗಳು ದೇಹಕ್ಕೆ ಸೇರಿದರೆ ಸೋಂಕಿತ ವ್ಯಕ್ತಿಯ ಮೂಗಿನಲ್ಲಿರುವ ಕೋಶಗಳು ಹಾಗೂ ಕೋಶ ಗ್ರಾಹಕಗಳನ್ನು ನಾಶಮಾಡುತ್ತದೆ. ಕೆಲ ವೈರಸ್‍ಗಳು ಸಂವೇದನಾ ನರಗಳ ಮೂಲಕ ಮೆದುಳನ್ನು ಪ್ರವೇಶಿಸಿ ಹಾನಿ ಮಾಡುತ್ತದೆ. ಇನ್ನೂ ಕೆಲ ವೈರಸ್‍ಗಳು ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ. ಇರಾನ್‍ನಲ್ಲಿ ವರದಿಯಾದ ಒಂದು ಕೊರೊನಾ ಸೋಂಕಿತ ಪ್ರಕರಣದಲ್ಲಿ ರೋಗಿ ವಾಸನೆ ಗೃಹಿಸುವ ಶಕ್ತಿ ಜೊತೆಗೆ ದೃಷ್ಟಿ ಕಳೆದುಕೊಂಡಿದ್ದಾರೆ ಎಂಬುದು ವರದಿಯಾಗಿದೆ.